ಮಂಗಳೂರು ಬಜ್ಜಿ…

ಪಾಕ ಚಂದ್ರಿಕೆ

ಮಂಗಳೂರು ಬಜ್ಜಿಗೆ ಗೋಳಿ ಬಜೆ ಎಂದೂ ಹೆಸರು. ಬಹಳ ಸುಲಭವಾಗಿ ಮಾಡಬಹುದಾದ ತಿಂಡಿಯೂ ಹೌದು. ಮಧ್ಯಾಹ್ನ ಊಟ ಮಾಡಿ ಮಲಗಿ ಎದ್ದಾಗ ಏನೋ ತಿನ್ನಬೇಕೆನಿಸುತ್ತದೆ. ಆಗ ತಕ್ಷಣವೇ 20 ನಿಮಿಷದಲ್ಲಿ ಮಾಡಬಹುದಾದ ತಿಂಡಿಯೆಂದರೆ ಗೋಳಿಬಜೆ.

ಬೇಕಾಗುವ ವಸ್ತುಗಳು (ನಾಲ್ಕು ಮಂದಿಯ ಅಳತೆಗೆ)
1/4 ಕೆಜಿ ಮೈದಾ ಹಿಟ್ಟು
ಸ್ವಲ್ಪ ಹುಳಿ ಮೊಸರು ಅಥವಾ ಮಜ್ಜಿಗೆ
ಕರಿಬೇವಿನಸೊಪ್ಪು (5 ಎಸಳು)
ಹಸಿಶುಂಠಿ (ಒಂದು ಸಣ್ಣ ತುಂಡು)
4 ಹಸಿಮೆಣಸು (ಸ್ವಲ್ಪ ಖಾರ ಹೆಚ್ಚು ಬೇಕಾದವರು ಇನ್ನೆರಡು ಮೆಣಸು ಹಾಕಿಕೊಳ್ಳಬಹುದು)
ಚಿಟಿಕೆಯಷ್ಟು ಅಡುಗೆ ಸೋಡಾ
ಕರಿಯಲು ಎಣ್ಣೆ
ಎರಡೂವರೆ ಟೀ ಚಮಚ ಉಪ್ಪು

ಇಷ್ಟಿದ್ದರೆ ಗೋಳಿ ಬಜೆ ಸಿದ್ಧವಾದಂತೆ. ಕರಿಬೇವು, ಹಸಿಮೆಣಸು ಮತ್ತು ಹಸಿಶುಂಠಿಯನ್ನು ಸಣ್ಣಗೆ ಕತ್ತರಿಸಿಕೊಂಡು ಹಿಟ್ಟನ್ನು ಕಲೆಸುವ ಯಾವುದಾದರೂ ಪಾತ್ರಕ್ಕೆ (ಬಾಣಲಿ ರೀತಿಯ ಅಗಲ ಪಾತ್ರವಿದ್ದರೆ ಸೂಕ್ತ) ಹಾಕಿಕೊಳ್ಳಿ. ಅದಕ್ಕೆ ಉಪ್ಪು, ಮೈದಾ ಹಿಟ್ಟು ಮತ್ತು ಸೋಡಾ ಬೆರೆಸಿ. ನಂತರ ಮಜ್ಜಿಗೆ ಹಾಕಿ ಸ್ವಲ್ಪ ಹದವಾಗಿ ಕಲೆಸಿಕೊಳ್ಳಿ. ಕಲೆಸಿದ ಹಿಟ್ಟು ಬಹಳ ನೀರಾಗಿ ಅಥವಾ ಬಹಳ ಗಟ್ಟಿಯಾಗಿರಬಾರದು. ಒಂದು ಮಧ್ಯದ ಹದವಿರಬೇಕು. ನಂತರ ಒಂದೈದು ನಿಮಿಷ ಬಿಡಿ.

More

‘ಹಂಗಾಮ’ ಕಾರ್ನರ್ ನಲ್ಲಿ ಭೂಪ ಕೇಳೆಂದ

ಮಂಜನ ಲವ್ವು

-ವೆಂಕಟ್ರಮಣ ಗೌಡ

ಮಂಜನ ಕೈಗೆ ತಲೆಕೊಟ್ಟು ಕೂರುವುದೆಂದರೆ ಯಾವನಿಗೂ ನಿಶ್ಚಿಂತೆಯ ಕೆಲಸವಲ್ಲ. ಬಲು ರಸಿಕನೂ ಪ್ರಚಂಡ ವಾಚಾಳಿಯೂ ಆದ ಅವನು ಹಗಲು ಹನ್ನೊಂದು ತಾಸು ಆ ಹೆಂಗಸು ಈ ಹೆಂಗಸು ಎಂದು ನಾಲಿಗೆಯನ್ನು ಕತ್ತೆ ದುಡಿಸಿದ ಹಾಗೆ ದುಡಿಸುವವ. ಚೌರ ಮಾಡಿಸಿಕೊಳ್ಳಲು ಬಂದವ ಅವನ ಮಾತಿಗೆ ಶ್ರೋತೃ ವಾಗಬೇಕು ಮಾತ್ರವಲ್ಲ. ಕವಳದ ರಸ ತುಂಬಿಕೊಂಡೇ ಇರುವ ಅವನ ಬಾಯ ನಿರಂತರ ಉಗುಳಿನ ಪ್ರೋಕ್ಷಣೆಯಲ್ಲಿ ಪಾವನನೂ ಆಗಬೇಕು. ಹೀಗಿದ್ದೂ. ಚೌರ ಮಾಡಿಸಿಕೊಳ್ಳಬೇಕಾದರೆ ಉರಲ್ಲಿ ಅವನೊಬ್ಬನೇ ಗತಿಯೆಂಬಂತಾಗಿರುವುದರಿಂದ ಅವನು ಯಾವಾಗಲೂ ನೆಲದಜಿಂದ ಒಂದು ಗೇಣು ಮೇಲೇ.

ಅಂಥವನ ತಕ್ಕವರೆಂಬಂತೆ ಒಂದಿಬ್ಬರೂ ಊರಲ್ಲದ್ದಾರೆ. ಅವನ ಚೌರದಂಗಡಿಯೊಳಗೆ ಎಂಟರಾಗುತ್ತಲೇ ಅವರು ಜೋರು ಮಾಡುವ ತಾಕತ್ತು ಇದೆ.ಈ ಜೋರು ಬಾ.ಿನವರು ಮಂಜನ ಸಲೂನಿನೊಳಗೆ ಬಂದರೆಂದರೆ ಮಂಜನ ಬ್ರಶ್ಯು ಸೋಪು ಇತ್ಯಾದಿ ವಿಶೇಷಗಳು ಅಪರೂಪಕ್ಕೆಂಬಂತೆ ಹೊರಗಿಣುಕಿ ಇತರ ಸಾಮಾನ್ಯ ಮಂದಿಯ ಕಣ್ಣು ಕುಕ್ಕುತ್ತವೆ. ನೀರಲ್ಲದ್ದಿದ ಬ್ರಶ್ಯನ್ನು ಕೈಗೆ ತಕ್ಕೊಳ್ಳುತ್ತಿದ್ದಂತೆಯೇ, ನೋಡುತ್ತಿದ್ದವರ ಹೊಟ್ಟೆ ಉರಿಯುತ್ತದೆ.

ನಾಲ್ಕು ಸರ್ತಿ ಅವರು ಕಣ್ಣರೆಪ್ಪೆ ಬಡಿಯುವಷ್ಟರಲ್ಲೇ ತಾನೆಂಬಂತೆ ಉಕ್ಕುತ್ತದೆ. ಮೊಕ ನೋಡಿ ಮಣೆ ಹಾಕುವವ ಎಂದೂ ಜನ ಮಂಡಜನ ಬಗ್ಗೆ ಹಲ್ಲು ಕಚ್ಚುವುದಿದೆ. ಇವರೆಲ್ಲರ ಇಂತಾ ಸಿಟ್ಟು ಕೂಡ ಕೆಲವರಿಗೆ ಮಾತ್ರವೇ ಸೀಮಿತವಾದಂತಿರುವ ಮಂಜನ ಬ್ರಶ್ಯಿನಿಂದ ಉಕ್ಕುವ ನೊರೆಯ ದರ್ಶನವಾದಾಗ ಮಾತ್ರ. ನಾಳೆ ಬೆಳಗಾದರೆ ಇವರೂ ಬಗೀಲೆ ಹೆರ್ದಾಕೊ ಮಂಜ ಎನ್ನುತ್ತ ಬಂದು ಅವನೆದುರು ಕೂರುವವರೇ.

More

ಅನಂತಮೂರ್ತಿ ಸಂಭ್ರಮ

ಡಾ ಯು ಆರ್ ಅನಂತಮೂರ್ತಿ ಅವರ ೭೫ ನೆಯ ಹುಟ್ಟುಹಬ್ಬದ ಅಂಗವಾಗಿ ಮಣಿಪಾಲದಲ್ಲಿ ಜರುಗಿದ ಸಂಭ್ರಮದ ನೋಟ ಇದು.

ಅಹರ್ನಿಶಿ ಪ್ರಕಾಶನ ಪ್ರಕಟಿಸಿದ ಪಟ್ಟಾಭಿರಾಮ ಸೋಮಯಾಜಿ ಅವರು ಸಂಪಾದಿಸಿದ ‘ಅನಂತಮೂರ್ತಿ-ಹತ್ತು ಸಮಸ್ತರ ನಡುವೆ’ ಕೃತಿ ಬಿಡುಗಡೆಯಾಯಿತು

ವಿಡಿಯೋ ಕೃಪೆ: ಉದಯವಾಣಿ

THE NEW EXPERIMENT OF SUVARNA NEWS

ಜಯಶ್ರೀ ಕಾಲಂ :ಕೀಟಲೆಯ ಇನ್ವಾಲ್ವ್ಮೆಂಟ್ ಐ ಲೈಕ್ ಇಟ್, ಐ ಲೈಕ್ ಇಟ್

ಸ ರಿ ಗ ಮ ಪ ಕಾರ್ಯಕ್ರಮದಲ್ಲಿ ಜೋಗೆ ಆಗಾಗ ಗುರು ಕಡೆಯಿಂದ ಕೀಟಲೆ ಮದ್ದು ಬೀಳ್ತಾನೆ ಇರುತ್ತೆ. ಕಳೆದ ವಾರ ವೈಲ್ ಕಾರ್ಡ್ ಎಂಟ್ರಿ ಆಯ್ತು, ಅದರಲ್ಲಿ ಒಂದು ಮಗು ಜಾಕಿ ಸಿನಿಮಾದ ಯಕ್ಕ ರಾಜ ರಾಣಿ ನನ್ನ… ! ಹಾಡು ಹೇಳಿದ . ಹಾಡು ಮುಗಿದ ಬಳಿಕ ಗುರುಜೀ ನಗುತ್ತ ಏನೋ ಈ ಹಾಡು ನಮಗೆ ( 3 ಜನ ಜಡ್ಜ್ ) ಹೇಳಿದಂಗೆ ಇದೆಯಲ್ಲ, ಆದ್ರೆ ನೀನು ವಿನಾಯಕನ ಕಡೆ ನೋಡುತ್ತಾ ಹಿಡಿ ಮಣ್ಣು ನಿನ್ನ ಬಾಯೊಳಗೆ ಎಂದು ಹೇಳಬಾರದಿತ್ತು ಎಂದು ನಕ್ರು…! ಇದು ಸಮಯಸ್ಪೂರ್ತಿ .

ಕಾರ್ಯಕ್ರಮದಲ್ಲಿ ತೀರ್ಪುಗಾರರು ಅಂದ್ರೆ ಗಟ್ಟಿಯಾಗಿ ಕುಳಿತಿರ ಬೇಕು ಎಂದೇನೂ ಇಲ್ಲ, ಅದೇ ರೀತಿ ಕಳೆದೆರಡು ದಿನದಿಂದ ವಿಷ್ಣುವರ್ಧನ್ ವಿಶೇಷ ಬರ್ತಾ ಇದೆ. ನಿನ್ನೆ ಎಪಿಸೋಡ್ ನಲ್ಲಿ ದುನಿಯಾ ವಿಜಯ್ ಸೇರಿದಂತೆ ಸಿನಿಮಾವೊಂದರ ಟೀಮ್ ಭಾಗವಹಿಸಿತ್ತು. ಕಳೆದ ವಾರ ಯಕ್ಕ ರಾಜ ರಾಣಿ ಹಾಡಿ ಮಗು ತಾನು ವಿಜಿ ಅವರ ಸಿಕ್ಸ್ ಪ್ಯಾಕ್ ನೋಡ ಬೇಕು ಎಂದು ಕೇಳಿದ. ಆಗ ರಘುಜಿ ಹೇಯ್ ನೀನು ವಿಜಿ ಸಿಕ್ಸ್ ಪ್ಯಾಕ್ ಕೇಳಿದ್ರೆ ನಾವು ನಮ್ಮ ಫ್ಯಾಮಿಲಿ ಪ್ಯಾಕ್ ತೋರಿಸ ಬೇಕಾಗುತ್ತೆ ಎಂದರು :-) ಪ್ಲೀಸ್ ಹಾಗ್ ಮಾತ್ರ ಮಾಡ ಬೇಡಿ ರಘುಜಿ :-) ಎನಿವೆಸ್ ಈ ಕೀಟಲೆಯ ಇನ್ವಾಲ್ವ್ಮೆಂಟ್ ಐ ಲೈಕ್ ಇಟ್

ಪೂರ್ಣ ಓದಿಗೆ : ಮೀಡಿಯಾ ಮೈಂಡ್

 

ಮಂಜುನಾಥ್ ಚಾಂದ್ ಬರೆವ ‘ಇವರು ಮೂರ್ತಿ’

-ಮಂಜುನಾಥ್ ಚಾಂದ್

ಇವರು ಮೂರ್ತಿ 6

ಐ ವಾಂಟು ವರ್ಕ್ ವಿದ್ ಯು ಸರ್!

ಆಗ ಒಂದೊಂದು ಫಿಲ್ಮ್ ಶೂಟಿಂಗ್ ಮುಗಿದ ಮೇಲೂ ಒಂದು ಎರಡು ತಿಂಗಳು ಬ್ರೇಕ್ ಇರುತ್ತಿತ್ತು. ಈ ಬಿಡುವಿನ ಸಂದರ್ಭದಲ್ಲಿ ನಾನೊಂದು ಫಿಲ್ಮ್ ನೊಡಿದ್ದೆ; ಅಮ್ರಪಾಲಿ ಅಂತ. ಅದರ ಫೋಟೋಗ್ರಫಿ ಬ್ಯುಟಿಫುಲ್. ಇಂಗ್ಲಿಷ್ ಪಿಕ್ಚರ್ಗೆ ಫೋಟೊಗ್ರಫಿ ಮಾಡಿದಂತಿತ್ತು. ಪಾಲಿ ಮಿಶ್ರಿ ಅಂತ ಅದರ ಫೋಟೋಗ್ರಾಫರ್. ಪ್ರಕಾಶ್ ಸ್ಟುಡಿಯೋದಲ್ಲಿ ನೂರು ರೂ. ಸಂಭಾವನೆ ಪಡೆಯಲು ಹೋಗಿದ್ದಾಗ, ನನ್ನ ಜೂನಿಯರ್ ಕರೆದು, “ಪಾಲಿ ಮಿಶ್ರಿ ತುಮ್ಕೊ ಬುಲಾರಹೇ ಜಾವೋ’ ಎಂದ. ನನಗೆ ಭಾರೀ ಅಚ್ಚರಿ. “ಮಜಾಕ್ ಕರ್ ರಹೇ ಹೋ’ ಅಂತ ಅವನನ್ನೇ ಬೈದೆ. ಆದರೆ, ಅದು ನಿಜವಾಗಿತ್ತು. ಇನ್ನೊಂದು ಸ್ಟುಡಿಯೊದಲ್ಲಿ ಅವರಿಗಾಗಿ ನಾನು ಕಾದೆ.

ವೈಟ್ ಶರ್ಟ್, ವೈಟ್ ಪ್ಯಾಂಟು ಹಾಕ್ಕೊಂಡ ಸ್ಮಾರ್ಟ್ ಆಜಾನುಬಾಹು ಪಾರ್ಸಿ ಬಂದು ಕಾರಿನಿಂದ ಇಳಿದರು. ನನ್ನನ್ನು ನೋಡಿ “ಆರ್ ಯೂ ಕೃಷ್ಣಮೂರ್ತಿ?’ ಅಂತ ಕೇಳಿದರು. ನನಗೋ ಆಶ್ಚರ್ಯ. “ಐ ಹರ್ಡ್ ಯು ವಾಂಟು ವರ್ಕ್ ವಿದ್ ಮೀ?” ಎಂದು ಕೇಳಿದರು. “ಯೆಸ್ ಸರ್! ಇಟ್ಸ್ ಮೈ ambition ಸರ್” ಅಂದೆ.

ಕಮಾನ್ ಅಂತ ಒಳಗಡೆ ಕರ್ಕೊಂಡು ಹೋದರು. ನನಗೆ ಮಾತೇ ಬಂದಾಗಿ ಹೋಗಿತ್ತು. ಆವತ್ತು ಬೆಳಗಿಂದ ಸಂಜೆ ತಂಕ ಅವರ ಜೊತೆ ಕೆಲಸ ಮಾಡಿದೆ. ಸಂಜೆ ನನ್ನ ಕರೆದು ಹೇಳಿದರು, “ನನ್ನ ಜೊತೆ ಇಲ್ಲಿ ತನಕ 23 ಜನ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದರು, ನೀನು 24ನೇಯವನು. ಯು ಆರ್ ದಿ ಬೆಸ್ಟ್” ಅಂದರು ಮಿಶ್ರಿ. ಮೊದಲನೇ ದಿನವೇ ಆಗಿರುವುದು ಇದು. ನನಗೋ ಅಪಾರ ಸಂತೋಷ. ಯು ಆರ್ ಮಿದ್ ಮಿ, ಡೋಂಟ್ ವರಿ, ಕಮ್ ಟುಮಾರೋ ಅಂತ ಹೇಳಿ ಬೆನ್ನು ತಟ್ಟಿ ಕಳಿಸಿದರು. ಹೀಗೆ ಅವರ ಜೊತೆ ನಾನು ನಾಲ್ಕು ವರ್ಷ ಕಾಲ ಸಹಾಯಕನಾಗಿ ಕೆಲಸ ಮಾಡಿದೆ.

More

ಮಲೆಗಳಲ್ಲಿ ಮದುಮಗಳು : ಮರಮರ ಮಥನದಿಂದ ಅಗ್ನಿ ಹುಟ್ಟಿತ್ತು

ಬಾ ಹುಲಿಕಲ್ ನೆತ್ತಿಗೆ-5

-ಪ್ರೊ. ಶಿವರಾಮಯ್ಯ

ಕೋಲಾರ ಜಿಲ್ಲೆ ಮಾಸ್ತಿ ಬಳಿಯ ಕುಪ್ಪೂರಿನ ನಾರಾಯಣ ಸ್ವಾಮಿ ತೆಲುಗು ಮತ್ತು ಕನ್ನಡ ಎರಡು ಭಾಷೆಗಳ ಜಾನಪದ ಎಲ್ಲ ಮಜಲುಗಳನ್ನು ಬಲ್ಲಂವರು. ರೇಷಿಮೆ ಗೂಡಿನ ಒಂದೆಳೆ ಸಿಕ್ಕರೆಸಾಕು ಅದನ್ನು ಉಂಡೆ ಸುತ್ತಿ ಎತ್ತಿ ಮಗ್ಗದಲ್ಲಿಟ್ಟು ನೆಯ್ದು ತರಹೆವರಿ ಬಣ್ಣದ ರೇಶಿಮೆ ಸೀರೆಗಳನ್ನು ನೇಯುವ ಕಸುಬುದಾರನಂತೆ. ನೀರದೀವಿಗೆ ಮತ್ತು ಬಾರಮ್ಮ ಭಾಗೀರತಿ, ಕೈವಾರತಾತಯ್ಯ ಮುಂತಾದ ಕೃತಿಗಳಲ್ಲಿ ಇದು ಸಾಬೀತಾಗಿದೆ.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಪ್ರಸ್ತುತ ಕನ್ನಡ ಭಾಷೆಯ ಸಾಧ್ಯತೆಗಳನ್ನೆಲ್ಲ ಹೀರಿಕೊಂಡು ಮಲೆನಾಡಿನ ನಿತ್ಯ ಹರಿದ್ವರ್ಣ ಕಾಡಿನಂತೆ ಗಗನಚುಂಬಿ ಬೆಳೆದ ಬೃಹತ್ಮೃತಿ ಮದುಮಗಳು ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸುವಾಗ ನಮ್ಮ ನೆರವಿಗೆ ಬಂದವರು ಜಾನಪದ ಕಥನಕಾರರಾದ ಅಜರ್ುನ ಜೋಗಿಗಳು, ಸುಡುಗಾಡುಸಿದ್ದರು, ಹೆಳವರು, ಹಾತಿಕಲಂಜ, ಕೋರವಂಜಿ ಮುಂತಾದವರು.

ಸಿ.ಬಸವಲಿಂಗಯ್ಯ, ಪ್ರೋ. ಹಿ.ಶಿ.ರಾಮಚಂದ್ರೇಗೌಡ, ಪ್ರೊ. ಕೆ.ವಿ. ನಾರಾಯಣ ಇವರೊಂದಿಗೆ ಚರ್ಚಿಸಿ, ‘ಮರಮರ ಮಥನದಿಂದ ಅಗ್ನಿ ಹುಟ್ಟಿತ್ತು’ ಎಂಬಂತೆ ಕೆವೈಎನ್ ಈ ನಿರೂಪಕರನ್ನು ರಂಗದ ಮೇಲೆ ತಂದರು. ಜೊತೆಗೆ ಈ ಮಹಾಕಾವ್ಯ ಕಾದಂಬರಿಯನ್ನು ನಾಟಕವಾಗಿಸಲು ಬಂದ ಮ್ಯಾಜಿಕ್ಲ್ ರೆಫರೆನ್ಸ್ ಎಂಬಂತೆ ದಿಢೀರನೆ ಧರ್ಮಸ್ಥಳದ ಹುಂಡಿಯಲ್ಲಿದ್ದ ಉಂಗುರವನ್ನು ಹುಡುಕಿ ಈ ನಿರೂಪಕರ ಕೈಗೆ ಹಾಕಿದ ನಂತರ ದೃಶ್ಯಗಳನ್ನು ಕಟ್ಟುವ ಕೆಲಸ ಸಲೀಸಾಯಿತು.

More

ಮಾಯಾಮೃಗ …

%d bloggers like this: