ಚಿನ್ನಾ ನಿನ್ನಾ ಮುದ್ದಾಡುವೆ …

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-36

All that glitters is not Gold. . . . All that is Gold does not glitter!!!

ಹೊಳೆಯುವುದೆಲ್ಲಾ ಚಿನ್ನವಲ್ಲ. . . . ಚಿನ್ನವಾದದ್ದೆಲ್ಲ ಹೊಳೆಯುವುದೂ ಇಲ್ಲ!!!

ಕಳೆದ ವಾರ ಗುರುಗುಂಟಿರಾಯರು ಫೋನ್ ಮಾಡಿ ಅವರ ಮನೆಯಲ್ಲಿ ನಡೆಯುತ್ತಿರುವ ಕುರುಕ್ಷೇತ್ರದ ಚಿತ್ರಣವನ್ನು ಸಂಜಯ ದೃತರಾಷ್ಟ್ರನಿಗೆ ನೀಡಿದಂತೆ ಬಹಳ ಸಮರ್ಥವಾಗಿ ನಮಗೆ ನೀಡಿದ್ದರು. ಅಷ್ಟೇ ಸಮರ್ಥವಾಗಿ ಕಾಕುವಿನ ಆಸ್ಥಾನದ ಕಲಾವಿದರಾದ ನಾಗಾನಾಥ್ ಅವರು ಅದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ಕೊಟ್ಟು ಪಕ್ಕವಾದ್ಯದಲ್ಲಿ ಸಹಕರಿಸಿದ್ದರು.

ಅವರು ಮಾಡಿದ ಮಹಿಳೆಯ ಚಿತ್ರವನ್ನು ನೋಡದ ಮೇಲಂತೂ ಹಲವಾರು ಜನರು ನಾಗನಾಥ್‌ಗೆ ಫೋನ್ ಮಾಡಿ ತಮ್ಮ ತಮ್ಮ ಪತ್ನಿಯ ಚಿತ್ರವನ್ನು ಅವರನ್ನು ನೋಡದೆಯೇ ಅದು ಹೇಗೆ ಅಷ್ಟು ಪರ್ಫೆಕ್ಟ್ ಆಗಿ ಚಿತ್ರಿಸಿದ್ದಾರೆ ಎಂದು ಕೇಳಿದ್ದಾರಂತೆ.

ಅದಿರಲಿ, ಅದರಲ್ಲಿ ಕೊನೆಗೆ ಗುರುಗುಂಟಿರಾಯರು ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ನಡೆಯುತ್ತಿರುವ ಯದ್ವಾತದ್ವಾ ಏರಿಕೆಯ ಕಾರಣವನ್ನು ಕೇಳಿದ್ದರು. ಅದಕ್ಕೆ ಉತ್ತರವಾಗಿ ನಾನು ಕುಟ್ಟಿದ ಮಹಾ ಬೋರಿನ ಲೆಕ್ಚರನ್ನು ನೀವೆಲ್ಲರೂ ಓದಿ ಆಕಳಿಸಿ ನಿದ್ದೆ ಹೋಗಿದ್ದೀರೆಂದು ನಾನು ಅಚಲವಾಗಿ ನಂಬಿದ್ದೇನೆ.

More

‘ ಮಗ ಮತ್ತು ಬ್ರಾಹ್ಮಣರ ಎಂಜಲು ಎಲೆಯಲ್ಲಿ ಒಂದನ್ನು ಆಯ್ದುಕೊ’

ಇದು ‘ಜುಗಾರಿ ಕ್ರಾಸ್’ ಅಂಕಣ. ಚರ್ಚೆ, ವಿಚಾರ ಮಥನ ಇಲ್ಲಿನ ಮುಖ್ಯ ಉದ್ಧೇಶ. ನಾ ದಿವಾಕರ್ ಅವರು ಬರೆದ ‘ಮಡೆ ಸ್ನಾನ’ದ ಬಗೆಗಿನ ಲೇಖನ ಇಲ್ಲಿ ಪ್ರಕಟವಾಗಿತ್ತು. ಆ ಲೇಖನ ಇಲ್ಲಿದೆ.

ಇದಕ್ಕೆ ಪುರುಷೋತ್ತಮ ಬಿಳಿಮಲೆ ಪ್ರತಿಕ್ರಿಯೆ ನೀಡಿದ್ದಾರೆ. ಬನ್ನಿ ನೀವೂ ಭಾಗವಹಿಸಿ

ಪುರುಷೋತ್ತಮ ಬಿಳಿಮಲೆ, ನವದೆಹಲಿ

ಎಂಜಲು ಎಲೆಯ ಮೇಲೆ ಉರುಳುವ ದಯನೀಯ ಘಟನೆಯ ಬಗ್ಗೆ ಓದಿ ವಿಷಾದವಾಯಿತು. ನಾನು ಹುಟ್ಟಿದ ಊರು ಕುಕ್ಕೆ ಸುಬ್ರಹ್ಮಣ್ಯದ ಹತ್ತಿರದ ಪಂಜ ಎಂಬ ಹಳ್ಳಿ, ಓದಿದ್ದು ಸುಬ್ರಹ್ಮಣ್ಯದಲ್ಲಿ . ನಾನು ಚಿಕ್ಕವನಿದ್ದಾಗ ವಾಂತಿ ಮಾಡಿದೆ ಅಂತ ನನ್ನ ಅಮ್ಮ ಸುಬ್ರಹ್ಮಣ್ಯದಲ್ಲಿ .ಎಂಜಲು ಎಲೆಯ ಮೇಲೆ ಉರುಳುವ ಹರಕೆ ಹೇಳಿಕೊಂಡಿದ್ದರಂತೆ. ನಾನು ದೊಡ್ಡವನಾದಾಗ ಅಮ್ಮ ಅದನ್ನು ನೆನಪಿಸಿ ಸುಬ್ರಹ್ಮಣ್ಯದಲ್ಲಿ ಬ್ರಾಹ್ಮಣರು ಉಂಡೆಸೆದ ಎಂಜಲು ಎಳೆಯಲ್ಲಿ ಉರುಳಲು ಒತ್ತಾಯಿಸುತ್ತಿದ್ದರು. ನಾನು ಮೌನವಾಗಿ ಆದರೆ ದಿಟ್ಟವಾಗಿ ನಿರಾಕರಿಸಿದೆ. ನನ್ನ ಮೌನ ಮತ್ತು ಪ್ರತಿಭಟನೆ ಅಮ್ಮನ ಆತಂಕವನ್ನು ತೀವ್ರವಾಗಿ ಹೆಚ್ಚಿಸುತಿತ್ತು. ಕೊನೆಗೊಮ್ಮೆ ಅದು ತೀರ ಅತಿರೇಕಕ್ಕೆ ಹೋದಾಗ ನಾನು ಅಮ್ಮನಿಗೆ ‘ ಮಗ ಮತ್ತು ಬ್ರಾಹ್ಮಣರ ಎಂಜಲು ಎಲೆಯಲ್ಲಿ ಒಂದನ್ನು ಆಯ್ದುಕೊ’ ಎಂದೆ. ಅಮ್ಮ ಕೊನೆಗೂ ಮಗನನ್ನು ಆರಿಸಿಕೊಂಡರು. ಅಮ್ಮನ ಆಯ್ಕೆಯ ಮೂಲಕ ನಾನು ಬದುಕಿಕೊಂಡೆ.

ಈಗ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವೇ ಎಂಜಲು ಸೇವೆಯನ್ನು ಬಹಿಷ್ಕರಿಸಿ ಮಾನವನ ಘನತೆಯನ್ನು ಎತ್ತಿ ಹಿಡಿಯಬೇಕು

ಕದಡಿದ ನೀರಾ- ರಾಡಿಯಾ ಜ(ಜಾ)ಲವಾ?

-ಸೂತ್ರಧಾರ ರಾಮಯ್ಯ

ನೀವು ಕೇಳ್ತಾ ಇದ್ದೀರಿ, ಎಫ್ ಎಂ ೮೪೦ ಬೈಟೂ, ‘ರಾಡಿಯ ಮಿರ್ಚಿ’ ಸಖತ್ ಫ್ಯಾಟ್ ಮಗ! ಈಗ ನಿಮ್ಮ ಮೆಚ್ಚಿನ ವಿಚಿತ್ರ ಗೀತೆಗಳು.

ನಾನು ನಿಮ್ಮ ನೆಚ್ಚಿನ ಆರ್ ಜೆ ಉತ್ತರಾಭಾದ್ರ. ಕಾರ್ಯಕ್ರಮದಲ್ಲಿ ಈ ದಿನ ನಮ್ಮ ಜೊತೆಗಿದ್ದಾರೆ ದೇಭ- ಅರ್ಥಾತ್ ದೇಶ ಭಕ್ತ ಡಾ:ಪುಡಾರಿ ಪುಂಡಲೀಕ. ಪುಂಡಲೀಕ ಅವರು ಜನಪ್ರಿಯ ನಾಯಕರು, ಜಗದೋದ್ಧಾರಕ್ಕಾಗಿ… ಕ್ಷಮಿಸಬೇಕು, ಸಮಾಜೋದ್ಧಾರಕ್ಕಾಗಿ ಅನೇಕ ಯೋಜನೆಗಳಿಗೆ ನಾಂದಿ ಮಂಗಳಗಳನ್ನು ಹಾಡಿದ್ದಾರೆ. ಗರೀಬಿ ಹಟಾವ್ ಎಂಬ ಸ್ಲೋಗನ್ನನ್ನು ‘ಚಾರಿಟಿ ಬೆಗ್ ಇನ್ಸ್ ಅಟ್ ಹೋಮ್’ ಎಂಬಂತೆ ಮೊದಲು ತಮ್ಮ ಮನೆಯಿಂದ ಓಡಿಸಿ, ಹೆಸರೇ ವಾಸಿ ಯಾದವರು-ಆಲೂ ಪ್ರಸಾದ ವೆಂಬಂತೆ.

(ಚಿತ್ರ ಕೃಪೆ :John Elliott)

ರಾಬರಿ ಇವರ ಮಾದರಿ. ಕ್ಯಾಸ್ಟ್ ಯುವರ್ ವೋಟ್ ಎಂಬ ಪದಪುಂಜವನ್ನೇ ಟ್ವಿಸ್ಟ್ ಮಾಡಿ ‘ವೋಟ್ ಯುವರ್ caste ‘ ಎಂಬ ಪರಿಕಲ್ಪನೆಯನ್ನು ಜಾರಿಗೆ ತಂದ ಕೀರ್ತಿ ಪುಂಡಲೀಕ ಅವರದೇ. ತಮ್ಮ ಪಕ್ಷದಲ್ಲಿದ್ದ ಲೀಡರ್ಸ್ ಗಳನ್ನು ರಿಜೆಕ್ಟ್ ಮಾಡಿ, ಆಯಾ (ನೋಟಿನ)ಕಟ್ಟಿನ ಜಾಗಗಳಿಗೆ ನೂರಾರು ಡೀಲರ್ಸ್ ಗಳನ್ನು, ಉದ್ಯಮಿಗಳನ್ನು ಇಂಜೆಕ್ಟ್ ಮಾಡಿದವರು.

More

ಎಂಜಲೆಲೆಯ ಕ್ರೌರ್ಯ ಸಂಸ್ಕೃತಿಯ ಔದಾರ್ಯ…

ಇದು ‘ಜುಗಾರಿ ಕ್ರಾಸ್’ ಅಂಕಣ. ಚರ್ಚೆ, ವಿಚಾರ ಮಥನ ಇಲ್ಲಿನ ಮುಖ್ಯ ಉದ್ಧೇಶ. ನಾ ದಿವಾಕರ್ ಅವರು ಮಡೆ ಮೇಡ್ ಸ್ನಾನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಬನ್ನಿ ನೀವೂ ಭಾಗವಹಿಸಿ.

**

-ನಾ ದಿವಾಕರ

ಭಾರತ ಬಹುಸಂಸ್ಕೃತಿಗಳ, ಬಹುಭಾಷೆಗಳ, ಬಹುಧರ್ಮಗಳ, ಬಹುಜಾತಿಗಳ ದೇಶವಷ್ಟೇ ಅಲ್ಲ ಬಹುಮೌಢ್ಯಗಳ ದೇಶವೂ ಹೌದು ಎಂದು ನಿರೂಪಿಸಲು ಕುಕ್ಕೆ ಸುಬ್ರಮಣ್ಯದ ಮಡೆಸ್ನಾನ ಪದ್ಧತಿಯೇ ಸಾಕ್ಷಿ. ಹಾಗೆ ನೋಡಿದರೆ ಕುಕ್ಕೆ ಸುಬ್ರಮಣ್ಯ ಕ್ಷೇತ್ರವೇ ಮೂಢ ನಂಬಿಕೆಗಳ ನೆಲೆಬೀಡು.

ಯಾರ ತಂಟೆಗೂ ಹೋಗದೆ ತಮ್ಮ ಪಾಡಿಗೆ ಹುತ್ತಗಳಲ್ಲಿ ಸೇರಿಕೊಂಡು ಭೂತಳದಲ್ಲಿ ಶಾಖ ಹೆಚ್ಚಾದಾಗ ಹೊರಬರುವ ಹಾವುಗಳು ಈ ಧರ್ಮ ಕ್ಷೇತ್ರದ ಮೂಲ ಬಂಡವಾಳ. ಹಾವಿನ ಸುತ್ತ ಸೃಷ್ಟಿಸಲಾಗಿರುವ ಅನೇಕ ಮಿಥ್ಯೆಗಳು, ಮೂಢನಂಬಿಕೆಗಳೇ ಸುಬ್ರಮಣ್ಯದ ಔದ್ಯಮಿಕ ಮಾರುಕಟ್ಟೆ ಕ್ಷೇತ್ರ. ಇನ್ನು ಸುಬ್ರಮಣ್ಯ ಶಿವಪುತ್ರನಲ್ಲವೇ. ಅಪ್ಪನ ಕೊರಳಿನ ಹಾವು ತನ್ನ ಪೀಠವಾದರೆ ಆತನಿಗೇನೂ ಕೊರತೆಯಿಲ್ಲ. ಭಕ್ತಾದಿಗಳು ಹೆಚ್ಚಾಗುತ್ತಾರೆ.

ಕನಸಿನಲ್ಲಿ ಹಾವು ಕಾಣಿಸಿಕೊಳ್ಳುವುದು ಸಾಮಾನ್ಯ. ಮನದಾಳದಲ್ಲಿ ಹಾವುಗಳ ಬಗ್ಗೆ ಇರುವ ಭೀತಿಯೇ ಕನಸಿನಲ್ಲೂ ಕಾಡುತ್ತವೆ. ಆದರೆ ಈ ರೀತಿ ಕಾಣಿಸಿಕೊಂಡ ಕೂಡಲೇ ಭಕ್ತಾದಿಗಳಿಗೆ ನೆನಪಾಗುವುದು ಕುಕ್ಕೆ. ಇಲ್ಲಿಗೆ ಬಂದು ನಾಗ ಪ್ರತಿಷ್ಠೆ ಮಾಡಿಸಿದರೆ, ಅಥವಾ ಪೂಜೆ ಮಾಡಿಸಿದರೆ ನಾಗದೋಷ ಪರಿಹಾರವಾಗುವುದು ಎಂಬುದು ಅಳಲೆಕಾಯಿ ಪಂಡಿತರ ವ್ಯಾಖ್ಯಾನ. ಇದಕ್ಕೆ ಬಲಿಯಾಗುವವರಲ್ಲಿ ಶ್ರೀಮಂತ ಸುಶಿಕ್ಷಿತರೇ ಹೆಚ್ಚು.

More

ಬಂದಿದೆ ಹೊಸ ಮೀಡಿಯಾ ಮಿರ್ಚಿ

ಸಾರ್ ಯಾಕೆ ನೀವು ಆಟೋಬಯಾಗ್ರಫಿ ಬರೆಯಬಾರದು ? ಅನ್ನುವ ಪ್ರಶ್ನೆಯನ್ನು ನಾನು ಮುಂದಿಟ್ಟದ್ದು ರಾಮೋಜಿ ರಾವ್ ಅವರಿಗೆ. ಹಾಗೆ ಕೇಳಲು ನನಗೆ ಸಾಕಷ್ಟು ಕಾರಣಗಳಿತ್ತು. ರಾಮೋಜಿರಾಯರ ಜೊತೆ ಮಾತಿಗೆ ಕೂತಾಗಲೆಲ್ಲ ಅವರ ನೆನಪುಗಳು ಪ್ರವಾಹದಂತೆ ನುಗ್ಗಿ ಬರುತ್ತಿದ್ದವು.

ಅಲ್ಲಿ ಉಪ್ಪಿನಕಾಯಿಯೂ ಇತ್ತು. ಪತ್ರಿಕೋದ್ಯಮವೂ ಇತ್ತು. ಚಿಟ್ ಫಂಡ್ ಇತ್ತು, ಹೋಟೆಲ್ ಗಳಿದ್ದವು, ವಿಶಾಖಪಟ್ಟಣ, ಕೃಷ್ಣಾ, ತೆಲಂಗಾಣಗಳಿದ್ದವು. ಎನ್ ಟಿ ರಾಮರಾವ್, ಚಂದ್ರಬಾಬು ನಾಯ್ಡು, ವೈ ಎಸ್ ರಾಜಶೇಖರ ರೆಡ್ಡಿಯೂ ಇದ್ದರು.ಅವರ ಜೊತೆಗೆ ಮಾತಿಗೆ ಕುಳಿತಾಗೆಲ್ಲ ನನಗೆ ಒಂದು ಹೊಸ ಜಗತ್ತು ಬಿಚ್ಚಿಕೊಳ್ಳುತ್ತಾ ಹೋಗುತ್ತಿತ್ತು. ನಾನು ಆ ದಿನ ಚರ್ಚಿಸಬೇಕಾಗಿದ್ದದ್ದನ್ನೆಲ್ಲ ಪಟ್ಟಿ ಮಾಡಿ ಅವರ ಚೇಂಬರ್ ಹೊಕ್ಕರೆ ಹೊರಬರುತ್ತಿದ್ದುದು ಒಂದು ದೊಡ್ಡ ಅನುಭವದೊಂದಿಗೆ. ಎಷ್ಟೋ ದಿನಗಳಿಂದ ಅವರು ತಮ್ಮೊಳಗೆ ಬಚ್ಚಿಟ್ಟುಕೊಂಡಿದ್ದಾರೇನೋ ಎನ್ನುವ ಅನುಭವ ಆಗ ಹೊರಗೆ ಇಣುಕುತ್ತಿತ್ತು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಜಯಶ್ರೀ ಕಾಲಂ: ಶುದ್ಧ -ಮನಮೋಹಕ ಕಾರ್ಯಕ್ರಮ

@@ ಸುವರ್ಣ ನ್ಯೂಸ್ ನಲ್ಲಿ ನಿರೂಪಕ ಗೌರೀಶ್ ಅಕ್ಕಿ ನಿರೂಪಣೆಯ ಔಟ್ ಆಫ್ ಫೋಕಸ್ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಒಂದು.ಸಂಪೂರ್ಣವಾಗಿ ಸಿನಿಮಸಂಗತಿಗಳನ್ನು ಒಳಗೊಂಡ -ಅಲ್ಲಿ ಪರದೆಯ ಹಿಂದೆ ಕೆಲಸ ಮಾಡಿದ ಮಹನೀಯರ ಸಾಧನೆಗೆ ಹಾಗೂ ಅವರ ಬದುಕಿನ ಬಗ್ಗೆ ಕಿರುನೋಟ ಪ್ರಸ್ತುತಪಡಿಸುವ ಕಾರ್ಯಕ್ರಮ. ಶುದ್ಧ -ಮನಮೋಹಕ ಕಾರ್ಯಕ್ರಮ .

ಸಿನಿಮಾಗಳ ವಿಷಯಕ್ಕೆ ಬಂದ್ರೆ ನಿರೂಪಕ ಗೌರೀಶ್ ಅಕ್ಕಿ ಅವರು ಒಂದು ಹೆಜ್ಜೆ ಮುಂದೆ, ಅವರ ಮೆಚ್ಚಿನ ಆಯ್ಕೆ ಸಿನಿ ಸಂಗತಿಗಳು .ಅದರ ಬಗ್ಗೆ ರಂಗನಾಥ್ ಸರ್ ಹೇಳ್ತಾನೂ ಇರ್ತಾರೆ. ಮೊನ್ನೆ ಈ ನಿರೂಪಕ ಗೀತಪ್ರಿಯ ಅವರ ಬಗ್ಗೆ ಹೇಳ್ತಾ ಇದ್ರು. ಕನ್ನಡ  ಚಿತ್ರ ರಂಗದ ಅಪರೂಪದ ಪ್ರತಿಭೆ ಗೀತಪ್ರಿಯ ಅವರು. ಕೇವಲ  ಒಂದು ಸಿನಿಮಾದಲ್ಲಿ ಎಂಟ್ರಿ ಕೊಟ್ರೆ ಸಾಕು ಈಗಿನವರ ಲೈಫ್ ಸ್ಟೈಲ್  ಬದಲಾಗಿ ಬಿಡುತ್ತದೆ. ಆದರೆ ಗೀತಪ್ರಿಯ ಅವರ ಬದುಕಲ್ಲಿ ಅಂತಹ ಯಾವ ಬದಲಾವಣೆಯೂ ಇಲ್ಲ. ಜೀಟಿವಿ ಕನ್ನಡ ವಾಹಿನಿಯಲ್ಲಿ ಗೀತಪ್ರಿಯ ಅವರನ್ನು ಅತಿಥಿಯಾಗಿ ಕರೆಸಲಾಗಿತ್ತು

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಹೀಗೊಂದು ಸಂವಾದ…

-ಧನಂಜಯ ಕುಲಕರ್ಣಿ

ನೆನ್ನೆಯ ದಿನ ನಾನು ಬೆಂಗಳೂರಿನಿಂದ ಹೊಸಪೇಟೆಗೆ ಬಸ್ಸಿನಲ್ಲಿ ಬರುತ್ತಿದ್ದಾಗ ನನ್ನ ಪಕ್ಕದಲ್ಲಿ ಕುಳಿತ ಪ್ರಯಾಣಿಕ ಇನ್ನೊಬ್ಬರೊಂದಿಗೆ ಮೊಬೈಲ್ ಫೋನಿನಲ್ಲಿ ಮಾತನಾಡುತ್ತದ್ದ. ಅದೂ ಸ್ಪೀಕರ್ ಫೋನ್ ಆನ್ ಮಾಡಿ !!! ಅವರಿಬ್ಬರ ನಡುವೆ ನಡೆದ ಸಂಭಾಷಣೆ ತುಂಬಾ ಖುಷಿ ಕೊಟ್ಟಿತು.

ಇವನು: ಈರೇಷಿ ಎಲ್ಲದೀ?
ಈರೇಷಿ: ನಾನೆಲ್ಲೋಗ್ಲಣ್ಣ..ಇಲ್ಲೆ ಬೆಂಗಳೂರಿನ್ಯಾಗದೀನಿ..ದುಡಕಂಬ್ ತಿನ್ನೋ ಜೀವ..ನೀನೆಲ್ಲದೀ?
ಇವನು: ನಾನು ಬೆಂಗಳೂರಿಗೆ ಬಂದಿದ್ದೆ..ಈಗ ಮತ್ತ ಹೊಸಪೇಟಿಗೆ ಹೊಂಟೀನಿ…
ಈರೇಷಿ: ಏ..ಅದೇನಣ್ಣ ಹೀಂಗ..ಬಂದು ಒಂದು ಫೋನ್ ಹಾಕಬಾರ್ದೇನ್? ಹೆಂಗ ಬಂದಿ..ಬಸ್ಸಾ, ಟ್ರೇನಾ?
ಇವನು: ಐ..ಅದು ಬಿಡು ಈರೇಷಿ..ಆಲ್ ಆಫ್ ಎ ಸಡನ್..(ಇನ್ನೇನೋ ಹೇಳುವವನಿದ್ದ..ಅಷ್ಟರಲ್ಲಿ)
ಇರೇಷಿ: ಏ ಅದ್ಯಾವುದಣ್ಣ…ಆಲ್ ಆಫ್ ಎ ಸಡನ್…..ಹೊಸ ಬಸ್ಸಾ?????

ಬೇಲಿ ಮತ್ತು ಹೊಲ

ಚಿತ್ರಗಳು : ಧನಂಜಯ ಕುಲಕರ್ಣಿ

ಬೇಲಿ ಮತ್ತು ಹೊಲ ನಾಟಕದ ರಂಗ ತಾಲೀಮಿನ ಒಂದು ನೋಟ ಇಲ್ಲಿದೆ…

ಇನ್ನಷ್ಟು ಚಿತ್ರಗಳು : ಸೈಡ್ ವಿಂಗ್

%d bloggers like this: