ಟಿ .ಎನ್ .ವಾಸುದೇವ ಮೂರ್ತಿ ಅವರ ‘ಹುಚ್ಚುತನವೇ ಅನುಗ್ರಹ -ನೀಷೆ’ ಪುಸ್ತಕ ಹೊರ ಬಂದಿದೆ. ನೀಷೆಯನ್ನು ಓದುಗರಿಗೆ ಅಪ್ತವಾಗುವಂತೆ ಪರಿಚಯಿಸಿದ ಹಾಗೂ ಅದರ ಬಗ್ಗೆ ಅಧ್ಯಯನಕ್ಕೆ ನಮ್ಮನ್ನು ಪ್ರೇರೇಪಿಸುವಂತಹ ಪುಸ್ತಕ ಇದಾಗಿದೆ. ಅಹರ್ನಿಶಿ ಪುಸ್ತಕ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ..
ಈ ಪುಸ್ತಕಕ್ಕೆ ಸಂವರ್ಥ ‘ಸಾಹಿಲ್ ‘ ಬರೆದ ಮುನ್ನುಡಿ ಇಲ್ಲಿದೆ–
-ಸಂವರ್ಥ `ಸಾಹಿಲ್’
ನೀಷೆಯ ಗೇ ಸೈನ್ಸ್’ ಕೃತಿಯಲ್ಲಿ ಹಗಲು ಹೊತ್ತಿನಲ್ಲೆ ದೀಪ ಬೆಳಗಿಸಿಕೊಂಡು ಜನಜಂಗುಳಿಯ ನಡುವೆ ದೇವರನ್ನು ಅರಸುತ್ತಾ ಹೋದ ಹುಚ್ಚನೊಬ್ಬನನ್ನು ಕಂಡು ಎಲ್ಲರು ನಗುತ್ತಾರೆ. ಆ ಹುಚ್ಚ `ದೇವರು ಸತ್ತಿದ್ದಾನೆ’ ಎಂದರೆ ಯಾರೂ ಪ್ರತಿಕ್ರಿಯಿಸುವುದಿಲ್ಲ. ತನ್ನ ಕೈಲಿದ್ದ ಹಣತೆಯನ್ನೆಸೆದು ಆತ `ನಾನು ಬಹುಬೇಗ ಬಂದುಬಿಟ್ಟೆ, ನನ್ನ ಸರದಿ ಇನ್ನೂ ಬರಲಿಲ್ಲವೇನೋ’ ಎಂದುಕೊಳ್ಳುತ್ತಾನೆ.
ಆ ಹುಚ್ಚ ನೀಷೆಯೇ? ತನ್ನ ಜೀವಿತಾವಧಿಯಲ್ಲಿ ವಿದ್ವತ್ ವಲಯದಲ್ಲಿ ಅಷ್ಟೊಂದು ಪ್ರಚಾರ ಪಡೆಯದ ನೀಷೆ ತನ್ನ ಸರದಿಗೆ ಮುನ್ನವೇ ಬಂದು ಹೋದನೆ? ಹಗಲು ಹೊತ್ತಿನಲ್ಲೇ ದೀಪವೊಂದನ್ನು ಕೈಯಲ್ಲಿ ಹಿಡಿದುಕೊಂಡು ಆತ ಯಾವ ದೇವರನ್ನು ಅರಸುತ್ತಿದ್ದ? ಯಾವ ದೇವರು ಸತ್ತ ವಿಚಾರವನ್ನು ಸೂಚಿಸುತ್ತಿದ್ದ?.
ಪೂರ್ಣ ಓದಿಗೆ : ಓದು ಬಜಾರ್
ಇತ್ತೀಚಿನ ಟಿಪ್ಪಣಿಗಳು