ಕಡಲ್ ದಾ ಉಡಲ್….

ಇಲ್ಲೂ ನೋಡಿ : invitations blog

THE 39 STEPS…

ಹಣತೆ ….

‘Short’ listed…

ಮಂಜುನಾಥ್ ಚಾಂದ್ ಬರೆವ ‘ಇವರು ಮೂರ್ತಿ’

-ಮಂಜುನಾಥ್ ಚಾಂದ್

ಇವರು ಮೂರ್ತಿ 5

ದೇವಸ್ಥಾನದಂತಿತ್ತು ಸಿನೆಮಾ ಇಂಡಸ್ಟ್ರೀ…
ಫೋಟೋಗ್ರಫಿ ಡಿಪ್ಲೊಮಾ ಕೋರ್ಸ್ ಮಾಡಿದ ನಂತರವೂ ನನಗೆ ನೇರವಾಗಿ ಸಿನೆಮಾ ಇಂಡಸ್ಟ್ರಿಯೊಳಗೆ ಬಿಡಲಿಲ್ಲ. ಆಗ ಮುಂಬೈನಲ್ಲಿ ಸಿನೆಮಾ ಇಂಡಸ್ಟ್ರೀ ಅಂದ್ರೆ ಭಾರೀ ಕಟ್ಟುನಿಟ್ಟು. ಯಾರನ್ನೂ ಒಳಗೆ ಬಿಡುತ್ತಿರಲಿಲ್ಲ. ಅದು ಒಂದು ದೇವಸ್ಥಾನದ ಥರ. ಒಳಗೆ ಹೋಗಬೇಕಂದರೆ ತುಂಬಾ ಕಷ್ಟ ಇತ್ತು. ಡಿಪ್ಲೊಮಾ ಮಾಡಿದ ನಂತರ ನನಗೆ ಫೋಟೊಗ್ರಫಿ ಪ್ರೊಫೆಸನಲ್ಸ್ ಹತ್ರ ತರಬೇತಿಗೆ ಹಾಕಿದರು.

ಪ್ರಕಾಶ್ ಸ್ಟುಡಿಯೋದಲ್ಲಿ ಪ್ರಾಕ್ಟಿಕಲ್ ಟ್ರೈನಿಂಗ್ ಮಾಡಿದೆ. ಅದೆಲ್ಲ ಆದ ಮೇಲೆ ಬಾಂಬೆಯಿಂದ ವಾಪಾಸ್ ಬರೋಕೆ ಇಷ್ಟ ಇರಲಿಲ್ಲ. ಆದರೆ ಏನು ಮಾಡೋದು ಅಂತ ಚಿಂತೆ. ನನ್ನ ಫ್ರೆಂಡು ಧೈರ್ಯ ತುಂಬಿದ. ಯಾರಾದರೂ ಮಿನಿ ಡೈರೆಕ್ಟರ್ ಬಳಿ ಕರೆದೊಯ್ಯುವೆ ಎಂದ. ವಾಯಲಿನ್ ನುಡಿಸಬಹುದು, ಅದರಿಂದ ದುಡ್ಡು ಬರುತ್ತೆ, ಪ್ರಯತ್ನ ಮಾಡು ಅಂತ ಹೇಳಿದ.

More

ಮಲೆಗಳಲ್ಲಿ ಮದುಮಗಳು : ಗಣೇಶ ಎಂಬ ಚೂಟಿ ಹುಡುಗ ಟೈಪ್ ಮಾಡುತ್ತಾ ಹೋದ

ಬಾ ಹುಲಿಕಲ್ ನೆತ್ತಿಗೆ-4

-ಪ್ರೊ. ಶಿವರಾಮಯ್ಯ

ಗಣೇಶ ದರ್ಶನ

ಇಷ್ಟರಲ್ಲಿ ಒಂದು ಸಮಸ್ಯೆ ಉದ್ಭವವಾಯಿತು. ನನಗೂ ಕೃಷ್ಣಪ್ರಸಾದರಿಗೂ ಕಂಪ್ಯೂಟರ್ ಜ್ಞಾನ ಇಲ್ಲ. ಮೂಲಕೃತಿಯ ಸಂಭಾಷಣೆಯನ್ನು ನಾವು ಕೈಬರಹದಲ್ಲಿ ಎತ್ತಿಕೊಂಡಿದ್ದೆವು. ದೃಶ್ಯ ಜೋಡಣೆ ಅರ್ಜೆಂಟಾಗಿ ಕಂಪ್ಯೂಟರ್ ಕಾಪಿ ಬೇಕಾಯಿತು. ಇಲ್ಲವಾದರೆ ಕೆಲಸ ನಿಧಾನಗತಿ ತಾಳುತ್ತಿತ್ತು. ಇದೇ ಸಮಯಕ್ಕೆತುರ್ತು ಕೆಲಸಕ್ಕೆಂದು ಬೆಂಗಳೂರಿಗೆ ಹಿಂದಿರುಗಿದ್ದ ಬೈರೇಗೌಡರಿಗೆ ಒಬ್ಬ ಕಂಪ್ಯೂಟರ್ ಬಲ್ಲಂತ ವ್ಯಕ್ತಿಯನ್ನು ಕರೆದು ತಾ ಎಂದು ಹೇಳಿದೆವು. ಅವರು ಗಣೇಶ ಎಂಬ ಚೂಟಿ ಹುಡುಗನನ್ನು ಜೊತೆಗೇ ಕರೆತಂದು ‘ನಾಳೆ ಬೆಳಿಗ್ಗೆ ಈತನನ್ನು ಕಳುಹಿಸಬೇಕಾಗಿದೆ, ಇಡೀ ರಾತ್ರಿ ನಾವು ಟೈಪ್ ಕೆಲಸ ಮುಗಿಸುತ್ತೇವೆ’ ಎಂದರು.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಅದೇ ಪ್ರಕಾರ ಕೆಲಸ ಆರಂಭವಾಯಿತು. ಆತ ನಿದ್ದೆಯಿಲ್ಲದೆ ಕರೆಂಟ್ ಇದ್ದಾಗಲೆಲ್ಲ, ಆ ಸೊಳ್ಳೆ ಕಾಟವನ್ನೂ ಲೆಕ್ಕಿಸದೆ ಟೈಪ್ ಮಾಡುತ್ತಾ ಹೋದ, ಆತನಿಗೆ ನಾವು ಬರೆದುದನ್ನು ಫೀಡ್ ಮಾಡುತ್ತಾ ಹೋದೆವು. ಆತ ಬೆಳಿಗ್ಗೆ ಬೆಂಗಳೂರಿಗೆ ಅರ್ಜೆಂಟ್  ಹೋಗಲೇಬೇಕಾಗಿತ್ತು. ಆ ಕಾರಣ ಕೇಳಿ ನಾವು ಚಕಿತರಾದೆವು. ಯಾಕೆಂದರೆ ಆ ಕಡ್ಡಿ ಫೈಲ್ವಾನ ಇನ್ನೂ ಬ್ಯಾಚುಲರ್ ಹುಡುಗ ಎಂದು ಭಾವಿಸಿದ್ದೆವು. ಆದರೆ ಆತ ಪ್ರೇಮವಿವಾಹವಾಗಿ ಎರಡು ಮಕ್ಕಳ ತಂದೆಯಂತೆ, ಅದೇ ದಿನ ಅವರಿದ್ದ ಮನೆಯಿಂದ ಇನ್ನೊಂದು ಬಾಡಿಗೆ ಮನೆಗೆ ಬದಲಾಯಿಸಬೇಕಾಗಿತ್ತು.

ಈತನಿಲ್ಲದೆ ಮಕ್ಕಳನ್ನು ಕಟ್ಟಿಕೊಂಡು ಅವನ ಹೆಂಡತಿ ಅಲ್ಲಿ ಪರದಾಡುತ್ತಿದ್ದಳಂತೆ ‘ಬಿಡುವ ಮನೆಯವರಿಂದ ಅಡ್ವಾನ್ಸ್ ಹಿಂದೆ ಪಡೆಯಬೇಕು, ಮನೆ ಸಾಮಾನು ವಗೈರೆ ಕಟ್ಟಿ ಟೆಂಪೋ ಹಿಡಿದು ಸಾಗಿಸಬೇಕು. ನಾನೊಬ್ಬಳೆ ಹೇಗೆ ಮಾಡಲಿ?’ ಎಂದಾಕೆ ಗಣೇಶ್ಗೆ ಗಂಟೆಗಂಟೆಗೂ ಫೋನ್ ಮಾಡುತ್ತ ‘ಹೊರಟಿರಾ’ ಎಂದು ಕೇಳುತ್ತಿದ್ದಳು. ಈತ ಒಂದು ಕಿವಿಯಿಂದ ಇನ್ನೊಂದು ಕಿವಿಗೆ ಮೊಬೈಲ್ ಬದಲಿಸುತ್ತಾ ಸವ್ಯಸಾಚಿಯಂತೆ ಎರಡೂಕೈಯನ್ನು ಕಂಪ್ಯೂಟರ್ ಮೇಲೆ ಆಡಿಸುತ್ತ ಇಗೋಬಂದೆ, ಅಗೋ ಬಂದೆ ಎಂದು ಟೈಪ್ ಮಾಡುತ್ತಲೇ ಹೋದ.

More

Onion Please…

-ಯತೀಶ್ ಸಿದ್ದಕಟ್ಟೆ

ಜಯಶ್ರೀ ಕಾಲಂ: ಕ್ರಿಯೇಟಿವಿಟಿ ಎಲ್ಲಿ ಹೋಯಿತು ಮಾರಾಯ್ರೆ ?

ಹಾಗೆ ಬಂದೂ ಹೀಗೆ ಬಂದೂ ಅದೇ ವಿಷಯಗಳು :-) ಈ ಮಾತುಗಳು ಕೇಳಿದಾಗ ಅಯ್ಯೋ ಸಾಹಿತಿಗಳ ಕ್ರಿಯೇಟಿವಿಟಿ ಏನಾಯ್ತು ಎಂದು ಬೇಜಾರಾಗುವ ಅಗತ್ಯವಿಲ್ಲ. ಅವರ ಸಂಭಾಷಣೆ ಬರೆದಿರುವ ಹಳೆ ಸೀರಿಯಲ್ಗಳಿಂದ ಹೊಸ ಸೀರಿಯಲ್ಗಳ ತನಕ ಭಿನ್ನ ರೀತಿಯ ಡೈಲಾಗ್ ಗಳು ಇರುತ್ತವೆ. ಅಂದ್ರೆ ಇಂತಹ ಕಾರ್ಯಕ್ರಮಗಳ ವಿಷಯದಲ್ಲಿ ಎಂ ಎಸ್. ನರಸಿಂಹ ಮೂರ್ತಿಗಳು ಬ್ಯಾಂಕ್ ಮ್ಯಾನೇಜರ್ ಬುದ್ಧಿ ತೋರಿಸ್ತಾರೆ ಎಂದಾಯ್ತು. ಬಡ್ಡಿ ಹೆಚ್ಚು ತಗೊಂಡು ಸಾಲ ನೀಡುವ ಬುದ್ಧಿ :-) . ಹಾಸ್ಯ ಆದ್ರೆ ಕಡಿಮೆ ಸಾಮಗ್ರಿ :-)

ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಒಬ್ರು ಮಾತಾಡಿದರು ಅವರ ಹಾಸ್ಯದಲ್ಲಿ ಹಾಸ್ಯಕ್ಕಿಂತ ಮಾತೇ ಜಾಸ್ತಿ ಇತ್ತು, ಆದ್ರು ಪಾಪ ಅಲ್ಲಿದ್ದ ಅವರ ಸಹೋದ್ಯೋಗಿಗಳು ಸೇರಿದಂತೆ ಅನೇಕ ಸಭಿಕರು ನಗ್ತಾ ಇದ್ರು. ಪೊಲೀಸ್ ಮಾಮ ಅಂದ್ರೆ ಸುಮ್ನೆನಾ :-) ಮತ್ತೊಂದು ಸಂಗತಿ ನನ್ನ ಗಮನ ಸೆಳೆಯಿತು. ಸಾಮಾನ್ಯವಾಗಿ ಎಲೆಕ್ಷನ್ ಸಮಯದಲ್ಲಿ ಮಾತ್ರ ಕಂಡು ಬರುವ ರೋಲಿಂಗ್ ನಿನ್ನೆ ತರಕಾರಿ ಬೆಲೆಯ ವಿಷಯದಲ್ಲೂ ಕಾಣಸಿಕ್ಕಿತು :-) ಬಾಜಪ-80 , ಜೆಡಿಎಸ್ -70 ….! ರೀತಿಯಲ್ಲಿ ಈರುಳ್ಳಿ 70 ರೂ ಕೆಜಿ, ಟೊಮೇಟೊ -40 ರೂ … :-) ಯುನಿಕ್ ಆಗಿತ್ತು ರೀ ಅದನ್ನು ವೀಕ್ಷಿಸಿದಾಗ ಎಲ್ಲಿ ಹೋಯ್ತು ಟೀವಿ ನೈನ್ ವಾಹಿನಿಯ ಆ ಕ್ರಿಯೇಟಿವಿಟಿ ಎನ್ನುವಂತಾಯಿತು :-) ಎಲ್ಲೋ ಈ ಟೀಮ್ ಸೋಮಾರಿಗಳಾಗಿ ಬಿಟ್ಟಿದ್ದಾರೆ ಎಂದು ಕಾಣುತ್ತೆ ವೈ ಯಾ ??

ಪೂರ್ಣ ಓದಿಗೆ : ಮೀಡಿಯಾ ಮೈಂಡ್

%d bloggers like this: