Wow…!!

ಮತ್ತೆ ಅಂಕಿತ …

ಜಯಶ್ರೀ ಕಾಲಂ: ಹಾಯ್ ಈ ಟಿ ವಿ

ಹತ್ತು ವರ್ಷ… ! ಸಾಮಾನ್ಯವಾಗಿ ಕೆಲಸ ಮಾಡುವ ಸ್ಥಳದ ವಿಷಯಕ್ಕೆ ಬಂದಾಗ– ಅಲ್ಲಿ ಹತ್ತು ವರ್ಷ ಮಣ್ಣು ಹೊತ್ತಿದ್ದೀನಿ ಅಂತಾರೆ ತಿಳಿದೋರು. ಅವರು ಕೆಲಸ ಮಾಡಿದ ಜಾಗದ ಬಗ್ಗೆ ಅಪಾರವಾದ ಹೆಮ್ಮೆಯಿಂದ ಹೇಳಿಕೊಳ್ಳುವ ಪರಿ ಅದು .ಅವರು ಹತ್ತು ವರ್ಷ ಮಣ್ಣು ಹೊತ್ತಿದ್ರೆ ಅವರನ್ನು ಅಷ್ಟು ವರ್ಷಗಳ ಕಾಲ ಪಾಪದ ಸಹೋದ್ಯೋಗಿಗಳು ಸಹಿಸಿಕೊಂಡಿದ್ದಾರಲ್ಲ ಎನ್ನುವ ಸಣ್ಣ ಎಳೆಯ ಕೀಟಲೆ ನಮ್ಮಿಂದ ಬರ್ತಾನೆ ಇರುತ್ತೆ :-) ನಾವು ತಿಳಿದವರು ಅಲ್ವೆ ಅಲ್ಲ :-) .

ಹೀಗೆ ಮಾತನ್ನು ಹೇಗೆ ಬೇಕಾದ್ರೂ ತಿರುಚಿ ಹೇಳಬಹುದು. ಆದ್ರೆ ವಾಹಿನಿಯೊಂದರ ಹತ್ತನೇ ವರ್ಷದ ಜನ್ಮದಿನದ ಬಗ್ಗೆ ಅಷ್ಟೆಲ್ಲ ಹಗುರವಾಗಿ ಮಾತನಾಡುವಂತಿಲ್ಲ. ಸಣ್ಣ ತೊರೆಯಾಗಿ ಕನ್ನಡಿಗರ ಮನದಂಗಳಕ್ಕೆ ಬಂದು ಈಗ ಮಹಾನದಿಯಾಗಿರುವ ಈಟೀವಿ ಕನ್ನಡ ವಾಹಿನಿಗೆ ಈಗ ಹತ್ತು ವರ್ಷ. ವಾವ್! ನಿಜವಾಗಿಯೂ ಇದು ಸಾಮಾನ್ಯ ಸಂಗತಿಯಂತೂ ಅಲ್ಲವೇ ಅಲ್ಲ. ಆರಂಭ ಕಾಲದಿಂದಲೂ ಈ ಟೀವಿ ತೆಲುಗು ವೀಕ್ಷಿಸುತ್ತಾ ಬಂದ ಕನ್ನಡಿಗರಿಗೆ ಈಟೀವಿ ಕನ್ನಡ ಬಂದಾಗ ಸಖತ್ ಖುಷಿಯಾಗಿದ್ದಂತೂ ಸತ್ಯ.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಹಾಡ ಬನ್ನಿ ಗೀತೆಯ …

ಅದು ಕೊಳಲ ಹಾಡು..

ನ್ಯಾಷನಲ್  ಜಿಯಾಗ್ರಫಿಕ್ ಏರ್ಪಡಿಸಿದ್ದ ಛಾಯಾಚಿತ್ರ ಸ್ಪರ್ಧೆಯಲ್ಲಿ ಗಮನ ಸೆಳೆದ ಫೋಟೋ ಇಲ್ಲಿದೆ.

ಬಾಲಿಯ ತೆಂಗನಾನ್ ಗ್ರಾಮದಲ್ಲಿ ತೆಗೆದ ಚಿತ್ರ ಇದು

‘ಬೀದಿ ಮಡೆ ಸ್ನಾನ’ ಅಂತಾನೂ ಒಂದಿದೆ..

ಇದು ‘ಜುಗಾರಿ ಕ್ರಾಸ್’ ಅಂಕಣ. ಚರ್ಚೆ, ವಿಚಾರ ಮಥನ ಇಲ್ಲಿನ ಮುಖ್ಯ ಉದ್ಧೇಶ. ನಾ ದಿವಾಕರ್ ಅವರು ಬರೆದ ‘ಮಡೆ ಸ್ನಾನ’ದ ಬಗೆಗಿನ ಲೇಖನ ಇಲ್ಲಿ ಪ್ರಕಟವಾಗಿತ್ತು. ಆ ಲೇಖನ ಇಲ್ಲಿದೆ. ಇದಕ್ಕೆ ಪುರುಷೋತ್ತಮ ಬಿಳಿಮಲೆ ಪ್ರತಿಕ್ರಿಯೆ ನೀಡಿದ್ದಾರೆ. ಅದು ಇಲ್ಲಿದೆ. ಜಿ ಎನ್ ಅಶೋಕ ವರ್ಧನ ಅವರು ನೀಡಿದ ಪ್ರತಿಕ್ರಿಯೆ ಇಲ್ಲಿದೆ.

ಈ ಚರ್ಚೆಯನ್ನು ಇನ್ನಷ್ಟು ವಿಚಿತ್ರ ಮಡೆ ಸ್ನಾನಗಳ ಮೂಲಕ ಉಷಾ ಕಟ್ಟೇಮನೆ ಇಲ್ಲಿ ಚರ್ಚಿಸಿದ್ದಾರೆ. ಬನ್ನಿ ಚರ್ಚೆಯಲ್ಲಿ ನೀವೂ ಭಾಗವಹಿಸಿ

**

ಉಷಾ ಕಟ್ಟೇಮನೆ

ದೇವಸ್ಥಾನದ ಒಳಗೆ ಬ್ರಾಹ್ಮಣರು ಉಂಡೆದ್ದ ಎಲೆಗಳ ಮೇಲೆ ಹರಕೆ ಹೊತ್ತ ಭಕ್ತರು ಉರುಳು ಸೇವೆ ನಡೆಸುವುದರ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ.

ಅಲ್ಲಿ ’ಬೀದಿ ಮಡೆ ಸ್ನಾನ’ವೆಂಬ ಇನ್ನೊಂದು ಪದ್ದತಿ ಇದೆ.ಬ್ರಾಹ್ಮಿ ಮುಹೂರ್ತದಲ್ಲಿ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿ ಅಲ್ಲಿಂದಲೇ ಬೀದಿಯಲ್ಲಿ ಉರುಳುತ್ತಾ ಎರಡು ಮೈಲ್ ದೂರದ ದೇವಸ್ಥಾನವನ್ನು ತಲುಪಬೇಕು. ಒರಟು ಬೀದಿಯಿಂದ ದೇಹಕ್ಕೆ ತರಚು ಗಾಯಗಳಾಗಿ, ತೊಟ್ಟ ಬಟ್ಟೆ ಅಸ್ತವ್ಯಸ್ತವಾದರೂ ಅವರ ಭಕ್ತಿಪರವಶತೆಯನ್ನು ನಾವು ಪ್ರಶ್ನಿಸುವಂತಿಲ್ಲ.

ತುಳು ಭಾಷೆಯಲ್ಲಿ ’ಮಡೆ’ ಅಂದರೆ ಎಂಜಲು. ಅಲ್ಲಿ ದೇವಸ್ಥಾನದ ಒಳಗೆ ನಡೆಯುವುದು ಬ್ರಾಹ್ಮಣರ ಊಟದ ಉಚ್ಛಿಷ್ಟ’ಮಡೆ ಸ್ನಾನ’ ಬೀದಿಯಲ್ಲಿ ನಡೆಯುವುದು ಅದಕ್ಕಿಂತಲೂ ಕಷ್ಟಕರವಾದ ಸಾರ್ವಜನಿಕರ ಸರ್ವ ಉಚ್ಛಿಷ್ಟ ’ಬೀದಿ ಮಡೆಸ್ನಾನ’ .ಅದು ಒಂದೆರಡು ಘಂಟೆಗಳಲ್ಲಿ ನಡೆದು ಹೋಗುತ್ತದೆ.ಇದು ಬಿರುಬಿಸಿಲಿನಲ್ಲಿಯೂ ಮುಂದುವರೆಯುತ್ತದೆ.

ಕುತೂಹಲದ ಸಂಗತಿಯೆಂದರೆ ನನಗೆ ತಿಳಿದಂತೆ ಈ ಮಡೆಸ್ನಾನವೆಂಬುದು ನಾಗರಾಧನೆಗೆ ಪ್ರಸಿದ್ಧವಾದ ತುಳುನಾಡಿನಲ್ಲಿ ಅದರಲ್ಲಿಯೂ ವಿಶೇಷವಾಗಿ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಮಾತ್ರ ನಡೆಯುತ್ತಿದೆ. ಬಹುಶಃ ’ನಿನ್ನ ಹಾಗೆ ನಾನು ಕೂಡಾ ಹೊರಳಾಡುತ್ತಾ ನಿನ್ನ ಸನ್ನಿದಿಗೆ ಬರುತ್ತೇನೆ’ ಎಂಬುದೇ ಈ ಆಚರಣೆಯ ಮೂಲವಿರಬಹುದೇ? ನಾನು ವಿದ್ಯಾರ್ಥಿಯಾಗಿದ್ದಾಗ ಜಾತ್ರೆ ಸಮಯದಲ್ಲಿ ಇದನ್ನು ನೋಡುತ್ತಲೇ ಬಂದಿದ್ದೇನೆ.

ದೇವಸ್ಥಾನದೊಳಗಿನ ಮಡೆಸ್ನಾನವನ್ನು ವಿರೋಧಿಸುವವರು ಬೀದಿ ಮಡೆಸ್ನಾನವನ್ನು ಯಾಕೇ ವಿರೋಧಿಸುವದಿಲ್ಲ? ಬದುಕಿಗೊಂದು ನಂಬಿಕೆ ಬೇಕು. ಆ ನಂಬಿಕೆಯೇ ದೇವರು.ಅದನ್ನು ಮೀರಲೆತ್ನಿಸುವ ಅಲ್ಪಸಂಖ್ಯಾತರು ಒಂದು ತುದಿಯಲ್ಲಿದ್ದರೆ ಬಹುಸಂಖ್ಯಾತರು ಇನ್ನೊಂದು ತುದಿಯಲ್ಲಿದ್ದಾರೆ. ಎಲ್ಲೋ ಒಂದು ಕಡೆ ಸಂದಿಸುತ್ತಾ ಮಾನವೀಯರಾಗಲು ಪ್ರಯತ್ನಿಸಬೇಕು. ’ಲಂಚ ಪಡೆಯುವುದು ಎಷ್ಟು ಅಪರಾಧವೋ ಲಂಚ ನೀಡುವುದು ಕೂಡ ಅಷ್ಟೇ ಅಪರಾಧ’! ಇದೆಲ್ಲಾ ಸಾಮಾಜಿಕ ಹೊಣೆಗಾರಿಕೆಗೆ ಸಂಬಂಧಪಟ್ಟ ವಿಷಯವೇ ಹೊರತು ಒಂದು ಜಾತಿಯ ನಿಂದನೆಗೆ ಸಂಬಂಧಿಸಿದ್ದಲ್ಲ

ಮರೆತದ್ದು; ಅಲ್ಲಿ ’ಮೂಲೆ ಮಡೆಸ್ನಾನ’ ವೆಂಬ ಇನ್ನೊಂದು ಪದ್ದತಿಯೂ ಇದೆ, ದೇವಸ್ಥಾನದ ಮೂಲೆ,ಮೂಲೆಗಳಲ್ಲಿ ಹೊರಳಾಡುವುದೇ ಮೂಲೆ ಮಡೆಸ್ನಾನ. ಇದು ಸ್ವಲ್ಪ ಅನುಕೂಲಕರ ಭಕ್ತಿ!

%d bloggers like this: