ಮಣಿಕಾಂತ್ ಬರೆಯುತ್ತಾರೆ: ಇರಬೇಕು ಅರಿಯದ ಕಂದನ ತರಹ

ಇರಬೇಕು ಇರಬೇಕು…

ಚಿತ್ರ ನಗುವ ಹೂವು. ಗೀತೆ ರಚನೆ: ಆರ್.ಎನ್. ಜಯಗೋಪಾಲ್

ಸಂಗೀತ: ಜಿ.ಕೆ. ವೆಂಕಟೇಶ್. ಗಾಯನ: ಆರ್.ಎನ್. ಸುದರ್ಶನ್

ಇರಬೇಕು ಇರಬೇಕು ಅರಿಯದ ಕಂದನ ತರಹ

ನಗಬೇಕು ಅಳಬೇಕು ಇರುವಂತೆ ಹಣೆಬರಹ       ||ಪ||

ಇರಬೇಕು ಇರಬೇಕು ತಾವರೆ ಎಲೆಯ ತರಹ

ಕಣ್ಣೀರೋ ಪನ್ನೀರೋ ಯಾರಲಿ ಮಾಡಲಿ ಕಲಹ

ಯಾರಲಿ ಮಾಡಲಿ ಕಲಹ  ||೧||

ಇರಬೇಕು ಇರಬೇಕು ಬಾಳಲಿ ಭರವಸೆ ಮುಂದೆ

ನೋವಿರಲಿ ನಲಿವಿರಲಿ ನೋಡಲೆಬಾರದು ಹಿಂದೆ

ನೋಡಲೆ ಬಾರದು ಹಿಂದೆ         ||೨||

೧೯೭೧ರಲ್ಲಿ ತೆರೆಕಂಡು, ರಾಷ್ಟ್ರಪ್ರಶಸ್ತಿಗೆ ಪಾತ್ರವಾದ ಚಿತ್ರ ನಗುವ ಹೂವು. ಈ ಚಿತ್ರಕ್ಕೆ ಸಂಬಂಸಿದಂತೆ ಒಂದಿಷ್ಟು ಸ್ವಾರಸ್ಯಗಳಿವೆ. ಏನೆಂದರೆ-ಇದು ಆರೆನ್ನಾರ್ ಕುಟುಂಬದವರ ಚಿತ್ರ. ಹೇಗೆ ಗೊತ್ತಾ? ನಗುವ ಹೂವು ಚಿತ್ರದ ನಿರ್ಮಾಣ ಆರೆನ್ನಾರ್ ಕುಟುಂಬದ್ದು. (ಸಹ ನಿರ್ಮಾಪಕರಾಗಿ ಸೇರಿಕೊಂಡವರು, ಕಾಡಿನ ರಹಸ್ಯ ಚಿತ್ರ ನಿರ್ಮಿಸಿದ ರಂಗಪ್ಪ ಮತ್ತು ಚಿನ್ನಪ್ಪ.) ಚಿತ್ರದ ನಾಯಕ-ಆರ್. ನಾಗೇಂದ್ರರಾವ್ ಅವರ ಕಿರಿಯ ಪುತ್ರ ಆರ್.ಎನ್. ಸುದರ್ಶನ್.

ನಾಯಕಿಯಾಗಿದ್ದುದಲ್ಲದೆ, ಚಿತ್ರಕ್ಕೆ ಕಥೆ- ಚಿತ್ರಕಥೆ ಒದಗಿಸಿದವರು ಸುದರ್ಶನ್ ಅವರ ಪತ್ನಿ ಶೈಲಶ್ರೀ. ಸಂಭಾಷಣೆ ಹಾಗೂ ಗೀತೆ ರಚನೆಯ ಹೊಣೆ ಹೊತ್ತವರು ಆರೆನ್ನಾರ್ ಅವರ ಎರಡನೇ ಮಗ ಆರ್.ಎನ್. ಜಯಗೋಪಾಲ್. ಛಾಯಾಗ್ರಹಣದೊಂದಿಗೆ ನಿರ್ದೇಶನದ ಹೊಣೆಯನ್ನೂ ಹೊತ್ತವರು ಅರೆನ್ನಾರ್ ಅವರ ಮೊದಲ ಮಗ ಆರ್.ಎನ್. ಕೃಷ್ಣ ಪ್ರಸಾದ್.

ಇನ್ನಷ್ಟು

ಬಂದಿದೆ ಜಯಶ್ರೀ ಕಿಕ್ಕಿಂಗ್ ಕಾಲಂ…

ರೇಡಿಯೋ ಸದ್ದು...

ಇಂದು ಎಫೆಮ್ಗಳು ಸಂಪೂರ್ಣವಾಗಿ ಗಮನ ಕೊಟ್ಟ ಹಾಡುಗಳು ಡಾ. ವಿಷ್ಣುವರ್ಧನ್ ಅವರದ್ದು. ( ದೃಶ್ಯ ಮಾಧ್ಯಮಗಳು ಹಿಂದೆ ಉಳಿದಿರಲಿಲ್ಲ). ಯಾವ ಎಫೆಮ್ಗೆ ಹೋದರು ವಿಷ್ಣು ಬಗ್ಗೆ ಮಾತು-ನಮನ. ಹಾಗೆ 98 . 3 ಎಫೆಮ್ ನತ್ತ ಹೋದಾಗ ಅಲ್ಲಿ ಸಹ ವಿಷ್ಣು ಅವರ ಕಾರ್ಯಕ್ರಮ ಪ್ರಸಾರ ಆಗ್ತಾ ಇತ್ತು. ಹನ್ನೋದರ ಶೋವನ್ನು ಇತ್ತೀಚೆಗೆ ಬೇರೆ ಆರ್ಜೆ ನಡೆಸಿಕೊಡ್ತಾ ಇದ್ರು, ಈಗ ಪುನಃ ಲಾವಣ್ಯ ರಿವೈಂಡ್ ರಾಗ ಕಾರ್ಯಕ್ರಮ ಕೇಳುಗರ ಕೈಲಿ ಇಡುತ್ತಿದ್ದರು. ಈ ಹೆಣ್ಣುಮಗಳು ಚೆನ್ನಾಗಿ ಕಾರ್ಯಕ್ರಮ ನಡೆಸಿ ಕೊಡ್ತಾರೆ, ಆದರೆ ಧ್ವನಿಯಲ್ಲಿ ಲವಲವಿಕೆ ಸ್ವಲ್ಪ ಕಡಿಮೆ. ಅದರತ್ತ ಗಮನ ಹರಿಸಿದರೆ… ಫಿಟ್ ಎನ್ ಫೈನ್ :

ಪೂರ್ಣ ಓದಿಗೆ :ಮೀಡಿಯಾ ಮೈಂಡ್

ಮಲೆಗಳಲ್ಲಿ ಮದುಮಗಳು : ಪದ್ಯಗಳು ಮೂಡಿ ಬಂದವು …

ಬಾ ಹುಲಿಕಲ್ ನೆತ್ತಿಗೆ-10

-ಪ್ರೊ. ಶಿವರಾಮಯ್ಯ

ಹಾಡುಗಳು

ಮದುಮಗಳು ನಾಟಕದ ಭಾವತೀವ್ರತೆಯನ್ನು ಕಾಯ್ದುಕೊಳ್ಳಲು ಸುಮಾರು 45 ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಅವುಗಳಲ್ಲಿ ಕೇವಲ ನಾಲ್ಕು ಪದ್ಯಗಳು ಮಾತ್ರ ಕುವೆಂಪು ಅವರವು. ಉಳಿದಂತೆ 40 ಹಾಡುಗಳನ್ನು ನಾರಾಯಣ ಸ್ವಾಮಿ ರಚಿಸಿದರು; ಹಂಸಲೇಖ ಅವರು ಅವುಗಳನ್ನು ಸಂಗೀತಕ್ಕೆ ಅಳವಡಿಸಿ ಮದುಮಗಳು ರಂಗರೂಪವನ್ನು ಕಟ್ಟಲು ಸಹಕರಿಸಿದರು. ಕೆ.ವೈ.ಎನ್. ಮದುಮಗಳು ಮೈಮೇಲೆ ಬಂದಂತೆ ಹೊತ್ತು ಗೊತ್ತಿಲ್ಲದೆ, ಜೋಷ್ ಬಂದ ಹಾಗೆ ಪದ್ಯದ ಚರಣಗಳನ್ನು ಗುನುಗುನಿಸುತ್ತ ಲ್ಯಾಪ್ ಟಾಪ್ನಲ್ಲಿ ಟೈಪ್ ಮಾಡುತ್ತಿದ್ದ ದೃಶ್ಯವನ್ನು ಕುರಿತು.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಹೀಗೆ ಪದ್ಯಗಳನ್ನು ರಚಿಸುವುದಕ್ಕೂ ಮೊದಲು ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ಕುವೆಂಪು ಸಮಗ್ರ ಕಾವ್ಯದ ಎರಡೂ ಸಂಪುಟ (ಸು. 2000 ಪುಟಗಳು)ಗಳನ್ನು ತರಿಸಿ, ನನ್ನ ಮುಂದಿರಿಸಿ ನೋಡಿ ಪ್ರೊಫೆಸರ್-ಇವುಗಳಲ್ಲಿ ಮದುಮಗಳು ನಾಟಕಕ್ಕೆ ಹೊಂದುವ ಪದ್ಯಗಳನ್ನು ಎಕ್ಕಿತೆಗೆಯಬೇಕು ಎಂದು ಹೇಳಿದರು. ಅದಕ್ಕೆ ಎಷ್ಟು ದಿನ ಬೇಕಾಗಬಹುದು ಎಂದು ಗಾಬರಿ ಆದರೂ ಚಲಬಿಡದೆ ಇಬ್ಬರೂ ಒಂದೊಂದು ಸಂಪುಟ ಹಿಡಿದು ಕುಳಿತೆವು.

ಆದರೆ ಅವು ಯಾವುವೂ ಮದುಮಗಳು ರಂಗರೂಪವನ್ನು ಅಥರ್ೈಸಲು ವಿಸ್ತರಿಸಲು ಹೊಂದಿಕೆಯಾಗಲಿಲ್ಲ. ‘ಪಕ್ಷಿಕಾಶಿ’ ಸಂಕಲನದ ಆನಂದಮಯ ಈ ಜಗಹೃದಯ; ಇಂತಹ ಸುಂದರ ಪ್ರಾತಃಕಾಲದಿ; ಶರತ್ಕಾಲದ ಸೂರ್ಯೋದಯದಲಿ; ಬಾಫಾಲ್ಗುಣ ರವಿ ದರ್ಶನಕೆ ಮತ್ತು ದೇವರು ರುಜು ಮಾಡಿದನು ಈ ಕವಿತೆಗಳನ್ನು ತೋರಿಸಿ ಇವುಗಳಲ್ಲಿ ಯಾವುದಾದರೂ ಒಂದು ಕವಿತೆ ತಿಮ್ಮಿ ಹುಲಿಕಲ್ಲು ನೆತ್ತಿಯಲ್ಲಿ ಕಾಣುವ ಸೂರ್ಯೋದಯದ ಸನ್ನಿವೇಶಕ್ಕೆ ಸರಿ ಹೊಗಬಹುದೇ ಎಂದು ಆತನ ಕಡೆ ನೋಡಿದೆ, ಆತ ನೋಡಿ ‘ಇಲ್ಲ ಸಾರ್ ಇವು ಸರಿಹೋಗುವುದಿಲ್ಲ.

ಇನ್ನಷ್ಟು

ಬೆಟ್ಟದ ಜೀವ …

LAXMAN’S SPECIAL WEAPON!

-ಸತೀಶ್ ಶೃಂಗೇರಿ


ಮಲೆಗಳಲ್ಲಿ ಮದುಮಗಳು : ಉದಯ ರವಿಯಲ್ಲಿ ಸುಬ್ಬೇಗೌಡರು…

ಬಾ ಹುಲಿಕಲ್ ನೆತ್ತಿಗೆ-9

-ಪ್ರೊ. ಶಿವರಾಮಯ್ಯ

ಚಂದೂಪೂಜಾತರ್ಿ

ದಕ್ಷಿಣ ಕನ್ನಡದಿಂದ ಬಂದು ಮೇಗರವಳ್ಳಿಯಲ್ಲಿ ಓಟಲ್ ಮನೆ ನಡೆಸುತ್ತಿದ್ದಳು. ಒಮ್ಮೆ ಈಕೆ ಹಾದಿ-ಬೀದಿಯಲ್ಲಿ, ಸಂತೆ_ಸಾಮಾನಿಗೆ ಓಡಾಡುತ್ತಿದ್ದ ಜನರನ್ನು ಚಪ್ಪಾಳೆತಟ್ಟಿ ಕರೆದು, ಪುಟ್ಟಪ್ಪನವರ ಭಿತ್ತಿ ಚಿತ್ರವನ್ನು ತೋರಿಸುತ್ತ ‘ಹೋಯ್ ಬನ್ನಿ ಇಲ್ಲಿ ಕಾಣಿ ಕೆ.ಯಿ. ಪುಟ್ಟಪ್ಪನವರ ಪಟ ಬಂದಿದೆ ಪತ್ರಿಕೆಯಲ್ಲಿ ಕಾಣಿ ಬನ್ನಿ’ ಎಂದು ಗಿರಾಕಿಗಳನ್ನು ಆಹ್ವಾನಿಸುತ್ತಿದ್ದಳಂತೆ. ಮಲೆನಾಡಿನ ಒಕ್ಕಲಿಗ ಗೌಡರು ಕುತೂಹಲದಿಂದ ಬರುವುದು, ಫೋಟೋ ಕಂಡು ‘ರಾಜಕುಮಾರ ಇದ್ದಾಂಗೆ ಇದ್ದಾರೆಂದು ಮಾತಾಡಿ, ಹಾಗೆ ಚಂದೂಪೂಜಾತರ್ಿ ಹೋಟೆಲ್ನಲ್ಲಿ ಕಾಫಿ ತಿಂಡಿ ಪೂರೈಸಿ ಹೋಗುತ್ತಿದ್ದರಂತೆ. ಕಡೆಯಲ್ಲಿ ರಾಮದಾಸ್ ಹೇಳಿದ್ದು ಈ ಚಂದೂಪೂಜಾತರ್ಿ ಬೇರೆ ಯಾರೂ ಅಲ್ಲ, ಮದುಮಗಳು ಕಾದಂಬರಿಯಲ್ಲಿ ಬರುವ ಅಂತಕ್ಕ ಸೆಡ್ತಿ ಎಂಬ ಪಾತ್ರ ಎಂದರು.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಉದಯ ರವಿಯಲ್ಲಿ ಸುಬ್ಬೇಗೌಡರು

ಇವರು ದೇವಂಗಿ ಸಾಹುಕಾರರು ಮೇಗರವಳ್ಳಿಯಲ್ಲಿ ನಡೆಸುತ್ತಿದ್ದ ರೈಸ್ಮಿಲ್ಲಿನ ಮೇಲ್ವಿಚಾರಕರು. ಆದ್ದರಿಂದ ಕುವೆಂಪು ಮಡದಿ ಹೇಮಾವತಿಯವರಲ್ಲಿ ಸ್ವಲ್ಪ ಸಲಿಗೆ ಇತ್ತು. ಇವರೊಮ್ಮೆ ಮೈಸೂರಿಗೆ ಹೋಗಬೇಕಾಗಿ ಬಂತು. ಹಾಗೇ ಉದಯರವಿಗೆ ಹೋಗಿ ಪುಟ್ಟಪ್ಪನವರನ್ನು (ಈಗಾಗಲೇ ಕುವೆಂಪು ದೊಡ್ಡ ಸಾಹಿತಿಯಾಗಿದ್ದರು) ಒಮ್ಮೆ ದರ್ಶನ ಮಾಡಿ ಹೋಗೋಣವೆಂದು ಹೋಗಿದ್ದರು. ಆದರೆ ಸದಾ ಬರವಣಿಗೆಯಲ್ಲಿ ತೊಡಗಿಕೊಂಡಿದ್ದ ಪುಟ್ಟಪ್ಪನವರು ಯಾರಿಗೂ ಭೇಟಿ ನೀಡುತ್ತಿರಲಿಲ್ಲ.

ಸುಬ್ಬೇಗೌಡರಿಗೆ ಬೇಡ ಬೇಡವೆಂದು ಮನೆಮಂದಿ ಹೇಳಿದರಾದರೂ ಕುತೂಹಲ ತಣಿಯದೆ, ‘ಪುಟ್ಟಪ್ಪ ಏನು ಬರೆಯುತ್ತಿರಬಹುದೆಂದು’ ಬಾಗಿಲ ಸಂಧಿನಲ್ಲಿ ಇಣುಕಿದರು. ಪುಟ್ಟಪ್ಪನವರು ಅವರನ್ನು ಕಂಡಕೂಡಲೇ ಹೋಗಿ ಒಳಗೆ ಹೆಂಗಸರಿದ್ದಾರೆ, ಅವರ ಸಂಗಡ ಮಾತಾಡಿಕೊಂಡು ಹೊರಡಿ, ಇಲ್ಲಿ ತಲೆ ಹಾಕಿ ನನ್ನ ಸಮಯ ಹಾಳುಮಾಡಬೇಡಿ ಎಂದು ಗದರಿದರು. ಗೌಡರು ಮೇಗರವಳ್ಳಿಗೆ ಹಿಂತಿರುಗಿದರು.

ಇನ್ನಷ್ಟು

ಈರುಳ್ಳಿ..ಹುಷಾರ್..!

ಒಂದು ಕ್ವಿಂಟಲ್ ನೀರುಳ್ಳಿಯ ಬದಲಿಗೆ ಕಾಶ್ಮೀರವನ್ನು ಕೊಟ್ಟರೆ ಹೇಗೆ?

-ಚೇಳಯ್ಯ

ವಾರ್ತಾಭಾರತಿ

ದೇಶದಲ್ಲಿ ನೀರುಳ್ಳಿಗಾಗಿ ಹಾಹಾಕಾರ ಎದ್ದ ಬಳಿಕ ವಿವಿಧ ಪತ್ರಿಕೆಗಳಲ್ಲಿ ಬಂದ ಸುದ್ದಿಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ.
***
ಸುರೇಶ್ ಕಲ್ಮಾಡಿಯವರ ನಿವಾಸಕ್ಕೆ ದಾಳಿ ಮಾಡಿದ ಸಿಬಿಐ ಅಧಿಕಾರಿಗಳು ಅಪಾರ ಪ್ರಮಾಣದ ನೀರುಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ಅವ್ಯವಹಾರದಿಂದ ಗಳಿಸಿದ ಕೋಟ್ಯಂತರ ಹಣವನ್ನು ಅವರು ನೀರುಳ್ಳಿ ರೂಪಕ್ಕೆ ಪರಿವರ್ತಿಸಿ ಮನೆಯ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿರುವುದು ಸಿಬಿಐ ಅಧಿಕಾರಿಗಳಿಗೆ ಮನವರಿಕೆಯಾಗಿದೆ. ಕಲ್ಮಾಡಿಯವರು ತಾವು ಮಾಡುವ ಪ್ರತಿ ದಿನದ ಸಾಂಬಾರಿಗೂ ನೀರುಳ್ಳಿ ಬಳಸುತ್ತಿರುವುದು ಇದೇ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಸುಮಾರು ಎರಡು ಗೋಣಿ ನೀರುಳ್ಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇದು ನೂರು ಕೋಟಿಗೂ ಅಧಿಕ ಬೆಲೆ ಬಾಳಬಹುದು ಎಂದು ಅವರು ಅಂದಾಜಿಸಿದ್ದಾರೆ.
***
ಆಸ್ತಿ ಹಂಚಿಕೆಯ ವಿವಾದದಲ್ಲಿ ಅಣ್ಣತಮ್ಮಂದಿರು ಪರಸ್ಪರ ಇರಿದುಕೊಂಡ ಘಟನೆ ವರದಿಯಾಗಿದೆ. ಭೂಮಿ, ಹಣ, ಬಂಗಾರ ಇವೆಲ್ಲ ಹಂಚಿಕೆಯಾದ ಬಳಿಕ ಉಳಿದ ಒಂದು ನೀರುಳ್ಳಿಯನ್ನು ಹಂಚಿಕೊಳ್ಳುವಾಗ ಜಗಳ ಸ್ಫೋಟಿಸಿತು. ಅಣ್ಣನ ಪಾಲಿಗೆ ನೀರುಳ್ಳಿಯ ತುಂಡು ಒಂದು ಇಂಚು ಅಧಿಕ ಹೋಗಿರುವುದು ತಮ್ಮನ ಸಿಟ್ಟಿಗೆ ಕಾರಣವಾಯಿತು ಎನ್ನಲಾಗಿದೆ. ನೀರುಳ್ಳಿಗಾಗಿ ಕಾದಾಡಿದ ಅಣ್ಣ ತಮ್ಮಂದಿರು ಇದೀಗ ಆಸ್ಪತ್ರೆ ಸೇರಿದ್ದಾರೆ.
***
ಪ್ರತಿ ದಿನದ ಸಾರು, ಪಲ್ಯಗಳಿಗೆ ನೀರುಳ್ಳಿಯನ್ನು ಬಳಸುತ್ತಿದ್ದ ಗೃಹಸ್ಥನೊಬ್ಬನ ಮನೆಗೆ ಇನ್‌ಕಂ ಟ್ಯಾಕ್ಸ್ ಅಧಿಕಾರಿಗಳು ಅನಿರೀಕ್ಷಿತವಾಗಿ ದಾಳಿ ನಡೆಸಿದ್ದಾರೆ. ಅವನ ಮನೆಯಲ್ಲಿ ಎರಡು ಕೆ. ಜಿ. ನೀರುಳ್ಳಿ ಪತ್ತೆಯಾಗಿದ್ದು, ಅದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
***
ಇನ್ನಷ್ಟು

ಅಪಾರ ಜ್ಹಲಕ್ ….

ಅಪಾರ

ಅಪಾರ ಇತ್ತೀಚಿಗೆ ರಚಿಸಿದ ಮುಖಪುಟಗಳ ಒಂದು ಪುಟ್ಟ ಜ್ಹಲಕ್ ಇಲ್ಲಿದೆ…

ಇಂಗ್ಲೀಷ್ ಅಧ್ಯಾಪಕರೇಕೆ ಇಂಗ್ಲೀಷಿನಲ್ಲಿ ಬರೆಯುವುದಿಲ್ಲ ?

-ಉದಯ್ ಇಟಗಿ

ಬಿಸಿಲ ಹನಿ

“ನೀವು ಇಂಗ್ಲೀಷ್ ಅಧ್ಯಾಪಕರು ಇಂಗ್ಲೀಷಿನಲ್ಲೇಕೆ ಬರೆಯುವದಿಲ್ಲ?” ಹೀಗೊಂದು ಪ್ರಶ್ನೆಯನ್ನು ನನ್ನ ಮಹಿಳಾ ಸಹೋದ್ಯೋಗಿಯೊಬ್ಬರು ನನ್ನ ಕೇಳಿದರು. ಆಕೆ ಈ ಪ್ರಶ್ನೆಯನ್ನು ನನ್ನನ್ನೂ ಸೇರಿಸಿ ಕನ್ನಡದಲ್ಲಿ ಬರೆಯುತ್ತಿರುವ/ಬರೆದ ಇಂಗ್ಲೀಷ್ ಅಧ್ಯಾಪಕರನ್ನು ಉದ್ದೇಶಿಸಿ ಕೇಳಿದ್ದರು. ಆಕೆ ಮೂಲತಃ ಆಂಧ್ರದವರು. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಇಂಗ್ಲೀಷ್ ವಿಭಾಗದಲ್ಲಿ ಹತ್ತು ವರ್ಷ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿ ಈಗ ನನ್ನೊಟ್ಟಿಗೆ ಲಿಬಿಯಾದ ಸೆಭಾ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಗ್ಲೀಷ್ ಸಾಹಿತ್ಯದ ಬಗ್ಗೆ ತುಂಬಾ ಓದಿಕೊಂಡಾಕೆ ಹಾಗೂ ಕೆಲಸದ ನಿಮಿತ್ತ ಹತ್ತು ವರ್ಷಗಳನ್ನು ಮೈಸೂರಿನಲ್ಲೇ ಕಳೆದಿದ್ದರಿಂದ ಕನ್ನಡವನ್ನು ಚನ್ನಾಗಿ ಮಾತನಾಡುತ್ತಿದ್ದರು.

 

ಜೊತೆಗೆ ಕನ್ನಡಿಗರೊಂದಿಗಿನ ತಮ್ಮ ಒಡನಾಟ ಮತ್ತು ಆಸಕ್ತಿಯಿಂದಾಗಿ ಕನ್ನಡಸಾಹಿತ್ಯದ ಬಗ್ಗೆ ತುಸು ಹೆಚ್ಚೇ ತಿಳಿದುಕೊಂಡಿದ್ದರು. ಹಾಗೆ ತಿಳಿದುಕೊಳ್ಳಲು ಒಂದು ಕಾರಣವೂ ಇತ್ತು. ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ. ಎ. ಮೊದಲ ವರ್ಷಕ್ಕೆ ಪಠ್ಯವಾಗಿರುವ “Indian Writing in English” ಎಂಬ ಪತ್ರಿಕೆಗೆ ಕನ್ನಡದ ಖ್ಯಾತ ಲೇಖಕ ಯು.ಆರ್.ಅನ್ಂತಮೂರ್ತಿಯವರ ಇಂಗ್ಲೀಷಿಗೆ ಅನುವಾದಗೊಂಡಿರುವ ಪ್ರಸಿದ್ಧ ಕಾದಂಬರಿ ‘ಸಂಸ್ಕಾರ’ವನ್ನು ಬೋಧಿಸುತ್ತಿದ್ದರು.

ಆ ನೆಪದಲ್ಲಿ ಆಧುನಿಕ ಕನ್ನಡ ಸಾಹಿತ್ಯದ ಅನೇಕ ಲೇಖಕರ ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂಡಿದ್ದರು ಹಾಗೂ ಕನ್ನಡದ ಬಹುತೇಕ ಲೇಖಕರು ಇಂಗ್ಲೀಷ್ ಅಧ್ಯಾಪಕರಾಗಿದ್ದಾರೆಂಬುದು ಆಕೆಗೆ ಚನ್ನಾಗಿ ಗೊತ್ತಿತ್ತು. ಅದೇ ಪ್ರಶ್ನೆಯನ್ನು ‘ಕನ್ನಡದ ಬಹುತೇಕ ಲೇಖಕರು ಇಂಗ್ಲೀಷ್ ಅಧ್ಯಾಪಕರಾಗಿದ್ದಾರಲ್ಲವೆ?’ ಎಂದು ಕೇಳಿದರು. ನಾನು ಹೌದೆಂದು ತಲೆಯಾಡಿಸಿ ಇಂಗ್ಲೀಷ್ ಅಧ್ಯಾಪಕರಾಗಿದ್ದುಕೊಂಡು ಕನ್ನಡದಲ್ಲಿ ಬರೆದವರು ಹಾಗೂ ಬರೆಯುತ್ತಿರುವವರ ದೊಡ್ಡ ಪಟ್ಟಿಯನ್ನೇ ಕೊಟ್ಟೆ.

ಇನ್ನಷ್ಟು

ಧಾರವಾಡದಲ್ಲಿ ‘ಸಂಚಾರಿ’…

ಚಿತ್ರಗಳು:ನಾಗರಾಜ ಸೋಮಯಾಜಿ

ಧಾರವಾಡದ ಕರ್ನಾಟಕ ಕಾಲೇಜಿನ ಸೃಜನಾ ರಂಗಮಂದಿರದಲ್ಲಿ ನಡೆದ ಮಳೆ ಬಿಲ್ಲು ಮಕ್ಕಳ ನಾಟಕೋತ್ಸವದಲ್ಲಿ ‘ಸಂಚಾರಿ ಥಿಯೇಟ್ರು’ ನಾಟಕ ತಂಡ ನರಿಗಳಿಗೇಕೆ ಕೋಡಿಲ್ಲ ನಾಟಕ ಪ್ರದರ್ಶಿಸಿತು . ಅಲ್ಲಿ  ತೆರೆಯ ಹಿಂದಿನ ಕೆಲವು ದೃಶ್ಯಗಳು ನಿಮಗಾಗಿ…

ಇನ್ನಷ್ಟು ಚಿತ್ರಗಳು : ಸೈಡ್ ವಿಂಗ್

Previous Older Entries

%d bloggers like this: