-ಛಾಯಾ ಭಗವತಿ
ರಾಜು ಮೇಷ್ಟ್ರು ನಮ್ಮನ್ನೆಲ್ಲ ಬಿಟ್ಟು ಹೋಗಿ 3 ವರ್ಷಗಳೇ ಕಳೆದು ಹೋದವು, ಅವರ ನೆನಪಿನಲ್ಲಿ ಈ ಪುಟ್ಟ ಬರಹ.
ಪ್ರೀತಿಯ ರಾಜು ಮೇಷ್ಟ್ರಿಗೆ, ‘ಭೇಟಿ ಆಕಸ್ಮಿಕ ಅಗಲಿಕೆ ಅನಿವಾರ್ಯ ನೆನಪು ಚಿರಂತನ’
ನಾನು ತುಂಬ ಗೌರವಿಸುವ ಪ್ರೊ. ಚೆನ್ನಣ್ಣ ವಾಲಿಕಾರ್ ಸರ್ ನಾನು ಕಲ್ಬುರ್ಗಿಯಲ್ಲಿ ಎಂ.ಎ. ಓದುತ್ತಿರುವಾಗ ಕರೆದು, ನೋಡ್ರೀ, ಹಿಂಗ್ ಹಿಂಗೆ, ಬೆಂಗ್ಳೂರಲ್ಲಿ ಕ್ರೈಸ್ಟ್ ಕಾಲೇಜಿನೌರು ದರಾ ವರ್ಷ ಕವನ ಸ್ಪರ್ಧಾ ಇಡ್ತಾರ, ನೀವೂ ಕಳಿಸ್ರಿ ಅಂದಿದ್ರು. ಅವರು ಹೇಳಿದ್ದು, ನಾನು ಕಳಿಸಿ ಬಹುಮಾನ ಪಡೆದದ್ದು ಎಲ್ಲಾ ಆಕಸ್ಮಿಕವಾಗಿದ್ರೂ, ನಿಮ್ಮನ್ನು ಭೇಟಿಯಾದ ಆ ಕ್ಷಣ ಮಾತ್ರ ಮೊದಲೇ ನೀವು ನನಗೆ ಗೊತ್ತಿದ್ರೇನೋ ಅನ್ನುವಷ್ಟು ಆಪ್ತವಾಗಿತ್ತು.
ಆ ಬಳಿಕ ಕೆಲಸವೆಂಬ ಮಾಯಮೃಗದ ಬೆನ್ನು ಹತ್ತಿ ಹೊರಟವಳಿಗೆ, ಬೆಂಗಳೂರಿಗೆ ಹೋಗಿ ಹಾಳಾಗುತ್ತಾಳೆ ಅನ್ನುವ ಕಾರಣಕ್ಕೆ ಮನೆಯಲ್ಲಿ ಯಾರಿಂದಲೂ ಉತ್ತೇಜನ ದೊರೆತಿರದಿದ್ದಾಗ, ಥೇಟು ಅಪ್ಪನ ವಾತ್ಸಲ್ಯ, ಆಪ್ತತೆಯ, ಸುರಕ್ಷಿತ ಅನುಭವ ಕೊಟ್ಟು, ನಾನು ಗಟ್ಟಿಯಾಗಿ ಕಾಲೂರಲು ಕಾರಣರಾದ ಅಪರೂಪದ ಆದರೆ ಕಲಿಸದೆಯೂ ಮೇಷ್ಟ್ರಾದವರು ಸರ್ ನೀವು. ನಾನು ಬಂದ ಹೊಸತರಲ್ಲಿ ಮಲ್ಲೇಶ್ವರಮ್ನ ನಿಮ್ಮ ಮನೆಗೆ ಹತ್ತಿರದಲ್ಲಿಯೇ ನನ್ನ ಹಾಸ್ಟೆಲ್ ವಾಸ ಗೊತ್ತು ಮಾಡಿ ಕೊಟ್ಟ ಸುರೇಖಕ್ಕನಿಗೆ ನಾನು ಋಣಿಯಾಗಿರಲೇಬೇಕು.
ಅವತ್ತೊಮ್ಮೆ ಮಗನನ್ನು ಕರೆದುಕೊಂಡು ಚಿತ್ರಕಲಾ ಪರಿಷತ್ತಿನ ಅಂಗಳಕ್ಕೆ ಕಾಲಿಟ್ಟರೆ, ಕಾಣಿಸಿದ್ದೆಲ್ಲವೂ ಮಸುಕು ಮಸುಕು. ಹೆಗಲಿಗೆ ಚೀಲ, ಕೈಲೊಂದಿಷ್ಟು ಪುಸ್ತಕಗಳು, ಮುಖದ ಮೇಲೊಂದು ನಸು ನಗು ಧರಿಸಿ, ಅಲ್ಲೆಲ್ಲಾದರೂ ಇದಿರಾದೀರೇನೋ ಎನ್ನುವ ಕ್ಷೀಣ, ಈಡೇರದ ಆಸೆ.
ಇತ್ತೀಚಿನ ಟಿಪ್ಪಣಿಗಳು