ಲೋಕಾಯುಕ್ತ VS ಧರ್ಮಾಯುಕ್ತ…

– ನಾ ದಿವಾಕರ

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಳ್ವಿಕರ ತಪ್ಪು ಒಪ್ಪುಗಳನ್ನು ಪರಾಮರ್ಶಿಸುವ ಹಕ್ಕು ಇರುವುದು ಸ್ವಾಯತ್ತ ನ್ಯಾಯಾಂಗ ಮತ್ತು ಸಾರ್ವಭೌಮ ಪ್ರಜೆಗಳಿಗೆ ಮಾತ್ರ. ಪ್ರಜೆಗಳ ಈ ಸಾಂವಿಧಾನಿಕ ಹಕ್ಕು ಆಳ್ವಿಕರ ಪ್ರಾಬಲ್ಯ ಮತ್ತು ಅಧಿಪತ್ಯಕ್ಕೊಳಪಟ್ಟು ಮಾರುಕಟ್ಟೆಯ ಸರಕಿನಂತೆ ಬಿಕರಿಯಾಗಬಹುದಾದ ಸಾಧ್ಯತೆಗಳನ್ನು ಭಾರತದ ಪ್ರಜಾತಂತ್ರ ಈಗಾಗಲೇ ನಿರೂಪಿಸಿದೆ.

ಈ ಸನ್ನಿವೇಶದಲ್ಲಿ ನ್ಯಾಯಾನ್ಯಾಯಗಳ ಪರಾಮರ್ಶೆಗೆ ಉಳಿದಿರುವುದು ನ್ಯಾಯಾಂಗದ ಮಾರ್ಗವೊಂದೇ. ಲೋಕಾಯುಕ್ತ ಎಂಬ ಸ್ವತಂತ್ರ-ಸ್ವಾಯತ್ತ ಸಂಸ್ಥೆಯನ್ನು ಈ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ. ಆದರೆ ಕರ್ನಾಟಕದ ಇತ್ತೀಚಿನ ವಿದ್ಯಮಾನಗಳನ್ನು ನೋಡಿದಾಗ ಲೋಕಾಯುಕ್ತ ಎಂಬ ಸಾಂವಿಧಾನಿಕ ಸಂಸ್ಥೆಯೂ ದೇಶದ ಪ್ರಜೆಗಳಂತೆಯೇ ನಿಸ್ಸಹಾಯಕವಾಗುತ್ತಿದೆಯೇನೋ ಎಂದು ಭಾಸವಾಗುವುದು ಸಹಜ.

ಮತ್ತೊಂದೆಡೆ ಯಾವುದೇ ನಾಗರಿಕ ಸಮಾಜದಲ್ಲಿ, ವಿಶೇಷವಾಗಿ ಪ್ರಜಾಪ್ರಭುತ್ವವನ್ನು ಸ್ವೀಕರಿಸಿರುವ ಸಮಾಜದಲ್ಲಿ ರಾಜಕಾರಣವು ಧರ್ಮಾತೀತವಾಗಿ, ಜಾತ್ಯಾತೀತವಾಗಿ ಇರಬೇಕಾದ್ದೂ ಅಗತ್ಯ.

ಧರ್ಮ ಮತ್ತು ಧಾರ್ಮಿಕ ವಿದ್ಯಮಾನಗಳನ್ನು ಪರಾಮರ್ಶಿಸುವ ಸ್ವಯಾರ್ಜಿತ ಹಕ್ಕನ್ನು ಅಧಿಕೃತವಾಗಿ ಪಡೆದಿರುವ ಧರ್ಮ ಕೇಂದ್ರಗಳು ದೇಶದ ರಾಜಕೀಯ-ಸಾಮಾಜಿಕ ಸ್ಥಿತ್ಯಂತರಗಳನ್ನು ಕುರಿತು ಚಿಂತಿಸುವ ಅಗತ್ಯತೆ ಇರುವುದಾದರೂ, ಸಮಸ್ತ ಪ್ರಜೆಗಳ ಹಿತಾಸಕ್ತಿಗಳನ್ನು ನಿರ್ಧರಿಸುವ ವಿದ್ಯಮಾನಗಳಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯತೆ ಕಂಡುಬರುವುದಿಲ್ಲ.

More

ಜಯಶ್ರೀ ಕಾಲಂ:ನೀವ್ಯಾಕೆ ಚರ್ಚೆ ಮಾಡ್ತಾ ಇಲ್ಲ?…

ನಾವು ಪತ್ರಕರ್ತರು. ದೃಶ್ಯ,ಮುದ್ರಣ …ಅಂತೂ ಯಾವುದೇ ಮಾಧ್ಯವಾಗಿರಲಿ ಮತ್ತೊಂದು ಪ್ರಬಲ ಮಾಧ್ಯಮದ ಬಗ್ಗೆ ತೋರುವ ಧೋರಣೆ ಸಾಕಷ್ಟು ಸರ್ತಿ ಈ ಶತ್ರು ಸಂಹಾರದ ಯಾಗದಂತೆ ಇರುತ್ತದೆ. ಉತ್ತಮ ರೀತಿಯಲ್ಲಿ ತೆಗೆದ ಚಿತ್ರವನ್ನು ಯಾವುದೋ ಅಡ್ನಾಡಿ ಪತ್ರಕರ್ತ ಕೆಟ್ಟ ವಿಮರ್ಶೆ ಬರೆದು ತೃಪ್ತಿ ಪಡುತ್ತಾನೆ, ಯಾಕೆ ಇದು ಶತ್ರು ಸಂಹಾರ ಮತ್ತೊಂದು ಮುಖ ಅಲ್ವ??

ಹೀಗೆ ಅನೇಕ ಸಂದರ್ಭಗಳಲ್ಲಿ ಹತ್ತು ಒಳ್ಳೆಯ ಸಂಗತಿಗಳಿದ್ರು ಹನ್ನೊಂದನೆಯ ತಪ್ಪು ಎತ್ತಿ ತೋರಿಸುವ ಗುಣವು ಶತ್ರು ಸಂಹಾರಕ್ಕೆ ಸಮವಾದುದಲ್ವ? ಎಲ್ಲರು ಅವರದೇ ಆದ ರೀತಿಯಲ್ಲಿ ಶತ್ರು ಸಂಹಾರ ಯಾಗ ಮಾಡ್ತಾ ಇದ್ದಾರೆ ಹಮೀದ್ ಪಾಳ್ಯ ಅದರ ಬಗ್ಗೆ ನೀವ್ಯಾಕೆ ಚರ್ಚೆ ಮಾಡ್ತಾ ಇಲ್ಲ? ಯಾಕೆ ಹೆದರಿಕೆನಾ??.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

%d bloggers like this: