ಸೌಹಾರ್ದ ದೀಪಾವಳಿ

ಬಿಸಿ ಉಪ್ಪಿಟ್ಟು, ಅಮೇರಿಕಾ ಹಾಲು….

ಸಿದ್ದು ಕಾಲ

ರಾಮಣ್ಣ ಮೇಷ್ಟ್ರು ಪ್ರಕರಣವೊಂದೇ ನನ್ನ ನಿರಾಸಕ್ತಿಗೆ ಕಾರಣವಲ್ಲ. ಅಕ್ಷರ ಪ್ರೇಮ ಅರಳಲೇ ಇಲ್ಲ. ಅಂಗಡಿ ಮೇಲಿನ ಆಸಕ್ತಿ, ಪುಟಾಣಿ, ಬೆಲ್ಲ, ಗೋಡಂಬಿಗಳ ಮೇಲಿನ ಪ್ರೀತಿಯಿಂದಾಗಿ ಶಾಲೆ ಆದ್ಯತೆ ಅನಿಸಲೇ ಇಲ್ಲ.
ಮನೆಯಲ್ಲೂ ಅಷ್ಟೆ, ದೊಡ್ಡ ಪರಿವಾರ ಯಾರು ಹೋಗ್ತಾರೆ, ಬಿಡ್ತಾರೆ ಎಂಬ ಕಟ್ಟುನಿಟ್ಟು ಇರಲಿಲ್ಲ. ಪಾಲಕರು, ಅಜ್ಜಂದಿರು, ನಮ್ಮನ್ನು ಹೊಡೆಯುವುದು ಶಿಕ್ಷಿಸುವುದಂತೂ ದೂರದ ಮಾತು.

ಎಲ್ಲರೂ ಅವರವರ ಪಾಡಿಗೆ busy.ಇಂದಿನ ಪ್ರಾಥಮಿಕ ಶಿಕ್ಷಣದ ಶಿಸ್ತನ್ನು, ಅಭ್ಯಾಸದ ಬಗೆಗಿನ ಕಾಳಜಿಯನ್ನು ನೋಡಿದರೆ ಆಶ್ಚರ್ಯ. ಈ ರೀತಿಯ ಬಾಲ್ಯದ ಶಿಕ್ಷಣ ಪಡೆದ ನೆನಪೆ ಇಲ್ಲ.
ಇದ್ದ ಸರಕಾರಿ ಶಾಲೆಯಲ್ಲಿ ಮಕ್ಕಳು ಬಂದರೆ ಸಾಕು ಎನ್ನುವ ಸ್ತಿತಿ ಶಾಲೆಯಲ್ಲಿ ಕೊಡುತ್ತಿದ್ದ ದಪ್ಪ ಕಾಳಿನ ಉಪ್ಪಿಟ್ಟು ಒಮ್ಮೊಮ್ಮೆ ಶಾಲೆಗೆ ಹೋಗಲು ಪ್ರೇರೆಪಿಸುತ್ತಿತ್ತು.

ಅದನ್ನು ಎಲ್ಲರೂ ತಿನ್ನಬಾರದು ಎಂಬ ಕರಾರಿದ್ದರೂ ನಾನು ಕಡ್ಡಾಯವಾಗಿ ಖುಷಿಯಿಂದ ತಿನ್ನುತ್ತಿದ್ದೆ.
ಇಂದಿನ ಅಕ್ಷರ ದಾಸೋಹದ ಬಿಸಿ ಊಟ ಅಂದು ಉಪ್ಪಿಟ್ಟಿನ ಸ್ವರೂಪದಲ್ಲಿತ್ತು. ಬಿಸಿಯುಟ ಹೊಸ concept ಅಲ್ಲ. ಅಂದು ಅಮೇರಿಕಾ ಒದಗಿಸುತ್ತಿದ್ದ ಹಾಲಿನ ಪುಡಿ, ಮತ್ತು ರವೆಯನ್ನು ಮಕ್ಕಳ ಆಹಾರವಾಗಿ ಬಳಸುತ್ತಿದ್ದರು. ನಮ್ಮಂತಹ ದಡ್ಡ ಹುಡುಗರನ್ನು ಆಕರ್ಷಿಸಲು ಉಪ್ಪಿಟ್ಟು ನೆರವಾಯಿತು.

More

ಕಲಿಯುವುದಕ್ಕೊಂದು ಅವಕಾಶ …

ಈಗ 4 ಗಂಟೆಗೆ..ಕೃಪಾಕರ ಸೇನಾನಿ

ಬೆಂಗಳೂರು  ಪ್ಯಾಲೇಸ್ ಗ್ರೌಂಡ್ಸ್ ನಲ್ಲಿರುವ ಗಾಯತ್ರಿ ವಿಹಾರದಲ್ಲಿ

ಗ್ರೀನ್ ಆಸ್ಕರ್ ಪ್ರಶಸ್ತಿ ಪಡೆದ

ಕೃಪಾಕರ ಸೇನಾನಿ ಅವರ

ದಿ ಪ್ಯಾಕ್

ಚಿತ್ರ ಪ್ರದರ್ಶನ

ಹಾಗೂ ಕೃಪಾಕರ ಸೇನಾನಿ ಅವರೊಂದಿಗೆ ಸಂವಾದ

ಎಲ್ಲರಿಗೂ ಉಚಿತ ಪ್ರವೇಶ

ನೀವು ಏನು ತಿಂತ್ತೀರ್ರಿ… ಮಾರಾಯ್ರೇ..

ಇಟ್ಟಿಗೆ ಸಿಮೆಂಟು

ಮೈ ಬಣ್ಣಗಳು  ಬದಲಾಗುತ್ತಿರುತ್ತವೆ… ನನ್ನಂಥಹ ಕಾಂಟ್ರಾಕ್ಟರುಗಳ ಮೈ ಬಣ್ಣ ನೋಡಿ ಕೆಲಸದ ಬಗೆಗೆ ಹೇಳ
ಬಹುದು..
ಹೇಗೆ  ಅಂತೀರಾ? ಬಣ್ಣ ಬಿಳಿದಾಗಿ, ಫ್ರೆಶ್  ಆಗಿದ್ದರೆ..
ಇನ್ನೂ ಹೊಸ ಕೆಲಸ ಶುರುವಾಗಿಲ್ಲ ಅಂತ ಅರ್ಥ…
ನಾವು ಕಟ್ಟುತ್ತಿರುವ ಮನೆಯ ಗೃಹಪ್ರವೇಶ ಹತ್ತಿರ ಬಂದಿದೆ ಅಂತಲೂ ಆಗಬಹುದು.. ಸ್ವಲ್ಪ ಕಪ್ಪಾಗಿ .. ಸುಟ್ಟ ಹಾಗೆ ಕಾಣಿಸಿದರೆ ಹೊಸ ಕೆಲಸ ಶುರುವಾಗಿದೆ ಅಂತ ..

ನಮ್ಮ ಮೈ ಬಣ್ಣಗಳಿಗೂ…..
ನಮಗೆ ಹೊಸ  ಕೆಲಸ..
ಹೊಸ ಪ್ರಾಜೆಕ್ಟ್ ಸಿಕ್ಕ ಸಂತೋಷಕ್ಕೂ  ಸಂಬಂಧವೇ ಇರುವದಿಲ್ಲ…!

ನಮಗೆ ಹೊಸ ಕೆಲಸ ಶುರುವಾದ ಸಂಭ್ರಮದಲ್ಲಿ  “ಕಪ್ಪಾಗಿ” ಬಿಡ್ತಿವಿ…

ನಮ್ಮ ಹೊಸ ಕೆಲಸಗಳು  ಶುರುವಾಗುವದು  ನೆರಳಿನ ಅಡಿಯಲ್ಲಿ ಅಲ್ಲವಲ್ಲ…
ಸುಡು ಬಿಸಿಲಿನಲ್ಲಿ….

ಹಿಂದಿನ ದಿನವಿಡಿ ಹೊಸ ಕೆಲಸದ ಮಾರ್ಕಿಂಗ್ ಮಾಡಿ ಸಿಕ್ಕಾಪಟ್ಟೆ  ದಣಿದಿದ್ದೆ..
ಕೆಟ್ಟ ರಣ ಬಿಸಿಲಿನ ಝಳ, ಸೆಖೆಯಿಂದ ಸುಟ್ಟು  ಕರಕಲಾಗಿದ್ದೆ..

ಬೆಳಿಗ್ಗೆ  ಆರು ಗಂಟೆಯಾಗಿದ್ದರೂ ಇನ್ನೂ ಎದ್ದಿರಲಿಲ್ಲ..
ಮೊಬೈಲ್ ರಿಂಗಾಯಿತು..

More

ಶರೀಫಾ, ಮಂಜುನಾಥ ಲತಾಗೆ ಸಿದ್ಧಲಿಂಗ ಪಟ್ಟಣಶೆಟ್ಟಿ ಪುರಸ್ಕಾರ

-ಸಿದ್ದು ಕಾಲ

ಗದುಗಿನ ಸಾಹಿತ್ಯ ಪ್ರಕಾಶನ ಸಂಸ್ಥೆ ಸಾಂಗತ್ಯ ಪ್ರಕಾಶನ ಡಾ ಸಿದ್ಧಲಿಂಗ ಪಟ್ಟಣಶೆಟ್ಟಿ ಸಾಹಿತ್ಯ ಪುರಸ್ಕಾರವನ್ನು ೨೦೧೦ ರಿಂದ ನೀಡುವುದಾಗಿ ತಿರ್ಮಾನಿಸಿತ್ತು. ಅದಕ್ಕಾಗಿ ೨೦೦೫ ರಿಂದ ೨೦೦೯ ರವರೆಗೆ ಪ್ರಕಟಗೊಂಡ ಕವನ ಸಂಕಲನಗಳನ್ನು ಆಹ್ವಾನಿಸಿತ್ತು.

ಪ್ರಶಸ್ತಿಗೆ ಉತ್ತಮ ಪ್ರತಿಕ್ರಿಯೆ ದೊರಕಿ ನೂರಾ ಇಪ್ಪತ್ತೈದು ಕವಿಗಳು ಹಾಗೂ ಪ್ರಕಾಶಕರು ಸಂಕಲನಗಳನ್ನು ಸಾದರ ಪಡಿಸಿದ್ದರು. ಖ್ಯಾತ ಕವಿಗಳಾದ ಮೈಸೂರಿನ ಜಿ.ಕೆ.ರವೀಂದ್ರಕುಮಾರ, ಹಾವೇರಿಯ ಸತೀಶ ಕುಲಕರ್ಣಿ ಹಾಗೂ ಬೆಂಗಳೂರಿನ ಎಚ್. ಎಲ್. ಪುಷ್ಪಾ ಅವರನ್ನೊಳಗೊಂಡ ತೀರ್ಪುಗಾರರ ಸಮಿತಿ ಅಂತಿಮವಾಗಿ ಹರಿಹರದ ಕೆ.ಶರೀಫಾ ಅವರ ‘ಬುರ್ಖಾ ಪ್ಯಾರಡೈಸ್’ ಮೈಸೂರಿನ ಮಂಜುನಾಥ ಲತಾ ಅವರ ‘ಆಹಾ ಅನಿಮಿಷ ಕಾಲ’ ಕಾವ್ಯ ಸಂಕಲನಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿತು.

ಹತ್ತು ಸಾವಿರ ನಗದು ಪುರಸ್ಕಾರ ಹಾಗೂ ಸ್ಮರಣಿಕೆಗಳನ್ನು ನೀಡಲಾಗುವುದು. ಪ್ರಥಮ ವರ್ಷದ ಪುರಸ್ಕಾರವನ್ನು ಇಬ್ಬರೂ ಹಂಚಿಕೊಂಡಿದ್ದು ಪುರಸ್ಕೃತರಿಗೆ ತಲಾ ಐದು ಸಾವಿರ ನಗದು ಹಾಗೂ ಸ್ಮರಣೆಗಳನ್ನು ನೀಡಿ ಗೌರವಿಸಲಾಗುವುದೆಂದು ಸಾಂಗತ್ಯ ಪ್ರಕಾಶನದ ಸಂಚಾಲಕರಾದ ಡಾ ಜಿ. ಬಿ. ಪಾಟೀಲ ಹಾಗೂ ಸಿದ್ಧು ಯಾಪಲಪರವಿ ತಿಳಿಸಿದ್ದಾರೆ.

Celebrate Green Diwali…

ನನ್ನ ತಮ್ಮ ಶಂಕರ …

ಇಲ್ಲೂ ನೋಡಿ : Invitations Blog

ಜಯಶ್ರೀ ಕಾಲಂ: ಈ ‘ಸಮಯ’..

ಸಮಯ ವಾಹಿನಿಯ ಹೊಸ ಲೋಗೋ ಪ್ಯಾಟ್ರನ್ ಹಾಗೂ ಬಣ್ಣ  ಸಖತ್ತಾಗಿದೆ. ನೂರು ದಿನದ ಸಂಭ್ರಮ ಆ ವಾಹಿನಿಗೆ ಈಗ. ಏನ್ರೀ ಟೀಆರ್ಪಿ ಜ್ವರ ಏರಿದಂಗೆ ಏರ್ತಾ ಇದೆ :-).  ಭದ್ರ ಸಮಯ ಗ್ರೂಪ್ ಜ್ವರ ಇಳಿಸೋಕೆ ಸಿಕ್ಕಾಪಟ್ಟೆ ಜನ ಕಾಯ್ತಾ ಇರ್ತಾರೆ, ಆಮೇಲೆ ನಿಶಕ್ತಿ ಆಗಿ ಮೂಲೇಲಿ ಪಾಚಿಕೊಳ್ಳ ಬೇಕು ಅಷ್ಟೆ :-).ಸಮಯ ವಾಹಿನಿಯಲ್ಲಿ ಹೆಚ್ಚಿನ ಸಂಖ್ಯೆಯ ರಿಪಿಟರ್ಸ್ ಇರೋದು .
ಅವರು ಬೈದು ಕೊಂಡ್ರು  ಪರವಾಗಿಲ್ಲ ಕಣ್ರೀ ನೇರವಾಗಿ ಹೇಳಿ ಬಿಡ್ತೀನಿ ಇವರಲ್ಲಿ ಹೆಚ್ಚು ಎಕ್ಸ್ ಪರ್ಟ್ ಗಳಿಗೆ  ಫೇಲ್ ಆದ ಮೇಲೆ ಬುದ್ಧಿ ಬಂತು ಎಂದು ಕಾಣುತ್ತೆ . ಶಾಲೆಯಲ್ಲಿ ಮೂರು ಗ್ರೂಪ್ ಇರುತ್ತೆ ಒಂದು  ಕ್ಷಣ ಕ್ಷಣವನ್ನು  ಸದುಪಯೋಗ ಮಾಡಿಕೊಳ್ಳುವ ಗುಂಪು, ಎರಡನೆಯದು ನನ್ನಂತಹವರು ಅಲ್ಲೂ ಇಲ್ಲ ಇಲ್ಲೂ ಇಲ್ಲ, ಪ್ರತಿ ಪರೀಕ್ಷೆ ತಪ್ಪದೆ ಪಾಸ್ ಕ್ಲಾಸ್ :-). ಮೂರನೇ ಗ್ರೂಪ್ನಲ್ಲಿ ತುಂಬಾ ಬುದ್ಧಿವಂತರು ಇರ್ತಾರೆ ಆದ್ರೆ ಸದಾ ಫೇಲು.. ಪ್ರಪಂಚವನ್ನೇ ಅಲುಗಾಡಿಸಿ ಬಿಡುವಷ್ಟು ಜಾಣರು. ಆದರೆ ಸದಾ ಫೇಲು.;-) !

ಪೂರ್ಣ ಓದಿಗೆ: ಮೀಡಿಯಾ ಮೈಂಡ್

ನೃಪತುಂಗ ಸಾಹಿತ್ಯ ಪ್ರಶಸ್ತಿ …

ಇಲ್ಲೂ ನೋಡಿ: invitations Blog

%d bloggers like this: