ಜೋಗಿ ಬರೆಯುತ್ತಾರೆ: ಪಾಪದ ಹೂವು ಎಂಬ ಪುಣ್ಯಫಲ

-ಜೋಗಿ

ಸಾಹಿತ್ಯ ಮನರಂಜನೆಯ ಹೊಸಿಲನ್ನು ದಾಟಿ ಹೊರಗೆ ಅಡಿಯಿಡುವುದಿಲ್ಲ ಎಂದು ನಮ್ಮನ್ನು ನಂಬಿಸುವಂತೆ ಅನೇಕ ವರ್ಷಗಳ ಕಾಲ ಬರೆದವರು, ಬಹು ಮುಖ್ಯವಾದ ವಿಚಾರವೊಂದನ್ನು ಮರೆತುಬಿಟ್ಟಿದ್ದರು ಎಂದು ನಮಗೆ ಈಗೀಗ ಅನ್ನಿಸತೊಡಗಿದೆ. ಯಾವ ಬರಹಗಾರ ತನ್ನ ಪ್ರಜ್ವಲಿಸುವ ಚಿಂತನೆಯಿಂದ ಕೊಳದ ನೀರನ್ನು ಕದಡುವುದಿಲ್ಲವೋ ಅವನು ಸಮೂಹದಿಂದ ದೂರವೇ ಉಳಿದುಬಿಡುತ್ತಾನೆ. ಹಳಸಿಹೋದ ಅನುಭವ, ಪುನರುಜ್ಜೀವನ, ಉದ್ಧಾರದ ಆಶೆ ಮತ್ತು ಲೌಕಿಕ ಆಶಯಗಳನ್ನು ಒಬ್ಬ ಲೇಖಕನತ್ತ ಅಸಡ್ಡೆ ಬೆಳೆಯುವಂತೆ ಮಾಡುತ್ತವೆ. ಬರಹಗಾರ ವಂದಿಮಾಗಧನಂತೆ, ವರದಿಗಾರನಂತೆ, ಸವಕಲು ಮಾತುಗಳನ್ನು ಜೋಳಿಗೆಯಲ್ಲಿಟ್ಟುಕೊಂಡು ಅದನ್ನೇ ಹಂಚಲು ಹೊರಟಾಗ ಕವಿತೆ ನಿಸ್ಸಹಾಯಕ ಅನ್ನಿಸಿಕೊಳ್ಳುತ್ತದೆ.

ಖಾಸಗಿ ಅನುಭವಗಳು ಮತ್ತು ವ್ಯಕ್ತಿ ಏಕಾಂತದಲ್ಲಿ ಅನುಭವಿಸುವ ತೊಳಲಾಟಗಳು ಸಾಹಿತ್ಯ ಅಲ್ಲ ಎಂಬ ನಂಬಿಕೆ ನಮ್ಮಲ್ಲಿ ಮೊದಲಿನಿಂದಲೂ ಇದೆ. ಹೀಗಾಗಿ ನಮಗೆ ದಟ್ಟವಾಗಿ ಅನ್ನಿಸಿದ್ದನ್ನು ದಾಖಲಿಸಲು ನಾವು ಹಿಂಜರಿಯುತ್ತೇವೆ. ಕವಿಯನ್ನೂ ಅವನ ಅನುಭವವನ್ನೂ ಅವನ ಗ್ರಹಿಕೆಯನ್ನೂ ಮೀರಿದ್ದು ನಿಜವಾದ ಸಾಹಿತ್ಯ. ಹೀಗಾಗಿ ಕವಿಗಿಂತ ದೊಡ್ಡವನು ಮತ್ತೊಬ್ಬನಿದ್ದಾನೆ. ಅವನು ಕವಿ, ಇವನು ಬರೀ ಲಿಪಿಕಾರ. ಅವನು ಬರೆಸಿದುದನ್ನು ಇವನು ಬರೆಯುತ್ತಾನೆ ಅಷ್ಟೇ ಎಂದು ಅನಾದಿಕಾಲದಿಂದ ನಂಬಿಕೊಂಡು ಬಂದವರನ್ನು ನಾವು ಕಾಣಬಹುದು.

ಯುರೋಪಿನಲ್ಲಿ ಅಂಥದ್ದೊಂದು ಭಾವನೆ ಇರಲಿಲ್ಲವೆಂದೇ ಹೇಳಬೇಕು. ಅಲ್ಲಿಯ ಬಹುತೇಕ ಕವಿಗಳು ತಮ್ಮ ಅಂತರಂಗದಲ್ಲಿ ಹೊಳೆದದ್ದನ್ನು ತಮ್ಮ ಬದುಕಿನ ತುರ್ತು ಎಂಬಷ್ಟು ಗಾಢವಾಗಿ ಹೇಳತೊಡಗಿದರು. ಅದು ಕ್ರಮೇಣ ಸಾಮಾಜಿಕ ತುರ್ತೂ ಆಗತೊಡಗಿತು. ಪ್ರಭುತ್ವದ ವಿರುದ್ಧ ಸಿಡಿದೆದ್ದು ನಿಂತವರು ಖಾಸಗಿ ಬದುಕಿನಲ್ಲಿ ಕಷ್ಟನಷ್ಟ ಅನುಭವಿಸಿದರು. ಅನೇಕರು ಬಂಧನಕ್ಕೆ ಒಳಗಾದರು. ಮತ್ತೊಂದಷ್ಟು ಮಂದಿ ದೇಶಾಂತರ ಹೋಗಿ ಅಜ್ಞಾತರಾಗಿ ಬದುಕಬೇಕಾಯಿತು.

More

ALTlab photography residency

CALL FOR APPLICATIONS

Goa Center for Alternative photography (Goa-CAP) with the support of India Foundation for the Arts (IFA) is inviting applications from Indian artists for the “ALTlab photography residency” for a two month programme in Goa.

ALTlab photography residency

This residency is aimed at artists practicing photography in both film
and digital formats, and looking for alternative ways of image
creation and printing processes, by using a dark room and silver to
create images.

The ALTlab photography residency is equipped with a darkroom for experimentation with black and white film. The state-of-the art lab that supports pinhole, daguerreotype, Wet plate Collodion, Albumen print and Cyanotype processes. Apart from this, a variety of cameras are available, including 35mm SLR film, medium format, large format
and a 4×5 ft walk through camera obscura. The residency will also host workshops to nurture concepts in alternative photography, and create a discursive environment in which theory, hands-on experience and technical solutions are investigated.
More

ಬೋಧಿ ಟ್ರಸ್ಟ್: ಹತ್ತು ವರ್ಷ…

ದೇವ ಸಾಹಿತ್ಯ

ಬೋಧಿ ಟ್ರಸ್ಟ್ ಪ್ರಾರಂಭವಾಗಿ ಹತ್ತು ವರ್ಷವಾಯಿತು. ಈ ಚಿತ್ರಗಳು ಆಗಸ್ಟ್ 6, 2000ರಂದು ಬಿ. ವಿ. ಕಾರಂತರು ಕಲ್ಮಡ್ಕದಲ್ಲಿ ಮಾಡಿದ ಉದ್ಘಾಟನಾ ಭಾಷಣದವುಗಳು. ಮೊದಲನೆಯ ಚಿತ್ರ ನಾನು ಮಾಡುತ್ತಿರುವ ಸ್ವಾಗತ ಭಾಷಣ ಮತ್ತು ಕೂತಿರುವ ಬಿ. ವಿ. ಕಾರಂತರು. ಅವರಿಗೆ ಆಗ ತಾನೇ ಕ್ಯಾನ್ಸರ್ ಇದೆಯೆಂದು ಪತ್ತೆಯಾಗಿತ್ತು. ಅದನ್ನು ತೋರಿಸಿಕೊಡದೆ ಮಾತಾಡಿದರು.

ಈ  ಚಿತ್ರದಲ್ಲಿ ಕೆಂಪು ಅಂಗಿ ಹಾಕಿ ಕ್ಯಾಮೆರಾ ಹಿಡಿದು ಕೂತವರು ಉಡುವೆಕೋಡಿ ರಾಧಾಕೃಷ್ಣ. ಅಲ್ಲೇ ಸ್ವಲ್ಪ ಹಿಂಬದಿಯಲ್ಲಿರುವವರು–ಎಡಗೈಯ್ಯನ್ನು ಬಾಯಿಯ ಮೇಲೆ ಇಟ್ಟುಕೊಂಡು ಕೂತ ಹುಡುಗ–ಅವರ ಅಣ್ಣ–ಈಗ ದಿವಂಗತ– ಉಡುವೆಕೋಡಿ ಶಿವಶಂಕರ. ಒಂದು ಒಳ್ಳೆಯ ಪದ್ಯ ಬರೆದಿದ್ದ. ಆಗ ನನಗಿನ್ನೂ ಮನೆ ಆಗಿರಲಿಲ್ಲ. ಹೀಗಾಗಿ ನನ್ನ ಹತ್ತಿರದ ಬಂಧುವಾದ ಶಿವಶಂಕರನ ಮನೆಯಲ್ಲಿ ಬಿ. ವಿ. ಕಾರಂತರಿಗೆ ವ್ಯವಸ್ಥೆ ಮಾಡಲಾಗಿತ್ತು. ಅವತ್ತು ಕಾರಂತರು ಬಯಸಿ ತಂಬಳಿ ಮಾಡಿಸಿಕೊಂಡಿದ್ದರು. ಎರಡನೆಯ ಸಾಲಿನಲ್ಲಿ ಎಡಬದಿಗೆ ಮೊದಲನೆಯವರಾಗಿ ಮುಖಕ್ಕೆ ಕೈ ಹಿಡಿದು ಕೂತವರು ಟಿ. ಜಿ. ಮುಡೂರರು. ಅವರ ಹಿಂದೆ ಇರುವವರು ಕೆರೆಕ್ಕೋಡಿ ಗಣಪತಿ ಭಟ್ಟರು.

ಇವರೇ ಸುಮಾರು ಅರುವತ್ತು ವರ್ಷಗಳ ಹಿಂದೆ ಕಲ್ಮಡ್ಕದಲ್ಲಿ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆ ಪ್ರಾರಂಭಿಸಿ ಇಲ್ಲಿ ಒಂದು ಬದಲಾವಣೆ ತಂದವರು. ಯರ್ಮುಂಜ ರಾಮಚಂದ್ರರ ಪ್ರಥಮ ಕಥಾಸಂಗ್ರಹ ಚಿಕಿತ್ಸೆಯ ಹುಚ್ಚು ಮತ್ತು ಇತರ ಕಥೆಗಳು (1955) ಪ್ರಕಟಿಸಿದವರೂ ಇವರೇ. ಗಣಪತಿ ಭಟ್ಟರು ಈಗ ದಿವಂಗತರು. ನನಗೆ ಹೈಸ್ಕೂಲಿನಲ್ಲಿ ಅಧ್ಯಾಪಕರೂ ಆಗಿದ್ದ ಮುಡೂರರು ಈಗ ಪಂಜದಲ್ಲಿ ನೆಲೆಸಿದ್ದಾರೆ. ಕವಿ. ಒಳ್ಳೆಯ ಕವಿ. ಕೆಲವು ಒಳ್ಳೆಯ ಕತೆ ಬರೆದಿದ್ದಾರೆ. ಹೊನ್ನಮ್ಮನ ಕೆರೆ ಎಂಬ ಹೆಸರಿನ ಒಂದು ಒಳ್ಳೆಯ ಜಾನಪದ ಕವನವನ್ನು ಮಡಿಕೇರಿಯಲ್ಲಿ ಜಾನಪದ ಕಾವ್ಯ ಸಂಗ್ರಹ ವ್ಯಾಪಕವಾಗಿ ಪ್ರಾರಂಭವಾಗುವುದಕ್ಕೆ ಮೊದಲೇ 1950ರ ದಶಕದಲ್ಲೇ ಸಂಗ್ರಹಿಸಿದ್ದಾರೆ.

More

ಕರುನಾಡಿನಲ್ಲಿ ‘ಎಂಡಾಸುರ’…

-ಗಾಣಧಾಳು ಶ್ರೀ ಕಂಠ

ಪಸೆ

ಎಂಡೋಸಲ್ಫಾನ್ ಎಂಬ ಕೀಟನಾಶಕದ ‘ಬೀಜ’ ನಾಡಿನ ಮೂಲೆ ಮೂಲೆಗಳಲ್ಲಿ ಮೊಳೆಯುತ್ತಿದೆ. ಗೇರು, ಭತ್ತ, ಕಾಫಿ, ತೊಗರಿ ತರಕಾರಿಯಲ್ಲೂ ಎಂಡೋ ವಿಷದ ಪಳೆಯುಳಿಕೆಗಳಿವೆ. ಶೀಘ್ರ ಎಚ್ಚೆತ್ತುಕೊಳ್ಳದಿದ್ದರೆ ಕೊಕ್ಕಡ, ಪಟ್ರಮೆಯಂಥ ದುರಂತಗಳು ಮತ್ತೆ ಮರುಕಳಿಸಬಹುದು.

ಬೆಳಗ್ಗೆಯೆದ್ದರೆ, ಸಂಜೆಯಾದರೆ ಕಾಫಿ-ಚಹಾ ಕುಡಿಯುತ್ತೀವಲ್ಲ; ಚಿತ್ರಾನ್ನ, ಪುಳಿಯೋಗರೆ, ಪಲಾವ್ ಎಂದು ಸೋನಾ ಮಸೂರಿ ಅಕ್ಕಿಯ ಉಣ್ಣುತ್ತೀವಲ್ಲ; ಊಟದಲ್ಲಿ ತೊಗರಿಬೇಳೆ ತೊವ್ವೆಯನ್ನು, ಹೀರೆಕಾಯಿ ಖಾದ್ಯವನ್ನು ಚಪ್ಪರಿಸುತ್ತೇವಲ್ಲ; ಶ್ಯಾವಿಗೆ ಪಾಯಸದಲ್ಲಿರುವ ಗೋಡಂಬಿಯನ್ನು ಪೌಷ್ಟಿಕ ಎಂದು ತಿನ್ನುತ್ತೇವಲ್ಲ- ಹಾಂ, ಇವೆಲ್ಲವೂ ವಿಷಮಯ! -ಕಾರಣ, ‘ಎಂಡೋಸಲ್ಫಾನ್’ನಂತಹ ಕೀಟನಾಶಕಗಳು!

ಪಕ್ಕದ ಕೇರಳದಲ್ಲಿ ಇದೀಗ ಎಂಡೋಸಲ್ಫಾನ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ನಿಷೇಧವಿದ್ದರೂ ವ್ಯಾಪಕವಾಗಿ ಬಳಕೆಯಾಗುತ್ತಿರುವ ಈ ಕೀಟನಾಶಕವನ್ನು ದೇಶದಿಂದಲೇ ಹೊರಗಟ್ಟುವಂತೆ ವಿವಿಧ ಕೃಷಿ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ, ಪಟ್ರಮೆ ಮತ್ತು ನಿಡ್ಲೆ ಗ್ರಾಮಗಳಲ್ಲೂ ಎಂಡೋಸಲ್ಫಾನ್ ಉಪಟಳವಿದೆ. ಅಲ್ಲಿನ ಹಲವು ಕುಟುಂಬಗಳು ವಿಷದ ಭಾದೆ ಅನುಭವಿಸುತ್ತಿವೆ. ಗೇರು ತೋಟಗಳ ಮೇಲೆ ನಡೆದ ಎಂಡೋಸಲ್ಫಾನ್ ಅಭಿಷೇಕದಿಂದ 200ಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ರೋಗಗ್ರಸ್ತರಾಗಿದ್ದಾರೆ. ಆದರೆ ಈ ಬಗ್ಗೆ ಮಾತನಾಡುವವರೇ ಕಡಿಮೆ.

More

ಪ್ರತೀ ಭಾನುವಾರ ಸದಾರಮೆ

ಈ ನೀಲು..

ಅಶೋಕ್ ಶೆಟ್ಟರ್

ಶಾಲ್ಮಲಾ

ಈ ನೀಲು,
ಕಾವ್ಯಕ್ಷೇತ್ರದ ಈ ಬ್ಲ್ಯೂ,
ಫಿಲ್ಮೀ ಹುಡುಗಿಯರಿಗೆ ಮಿಗಿಲಾದ ನಿಗೂಢೆ
ಹಲವರ ಕಾಡುವ ಕನ್ಯಾಮಣಿ
ಆಹಾ ಏನಾಕೆಯ ಕಾವ್ಯಸರಣಿ!

ಬೇರಾರೂ ಕಾಣದ್ದನ್ನು ಕಾಣುತ್ತಾಳೆ
ಕಂಡದ್ದು ಕಂಡ ಹಾಗೆ ಹೇಳುತ್ತಾಳೆ
ಎಲ್ಲೆಡೆಯಿಂದ ಬರುವ ಸುದ್ದಿ ಶಬ್ದ ಲಯ ಆಟ ಹೂಟಗಳಿಗೆ
ಕಿವಿ ತೆರೆದು ಕೂತಿರುತ್ತಾಳೆ
ಮೂಡ್ ಬಂದರೆ ಒಮ್ಮೊಮ್ಮೆ
ಪ್ರೇಮ,ಕಾಮ,ಕಾವ್ಯದ ಅ ಆ ಇ ಈ ಹೇಳತೊಡಗುತ್ತಾಳೆ.

ಗಂಡನ ಸೋಮಾರಿತನದ ಬಗ್ಗೆ ಗೊಣಗದ
ಮಕ್ಕಳ ಸ್ಕೂಲು, ಫೀಸು, ಪ್ರೊಗ್ರೇಸ್ ರಿಪೋರ್ಟ್ ಇತ್ಯಾದಿ ಕೊರೆಯದ
ಏರುತ್ತಿರುವ ಬೆಲೆ, ಗ್ಯಾಸ್ ಸಿಲಿಂಡರ್ ವಿಳಂಬ
ಕಾಂಪೌಂಡಿನೊಳಗೆ ಹಂದಿ ನುಗ್ಗುವದೇ ಮೊದಲಾದ
ಲೌಕಿಕದ ಮಾತಾಡದ
ಈ ಪಾರಮಾರ್ಥೆ ಬರೆಯದಿದ್ದರೆ
ಕೊರಡು ಕೊನರದಿರುವದೇ ಬರಡು ಚಿಗುರದಿರುವದೇ
ಕ್ರಾಂತಿ ಘಟಿಸದಿರುವದೇ.. ಅರಿಯೆ

ಆದರೆ
ಹುಲ್ಲುಗರಿಕೆ ಹೂವು ಗಿಡ ಮರ ಬಳ್ಳಿಗಳ ಔನ್ನತ್ಯಕ್ಕೇರಿಸುವ
ದಿನನಿತ್ಯದ ನೋಟಗಳಿಗಸಂಖ್ಯ ಅರ್ಥ ಹೊಮ್ಮಿಸುವ
ಗರತಿಯರಿಗೆ ಕಚಗುಳಿ ಇಡುವ
ಹುಡುಗಿಯ ತುಂಟತನ ತತ್ವಜ್ನಾನಿಯ ಗಾಂಭೀರ್ಯ ಮೆರೆವ
ಮಾನವಸ್ವಭಾವದ ಆಳಕ್ಕೆ ಇಳಿವ ಈ ರಮಣಿ ಬರೆದರೆ
ಕಪ್ಪುಮಸಿಯ ಬಾಟಲ್ ನಲ್ಲಿ ಕಟ್ಟಿರುವೆಯ ಅದ್ದಿ
ಬಿಳಿಯ ಹಾಳೆಯ ಮೇಲೆ ಓಡಿಸಿದಂತಿರುತ್ತದೆ.

ಪಾಳೆಗಾರಿಕೆ ಯಜಮಾನಿಕೆಗಳ ದಿಟ್ಟತನದ ಬಗ್ಗೆ
ಈ ಕೋಮಲೆ ಇತ್ತೀಚೆಗೆ ಮಾತಾಡತೊಡಗಿದ ಧಿಮಾಕಿಗೆ
ಅಸುಖ ಪಟ್ಟವರ ಮಾತು ಬಿಡಿ
ಅಕ್ಷರವಿಟ್ಟಳುಪದೊಂದಗ್ಗಳಿಕೆಯೇನೂ ಇಲ್ಲದ ಈಕೆ
ಅಕ್ಷರಗಳ ಹೊಡೆದುಹಾಕುವ ಚಂದಕ್ಕೇ ಮಾರು ಹೋಗಿದ್ದಾನೆ ಇಲ್ಲೊಬ್ಬ
ಹೀಗೆ ಕಚಗುಳಿ ಇಟ್ಟಂತೆ ಕವಿತೆ ಬರೆಯುವ ಈಕೆ ಪ್ರತಿಕ್ರಾಂತಿಕಾರಿಣಿಯಾದರೂ ಸರಿಯೇ
ನಾನವಳ ವರಿಸುವೆ ಎನ್ನುತ್ತಾನೆ ಇನ್ನೊಬ್ಬ

ಇನ್ನುಳಿದಂತೆ ಇವಳನ್ನು ಹಲವಾರು ಡ್ರೆಸ್ ಗಳಲ್ಲಿ ಕಲ್ಪಿಸಿಕೊಂಡಿರುವ
ಕನ್ನಡದ ತರುಣ ಕವಿಗಣ ಈಗ ಇವಳ ಅಡ್ರೆಸ್ ಅಷ್ಟು ಸಿಕ್ಕರೆ ಸಾಕು
ಇವಳಾರಾಕೆ ಇವಳಾರಾಕೆ ಇವಳಾರಾಕೆ ಎಂದೆಣಿಸದೇ
ಈಕೆ ನಮ್ಮಾಕೆ ಈಕೆ ನಮ್ಮಾಕೆ ಈಕೆ ನಮ್ಮಾಕೆ ಎಂದೆಣಿಸಿ
ಪ್ರೇಮಪತ್ರಗಳ ಮಹಾಪೂರವನ್ನೇ ಹರಿಸಿ
“ಚಲ್ ಮೇರೆ ನೀಲೂ” ಎಂದು ಹೆಗಲ ಮೇಲೆ ಕೈಹಾಕಿ ಹೊರಡಲು ಸಿದ್ಧವಿದೆ

“ಈ ಹೆಣ್ಣುಗಳೇ ಹೀಗೆ”, “ನಾವು ಹುಡುಗಿಯರೇ ಹೀಗೆ”, “ಅತ್ತು ಬಿಡೇ ಗೆಳತಿ”
ಎಂದು ಸೊರಸೊರಗುಟ್ಟುವ ಕವಯಿತ್ರಿಸ್ತೋಮದ ನಡುವೆ
ನೀಲುನಂಥ ಹತ್ತಾರು ಪಗದ್ಯ ಅಥವ ಗಪದ್ಯ ಪ್ರತಿಭೆಗಳೇನಾದರೂ ಪುಟಿದೆದ್ದರೆ
ನಾನು ಗಂಡಸರ ಕಾವ್ಯ ಓದುವದನ್ನೂ ಬಿಡಬೇಕೆಂದಿದ್ದೇನೆ…. ….!!

ಈ ಸಿನೆಮಾ ನೋಡಿ

ಭೇಟಿ ಕೊಡಿ-ಮೀಡಿಯಾ ಮೈಂಡ್

ಮಂಜುನಾಥ್ ಚಾಂದ್ ಬರೆವ ‘ಇವರು ಮೂರ್ತಿ’

-ಮಂಜುನಾಥ್ ಚಾಂದ್

(photo by : ci so)

ಇವರು ಮೂರ್ತಿ 9

ಕಲರ್ ಕಾಲ

‘ಕನೀಜ್’ ನಾನು ಮಾಡಿದ ಮೊದಲ ಕಲರ್ ಫಿಲ್ಮ್. ಗುರುದತ್ ಈ ಫಿಲ್ಮ್ ಅನ್ನು ಕಲರ್ ನಲ್ಲಿ ಮಾಡೋಣ ಅಂತ ಹೊರಟ. ಅದನ್ನು ಪೂರ್ತಿ ಮಾಡಲಿಕ್ಕೆ ಅವನಿಂದ ಸಾಧ್ಯವಾಗಲಿಲ್ಲ. ಇಷ್ಟ ಆಗಲಿಲ್ಲ ಅವನಿಗೆ. ಅರ್ಧಕ್ಕೆ ಬಿಟ್ಟುಬಿಟ್ಟ. ಆಮೇಲೆ ಕೈಗೆತ್ತಿಕೊಂಡಿದ್ದು ‘ಚೌದುನಿಕಾ ಚಾಂದ್’. ಈ ಫಿಲ್ಮ್ ಸೂಪರ್ ಹಿಟ್ ಚಿತ್ರ ಆಗೋಯ್ತು. ಆಗಿನ ಕಾಲದಲ್ಲಿ ಸಿಲ್ವರ್ ಜುಬಿಲಿ ಆಯ್ತು. ಫಿಲ್ಮ್ ಡಿಸ್ಟ್ರಿಬ್ಯುಟರ್ ಎಲ್ಲ ಬಂದು ಇನ್ನೊಂದಿಷ್ಟು ಚಿತ್ರ ಮಾಡಿ ಅಂತ ಕೇಳ್ತಾ ಇದ್ರು. ಆವಾಗೊಂದು ಕ್ರೇಜ್ ಬಂದಿತ್ತು; ಒಂದೋ ಎರಡೋ ಸಾಂಗ್ ಕಲರ್ ನಲ್ಲಿ ಮಾಡುವುದು. ಪೂರ್ತಿ ಫಿಲ್ಮ್ ಕಲರ್ ನಲ್ಲಿ ಮಾಡುವುದು ಕಷ್ಟ ಇತ್ತು ಬಿಡಿ. ಪ್ರೊಡಕ್ಷನ್ ತುಂಬಾ ದುಬಾರಿ ಇತ್ತು. ಹೀಗೆ ಕೆಲವು ಫಿಲ್ಮ್ ಸಾಂಗ್ ಪಿಕ್ಚರೈಸೇಶನ್ ಕಲರ್ ನಲ್ಲಿ ಮಾಡಿಕೊಟ್ಟಿದ್ದೂ ಇದೆ.

ಅಮ್ಮಾ ಅಂದ್ರೆ ಲಾಸ್ಟ್ ವರ್ಡ್!

ಗುರುದತ್ನ ಪರ್ಸನಲ್ ಲೈಫ್ ಹೇಗೋ ಏನೋ ಗೊತ್ತಿಲ್ಲ ನನಗೆ. ಆತ್ಮಹತ್ಯೆ ಮಾಡಿಕೊಳ್ಳೋ ಟೆಂಡೆನ್ಸಿ ಅವನ ಬ್ಲಡ್ನಲ್ಲೇ ಇತ್ತು ಅನಿಸತ್ತೆ. ಗುರುದತ್ ಮಗ ಕೂಡ ಆತ್ಮಹತ್ಯೆ ಮಾಡಿಕೊಂಡ. ಗುರು ತನ್ನ ವೈಯಕ್ತಿಕ ಜೀವನದ ಸಂಗತಿಗಳನ್ನು ಯಾರ ಹತ್ತಿರವೂ ಹೇಳಿಕೊಳ್ಳುತ್ತಿರಲಿಲ್ಲ. He never expressed anything to anybody. ಇನ್ಫ್ಯಾಕ್ಟ್ ಅವರ ವೈಫ್ ಗೀತಾ ದತ್ ಮಾತ್ರ ನನ್ನ ಮನೆಗೆ ಬಂದು ಕೆಲವು ವಿಷಯ ಹೇಳಿಕೊಳ್ತಾ ಇದ್ಲು.

ಆದರೆ, ಅವಳಿಗೆ ನಾನು ಹೇಳ್ತಾ ಇದ್ದೆ; ನೀವು ಒಂದು ವಿಷಯ ಹೇಳು, ನೀನು ಹ್ಯಾಪಿಯಾಗಿದ್ದಿಯೋ ಇಲ್ಲವೋ ಹೇಳು? ಗುರು ನಿನ್ನನ್ನು, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ತಾ ಇದ್ದಾನೋ ಇಲ್ಲವೋ? ಆತ ಮೂರು ಮಕ್ಕಳನ್ನೂ ಚೆನ್ನಾಗಿ ನೋಡಿಕೊಳ್ತಾ ಇದ್ದ. ಎಲ್ಲರನ್ನೂ ಹ್ಯಾಪಿಯಾಗಿ ಇರಿಸಿದ್ದ. ಅದನ್ನು ಬಿಟ್ಟು ಹೊರಗಿನವರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ತಿಯಾ? Forget it. ಅಳೋದು ಎಲ್ಲ ಮಾಡಬೇಡ. ಅಂತ ಹೇಳಿ ಕಳಿಸ್ತಾ ಇದ್ದೆ. ಅವಳೇ ಹೇಳಿದ್ಲು, ಆ ವಿಷಯದಲ್ಲಿ ಗುರುದತ್ ಬಗ್ಗೆ ಯಾವುದೇ ಕಂಪ್ಲೇಂಟ್ ಇಲ್ಲ ಅಂತ.

More

ಮಲೆಗಳಲ್ಲಿ ಮದುಮಗಳು : ತಿಮ್ಮಿ, ಗುತ್ತಿ, ಪೀಂಚಲು, ಐತ, ಚಿನ್ನಮ್ಮ, ಮುಕುಂದಯ್ಯ

ಬಾ ಹುಲಿಕಲ್ ನೆತ್ತಿಗೆ-7

-ಪ್ರೊ. ಶಿವರಾಮಯ್ಯ

ಪಾತ್ರ ವರ್ಗ

ಬಸವಲಿಂಗಯ್ಯನವರು ಮದುಮಗಳು ನಾಟಕಕ್ಕಾಗಿ ರಂಗಾಯಣದ ನುರಿತ 30 ಕಲಾವಿದರೊಂದಿಗೆ ಸುಮಾರು 50 ಜನ ಹೊಸ ಕಲಾವಿದರನ್ನು ನಾಡಿನಾದ್ಯಂತ ಜಾಹೀರಾತು ಕೊಟ್ಟು ಕರೆಸಿದ್ದರು. ರಂಗಾಯಣದ ಕಡೆ ಹೋದಾಗಲೆಲ್ಲ ನನಗೆ ಕುತೂಹಲ. ನಾಟಕದ ಯಾವ ಯಾವ ಪಾತ್ರಕ್ಕೆ ಯಾರು ಫಿಟ್ ಆಗಬಹುದು ಎಂದು ನನ್ನ ಕಣ್ಣು ಅಲ್ಲಿ ತರಬೇತಿಯಲ್ಲಿದ್ದ ಹುಡುಗ-ಹುಡುಗಿಯರಲ್ಲಿ, ಮುಖ್ಯವಾಗಿ ಯಾರು ತಿಮ್ಮಿ, ಗುತ್ತಿ, ಪೀಂಚಲು, ಐತ, ಚಿನ್ನಮ್ಮ, ಮುಕುಂದಯ್ಯ-ಈ ಮುಂತಾದ ಪಾತ್ರಗಳನ್ನು ವಹಿಸಬಲ್ಲರು? ಅವರು ಆ ಪಾತ್ರ, ಇವರು ಈ ಪಾತ್ರ ಮಾಡಿದರೆ ಹೇಗಿರುತ್ತದೆ? ಮುಂತಾಗಿ ಕಲ್ಪಿಸಿಕೊಂಡು ಅನ್ವೇಷಣೆಗೆ ತೊಡಗುತ್ತಿದ್ದೆ.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಇಲ್ಲಿ ಯಾರೂ ಮುಖ್ಯರಲ್ಲ. ಯಾರೂ ಅಮುಖ್ಯರಲ್ಲ ಎಂದು ಕುವೆಂಪು ಹೇಳಿದ್ದರೂ ಸಹ ಭೀರುವಿಗೆ ಭಯಂಕರ ರಸಿಕ ಧೀರಂತೆ ಕಲಾಶಂಕರ ಎಂಬ ಮಾತಿಗೆ ಅಕ್ಷರಶಃ ಪ್ರತಿಮೆಯಾಗಿರುವ ಆ ಹುಲಿಕಲ್ಲು ನೆತ್ತಿಗೆ ಏರಿದವರು ಈ ಮೂರು ಜೋಡಿಗಳು ತಾನೆ? ಮದುವೆಗಿದ್ದ ಅಡ್ಡಿಗಳಿಂದ ಪಾರಾಗುವ, ಪಾರಾಗಲು ನೆರವಾಗುವ ಮೂರು ಜೋಡಿಗಳ ಸುತ್ತ ಕತೆ ಬೆಳೆಯುತ್ತದೆ. ಉಂಗುರದ ಆಮಿಷಕ್ಕೊಳಗಾಗಿ ಕಡೆಗೆ ಸಾಯುವ ಕಾವೇರಿಯ ಕತೆಯೂ ಆನುಷಂಗಿಕ. ಆದ್ದರಿಂದಲೇ ನನಗೆ ಈ ಪಾತ್ರಗಳ ಬಗ್ಗೆ ಕುತೂಹಲವಿತ್ತು.

ಆ ಕಾರೆಂಬಕತ್ತಲು, ಭೋರೆಂಬ ಮಳೆಯಲ್ಲಿ ಹುಲಿಕಲ್ಲು ನೆತ್ತಿಗೆ ಹತ್ತುವ ಪಾತ್ರಗಳು ಹೇಗಿರಬೇಕೆಂದು ನನ್ನ ಕಣ್ಣೆದುರು ನಾನೇ ಕಲ್ಪಿಸಿಕೊಳ್ಳುತ್ತಿದ್ದೆ. ಆದರೆ ನನ್ನ ಕಲ್ಪನಾ ಲೋಕದ ತಿಮ್ಮಿ, ಗುತ್ತಿ, ಪೀಂಚಲು, ಐತ, ಚಿನ್ನಮ್ಮ, ಮುಕುಂದಯ್ಯ ಇವರನ್ನು ಹೋಲುವ ಕಲಾವಿದರನ್ನು ಅಲ್ಲಿ ಕಾಣಲಾರದೆ ಚಡಬಡಿಸುತ್ತ ಒಮ್ಮೆ ಬಸೂಗೆ, ‘ಆ ಹುಡುಗರ ಮಾತಿರಲಿ, ತಿಮ್ಮಿ, ಪೀಂಚಲು, ಚಿನ್ನಮ್ಮ ಈ ಹುಡುಗಿಯರ ಪಾತ್ರಕ್ಕೆ ಹೊಂದುವ ಹುಡುಗಿಯರೇ ಇಲ್ಲಿ ಕಾಣುತ್ತಿಲ್ಲವಲ್ಲ’ ಎಂದು ನನ್ನ ಅಳುಕನ್ನು ವ್ಯಕ್ತಪಡಿಸಿದೆ.

More

ಡಾ: ಪುಂಡ ಲೀಕ್ಸ್ ‘ಮೇಯೋ ಬಜಾರ್’ ಪ್ರೆಸ್ ತಾಪವು

-ಸೂತ್ರಧಾರ ರಾಮಯ್ಯ

ಬೆಂಗಳೂರಿಂದ ‘ಮೇಯೋಬಜಾರ್’ ಗೀತೆಯನ್ನು ಕೇಳಬೇಕಂತೆ ಪುರಾಣ್, ಪ್ರಸಿದ್ದ್, ಕಳಂಕ್. ವಿಶಾಕ ಪಟ್ಟಣದಿಂದ ಶೀತಲ್, ಸಮರ್,ಬಯ್ಯಪ್ಪನ ಹಳ್ಳಿಯ ಆಶೀರ್ವಾದ್, ರಾಜಾನುಕುಂಟೆಯ ಕಣ್ಣೀರ್ ಸೆಲ್ ವನ್ ಮತ್ತು ರಾಜ( ಟೂಜಿ) ಸೇವಾಸಕ್ತರು

ಭಲಾರೆ ಭೋಜನವಿದು; ಭೂ ಭ್ರಷ್ಟ ಭಕ್ಷಗಳಿವು,

(ಸ್ವ) ಜನತಂತ್ರ ಜಾತ್ರೆಯಲ್ಲಿ; ದೊರಕೊಂಡಿತೆಮಗೆ ಬಂದು. ಅಹಹ್ಹ ಅಹಹ್ಹ   ಸ್ಪೆಕ್ಟ್ರಂ ಸ್ಪೆಕ್ಟರ್ ಲಾಡು; ಆದರ್ಶ-ಹೋಳಿಗೆಗಳು,

ಸಿಡಬ್ಲ್ಯುಜಿ ಜಿಲೇಬಿ..ಇವೆಲ್ಲ ನಮ್ಮ ಪಾಲು. ಭಳಾರೆ ಭೋಜನವಿದು ಬಿಡಿಯೇ ಮೈಸೂರ್ಪಾಕು; ಹ್ಯಾಪಿ ಬರ್ತ್ಡೆ earth ಉ ಕೇಕು. ಕೆಐಎಡೀಬಿ ಚಿರೋಟಿ ; ಅಲ್ಲೆಲ್ಲ ನಮದೆ ಲೂಟಿ! ಭಳಾರೆ ಭೋಜನವಿದು…ಅಹಾರೆ ಟ್ರ್ಯಾನ್ ಫರ್ ಡೀಲೇ; ಡಿನೋಟಿಫಿಕೆಶನ್ ಸಾಲೆ.ಬಕಾಸುರರ ಲೀಲೆ; ತಕೋ ಲಂಚದೆ ಶಾ ಮೀಲೆ. ಭಳಾರೆ ಭೋಜನನವಿದು …ನೀವು ಕೇಳ್ತಾ ಇದ್ದೀರಿ ಎಫ್ ಎಂ ೮೪೦ ಬೈಟೂ, ರಾಡಿಯಾ ಮಿರ್ಚಿ..,ಸಖತ್ ಹಾತ್ ಮಗಾ.

More

Previous Older Entries

%d bloggers like this: