ಇದು ಪಯಣ..

ನ್ಯಾಷನಲ್ ಜಿಯಾಗ್ರಫಿಕ್ ಆಯ್ಕೆ ಮಾಡಿದ ಜಗತ್ತಿನ ಉತ್ತಮ ಫೋಟೋಗಳಲ್ಲಿ ಇದೂ ಒಂದು. ಬಾಂಗ್ಲಾದೇಶದಲ್ಲಿ ತೆಗೆದದ್ದು

ದೋಸೆ ವರ್ಸಸ್ ಪಿಜ್ಜಾ

ದೋಸೆ ವರ್ಸಸ್ ಪಿಜ್ಜಾ; ನಮಗೆ ಸಂತೋಷ ನೀಡುವುದು ಯಾವುದು ?

-ಶಶಿಧರ ಭಟ್

ಕುಮ್ರಿ

ಬದುಕು ಅರ್ಥಪೂರ್ಣವಾಗುವುದು ಯಾವುದರಿಂದ ? ನಮಗೆ ಬೇಕು ಅನ್ನಿಸಿದ್ದನ್ನೆಲ್ಲ ಪಡೆದುಕೊಳ್ಳುವುದರಿಂದಲೇ ? ಅಥವಾ ನಮಗೆ ಬೇಕು ಅನ್ನಿಸಿದ್ದು ಸಿಗದಿರುವುದರಿಂದಲೇ ?

ನಮಗೆ ಬೇಕು ಅನ್ನಿಸಿದ್ದನ್ನೆಲ್ಲ ಅಲ್ಲಾಉದ್ದೀನನ ಅದ್ಬುತ ದೀಪದಿಂದ ಪಡೆದುಕೊಳ್ಳುವಂತಾಗಿದ್ದರೆ ಬದುಕು ನೀರಸವಾಗಿಬಿಡುತ್ತಿತ್ತು. ಆಗ ಬದುಕಿಗೆ ಸ್ವಾರಸ್ಯವೇ ಉಳಿದಿರುತ್ತಿರಲಿಲ್ಲ. ನಮಗೆ ಬೇಕು ಅನ್ನಿಸಿದ್ದು ಗಗನದೀಪವಾಗಿದ್ದರೆ ನಾವು ಅದನ್ನು ಪಡೆದುಕೊಳ್ಳುವುದಕ್ಕೆ ಯತ್ನ ನಡೆಸುತ್ತೇವೆ. ಪಡೆದುಕೊಳ್ಳುವ ಯತ್ನವೇ ನಮ್ಮ ಬದುಕಿಗೆ ಚೈತನ್ಯವನ್ನು ನೀಡುತ್ತದೆ. ಪಡೆದುಕೊಳ್ಳುವುದು ಎನ್ನುವುದು ಕೊನೆ. ಅಲ್ಲಿಗೆ ಎಲ್ಲವೂ ಮುಗಿಯಿತು. ಉದಾಹರಣೆಗೆ ಪ್ರತಿಯೊಬ್ಬ ಮಧ್ಯ ವರ್ಗದ ವ್ಯಕ್ತಿಯ ಆಸೆ ಸ್ವಂತ ಮನೆ ಮತ್ತು ಓಡಾಡುವುದಕ್ಕೆ ಒಂದು ಕಾರು ಪಡೆಯುವುದು ಆಗಿರುತ್ತದೆ. ಆದರೆ ಮನೆ ಮತ್ತು ಕಾರು ದೊರಕಿದ ಮೇಲೆ ಆತ ಸಂತೋಷವಾಗಿರುತ್ತಾನಾ ? ಬಹುಶಃ ಇಲ್ಲ. ಮನೆ ಕಾರು ಬಂದ ಮೇಲೂ ಆತ ಮೊದಲಿನಂತ ಇರುತ್ತಾನೆ. ಹೊಸ ಸೌಲಭ್ಯ ಅವನ ಬದುಕಿಗೆ ಶಾಂತಿ ಮತ್ತು ಪ್ರೀತಿಯನ್ನು ಎಲ್ಲಿಂದಲೋ ತಂದುಕೊಡುವುದಿಲ್ಲ. ಯಾಕೆಂದರ ಶಾಂತಿ. ಸಮಾಧಾನ ಮತ್ತು ತೃಪ್ತಿ ಎಲ್ಲಿಯೋ ಇರುವ ಎಲ್ಲಿಂದಲೂ ಕೊಂಡು ತರುವ ವಸ್ತುವಲ್ಲ.

ಆದರೆ ನಮಗೆ ಬೇಕು ಅನ್ನಿಸಿದ್ದನ್ನು ಪಡೆದುಕೊಳ್ಳಲು ನಾವು ಯತ್ನ ನಡೆಸುವುದಿದೆಯಲ್ಲ ಅದೇ ಬದುಕು. ಯತ್ನ ಮುಗಿಯಿತೆಂದರೆ ಬದುಕೂ ಮುಗಿಯಿತು.

ದಕ್ಷಿಣ ಭಾರತದ ಖ್ಯಾತ ನಟ, ಪ್ರಕಾಶ್ ರೈ ನಮ್ಮ ಜೊತೆಗೆ ಮಲ್ಲೇಶ್ವರಂ ರೂಮಿನಲ್ಲಿ ಇರುತ್ತಿದ್ದ. ಆತನಿಗೆ ಆಗಲೂ ನಟನಾಗಬೇಕು ಎನ್ನುವ ಅಧಮ್ಯ ಆಸೆ. ಆದರೆ ಆಗ ನಮ್ಮ ಬಳಿ ಹಣ ಇರುತ್ತಿರಲಿಲ್ಲ. ನನಗಾಗ ಆರನೂರು ರೂಪಾಯಿ ಸಂಬಳ. ನನ್ನ ಇನ್ನೊಬ್ಬ ಸ್ನೇಹಿತ ಎಲ್. ಸಿ. ನಾಗರಾಜನಿಗೆ ಸಾವಿರದ ಇನ್ನೂರು ರೂಪಾಯಿ. ಪ್ರಕಾಶ್ ರೈಗೆ ಹೇಳಿಕೊಳ್ಳುವಂತಹ ಕೆಲಸ ಇಲ್ಲದಿದ್ದರಿಂದ ಅವನ ವರಮಾನದ ಬಗ್ಗೆ ಯಾವುದೇ ಮಾತನ್ನು ಆಡುವಂತಿರಲಿಲ್ಲ.

More

ಬಂಗಾರದ ಜಂಪ್

-ಸತೀಶ್ ಆಚಾರ್ಯ

ಮಣಿಕಾಂತ್ ಬರೆಯುತ್ತಾರೆ: ಈ ಸಂಭಾಷಣೆ…

‘ಪ್ರೇಮ ಸಂಭಾಷಣೆ’ಯ ಸಂದರ್ಭದಲ್ಲಿ ಗುರು-ಶಿಷ್ಯರ ಮೌನ ಸಂಭಾಷಣೆ ನಡೆಯುತ್ತಿತ್ತು!

ಈ ಸಂಭಾಷಣೆ…

ಚಿತ್ರ: ಧರ್ಮಸೆರೆ ಗೀತೆರಚನೆ: ವಿಜಯ ನಾರಸಿಂಹ

ಸಂಗೀತ: ಉಪೇಂದ್ರ ಕುಮಾರ್ ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ-ಎಸ್. ಜಾನಕಿ

ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ

ಅತಿ ನವ್ಯ ರಸಕಾವ್ಯ ಮಧುರಾ ಮಧುರಾ ಮಧುರಾ||ಪ||

ಪ್ರೇಮಗಾನ ಪದಲಾಸ್ಯ ಮೃದುಹಾಸ್ಯ

ಶೃಂಗಾರ ಭಾವಗಂಗಾ

ಸುಂದರ, ಸುಲಲಿತ, ಮಧುರಾ ಮಧುರಾ ಮಧುರಾ||೧||

ರ ಶರದಿ ಮೆರೆವಂತೆ ಮೊರೆವಂತೆ

ಹೊಸರಾಗ ಧಾರೆಯಂತೆ

ಮಂಜುಳ, ಮಧುಮಯ, ಮಧುರಾ ಮಧುರಾ ಮಧುರಾ||೨||

ಚೈತ್ರ ತಂದ ಚಿಗುರಂತೆ, ಚೆಲುವಂತೆ

ಸೌಂದರ್ಯ ಲಹರಿಯಂತೆ

ನಿರ್ಮಲ, ಕೋಮಲಾ, ಮಧುರಾ ಮಧುರಾ ಮಧುರಾ||೩||

‘ಧರ್ಮಸೆರೆ’ ಚಿತ್ರದ ಹಾಡಿನ ಬಗ್ಗೆ ಹೇಳ್ತೀನಿ ಅಂದಿದ್ದೆ ಅಲ್ವಾ? ಆ ಸ್ವಾರಸ್ಯವನ್ನೇ ಹೇಳ್ತೀನಿ ಕೇಳಿ ಎನ್ನುತ್ತಾ ಮಾತು ಆರಂಭಿಸಿದರು ಪ್ರಣಯರಾಜ ಶ್ರೀನಾಥ್. ಅವರ ಮಾತಿನ ಕಥೆ ಮುಂದುವರಿದಿದ್ದು ಹೀಗೆ:

‘ಇದು ೧೯೭೮-೭೯ರ ಮಾತು. ಆಗ ನಟ ವಜ್ರಮುನಿ ಅವರು ತಮ್ಮ ಸ್ವಂತ ನಿರ್ಮಾಣದಲ್ಲಿ ‘ಗಂಡ ಭೇರುಂಡ’ ಸಿನಿಮಾ ಆರಂಭಿಸಿದ್ದರು. ಇದೇ ಸಂದಭ ದಲ್ಲಿ ಪುಟ್ಟಣ್ಣ ಕಣಗಾಲ್ ಅವರು ‘ಧರ್ಮಸೆರೆ’ ಆರಂಭಿಸಿದ್ದರು. ಎರಡೂ ಚಿತ್ರಗಳಿಗೂ ನಾನೇ ನಾಯಕನಾಗಿದ್ದೆ. ಮೊದಲು ಪುಟ್ಟಣ್ಣ ಅವರ ಸಿನಿಮಾಕ್ಕೆ, ನಂತರ ವಜ್ರಮುನಿಯವರ ಚಿತ್ರಕ್ಕೆ ಕಾಲ್‌ಶೀಟ್ ನೀಡಿದ್ದೆ. ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಹಾಕಿದ್ದ ಸೆಟ್‌ನಲ್ಲಿ ೭-೮ ದಿನಗಳ ಕಾಲ ‘ಧರ್ಮಸೆರೆ’ಯ ಶೂಟಿಂಗ್ ನಡೆಯಿತು.

More

ಪೇಟೆ ಮಾತು…

ಊರಿಗೆಷ್ಟು ಹೆಸರು? …

-ನಾರಾಯಣ .ಕೆ.ವಿ

ಪದಗತಿ

ನಾಡಿನ ತಿಳಿದ ಮಂದಿ ಊರುಗಳ ಹೆಸರು ಬದಲಾಯಿಸುವ ಉಮೇದನ್ನು ತೋರುತ್ತಿದ್ದಾರೆ.ಇದರಿಂದ ನಾಡಿನ ಜನರಿಗೆ ತಮ್ಮತನವನ್ನು ಕಾಯ್ದುಕೊಳ್ಳುವ ದಾರಿ ಸಿಗುತ್ತದೆ ಎನ್ನುತ್ತಿದ್ದಾರೆ. ಬೇರೆಯವರು ಬದಲಾಯಿಸಿದ ಹೆಸರನ್ನು ನಾವು ಮತ್ತೆ ಮೊದಲಿನಂತೆ ಮಾಡುವುದರಿಂದ ಕನ್ನಡದ ಚಹರೆಯನ್ನು ಕಾಯ್ದುಕೊಂಡಂತೆ ಆಗುವುದೆಂದು ಹೇಳುತ್ತಿದ್ದಾರೆ. ಹೀಗೆ ಹೆಸರು ಬದಲಾಯಿಸಬೇಕಾದ ಊರುಗಳ ಪಟ್ಟಿಯನ್ನು ಜನರು ತಮ್ಮಪಾಡಿಗೆ ತಾವು ತಯಾರಿಸುತ್ತಿದ್ದಾರೆ. ಈ ಹೊತ್ತಿನಲ್ಲಿ ಕೊಂಚ ಈ ಬಗ್ಗೆ ಬೇರೊಂದು ಕಡೆಯಿಂದ ನೋಡುವುದು ಆಗುವಂತಿದ್ದರೆ ಹಾಗೆ ಮಾಡಬೇಕಲ್ಲವೇ?

ನಾಡಿನ ಊರುಗಳಿಗೆ ಯಾರು ಹೆಸರನ್ನಿಟ್ಟರೋ ಯಾರಿಗೂ ಗೊತ್ತಿಲ್ಲ. ಆ ಊರಿನಲ್ಲಿ ನೆಲೆ ನಿಂತವರಿಗೂ ಗೊತ್ತಿರುವುದಿಲ್ಲ. ಆದರೆ ಎಲ್ಲ ಊರುಗಳ ಹೆಸರಿಗೂ ಒಂದೊಂದು ಕತೆ ಇರುತ್ತದೆ. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಕತೆಗಳೂ ಇರುತ್ತವೆ. ಈ ಕತೆಗಳು ಹೆಸರಿಟ್ಟ ಮೇಲೆ ಹುಟ್ಟಿದವು. ಅದಕ್ಕಾಗಿ ಬೇರೆ ಬೇರೆ ಕತೆಗಳು ಒಂದೇ ಹೆಸರಿಗೆ ಅಂಟಿಕೊಂಡಿರುತ್ತವೆ.

ಈ ಹೆಸರುಗಳು ಜನರ ಬಾಯಲ್ಲಿ ಬಳಕೆಯಾಗುವಾಗ ಬದಲಾಗುತ್ತಾ ಹೋಗುತ್ತವೆ. ನೂರಾರು ವರುಷಗಳು ಕಳೆದ ಹಾಗೆ ಹೆಸರುಗಳು ಮೊದಲಿನ ಹಾಗೆ ಇರದೇ ಗುರುತಿಸಲೂ ಆಗದ ಹಾಗೆ ಬದಲಾಗಿಬಿಟ್ಟಿರುತ್ತವೆ. ಜನರ ಬಾಯಲ್ಲಿ ಬದಲಾಗುವ ಹಾಗೆಯೇ ಆಗಾಗ ಬದಲಾಗುತ್ತಿದ್ದ ಅರಸರು ಊರುಗಳ ಹೆಸರನ್ನು ಬದಲಾಯಿಸುತ್ತಿದ್ದರು.ಇಂದಿನ ‘ಚಾಮರಾಜ ನಗರ’ ಹಿಂದೆ ‘ಅರಿಕೊಠಾರ’ವಾಗಿತ್ತು. ಮೈಸೂರು ಅರಸರು ಅದನ್ನು ಬದಲಾಯಿಸಿದರು. ನಾಡಿನ ಕಲ್ಬರಹಗಳಲ್ಲಿ ಒಂದು ಊರಿನ ಹೆಸರಿನ ಜೊತೆಗೆ ಅದಕ್ಕಿರುವ ಇನ್ನೊಂದು ಹೆಸರನ್ನು ‘ಪ್ರತಿನಾಮ’ ಎಂದು ಗುರುತಿಸಿ ಹೇಳಿರುವುದುಂಟು. ಕೆಲವೊಮ್ಮೆ ಕನ್ನಡದ ಹೆಸರುಗಳನ್ನು ಸಂಸ್ಕೃತಕ್ಕೆ ಅನುವಾದಿಸಿರುವುದೂ ಇದೆ.

More

ಜಯಶ್ರೀ ಕಾಲಂ: ಹಲೋ ಕೇಳಿಸ್ತಾ ಇಲ್ಲಾ …

@ಮೊನ್ನೆ ನಿರೂಪಕ ದೀಪಕ್ ತಿಮ್ಮಯ್ಯ ಬಿಜೆಪಿಯ ಧನಂಜಯ ಅವರ ಜೊತೆಯಲ್ಲಿ ಮಾತಿಗೆ ಕೂತಿದ್ರು. ಅದು ಫೋನ್ ಇನ್ ಕಾರ್ಯಕ್ರಮ. ಕೇವಲ ಚರ್ಚೆ ಮಾಡುವುದಕ್ಕೂ ಫೋನ್ ಇನ್ ಕಾರ್ಯಕ್ರಮಕ್ಕೂ ತುಂಬಾ ವ್ಯತ್ಯಾಸ ಇದೆ .ಇವರ ಮಾತಿನ ಮಧ್ಯೆ ವೀಕ್ಷಕರ ಕರೆ ಹಲೋ ಅನ್ನಲೇ ಬೇಕು. ದೀಪಕ್ ವಿಷಯಕ್ಕೆ ಬರುವುದಾದರೆ ಕೆಲವು ವಿಷಯಗಳಲ್ಲಿ ಅಯ್ಯೋ ರಾಮ ರಾಮ ಎಂದು ಅನ್ನಿಸಿದರು :-) ಅತ್ಯುತ್ತಮ ನಿರೂಪಕರು ಎನ್ನುವುದು ಸಹ ಸಮ್ಮತಿಸಲೇ ಬೇಕಾದ ಸಂಗತಿ.

ವಿಷಯದ ಬಗ್ಗೆ ಅವರಿಗಿರುವ ಹಿಡಿತ, ಮಾತಿನ ಶೈಲಿ, ಆಗಾಗ ತೋರುವ ಕೊಂಕು ಮಾತಿನ ಶೈಲಿ ಎಲ್ಲವೂ ವೀಕ್ಷಕರು ಗಮನವಿಟ್ಟು ವೀಕ್ಷಿಸುವಂತೆ ಮಾಡುತ್ತದೆ :-) ಮೊನ್ನೆ ಕಾರ್ಯಕ್ರಮದಲ್ಲಿ ನಾನೊ೦ದು ಸಂಗತಿಯನ್ನು ಗಮನಿಸಿದೆ, ಫೋನ್ ಇನ್ ಕಾರ್ಯಕ್ರಮದಲ್ಲಿ ಕೆಲವು ಕರೆಗಳನ್ನು ದೀಪಕ್ ಕೇಳಿಸ್ತಾ ಇಲ್ಲ ಎಂದು ಕಟ್ ಮಾಡಿ ಮಾಡಿ ಬಿಸಾಡಿದ್ರು. ತಾಂತ್ರಿಕ ತೊಂದರೆ ಎಂದು ವಾಹಿನಿಯವರು ಹೇಳಿ ಸುಮ್ಮನಾಗ ಬಹುದು , ಅವರಿಗೆ ಕೇಳದ ಹಲೋ ಹಾಗೂ ವೀಕ್ಷಕರ ಪ್ರಶ್ನೆ ಈ ಕಾರ್ಯಕ್ರಮ ವೀಕ್ಷಿಸುವವರಿಗೆ ಸ್ಪಷ್ಟವಾಗಿ ಕೇಳಿಸ್ತಾ ಇತ್ತು.ಇವರಿಗೆ ಯಾಕೆ ಕೇಳಿಸ್ತಾ ಇರಲಿಲ್ಲವೋ ಗೊತ್ತಾಗ್ಲಿಲ್ಲ!! ಹಾಗೂ ಆಗುತ್ತಾ? ಅದರ ಬಗ್ಗೆ ನನಗೆ ಮಾಹಿತಿ ಇಲ್ಲ.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

%d bloggers like this: