ಮನಸ್ಸು ಕಸದ ತೊಟ್ಟಿಯಲ್ಲ …

-ಪ್ರಕಾಶ್ ಹೆಗಡೆ

ನೀವು ಏನು ಏನು ತಿಂತ್ತೀರ್ರಿ ಮಾರಾಯ್ರೆ ಭಾಗ 2 

ನನಗಂತೂ ತಲೆ ಕೆಟ್ಟು ಹೋಗಿತ್ತು….

ಬೆಳಿಗ್ಗೆ ಆರುಗಂಟೆಯಿಂದ “ನೀವು ಏನು ತಿಂತ್ತೀರ್ರಿ…. ಮಾರಾಯ್ರ್ತೆ ?..”ಎನ್ನುವದೆ ಕಿವಿಯಲ್ಲಿ ಕೊರೆಯುತ್ತಿತ್ತು…
ಅಲ್ಲಿಯವರೆಗೆ  ನನ್ನ ಮೇಲೆ ಕೂಗಾಡಿ, ರೇಗಾಡಿ..ತಕ್ಷಣ ಹೆಗಲ ಮೇಲೆ ಕೈ ಹಾಕಿ…
“ಬೇಸರ ಮಾಡ್ಕೋ ಬೇಡಿ… ಬನ್ನಿ ಟೀ ಕುಡಿಯೋಣ “
ಅಂದಾಗ… ನನಗೆ ದೊಡ್ಡ ಷಾಕ್…!!
ಯಾವ ಥರಹದ ಮನುಷ್ಯರಿರ ಬಹುದು ಇವರು ?ವ್ಯವಹಾರದಲ್ಲಿ ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳುವದು ಬಹಳ ಕಷ್ಟ….
ಟೀ ಅಂಗಡಿಯವನು ಟೀ ಕೊಟ್ಟ…
ನಾನು ಸುಮ್ಮನೆ ಟಿ ತೆಗೆದು ಕೊಂಡೆ… “ಹೆಗಡೆಯವರೆ… ನನ್ನ ಮೇಲೆ ಬೇಸರವಾಯ್ತಾ..?..”ನಾನು ಮಾತನಾಡಲೇ ಬೇಕಿತ್ತು…
“ನೋಡಿ.. ಸರ್… ನನಗೆ ಕೂಗಾಡಿ, ರೇಗಾಡಿ ಗೊತ್ತಿಲ್ಲ…ನನ್ನ ಕೆಲಸಗಾರಿರಿಗೂ ಸಹ ಕೂಗಿ ಬಯ್ಯುವದಿಲ್ಲ…
ನನಗೆ ಇದೆಲ್ಲ ಇಷ್ಟವಾಗೊದಿಲ್ಲ… ಗಲಾಟೆಯಲ್ಲಿ ನನಗೆ ನಂಬಿಕೆಯಿಲ್ಲ…”
“ಹೆಗಡೆಯವರೆ…
ನಾನು ಇರುವದೇ.. ಹೀಗೆ… ನಮ್ಮ ಮನೆಯಲ್ಲೂ ಸಹ ಹೀಗೆಯೇ ಇರುತ್ತೇನೆ…ನಮ್ಮ  ಮನೆಯಲ್ಲಿ ಸ್ವಲ್ಪ  ಶಬ್ಧ ಜಾಸ್ತಿ…!ನಮ್ಮ ಮನೆ  ವಿಧಾನ ಸೌಧ , ಪಾರ್ಲಿಮೆಂಟಿನ  ಥರಹ… ಸ್ವಲ್ಪ ಗಲಾಟೆ…”
ನನಗೆ ಮತ್ತೊಂದು ಷಾಕ್…  !!
ಇವರು  ಈ ಕೆಲಸ ಮುಗಿಯುವವರೆಗೂ ಹೀಗೆ ರೇಗಾಡುತ್ತಲೇ ಇರುತ್ತಾರಾ ??
ಇವರೊಡನೆ ಹೇಗೆ ಹೆಣಗುವದು..??
” ಸರ್…
ನಿಮ್ಮ  ಮನೆಯವರು ಸುಮ್ಮನಿರುತ್ತಾರಾ..?..”
” ಅವರದ್ದು ತಪ್ಪಿದ್ದರೆ ಸುಮ್ಮನಿರುತ್ತಾರೆ… ತಪ್ಪಿಲ್ಲದಿದ್ದರೆ..  ಇದಕ್ಕೆ ಪ್ರತಿಯಾಗಿ  ನನ್ನ ಮೇಲೂ ಕೂಗುತ್ತಾರೆ…
ಆಗ ನಾನು ಸುಮ್ಮನಾಗಿ ಬಿಡುತ್ತೇನೆ…”
ನಾನು ಆಶ್ಚರ್ಯ ಚಕಿತನಾದೆ..  !!
” ದಿನಾಲೂ ಹೀಗೆನಾ…? !!.. ??..”
” ನಿಜ  …
ಹೆಗಡೆಯವರೆ…
ನಾನು  ನನ್ನ ಆಫೀಸಿನಲ್ಲೂ ಹೀಗೆಯೇ ಇದ್ದೆ…
ಈ ಮನೆ ಕಟ್ಟಿ ಮುಗಿಯುವ ತನಕ..
ನಾನು ..
ನಿಮ್ಮೊಂದಿಗೂ ಹೀಗೆಯೇ ಇರುತ್ತೇನೆ… !!..”ನನಗೆ ಮುಂದೆ ಏನು ಮಾತನಾಡಬೇಕೆಂದೇ ತಿಳಿಯಲಿಲ್ಲ…
ತಲೆ ಕೆಟ್ಟು ಕೊಳೆತ ಕುಂಬಳಕಾಯಿಯಾಗಿ ಹೋಯ್ತು..  !!ಮನೆಗೆ ಬಂದು ಮಡದಿಗೆ  ನಡೇದ ಸಂಗತಿಯನ್ನೆಲ್ಲ ಹೇಳಿದೆ…
” ನೋಡಿ.. ಯಾವುದೇ  ಹೊಸದಾಗಿ ಶುರುವಾದ ವ್ಯವಹಾರದಲ್ಲಿ…ಸಂಬಂಧಗಳಲ್ಲಿ ನಯವಾದ ನಡೆ…. ಮೃದುವಾದ ಮಾತು…ಹಿತವಾದ ನಗು ಸಾಮಾನ್ಯ…
ಒಳೊಗೊಳಗೆ ಬೆಟ್ಟದಷ್ಟು ಸಂಶಯವಿದ್ದರೂ.. ಹೊರಗಡೆ  ನಗು ತೋರಿಸುತ್ತಾರೆ… ಇವರು ಹಾಗೆ ಮಾಡಿಲ್ಲ….. ಇವರು  ತೀರಾ  ಕೆಟ್ಟವರಿರಬೇಕು…ಅಥವಾ… ತುಂಬಾ ನೇರ ನುಡಿಯ  … ಸ್ವಚ್ಛ ಹೃದಯದ ಒಳ್ಳೆಯವರಿರ ಬೇಕು…” ನನಗೂ ಹೌದೆನಿಸಿತು…
ಒಂದೆರಡು ದಿನ  ಇವರನ್ನು ನೋಡಿ… ಇಷ್ಟವಾಗದಿದ್ದರೆ…
“ನಿಮ್ಮ ಕೆಲಸ ಬೇಡ” ಅಂತ ಬಿಟ್ಟು ಬಿಡೋಣ ಅಂದು ಕೊಂಡೆ… 

ಆ ದಿನಗಳಲ್ಲಿ  ನನ್ನ ಬಳಿ  ಕೆಲಸ ಕಡಿಮೆ ಇತ್ತು…ಆರ್ಥಿಕ ಹಿಂಜರಿತದ  ದಿನಗಳು ಅವು… ನನ್ನ ಬಳಿ  ನಿತ್ಯ ಕೆಲಸ ಮಾಡುವ ಕೆಲಸಗಾರರಿಗೆ ಕೆಲಸ ಕೊಡಲೇ ಬೇಕಾದಂಥಹ ..

ಅನಿವಾರ್ಯ ಸ್ಥಿತಿ ಇತ್ತು… ತಾಳ್ಮೆ, ಸಂಯಮಗಳನ್ನು   ಪರಿಸ್ಥಿತಿ ಕಲಿಸಿಬಿಡುತ್ತದೆ…
ಮಾರನೆಯ ದಿನ ಮತ್ತೆ ಸೈಟಿಗೆ ಹೋದೆ…
ನನ್ನನ್ನು ನೋಡಿ ಮತ್ತೆ ಕೆಂಡಾ ಮಂಡಲವಾದರು..  !!
ಹೆಗಡೆಯವರೇ… ???. ನಿಮ್ಮ ಕೆಲಸಗಾರರು ಏನು ತಿಂತಾರೆ.. ? ?
ಅನ್ನ ತಿಂತಾರ್ರೋ…?
ಹೊಲಸು ತಿಂತಾರ್ರೋ..?”
” ಏನಾಯ್ತು ಸರ್…?”
” ಇವತ್ತು ಬೆಳಿಗ್ಗೆ ಅರ್ಧ ಗಂಟೆ ತಡವಾಗಿ ಬಂದಿದ್ದಾರೆ..!!
ಇವರೇನು ಮನುಷ್ಯರೋ…?..
ರಾಕ್ಷಸರೋ…?..
ನಾನು ನಿಮಗೆ ಕೊಡುತ್ತಿರುವದು ಹುಣಸೆ ಬಿಜ ಅಂದುಕೊಂಡಿದ್ದೀರೋ…..  ಹೇಗೆ..?
ನೀವು ಏನು ತಿಂತ್ತಿರ್ರಿ…. ಮಾರಾಯ್ರೇ..?.. !!..”
ಏರಿದ ಧ್ವನಿಯಲ್ಲಿ…
ಹೊಸತಾಗಿ  .. ಫ್ರೆಷ್ ಆಗಿ ಬಯ್ಗುಳ ಶುರು ಮಾಡಿದರು… ಅಕ್ಕಪಕ್ಕದ ಮನೆಯವರೂ ಇಣುಕಿ ನೋಡಲು ಶುರು ಮಾಡಿದರು…
ಇವತ್ತಿನ ಜಗಳವಾದರೂ….  ಯಶಸ್ವಿಯಾಗ ಬಹುದೇ ಅನ್ನುವಂಥಹ ಕುತೂಹಲ…!!
ನಾನೂ ಸ್ವಲ್ಪ ಹೊತ್ತು ನೋಡಿದೆ… ಇವರ ಸೌಂಡ್ ಕಡಿಮೆ ಆಗಲಿಲ್ಲ..
ಕೋಪ ಬಂತು…. ನಾನೂ ಏರಿದ ಧ್ವನಿಯಲ್ಲಿ  ಕೂಗಾಡಿದೆ…
” ಏನ್ .. ಸಾರ್..?…
ಈ ಕೆಲಸ ಅವರಿಗೇ.. ಗುತ್ತಿಗೆ ಕೊಟ್ಟಿದ್ದೇನೆ,,, ಅವರು ಎಷ್ಟು ಗಂಟೆಗೆ ಬಂದ್ರೆ ನನಗೇನು…? ಜಲ್ದಿ ಮುಗಿಸಿದರೆ ಅವರಿಗೆ ಲಾಭ… ತಡವಾಗಿ ಬಂದ್ರೆ ನಿಮಗೇನೂ  ನಷ್ಟ ಇಲ್ಲ…
….ಡ..ಡಾ..ಡಾ…..!!.
….ಡಿ… ಡೀ… ಡಿ…!!….”
ಅಂತ  ಜೋರಾಗಿ ಧ್ವನಿ  ಏರಿಸಿದೆ…!
ಇಷ್ಟು ಕೂಗುವಾಗ  ನನ್ನ ಧ್ವನಿ ಕಂಪಿಸಿತು… ಬೆವರಿಳಿಯಿತು…ರೂಢಿ ಇಲ್ಲವಲ್ಲ…!ಈಗ ಅವರಿಗೆ ಸಮಾಧಾನ ವಾಯಿತು…
“ಓಹೋ… !!
ಹೀಗೋ…!
ಸರಿ ಬಿಡಿ ನಮಗೇನು…?
ಬನ್ನಿ …. ಒಂದು ಟೀ ಕುಡಿದು ಬರೋಣ…!!”ಅಂತ ಹೆಗಲ ಮೇಲೆ ಕೈ ಹಾಕಿ ಕರೆದುಕೊಂಡು ಹೋದರು  !!ಕ್ರಮೇಣ ಇದೆಲ್ಲ ಮಾಮೂಲಿಯಾಗಿ ಹೋಯ್ತು…
ಅವರು ಕೂಗಾಡುವದು…ಅವರ ಸಾಮಾಧಾನಕ್ಕಾಗಿ ನಾನೂ ಕೂಗುವದು…! ನಂತರ ಟೀ ಕುಡಿಯಲ್ಲಿಕ್ಕೆ ಹೋಗುವದು…!!ಅಕ್ಕಪಕ್ಕದ ಮನೆಯವರೂ ಇಣುಕಿ ನೋಡುವದನ್ನು  ಬಿಟ್ಟು ಬಿಟ್ಟರು….!
ಕೊನೆ ಕೊನೆಗೆ  ಅವರು ಕೂಗಾಡದಿದ್ದರೆ ನನಗೆ  ಒಂಥರಾ ಕಸಿವಿಸಿ  ಆಗುತ್ತಿತ್ತು…ಏನೋ ಕಳೆದುಕೊಂಡವರ ಹಾಗೆ…ಆಗ ಅವರಿಗೆ ಫೋನ್ ಮಾಡಿಯಾದರೂ ಕೇಳೀ ಬಿಡುತ್ತಿದ್ದೆ..
“ಏನ್ ಸಾರ್… ಆರೋಗ್ಯ ಸರಿ ಇಲ್ಲವಾ..?”
ಅಂತ… !!
ನಮ್ಮ ಮನೆಯಲ್ಲೂ ಕೆಲವೊಮ್ಮೆ ನನ್ನ  ಅನ್ಯ ಮನಸ್ಕತೆಯನ್ನು ನೋಡಿ ಕೇಳುತ್ತಿದ್ದರು…”ಏನ್ರಿ ಒಂಥರಾ ಇದ್ದೀರಿ… ಮನೆ ಮಾಲಿಕರು ಭೇಟಿ ಆಗಲಿಲ್ವಾ..?…!” ಮಾಡಿದ ಕೆಲಸದ ಬಿಲ್ಲಿನ ಹಣವನ್ನು  ಒಂದು ದಿನವೂ ತಡವಾಗದಂತೆ  ಕರೆದು ಕೊಡುತ್ತಿದ್ದರು….ಹಣಕಾಸಿನ ವಿಚಾರದಲ್ಲಿ ಒಂದು ದಿನವೂ  “ಎರಡು” ಮಾತನಾಡಲಿಲ್ಲ !!!
ಕೆಲವೊಮ್ಮೆ ಅವರು ಹೇಳುತ್ತಿದ್ದರು…
“ಹೆಗಡೆಯವರೆ…
ನನ್ನ  ಮನಸ್ಸು  ಕಸದ ತೊಟ್ಟಿಯಲ್ಲ ನೋಡಿ…ಅಲ್ಲಿ ಬೇಡದ  ಕೊಳಕನ್ನು ಅಲ್ಲಿ ಇಟ್ಟುಕೊಳ್ಳುವ ಸ್ವಭಾವ ನನ್ನದಲ್ಲ…ಕೊಳಕನ್ನು ಮುಚ್ಚಿಟ್ಟು ಗಲೀಜು ಮಾಡಿಕೊಳ್ಳುವದಿಲ್ಲ…

ಎಲ್ಲವೂ ಮುಕ್ತ… !

ನಾನು  ಅಲ್ಲಿ ಸುಗಂಧ ಇಡಲಿಕ್ಕೆ ಆಗದಿದ್ದರೂ..
ಅಲ್ಲಿ  ಕ್ಲೀನ್  ಇಡುತ್ತೇನೆ…
ನನಗೆ ಸಿಟ್ಟು ಬರಲಿ…
ಖುಷಿಯಾಗಲಿ…   ದುಃಖವೇ ಆಗಿರಲಿ…ನಾನು ಹೀಗೆಯೇ ಇರುತ್ತೇನೆ…
ಕೆಲವರಿಗೆ ಕಿರಿಕಿರಿ ಆದರೂ…
ನಾನು ಆರೋಗ್ಯವಾಗಿದ್ದೇನೆ…!
ನನ್ನ ಸ್ವಭಾವ ಬದಲಿಸ ಬೇಕು ಅಂತ  ಬಹಳ ಪ್ರಯತ್ನ ಮಾಡಿದೆ..
ಆಗಲಿಲ್ಲ ನೋಡಿ…
ಎಪ್ಪತ್ತು ವರ್ಷ ನನಗೆ  ಬೀಪಿಯಿಲ್ಲ.. !ಸಕ್ಕರೆ ಖಾಯಿಲೆಯಿಲ್ಲ..!!…” ನನಗೆ ಕುತೂಹಲ ಜಾಸ್ತಿಯಾಯಿತು…
“ಸರ್ …
ನಿಮ್ಮ  ಮಡದಿಯವರಿಗೆ  ಅಂಥಹ ಖಾಯಿಲೆ  ಇದೆಯಾ ? “
“ದೇವರ ದಯೆಯಿಂದ ಅವರಿಗೂ ಇಲ್ಲ…ಅವರೂ  ಮನಸಾ ಇಚ್ಛೇ.. ನನ್ನ ಮೇಲೆ ರೇಗಾಡುತ್ತಾರಲ್ಲ…!!
ನಮ್ಮ ಮನೆಯಲ್ಲಿ ಪ್ರಜಾಪ್ರಭುತ್ವವಿದೆ ಸ್ವಾಮಿ..!!..”
ನನಗೆ ಅಬ್ಭಾ ಅನಿಸಿತು  !!
ಇದೆಲ್ಲ  ಸರಿ…ಅವರ  ಮನೆಯ ಗೃಹಪ್ರವೇಶದ ದಿನ ಹತ್ತಿರ ಬಂತು…
“ಹೆಗಡೆಯವರೆ…
ನೀವು.. ನಿಮ್ಮ  ಮನೆಯವರು…
ಮಗನನ್ನೂ…
ಕರೆದು ಕೊಂಡು  ಗೃಹಪ್ರವೇಶಕ್ಕೆ ಬರಲೇ.. ಬೇಕು…”
ನನಗೆ ಪಿಕಲಾಟಕ್ಕೆ ಶುರುವಾಯಿತು…!!
ಗೃಹಪ್ರವೇಶಕ್ಕೆ  ತುಂಬಾ ಜನ ಬಂದಿರುತ್ತಾರೆ…
ಹೆಂಡತಿ….!
ಮಗ… !
ಎಲ್ಲರ ಎದುರಿಗೆ  “ಏನು ತಿಂತ್ತೀರ್ರಿ.. ಮಾರಾಯ್ರೆ..?” ಅಂತ ಕೂಗಾಡಿ  ಬಿಟ್ಟರೆ..??
ಏನು ಮಾಡಲಿ…?..?

7 ಟಿಪ್ಪಣಿಗಳು (+add yours?)

 1. Avinash
  ನವೆಂ 14, 2010 @ 11:11:41

  ಪ್ರಕಾಶಣ್ಣ ಸೂಪರ್ ಅಗಿದೆರಿ

  ಉತ್ತರ

 2. Umesh Balikai
  ನವೆಂ 11, 2010 @ 12:13:51

  Prakaashanna,

  Yarannu modala bhetiyalle aleyabaaradu alva… Obbarannu artha madkoloke ondu dina sakaagbahudu, innu kelavaranna artha madkoloke varshagale bekaagbahdu… Chendada baraha,… nimmante ella vishayagalannu haasyamayavaagi bareyuvudu tumba janakke baralla .. 🙂 Dhanyavaadagalu

  Umesh
  umeshbalikai.blogspot.com

  ಉತ್ತರ

  • prakash hegde
   ನವೆಂ 11, 2010 @ 14:56:29

   ಪ್ರೀತಿಯ ಉಮೇಶ್….

   ಎಲ್ಲ ಸಂಬಂಧಗಳ..
   ವ್ಯವಹಾರಗಳ ಆರಂಭಗಳು.. ಸಂಶಯದಲ್ಲೇ ಶುರುವಾಗುತ್ತವೆ…

   ಎದುರಿಗೆ ಬಣ್ಣದ ಮಾತುಗಳು…
   ಹಿತವಾದ ನಗು ಕಾಣಿಸಿಕೊಂಡರೂ… ಸಂಶಯ ಇದ್ದೇ ಇರುತ್ತದೆ…

   ಇದು ನಮ್ಮ ವಾಸ್ತವ ಜಗತ್ತಿನ ತೀರಾ ಸಹಜ ಸತ್ಯ…

   ಕ್ರಮೇಣ ನಂಬಿಕೆ, ವಿಶ್ವಾಸಗಳು ಬೇರುರೂತ್ತವೆ…
   ಬೇರೂರ ಬೇಕು…

   ಪಕ್ಕದವರನ್ನು ಅರ್ಥ ಮಾಡಿಕೊಳ್ಳುವದರಲ್ಲೇ ನಮ್ಮ ಬದುಕು ಮುಗಿಯುತ್ತಿರುತ್ತದೆ..
   ಮಾಗಿರುತ್ತದೆ..

   ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು…

   ಉತ್ತರ

 3. savitri
  ನವೆಂ 10, 2010 @ 13:54:00

  Very nice article

  ಉತ್ತರ

  • prakash hegde
   ನವೆಂ 10, 2010 @ 20:06:26

   ಸಾವಿತ್ರಿಯವರೆ…

   ಬದುಕಿನ ಅನಿವಾರ್ಯತೆಗಳು ತಾಳ್ಮೆ, ಸಂಯಮವನ್ನೂ ಕಲಿಸುತ್ತದೆ…

   ಇಷ್ಟೊಂದು ಮನೆ ಕಟ್ಟಿರುವ ನನಗೆ ಪ್ರತಿಯೊಂದು ಮಾಲಿಕರು…
   ಅವರೊಡನೆಯ ಅನುಭವಗಳು .. ಮರೆಯಲಾಗದ ಅನುಭವಗಳು…

   ಇದರಲ್ಲಿ ಸಿಹಿಗಳೆ ಜಾಸ್ತಿ…

   ಒಂದೆರಡು ಕಹಿಗಳಿದ್ದರೂ.. ಅವುಗಳು ಹೆಚ್ಚಾಗಿ ನೆನಪಿಲ್ಲ…

   ಇಂಥಹ ಅನುಭವಗಳನ್ನು ಕೊಟ್ಟ …
   ನನ್ನ ಬದುಕನ್ನು ಬದಲಿಸಿದ..
   ನನ್ನ ವೃತ್ತಿಗೆ ಶರಣು .. ಶರಣು…

   Thank you very much…..

   ಉತ್ತರ

 4. veda
  ನವೆಂ 10, 2010 @ 10:32:09

  Neevu nijakku yen thinthira marayre. Namge intha rasagavalanna hege kanthinalli unabadisthiralla.Mundhina kanthu yavaga bega thilsbidi, navu tea jothe bajji bondanu kodisthivi.

  ಉತ್ತರ

  • prakash hegde
   ನವೆಂ 10, 2010 @ 20:03:09

   ವೇದಾರವರೆ…

   ಎಲ್ಲೋ ಓದಿದ್ದೆ…

   ಯಾರಾದರೂ ಮಾತನಾಡುವಾಗ ಅವರು ಏನು ಹೇಳುತ್ತಾರೆ ಅನ್ನುವದನ್ನು ಕೇಳ ಬಾರದಂತೆ…!!
   ಬದಲಾಗಿ…
   “ಅವರು ಏನು ಹೇಳುವದಿಲ್ಲವೋ… ಆಆದನ್ನು ಕೇಳ ಬೇಕಂತೆ..!!”

   ಬೆರೆಯವರೊಡನೆ ಮಾತನಾಡುವಾಗ ನಾವು ನಮ್ಮ ದೌರ್ಬ್ಯಲ್ಲಗಳ…
   ನಮ್ಮ ಸೋಲುಗಳ..
   ನಮ್ಮ ಕೆಟ್ಟ ಸ್ವಭಾವಗಳ ಬಗೆಗೆ ಮಾತನಾಡುವದೇ ಇಲ್ಲ…

   ಚಂದವಾದ ಬಣ್ಣದ ಮಾತನಾಡಿಬಿಡುತ್ತೇವೆ…

   ಬೇರೆಯವರೂ ನಮ್ಮ ಬಳಿ ಹೀಗೆ ಮಾಡುತ್ತಾರಲ್ಲವೆ??

   ಅವರ ಮನೆ ಗ್ರಹ ಪ್ರವೇಶದ ಕಥೆ, ಅನುಭವ …
   ಅದೂ ಕೂಡ ಇನ್ನೊಂದು ಥರಹದ ಅನುಭವ…

   ಇದರ ಮುಂದಿನ ಕಂತನ್ನು
   ಬಿಸಿ ಬೋಂಡ, ಕಾಫೀಗಾಗದ್ರೂ ಬರೆಯುತ್ತೇನೆ…
   ಆದಷ್ಟು ಬೇಗ…

   “ಏನು ತಿಂತ್ತೀರ್ರೀ.. ಮಾರಾಯ್ರೆ” ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು…

   ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: