ಎಲ್ಲಾದರೂ ಇರಿ, ಎಂತಾದರೂ ಇರಿ, ಕನ್ನಡ ಟೈಪ್ ಮಾಡುತ್ತಿರಿ.

Tech Talk

RaviHegde.jpg

– ರವಿ ಹೆಗಡೆ

ಎಲ್ಲಾದರೂ ಇರಿ. ಎಂತಾದರೂ ಇರಿ. ಆನ್ ಲೈನಲ್ಲಿ ಕನ್ನಡ ಟೈಪ್ ಮಾಡುತ್ತಿರಿ.

ವೆಬ್ ಸೈಟುಗಳಲ್ಲಿ ಕನ್ನಡ ಟೈಪ್ ಮಾಡಲು ಅನೇಕ ವಿಧಾನಗಳಿವೆ ಅಂತ ನನ್ನ ಈ ಹಿಂದಿನ ಲೇಖನದಲ್ಲಿ ತಿಳಿಸಿದ್ದೆ. ಈಗ ಅದೆಲ್ಲಕ್ಕಿಂತ ಇನ್ನೂ ಸುಲಭದ ವಿದ್ಯೆಯನ್ನು ಕಲಿಸಿಕೊಡುತ್ತೇನೆ. Thanks to Google’s Newest Bookmarklet!

ಭಾರತೀಯ ಭಾಷಾ ಟೂಲ್ ಅಭಿವೃದ್ಧಿಯಲ್ಲಿ ಗೂಗಲ್ ಇನ್ನೂ ಒಂದು ಹೆಜ್ಜೆ ಮುಂದೆ ಬಂದಿದೆ. ಮೂರು ತಿಂಗಳ ಹಿಂದೆ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಿಗೆ ಗೂಗಲ್ ಲಿಪ್ಯಂತರ (Transliteration) ಟೂಲ್ ನೀಡಿತ್ತು ತಾನೇ? ಆದರೆ, ಆ ಟೂಲ್ ಗೂಗಲ್ ಒಡೆತನದ ಜಿಮೇಲ್, ಬ್ಲಾಗರ್ ಮುಂತಾದ ಸೈಟುಗಳಲ್ಲಿ ಮಾತ್ರ ಕೆಲಸ ಮಾಡುತ್ತಿತ್ತು. ಇದೀಗ, ಜೂನ್ 4ರಂದು, ಕನ್ನಡ ಬುಕ್ಮಾರ್ಕ್-ಲೆಟ್ ಎಂಬ ವಿನೂತನ ಟೂಲನ್ನು ಗೂಗಲ್ ಬಿಡುಗಡೆ ಮಾಡಿದೆ. ಈ ಟೂಲಿಂದ ಯಾವುದೇ ಸೈಟಿನಲ್ಲಿ ಬೇಕಾದರೂ ಕನ್ನಡ ಅಥವಾ ಇತರ ಭಾರತೀಯ ಭಾಷೆಯನ್ನು ಸುಲಭವಾಗಿ ಟೈಪ್ ಮಾಡಬಹುದು. ಕನ್ನಡ ಟೈಪ್ ಮಾಡಲು ಹೆಣಗಾಡುವ ಎಲ್ಲರಿಗೂ ಈ ಟೂಲ್ ನಿಜಕ್ಕೂ ಒಂದು ವರ.

ಅಂದಹಾಗೆ, ಬುಕ್ಮಾರ್ಕ್-ಲೆಟ್ ಅಂದರೆ ಏನು ಅಂತ ನೀವು ಕೇಳಬಹುದು. Bookmark + Applet ಸೇರಿ Bookmarklet ಆಗಿದೆ. ಇದೊಂದು ಅತ್ಯಂತ ಪುಟಾಣಿ ತಂತ್ರಾಂಶ. ಕೆಲವಾರು ಸಾಲುಗಳ ಜಾವಾಸ್ಕ್ರಿಪ್ಟ್ ಅಷ್ಟೇ. ನಿಮ್ಮ ಬ್ರೌಸರಿನಲ್ಲಿ ಇದನ್ನು ಫೇವರೆಟ್ ಲಿಂಕ್ ಆಗಿ ಸೇರಿಸಿಕೊಂಡರೆ ಸಾಕು.

ಕನ್ನಡ ಟೈಪ್ ಮಾಡಬೇಕು ಅನ್ನಿಸಿದಾಗ ಈ ಲಿಂಕ್ ಒತ್ತಬೇಕು. ಕನ್ನಡ ಲಿಪ್ಯಂತರ ಕ್ರಿಯೆ ಚಾಲೂ ಆಗುತ್ತದೆ. ಕನ್ನಡ ಟೈಪಿಂಗ್ ಬೇಡ ಅನ್ನಿಸಿದಾಗ ಮತ್ತೆ ಈ ಲಿಂಕ್ ಒತ್ತಿದರೆ ಲಿಪ್ಯಂತಕ ಕ್ರಿಯೆ ಸ್ಥಗಿತಗೊಳ್ಳುತ್ತದೆ.

ಇದು ಸಹ “ಫೊನೆಟಿಕ್ ಕೀಬೋರ್ಡ ವಿನ್ಯಾಸ” ಆಧಾರಿತ ಟೂಲ್. ಅಂದರೆ, “Baruttane ಅಂತ ಟೈಪ್ ಮಾಡಿ ಒಂದು ಸ್ಪೇಸ್ ನೀಡಿದರೆ “ಬರುತ್ತಾನೆ” ಅಂತ ತಂತಾನೆ ಲಿಪ್ಯಂತರವಾಗುತ್ತದೆ.

ಈ ಟೂಲನ್ನು ಫೇವರಿಟ್ ಲಿಂಕ್ ಆಗಿ ನಿಮ್ಮ ಬ್ರೌಸರಿಗೆ ಸೇರಿಸಿಕೊಳ್ಳುವುದು ಹೇಗೆ?

1. ಮೊದಲು ಈ ಲಿಂಕಿನ ಮೇಲೆ ರೈಟ್ ಕ್ಲಿಕ್ ಮಾಡಿ. 

2. ಈಗ “Add to Favorites” ಕ್ಲಿಕ್ ಮಾಡಿ.

ಇನ್ನಷ್ಟು