ಮೆಟ್ಟಿಲು ಹತ್ತಿದ ಸೂತ್ರಧಾರ ರಾಮಯ್ಯ

-ಸೂತ್ರಧಾರ ರಾಮಯ್ಯ
ನನ್ನುಡಿ

ಹತ್ತು ಕಟ್ಟೋ ಬದಲು ಒಂದು ಮುತ್ತು ಕಟ್ಟಿದಂತೆ ’ಹನ್ನೊಂದನ್ನು’ ಬಳಸುವ ಬದಲು ನೆರವಾಗಿ ’ಪನ್ ಒಂದನ್ನು’ (ಶ್ಲೇಷೆ) ಬಳಸುವ ಮಾರ್ಗ ಕನ್ನಡದ ಕವಿ, ಲೇಖಕ, ಕನ್ನಡಾಂಗ್ಲ ಪನ್ ಡಿತರಿಗೆ ಹೊಸದೇನು ಅಲ್ಲ. ರನ್ನ, ಕುಮಾರವ್ಯಾಸ, ಕೈಲಾಸಂ, ಬೇಂದ್ರೆ, ನಾ.ಕಸ್ತೂರಿ, ವೈಯನ್ಕೆ, ಲಂಕೇಶ್, ಚಂಪಾ ಇದೀಗ ವಿಶ್ವೇಶ್ವರ ಭಟ್, ದುಂಡಿರಾಜ್, ನಾರಾಯಣ ರಾಯಚೂರು ಹೀಗೆ ಪುಂಖಾನುಪುಂSವಾಗಿ ಹೆಸರುಗಳು ಕೇಳಿಬರುತ್ತವೆ. ಇವರಲ್ಲಿ ಕೆಲವರು ಚದುರಿದಂತೆ ಪನ್ ಬಳಕೆ ಮಾಡಿದರೆ, ಕೆಲವರಂತೂ ವ್ಯಾಪಕವಾದ ವಿಶ್ಲೇಷಣೆಯ ಪನ್‌ಥಕ್ಕೆ ಸೇರಿದವರಾಗಿದ್ದಾರೆ.

ಹಲವು ಅರ್ಥಗಳುಳ್ಳ ಒಂದೇ ಪದವನ್ನು ಹಿಡಿದೋ, ಪದದ ಉಚ್ಚಾರಣೆ ಒಂದೆ ಆದರೂ, ಸಂದರ್ಭಕ್ಕೆ ತಕ್ಕಂತೆ ನಾನಾ ಅರ್ಥಗಳನ್ನು ಆರೋಪಿಸಿವ, ವಿವಿಧಾರ್ಥಗಳಿಂದ ಹೊಳೆಯಿಸುವ, ವಿಪರೀತ ಅರ್ಥಗಳನ್ನು ಪದಕ್ಕೆ ತಳುಕು ಹಾಕಿ, ಸಾಮಾನ್ಯ ಅರ್ಥವನ್ನು ತಳಕ್ಕೆ ಹಾಕಿ ಆಯಾ ಸಂದರ್ಭವನ್ನು ವಿಡಂಬಿಸುತ್ತಾ ಬೇರೊಂದು ಅರ್ಥವನ್ನು ತಳ ತಳಿಸುವಂತೆ ಮಾಡುವುದೆ- ಮಾಡಬೇಕಾದುದೇ ಶ್ಲೇಷೆಯ ಗುಣ-ಧರ್ಮ.

ಯಾವುದೇ ಪದವನ್ನು ಹಿಡಿದು ಪನ್ ಮಾಡಲು ಪ್ರಯತ್ನಿಸುವುದು ಪ್ರಾರಂಭಕ್ಕೆ ಹ್ಯಾ-ಬಿಟ್ ಆದರೂ, ಕ್ರಮೇಣ ಅರೆಕ್ಷಣ ಬಿಟ್ ಇರಲಾರದ ’ಸರ್ಚ್-ರೀಸರ್ಚ್’ ಕಸುಬೇ ಆಗಿ, ಪನ್‌ಸ್ಟರ್ ತನಗೆ ತಾನೇ ಪನ್‌ಜ(ಜ್ವ)ರದ ಪಕ್ಷಿಯಾಗಿ ಹೋಗುವುದು ಸಾಮಾನ್ಯ. ಅವನ ತಲೆಯಲ್ಲಿ ’ಇಟ್ ಕೀಪ್ಸ್ ಹ್ಯಾ-ಪನ್ನಿಂಗ್’ ಅಂದರೆ ಅಚ್ಚರಿಯಿಲ್ಲ. ಹಾಗೆಯೇ ಪನ್‌ಸ್ಟರ‍್ಗಳು ಇರುವ ಕಡೆ ’ಪನ್ಯೂಷನ್-ಫ್ರೀ’ ವಾತಾವರಣವೂ ಅಲಭ್ಯವೇ- ಅಹುದಾದರಹುದೆನ್ನಿ.

ಇನ್ನಷ್ಟು

ಬರ್ತಾ ಇದೆ ಹೊಸ ಪುಸ್ತಕ..

ಕನ್ನಡ, ಇಂಗ್ಲಿಷ್ ಪುಸ್ತಕ ಕೊಳ್ಳಲು ಅವಧಿ- Flipkart ಸಹಯೋಗದ

ಆನ್ ಲೈನ್ ಮಳಿಗೆಗೆ ಭೇಟಿ ಕೊಡಿ – ಇಲ್ಲಿ ಕ್ಲಿಕ್ಕಿಸಿ

ಕೊಪ್ಪಳದಲ್ಲಿ ಇಂದು ಸಂಜೆ..

from Monu to Mahatma

ಇಂದು ‘ಅಮೆರಿಕನಸು’ ಬಿಡುಗಡೆ

ಪುಸ್ತಕ ಸಂಭ್ರಮದ ನೋಟ ಇಲ್ಲಿದೆ

ಪ್ರೊ ಸಿ ಎನ್ ರಾಮಚಂದ್ರನ್ ಹಾಗೂ ಶ್ರೀಧರ ಬಳಗಾರ ಅವರ ಕೃತಿಗಳು ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಅಂಕಿತ ಪ್ರಕಾಶನ ಈ ಕೃತಿಗಳನ್ನು ಪ್ರಕಟಿಸಿದೆ.

ಸಂಗೀತ ನೃತ್ಯ ಹಾಗೂ ಪುಸ್ತಕದ ಸಂಭ್ರಮ ಬೆರೆತಿದ್ದ ಈ ಕಾರ್ಯಕ್ರಮದ ನೋಟ ಇಲ್ಲಿದೆ.

ದೊಡ್ಡ ಸೈಜ್ ನಲ್ಲಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ

ಇಂದು ಬಿಡುಗಡೆಯಾಗಲಿರುವ ‘ಅಂಕಿತ’ ಪುಸ್ತಕಗಳು

ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಇಂದು ಬೆಳಗ್ಗೆ ೧೦-೩೦ಕ್ಕೆ ಮೂರು ಪುಸ್ತಕಗಳ ಬಿಡುಗಡೆ.

ಶ್ರೀಧರ ಬಳಗಾರ ಹಾಗೂ ಪ್ರೊ ಸಿ ಎನ್ ರಾಮಚಂದ್ರನ್ ಅವರ ಕೃತಿಗಳನ್ನು ಅಂಕಿತ ಪುಸ್ತಕ ಪ್ರಕಟಿಸಿದೆ. ಬನ್ನಿ

ಮಾವೋ ವಾದ

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ

ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ ಯಾಕೆ ಮುಖ್ಯವಾಗಿ ಕಂಡಿತು ಎಂದರೆ , ಈಗ ಬರೆಯುವ ಅನೇಕ ಕನ್ನಡ ಕವಿಗಳು ತಾವೇ ಮೊದಲ ಬಾರಿ ಕಾವ್ಯ ಬರೆಯುತ್ತಿರುವವರು ಎಂಬಂತೆ ಬರೆಯುತ್ತಾರೆ.

ಕನ್ನಡ ಕಾವ್ಯ ಪರಂಪರೆಯ ಪರಿಚಯವೇ ಅವರಿಗಿಲ್ಲ! ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ನನಗೆ ಕಂಡದ್ದು ಹಿಂದುತ್ವದ ವಿರುದ್ಧ ನೀವು ತೆಗೆದುಕೊಂಡ ಸ್ಪಷ್ಟವಾದ ನಿಲುವು. ಇದು ಕೂಡ ಈಗ ಕನ್ನಡ ‘ಬುದ್ದಿ ಜೀವಿಗಳಲ್ಲಿ’ ಅಪರೂಪವಾಗುತ್ತಿದೆ. ಹಿಂದೂ ಧರ್ಮದುರಂಧರರ ಬಗ್ಗೆ ನಿಮ್ಮ ವ್ಯಗ್ರತೆ , ವ್ಯಂಗ್ಯಗಳು ನನಗೆ ತುಂಬಾ ಇಷ್ಟವಾದವು. ಹಿಂದುತ್ವದ ವಿರುದ್ಧ ನಾವೆಲ್ಲರೂ ನಮಗೆ ಸಾಧ್ಯವಿರುವ ನೆಲೆಗಳಲ್ಲಿ ಹೋರಾಟ ಮಾಡುವ ಅಗತ್ಯವಿದೆ. ಇಲ್ಲವಾದರೆ ಅದು ನಮ್ಮನ್ನು ಹಂದಿಗಳನ್ನಾಗಿ ಮಾಡುತ್ತದೆ .

ಬರ್ತಾ ಇದೆ ಹೊಸ ಪುಸ್ತಕ …

ಕನ್ನಡ, ಇಂಗ್ಲಿಷ್ ಪುಸ್ತಕ ಕೊಳ್ಳಲು ಅವಧಿ- Flipkart ಸಹಯೋಗದ

ಆನ್ ಲೈನ್ ಮಳಿಗೆಗೆ ಭೇಟಿ ಕೊಡಿ – ಇಲ್ಲಿ ಕ್ಲಿಕ್ಕಿಸಿ


 

Previous Older Entries