ಮಣಿಕಾಂತ್ ಬರೆಯುತ್ತಾರೆ: ಒಂದೇ ಒಂದು ಕಣ್ಣ ಬಿಂದು…

ಒಂದೇ ಒಂದು ಕಣ್ಣ ಬಿಂದು…

ಚಿತ್ರ: ಬೆಳ್ಳಿ ಕಾಲುಂಗುರ. ಸಾಹಿತ್ಯ-ಸಂಗೀತ: ಹಂಸಲೇಖ.

ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ, ಚಿತ್ರಾ

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ

ನಿನ್ನ ನೋವ ಜತೆ ಎಂದೂ ನಾನಿರುವೆ ನಿನ್ನಾಣೆ

ರಾತ್ರಿಯ ಬೆನ್ನಿಗೆ ಬೆಳ್ಳನೆ ಹಗಲು

ಚಿಂತೆಯ ಹಿಂದೆಯೇ ಸಂತಸ ಇರಲು ||||

ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ

ಚಿಂತೆಯಲ್ಲಿ ನಿನ್ನ ಮನ ದೂಡಿದರೆ ನನ್ನಾಣೆ

ನೋವಿನ ಬಾಳಿಗೆ ಧೈರ್ಯವೆ ಗೆಳೆಯ

ಪ್ರೇಮದ ಜೋಡಿಗೆ ತಾಕದು ಪ್ರಳಯ ||ಅ.ಪ||

ದಾಹ ನೀಗೋ ಗಂಗೆಯೇ ದಾಹ ಎಂದು ಕುಂತರೆ

ಸುಟ್ಟು ಹಾಕೊ ಬೆಂಕಿಯೇ ತನ್ನ ತಾನೇ ಸುಟ್ಟರೆ

ದಾರಿ ತೊರೋ ನಾಯಕ, ಒಂಟಿ ಎಂದು ಕೊಂಡರೆ

ಧೈರ್ಯ ಹೇಳೊ ಗುಂಡಿಗೆ ಮೂಕವಾಗಿ ಹೋದರೆ

ಸೂರ್ಯನಿಲ್ಲ ಪೂರ್ವದಲ್ಲಿ ಚಂದ್ರನಿಲ್ಲ ರಾತ್ರಿಯಲ್ಲಿ

ದಾರಿ ಇಲ್ಲ ಕಾಡಿನಲ್ಲಿ ಆಸೆ ಇಲ್ಲ ಬಾಳಿನಲ್ಲಿ

ನಂಬಿಕೆ ತಾಳುವ ಅಂಜಿಕೆ ನೀಗುವ

ಶೋಧನೆ ಸಮಯ ಚಿಂತಿಸಿ ಗೆಲ್ಲುವ ||||

ಮೂಡಣದಿ ಮೂಡಿ ಬಾ ಸಿಂಧೂರವೆ ಆಗಿ ಬಾ

ಜೀವಧಾರೆ ಆಗಿ ಬಾ ಪ್ರೇಮಪುಷ್ಪ ಸೇರು ಬಾ

ಬಾನಗಲ ತುಂಬಿ ಬಾ ಆಸೆಗಳ ತುಂಬು ಬಾ

ಸಿಂಗಾರವೆ ತೇಲಿ ಬಾ ಸಂತೋಷವ ನೀಡು ಬಾ

ಪ್ರೇಮದಾಸೆ ನನ್ನ ನಿನ್ನ ಬಂಸಿದೆ ನನ್ನಾಣೆ

ಸಂತಸದ ಕಣ್ಣ ರಪ್ಪೆ ಸಂಸಿದೆ ನನ್ನಾಣೆ

ದೇವರ ಗುಡಿಗು ಭಿನ್ನಗಳಿರಲು ಬಾಳಿನ ನಡೆಗೂ ಅಡ್ಡಿಗಳಿರಲು

ಭೂಮಿಯಾಗಿ ನಾನಿರುವೆ ಚಿಂತೆ ಬೇಡ ನನ್ನಾಣೆ

ನಿನ್ನ ನೋವ ಮೇರುಗಿರಿಯ ನಾ ಹೊರುವೆ ನಿನ್ನಾಣೆ |||

ಪತ್ರಿಕೆ’ಯ ಓದುಗರೂ, ಈ ಅಂಕಣದ ಅಭಿಮಾನಿಯೂ ಆದ ರಾಘವೇಂದ್ರ ಉಡುಪ ಅವರು ಚಿತ್ರರಂಗಕ್ಕೆ ಸಂಬಂಸಿದಂತೆ ಮೂರು ಕುತೂಹಲಕರ ಪ್ರಶ್ನೆಗಳನ್ನು ಕೇಳಿದ್ದಾರೆ. ಅವು ಹೀಗಿವೆ:

೧.  ಕನ್ನಡದ ಅತ್ಯುತ್ತಮ ಸಂಗೀತ ನಿರ್ದೇಶಕರಲ್ಲಿ  ವಿಜಯ ಭಾಸ್ಕರ್ ಒಬ್ಬರು. ಪುಟ್ಟಣ್ಣ ಕಣಗಾಲ್ ಅವರ ಅತಿ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿದ್ದು ಅವರ ಹೆಗ್ಗಳಿಕೆ. ಅವರಿಗೆ ಸುರ್‌ಸಿಂಗಾರ್ ಎಂಬ ಬಿರುದೂ  ಇತ್ತು. ಇಷ್ಟಾದರೂ, ರಾಜ್ ಕುಮಾರ್ ಸಂಸ್ಥೆಯ ಯಾವುದೇ ಚಿತ್ರಕ್ಕೂ ವಿಜಯಭಾಸ್ಕರ್ ಅವರು ಸಂಗೀತ ನೀಡಲಿಲ್ಲವಲ್ಲ  ಏಕೆ? ವಿಜಯ ಭಾಸ್ಕರ್ ಅವರ ಸಂಗೀತ ನಿರ್ದೇಶನದಲ್ಲಿ ರಾಜ್‌ಕುಮಾರ್ ಅವರು ಒಂದೇ ಒಂದು ಚಿತ್ರ ಗೀತೆಯನ್ನೂ ಹಾಡಲಿಲ್ಲವಲ್ಲ ಏಕೆ?

More

ಕುವೆಂಪು ಮತ್ತು … ಕನಸು ಕನ್ನಡಿ…

ಬಂದಿದೆ ಮತ್ತೆ ಮತ್ತೆ ಬೇಂದ್ರೆ …

ಮತ್ತೆ ಮತ್ತೆ ಬೇಂದ್ರೆ ಮತ್ತು ಹುಚ್ಚುತನವೇ ಅನುಗ್ರಹ ನೀಷೆ ಕೃತಿಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗೆ ಶಿವಮೊಗ್ಗದಲ್ಲಿ ನಡೆಯಿತು .ಕವಿ ಚೆನ್ನವೀರ ಕಣವಿ ,ಕೆ.ಸಿ.ಶಿವಾರೆಡ್ಡಿ , ಎಸ್. ಗಂಗಾಧರಯ್ಯ , ಎಂ.ಬಿ ನಟರಾಜ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಆ ಕಾರ್ಯಕ್ರಮದ ಒಂದು ನೋಟ ಇಲ್ಲಿದೆ.

ಇನ್ನಷ್ಟು ಫೋಟೋಗಳು : ಓದು ಬಜಾರ್

 

ಇಂದಿನಿಂದ 5ರ ತನಕ…

ಕೆ. ಸತ್ಯನಾರಾಯಣ ಅವರ ‘ವಿಚ್ಛೇದನಾ-ಪರಿಣಯ’…

-ಆರ್ .ವಿಜಯರಾಘವನ್


ಸತ್ಯನಾರಾಯಣ ಅವರ ಈವರೆಗಿನ ಕಥೆ/ಕಾದಂಬರಿಗಳಿಗಿಂತ ಭಿನ್ನವಾದ ಕಾದಂಬರಿ ಬರೆದಿದ್ದಾರೆ. ಅದನ್ನು ವಿಚ್ಛೇದನಾ-ಪರಿಣಯವೆಂದು ಕರೆದು ಕಾಲದ ಚಲನೆಯ ಕಾನ್ಸೆಪ್ಟನ್ನೇ ಹಿಂದೆ ಮುಂದೆ ಮಾಡಿದ್ದಾರೆ.

ಹಾಗೆ ಮಾಡುವುದರ ಮೂಲಕ ತಾವು ಕಥೆಗಾರರಾಗಿ (ಕಾದಂಬರಿಕಾರರೂ ಕಥೆಗಾರರೇ ತಾನೆ?) ತಮ್ಮದೇ ರೂಢಿಗೆ ಸಂದಿದ್ದ ಆಲೋಚನೆಯ ಕ್ರಮವನ್ನು, ಅಭಿವ್ಯಕ್ತಿಯ ಸ್ವರೂಪವನ್ನು ಬದಲಾಯಿಸಿಕೊಂಡಿರುವುದಾಗಿಯೂ, ಓದುಗರು ಕೂಡ ಈ ಬದಲಾವಣೆಗೆ ತೆರೆದುಕೊಳ್ಳಬೇಕೆಂದೂ ಆಶಿಸುತ್ತಿರುವರೆಂದು ನಂಬಲು ಕಾರಣಗಳಿವೆ.ಈ ಹಿಂದೆ ಮುಂದಾಗುವುದನ್ನು ಕುರಿತು ಕಾದಂಬರಿಯ ನಾಮಾಂಕಿತ ಅಧ್ಯಾಯಗಳು ವಿವರಿಸುವುದಿಲ್ಲ. ಅಲ್ಲಿ ಹೆಸರುಗಳೂ ನೆಪಗಳಾಗಿ ಒದಗುತ್ತವೆ.

ಪೂರ್ಣ ಓದಿಗೆ: ಓದು ಬಜಾರ್

ಮಂಜುನಾಥ್ ಲತಾ ಗೆ ‘ಕುಂ ವೀರಭದ್ರಪ್ಪ ಕಥಾ ಸಾಹಿತ್ಯ ಪುರಸ್ಕಾರ’.

ಬಳ್ಳಾರಿಯ ‘ಪ್ರಜ್ಞೆ ಪ್ರತಿಷ್ಠಾನ’ ಕಳೆದ ವರ್ಷದಿಂದ ನೀಡುತ್ತಿರುವ ‘ಕುಂ.ವೀರಭದ್ರಪ್ಪ ಕಥಾ ಸಾಹಿತ್ಯ ಪುರಸ್ಕಾರ’ವನ್ನು 2009-10ನೇ ಸಾಲಿಗೆ ಮೈಸೂರಿನ ಯುವ ಬರಹಗಾರ ಶ್ರೀ ಮಂಜುನಾಥ್ ಲತಾ ಅವರ ‘ಸನ್ ಆಫ್ ಸಿದ್ದಪ್ಪಾಜಿ’ ಕಥಾ ಸಂಕಲನಕ್ಕೆ ನೀಡಲಾಯಿತು.ನವೆಂಬರ್ 28ರಂದು ಬಳ್ಳಾರಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಕವಿಗಳಾದ ಡಾ. ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕಥೆಗಾರ ಕುಂ.ವೀರಭದ್ರಪ್ಪ ಮತ್ತಿತರರು ಹಾಜರಿದ್ದರು.

ಆರೋಹಿ ….

ಸೂರಿ -14: ಮತ್ತೆ ಲೆಕ್ಕ ತಪ್ಪಿತ್ತು…

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 14

 

ಕಾರಿನಿಂದ ಒಂದು ಭಯಂಕರ ನಗು ಹಳೇಬೀಡು ಸುಂದರರಾಯರನ್ನು ಅಪ್ಪಳಿಸಿತು. ಅವರು ಯಾಕೆ ನಕ್ಕಿದ್ದು ಎಂದು ಊಹಿಸುವ ಅಗತ್ಯವೇ ಇರಲಿಲ್ಲ ಹಳೇಬೀಡು ಸುಂದರರಾಯರಿಗೆ.
ದುರಂತವೆಂದರೆ ಮಾರನೇ ದಿನ ಕೋರ್ಟು ಬಯಲಿಗೆ ಕಾಲಿಡುತ್ತಿದ್ದಂತೇ, ಹಳೇಬೀಡು ಸುಂದರರಾಯರು ಕೇಳದೇ ಹೋದರೂ ಪುಡಿ ವಕೀಲರೆಲ್ಲಾ ‘ಸುಂದರರಾಯರೇ ನನತ್ರ ಕೋಟಿಲ್ಲ‘ ಎಂದು ಹೇಳತೊಡಗಿದರು.
ಕೆಲವರಂತೂ ಕೋಟನ್ನು ಅವರ ಕಣ್ಣೆದುರೇ ತೆಗೆದು ಬೆನ್ನ ಹಿಂದೆ ಮುಚ್ಚಿಟ್ಟು ಗೇಲಿ ಮಾಡಿದರು. ಹಳೇಬೀಡು ಸುಂದರರಾಯರು ಮುಂದಿನ ಅರ್ಧ ಗಂಟೆಗೆಲ್ಲಾ ಕೋರ್ಟಿನ ಬಯಲಿನಿಂದ ಹೊರಟು ಊರ ಹೊರಗಿನ ಹೊಸ ಟ್ಯಾಂಕ್ ಪಾರ್ಕಿನ ಕಟ್ಟೆಯ ಮೇಲೆ ಕೂತು ಬಿಕ್ಕೀ ಬಿಕ್ಕೀ ಅತ್ತರು.
‘ಎಂಬತ್ತೂ-ಹತ್ತು-ತೊಂಬತ್ತೂ-ಹತ್ತು-ಒಂದ್ರೂಪಾಯಿ-ಹತ್ತೂ-ಹತ್ತು-ಇಪ್ಪತ್ತೂ-ಇಪ್ಪತ್ತೂ- ನಲವತ್ತೂ…‘ ಒಂದು ಟವೆಲ್ಲನ್ನು ಹಾಸಿ ಅದರಲ್ಲಿ ಸುರುವಿಕೊಂಡಿದ್ದ ಚಿಲ್ಲರೆಯನ್ನು ರಾತ್ರಿ ಒಂದೂವರೆ ಎರಡರ ಸುಮಾರಿನಲ್ಲಿ ಹಳೇಬೀಡು ಸುಂದರರಾಯರು ಎಣಿಸುತ್ತಿದ್ದರು. ರಾತ್ರಿ ಒಂದು ಹೊತ್ತಿನಲ್ಲಿ ನೆಲದ ಥಂಡಿಗೆ ಎಚ್ಚರವಾಯಿತೋ, ಬೆವರಿನ ನೀರು ಬೆನ್ನಿನ ಅಡಿಯಲ್ಲಿ ಮಡುಗಟ್ಟಿದ ತೇವದಿಂದ ಎಚ್ಚರವಾಯಿತೋ, ಒಟ್ಟಿನಲ್ಲಿ ಕೆಟ್ಟ ಕನಸು ಬಿದ್ದವರಂತೆ ಬೆಚ್ಚಿ ಧಡಕ್ಕನೆ ಎದ್ದು, ಟ್ರಂಕಿನಿಂದ ಆ ಹುಂಡಿ ಡಬ್ಬಿಯನ್ನು ತೆಗೆದು ಅದರಲ್ಲಿದ್ದ ಸಕಲವನ್ನೂ ಎದುರು ಸುರಿದುಕೊಂಡು ಕೂತಿದ್ದರು.
More

ಜಯಶ್ರೀ ಕಾಲಂ: ಇವರಿಗೂ ಒಂದು ಬದುಕಿದೆ …

ಇತ್ತೀಚೆಗೆ ನಾನು ವೀಕ್ಷಿಸಿದ ಮೂರು ಚಾನೆಲ್ಗಳಲ್ಲಿ  ಒಂದು ವಿಷ್ಯ ಕಾಮನ್ನಾಗಿ ಕಂಡು ಬಂತು. ಆ ವಿಷಯ ಎಂದಿಗೂ ನನಗೆ ಬೇಸರ ಉಂಟು ಮಾಡಿಸಲ್ಲ.ಅವರ ಬಗ್ಗೆ ಸದಾ ನನಗಿರೋದು ಕರುಣೆ .ನನ್ನ ಗೆಳೆಯ  ಅನಿ ಅಯ್ಯೋ ಬೆಂಗಳೂರು ಸಿಮ್ಲಾ ಆಗಿ ಬಿಟ್ಟಿದೆ ಎಂದು ಒದ್ದಾಡ್ತಾ ಇದ್ರು. ಆ ಹುಡುಗನ೦ತಹ  ಪಡ್ಡೆ ಹೈಕಳುಗಳಿಗೆ ಮಾತ್ರವಲ್ಲ  ಎಲ್ಲಾ  ಗಂಡು ಸಿಂಹಗಳ ಹೃದಯವನ್ನು ಕುಣಿಸಿ ಈ ಬೆಂಗಳೂರಿನ ಚಳಿಯಿಂದ ಅವರನ್ನು ದೂರ ಮಾಡುವಂತಹ ಡ್ಯಾನ್ಸ್ ಕಾರ್ಯಕ್ರಮ ಪ್ರಸಾರ ಆಯ್ತು ಸುವರ್ಣ ನ್ಯೂಸ್ನಲ್ಲಿ :-)

ಮಂಗಳಮುಖಿಯರು ಎನ್ನುವ ಹೊಸ ಹೆಸರು ಕೊಟ್ಟು ಅವರ ಬದುಕಲ್ಲಿ ಬದಲಾವಣೆ ಮಾಡಿದ್ದೇವೆ ಎಂದು ಹೆಮ್ಮೆಯಿಂದ ಬೆನ್ನು ತಟ್ಟಿಕೊಳ್ಳುವ ನಾಗರೀಕ ಸಮಾಜ ನಮ್ಮದು :-) . ಹೆಸರು ಮಾತ್ರ ಹೊಸದು ಆದರೆ ಬದುಕಿನ ಶೈಲಿಯಲ್ಲಿ ಯಾವುದೇ ಬಗೆಯ ಮಾರ್ಪಾಟು ಇಲ್ಲ. ಅಂತಹ ಮಂಗಳಮುಖಿಯರು ಅತ್ಯದ್ಭುತ ಪ್ರತಿಭೆಗಳು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಮಂಗಳೂರಿನಲ್ಲಿ ನಾಟಕೋತ್ಸವ

ಮಂಗಳೂರಿನಲ್ಲಿ ಮೂರು ದಿನಗಳ ನಾಟಕೋತ್ಸವ

ಟೌನ್ ಹಾಲ್ ನಲ್ಲಿ

೨೧ ರಂದು ಉರುಳು

೨೨ ರಂದು ಮಳೆ ನಿಲ್ಲುವವರೆಗೆ

೨೩ರನ್ದು ಕೋರ್ಟ್ ಮಾರ್ಷಲ್

ಉಚಿತ ಪ್ರವೇಶ ನೀವೆಲ್ಲರೂ ಬನ್ನಿ ಎನ್ನುತ್ತಾರೆ ಚಂದ್ರ ಹಾಸ ಉಳ್ಳಾಲ್

%d bloggers like this: