ನಾಟಕಗಳ ಹಾಡುಗಳು…

ರಾಮಚಂದ್ರ ದೇವ

ದೇವಸಾಹಿತ್ಯ

ಈ ಕೆಳಗಿನವು ಈಗ ಪ್ರಕಟವಾಗಿರುವ ನನ್ನ ಸಮಗ್ರ ನಾಟಕಗಳು, ಸಂಪುಟ 1 ಮತ್ತು 2ರಲ್ಲಿರುವ ನಾಟಕಗಳ ಕೆಲವು ಹಾಡುಗಳು.

ಈ ಎರಡು ಪುಸ್ತಕಗಳ ಪ್ರಕಾಶಕರು: ಬೋಧಿ ಟ್ರಸ್ಟ್.

ವಿತರಕರು:  1. ನುಡಿ ಪುಸ್ತಕ (ನ್ಯೂ ಪ್ರೀಮಿಯರ್ ಬುಕ್ ಶಾಪ್), ನಂ. 27, 21ನೇ ಮುಖ್ಯ ರಸ್ತೆ, ಬಿ. ಡಿ. ಎ. ಕಾಂಪ್ಲೆಕ್ಸ್ ಎದುರು,  ಬನಶಂಕರಿ ಎರಡನೇ ಹಂತ, ಬೆಂಗಳೂರು 560070 (ಫೋನ್ 080 26711329) email premierpublishingco@yahoo.in ಮತ್ತು

2. ಅತ್ರಿ ಬುಕ್ ಸೆಂಟರ್, ಶರಾವತಿ ಬಿಲ್ಡಿಂಗ್, ಬಲ್ಮಠ ರಸ್ತೆ, ಮಂಗಳೂರು 575001 (ಫೋನ್ 0824 2425161) email athreebook@gmail.com

ಹತ್ತು ಹತ್ತು ಹತ್ತು
ಹತ್ತಿದ ಕುದುರೆಯ ರಾಜ
ರಾಜಾ ರಾಜಾ ರಾಜಾ
ರಾಜಂಗೊಬ್ಳು ರಾಣಿ
ರಾಣೀ ರಾಣೀ ರಾಣೀ
ರಾಣೀಗೊಂದು ಮಂಚ
ಮಂಚಾ ಮಂಚಾ ಮಂಚ
ಮಂಚಕ್ಕೆ ಎರಡು ರೆಕ್ಕೆ
ರೆಕ್ಕೇ ರೆಕ್ಕೇ ರೆಕ್ಕೇ

ಮಂಚದ ರೆಕ್ಕೆ ಗಾಳಿಲಿ ಬಡಿದು
ಮೇಲಕೆ ಹಾರೀ ಹಾರಿ

ಸೂರ್ಯನ ಬೆಂಕಿಗೆ ಮೋಡದ ತಂಪಿಗೆ
ಮಂಚಕೆ ಚಿಗುರೆಲೆ ಮೂಡಿ

ಮಂಚಕೆ ಚಿಗುರೆಲೆ  ಮೂಡಿ
ಮಂಚಕೆ ಚಿಗುರೆಲೆ ಮೂಡಿ

****************

More

ಜಯಶ್ರೀ ಕಾಲಂ:ಕನ್ನಡ ವೀಕ್ಷಕರಿಗೆ ಕನ್ನಡ ತುಂಬಾ ಚೆನ್ನಾಗಿ ಬರುತ್ತೆ ಕಣ್ರೀ

ಇವತ್ತು ವ್ಯೂವರ್ಸ್ ಗೇ  ನಾವು ಹೇಳಿಕೊಡುವ ರೆಸಿಪಿ ಟ್ಯಾ ಮರಿಂಡ್  ರೈಸ್ ಅಂಡ್  ಕೋಕೋ ನಟ್ ರೈಸ್ :-) ಬೇಕಾಗಿರುವ ಇನ್ ಗ್ರಿಡೆಂಟ್ ಗಳು  ಕುಕ್ದ್   ರೈಸ್ , ಟ್ಯಾಮರಿಂಡ್  ಜೂಸ್ , ಶುಗರ್, ಕೊರಿಯಾ೦ಡರ್ ಸೀಡ್ಸ್,ಮಸ್ಟರ್ ಸೀಡ್ಸ್, ಕುಮಿನ್ ಸೀಡ್ಸ್, ಸಾಲ್ಟ್,ಟರ್ಮರಿಕ್  ಪವ್ಡರ್,ಗ್ರೌಂಡ್ ನಟ್  …….! :-):-) .

ಹೌದು ಸಾರ್ ದೇವರಾಣೆ ಸುವರ್ಣ ನ್ಯೂಸ್ನಲ್ಲಿ ಭಾವನ ಮತ್ತು ಇನ್ನೊಬ್ಬ ನಿರೂಪಕಿ ಪುಳಿಯೋಗರೆಯನ್ನು ಹೇಳಿಕೊಟ್ರು ಗೊತ್ತಾ! ನನ್ನ ಕಣ್ಣಲ್ಲಿ ನೀರೆ ಬಂದು ಬಿಡ್ತು :-) ಅಷ್ಟು ಸುಲಭ ಪುಳಿಯೋಗರೆಯನ್ನು ಇಷ್ಟು ಒಳ್ಳೆಯ ಕನ್ನಡದಲ್ಲಿ ಹೇಳಿಕೊಟ್ರಲ್ಲ  ಸಾರ್  ! ಸುವರ್ಣ ನ್ಯೂಸ್ನಲ್ಲಿ ಅದೂ ಸುಹಾಸಿನಿ ಕಾರ್ಯಕ್ರಮದಲ್ಲಿ.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಪೊಲಿಟಿಕಲ್ ಪಟಾಕಿ …

-ಸತೀಶ್ ಶೃಂಗೇರಿ

%d bloggers like this: