ಇಲ್ಲಿ ಯಾರೂ ಮುಖ್ಯರಲ್ಲ…

Bondage for BANDage..

A bunch of Puttur boys bondage for BANDage..

BAND’age
Actors- Kirthan kaje, Ashwin Sharma,Kabir Manav ,Rakesh Maiya directed
by Rakesh camera persons-Kabir Manav ,Rakesh Maiya edited by Rakesh
song from the movie “ISI LIFE MEIN” this video is just a try    ‘ to
make our ideas into reality ‘….so we have no intentions of spoiling
the original song

ಇಂದು ಸಂಜೆ ಎಂ ಡಿ ಪಲ್ಲವಿ..

ಸಮಯ

26 December · 18:00 – 21:00

ಸ್ಥಳ: Suchitra Auditorium

36, BV Karanth Road, Banashankari II stage

Bangalore, India

Created By

Anand Varadaraj, Pallavi Arun, Prakash Belawadi

More Info Kannada Chintane

Upanysa – Dr. Suryanath Kamat will speak on Karnataka Ekikarana Chaluvali

 

Cultural Program

MD Pallavi and troupe will perform “Naada Nadi” – new compositions of old Kannada poetry.

 

Entry free

First-come, first-served.


ಈರುಳ್ಳಿ ಸಿ ಬಿ ಐ

ಚಿತ್ರ: ಸತೀಶ್ ಆಚಾರ್ಯ

ಅಭಿನಯ ತರಂಗಕ್ಕೆ 30 ವರ್ಷ, ನಿಮ್ಮೆಲ್ಲರ ಹಾರೈಕೆ ಬೇಕು

ಅಭಿನಯ ತರಂಗದ ಈ ವರ್ಷದ ತರಗತಿಗಳು ಬಹಳ ಚೆನ್ನಾಗಿ ನಡೆಯಿತು.

ಕೊರಿಯೋಲನಸ್ (ಶೇಕ್ಸ್ ಪಿಯರ್), ಮಹಿಮಾಪುರ (ಪ್ರಸನ್ನ), ಕಾಶಿಕಿಟ್ಟಿ ಕಂತೆ ಪುರಾಣ (ಎ .ಎಸ್.ಮೂರ್ತಿ, ಸತ್ಯಜಿತ್ ರೇ ಕಥೆ) ತೋಬಾ ಟೇಕ್ ಸಿಂಗ್ (ಸಾದತ್ ಹಸನ್ ಮಾಂಟೋ) ಅಲ್ಲದೆ 22 ವಿದ್ಯಾರ್ಥಿಗಳ  ಪ್ರೊಡಕ್ಷನ್ಸ್ ನಡೆದವು.

ಈ  ಬಾರಿಯ ತರಗತಿಯನ್ನು ಕಂಬಾರ ಹಾಗೂ ಹಂಸಲೇಖ ಉದ್ಘಾಟಿಸಿದರು. ಅಭಿನಯ ತರಂಗಕ್ಕೆ 30 ವರ್ಷಗಳು. ಶಾಲೆಗೆ ನಿಮ್ಮೆಲ್ಲರ ಹಾರೈಕೆ ಬೇಕು .
-ಗೌರಿ ದತ್ತು


ದಾರಿ ಯಾವುದಯ್ಯಾ ಮುಂದಕೆ ?

-ನಾ ದಿವಾಕರ

ಸಂಸದೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಚುನಾವಣೆಗಳೇ ಪ್ರಜೆಗಳ ಪರಮಾಸ್ತ್ರ, ಬ್ರಹ್ಮಾಸ್ತ್ರ ಎಲ್ಲ. ಅಧಿಕಾರ ವಿಕೇಂದ್ರೀಕರಣದ ದೃಷ್ಟಿಯಿಂದ ಜಾರಿಗೊಳಿಸಲಾಗಿರುವ ಪಂಚಾಯತ್ ವ್ಯವಸ್ಥೆ ಯಶಸ್ವಿಯಾಗಿರುವುದಕ್ಕೂ ಚುನಾವಣಾ ಪ್ರಕ್ರಿಯೆಯೇ ಕಾರಣವಾಗಿದೆ. ರಾಜಕೀಯ ಪಕ್ಷಗಳು ಏನೇ ಪ್ರಯತ್ನಗಳನ್ನು ಮಾಡಿದರೂ ಜನಸಾಮಾನ್ಯರು ಪಂಚಾಯತ್ ಸಂಸ್ಥೆಗಳ ಮೂಲಕ ತಮ್ಮ ಸೀಮಿತ ಅಧಿಕಾರವನ್ನು ಚಲಾಯಿಸುವುದರಲ್ಲಿ ಸಫಲರಾಗಿದ್ದಾರೆ. ಆದರೂ ಕಲುಷಿತಗೊಂಡಿರುವ ರಾಜಕೀಯದ ರಾಡಿಹಯಲ್ಲಿ ಮಿಂದು ತೇಲಾಡುತ್ತಿರುವ ಈ ವ್ಯವಸ್ಥೆ ಕ್ರಮೇಣ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದು ರಾಜಕೀಯ ಪಕ್ಷಗಳ ಕರಾಳ ಅವತಾರಗಳೆಲ್ಲವೂ ಗ್ರಾಮಮಟ್ಟದಲ್ಲಿ ಅನಾವರಣಗೊಳ್ಳುತ್ತಿವೆ.

 

ಚುನಾವಣಾ ಪ್ರಣಾಳಿಕೆ ಎಂದರೆ, ಪ್ರದೇಶದ ಅಭಿವೃದ್ಧಿಗಾಗಿ, ಜನತೆಯ ಅಭ್ಯುದಯಕ್ಕಾಗಿ ಪಕ್ಷಗಳು ಅನುಸರಿಸಲಿರುವ ರಾಜಕೀಯ-ಸಾಮಾಜಿಕ-ಆರ್ಥಿಕ ನೀತಿಗಳ ಸ್ಪಷ್ಟ ಚಿತ್ರಣ ನೀಡುವಂತಿರಬೇಕು. ಒಂದು ವೇಳೆ ಅಧಿಕಾರಕ್ಕೆ ಬಂದಲ್ಲಿ ತಮ್ಮ ಪಕ್ಷ ಯಾವ ರೀತಿಯ ಆರ್ಥಿಕ-ರಾಜಕೀಯ ನೀತಿಗಳನ್ನು ಅನುಸರಿಸುತ್ತದೆ, ಗ್ರಾಮ-ಪಟ್ಟಣ ಮತ್ತು ಜಿಲ್ಲೆಗಳ ಅಭಿವೃದ್ಧಿಗಾಗಿ, ಪ್ರಜೆಗಳ ಅಭ್ಯುದಯಕ್ಕಾಗಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಸ್ಪಷ್ಟವಾಗಿ ತಿಳಿಯಪಡಿಸುವ ಒಂದು ಲಿಖಿತ ಪ್ರಮಾಣವನ್ನೇ ಪ್ರಣಾಳಿಕೆ ಎಂದು ಹೇಳಲಾಗುತ್ತದೆ.

ಈ ಪ್ರಣಾಳಿಕೆಗಳ ಮೂಲಕವೇ ಪಕ್ಷಗಳ ಸಿದ್ಧಾಂತ ಮತ್ತು ನೈತಿಕ ಬದ್ಧತೆಯೂ ಸ್ಪಷ್ಟವಾಗುತ್ತದೆ. ಆದರೆ ಕರ್ನಾಟಕದ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳನ್ನು ನೋಡಿದರೆ ರಾಜ್ಯದಲ್ಲಿ ನಡೆಯಲಿರುವ ಪಂಚಾಯತ್ ಚುನಾವಣೆಗಳ ಸಂದರ್ಭದಲ್ಲಿ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಹೊರತಂದಿರುವ ಪ್ರಣಾಳಿಕೆಯನ್ನು ನೋಡಿದರೆ, ನಮ್ಮೂರಿನ ಜಾತ್ರೆಯ ಸನ್ನಿವೇಶ ನೆನಪಾಗುತ್ತದೆ.

More

ಜಯಶ್ರೀ ಕಾಲಂ : ಅಷ್ಟೊಂದು ವೈವಿಧ್ಯತೆ ಇದೆ ಕಣ್ರೀ …

ಭಾಷೆಯ ಬಗ್ಗೆ ಹೇಳೋದೇ ಆದ್ರೆ ಕರ್ನಾಟಕದಲ್ಲೇ ಒಂದು ಮನೆಯಿ0ದ ಮತ್ತೊಂದು ಮನೆಯಲ್ಲಿ ಬಳಸುವ ಪದಗಳಲ್ಲಿ ವ್ಯತ್ಯಾಸ ಇರುತ್ತದೆ . ಕನ್ನಡವನ್ನೇ ಸರಿ ಮಾಡೋಕೆ ಹೊರಟರೆ ನಾವು ನೀವು ಅರ್ಜಿಯಲ್ಲಿ ಮಾತೃಭಾಷೆ ಇರುವ ಕಡೆ ಮೂಕ ಭಾಷೆ ಎಂದು ಮೌನವಾಗಿ ಬರೆಯ ಬೇಕಾಗುತ್ತದೆ, ಅಷ್ಟೊಂದು ವೈವಿಧ್ಯತೆ ಇದೆ. ಅದು ನಿಮಗೂ ಗೊತ್ತು :-)

ಮತ್ತೊಂದು ಸಂಗತಿ ಏನು ಗೊತ್ತೇ ಈಗ ಬ್ಲಾಗ್ ನಲ್ಲಿ ಬಳಸುವ ಭಾಷೆಯನ್ನು ನಾನು ನನ್ನ ಲೇಖನಗಳಲ್ಲಿ ಬಳಸುವ ಹಾಗಿಲ್ಲ ಗೊತ್ತ :-) ಸೂಪರ್ ಬೊ೦ಬಾಟು, ಅಯ್ಯೋ ,ಯಪ್ಪಾ … ಈರೀತಿ ಬಳಸುವುದಕ್ಕೆ ಸಂಪೂರ್ಣ ನಿಷೇಧ. ಅಷ್ಟೊಂದು ಉತ್ಕೃಷ್ಟ ಭಾಷೆಯನ್ನೇ ಬಳಸೋದು. ಆದರೆ ಬ್ಲಾಗ್ ವಿಷಯಕ್ಕೆ ಬಂದ್ರೆ ಎಲ್ಲಾ ಕನ್ನಡಿಗರಿಗೂ ಸರಳವಾಗಿರುವ ಕನ್ನಡ ಸುಲಭವಾಗಿ ಅರ್ಥ ಆಗುತ್ತದೆ, ಅದೇ ರೈಟ್ವೇ ಎಂದು ನನ್ನ ಆಪ್ತರು ಹೇಳಿದ್ದಕ್ಕೆ ಅತಿ ಸರಳ ಭಾಷೆ ಬಳಕೆ ಮಾಡ್ತಾ ಇರೋದು :-)

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಮಂಜುನಾಥ್ ಚಾಂದ್ ಬರೆವ ‘ಇವರು ಮೂರ್ತಿ’

-ಮಂಜುನಾಥ್ ಚಾಂದ್

(photo by : ci so)

ಇವರು ಮೂರ್ತಿ 8

ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಬೇಕು ಎಂಬ ಮಹದಾಸೆ ನನಗಿತ್ತು. ಆದರೆ ಯಾವ ನಿರ್ದೇಶಕರೂ ಆಸಕ್ತಿ ವಹಿಸಲಿಲ್ಲ. ಕೊನೆಯಲ್ಲಿ ನನಗೊಂದು ಪಾತ್ರ ಅಂತ ಕೊಟ್ಟವರು ರಾಜೇಂದ್ರ ಸಿಂಗ್ ಬಾಬು ಅವರು. ಅವರ ‘ಹೂವು ಹಣ್ಣು’ ಚಿತ್ರದಲ್ಲಿ ಅಭಿನಯ ಮಾಡಿದೆ. ಅದನ್ನು ಬಿಟ್ಟರೆ ಬೇರೆ ಯಾರೂ ನನ್ನನ್ನು ಕರೆಯಲಿಲ್ಲ. ನನ್ನ ಸಂದರ್ಶನಕ್ಕೆ ಬಂದ ಅನೇಕರು ಇಂತಹ ಪ್ರಶ್ನೆಗಳನ್ನೇ ಕೇಳಿದ್ದಾರೆ. ನೀವು ಈ ಪ್ರಶ್ನೆಯನ್ನು ನಿರ್ದೇಶಕರಿಗೆ ಕೇಳಿ ಅಂತ ಹೇಳುತ್ತಿದ್ದೆ. ನೀವೆ ಒಂದು ಸಿನೆಮಾ ನಿರ್ದೇಶನ ಮಾಡಿ ಎಂದು ಕೆಲವರು ನನಗೆ ಆಫರ್ ಕೊಟ್ಟಿದ್ದಿದೆ. ಆದರೆ, ನಾನು ಆ ಬಗ್ಗೆ ಹೆಚ್ಚು ಆಸಕ್ತಿ ವಹಿಸಲಿಲ್ಲ.

ಕ್ಯಾಮರಾಮನ್ ಹೆಚ್ಚು ಕ್ರಿಯೇಟಿವ್...
ಒಂದು ವಿಷಯ ನಿಮಗೆ ಸ್ಪಷ್ಟವಾಗಿ ಹೇಳಿಬಿಡುತ್ತೇನೆ. ಒಬ್ಬ ನಿರ್ದೇಶಕನಿಗಿಂತ ಒಬ್ಬ ಕ್ಯಾಮೆರಾಮನ್ ಹೆಚ್ಚು ಕ್ರಿಯೇಟಿವ್ ಆಗಿರುತ್ತಾನೆ. ಆತ ಶೂಟಿಂಗ್ ಮಾಡುವಾಗ ಅತ್ಯಂತ ಡೆಡಿಕೇಟ್ ಆಗಿ, ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ. ಬೆಳಿಗ್ಗೆ 9.30ಕ್ಕೆ ಸ್ಟುಡಿಯೋಗೆ ಶೂಟಿಂಗ್ ಮಾಡೋಕೆ ಅಂತ ಎಂಟರ್ ಆದ್ರೆ ಸಂಜೆ 6.30 ತನಕ ಅವನ ಮನಸ್ಸು, ದೇಹ ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ. ಒಂದು ನಿಮಿಷವೂ ಪುರುಸೊತ್ತು ಇರುವುದಿಲ್ಲ.

More

ಮಲೆಗಳಲ್ಲಿ ಮದುಮಗಳು : ದೃಶ್ಯ ಕಟ್ಟುವ ಕೆಲಸ

ಬಾ ಹುಲಿಕಲ್ ನೆತ್ತಿಗೆ-5

-ಪ್ರೊ. ಶಿವರಾಮಯ್ಯ

ದೃಶ್ಯ ಕಟ್ಟುವುದೆಂದರೆ ಮೂಲಕೃತಿಯಲ್ಲಿರುವ ವಿವರಣೆ ವರ್ಣನೆ ಕಥಾಭಾಗವನ್ನು ದೃಶ್ಯೀಕರಿಸುವುದು. ಪಾತ್ರಗಳ ಆಗಮನ ನಿರ್ಗಮನದ ಪ್ರಕಾರ ಮೂಲ ಸಂಭಾಷಣೆಗೆ ಚ್ಯುತಿಬಾರದಂತೆ ಮಾತುಗಳನ್ನು, ಹಾಡುಗಳನ್ನು ಕಟ್ಟಿ ನಿರೂಪಕರ ಮೂಲಕ ಹೇಳಿಸುತ್ತಾ ಕಥೆಯನ್ನು ಮುನ್ನಡೆಸುವುದು. ಮದುಮಗಳು ರಂಗರೂಪದ ವರ್ಕಷಾಪ್ ಹೀಗೆ ಸತತ ಒಂದು ವಾರದ ಮೇಲೆ ನಡೆಯಿತು. ಆಗ ಮೂಲ ಕೃತಿಯಿಂದ ಇಡುವುದನ್ನು ಇಟ್ಟು, ಬಿಡುವುದನ್ನು ಬಿಟ್ಟು, ಉಳಿದದ್ದನ್ನು ಪ್ರೇಕ್ಷಕರ ಊಹೆಗೆ ಸೂರೆಗೊಟ್ಟು ಸ್ಕ್ರಿಪ್ಟ್ ತಯಾರಿಸುತ್ತಿದ್ದೆವು.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಕಾದಂಬರಿಯ 64 ಅಧ್ಯಾಯಗಳನ್ನು ಮೊದಲು 57 ಸೀನ್ಗಳಿಗೆ ಇಳಿಸಲಾಯಿತು. ಆಮೇಲೆ ಇನ್ನೂ ಒಂದೆರಡು ಕಡಿಮೆಯಾದವು. ಹಾಗೆ ಕಟ್ಟಿದ ಕೆಲವು ಹೊಸ ಸೀನ್ಗಳೆಂದರೆ ನಾಗತ್ತೆ ಸೊಸೆ ನಾಗಕ್ಕನನ್ನು ವೆಂಕಟಪ್ಪನಿಗೆ ಕೂಡಿಕೆ ಮಾಡಿಕೊಡಲು ಹೂಡಿದ ಸನ್ನಾಹ, ದೊಡ್ಡವಳಾದ ಚಿನ್ನಮ್ಮನಿಗೆ ವಸಗೆ ಹಾಕುವುದು; ಕೋಣೂರು ತೋಟದಲ್ಲಿ ಆಳುಗಳು ದ್ರೌಪದಿ ವಸ್ತ್ರಾಪಹರಣ ನಾಟಕ ಪ್ರಾಕ್ಟೀಸ್ ಮಾಡುವುದು; ಬೆಟ್ಟಳ್ಳಿಯಲ್ಲಿ ಬೀಸೆಕಲ್ಲು ಸವಾರಿ; ಕಲ್ಲೂರು ಮಂಜಪ್ಪ ಭಟ್ಟರ ಮನೆ ದೃಶ್ಯ; ಚಿನ್ನಕ್ಕನ ಕನಸಿನಲ್ಲಿ ರಾಕ್ಷಸ ಕಂಡದ್ದು; ಮೇಗರವಳ್ಳಿ ಮಿಷನ್ ಶಾಲೆಯಲ್ಲಿ ಮತಾಂತರದ ದೃಶ್ಯ-ಇತ್ಯಾದಿ. ಕೆವೈಎನ್ ಹೇಗ ಸಂದಭರ್ೋಚಿತವಾಗಿ ದೃಶ್ಯ ಕಟ್ಟಬಲ್ಲ ಎಂಬುದಕ್ಕೆ ನಾಗತ್ತೆ ತನ್ನ ವಿಧವೆ ಸೊಸೆ ನಾಗಕ್ಕನನ್ನು ವೆಂಕಟಪ್ಪನಿಗೆ ಕೂಡಿಕೆ ಮಾಡಿ ಕೊಡುವ ಮುಂಚೆ ನಡೆಸಿದ ಒಳ ಒಪ್ಪಂದದ ಒಂದು ಸ್ಯಾಂಪೆಲ್ ಹೀಗೆದೆ ನೋಡಿ:

ನಾಗತ್ತೆ: ನೋಡು ವೆಂಕಟಪ್ಪ ನೀನು ದುಡುಕಿ ಅವಾಂತರ ಮಾಡಬ್ಯಾಡ, ನಾನು ಹೇಳಿದಂಗೆ ಕೇಳು.

ವೆಂಕಟಪ್ಪ: ನಿನ್ನ ನಂಬಬೌದಾ…. ಆಸಿಂಬಾವಿ ಹೆಗ್ಗಡೆಗೂ ಹಿಂದೆ ಹೇಳಿದ್ಯಂತೆ.

ನಾಗತ್ತೆ: ಮಾತು ಆಡುವಾಗ ಎಷ್ಟೋ ಬರ್ತಾವೆ ಹೋಗ್ತವೆ. ಆ ಮಾತು ಈಗಿಲ್ಲ ಬಿಡು. (ಇಲ್ಲಿ ಇನ್ನೊಂದು ಪುಟದಷ್ಟು ಸಂಭಾಷಣೆ ಇದೆ)

ವೆಂಕಟಪ್ಪ: ಅಲ್ಲ ಏನಾದ್ರು ಹೆಚ್ಚು ಕಮ್ಮಿ ಆದ್ರೆ ಏನು ಅಂತ, ಅಲ್ದೆ ಈಗಿರೋ ಪರಿಸ್ಥಿತಿನಾಗೆ ಹಂದಿ ಹೊಡ್ಸು ಅಂದ್ರೆ ಹೇಗೆ?

ನಾಗತ್ತೆ: ಅಕ್ಕಿ ಮ್ಯಾಲೆ ಆಸೆ ನೆಂಟ್ರುಮ್ಯಾಲೆ ಪ್ರೀತಿ ಅಂದ್ರೆ ಆಗಲ್ಲ. ನಾಗಕ್ಕ ಬೇಕು ಅಂದ್ರೆ ನಾ ಹೇಳಿದಂಗೆ ಮಾಡು. ಅವಳನ್ನ ಕರೆತಂದು ನಿನ್ನ ಕೈಯ್ಯಾಗೆ ಹಾಕದಿದ್ರೆ ನನ್ನೆಸರು ನಾಗತ್ತೇನೇ ಅಲ್ಲ.

ವೆಂಕಟಪ್ಪ: ನೀನೀ ಮಾತಿನ ಮ್ಯಾಲಿರು. ನಾನು ಏನಾದ್ರೂ ಮಾಡಿ ಎಲ್ಲ ಸರಿಮಾಡಿಕೊಳ್ತೀನಿ. ಅಂದಂಗೆ ಈ ಗುಟ್ಟೂ ಯಾರಿಗೂ….

ನಾಗಕ್ಕ: ಸೊಸೇನ ಕೂಡಿಕೆ ಮಾಡಿ ಕೊಟ್ಟ ಮ್ಯಾಲೆ ಅತ್ತೇನ ಆಚೆಗ್ಹಾಕಿ ಕೈಗೆ ಚಿಪ್ಪು ಕೊಡಲ್ಲತಾನೆ?

ವೆಂಕಟಪ್ಪ: ಏನ್ ಮಾತು ಅಂಥಾ ಆಡ್ತಿಯಾ? ನಿನ್ನ ಸೊಸೆ ನನ್ನ ಹೆಂಡ್ತಿ ಆದ ಮ್ಯಾಲೆ, ನಿಂದ್ ಬ್ಯಾರೆ ನಂದ್ ಬ್ಯಾರೆ ಅಂತ ಇರ್ತದೇನು? ನಂಗೆ ಅತ್ತೆ ಬೇರೆ ಅಲ್ಲ, ಸೊಸೆ ಬೇರೆ ಅಲ್ಲ.

More

ಅಂಬೇಡ್ಕರ್ ಸ್ಮರಣೆಗಾಗಿ ಕಾನೂನು ಶಿಬಿರ

Previous Older Entries

%d bloggers like this: