‘ಹಂಗಾಮ’ ಕಾರ್ನರ್ ನಲ್ಲಿ ನೀರ ಹಾಡು…

ಹೆಲ್ಮೆಟ್ಟಿನೊಳಗೊಂದು ಡುಯೆಟ್

-ಎಂ ಆರ್ ಗಿರಿಜಾ

ಮಳೆ ಬರುತ್ತಲೇ ಇದೆ. ರಸ್ತೆಯಂಟಿನ ಗಾಡಿಗಳು ಈಗ ಟರ್ಪಾಲಿನ್ ಹೊದ್ದು ಬೆಚ್ಚಗಾಗುತ್ತಿವೆ. ಸಂಜೆಯ ಹವೆಯ ಸಮಶೀತೋಷ್ಣ ನೇರ್ಪುಗೊಳಿಸಲು ಬಜ್ಜಿ ಬೋಂಡಾದ ಎಣ್ಣೆ ಕಡಾಯಿಗಳು ವಿವಿಧ ಲಯಗಳಲ್ಲಿ ಉರಿಯತೊಡಗಿವೆ.ಹಿಂದೆ ಕೇಳಿದ ಅಸೀಮ ರೂಪಿ ಅಂಬರದಾಗೆ ನೆನಪಾಗುತ್ತಿದೆ.

ಬಿಗ್ರೇಡ್ ರಸ್ತೆಯಿರಲಿ ಎಂ ಜಿ ರೋಡಿನ ಕಾಫಿ ಕ್ಲಬ್ ಇರಲಿ, ಬಸವನಗುಡಿ, ಮಲ್ಲೇಶ್ವರಗಳ ಹಳೇ ಹಳೆ ಹೋಟೆಲಿರಲಿ ಎಲ್ಲೆಡೆ ಜನಸಂದಣಿ. ಗಿಜಿಗಿಜಿ ಮಳೆ . ಅದು ನಿಲ್ಲುವರೆಗೂ ಹೊರಡಲಾರದೆ ಮನೆ. ಅಂಗಡಿ ಮಾಡುಗಳ ಆಶ್ರಯ ಪಡೆದು ಕುಂತವರು, ನಿಂತವರು, ಬೀಸುತ್ತಿದ್ದ ಗಾಳಿಗೆ ಸಾಟಿಯೆಂಬಂತೆ ಓಡುತ್ತಿರುವ ಆಟೋ, ಬಸ್ಸುಗಳಿಂದ ಧುಮ್ಮಿಕ್ಕಿ ಇಳಿದು ಚದುರುತ್ತಿದ್ದವರು……

ರಸ್ತೆ ಬದಿ ಪ್ಯಾಂಟು, ಸ್ಕರ್ಟ್, ಬ್ರಾ, ಚಡ್ಡಿ ನಿಕ್ಕರು , ಷೂ, ಕಾಲುಚೀಲ. ವಾಚುಗಳು ಸಾಮ್ರಾಜ್ಯದ ಡೇರೆ ಹಾಕಿ ಕುಂತವರು ತಮ್ಮ ಅಮೂಲ್ಯ .ವಸ್ತುಗಳ ಮೌಲ್ಯ ಲೆಕ್ಕಿಸದೆ ಗುಡಿಸಿಕೊಳ್ಳುತ್ತಿದ್ದಾರೆ, ಅವರಲ್ಲಿ ಬಹುಪಾಲು ಚಿಣ್ಣರು ಸಣ್ಣಕಾಲು ಮುಳುಗುವರೆಗೂ ಬರುವ ಚೊಣ್ಣ ಮಳೆ ಬಂದು ತಮ್ಮ ತಮ್ಮ ಅಕ್ಕ ಅಣ್ಣ ಅಪ್ಪಂದಿರು ನೆನೆದರೆ, ಸುತ್ತಲು ಅಂಗಡಿಗಳು ಜನರ ದಾಳಿಯಿಂದ ಗೀಗೀ ಗುಟ್ಟತೊಡಗಿದರೆ ಇವರಿಗೇನೋ ಖುಷಿ ನಿಂತ ನೀರಿನ ಮಡುವಿನಲ್ಲಿ ಕಾಲು ಹಾಕಿ ಥೈ ಥೈ ಕುಣಿಯತೊಡಗಿದರೆ ಅವರಿಗೆ ತಮ್ಮದೇ ಲೋಕ ಸೃಷ್ಟಿಯಾದ ಖುಷಿ.

More

ಗಾಂಧಿಯ ಕಂಡಿರಾ 2

-ಸಿಬಂತಿ ಪದ್ಮನಾಭ

ಹಾರುವುದಿದೆ ದೂರ ನಿದ್ದೆಗೆ ಜಾರುವ ಮುನ್ನ

ಗಾಂಧಿಯ ಕಂಡಿರಾ  ಭಾಗ 2

ಸದಾಶಿವಜ್ಜ ಬಂಟ್ವಾಳದ ಭಂಡಾರಿಬೆಟ್ಟಿನವರು. ಅವರು ಹುಟ್ಟಿದ್ದು ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೆ ಹೆಚ್ಚುಕಮ್ಮಿ ಹದಿನೈದು ವರ್ಷಗಳ ಹಿಂದೆ. ಬಾಲ್ಯದ ತುಂಬೆಲ್ಲ ದರಿದ್ರಲಕ್ಷ್ಮಿಯದೇ ಕಾರುಭಾರು. ಮನೆ ಪಕ್ಕದಲ್ಲಿ ದೊಡ್ಡದೊಂದು ಕೈಮಗ್ಗ. ಆ ಕಾಲಕ್ಕೆ ಬಂಟ್ವಾಳದ ಖಾದಿ ಸೆಂಟರ್ ಎಂದರೆ ಇಡೀ ಕರಾವಳಿಗೇ ಪ್ರಸಿದ್ಧ.

ಎಷ್ಟು ದೊಡ್ಡದೆಂದರೆ, ಅಷ್ಟು ವರ್ಷಗಳ ಹಿಂದೆಯೇ ಅದು ಐವತ್ತು ಮಹಿಳೆಯರಿಗೆ ಉದ್ಯೋಗ ಕೊಡುತ್ತಿತ್ತು. ನಾಲ್ಕನೇ ಇಯತ್ತೆಗಿಂತ ಆಚೆಗೆ ವಿದ್ಯಾಭ್ಯಾಸ ಮುಂದುವರಿಸದಾದ ಸದಾಶಿವನಿಗೆ ಆಸರೆಯಾದದ್ದು ಇದೇ ಖಾದಿ ಸೆಂಟರ್.

ಆದರೆ ಈ ಆಧಾರ ಹೆಚ್ಚು ಸಮಯ ಉಳಿಯಲಿಲ್ಲ. ಅದೇನು ತೊಡಕಾಯಿತೋ, ದಿನೇದಿನೇ ದುರ್ಬಲವಾಗುತ್ತಾ ಬಂದ ಕೈಮಗ್ಗ ಒಂದು ದಿನ ಪರ್ಮನೆಂಟಾಗಿ ಬಾಗಿಲೆಳೆದುಕೊಂಡಿತು. “ನಾನು ನಿರುದ್ಯೋಗಿಯಾದೆ. ಹೊಟ್ಟೆಪಾಡು, ಅಲ್ಲೇ ಬಂಟ್ವಾಳದ ಒಂದು ಫರ್ನಿಚರ್ ಅಂಗಡಿಯಲ್ಲಿ ದುಡಿಯತೊಡಗಿದೆ. ಒಂದು ದಿನ ಅದ್ಯಾರೋ ನನಗೆ ಬೆಂಗಳೂರಿನ ಚರಕ ಟ್ರೈನಿಂಗ್ ವಿಚಾರ ಹೇಳಿದರು.

ಟ್ರೈನಿಂಗ್ ಸಮಯದಲ್ಲಿ ತಿಂಗಳಿಗೆ ಎಪ್ಪತ್ತೈದು ರುಪಾಯಿ ಸ್ಟೈಪೆಂಡ್ ಕೊಡುತ್ತಾರೆ ಅಂತಲೂ ಹೇಳಿದರು. ಅರ್ಧಶತಮಾನದ ಹಿಂದೆ ಎಪ್ಪತ್ತೈದು ರುಪಾಯಿ ಎಂದರೆ ಸಣ್ಣ ಮಾತೇ! ಮತ್ತೇನೂ ಯೋಚಿಸದೆ ನಾನು ಹೊರಟುನಿಂತೆ,” ಎಂದು ಹಳೇ ಪುಟಗಳನ್ನು ತೆರೆಯುತ್ತಾರೆ ಸದಾಶಿವಜ್ಜ.

ಚರಕ ಟ್ರೈನಿಂಗ್ ಎಂದರೆ ಚರಕದಲ್ಲಿ ನೂಲುವ ಟ್ರೈನಿಂಗ್ ಅಲ್ಲ. ಚರಕ ತಯಾರಿಸಲು ತರಬೇತಿ. ಹಾಗೆ, ೧೯೫೭ರಲ್ಲಿ ಒಟ್ಟು ೩ ತಿಂಗಳು ಸದಾಶಿವ ಮತ್ತು ಅವರ ಚಿಕ್ಕಪ್ಪನ ಮಗ ಶ್ರೀನಿವಾಸ ಬೆಂಗಳೂರಿನ ಕೃಷ್ಣರಾಜಪುರದ ದೂರವಾಣಿನಗರದಲ್ಲಿ ಚರಕ ತಯಾರಿಸುವ ತರಬೇತಿ ಪಡೆದರು. (ಅಂದಹಾಗೆ, ಅವರು ಕಲಿತದ್ದು ಅಂಬರ್ ಚರಕ ತಯಾರಿ.

More

ಮಣಿಕಾಂತ್ ಬರೆಯುತ್ತಾರೆ:ಸ್ನೇಹದ ಕಡಲಲ್ಲೀ, ನೆನಪಿನ ದೋಣಿಯಲೀ

ಇದು ಬರೀ ಚಿತ್ರಗೀತೆಯಲ್ಲ, ಎಲ್ಲರ ಬದುಕಿನ ಹಾಡು….

ಸ್ನೇಹದ ಕಡಲಲ್ಲೀ, ನೆನಪಿನ ದೋಣಿಯಲೀ

ಚಿತ್ರ: ಶುಭಮಂಗಳ , ಗೀತರಚನೆ: ಚಿ. ಉದಯಶಂಕರ್

ಸಂಗೀತ ವಿಜಯಭಾಸ್ಕರ್. ಗಾಯನ’ ಎಸ್.ಪಿ. ಬಾಲಸುಬ್ರಹ್ಮಣ್ಯಂ

ಸ್ನೇಹದ ಕಡಲಲ್ಲೀ, ನೆನಪಿನ ದೋಣಿಯಲೀ

ಪಯಣಿಗ ನಾನಮ್ಮಾ, ಪಯಣಿಗ ನಾನಮ್ಮಾ

ಪ್ರೀತಿಯ ತೀರವ, ಸೇರುವುದೊಂದೇ

ಬಾಳಿನ ಗುರಿಯಮ್ಮ, ಬಾಳಿನ ಗುರಿಯಮ್ಮಾ ||ಪ||

ಬಾಲ್ಯದ ಆಟ, ಆ ಹುಡುಗಾಟ ಇನ್ನೂ ಮಾಸಿಲ್ಲ ಆಹಾ…

ಆಟದೆ ಸೋತು ರೋಷದಿ ಕಚ್ಚಿದ

ಗಾಯವ ಮರೆತಿಲ್ಲಾ ಆಹಾ… ಗಾಯವ ಮರೆತಿಲ್ಲ ||೧||

ಶಾಲೆಗೆ ಚಕ್ಕರ್ ಊಟಕೆ ಹಾಜರ್ ಲೆಕ್ಕದಿ ಬರಿಸೊನ್ನೆ

ಎನ್ನುತ ನಾನು ಕೆಣಕಲು ನಿನ್ನ

ಊದಿಸಿದೇ ಕೆನ್ನೇ ಆಹಾ… ನಾನದ ಮರೆಯುವೆನೇ ||೨||

‘ಸ್ನೇಹದ ಕಡಲಲ್ಲೀ… ನೆನಪಿನ ದೋಣಿಯಲೀ…’

ಸಂಗವ ಬಿಟ್ಟು ಜಗಳ ಆಡಿದ ದಿನಾವಾ ಮರೆತಿಲ್ಲ, ಆಹಾ….

ಮರೆಯಲಿ ನನ್ನಾ ಮೋರಿಗೆ ತಳ್ಳಿದ

ತುಂಟಿಯ ಮರೆತಿಲ್ಲ, ಆಹಾ… ಜಾಣೆಯ ಮರೆತಿಲ್ಲ ||೩||

ಈ ಹಾಡು ಕೇಳುತ್ತಿದ್ದಂತೆಯೇ ಬಹುಪಾಲು ಜನರಿಗೆ ತಮ್ಮ ಬಾಲ್ಯ ನೆನಪಾಗುತ್ತದೆ. ಬಾಲ್ಯದ ದಿನಗಳಲ್ಲಿ ತಾವು ಆಡಿದ ತುಂಟಾಟಗಳು, ಮಾಡಿದ ಚೇಷ್ಟೆಗಳು, ತಮಾಷೆಗಳು, ಗೆಳಯರೊಂದಿಗೆ ಆಡಿದ ಆಟ, ಜಗಳ, ಕುಸ್ತಿ…. ಎಲ್ಲವೂ ಒಂದೊಂದಾಗಿ ನೆನಪಿಗೆ ಬರುತ್ತವೆ. ಆ ಸಂದರ್ಭದಲ್ಲಿಯೇ ಎದುರು ಮನೆಯಲ್ಲಿಯೋ, ಪಕ್ಕದ ಬೀದಿಯಲ್ಲಿಯೋ ಇದ್ದ ಗೆಳತಿಯೂ ನೆನಪಾಗುತ್ತಾಳೆ.

ಅವಳೊಂದಿಗೆ ಕುಂಟಾಬಿಲ್ಲೆ ಆಡಿದ್ದು, ಕಾಗೆ ಎಂಜಲು ಮಾಡಿಕೊಂಡು ಪೆಪ್ಪರ್‌ಮೆಂಟ್ ತಿಂದದ್ದು, ಯಾವುದೋ ಸಣ್ಣ ಕಾರಣಕ್ಕೆ ‘ಠೂ’ ಬಿಟ್ಟಿದ್ದು, ನಂತರ ಭರ್ತಿ ಎರಡೂವರೆ ತಿಂಗಳು ಮಾತಾಡದೆ ಉಳಿದದ್ದು; ಹಾಗಿದ್ದರೂ ಕದ್ದು ಕದ್ದು ಅವಳ ಬಗ್ಗೆ ವಿಚಾರಿಸಿಕೊಂಡದ್ದು, ಕಡೆಗೊಮ್ಮೆ ಹಬ್ಬದ ನೆಪದಲ್ಲಿ ಮಾತಾಡಿಸಿದ್ದು;

More

‘ಕಿನ್ನರ ಮೇಳ’ ಒಂದು ನೋಟ…

ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ  ತುಮುರಿ ಯಲ್ಲಿ 1990 ರಲ್ಲಿ ಪ್ರಾರಂಭವಾದ ನಾಟಕ ತಂಡ ‘ಕಿನ್ನರ ಮೇಳ’ .ರಂಗ ನಿರ್ದೇಶಕ ‘ಕೆ ಜಿ ಕೃಷ್ಣ ಮೂರ್ತಿ’ ಅವರ ಸಾರಥ್ಯದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ನಾಟಕ ಪ್ರದರ್ಶನ ಗಳನ್ನು ನೀಡುತ್ತಾ ಬಂದಿದೆ . ಹೀಗೆಕಿನ್ನರ ಮೇಳ ನಾಟಕ ತಂಡ ಬೇರೆ ಬೇರೆ ಕಡೆಗಳಲ್ಲಿ ಅಭಿನಯಿಸಿದ ನಾಟಕಗಳ ಒಂದು ನೋಟ ಇಲ್ಲಿದೆ.

ಇನ್ನಷ್ಟು ಫೋಟೋಗಳು : ಸೈಡ್ ವಿಂಗ್

ಜಯಶ್ರೀ ಕಾಲಂ: ಅವರು ಮತ್ತಷ್ಟು ಹತ್ತಿರವಾದರು…

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ರಿಯಾಲಿಟಿ ಶೋಗಳಲ್ಲಿ ತನ್ನದೇ ಆದ ಉತ್ತಮ ಸ್ಥಾನ ಪಡೆದ ಕಾರ್ಯಕ್ರಮ ಸ ರೆ ಗ ಮ ಪಾ …! ಈ ಟೀವಿ ಕನ್ನಡ ವಾಹಿನಿಯ ಎದೆ ತುಂಬಿ ಹಾಡಿದೆನು ಕಾರ್ಯಕ್ರಮಕ್ಕೆ ಸಖತ್ ಫೈಟ್ ನೀಡಿದ ಷೋ! ಕಿರಿಯರ -ಹಿರಿಯರು ಯಾರೇ ಸ್ಪರ್ಧಿಗಳು ಆಗಿರಲಿ ಆ ಕಾರ್ಯಕ್ರಮ ವಿಶೇಷವಾಗಿ ರೂಪಗೊಂಡು ಅಪಾರ ಸಂಖ್ಯೆಯ ವೀಕ್ಷಕರನ್ನು ಪಡೆದ ಕಾರ್ಯಕ್ರಮ.

ಅದು ಯಶಸ್ಸಿನ ಮೆಟ್ಟಿಲು ಹತ್ತಲು ಸಾಕಷ್ಟು ಪ್ರಯತ್ನಗಳನ್ನು ಸಂಘಟಕರು ಮಾಡಿದ್ರು. ಮಹಾಗುರು ಹಂಸಲೇಖ ಅವರು ಈ ಕಾರ್ಯಕ್ರಮದ ಮೂಲಕ ಮತ್ತಷ್ಟು ಹತ್ತಿರವಾದರು. ಒಟ್ಟಾರೆ ಅತ್ಯುತ್ತಮ ಕಾರ್ಯಕ್ರಮ.ಈಗ ಪುನಃ ಆರಂಭ ಆಗಿ ಕೆಲವು ಎಪಿಸೋಡ್ ಗಳನ್ನು ಪೂರೈಸಿರುವ ಈ ಸ ರೆ ಗ ಮ ಕಾರ್ಯಕ್ರಮದ ಚುಕ್ಕಾಣಿಯನ್ನು ಗಾಯಕ -ಸಂಗೀತಗಾರರಾದ ಗುರುಕಿರಣ್ ಮತ್ತು ರಘು ದೀಕ್ಷಿತ್ ಹಾಗೂ ಅಪರೂಪದ ಗಾಯಕಿ ಪಲ್ಲವಿ ಅರುಣ್ ಹಿಡಿದ್ದಾರೆ.

ಪೂರ್ಣ ಓದಿಗೆ :ಮೀಡಿಯಾ ಮೈಂಡ್

ಶಂಕರ ಪುಣ್ಯಕೋಟಿ …

ಇಲ್ಲೂ ನೋಡಿ: invitations blog

ಮಕ್ಕಳ ರಂಗ ಹಬ್ಬ

ಇಲ್ಲೂ ನೋಡಿ: invitations blog

ಕಾಯ್ಕಿಣಿ ‘ನಯನ ನೂತನ’

ಅಕ್ಷರದಲ್ಲೇ ಅಕ್ಕರೆಯ ಅರ್ಪಣೆ

-ನೆಲ್ಚಿ ಅಪ್ಪಣ್ಣ

ಕಳೆದ ವಾರ ಕನ್ನಡದಲ್ಲಿ ಬಹಳಷು ಪುಸ್ತಕಗಳು ಬಿಡುಗಡೆಯಾದವು.ಪತ್ರಿಕೆಗಳ ಸಾಧರ ಸ್ವಿಕಾರಗಳಲ್ಲಿ ಅವು ಗೋಚರಿಸಿ,ಫೇಸ್ ಬುಕ್ಕುಗಳಲ್ಲಿ ಚರ್ಚೆಯಾಗಿ ಯಾರ ಪುಸ್ತಕ ಟಾಪ್ ಎಷ್ಟರಲ್ಲಿದೆ ಎಂಬ ಕುತೂಹಲ ಹುಟ್ಟಿಸುವಂತೆ ಮಾಡಿದವು.ಆದರೆ ಶಿವರಾಮ ಕಾರಂತರ ಹುಟ್ಟೂರು ಉಡುಪಿಯ ಕೋಟದಲ್ಲಿ ಬಿದುಗಡೆಯಾದ ಒಂದು ಪುಸ್ತಕದ ಸುದ್ದಿ ಬಹುಶ ಪತ್ರಿಕೆಗಳ ಕೋಸ್ಟಲ್ ಪುಟಗಳಿಗಷ್ಟೇ  ಸೀಮಿತವಾದವು.

ಅ ಪುಸ್ತಕದ ಹೆಸ್ರು “ಈ ನಯನ ನೂತನ”.ಮುಖಪುಟದಲ್ಲಿ ಜಯಂತ್ ಕಾಯ್ಕಿಣಿಯವರ ಚಿತ್ರವಿದ್ದರೂ ಅದು ಅವರ ಕಥೆಯಲ್ಲ,ಕವನ ಸಂಗ್ರಹವಲ್ಲ.ಅದು ಅವರು ಬರೆದ ಚಲನಚಿತ್ರ ಗೀತೆಗಳ ಬಗ್ಗೆ ಬೇರೆಯವರು ಬರೆದ ಪುಸ್ತಕ.ಪುಸ್ತಕದ ಸಂಪಾದಕ ಅವಿನಾಶ್ ಕಾಮತ್ ಎಂಬ ರೇಡೀಯೋ ಜಾಕಿ.ಮಾತಿನಲ್ಲೇ ಮನೆಕಟ್ಟುವ ಉದ್ಯೋಗದ ಹುಡುಗ.ಜಯಂತ್ ಎಂದರೆ ಹುಚ್ಚು ಅಭಿಮಾನ ಬೇರೆ.ಹಾಡುಗಳೊಟ್ಟಿಗೆ ಆಟವಾಡುತ್ತಾ ಆಡುತ್ತ ಈತ ಜಯಂತರ ಅಭಿಮಾನಿಗಳನ್ನು,ಅವರನ್ನು ಹತ್ತಿರದಿಂದ ಕಂಡವರನ್ನು ಕಲೆಹಾಕುತ್ತಾನೆ.ಹೀಗೆ ಆತನ ಒಂದೂವರೆ ವರ್ಷದ ಪ್ರಯತ್ನದ ಫಲವೇ ಈ ನಯನಾ ನೂತನ.ಮೊನ್ನೆ ಕೋಟದಲ್ಲಿ ಬಿಡುಗಡೆಯಾಗಿದ್ದೂ ಇದೇ ಪುಸ್ತಕ.ಸ್ವತ ಜಯಂತ ಕಾಯ್ಕಿಣಿಯವರೇ ಬಿಡುಗಡೆ ಮಾಡಿ ಸಂಕೋಚವಾಗಿದೆ ಎಂದಿದ್ದರು.

ಬಿದುಗಡೆ ಮಾದಿದ ಕಾಯ್ಕಿಣಿಯವರು “ಕನ್ನಡದಲ್ಲಿ ಇದೋಂದು ವಿಶಿಷ್ಟ ಪ್ರಯೋಗ”ಎಂದರು. ಅದು ನಿಜವೂ ಕೂಡ ಏಕೆಂದರೆ ಸಿನಿಮಾಹಾಡನ್ನು ಕೇಳಿದ ಸಮಾಜದ ನಾನಾ ಕ್ಷೇತ್ರದ ಮಂದಿ  ಬರೆದ ಸಾಹಿತ್ಯ ಕನ್ನಡದಲ್ಲಿ ಇದೇ ಮೊದಲು.ಒಂದು ವಿಷಯದ ಬಗ್ಗೆ ಹಲವರಿಂದ ಲೇಖನಗಳನ್ನು ಬರೆಸುವ ರಿಸ್ಕ್ ಅನ್ನು ವತ್ತಿಯಲ್ಲಿ ಸಾಹಿತಿಯೂ ಅಲ್ಲದ,ಪತ್ರಕರ್ತನೂ ಅಲ್ಲದ ೨೩ರ ಅವಿನಾಶ್ ಕಾಮತ್ ಮಾಡಿರುವುದು ಕೇವಲ ಜಯಂತ್ ಮೇಲಿನ ಅಭಿಮಾನದಿಂದ.ಜಯಂತ್ ಹಾಡುಗಳ ಬಗ್ಗೆ ಕೇವಲ ಅಭಿಮಾನ ಎಂದರೂ ನ್ಯಾಯ ಒದಗಿಸಿದಂತಾಗದು.ಏಕೆಂದರೆ ಜಯಂತ್ ಹೋಗಿದ್ದು ಅಂಥಾ ಒಂದು ಕ್ಷೇತ್ರಕ್ಕೆ.ಅದುವರೆಗೆ ನವಿರಾದ ಸಾಲುಗಳಲ್ಲಿ ಕಥೆ-ಕವನ ಬರೆಯುತಿದ್ದ ಜಯಂತರು ಇದ್ದಕ್ಕಿದ್ದ ಹಾಗೆ ಸಿನಿಮಾಕ್ಕೆ ಹಾದು ಬರೆಯಲು ಹೋದಾಗ ಹಲವ್ರು ಸಂಕಟಗೊಂಡಿದ್ದರು. ಕಾಯಕವೇ ಕೈಲಾಸವಾಗುವ ಮುಂಬೈ,ಕೈಲಾಸದಲ್ಲೆ ಕಾಯಕವನ್ನು ಕಾಣುವ ಗೋಕರ್ಣವಿನ್ನು ಮರೆಯಾಗಿಹೋಯಿತು ಎಂದು ಬಹುತೇಕರು ಸಂಕಟಪಟ್ಟಿದ್ದ್ರು.ಸಾಹಿತ್ಯದ ಸೊಗಡನ್ನು ಜಯಂತ್ ಅನವಶ್ಯಕವಾಗಿ ಬಲಿಗೊಟ್ಟರೆಂದೂ ಕೆಲವರು ನೊಂದುಕೊಂಡಿದ್ದರು.ಏಕೆಂದರೆ ಸಿನಿಮಾ ಸಾಹಿತ್ಯಕ್ಕೆ ಸಂಗೀತದ ಗುಣಗಳೊಂದಿಗೆ  ರಾಜೀ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿರುತ್ತದೆ.ಈ ರಾಜೀ ಮಾಡಿಕೊಳ್ಳುವ ಭರದಲ್ಲಿ ಜಯಂತರ ಸೂಕ್ಷ್ಮ ಸಂವೇದನೆಗಳು ಉಳಿದಾವೇ ಎಂಬ ಗುಮಾನಿ ಕೂಡ ಸತ್ಯವೆ.ಮೊದಲೇ ಸಂಗೀತ ಮತ್ತು ಸಾಹಿತ್ಯಕ್ಕೆ ಪರಸ್ಪರ ಬೆರೆಯದೆ ವಿಧಿ ಇಲ್ಲ ಎಂಬಂತಹ ನೆಂಟಸ್ಥನ.

ಅದರೂ ಜಯಂತ್ ಸಿನಿಮಾ ಕ್ಷೆತ್ರದಲ್ಲಿ ಯಶಸ್ವಿಯಾದರು.ಕೇವಲ ಯಶಸ್ವಿ ಮಾತ್ರವಲ್ಲ ಕನ್ನಡದ ಜನತೆ ಜಯಂತ್ ಸುರಿಸಿದ ಮಳೆಯಲ್ಲಿ ತೋಯ್ದುಹೋದರು.ಒಂದರ್ಥದಲ್ಲಿ ಹೇಳಬೇಕೆಂದರೆ ಜಯಂತರ ಲೇಖನಿ ಮತ್ತಷ್ಟು ಸೂಕ್ಷ್ಮವಾಯಿತು.ಅವರ ಸಾಲುಗಳು ಸಂಗೀತಕ್ಕೆ ಪ್ರತಿಸ್ಪರ್ಧಿಯಾಗದೆ ಸಮಸ್ಪರ್ಧಿಯಾದವು.ಕವಿಯೊಬ್ಬ ಸಿನಿಮಾಕ್ಕೂ ಲಗ್ಗೆ ಇಟ್ಟ.ಅನಂತರ ಆದುದೆಲ್ಲಾ ಇತಿಹಾಸ.ಇಡೀ ಕನ್ನಡ ಚಿತ್ರರಂಗ ಒಂದು ತಿರುವನ್ನು ಪದೆದುಕೊಂಡಿತು.ಅವರ ಎಲ್ಲಾ ಹಾಡುಗಳು ಜನರ ಹಾಡುಗಳಾದವು.ಪ್ರತಿಯೊಬ್ಬರ ಹದಯದ ಹಾಡುಗಳಾದವು. ಅದುವರೆಗೆ ಅವರು ತಾವು ಕಂಡಿಲ್ಲದಿದ್ದದ್ದನ್ನು ಕಂಡರು.ಬಾಲ್ಯದಲ್ಲಿ ತಾವು ಚಂದಾಮಾಮ ಓದಿದಂತೆ ರಸವತ್ತಾಗಿ  ಹಾಡನ್ನು ಕೇಳಿದರು.

More

ನನ್ನ ಅಪ್ಪ..

-ಉಷಾ ಕಟ್ಟೆಮನೆ

ಚಿತ್ರದಲ್ಲಿರುವವರು ನಮ್ಮ ಅಪ್ಪ ಕಟ್ಟೆಮನೆ ನೇಮಣ್ಣಗೌಡರು. ಇವರು ದಶಂಬರ ೨ರಂದು ದೈವಾಧೀನರಾದರು. ಅವರಿಗೆ ೮೫ ವರ್ಷವಾಗಿತ್ತು.

ನಮ್ಮ ಅಪ್ಪ ಎಂದೊಡನೆ ನನ್ನ ಕಣ್ಮುಂದೆ ಬರುವುದು ಸಣಕಲು ದೇಹದ, ಸ್ವಲ್ಪ ಬಾಗಿದ ಬೆನ್ನಿನ ಎತ್ತರದ ವ್ಯಕ್ತಿ. ಅವರನ್ನು ಮೊದಲು ನೋಡಿದಾಗ ನನ್ನ ಮಗ ಪ್ರಶ್ನಿಸಿದ್ದು ಹೀಗೆ ”ನನ್ನ ಅಜ್ಜನ ಮನೆಯಲ್ಲಿ ಗಾಂದೀಜಿ ಯಾಕಿದ್ದಾರೆ?” ಇದವರ ಹೊರನೋಟದ ವ್ಯಕ್ತಿತ್ವ. ನನ್ನ ದೊಡ್ಡಮ್ಮನ ಮಗ, ಪುರುಷೋತ್ತಮ ಬಿಳಿಮಲೆ ಹೇಳಿದ್ದು, ” ನಾನು ಕಂಡ ಅತ್ಯಂತ ಮುಗ್ಧ, ಪ್ರಾಮಾಣಿಕ ವ್ಯಕ್ತಿ ನನ್ನ ಚಿಕ್ಕಪ್ಪ”. ನನ್ನ ಪತಿ ಶಶಿಧರ್ ಭಟ್ ಕೂಡಾ ನನ್ನಪ್ಪನಲ್ಲಿ ಅದೇ ಮುಗ್ದತೆಯನ್ನು ಕಂಡಿದ್ದರು. ವ್ಯಕ್ತಿಗತವಾಗಿ ಕೂಡಾ ಅವರು ಗಾಂದೀಜಿಯ ಅನುಯಾಯಿಯಂತೆಯೇ ಸ್ವಾವಲಂಬಿಯಾಗಿ ಬದುಕಿದ್ದರು.

೧೯೨೫ನೇ ಇಸವಿ ಮೇ ೧೦ರಂದು ಜನಿಸಿದ ಅಪ್ಪ, ಈ ಲೋಕಕ್ಕೆ ಬಂದೊಡನೆಯೇ ತಾಯಿಯನ್ನು ಕಳೆದುಕೊಂಡರು. ನನ್ನಜ್ಜ ನಾಗಪ್ಪ ಗೌಡರು ಇನ್ನೊಂದು ಮದುವೆಯಾದರು. ಆ ನನ್ನಜ್ಜಿ ನಿಜವಾದ ಅರ್ಥದಲ್ಲಿ ಮಲತಾಯಿಯೇ ಆಗಿದ್ದರು ಎಂದು ಆಕೆಯನ್ನು ಕಣ್ಣಾರೆ ಕಂಡವರ ಬಾಯಿಯಿಂದ ನಾನು ಕೇಳಿದ್ದೇನೆ.

ಅಪ್ಪನಿಗೆ ಒಬ್ಬ ಅಣ್ಣ ಮತ್ತು ಒಬ್ಬ ಅಕ್ಕ ಇದ್ದರು. ಹಾಗೆಯೇ ಚಿಕ್ಕ ಅಜ್ಜಿಯಿಂದ ಹುಟ್ಟಿದ ಇಬ್ಬರು ತಮ್ಮಂದಿರು ಮತ್ತು ಒಬ್ಬ ತಂಗಿ ಇದ್ದರು. ಈ ಆರು ಮಂದಿ ಮಕ್ಕಳಲ್ಲಿ ಎಲ್ಲರ ಅನಾಧರಣೆಗೆ ತುತ್ತಾಗಿ ಬೆಳೆದವರು ನಮ್ಮಪ್ಪನಂತೆ. ಇದೆಲ್ಲಾ ಅಂತೆ-ಕಂತೆಗಳ ಸಂತೆಯಾದರೂ ಆಸ್ತಿ ಹಂಚಿಕೆಯ ವಿಷಯದಲ್ಲಿ ಅಪ್ಪನಿಗೆ ಕೊನೆಯ ಆಯ್ಕೆ ಸಿಕ್ಕಿದ್ದು ಮಾತ್ರ ನಮ್ಮ ಗಮನಕ್ಕೂ ಬಂದಿತ್ತು.

ಅಣ್ಣ-ತಮ್ಮಂದಿರ ಮಧ್ಯೆ ಆಸ್ತಿ ಪಾಲು ಮಾಡುವ ಊರ ಪ್ರಮುಖರು ಯಾರಿಗೂ ಅನ್ಯಾಯವಾಗದಂತೆ ಸಮ ಪಾಲು ಮಾಡುತ್ತಾರೆ. ಪಾಲನ್ನು ಆಯ್ದುಕೊಳ್ಳುವ ಮೊದಲ ಅವಕಾಶ ಅತೀ ಕಿರಿಯರಿಗೆ ಹೋಗುತ್ತದೆ. ಹಾಗೆ ಎಲ್ಲರೂ ಬಿಟ್ಟು ಉಳಿದ ಕಲ್ಲು ಮುಳ್ಳುಗಳಿಂದ ಕೂಡಿದ ಜಾಗ ಮತ್ತು ಕೊಳೆ ರೋಗದ ಹಾಳು ತೋಟ ನಮ್ಮಪ್ಪನ ಪಾಲಿಗೆ ಬಂದಿತ್ತು. ಆ ವರ್ಷ ನಮಗೆ ಸಿಕ್ಕಿದ ಅಡಿಕೆ ಒಂದು ಕ್ವಿಂಟಾಲ್ ಮಾತ್ರ. ಆದರೆ ಫಲವತ್ತಾದ ಕಂಬಳದ ಗದ್ದೆ ಆ ಪಾಲಿನಲ್ಲಿತ್ತು.

ನಾನು ಮತ್ತು ನನ್ನಣ್ಣ ದಯಾನಂದ ನಮ್ಮ ಆದಿ ಮನೆ ಕಟ್ಟೆಮನೆಯಲ್ಲೇ ಜನಿಸಿದ್ದೆವು. ಅದು ತುಂಬಾ ವಿಸ್ತಾರವಾದ ಮನೆ. ಹತ್ತಾರು ಕೊಟಡಿಗಳಿದ್ದವು. ಒಟ್ಟು ಕುಟುಂಬವಾದ ಕಾರಣ ಪ್ರತಿ ದಂಪತಿಗೂ ಪ್ರತ್ಯೇಕವಾದ ಕೊಟಡಿಗಳು. ಆಸ್ತಿ ಹಂಚಿಕೆಯಾದ ಮೇಲೆ ಒಬ್ಬೊಬ್ಬರಾಗಿ ಆ ಮನೆಯಿಂದ ಹೊರನಡೆದರು. ಆದರೆ ನಮಗೆ ಬೇರೆ ಮನೆಯಿರಲಿಲ್ಲ.

ಆದಿಮನೆಯನ್ನು ನಾವೆಲ್ಲಾ ಇಂದಿಗೂ ದೊಡ್ಡಮನೆ ಎಂದೇ ಕರೆಯುತ್ತೇವೆ. ಚಿತ್ರ ಚಿತ್ತಾರದ ಗೋದಿ ಕಂಬಗಳಿರುವ ಪಡಸಾಲೆ ಆ ಮನೆಯ ವಿಶೇಷ ಆಕರ್ಷಣೆ. ಇಂತಹದೇ ಇನ್ನೊಂದು ಮನೆ ಆ ಊರಲ್ಲಿದೆ. ಅದು ಕೂಜುಗೋಡು ಮನೆ. ಒಂದು ತಿಂಗಳ ಹಿಂದೆ ನಿರ್ದೇಶಕ ಪಿ. ಶೇಷಾದ್ರಿಯವರು ಇದೇ ಮನೆಗಳಲ್ಲಿ ತಮ್ಮ ಹೊಸ ಚಿತ್ರ ’ಬೆಟ್ಟದ ಜೀವ’ ದ ಚಿತ್ರೀಕರಣ ಮಾಡಿದ್ದರು.
More

%d bloggers like this: