ಸಿಲೋನ್ ಸುಶೀಲಾ, ಉಮಾರಾವ್ ಹಾಗೂ ಹಾತೂನಿಕಾ ಎಂಬ ಕನಸು

ಉಮಾ ರಾವ್ ಅವರ ಹೊಸ ಕಥಾ ಸಂಕಲನ ‘ಸಿಲೋನ್ ಸುಶೀಲ’ ಬಿಡುಗಡೆಯಾಗುತ್ತಿದೆ. ‘ನುಡಿ ಪುಸ್ತಕ’ ಚಂದವಾಗಿ ಪ್ರಕಟಿಸಿರುವ ಈ ಸಂಕಲನ ಬಿಡುಗಡೆ ಈ ಭಾನುವಾರ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಬೆಳಗ್ಗೆ ೧೦-೧೫ಕ್ಕೆ. ಬನ್ನಿ.

ಈ ಸಂದರ್ಭಕ್ಕಾಗಿ ಅವರ ‘ಹಾತೂನಿಕಾ ಎಂಬ ಕನಸು’ ನಿಮಗಾಗಿ

ಹಾತೂನಿಕಾ ಎಂಬ ಕನಸು

– ಉಮಾ ರಾವ್

ಅವನ ಹೆಸರು ಮೂರ್ತಿ. ಕೇಶವ ಮೂರ್ತಿ. ನಿವೃತ್ತ. ತೃಪ್ತ. ಬೆಚ್ಚಗಿನ ಮನೆ, ಉಚ್ಛ ಹುದ್ದೆಯಲ್ಲಿದ್ದ ಮಕ್ಕಳು,ಮುದ್ದು ಮುದ್ದಾದ ಮೊಮ್ಮಕ್ಕಳು. ಬ್ಯಾಂಕಿನ ತುಂಬಾ ಹಣ. ಹೆಂಡತಿ ಹೋಗಿ ಎರಡು ವರ್ಷಗಳಾಗಿವೆ. ಅದನ್ನೂ ಒಪ್ಪಿಕೊಂಡಿದ್ದಾನೆ. ಅವನು ಆಗಾಗ ನೋಡುವ ‘ಅಸ್ಥಾ’ ಚ್ಯಾನೆಲ್ಲಿನಲ್ಲಿ ಹೇಳುವಂತೆ ಹೋಗಲೇ ಬೇಕಲ್ಲಾ ಒಬ್ಬರು ಮೊದಲು. ದಿನ ಹೇಗೋ ಸಾಗುತ್ತಿತ್ತು. ಒಂದು ಮಧ್ಯಮವರ್ಗೀಯ ಮನಸ್ಸಿನಲ್ಲಿ ಪರಿಪೂರ್ಣವಾದ ಜೀವನವನ್ನು ಅರ್ಥೈಸುವ ವ್ಯಾಕರಣಕ್ಕೆ ತಕ್ಕಂತಿದ್ದ ತನ್ನ ಬದುಕಿನ ಬಗ್ಗೆ ಅವನಿಗೆ ಸಂತೃಪ್ತಿಯಿತ್ತು. ಹಾಗಾಗಿ ಈ ಕ್ಷಣವೇ ತನಗೆ ಸಾವಿನ ಕರೆ ಬಂದರೂ ತನಗೇನೂ ಪಶ್ಚಾತ್ತಾಪವಿಲ್ಲ ಎಂದು ದಿನಾ ಒಮ್ಮೆ ಗಟ್ಟಿ ಮಾಡಿಕೊಳ್ಳುತ್ತಲೂ ಇದ್ದ.

ಆದರೂ ಸಂಜೆಗಳು ಮುಳುಗುತ್ತಿದ್ದಾಗ ಎಲ್ಲೋ ಆಳದಲ್ಲಿ ಮಿಡಿಯುವ ಒಂಟಿತನ. ಅರಿವಿಗೆ ಬರದ ನೋವು. ಅದನ್ನು ಹಿಮ್ಮೆಟ್ಟಿಸಲು ಒಂದೋ ಎರಡೊ ಪೆಗ್ಗು ಸ್ಕಾಚ್. ಜೊತೆಗೆ ಜಸ್ರಾಜ್ ಸಂಗೀತ.

ಕತ್ತಲ ಸೀಳಿಕೊಂಡು ಯಾತ್ರೆ ಸಾಗಿದಂತೆ ಬದುಕು ಹೆಚ್ಚು ಸಹ್ಯವೆನಿಸತೊಡಗಿ ನೆನೆಪಿನ ಮೈಲುಗಲ್ಲುಗಳು ಹಾದುಹೋಗುತ್ತಿದ್ದವು. ಯಾವಾಗಲೂ ಒಂದೆಡೆ ನಿಲುಗಡೆ.

ರಾಶಿ ರಾಶಿ ಹಿಮದ ನಡುವಿಂದ. ಎಲೆ ಉದುರಿದ ಬೋಳು ಮರಗಳ ಆಚೆಯಿಂದ, ಇಳಿಜಾರು ಛಾವಣಿಯ ಮನೆಯ ತಿರುವಿನಿಂದ ಅವಳು ನಡೆದು ಬರುತ್ತಿದ್ದಳು. ಸ್ವಪ್ನಕನ್ನಿಕೆ. ಭುಜದವರೆಗೂ ಇಳಿಬಿದ್ದಿದ್ದ ನುಣುಪಾದ ಕಪ್ಪು ಕೂದಲು. ಉದ್ದ ಮುಖ. ತುಂಬಿದ ಕೆಂಪು ತುಟಿಗಳು. ಕಂದು ಕಣ್ಣುಗಳು. ಕಟ್ಟುಮಸ್ತಾದ ಮೈಮಾಟ. ನೀಲಿ ಡೆನಿಮ್  ಶಾರ್ಟ್ಸ್, ಬಿಳೀ ಶರಟು. ಮೇಲೆರಡು ಗುಂಡಿಗಳು ತೆರೆದೇ ಇರುತ್ತಿದ್ದುವು.

‘ನನ್ನ ಹೆಸರು ಜೆನ್ನಿ. ನಾನು ಗ್ರೀಕ್’ ಎಂದಿದ್ದಳು ಮೊದಲ ಬಾರಿ ಭೇಟಿಯಾದಾಗ.

‘ನೀವು ಮರ್ಟಿ’ ?

‘ಅಲ್ಲ ಮೂರ್ತಿ ‘ ಎಂದು ಅವನು ಎಷ್ಟು ಸಲ ಹೇಳಿದ್ದರೂ ಅವಳಿಗೆ ಅವನು ಮರ್ಟಿಯೇ.

ಅವಳ ನಿಜವಾದ ಹೆಸರು ಹಾತೂನಿಕಾ ಅಡ್ಜಿಮಿಯನ್. ಅರ್ಮೇನಿಯಾ ದೇಶದವಳು. ಆಗಿನ ಕಾಲದಲ್ಲಿ ರಶ್ಯಾ ತುಳಿದು ತುಳಿದು ಹಣ್ಣು ಮಾಡಿದ್ದ ಅರ್ಮೇನಿಯಾ ತುಂಬಾ ಅಶಕ್ತ ದೇಶವೆಂದು ಜನರು ತಿಳಿದಿದ್ದರಿಂದ, ಅವಳು ತಾನು ಗ್ರೀಸಿನವಳು ಎಂದು ಹೇಳಿಕೊಳ್ಳುತ್ತಾಳೆ ಎಂದು ಎಲ್ಲರಿಗೂ ಗೊತ್ತಿತ್ತು. ಹಾತೂನಿಕಾ ಎನ್ನಲು ಅಮೆರಿಕನ್ನರಿಗೆ ನಾಲಿಗೆ ತಿರುಗೊಲ್ಲ, ಅದಕ್ಕೇ ನನ್ನ ಹೆಸರು ಜೆನ್ನಿ ಎಂದು ಹೇಳುತ್ತೇನೆ ಎಂದು ಅವಳು ಹೇಳಿದರೂ ಅದಕ್ಕೆ ಕಾರಣವೂ ತನ್ನ ಮೂಲವನ್ನು ಮುಚ್ಚಿಡುವುದೇ ಆಗಿತ್ತೆಂದೂ ಗೊತ್ತಿತ್ತು. ಅದು ಹೇಗೋ ಅವಳ ಜೊತೆ ತನ್ನ ರೂಮ್ಮೇಟನ್ನು ಭೇಟಿಯಾಗಲು ಬರುತ್ತಿದ್ದ ಅವಳ ಕರಿ ಗಡ್ಡ ಕರಿ ಕೂದಲಿನ ಗೆಳೆಯನ ಮೂಲಕ ಅವಳ ಪರಿಚಯವಾಯಿತು. ನಂತರ ಪರಿಚಯ ಸ್ನೇಹಕ್ಕೆ ತಿರುಗಿ ಅವಳು ಒಬ್ಬೊಬ್ಬಳೆಯೂ ಬರತೊಡಗಿದ್ದಳು.

More

ಶೂದ್ರ, ಜೋಗಿ ಮತ್ತು ತಿರುಮಲೇಶ್

–ಕೆ. ವಿ. ತಿರುಮಲೇಶ್

ಪ್ರಿಯ ಜೋಗಿ,

ನಮ್ಮೆಲ್ಲರ ಮಿತ್ರ ಶೂದ್ರ ಶ್ರೀನಿವಾಸ್ ಅವರ ಬಗ್ಗೆ ನೀವು ಎಷ್ಟೊಂದು ಆಪ್ತವಾಗಿಯೂ  ಬೆರಗಾಗಿಯೂ ಬರೆದಿದ್ದೀರಿ! ಧನ್ಯವಾದಗಳು.

ಅವರನ್ನು ನಾನೂ ಕೆಲವು ಸಲ ಭೇಟಿಯಾಗಿದ್ದಿದೆ; ಅವರ ಯೋಜನೆಗಳ ಕುರಿತು ಅವರ ಬಾಯಿಂದಲೇ ಕೇಳಿದ್ದಿದೆ. ಶ್ರೀನಿವಾಸ್ ಚೈನಾ ವರೆಗೂ ಹೋಗಿಬಂದರು ಎಂದು ತಿಳಿದು ನಾನು ಸಂತೋಷಪಟ್ಟಿದ್ದೇನೆ. ಅವರ ಕನಸಿಗೊಂದು ಕಣ್ಣಿನ ಯಾವುದೋ ಒಂದು ಸಂಪುಟಕ್ಕೆ ನಾನೊಂದು ಮುನ್ನುಡಿ ಬರೆದ ನೆನಪು. ಅದರಲ್ಲಿ ಅವರನ್ನು ನಾನು ಕನ್ನಡದ ಲಾಸ್ಟ್ ರೊಮ್ಯಾಂಟಿಕ್ ಎಂದು ಕರೆದಿದ್ದೆ. ಬಹುಶಃ ಈ ಬಿರುದಿಗೆ ಪಾತ್ರರಾಗುವ ಇನ್ನೂ ಹಲವು ಮಂದಿ ಇರಬಹುದು. ಆದರೂ ಯಾವುದೋ ಒಂದು ಅರ್ಥದಲ್ಲಿ ಶೂದ್ರನೇ ಲಾಸ್ಟ್ ರೊಮ್ಯಾಂಟಿಕ್ ಅನಿಸ್ತದೆ.

ಕೆಲವು ದಿನಗಳ ಹಿಂದೆ ನಾನವರ ಜತೆ ಫೋನ್ ನಲ್ಲಿ  ಮಾತಾಡಿದ್ದೆ. ನನ್ನನ್ನು ಬೆಂಗಳೂರಿಗೆ ಕರೆಸಿ ಅದೇನೋ ಸಮಾರಂಭ ಮಾಡಬೇಕು ಎಂದು ಪಿತೂರಿ ಹೂಡುತ್ತಿದ್ದರು; ನನಗದು ಗೊತ್ತಾಗಿ ಬೇಡವೆಂದೆ. ಆದರೂ ನಾನವರನ್ನು ಕಂಡು ಬಹಳ ವರ್ಷಗಳೇ ಆದುವು. ಶೂದ್ರ ಪತ್ರಿಕೆ ಒಂದು ಕಾಲದಲ್ಲಿ ಕನ್ನಡದ ಅತಿ ಶ್ರೇಷ್ಠ ಚಿಕ್ಕ ಪತ್ರಿಕೆಯಾಗಿ ಬರುತ್ತಿತ್ತು; ನಂತರ ಅದು ಕುಂಟುತ್ತ ಸಾಗಿತು. ಅದನ್ನೆಲ್ಲ ನೀವು ಚೆನ್ನಾಗಿ ಗುರುತಿಸಿದ್ದೀರಿ.

ಶೂದ್ರ ಯಾವುದೋ ಮರದ ಕೆಳಗೆ ಕುಳಿತು ಅದನ್ನೇ ಬೋಧಿವೃಕ್ಷ ಎಂದು ಅಂದುಕೊಂಡು ಬುದ್ಧನಂತೆ ಕುಳಿತುಕೊಂಡಿರುವುದನ್ನು ನಾನು ಊಹಿಸುತ್ತಿದ್ದೇನೆ.

 

 

ಜೋಗಿ ಬರೆಯುತ್ತಾರೆ: ಶೂದ್ರ ಎಂಬ ಶ್ರೀನಿವಾಸ

-ಜೋಗಿ

ಹಳೆಯ ಪುಸ್ತಕಗಳನ್ನು ತಿರುವಿಹಾಕುತ್ತಿದ್ದರೆ ಕೈಗೆ ಸಿಕ್ಕಿದ್ದು ಯಾವುದೋ ತಿಂಗಳ ಶೂದ್ರ. ಅದರೊಳಗೆ ಕಿ. ರಂ. ನಾಗರಾಜ್ ಕುರಿತು ಶೂದ್ರ ಬರೆದ ಬರಹ. ಕಿ.ರಂ. ಮತ್ತು ಶೂದ್ರ ಜೊತೆಜೊತೆಗೇ ನೆನಪಾದರು.

ಶೂದ್ರ ನಮ್ಮೆಲ್ಲರಿಗಿಂತ ಹಿರಿಯರು. ನಾವು ಓದಲು ಶುರು ಮಾಡುವ ಹೊತ್ತಿಗೆಲ್ಲ ಅವರು ಬರೆಯುವುದಕ್ಕೆ ಆರಂಭಿಸಿದ್ದರು. ಜೊತೆಗೇ ಒಂದು ಪತ್ರಿಕೆಯನ್ನೂ ಶುರು ಮಾಡಿದ್ದರು. ಸುದ್ದಗುಂಟೇಪಾಳ್ಯ ಎಂಬ ವಿಚಿತ್ರ ಹೆಸರಿನ ಬಡಾವಣೆಯಲ್ಲಿ ಅವರ ಮನೆಯಿತ್ತು. ಅದೇ ಅವರ ಕಾರ್ಯಕ್ಷೇತ್ರವೂ ಆಗಿತ್ತು.

ಶೂದ್ರ ಓದಿ ನಾನು ಮತ್ತು ಶ್ರೀನಿವಾಸ ಜೋಕಟ್ಟೆ ಅವರಿಗೆ ಫೋನ್ ಮಾಡಿದಾಗ ಶೂದ್ರ ಅಸ್ಪಷ್ಟ ಕನ್ನಡದಲ್ಲಿ ಮನೆಗೆ ಬಂದುಬಿಡಿ ಎಂದು ಧರ್ಮಾರಾಮ್ ಕಾಲೇಜು, ಹಿಂಭಾಗದ ರಸ್ತೆ, ಸುದ್ದಗುಂಟೆಪಾಳ್ಯ ಎಂದಲ್ಲ ವಿಳಾಸ ಹೇಳಿದ್ದರು. ನಾವು ಕಷ್ಟಪಟ್ಟು ಆ ವಿಳಾಸ ಹುಡುಕಿಕೊಂಡು ಹೋಗಿ ಬುಲ್ಗೇನಿಯನ್ ಗಡ್ಡದ ಶೂದ್ರ ಶ್ರೀನಿವಾಸರನ್ನು ಭೇಟಿಯಾಗಿ ಅವರು ಕೊಟ್ಟ ಟೀ ಕುಡಿದು, ಹಳೆಯ ಶೂದ್ರ’ ಪ್ರತಿಗಳನ್ನು ಹೊತ್ತುಕೊಂಡು ಬಂದಿದ್ದೆವು.

More

ಬನದ ಬದುಕು ….

ಇಲ್ಲೂ ನೋಡಿ: invitations blog

ಮತ್ತೆ ಮತ್ತೆ ಅಂಕಿತ …

ಹಡಪದ್ ನೆನಹಿನ ಕೂಟ …

ಇಲ್ಲೂ ನೋಡಿ: invitations blog

ನೃತ್ಯ ನೀರಾಜನ …

ಇಲ್ಲೂ ನೋಡಿ: invitations blog

ಈ ತಿಂಗಳು ರಂಗಶಂಕರದಲ್ಲಿ …

ಇಂದು ಸಂಜೆ ….

ನಾಟಕ ಬೆಂಗ್ಳೂರು 2010 ಉತ್ಸವದಲ್ಲಿ

ಅನೇಕ,  ಆಭಿನಯಿಸುವ

ಮಸ್ತಕಾಭಿಷೇಕ ರಿಹರ್ಸಲ್ಲು

ರಚನೆ: ಎಚ್.ಎಸ್. ಶಿವಪ್ರಕಾಶ್
ಸಂಗೀತ, ನಿರ್ದೇಶನ: ಸುರೇಶ್ ಆನಗಳ್ಳಿ

ತಾಂತ್ರಿಕ ವರ್ಗ
ಬೆಳಕು : ಆ ನ ರಮೇಶ್, ಮಹದೇವ ಸ್ವಾಮಿ
ರಂಗವಿನ್ಯಾಸ : ಶಂಕರ ಜೀವಿ
ಪರಿಕರ : ಸಂತೋಷ್ ಪಾಂಚಾಲ್
More

ಮದುವೆ ನಂತರದ ಮ್ಯೂಸಿಕ್….

-ಸೂತ್ರಧಾರ ರಾಮಯ್ಯ

ರಮಾದೇವಿ: ಸಂಗೀತ ಕಲಿತಿದ್ದೀಯಾ ತಾನೇ?
ಲಕ್ಷ್ಮೀದೇವಿ: ಕಲಿತಿದ್ದೇನೆ, ಆದರೆ ಇನ್ನೂ ಕಚೇರಿ ಕೊಟ್ಟಿಲ್ಲಾ. ಈ ತಬಲಾ, ಪಿಟೀಲು, ಮೃದಂಗ, ಮೊರ್ಚಿಂಗ್, ಘಟಗಳ
ಪಕ್ಕವಾದ್ಯ ಕೇಳಿದ್ರೆ ಒಂತರಾ ಅಲರ್ಜಿ! ಪರ್ಕಶನ್ ಅಂದ್ರೇ ಆಗಲ್ಲ ನನಗೆ.
ನರಸಿಂಹರಾಜು: ಆದ್ರೆ, ನಮ್ಮ ಮನೆಯಲ್ಲಂತೂ ಮದುವೆ ನಂತರದ ನಿನ್ನ ಸಂಗೀತ ಕಚೇರಿಗೆ ಪಕ್ಕಾವಾದ್ಯಗಳ ದಂಡಂತೂ ಇದೆ. ‘ಘಟಾ’ನುಘಾಟಿ ನಮ್ಮಮ್ಮ, ಮಾತು ಮಾತಿಗೂ ಗದರಿಸೋ ನಮ್ಮಪ್ಪನ ಮೃದಂಗ, ಕೀಟಲೆ ಚಾಡಿಗಳಲ್ಲಿ ಪಳಗಿದ ನನ್ನ ತಂಗಿಯರ ಮೋರ್ಚಿಂಗ್, ಜೊತೆಗೆ ಸ್ಟೇಟಸ್ ಸ್ಟೇಟಸ್ ಅಂತಾ ಜಂಬ ಹೊಡೆಯೋ ವಾರ್ ಗಿತ್ತಿ ,ಅರ್ಥಾತ್ ನಮ್ಮಣ್ಣನ ಹೆಂಡತಿಯ ಬ್ಯಾಂಗೋ, ಸಾಲದ್ದಕ್ಕೆ ಈ ನಿನ್ನ ಪ್ರಾಣ ಪ್ರಿಯನ ಶೃತಿ, ಮದುವೆಯ ನಂತರದ ರಿ-ಪರ್ಕಶನ್ನೇ ಬೇರೆ.

ಬೀಗರು – ಲಾಕರು

ನಮ್ಮ ಸಮಾಜದಲ್ಲಿ ಲೌವ್ ಮ್ಯಾ-ರೇಜ್ ಅಂದ್ರೇ ಟ್ರಬಲ್ಲು. ಹಾಗೇ ಮದುವೆಯಾದವರ ಬಾಳಲ್ಲಿ “ಪ್ಯಾರ್ ಕಿಯಾತೋ ಡರ್ ನಾ ಕ್ಯಾ” ಅನ್ನೋ ಮೊಗಲ್ ಎ ಅಜಾಮ್ ನ ಸೀನಂತು ಗ್ಯಾರಂಟಿ. ಇನ್ನು ಅರೇಂಜ್ಡ್ ಮ್ಯಾರೇಜ್ ಅಂದ್ರಂತೂ ಅರೇಂಜ್ಡ್ ಟ್ರಬಲ್ಲೆ?
ಮದುವೆಯೋ ಮನೆ ಹಾಳೋ ಅಂತಾ ಅ.ನ.ಕೃ ಹೇಳಿದ ಹಾಗೆ ವಿಪರೀತ ಟ್ರಬಲ್ summu! ವರದಕ್ಷಿಣೆ, ವರೋಪ್ ಚಾರ ಅಂತಾ
ಬೋಳಿಸಿಬಿಡ್ತಾರೆ ಹೆಣ್ಣಿನ ಮನೆ ಬೀಗ ಒಡೆಯೋ ಬೀಗ-ರು.
More

Previous Older Entries

%d bloggers like this: