ಪುಟ್ಟಕ್ಕನ ಹೈವೇ..

‘ಪುಟ್ಟಕ್ಕ’ನಿಗೆ ಡಿಟಿಎಸ್‌ ಕೆಲಸ ಮುಗಿಯಿತು. ಸೋಮವಾರ ಪ್ರಥಮ ಪ್ರತಿ ಸಿದ್ಧ.

ಎರಡು ತಿಂಗಳ ನಿರಂತರ ಓಟಕ್ಕೆ ಇನ್ನು ನಿಟ್ಟುಸಿರಿನ ಕಾಲ.

ನೀವು ನೋಡಿ ಬೆನ್ನು ಚಪ್ಪರಿಸಿದರೆ ಆನಂದದ ಕಾಲವೂ ಆಗುತ್ತದೆ. ಆ ದಿನ ದೂರ ಇಲ್ಲ!

ಬಿ ಸುರೇಶ

ಅವರು ಜಿ ಎಚ್ ರಾಘವೇಂದ್ರ..

ನಗೆ ಹಂಚಿ ನೋವು ನುಂಗಿದ ಹಿರಿಯಣ್ಣ..

ಧನಂಜಯ ಕುಲಕರ್ಣಿ

ಬದುಕು ಜಟಕಾ ಬಂಡಿ

ಜಿ ಎಚ್ ರಾಘವೇಂದ್ರ ಇಲ್ಲ. ಹಲವು ಪ್ರತಿಭೆಗಳನ್ನು ಶೋಧಿಸಿದ, ಕಾಪಾಡಿದ ರಾಘವೇಂದ್ರ ಅವರು ಇಲ್ಲವಾಗಿ ಇಂದಿಗೆ ನಾಲ್ಕು ವರ್ಷ. ತಮ್ಮ ರಂಗ ಚಟುವಟಿಕೆಗಳ ಮೂಲಕ ವಿಚಾರಗಳನ್ನು ಬಿತ್ತಿದ ರಾಘವೇಂದ್ರರಿಗೆ ಧನಂಜಯ ಕುಲಕರ್ಣಿ ಇಲ್ಲಿ ನಮನ ಸಲ್ಲಿಸಿದ್ದಾರೆ.
ಅವು ೧೯೮೯ ರ ವಿಜಯದಶಮಿಯ ದಿನ . ಜಿ ಎಚ್ ಪರಿಚಯವಾಗಿ ಕೇವಲ ಒಂದು ವರ್ಷವಾಗಿತ್ತಷ್ಟೆ. ನನ್ನನ್ನು ಹುಬ್ಬಳ್ಳಿಯ ಕೆ .ಎಂ .ಸಿ ಆಸ್ಪತ್ರೆಗೆ ಸಂಜೆ ೫ ಗಂಟೆಗೆ ಬರಲು ಹೇಳಿದ್ದರು. ಕಾರಣ ಕೇಳಿದ್ದಕ್ಕೆ “ಸ್ವಲ್ಪ ಕೆಲಸ ಅದ….. ಬರ್ರಿ” ಎಂದಷ್ಟೇ ಹೇಳಿದ್ದರು. ಸರಿಯಾಗಿ ೫ ಗಂಟೆಗೆ ಅಲ್ಲಿಗೆ ಹೋದಾಗ ಜಿ .ಎಚ್ ತಮ್ಮ ಎಂದಿನ ಶೈಲಿಯಲ್ಲಿ ಬೀಡಿ ಸೇದುತ್ತ ನನಗಾಗಿ ಕಾಯುತ್ತ ನಿಂತಿದ್ದರು . ಇಬ್ಬರು ಸೇರಿ ಅದು…ಇದು ಅಂತ ಮಾತನಾಡುತ್ತಾ ಕೆ .ಎಂ .ಸಿ ಸಭಾಂಗಣದ ಕಡೆಗೆ ಹೆಜ್ಜೆ ಹಾಕಿದೆವು. ನಮಗಾಗಿ ಸುಮಾರು ೨೦ ಜನರು ಕಾಯುತ್ತಿದ್ದರು. ಅವರಿಗೆಲ್ಲ ಜಿ .ಎಚ್ ನನ್ನನ್ನು ಪರಿಚಯ ಮಾಡಿಸಿದ ರೀತಿ ಸ್ವಲ್ಪ ಮುಜುಗರವನ್ನುಂಟು ಮಾಡಿಟ್ಟು. ನಂತರ ಗೊತ್ತಾದ ವಿಷಯವೆಂದರೆ ಕೆ .ಎಂ .ಸಿ ತಂಡಕ್ಕೆ ಜಿ .ಎಚ್ “ಬೇಲಿ ಮತ್ತು ಹೊಲ” ನಾಟಕವನ್ನು ನಿರ್ದೇಶಿಸಲು ಒಪ್ಪಿಕೊಂಡಿದ್ದರು ಮತ್ತು ಅದರ ಜವಾಬ್ದಾರಿಯನ್ನು ನನ್ನ ಹೆಗಲ ಮೇಲೆ ಹಾಕಲು ಅಲ್ಲಿಗೆ ಕರೆಸಿದ್ದರು ಎಂದು. ನಾಟಕ ವಾಚನ ಮುಗಿದು , ಕಲಾವಿದರೊಂದಿಗೆ ಹರಟೆ ಹೊಡೆದು ಅಲ್ಲಿಂದ ಹೊರಟಾಗ ಸಂಜೆ ೮ ಗಂಟೆಯ ಸಮಯ. ಜಿ .ಎಚ್ ನನ್ನನ್ನು ನೇರವಾಗಿ ತಮ್ಮ ಕಾಯಂ ಜಾಗಕ್ಕೆ ಕರೆದುಕೊಂಡು ಹೋಗಿ , ಶೇಂಗಾ ಹಾಗೂ ರಂ ತರಲು ಆದೇಶಿಸಿದರು. ಮತ್ತೆ ನಮ್ಮ ಮಾತು ನಾಟಕ ತಯಾರಿಯ ಕಡೆಗೆ ವಾಲಿತು. ನಾವು ಹಿಂದೆ ಜಿ .ಎಚ್ ನಿರ್ದೇಶನದಲ್ಲಿ ಪ್ರದರ್ಶಿಸಿದ “ಒಂದು ಬೀದಿಯ ಕಥೆ” ಅದರ ಹಿಂದಿನ ಅನುಭವಗಳು…ಹೀಗೆ ಒಂದರ ಹಿಂದೆ ಒಂದರಂತೆ ಹಳೆಯ ನೆನಪಿನ ಬುತ್ತಿಯನ್ನು ಜಿ .ಎಚ್ ಬಿಚ್ಚುತ್ತಾ ಹೋದಂತೆ, ನಾನು ಒಬ್ಬ ವಿಧೇಯ ವಿದ್ಯಾರ್ಥಿಯಮ್ತೆ ಅದನ್ನು ಕೇಳುತ್ತಾ, ಅವರು ಸಿಡಿಸುತ್ತಿದ್ದ ಜೋಕುಗಳಿಗೆ ಹೊಟ್ಟೆತುಂಬ ನಗುತ್ತ ಕುಳಿತಿದ್ದಾಗ ಜಿ .ಎಚ್ ಇದ್ದಕ್ಕಿದ್ದಂತೆ ಭಾವುಕರಾದರು. ನನಗೆ ಏನು ಮಾತನಾಡಬೇಕೆಂದು ತೋಚುವ ಮೊದಲೇ, ಜಿ .ಎಚ್ ಎದ್ದು ಬಂಡು ನನ್ನ ಪಕ್ಕ ಕುಳಿತು ನನ್ನ ಕೈ ಹಿಡಿದುಕೊಂಡಿದ್ದರು ಮತ್ತು ನಿಜಕ್ಕೂ ಅಳುತ್ತಿದ್ದರು. ಅವರಾಡಿದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಗುಯ್ ಗುಡುತ್ತಿವೆ “ಧನಂಜಯ …ನನ್ನ ತಮ್ಮ ವಸಂತ ಸತ್ತು ಇವತ್ತಿಗೆ ಒಂದು ವರ್ಷ ಆತು ….ನಿಮ್ಮನ್ನ ನೋಡಿದ್ರ ವಸಂತನ್ನ ನೋಡಿಧಂಗ ಆಗ್ತದ….”
ಅಂದಿನಿಂದ ಜಿ .ಎಚ್ ನನ್ನನ್ನು ತಮ್ಮ ಸ್ವಂತ ತಮ್ಮನಂತೆಯೇ ನೋಡಿಕೊಂಡರು. ಮನೆಗೆ ಹೋದಾಗಲೂ ಸಹ ವೈನಿ ನನ್ನನ್ನು ತಮ್ಮ ಸ್ವಂತ ಮೈದುನನಂತೆ ಬರಮಾದಿಕೊಳ್ಳುತ್ತಿದ್ದರು.
More

Santa wishes u all..

ಚಿತ್ರ: ಸತೀಶ್ ಆಚಾರ್ಯ

ಮಂಜುನಾಥ್ ಚಾಂದ್ ಬರೆವ ‘ಇವರು ಮೂರ್ತಿ’

-ಮಂಜುನಾಥ್ ಚಾಂದ್

(photo by : ci so)

ಇವರು ಮೂರ್ತಿ 7

ಸಿಂಪಲ್ ಗುರುದತ್...

ಗುರುದತ್ನ ಸಿಂಪಲ್ ಲೀವಿಂಗ್ ಬಗ್ಗೆ ನಾನು ಅನೇಕ ಬಾರಿ ಪ್ರಸ್ತಾಪ ಮಾಡಿದ್ದೆ. ನನ್ನ ಪುಸ್ತಕ (ಬಿಸಿಲು ಕೋಲು)ದಲ್ಲೂ ಇದನ್ನು ಬರೆದಿದ್ದೇನೆ. ನಾವು ಶೂಟಿಂಗ್ ಮಾಡುವಾಗ, ಸಂಜೆ ಹೊತ್ತಿಗೆ ನನಗೆ ಸಲ್ಪ ಹಸಿವೆಯಾಗುತ್ತಿತ್ತು. ಹಾಗಾಗಿ ಏನಾದ್ರೂ ತರಿಸಿಕೊಂಡು ತಿಂತಾ ಇದ್ದೆ. ನಮ್ಮ ಜೊತೆ ಒಬ್ಬ ಕ್ಯಾಮರಾ ಬಾಯ್ ಇದ್ದ ವಿಠಲ್ ಅಂತ. ಅವನನ್ನು ಕರೆದು ಜೋಳದ ರೊಟ್ಟಿ, ಖಾರ ಚಟ್ನಿ ತರಿಸಿಕೊಳ್ಳುತ್ತಿದ್ದೆವು. ಗುರುದತ್ ನನ್ನ ಬಳಿ ಬಂದು, “ಕ್ಯಾ ಖಾ ರಹೆ ಹೋ’ ಅಂತ ಕೇಳಿದ. ನಾನು ತಿಂಡಿ ಮುಚ್ಚಿಕೊಂಡು ಇದೆಲ್ಲ ನಿಂಗಲ್ಲ ಅಂದೆ. ಅಂವ ನಂಗೇ ಜೋರು ಮಾಡಿ ನನ್ನ ಜೊತೆಗೇ ಕುಂತು ರೊಟ್ಟಿ ತಿನ್ನಲು ಕೂತು ಬಿಟ್ಟ. ಆ ರೀತಿಯ ಸಿಂಪಲ್ ಮನುಷ್ಯ ಆತ.

ವೇವ್ಲೆಂಥ್ ಸೂಪರ್...

ನನಗೂ ಗುರುದತ್ ನಡುವಿನ ಕೆಮೆಸ್ಟ್ರಿ, wavelength first class ಫಸ್ಟ್ಕ್ಲಾಸ್ ಆಗಿತ್ತು. ಇಬ್ರೂ ಕೆಲಸಕ್ಕೋಸ್ಕರ ಅನೇಕ ಬಾರಿ ಜಗಳ ಮಾಡಿದ್ವಿ. ಅದನ್ನ ಹೀಗೆ ಶೂಟ್ ಮಾಡಬೇಡ, ಸರಿ ಹೋಗಲ್ಲ ಅಂದ್ರೆ, ನಾನು ಹಠ ಮಾಡಿ ಹಾಗೇ ಶೂಟ್ ಮಾಡ್ತಾ ಇದ್ದೆ. ಅನೇಕ ಸಣ್ಣ ಸಣ್ಣ ವಿಷಯಗಳನ್ನು ನನ್ನ ಪುಸ್ತಕದಲ್ಲಿ ಬರೆದಿದ್ದೇನೆ. “ಕಾಗಜ್ ಕೆ ಫೂಲ್’ ಅಂತ ಫಿಲ್ಮ್ ಮಾಡಿದೆವಲ್ಲ, ಅದು ಫಿಲ್ಮ್ ಹಿಸ್ಟರಿಯಲ್ಲಿ ದೊಡ್ಡ ಮೈಲ್ಸ್ಟೋನ್.

More

ಮಲೆಗಳಲ್ಲಿ ಮದುಮಗಳು :ಚಿಂತೆ ಯಾತಕೋ ಕಾಂತಾನೆ ಮನದೊಳು’

ಬಾ ಹುಲಿಕಲ್ ನೆತ್ತಿಗೆ-5

-ಪ್ರೊ. ಶಿವರಾಮಯ್ಯ

ಉಂಗುರದ ಮರುಪಯಣವನ್ನು ಕಲ್ಪಿಸಿದ ಕೆವೈಎನ್ ಕಾವೇರಿ ಶವದ ಬೆರಳಿನಲ್ಲಿದ್ದ ಆ ಉಂಗುರವನ್ನು ಅಂತಕ್ಕ ತನ್ನ ಸೋದರಳಿಯನ ಕೈಗೆ ಕೊಟ್ಟು ಹುಂಡಿಗೆ ಹಾಕಿಬಿಡು ಎಂದಿದ್ದಳು. ಅದು ಗೋಸಾಯಿಗಳಿಗೆ ಕೈಗೆ ಕಂತೆ ಭಿಕ್ಷವಾಗಿ ತಿರುಗಿಬಿತ್ತು. ಆ ಕಾರಣೀಕ ಉಂಗುರದ ಕಥೇಯನ್ನು ಅಜರ್ುನ ಜೋಗಿಗಳಿಗೆ ಹೇಳಿದ ಗೋಸಾಯಿಗಳು ‘ಕುಪ್ಪಳ್ಳಿ ವೆಂಕಟಪ್ಪನ ಮಗ ಪುಟ್ಟಪ್ಪ ಬರೆದಿರುವ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ನೀವು ಪುರಾಣ ಮಾಡಿ ಹಾಡಿ ಹೊಟ್ಟೆ ಹೊರೆದು ಕೊಳ್ಳಿರಪ್ಪಾ’ ಎಂದು ಉಂಗುರ ಕೊಟ್ಟು ಉತ್ತರಕ್ಕೆ ಪಯಣಿಸಿದರು.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಇದಿಷ್ಟು ಉಂಗುರದ ಪೂರ್ವ ವೃತ್ತಾಂತ. ಇದನ್ನು ಮುಂದಿಟ್ಟುಕೊಂಡು ಎರಡು ವಿರಾಮದ ಮದುಮಗಳು ರಂಗರೂಪವನ್ನು ಮುನ್ನಡೆಸುತ್ತಾರೆ ನಮ್ಮ ನಿರೂಪಕರು, ಅಕ್ಷರಶಃ ನೂರಾರು ಪಾತ್ರಗಳಿಂದಲೂ, ಘಟನಾ ಬಾಹುಳ್ಯದಿಂದಲೂ ಇಡಿಕಿರಿದಿರುವ ಮದುಮಗಳು ಕಾದಂಬರಿ ಕೇವಲ ಒಂದು ಮಳೆಗಾಲದ (ಮುಂಗಾರು ಭತ್ತದ ನಾಟಿಯಿಂದ ಕಟಾವು ಆಗುವವರೆಗೆ) ಕಾಲಮಾನದಲ್ಲಿ ಜರುಗುತ್ತದೆ. ಆ ದಟ್ಟಾರಣ್ಯದಲ್ಲಿ ಸುರಿವ ಮಳೆ, ಹರಿವ ಹೊನಲು, ಹಗಲು ಇರುಳೆನ್ನದೆ.

ಇಂಥಲ್ಲಿ ಮಲೆನಾಡಿಗರ ಬದುಕುಸಾಗುತ್ತಿದೆ. ಶತಮಾನದ ಹಿಂದಿನ ಬದುಕನ್ನು ಹರಿಗಡಿಯದಂತೆ ವರ್ತಮಾನಕ್ಕೆ ಹೇಳುವುದೆಂದರೆ ಹೇಗೆ ಎಂಬ ಚಿಂತೆ ಕವಿದಾಗ ಈ ನಮ್ಮ ಕಥನಕಾರರು ‘ಚಿಂತೆ ಯಾತಕೋ ಕಾಂತಾನೆ ಮನದೊಳು’ ಎಂಬಂತೆ ಉಂಗುರ ಸಿಕ್ಕಿದ ಕೂಡಲೆ ಸಾಲುಗಟ್ಟಿ ನೆರವಾದರು. ಹೀಗಾಗಿ ಒಂಭತ್ತು ಗಂಟೆ ನಾಟಕ ನೋಡುವಲ್ಲಿ ಉದ್ಭವಿಸಬಹುದಾದ ಮನಾಟನಿಯನ್ನು ತಪ್ಪಿಸಲು ನೆರವಾದರು.

More

ನುಡಿ ಹಬ್ಬ….

ಚಿತ್ರಗಳು :ಸತ್ಯ ನಾರಾಯಣ

ಹಂಪಿಯ  ಕನ್ನಡ ವಿಶ್ವ ವಿದ್ಯಾನಿಲಯದಲ್ಲಿ ನಡೆದ ನುಡಿ ಹಬ್ಬದ ಒಂದು ನೋಟಇಲ್ಲಿದೆ. ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು…

ನೀರು…!

ತುಂಗೆ ಮಡಿಲ ಜನಪದ …

‘ವಚನಗಳಲ್ಲಿ ಆರೋಗ್ಯ’…

‘ವಚನಗಳಲ್ಲಿ  ಆರೋಗ್ಯ ‘

ದಿನಾಂಕ : 26.12.2010
ಸಮಯ : 6.00pm
ಸ್ಥಳ :  ಸೋಫಿಯ  ಸ್ಕೂಲ್ , ೧೦ನೆ  ಬ್ಲಾಕ್ , ನಾಗರಭಾವಿ  ೨ನೆ ಹಂತ , ಬೆಂಗಳೂರು

ವಚನ  ಗಾಯನ : ಶ್ರೀಮತಿ  ನೀಲಾಂಬಿಕೆ

ವಚನ  ವ್ಯಾಖ್ಯಾನ : ಡಾ  .ನಾ .ಸೋಮೇಶ್ವರ

ಮಾಹಿತಿ ಮನರಂಜನೆ…

Previous Older Entries

%d bloggers like this: