-ಸೂತ್ರಧಾರ ರಾಮಯ್ಯ
ಉತ್ತರಾಭಾದ್ರ: ಓಹೋಹೋ ಐದು ವರುಷಕೊಮ್ಮೆ ಕೈಮುಗಿದು ಮತ್ತೆ ಬರುವೆವೂ… WOO ಎಕ್ಸಲೆಂಟ್! ಈಗೊಂದು ಸಣ್ಣ BRAYಕ್.ನೀವು ಕೇಳ್ತಾ ಇದ್ದೀರಿ ಎಫ್ ಎಂ ೮೪೦ ಬೈಟೂ, ರಾಡಿಯಾ ಮಿರ್ಚಿ; ಸಖತ್ ಫ್ಯಾಟ್ ಮಗ. ನಾನು ಉತ್ತರಭಾದ್ರ ಈಗ ನಿಮ್ಮ ಮೆಚ್ಚಿನ ಚಿತ್ರಗೀತೆಗಳು, ನಮ್ಮ ನೆಚ್ಚಿನ ಡಾ: ಪುಡಾರಿ ಪುಂಡಲೀಕ ಅವರೊಂದಿಗೆ. “ಆದ್ರೂ ಅದೆಷ್ಟು ಓಪನ್ ಆಗಿ ಡಿಕ್ಲೇರ್ ಮಾಡ್ತೀರಾ ಸಾರ್ ಸತ್ಯ ಸಂಗತೀನಾ?
ಪು.ಪುನ್: ಸತ್ಯವೇ ನಮ್ಮ ವೇ. ಗಾಂಧಿ ಅನ್ನೋ ಪುಣ್ಯ ಕೋಟಿ (ಕೋಟಿಯ) ಮಕ್ಕಳು ನಾವು ಅಂತಾ (ಸ್ವಗತ :ಇನ್ ಕಮ್ ಟ್ಯಾಕ್ಸ್ ರೇಡ್ಗಳೇ ಹೇಳ್ತವೆ) ದೇಶದ ಜನಗಳಿಗೆ ಗೊತ್ತಿದೆ. ಇನ್ತಹ ತಹ ತಹ ಪಿತ್ತಾವರಣದಲ್ಲಿ, ಕ್ಷಮಿಸಿ..ವಾತಾವರಣದಲ್ಲಿ ಲಕ್ಷಗಳನ್ನು ಇಟ್ಟುಕೊಂಡು ರಾಜಕಾರಣ ಮಾಡೋ ಕಾಲ ಹೋಯ್ತು! ರಾಜಕಾರಣಕ್ಕೆ ಬಂದ ಹೊಸದರಲ್ಲಿ ಗಾಂಧಿ ಹೇಳಿದ ಮೂರೂ ಇಟ್ಟುಕೊಂಡು ದೊಡ್ದವರಾಗಿದ್ದೆವು. ಈಗ ಆ ಮೂರೂ ಬಿಟ್ಟವರಷ್ಟೇ ದೊಡ್ಡವರಾಗೋದು ಐ ಮೀನ್ ‘ಕೆಟ್ಟದ್ದನ್ನು ನೋಡೇ ,ಆಡೇ, ಕೇಳೆ ‘. ಆದರೂ, ಎಲ್ಲಾ ಡಿಕ್ಲೇರ್ ಮಾಡ್ತೀವಿ ಅಂದ ಮಾತ್ರಕ್ಕೆ ನಮ್ಮ ಆಸ್ತಿ ಪಾಸ್ತಿ ವಿವರನೆಲ್ಲ ನೀಡಬೇಕು ಅಂತಾರಲ್ಲ, ಆಯುಕ್ತರು? ಲೋಕದ ಡೊಂಕ ತಿದ್ದಲಿ, ನಮ್ಮ ತಕರಾರಿಲ್ಲಾ. ಆದ್ರೆ, ನಮ್ಮ ಮೂಲಕವೇ ಬಂದು ನಮ್ಮ ಮೂಲಕ್ಕೂ ಹಾಕೋದೆ ಗುದ್ದಲಿ! ಲೋಕದ ಯುಕ್ತಾ ಯುಕ್ತತೆಯಿಂದ ನಾವು ಮುಕ್ತರನ್ನೋದನ್ನು ಬಾಯಿ ಬಿಟ್ಟು ಡಿಕ್ಲೇರ್ ಮಾಡಬೇಕಾಗಿದೆ. ಎಂಥಾ ಬ್ಯಾಸರ ನೋಡ್ರಿ ಸರಾ!
ಉ.ಭಾ: ಛೆ,ಛೆ ಇಲ್ ಬಿಡ್ರೀ. ಋಷಿ ಮೂಲ, ನದಿ ಮೂಲ, ಪುಡಾರಿ ಪ್ರಾಪರ್ಟಿ ಮೂಲ ಕೇಳಬಾರದು ಬಿಡ್ರೀ. ಯಾಕಂದ್ರೆ ಅವೆಲ್ಲಾ ಒಂಥರಾ ‘ನೋನ್ ಸೋರ್ಸ್ ಆಫ್ ಇನ್ ಕಮ್’. ಜಗತ್ತಿಗೇ ಗೊತ್ತಿರೋ ಸಂಗತಿ. ಸ್ವಗತ: ಸಾರ್ವಜನಿಕ ಸೋರ್ಸ್ ಗಳಿಂದ ಸೋರಿಸ್ ಕೊಂಡಿದ್ದು ಅಂತಾ . ಪು.ಪುನ್: ಹಹ್ಹಹ್ಹ..,ಅವರು ಕೇಳಿದ್ರೂ ಎಲ್ಲವನ್ನು ನಾವೆಲ್ಲಿ ಡಿಕ್ಲೇರ್ ಮಾಡ್ತೀವ್ ಬಿಡ್ರೀ. ಇರಲಿ ಹಾಕ್ರಲ್ಲ ಮುಂದಿನ ಗೀತೇನಾ.
ಇತ್ತೀಚಿನ ಟಿಪ್ಪಣಿಗಳು