
-ಲೀಲಾ ಸಂಪಿಗೆ
ಒಳಗೊಂದು ಪುಟ್ಟ ಕೊಠಡಿ. ಮೂಲೆಯಲ್ಲೊಂದು ಸ್ಟೂಲ್. ಸ್ಟೂಲ್ ಮೇಲೊಂದು ಶೈನಿಂಗ್ ಕಳೆದುಕೊಂಡ ಎರಡು ಅಡಿ ಎತ್ತರದ ಸ್ಟೀಲ್ ಕೊಳಗ. ಅದರ ತುಂಬ ಕಲೆಸಿದ ಅನ್ನ-ಸಾರು. ಅದನ್ನು ಕಲೆಸಿಟ್ಟು ತುಂಬಾ ಹೊತ್ತಾಗಿದೆ ಎಂದು ಸಾಬೀತುಪಡಿಸಲು ಅದರ ಮೇಲೊಂದು ಕೆನೆಗಟ್ಟಿದ ಲೇಯರ್. ಪಕ್ಕದಲ್ಲೊಂದು ಸೌಟು. ಅದಕ್ಕೆ ತಾಗಿಯೇ ಒಂದು ಪ್ಲಾಸ್ಟಿಕ್ ಡ್ರಮ್ಮಿನಲ್ಲಿ ತುಂಬಿಟ್ಟ ನೀರು. ಅದಕ್ಕೊಂದು ಪ್ಲಾಸ್ಟಿಕ್ನದ್ದೇ ಚೊಂಬು. ಆ ಕೊಠಡಿಯಲ್ಲಿ ಹಾಕಿದ್ದ ನೆಲಹಾಸು ಆ್ಯಂಟಿಕ್ಪೀಸ್ ಇದ್ದಂಗೆ. ಅದನ್ನೇನಾದ್ರೂ ಕೊಡವಿದ್ರೆ ಕೊಡವಿದವರು ಮೂರು ದಿನಾ ಆದ್ರೂ ಎದ್ದೇಳ್ಬಾರ್ದು. ಅದಕ್ಕೇ ಅವ್ರು ಆ ಸಾಹಸ ಮಾಡೋಕೆ ಹೋಗಿಲ್ಲ.
ಏದುಸ್ರು ಬಿಟ್ಕೊಂಡು ಬಂದ ಸ್ವಾತಿ ಆ ಸೌಟು ತೊಗೊಂಡ್ಲು. ಮೇಲೆ ಕಟ್ಟಿದ್ದ ಲೇಯರ್ನ ಸರಿಸಿದ್ಲು. ಒಂದೆರಡು ಸೌಟು ಸಾರನ್ನ ಹಾಕ್ಕೊಂಡ್ಲು. ಗಬಗಬಾಂತ ಬಾಯಿಗೆ ತುಂಬ್ಕೊಳ್ತಾ ಇದ್ಲು. ಹೊಟ್ಟೆ ಹಸಿದಿತ್ತು. ಏನು ತಿನ್ತಾ ಇದ್ದೀನಿ, ಅದ್ರ ರುಚಿ ಏನು ಯಾವುದೂ ಪರಿವೆಯೇ ಅವಳಿಗಿರಲಿಲ್ಲ. ಹಸಿದು ಸಂಕಟ ಆಗಿ ಓಡಿ ಬಂದಿದ್ಲು. ಅಷ್ಟರಲ್ಲಿ ಹುಡುಗನೊಬ್ಬ ಬಂದ. ಸ್ವಾತಿ ಬೇಗ ಹೋಗ್ಬೇಕಂತೆ ಅಂತ ಅವಳನ್ನ ಅವಸರಿಸ್ತಾ ಇದ್ದ. ಚೊಂಬು ನೀರು ಗಟಗಟನೆ ಕುಡ್ದು ಹೊರ ಓಡಿದ್ಲು.
ಹಾಕಿದ್ದ ಸಾಂಗ್ ಹೆಳವರನ್ನೂ ನಿಂತಲ್ಲೇ ಕುಣಿಸೋಂಗಿತ್ತು. ಸ್ವಾತಿಯ ಹೆಜ್ಜೆಗಳು ಸ್ಟೆಪ್ ಹಾಕ್ತಾ ಹಾಕ್ತಾ ಸ್ಪೀಡ್ ಜಾಸ್ತಿ ಮಾಡ್ಕೊಂಡ್ವು. ಎಲ್ಲ ಟೇಬಲ್ಲುಗಳನ್ನೂ ಟಚ್ ಮಾಡ್ತಾ ಅಲ್ಲಿ ಕುಂತೋರ್ಗೆ ಅಮಲು ಜಾಸ್ತಿ ಮಾಡ್ತಾ, ಕೈಗೆ ಸಿಕ್ರೂ ಸಿಗದ ಹಾಗೆ ಜೋಪಾನ ಮಾಡ್ತಾ ಆ ದಿನದ ದಿನಚರಿಯಲ್ಲಿ ಮುಕ್ಕಾಲು ದಿನ ಕಳೆದಿದ್ಲು. ತಾಳದ ವೇಗ ಕಡಿಮೆಯಾದ್ರೇನು, ಅವಳ ಮೈಮೇಲೆ ನೋಟುಗಳ ಮಳೆ ಸುರಿದಿತ್ತಲ್ಲ ಅವನ್ನೆಲ್ಲಾ ಎಣಿಸೋಕೆ ಕುಳ್ಳಿರಿಸಿದ್ದ ಯಜಮಾನ. ಸಾವಿರ ರೂಪಾಯಿನ ಹತ್ತು ರೂಪಾಯಿಗಳ ಬಿಡಿ ಮಾಡ್ಕೊಂಡು ಉಡಾಯಿಸಿ ಹೋಗಿದ್ದ ಅವರ ದವಲತ್ತುಗಳನ್ನೆಲ್ಲಾ ಸ್ವಾತಿ ಜೋಡಿಸ್ತಾ ಹೋದ್ಲು. ಮತ್ತೆ ಹತ್ತರ ಸಾವಿರ ಕಟ್ಟನ್ನು ಒಟ್ಟಾಗಿಸೋವತ್ಗೆ ಗಂಟೆ ರಾತ್ರಿ ಎರಡಾಗಿತ್ತು. ಮಧ್ಯರಾತ್ರಿ ಮೀರಿದ್ರೂ ಕುಣಿಯೋ ಕಾಲ್ಗಳು ಕೂತಾಗ ಪದ ಹೇಳೋಕೆ ಶುರು ಮಾಡ್ಬಿಟ್ವು. ಗೋಲ್ಡನ್ ಲೈವ್ಬ್ಯಾಂಡ್ನ ಹದಿನೆಂಟು ಹುಡ್ಗೀರಲ್ಲಿ ಸ್ವಾತಿನೂ ಒಬ್ಳು. ಅಂಥಾ ಸ್ಟ್ಯಾಂಡಡರ್್ ಲೈವ್ಬ್ಯಾಂಡ್ ಅಲ್ದಿದ್ರೂ ಸುಮಾರಾದ ಜನಕ್ಕೆ ಗೋಲ್ಡನ್ ಲೈವ್ಬ್ಯಾಂಡ್ ಎಟುಕಿಸಿಬಿಡ್ತಿತ್ತು. ಸ್ವಾತಿಯ ಜೊತೆಗಿನ ಐದಾರು ಹುಡ್ಗೀರ್ನ ಗಿರಾಕಿಗಳು ಬುಕ್ ಮಾಡ್ಕೊಂಡು ಹೋಗಿದ್ರಿಂದ ಅವತ್ತಿನ ಹೆಚ್ಚಿನ ಕೆಲಸ ಅವಳದ್ದೇ!

ಇದೊಂದು ಲೋ ಮಿಡ್ಲ್ಕ್ಲಾಸ್ ಲೈವ್ಬ್ಯಾಂಡ್ಗೆ ಉದಾಹರಣೆ ಕೊಟ್ಟೆ ಅಷ್ಟೇ. ಲೈವ್ಬ್ಯಾಂಡ್ ಅಥವಾ ಲೈವ್ಬಾರ್ಸ್ ಅನ್ನೋದೇ ಒಂದು ದೊಡ್ಡ ಲೋಕ. ಅಲ್ಲಿರುವ ವೈವಿಧ್ಯತೆಗಳು, ಅದರೊಂದಿಗೆ ತಳುಕು ಹಾಕಿಕೊಂಡಿರುವ ಸೆಕ್ಸ್ ಉದ್ಯಮ, ಮನರಂಜನೆ, ಮತ್ತಿನ ಗಮ್ಮತ್ತು, ಕಾಂಚಾಣದ ಝಲಕು… ವೇಶ್ಯಾವಾಟಿಕೆಯ ಒಂದು ಉಪ ಅಧ್ಯಾಯವಾಗಿ ನಾನು ಲೈವ್ಬ್ಯಾಂಡ್ಅನ್ನು ನೋಡಿಬಿಟ್ಟೆ. ಅದೇ ಸೆಕ್ಸ್, ಅದೇ ದುಡ್ಡು, ಅದೇ ತಲೆಹಿಡುಕತನ, ಅದೇ ಹೆಣ್ಣು, ಅದೇ ಸರಕು…!
ಇತ್ತೀಚಿಗೆ ಕನ್ನಡ ಕಟ್ಟಾಳುಗಳ ಪಡೆಯೊಂದು ಲೈವ್ಬ್ಯಾಂಡ್ಗಳ ಮುಂದೆ ಘೋಷಣೆ ಕೂಗ್ತು. ಇಲ್ಲೆಲ್ಲಾ ಬೇರೆ ರಾಜ್ಯದ ಹುಡುಗಿಯರಿಗೆ ಡ್ಯಾನ್ಸ್ ಮಾಡೋಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧಿಕ್ಕಾರ; ನಮ್ಮವರಿಗೇ ಅವಕಾಶ ಕೊಡ್ಬೇಕು ಅಂತ. ತಳಬುಡದ ಅರಿವಿಲ್ಲದ ಇಂತಹ ಹೋರಾಟಗಳಿಂದ ಆಭಾಸಗಳೇ ಹೆಚ್ಚು. ಲೈವ್ಬ್ಯಾಂಡ್ಗಳಲ್ಲಿ ಡ್ಯಾನ್ಸ್ ಮಾಡೋ ಹುಡುಗೀರ ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಯ ಪರಿಚಯವೇ ಇಲ್ಲದೆ ಮಾಡುವ ಇಂತಹ ಹೋರಾಟಗಳ ಹಿಂದೆ ಮಂಥ್ಲಿ ವಸೂಲಿಯ ಕಾಳಜಿಯ ಹೊರತಾದ ಯಾವ ಸಾಮಾಜಿಕ ಕಳಕಳಿಯೂ ಕಂಡುಬಂದಿಲ್ಲ.
ಗೋಲ್ಡನ್ ಲೈವ್ಬ್ಯಾಂಡ್ನ ಸ್ವಾತಿಯಂತಹ ಲಕ್ಷಾಂತರ ಹೆಣ್ಣುಗಳು ಲೈವ್ಬ್ಯಾಂಡ್ಗಾಗಿಯೇ ಮಾರಾಟವಾಗ್ತಾರೆ. ಹಾಗೆಯೇ ಸ್ವಯಂ ಅವರೇ ಬಂದು ಸೇರ್ತಾರೆ. ಮತ್ತದೇ ಬಡತನ, ನಿರುದ್ಯೋಗ, ಅದಕ್ಕಿಂತಲೂ ಅನಕ್ಷರತೆಯೇ ಹೆಚ್ಚಿಸಿರುವ ಈ ಹುಡ್ಗೀರ್ಗೆ ನೃತ್ಯ ಮಾತ್ರ ಕರಗತ ಆಗಿರುತ್ತದೆ. ಇಲ್ಲಿಯೂ ವಂಚನೆ, ದೌರ್ಜನ್ಯ, ಲೈಂಗಿಕ ಕಿರುಕುಳಗಳಿಗೇನು ಕಡಿಮೆಯಿಲ್ಲ. ಸುಮಾರು 12ರಿಂದ 25ರ ವಯೋಮಾನದ ಬಳುಕುವ ತರುಣಿಯರು ಸ್ಪಷರ್ಿಸಿದ ಮದ್ಯ ಹೀರುತ್ತಾ, ಕಣ್ಣುಗಳಿಗೂ ಸುಖ ನೀಡುತ್ತಾ ಹಣದೆರಚಾಟದ ನಡುವೆ ತೆವಲು ತೀರಿಸಿಕೊಳ್ಳುವ ಈ ವ್ಯವಸ್ಥೆಯ ಪ್ರಾಧಾನ್ಯತೆಗೆ ಈ ಹೆಣ್ಣುಗಳು ಸರಕಾಗ್ತಾರೆ.
2005ರಲ್ಲಿ ಮಹಾರಾಷ್ಟ್ರ ಸಕರ್ಾರ ಬಾರ್ಗಳಲ್ಲಿ ಮಹಿಳೆಯರು ಮದ್ಯ ಪೂರೈಸುವುದನ್ನು ನಿಷೇಧಿಸಿತು. ಆ ಮೂಲಕ ಬಾರ್ನೃತ್ಯ ಕೊನೆಗೊಂಡಿತು. ಇದನ್ನೇ ನಂಬಿದ್ದ ಸುಮಾರು 75ಸಾವಿರ ಮಹಿಳೆಯರು ಉದ್ಯೋಗ ಕಳೆದುಕೊಂಡರು.
ಪ್ರಯಾಸ್ನಲ್ಲಿರುವ ಟಾಟಾ ಸಮಾಜ ವಿಜ್ಞಾನ ಸಂಸ್ಥೆ ನಡೆಸಿದ ಅಧ್ಯಯನವು ಡ್ಯಾನ್ಸ್ಬಾರ್ಗಳನ್ನು ನಿಷೇಧಿಸುವ ಮಹಾರಾಷ್ಟ್ರ ಸಕರ್ಾರದ ನಿಧರ್ಾರವನ್ನು ಸಮಥರ್ಿಸಿದೆ. ಬಾರ್ಗಳಲ್ಲಿ ನೃತ್ಯ ಮಾಡಲು ಸರಬರಾಜಾಗುವ ಯುವತಿಯರು ಮಾನವ ಸಾಗಾಟದ ದಂಧೆಗೆ ಬಲಿಬಿದ್ದೇ ಬಂದವರಾಗಿರುತ್ತಾರೆ ಎನ್ನುವುದು ಆ ಅಧ್ಯಯನದ ತಿರುಳು. ಬಾರ್ಗಳಲ್ಲಿ ನೃತ್ಯ ಮಾಡುತ್ತಿದ್ದ ಯುವತಿಯರನ್ನು ಕೇಳಿದಾಗಲೂ ಅವರು ತಮ್ಮ ಸ್ವಂತ ನಿಧರ್ಾರದಿಂದ ಬಂದಿರುವುದಾಗಿ ಒಪ್ಪಿಕೊಳ್ಳಲಿಲ್ಲ. ಮಧ್ಯವತರ್ಿಗಳ ಮೂಲಕ ಇಲ್ಲಿಗೆ ಬಂದಿರುವುದಾಗಿ ಹೇಳಿದರು.
ಡ್ಯಾನ್ಸ್ಬಾರ್ಗಳನ್ನು ನಿಷೇಧಿಸುವ ಮಹಾರಾಷ್ಟ್ರದ ನಿಧರ್ಾರ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇದನ್ನೇ ನಂಬಿ ಬದುಕುತ್ತಿದ್ದ ಸಾವಿರಾರು ಯುವತಿಯರ ಬದುಕಿನ ಪ್ರಶ್ನೆ ಎದುರಾಯಿತು. ಪರ-ವಿರುದ್ಧ ಅಭಿಪ್ರಾಯಗಳು ಬಂದವು. ನಿಷೇಧ ವಿರೋಧಿಸುವವರು ಮಹಿಳೆಯರು ಜೀವಿಸುವ ಹಕ್ಕು, ವೃತ್ತಿಯ ಹಕ್ಕನ್ನು ಮುಂದಿರಿಸಿದರೆ, ನಿಷೇಧ ಪರವಾದವರು ಬಾರ್ಗಳಲ್ಲಿ ನಡೆಯುತ್ತಿದ್ದ ಮಹಿಳೆಯರ ಶೋಷಣೆ ಹಾಗೂ ಬಲವಂತದ ದುಡಿಮೆ ಬಗ್ಗೆ ಗಮನ ಸೆಳೆದರು. ಆದರೆ ವಾಸ್ತವವಾಗಿ ಡ್ಯಾನ್ಸ್ಬಾರ್ಗಳಲ್ಲಿ ನೃತ್ಯ ಮಾಡುತ್ತಿದ್ದ ಯುವತಿಯರು ಉದ್ಯೋಗ ಕಳೆದುಕೊಂಡ ಬಳಿಕ ವೇಶ್ಯೆಯರಾಗಿ ರೂಪಾಂತರಗೊಂಡರು. ನೂರಾರು ಮಂದಿ ವ್ಯಾಪಾರೀ ಒಡನಾಡಿಗಳಾಗಿ ಹಾಗೂ ಬಾಡಿಗೆ ಹೆಂಡಂದಿರಾಗಿ ದುಡಿಯಲಾರಂಭಿಸಿದರು.
ರಾಕಿಗಳು ಹಾಗೇ ಇದ್ದಾರೆ. ಭೇಟಿಯ, ಸಂಪರ್ಕದ ಸ್ಥಳ ಬದಲಾವಣೆಯಾಗಿದೆ ಅಷ್ಟೆ. ಬಾರ್ಗಳನ್ನು ಮುಚ್ಚಿದ ನಂತರ ನಮಗೆ ವೇಶ್ಯಾವೃತ್ತಿ ಬಿಟ್ಟರೆ ಅನ್ಯ ಮಾರ್ಗವಿರಲಿಲ್ಲ, ಸಕರ್ಾರದ ನಿಧರ್ಾರ ನಮ್ಮನ್ನು ನಿರುದ್ಯೋಗಿಗಳನ್ನಾಗಿಸಿದ್ದೇ ಅಲ್ಲದೆ ವಸತಿಹೀನರನ್ನಾಗಿಸಿದೆ ಅಂತಾಳೆ ರಾಜಸ್ತಾನದ ಪೂನಂ. ಒಟ್ಟಾರೆಯಾಗಿ ಮನರಂಜನಾ ಲೈಂಗಿಕತೆಯಿಂದ ವೇಶ್ಯಾವೃತ್ತಿಯೆಡೆಗೆ ಹೋಗೋದೊಂದೆ ಪಯರ್ಾಯವಾಗಿಬಿಟ್ಟಿತ್ತು ಅವರಿಗೆ.
ಇತ್ತೀಚಿಗೆ ಕನರ್ಾಟಕದ ಪೊಲೀಸ್ ಇಲಾಖೆ ಇಲ್ಲಿ ಲೈವ್ಬ್ಯಾಂಡ್ಗಳನ್ನ ನಿಷೇಧಿಸಿತ್ತು. ಲೈವ್ಬ್ಯಾಂಡ್ ಮಾಲೀಕರ ಸಂಘ ರಾಜ್ಯ ಹೈಕೋಟರ್್ಗೆ ಮೊರೆಹೋಯಿತು. ಆದ್ರೂ ಹೈಕೋಟರ್್ ಪೊಲೀಸ್ ಇಲಾಖೆಯ ಕ್ರಮವನ್ನೇ ಎತ್ತಿ ಹಿಡಿಯಿತು. ಅಷ್ಟಕ್ಕೇ ಸುಮ್ಮನಾಗದ ಮಾಲೀಕರ ಸಂಘ ಸುಪ್ರೀಂಕೋಟರ್್ ಮೆಟ್ಟಿಲೇರಿತ್ತು. ಈಗ ಸುಪ್ರೀಂಕೋಟರ್್ ಮಾಲೀಕರ ಪರವಾಗಿ ತೀಪರ್ು ನೀಡಿದ್ದು ಇಲ್ಲಿ ಲೈವ್ಬ್ಯಾಂಡ್ಗಳು ನಿಷೇಧ ಮುಕ್ತವಾದವು. ಮಹಾರಾಷ್ಟ್ರ ಸಕರ್ಾರದ ನಿಷೇಧದ ಬಿಸಿಯಿಂದ ತತ್ತರಿಸಿರುವ ಅಲ್ಲಿನ ಲೈವ್ಬ್ಯಾಂಡ್ ಹುಡುಗಿಯರು ಬೆಂಗಳೂರಿನತ್ತ ಮುಖ ಮಾಡಿದ್ದಾರೆ!
ಹಾಗೆಯೇ ಪೊಲೀಸರಿಗೆ, ರೌಡಿಗಳಿಗೆ, ತಲೆಹಿಡುಕರಿಗೆ, ವಸೂಲಿಬಾಜಿಗಳಿಗೆ ವಸೂಲಿಯ ತವರಾದ ಲೈವ್ಬ್ಯಾಂಡ್ ಮತ್ತೆ ಶೃಂಗಾರಗೊಂಡಿರುವುದು ಅತ್ಯಂತ ಸಂತಸ ತಂದಿದೆ.
ಆದ್ರೆ ಅಡ್ರೆಸ್ ಮಾತ್ರ ಕೇಳ್ಬೇಡಿ. ಏಕೆಂದರೆ ಇಡೀ ಸರಣಿಯಲ್ಲಿ ವಿಳಾಸ ಹೇಳೊಲ್ಲ ಅಂತ ಟೈಮ್ಸ್ ಜೊತೇಲಿ ಡೀಡ್ ಮಾಡ್ಕೊಂಡಿದ್ದೀನಿ. ಈ ಮಹಿಳೆಯರ ಯಾತನೆಯ ಬಗ್ಗೆ ಸಮೂಹದ ಕಣ್ಣು ತೆರಸೋದೇ ಈ ಬರಹದ ಮುಖ್ಯ ಉದ್ದೇಶ.
ಇದು ವಾಸ್ತವ!
ಲೈವ್ಬ್ಯಾಂಡ್ ನೃತ್ಯಗಾತರ್ಿಯರು, ಬಾರ್ಗಲ್ಸರ್್, ಜ್ಯೂಸಿಗಲ್ಸರ್್…… ಹೀಗೆ ತರಾವರಿ ಹೆಸರಿನಲ್ಲಿ ಕರೆದರೂ ಅವರೆಲ್ಲರ ಕೆಲಸ ಒಂದೇ. ಅದು ಬಾರ್, ಪಬ್ಗಳಲ್ಲಿ ಗಿರಾಕಿಗಳಿಗೆ ಮದ್ಯ ಪೂರೈಸುವುದು ಅಥವಾ ಅಲ್ಲಿ ನತರ್ಿಸುವುದು. ಸೈ ಎನಿಸಿದರೆ ಗಿರಾಕಿಗಳೊಂದಿಗೆ ರಾತ್ರಿ ಕಳೆಯಲು ತೆರಳುವುದು.
ಜಗತ್ತಿನ ಎಲ್ಲೆಡೆ ಕೋಟ್ಯಾಂತರ ಯುವತಿಯರಿಗೆ ಇದು ಜೀವನದ ಹಾದಿ. ಮುಂಬೈ ನಗರ ಒಂದರಲ್ಲೇ ಡ್ಯಾನ್ಸ್ಬಾರ್ಗಳ ನಿಷೇಧದಿಂದ 50ಸಾವಿರ ಬಾರ್ಗಲ್ಸರ್್ಗಳು ನಿರುದ್ಯೋಗಿಗಳಾದರು ಎಂದರೆ ಉಳಿದ ಮಹಾನಗರಗಳಲ್ಲಿ ಈ ವೃತ್ತಿಯಲ್ಲಿ ಇರುವವರ ಸಂಖ್ಯೆಯನ್ನು ಊಹಿಸಬಹುದು.
ಋಷಿ ಮುನಿಗಳ ತಪೋಭಂಗಕ್ಕೆ ಮೇನಕೆ, ಊರ್ವಶಿಯರು ಯತ್ನಿಸಿದ ಕಥೆಗಳನ್ನು ಪುರಾಣಗಳಲ್ಲಿ ಓದುತ್ತೇವೆ. ಮುಜರಾ ನೃತ್ಯವೂ ಇದೇ ಮಾದರಿಯ ಮತ್ತೊಂದು ಪ್ರಾಕಾರ. 1858ರಲ್ಲಿ ಗುಜರಾತಿನ ಭಾವನಗರದಲ್ಲಿ ಕ್ಯಾಬರೇ ನೃತ್ಯವನ್ನು ಸ್ವತಃ ತಾನು ವೀಕ್ಷಿಸಿರುವುದಾಗಿ 19ನೇ ಶತಮಾನದ ಹೆಸರಾಂತ ಕವಿ ಹಾಗೂ ಸಮಾಜ ಸುಧಾರಕ ದಳಪತ್ರಾಂ ಬರೆದಿದ್ದಾರೆ.
ಡ್ಯಾನ್ಸ್ಬಾರ್ಗಳಲ್ಲಿ ನತರ್ಿಸುವ ಬಹುಮಂದಿ ಮಾನವಸಾಗಾಟದ ಬಲಿಗಳಾಗಿದ್ದು ಇವರಲ್ಲಿ ಶೇ.90ರಷ್ಟು ಮಂದಿ ತೀರಾ ನಿರ್ಗತಿಕ ಕುಟುಂಬದ ಹಿನ್ನಲೆಯವರಾಗಿದ್ದು, ಅನಕ್ಷರಸ್ತರಾಗಿದ್ದಾರೆ. ಶೇ.10ರಷ್ಟು ಮಂದಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸುವ ಮಂದಿಯೂ ಇದ್ದಾರೆ.
ನೀರ, ನೀರೆ ಎಂಬಂತೆ ಮದ್ಯ ಮತ್ತು ಮಾನಿನಿ ಬಾರ್ಗಳಲ್ಲಿ ವ್ಯಾಪಾರದ ಕೇಂದ್ರ ಆಕರ್ಷಣೆ. ಮುಂಬೈನಲ್ಲಿ ಡ್ಯಾನ್ಸ್ಗಲ್ಸರ್್ಗಳನ್ನು ಬಾರ್ಗಳಲ್ಲಿ ನಿಷೇಧಿಸಿದೊಡನೆಯೇ ಬಾರ್ಗಳೂ ಸಹಾ ವ್ಯಾಪಾರವಿಲ್ಲದೆ ಬಾಗಿಲು ಮುಚ್ಚಿದವು.
ಬೆಂಗಳೂರಿನಲ್ಲಿ ಲೈವ್ಬ್ಯಾಂಡ್ ಮೇಲೆ ನಿಷೇಧ ಹೇರಿದಾಗ ಬಾರ್ಗಳು ಕಂಗಾಲಾದವು. ಯುವತಿಯರ ಬದಲು 2000 ಹಿಜಡಾಗಳನ್ನು ನೇಮಿಸಿ ನೃತ್ಯ ಮಾಡಿಸಲು ಪ್ರಯತ್ನಿಸಿದವು.
Like this:
Like ಲೋಡ್ ಆಗುತ್ತಿದೆ...
ಇತ್ತೀಚಿನ ಟಿಪ್ಪಣಿಗಳು