‘ಕುವೆಂಪು ಮತ್ತು’ ….’ಕನಸು ಕನ್ನಡಿ’ ….

ಲಕ್ಷ್ಮಣ ಕೊಡಸೆ ಅವರ ವ್ಯಕ್ತಿ ಚಿತ್ರಣಗಳ ಸಂಕಲನ  ‘ಕುವೆಂಪು ಮತ್ತು..’  ಹಾಗು ಬಿ ಎಂ ಹನೀಫ್ ಅವರ ಸಿನಿಮಾ ಕುರಿತ ಬರಹಗಳ ಪುಸ್ತಕ  ‘ಕನಸು ಕನ್ನಡಿ’  ನಿನ್ನೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಬಿಡುಗಡೆಯಾಯಿತು.

ಚಲನ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಚಿತ್ರ ತಾರೆ ತಾರಾ  ಮತ್ತು ಕವಯತ್ರಿ ಡಾ. ಎಚ್ .ಎಲ್ ಪುಷ್ಪ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು . ಆ ಕಾರ್ಯಕ್ರಮದ ಒಂದು ನೋಟ ಇಲ್ಲಿದೆ .

ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ..

ಡಿ 6 : ಆ ದಿನ

ಇಲ್ಲಿ ಒಂದು ವ್ಯಂಗ್ಯಚಿತ್ರ ಹಾಗೂ OPEN magazine ಬಯಲಿಗೆಳೆದಿರುವ ಒಂದು ಲೇಖನವಿದೆ. ನೀವು ಓದಲೇಬೇಕು. ಪ್ರತಿಕ್ರಿಯಿಸಿ

ರೇಡಿಯೋ ಅಂಗಡಿಯಿಂದ ಆಕಸ್ಮಿತವಾಗಿ ವ್ಯಂಗ್ಯಲೋಕಕ್ಕೆ ಜಿಗಿದ ಪಿ. ಮಹಮ್ಮದ್ ಇಂದು ನಮ್ಮೊಂದಿಗಿನ ಅತ್ಯುತ್ತಮ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ದಕ್ಷಿಣ ಕನ್ನಡ ಜಿಲ್ಲೆಯ ಪಡುಬಿದ್ರಿಯ ಮಹಮ್ಮದ್ ಇಂದು ಪರಿಚಿತ ಹೆಸರು. `ಸಂಯುಕ್ತ ಕರ್ನಾಟಕ’, `ಮುಂಗಾರು’ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕಾರರಾಗಿ ದುಡಿದಿರುವ ಮಹಮ್ಮದ್  ಖ್ಯಾತ ಆಂಗ್ಲ ದೈನಿಕ `ಹಿಂದುಸ್ತಾನ್ ಟೈಮ್ಸ್’ನ ಪ್ರತಿಷ್ಟಿತ ವ್ಯಂಗ್ಯಚಿತ್ರ ಪ್ರಶಸ್ತಿಯನ್ನು ಕರ್ನಾಟಕಕ್ಕೆ 3 ಬಾರಿ ತಂದುಕೊಟ್ಟ ಹೆಮ್ಮೆ ಇವರದ್ದು. ಹೆಸರಾಂತ ವ್ಯಂಗ್ಯಚಿತ್ರಕಾರ ಆರ‍್.ಕೆ.ಲಕ್ಷ್ಮಣರ ರೇಖೆಗಳಿಗೆ ಮಾರುಹೋದ ಇವರು ಸದಾ ಸಮಾಜದ ನೋವಿಗೆ ಸ್ಪಂದಿಸಿದರು. ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಹಿಡಿದು ಅಯೊದ್ಯೆಯವರೆಗೆ ಇವರ ಬತ್ತಳಿಕೆಯಲ್ಲಿ ಹಲವು ವ್ಯಂಗ್ಯಬಾಣಗಳು.

ಕೋಮುವಾದ ತನ್ನ ಕರಾಳ ಹಸ್ತಗಳನ್ನು ಎಲ್ಲೆಡೆ ಚಾಚುತ್ತಿರುವುದನ್ನು ಕಂಡ ಖ್ಯಾತ ವ್ಯಂಗ್ಯಚಿತ್ರಕಾರ ಅಬಿದ್ ಸುರ್ತಿ `ನನ್ನ ಜೋಳಿಗೆಯಲ್ಲಿ ಇನ್ನು ವ್ಯಂಗ್ಯದ ಬಾಣಗಳಿಲ್ಲ’ ಎಂದು ಕಣ್ಣೀರಿಟ್ಟರು. ಅಂತೆಯೇ ಪಿ. ಮಹಮ್ಮದ್ ವ್ಯಂಗ್ಯರೇಖೆಗಳಲ್ಲಿ ಕಂಡ ವಿಷಾದದ ಚಿತ್ರಗಳು ಈ ಪುಸ್ತಕದಲ್ಲಿವೆ

ಅಲ್ಲದೆ ಈ ಲೇಖನವನ್ನೂ ನೀವು ಓದಬೇಕು

open


ಇದೇ ಬಹಿರಂಗ ಸುದ್ದಿ ಅಥ್ವ ಕಾಮೆಂಟ್ಸ್ comets…

-ಸೂತ್ರಧಾರ ರಾಮಯ್ಯ

ಸೋರುತಿಹುದು ದೊಡ್ಡಣ್ಣನ (us) ಮನೆಯ ಮಾಳಿಗಿ!….. ವಿಕಿ ಲೀಕ್ಸಿನಿಂದ?

ಹೊಲಿ ನಿನ್ನ ತುಟಿಗಳನು ಮಂಕು ತಿಮ್ಮ. …..ಸದಾ ರಾಜಕೀಯ ಸುದ್ದಿಯನ್ನೇ  ರುಬ್ಬುವ ಟಿ.ವಿ ಚಾನಲ್ಸ್ ಗೆ ಹೇಳಿದ್ದು. ವಿಮಾನಯಾನ ದರ ಇಳಿತ.
…ಎಷ್ಟು ಹೊತ್ತೂಂತ ಏರ್ ನಲ್ಲೆ ಇರೋಕಾಗುತ್ತೆ? ಇಳಿಯಲೇಬೇಕು ಕಿಂ ಮತ್ತು. ವಿಧಿ ವಿಪರೀತ! ಅನ್ನೋ ಹಾಗಾಯ್ತಲ್ಲಾ ಅವನ ಬಾಳು. ….ನಿಧಿ ವಿಪರೀತಆದ್ರೆಹಾಗೇ. ಗುಪ್ತರ ಕಾಲವನ್ನು ಸುವರ್ಣಯುಗ ಅನ್ತಾರಲ್ವೆ?  ….. ಈಗಿನ ‘ಗುಪ್ತ್ ಗುಪ್ತ್’ರ ಕಾಲವೂ ‘ಸುವರ್’ನ ಯುಗವೇ ಅಲ್ವೇ?

ಕಲಾಪವೇ ಇಲ್ಲಾ; ಪಾರ್ಲಿಮೆಂಟ್ನಲ್ಲಿ ಬರಿ ಪ್ರಲಾಪ?….ವಾಕ್ ಸ್ವಾತಂತ್ರಕ್ಕಿಂತಲೂ ವಾಕೌಟ್ ಸ್ವಾತಂತ್ರ ಬಳಸಿದ್ದರಿಂದ.
ಭಾರತದ ಯುವಕರು ಕಲಾ ಕೋವಿ ದರಾಗಬೇಕು ಅಂದರು ಶ್ರೀಗಳು.  …..ಪಾಕಿಸ್ತಾನದ ಯುವಕರೂ ‘ಕಲಾಶ್ನಿ ಕೋವಿ’ದರಾಗಬೇಕು(AK47 ) ಅಂತಾ ಕರೆ ಕೊಡ್ತಾರನ್ತಲ್ಲಾ ಅಲ್ಲಿನ -ಇತಿ ಶ್ರೀಗಳು.
ನಮ್ಮ ಮುಂದಿರುವ ರೋಲ್ (ಕಾಲ್)  ಮಾಡೆಲ್ ಗಳೇ  ವಿಚಿತ್ರ?
….ಹೌದು. ಮಾಡಿ ಅಂದದ್ದನ್ನ ಮಾಡಲ್ಲಾ, ಕಳಚಿಕೊಳ್ಳೋಕೆ ನೋಡ್ತಾರೆ-ಬೇಡಿ-ಅಂದದ್ದನ್ನ ಮಾಡಿ ಹಾಕಿಸ್ಕೋಬೇಕಲ್ಲ ಬೇಡಿ.
ಕೌನ್ ಬನೇಗಾ ಕರೋಡ್ ಪತಿ?

More

ಗಾಂಧೀ ಕ್ಲಾಸು ವಿಮಾನ ಏರಿದ್ದು…

-ಧನಂಜಯ ಕುಲಕರ್ಣಿ

ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ

ವಾಗಿಲಿಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಎದುರಾದ ತೊಡಕುಗಳು, ಸಾಹಸಗಾಥೆಗಳು, ಅಲ್ಲಿನ ಜನರೊಂದಿಗಿನ ಒಡನಾಟ, ಮಲ್ಲೇಪುರಂ ಮಳೆಗಾಲದ ಹೊತ್ತಿನಲ್ಲಿ ತಮ್ಮ ಚಪ್ಪಲಿಯನ್ನು ಕಳೆದುಕೊಂಡು, ಇದ್ದೊಂದೇ ಚಪ್ಪಲಿಯನ್ನು ಶುಭ್ರವಾಗಿ ತೊಳೆದುಕೊಂಡು ಕುಂವೀ ಮನೆಗೆ ಬಂದು, ಅಲ್ಲಿರುವ ಚೋಳುಗಳ ಪರಿವಾರದ ಪರಿಚಯ ಮಾಡಿಕೊಂಡದ್ದು..ಹೀಗೆ ಮುಂತಾದ ರೋಚಕ ಅನುಭವಗಳನ್ನು ಓದುತ್ತ ಹೋದಂತೆ ಮೈಮೇಲಿನ ಕೂದಲು ಎದ್ದು ನಿಲ್ಲುತ್ತಿದ್ದವು..

ಬೆಳಗಿನ ಜಾವ ಆರು ಗಂಟೆಗೆ ಹೈದರಾಬಾದ್‍ಗೆ ಹೊರಡುವ ವಿಮಾನದಲ್ಲಿ ಕುಳಿತುಕೊಂಡು “ಗಾಂಧಿ ಕ್ಲಾಸು” ಓದುತ್ತಿರುವಾಗಿನ ಅನುಭವಗಳಿವು. ನಾಗರೀಕರಣದ ಗಂಧಗಾಳಿ ಗೊತ್ತಿಲ್ಲದ, ಮಾನವ ಸಂಬಂಧಗಳ ಅರ್ಥವಿಲ್ಲದ ಊರಿಗೆ ಚುನಾವಣಾ ಕೆಲಸಕ್ಕೆಂದು, ಅದೂ ಪಂಚಾಯ್ತಿ ಚುನಾವಣಾ ಕೆಲಸಕ್ಕೆಂದು ಹೋಗಿ, ಅಲ್ಲಿ ಪ್ರತಿಮನೆಯಲ್ಲಿ ತರಕಾರಿಗಳನ್ನಿಡುವ ರೀತಿಯಲ್ಲಿ ನಾಡಬಾಂಬ್ ಗಳನ್ನಿಟ್ಟುಕೊಂಡು, ಅದನ್ನೇ ಬದುಕು ಅಂತ ಅಪ್ಪಿಕೊಂಡು ಬದುಕುತ್ತಿರುವ ಜನರಮಧ್ಯೆ ಬದುಕಿ, ರಕ್ತಪಾತಗಳನ್ನು ಕಣ್ಣಾರೆಕಂಡು ಅದನ್ನು ಯಥಾವತ್ತಾಗಿ ವಿವರಿಸುವ ಕುಂವೀ…”ಹೀಗೂ ಉಂಟೇ” ಎಂದು ಹುಬ್ಬೇರಿಸುವಂತೆ ಮಾಡುತ್ತಾರೆ….

ಇದೆಲ್ಲ ಓದುತ್ತಿದ್ದಂತೆ…”ಗಾಂಧಿ ಕ್ಲಾಸು” ಕುಂವೀ ಅವರ ಆತ್ಮಕಥೆಯೆಂಬ ಕಾದಂಬರಿಯನ್ನು ಇಡಿಯಾಗಿ ರಂಗದಮೇಲೆ ತರುವ ಯೋಚನೆಗಳು ತಲೆಯಲ್ಲಿ ತಹರೆವಾರಿಯಾಗಿ ಗಿರಕಿಹೊಡೆಯ ಹತ್ತಿದವು…ಅದೇ ಗುಂಗಿನಲ್ಲಿ “ಗಾಂಧಿ ಕ್ಲಾಸು” ಪುಸ್ತಕವನ್ನು ವಿಮಾನಿನಲ್ಲಿ ನನ್ನ ಮುಂದಿನ ಸೀಟಿನ ಹಿಂದೆ ಇರುವ ಸ್ಥಳದಲ್ಲಿ ಇಟ್ಟು ಯೋಚನೆಯಲ್ಲಿ ಮುಳುಗಿದೆ..ಮುಂದೆ ಹೈದರಾಬಾದ್ ನಿಲ್ದಾಣ ಬಂತು..ನನ್ನ ಲಗೇಜು ತೆಗೆದುಕೊಂಡು ವಿಮಾನದಿಂದ ಇಳಿದು ಹೊರನಡೆದೆ…ನಿಲಾಣದಿಂದ ಹೊರಬಂದ ನಂತರ “ಗಾಂಧಿ ಕ್ಲಾಸು” ವಿಮಾನು ಏರಿ ಅಲ್ಲಿಯೇ ಪವಡಿಸುತ್ತಿರುವುದು ಗಮನಕ್ಕೆ ಬಂತು..ತುಂಬ ಚಡಪಡಿಸಿದೆ…

More

ಇಂಡೋನೇಶ್ಯಾ ಮತ್ತು ಅಂತರ್ಜಾಲ

-ಅಶೋಕ್ ಕುಮಾರ್

ಕನ್ನಡ ಬ್ಲಾಗರ್ಸ್

ಇಂಡೋನೇಶ್ಯಾವು ಅಂತಜಾಲ ಬಳಕೆಯಲ್ಲಿ ಮುಂದಿರುವ ದೇಶವಾಗುತ್ತಿದೆ.ಅದರಲ್ಲೂ ಸಾಮಾಜಿಕ ಜಾಲತಾಣಗಳನ್ನು ಇಲ್ಲಿನ ಜನರಷ್ಟು ಮೆಚ್ಚುವವರು ಬೇರೆಲ್ಲೂ ಇದ್ದಹಾಗಿಲ್ಲ.ಫೇಸ್‌ಬುಕ್ ಮತ್ತು ಟ್ವಿಟರ್ಬಳಕೆಯಲ್ಲಿ ಇಂಡೋನೇಶ್ಯಾದವರದ್ದು,ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ ಮೇಲುಗೈಯಾಗಿದೆ.ಜಗತ್ತಿನಲ್ಲೇ ಫೇಸ್‌ಬುಕ್ ಬಳಕೆದಾರರ ಸಂಖ್ಯೆಯಲ್ಲಿ ಇಂಡೋನೇಶ್ಯಾನಾಲ್ಕನೇ ಸ್ಥಾನದಲ್ಲಿದೆ.ಹೆಚ್ಚಿನವರು ಮೊಬೈಲ್ ಸಾಧನಗಳ ಮೂಲಕವೆ ಅಂತರ್ಜಾಲ,ಅದರಲ್ಲೂ ಈತಾಣಗಳ ಬಳಕೆ ಮಾಡುತ್ತಿದ್ದಾರೆ.

ಭಾರತದ ಭೇಟಿಯ ನಂತರ ಒಬಾಮಾ ದಂಪತಿಗಳು ಇಂಡೋನೇಶ್ಯಾ ಪ್ರವಾಸಕ್ಕೆ ಹೋದದ್ದು ನೆನಪಿದೆಯೇ?ಒಬಾಮ ಪತ್ನಿಯ ಕೈಕುಲುಕಿ ಸ್ವಾಗತಿಸಿದ ಇಲ್ಲಿನ ಸಚಿವರೋರ್ವರ ಕ್ರಮವು,ಸಂಪ್ರದಾಯಕ್ಕೆ ವಿರುದ್ಧವಾಗಿತ್ತು,ಜನರು ಅದರ ಬಗ್ಗೆ ಟ್ವಿಟರಿನಲ್ಲಿ ಚರ್ಚಿಸಿದ ಪರಿ ಹೇಗಿತ್ತೆಂದರೆ,ಅದು ಅಂದಿನ ಬಿಸಿ-ಬಿಸಿ ಸುದ್ದಿಯಾಯಿತು.

ಇದರಲ್ಲಿ ತಂತ್ರಜ್ಞಾನ ವಿಷಯಗಳ ಚರ್ಚೆಯೂ ಗರಿಗೆದರುವುದು ವಿಶೇಷ.ಬರೇ ಒಣಚರ್ಚೆಗಲ್ಲದೆ,ಅಭಿವೃದ್ಧಿಗೂ ಈ ತಾಣಗಳ ಬಳಕೆಯಾಗುತ್ತಿವೆ.ರಾಜಧಾನಿ ಜಕಾರ್ತಾದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲೂ ಸಾಮಾಜಿಕ ಜಾಲತಾಣಗಳ ಬಳಕೆ ನಡೆದಿವೆ.

More

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…

‘ಇದೆಲ್ಲಾ ನಿಮಗೆ ಹೇಗೆ ಗೊತ್ತಾಗುತ್ತೆ? -ಅನ್ನೋ ಪ್ರಶ್ನೆ ನನಗೆ ಮೇಲಿಂದ ಮೇಲೆ ಎದುರಾಗಿದೆ. ನನಗೆ ಮಾತ್ರ ಅಲ್ಲ ಯಾವುದೇ ಜರ್ನಲಿಸ್ಟ್ ಎಲ್ಲಿ, ಯಾರಿಗೇ ಸಿಗಲಿ ಬರುವ ಮೊತ್ತ ಮೊದಲ ಪ್ರಶ್ನೆಯೇ ಈ ವಿಷಯ ನಿಮಗೆ ಹೇಗೆ ಗೊತ್ತಾಯ್ತು ಅಂತ.

ಎಲ್ಲಾ ಪತ್ರಿಕೆ, ಚಾನಲ್ ಗಳು ಘಂಟಾಘೋಷವಾಗಿ ಕುಮಾರಸ್ವಾಮಿ ಅಧಿಕಾರವನ್ನ ಬಿ.ಎಸ್.ಯಡಿಯೂರಪ್ಪ ನವರಿಗೆ ಹಸ್ತಾಂತರಿಸುತ್ತಾರೆ ಅಂತ ಘೋಷಿಸುತ್ತಿದ್ದಾಗ ನಮ್ಮ ಸೀನಿಯರ್ ಕರೆಸ್ಪಾನ್ಡೆಂಟ್ ಸೋಮಶೇಖರ್ ಕವಚೂರು ‘ಖಂಡಿತಾ ಹಸ್ತಾಂತರ ಇಲ್ಲ’ ಅನ್ನುವ ಸುದ್ದಿ ಹೊತ್ತು ತಂದಿದ್ದರು. ಈ ನ್ಯೂಸ್ ಬ್ರೇಕ್ ಮಾಡುವುದಕ್ಕೆ ಹಿಂದೆ ಮುಂದೆ ನೋಡಬೇಕಾದ ಸ್ಥಿತಿ ಇತ್ತು

ಪೂರ್ಣ ಓದಿಗೆ : ಮೀಡಿಯಾ ಮೈಂಡ್

 

ಜಯಶ್ರೀ ಕಾಲಂ:ಸುಂದರವಾದ ಸಾಹಿತ್ಯ ಅದ್ಭುತವಾದ ರಾಗ ಸಂಯೋಜನೆ!

ಸಪ್ತ ಸಾಗರದಾಚೆ  ಸಪ್ತಸ್ವರ.. ಜಯ ಹೇ ಜಯ ಹೇ ಕನ್ನಡ ನುಡಿಗೆ…ಸುಂದರವಾದ ಸಾಹಿತ್ಯ ಅದ್ಭುತವಾದ ರಾಗ ಸಂಯೋಜನೆ!   ಚಂದನವಾಹಿನಿಯಲ್ಲಿ  ಪ್ರಸಾರ ಆಗುತ್ತಿದ್ದ ಮುದ್ರಿತ  ಕಾರ್ಯಕ್ರಮಸಪ್ತ ಸಾಗರ ದಾಚೆ ಸಪ್ತಸ್ವರ ವೀಕ್ಷಿಸ್ತಾ ಇದ್ದೆ. ಸಖತ್ತಾಗಿತ್ತು. ಎಷ್ಟೆಲ್ಲಾ ಪ್ರತಿಭೆಗಳು :-) ಮುಖ್ಯವಾಗಿ ಒಂದು ಸ್ಪರ್ಧಿ ನೀರಿನಲ್ಲಿ ಅಲೆಯ ಉಂಗುರ ಹಾಡು ಹೇಳಿದ್ರು .. ಗೊತ್ತಾಯ್ತು ಕೆಲವು ಸಾಲುಗಳನ್ನು, ಪದಗಳು  ಆಕೆಗೆ ಅನುಕರಿಸಲು ಆಗಲಿಲ್ಲ  . ಕೆಲವು ಹಾಡುಗಳು ಸಿಕ್ಕಾಪಟ್ಟೆ ಹೈ ಪಿಚ್.. ಉಹುಂ ತುಂಬಾ ಕಷ್ಟ , ದೋಣಿ ಸಾಗಲಿ ಮುಂದೆ ಹೋಗಲಿ ಸಹ ಇಂತಹ ಗುಂಪಿಗೆ ಸೇರ್ಪಡೆ ಆಗುತ್ತದೆ. ಆ ಮಾತು ಪಕ್ಕಕ್ಕೆ ಇಡಿ.

ಆದ್ರೆ  ನನಗೆ ಖುಷಿ ಕೊಟ್ಟಿದ್ದು ಆ ಮಗುವಿನ ಪ್ರಯತ್ನ, ಕಾರಣ ಇಷ್ಟೆ ನಮ್ಮ ಭಾಷೆಯನ್ನು  ಮನೆಯಲ್ಲಿ ಮಾತ್ರ ಬಳಸುವ ನಾಡಿನಲ್ಲಿ ವಾಸ ಮಾಡ್ತಾ ಇರುವ ಮಕ್ಕಳು ಇಷ್ಟೊಂದು ಕ್ಲಿಷ್ಟಕರ ಹಾಡುಗಳನ್ನು ಹಾಡಲು ಪ್ರಯತ್ನಿಸಿದ್ದು ಕಂಡು  ಖುಷಿ ಅನ್ನಿಸಿತು

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಸೂರಿ -18: ವಕೀಲಿ ಕೋಟು ತಯಾರಾಗಿತ್ತು.

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 18

ಗುರುವಾರದಿಂದ ಬುಧವಾರ. ಇಕ್ಕುವ ಹೆಜ್ಜೆಯ ಸದ್ದಾಗದಂತೆ ನಡೆದು ತುಕ್ಕೋಜಿಯ ಅಂಗಡಿಯ ಬಾಗಿಲಲ್ಲಿ ಓರೆ ನಿಂತು ಹಳೇಬೀಡು ಸುಂದರರಾಯರು ಒಳಗೆ ಇಣುಕಿದರು. ತುಕ್ಕೋಜಿ ಹೊಲಿಗೆಯಲ್ಲಿ ಮಗ್ನನಾಗಿದ್ದ. ಸರೋಜ ಎಲ್ಲೂ ಕಾಣಲಿಲ್ಲ.

ಹಾಗೇ ಇಣುಕಿ ನೋಡುತ್ತಾ ತುಕ್ಕೋಜಿ ತಮ್ಮ ಕಡೆ ಒಂದು ದೃಷ್ಟಿ ಹಾಯಿಸುವುದನ್ನೇ ಕಾಯುತ್ತಾ ನಿಂತರು. ಯಾವುದೋ ಒಂದು ಶುಭ ಮುಹೂರ್ತದಲ್ಲಿ ತುಕ್ಕೋಜಿ ಇವರತ್ತ ನೋಡಿದ. ಹಳೇಬೀಡು ಸುಂದರರಾಯರು ಒಂದು ನಗೆ ಮಲ್ಲಿಗೆಯನ್ನು ಅತ್ತ ಚೆಲ್ಲಿದರು. ದೇಹವನ್ನು ಗೋಡೆಯ ಹಿಂದೆ ಬಚ್ಚಿಟ್ಟು ಕಿಸಿಯುತ್ತಿದ್ದ ಮುಖವನ್ನು ಮಾತ್ರ ಮುಂದೂಡಿ ನಿಂತಿದ್ದ ಹಳೇಬೀಡು ಸುಂದರರಾಯರನ್ನು ನೋಡಿ ತುಕ್ಕೋಜಿಗೆ

ಯಾಕೋ ನಗು ಬಂತು. ಅವನೂ ಕಿಸಕ್ಕನೆ ನಕ್ಕ. ಹಳೇಬೀಡು ಸುಂದರರಾಯರು ಸಂಕೋಚದ ಹೆಜ್ಜೆಗಳನ್ನಿಕ್ಕುತ್ತಾ ತುಕ್ಕೋಜಿಯ ಬಳಿ ಸಾಗಿದರು. ತುಕ್ಕೋಜಿ ಹೊಲೆಯುವುದನ್ನು ನಿಲ್ಲಿಸದೇ ಒಂದು ದಿಕ್ಕನ್ನು ಗಲ್ಲದಿಂದ ಸೂಚಿಸಿದ. ಹಳೇಬೀಡು ಸುಂದರರಾಯರು ಅತ್ತ ನೋಡಿದರು. ಗೋಡೆಯಿಂದ ಗೋಡೆಗೆ ತೂಗಿಬಿದ್ದ ಹಗ್ಗದ ಮೇಲೆ ಕಪ್ಪು ಕೋಟಿನ ಬಟ್ಟೆ ನೇತಾಡುತ್ತಿತ್ತು. ಹಳೇಬೀಡು ಸುಂದರರಾಯರು ಅದರತ್ತ ಸಾಗಿ ಅದನ್ನು ಮುಟ್ಟಿ ನೋಡಿದರು. ತುಕ್ಕೋಜಿಯತ್ತ ತಿರುಗಿ ಅವನನ್ನೇ ನೋಡಿದರು, ಅನುಮಾನದಿಂದ. ತುಕ್ಕೋಜಿ ನಗುತ್ತಲೇ ತಲೆ ಹಾಕಿ ಅದು ತಮ್ಮದೇ ಎನ್ನುವ ಭಾವ ಬೀರಿದ. ಹಳೇಬೀಡು ಸುಂದರರಾಯರು ಆನಂದತುಂದಿಲರಾಗಿ ಆ ಕಪ್ಪು ಕೋಟಿನ ಬಟ್ಟೆಯನ್ನು ಸವರುತ್ತಾ ಒಂದರೆ ಕ್ಷಣ ಮೈಮರೆತು ನಿಂತರು.

More

%d bloggers like this: