ಬ್ರೇಕಿಂಗ್ ನ್ಯೂಸ್ …

ರಹಮತ್ ತರೀಕೆರೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ .

ರಹಮತ್ ತರೀಕೆರೆ ಅವರ ‘ಕತ್ತಿಯಂಚಿನ ದಾರಿ’ ಈ ಗೌರವಕ್ಕೆ ಪಾತ್ರವಾಗಿದೆ.

(ಪುಸ್ತಕ ಜಗತ್ತು)

ಈ ಪುಸ್ತಕಕ್ಕೆ ರಹಮತ್ ಬರೆದ ಮಾತು ಇಲ್ಲಿದೆ...

ಈ ಪುಸ್ತಕದ ಶೀರ್ಷಿಕೆಯು, ನಮ್ಮ ಲೇಖಕರೊಬ್ಬರು ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ ಭಾಷಣಕ್ಕೆ ಮಾಡಿದ ಪ್ರತಿಕ್ರಿಯೆಯಿಂದ ಬಂದಿದ್ದು;  ಇದು ನಮ್ಮ ಸುತ್ತ ಏರ್ಪಟ್ಟಿರುವ ಪರಿಸರಕ್ಕೂ ಅದನ್ನು ಮುಖಾಮುಖಿ ಮಾಡುತ್ತ ಹುಟ್ಟುತ್ತಿರುವ ನಮ್ಮ ಬರೆಹಕ್ಕೂ ನಮಗೂ ಮಧ್ಯೆ ಹುಟ್ಟಿರುವ ಬಿಕ್ಕಟ್ಟುಗಳಿಗೆ ರೂಪಕವಾಗಬಲ್ಲದು ಎಂದು ಅನಿಸಿತು. ಸಾಹಿತ್ಯ ಕೃತಿಯ ಹೊರಗಿನ ಆಕೃತಿ ಮತ್ತು ಒಳಗಿನ ಇರುವ ಆಶಯ – ಇವುಗಳ ನಡುವಣ ಸಂಬಂಧದಲ್ಲಿ ವೈರುಧ್ಯಗಳಿರುತ್ತವೆ.

ಈ ವೈರುಧ್ಯಗಳ ನಡುವಣ ಸೆಳೆದಾಟಗಳ ಶೋಧ ಮಾಡುವುದು ಸಾಹಿತ್ಯ ವಿಮರ್ಶೆಗೆ ಯಾವತ್ತೂ ಸವಾಲು. ಇಲ್ಲಿನ ಲೇಖನಗಳಲ್ಲಿ ಇಂತಹದೊಂದು ಶೋಧದ ಸಣ್ಣ ಯತ್ನವಿದೆ. ಸಾಹಿತ್ಯ ವಿಮರ್ಶೆಯಲ್ಲಿ ನಿರ್ದಿಷ್ಟ ವಾದವನ್ನು ಇಟ್ಟುಕೊಂಡು ಅದಕ್ಕೆ ಬೇಕಾದ ಸಾಕ್ಷ್ಯಗಳನ್ನು ಗುಡ್ಡೆ ಹಾಕಿಕೊಂಡು ಪ್ರತಿಪಾದನೆ ಮಾಡುವುದು ಸುಲಭ. ಆದರೆ ಕೃತಿಗಳು ಬಿಟ್ಟುಕೊಡುವ ಹಲವು ವಿಭಿನ್ನ ಕೆಲವೊಮ್ಮೆ ಪರಸ್ಪರ ವಿರುದ್ಧ ದನಿಗಳನ್ನು ಹಿಡಿದು, ಒಂದಕ್ಕೆ ತೆತ್ತುಕೊಳ್ಳದೆ, ಮತ್ತೊಂದನ್ನು ಕಡೆಗಣಿಸದೆ ಅರ್ಥಮಾಡಿಕೊಳ್ಳುವುದು ಕಷ್ಟದ ಕೆಲಸ; ಈ ಕಷ್ಟ ವಿಮರ್ಶೆಯದು ಮಾತ್ರವಲ್ಲ, ನನ್ನನ್ನೂ ಒಳಗೊಂಡಂತೆ ನನ್ನ ತಲೆಮಾರಿನ ಅನೇಕರ ನಡೆ ಮತ್ತು ನುಡಿಗಳ ನಡುವೆ ಕಾಣಿಸಿರುವ ಕಷ್ಟ ಕೂಡ.
More

ಪ್ರೊ ಶಿವರಾಮಯ್ಯ ಬರೆಯುತ್ತಾರೆ :ಬಾ, ಹುಲಿಕಲ್ ನೆತ್ತಿಗೆ-1…

-ಪ್ರೊ. ಶಿವರಾಮಯ್ಯ

2010 ಜನವರಿ ತಿಂಗಳ ಕೊನೆಯ ಪಾದ ಇರಬೇಕು. ಒಂದು ದಿನ ನಮ್ಮ ಡಾ. ಕೆ.ವೈ. ನಾರಾಯಣ ಸ್ವಾಮಿ ನನಗೆ ಫೋನ್ನಲ್ಲಿ ‘ರಂಗತಜ್ಞ ಸಿ. ಬಸವಲಿಂಗಯ್ಯ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ರಂಗಾಯಣದ ವತಿಯಿಂದ ನಾಟಕ ರೂಪಕ್ಕಿಳಿಸಲು ಹೊರಟಿದ್ದಾರೆ. ಅದಕ್ಕೆ ಸ್ಕ್ರಿಪ್ಟ್ ಮಾಡಿಕೊಡಲು ನನ್ನ ಕೇಳಿಕೊಂಡಿದ್ದಾರೆ. ಇದು ಸಾಧ್ಯವೇ ಎಂಬ ಭಯ ನನಗೆ ಕಾಡಿತಾದರೂ ‘ಮದುಮಗಳು’ ಕೃತಿಯ ಓದಿನ ಬೆರಗು ನನ್ನ ಕಾಡುತ್ತಿತ್ತು.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಆದ್ದರಿಂದ ‘ಆಯಿತು’ ಎಂದಿದ್ದೇನೆ. ನೀವು ‘ಪೂರ್ವಿಕರು’ ‘ಮದುಮಗಳು’ ಪ್ರಕಟವಾದಗಾಯ್ತು, ಈ ಕೃತಿ ಲೋಕದಲ್ಲಿ ಚಿತ್ರಣಗೊಂಡಿರುವ ಒಕ್ಕಲಿಗ, ದಲಿತ, ಬ್ರಾಹ್ಮಣ, ಕ್ರಿಶ್ಚಿಯನ್ ಹಾಗೂ ಮುಸ್ಲಿಮ್ರನ್ನು ಕುರಿತು ಕನ್ನಡ ವಿಮರ್ಶೆ ಎತ್ತಿರುವ ವಾಗ್ವಾದಗಳನ್ನು ಬಲ್ಲಂತವರು; ಮೇಲಾಗಿ ಕುವೆಂಪು ಅಭಿಮಾನಿಗಳು. ನೀವು ನನ್ನೊಡನೆ ಮೈಸೂರಿಗೆ ಬಂದು ಈ ಗುರುತರ ಜವಾಬ್ದಾರಿಯನ್ನು ನಿರ್ವಹಿಸಲು ನೆರವಾಗಬೇಕು ಎಂದು ದೂಸರ ಮಾತಿಗೆ ಅವಕಾಶ ಕೊಡದೆ ‘ನಾಳೆ ನಾಡಿದ್ದರಲ್ಲಿ ಹೊರಡಬೇಕು’ ಎಂದು ಬಿಟ್ಟರು.ಆ ಪ್ರಕಾರ ಕೆವೈಎನ್, ನಾನು, ಭೈರೇಗೌಡ ಮೈಸೂರಿಗೆ ಹೊರಟೆವು.

ಅದೇ ದಿನ ವನರಂಗದಲ್ಲಿ ನೇದರ್ಲ್ಯಾಂಡಿನಿಂದ ಬಂದಿದ್ದ ಮರಗಾಲು ನೃತ್ಯ ಮಾಡುವ ಆದೇಶದ ಇಬ್ಬರು ಜಾನಪದ ಕಲಾವಿದರ ಪ್ರದರ್ಶನ ಕಾರ್ಯಕ್ರಮ ಇತ್ತು. ಬೆಂಗಳೂರಿನಲ್ಲಿ ನೋಡಲಾಗಿರದಿದ್ದ ಅವರ ಅಪರೂಪದ ನೃತ್ಯವನ್ನು ನೋಡುವ ಅವಕಾಶವೂ ಸಿಕ್ಕಿತು. ನಮ್ಮಲ್ಲಿನ ಮಹಿಷಾಸುರ ಮರ್ದಿನಿ ನಾಟ್ಯ ಕಥೆಯನ್ನು ಹೋಲುವ ಜನಪದ ಮರಗಾಲು ನೃತ್ಯ ಅದು. ಕೇವಲ ಒಂದು ಹೆಣ್ಣು ಒಂದು ಗಂಡು ಅಲ್ಲಿ ಪಾತ್ರಧಾರಿಗಳು, ಗಂಡಿನ ಗರ್ವ ಸ್ವಭಾವ ಗುಣವನ್ನು ಹೆಣ್ಣು ಮೆಟ್ಟಿನಿಲ್ಲುವ ಅದ್ಭುತ ಪ್ರದರ್ಶನ ಅದಾಗಿತ್ತು. 45 ನಿಮಿಷಗಳ ಆ ಪ್ರದರ್ಶನ ಕಣ್ಣೆವೆ ಬಡೆಯದ ನೋಟವಾಗಿತ್ತು.

More

ಮಂಜುನಾಥ್ ಚಾಂದ್ ಬರೆವ ‘ಇವರು ಮೂರ್ತಿ’…

-ಮಂಜುನಾಥ್ ಚಾಂದ್

ಇವರು ಮೂರ್ತಿ 2

ವಾಯಲಿನ್ ಮೋಹ…
ನಂತರ ಇವನ್ನೆಲ್ಲ ಬಿಟ್ಟು ಮ್ಯೂಸಿಷಿಯನ್ ಆಗಬೇಕು ಅಂತ ವಾಯಲಿನ್ ಪ್ರಾಕ್ಟಿಸ್ ಮಾಡೋಣಾ ಅಂತ ಶುರು ಮಾಡಿದೆ. ಆವಾಗ ನಂಗೆ ಕೇಶವಮೂರ್ತಿ ಅಂತ ದೊಡ್ಡ ವಿಧ್ವಾನ್ ಸಿಕ್ಕಿದ್ರು. ಆವಾಗ ಅವರು ಸೆವೆನ್ ಸ್ಟ್ರಿಂಗ್ ವಾಯಲಿನ್ ನುಡಿಸ್ತಾ ಇದ್ರು. ಚೌಡಯ್ಯ ಬಿಟ್ಟರೆ ಇವರೇ ಸೆವೆನ್ ಸ್ಟ್ರಿಂಗ್ ನುಡಿಸ್ತಾ ಇದ್ದಿದ್ದು. ಅವರು ನನಗೆ ಮಾಡೆಲ್ ಅನಿಸಿತು. ಮೊದಲ ದಿನ ಹೋದಾಗ, ಅವರ ವಾಯಲಿನ್ನ್ನೇ ಕೊಟ್ಟರು ನುಡಿಸಿ ಅಂತ. ನುಡಿಸಿದೆ, ಪರವಾಗಿಲ್ಲ ನುಡಿಸಬಹುದು ಅಂದರು.

ಮುಂದೆ ಅವರು ಮೈಸೂರಿಂದ ಹೊರಗಡೆ ಕಛೇರಿ ನಡೆಸಲು ಹೋದ್ರು, ನಾನು ಬರೋವರ್ಗೂ ಭೈರವಿ ವರ್ಣ ಪ್ರಾಕ್ಟೀಸ್ ಮಾಡು ಅಂತ ಹೇಳಿದ್ರು. ಫಿಲ್ಮ್ ಆಗಲಿಲ್ಲ, ವಾಯಲಿನ್ನಲ್ಲಾದರೂ ಸಾಧನೆ ಮಾಡೋಣ, ನಾನಾದರೂ ಚೌಡಯ್ಯ ಅವರಂತೆ ಆಗೋಣ ಅಂದುಕೊಂಡೆ. ಪ್ರತಿದಿನ ಎಂಟರಿಂದ ಹತ್ತು ಗಂಟೆ ಪ್ರಾಕ್ಟೀಸ್ ಮಾಡ್ತಾ ಇದ್ದೆ. ಮನೆಯಲ್ಲಿದ್ದುದು ನಾನು ಮತ್ತು ನನ್ನ ಅಪ್ಪ ಇಬ್ಬರೇ. ನನ್ನ ತಾಯಿ ಬಹಳ ಹಿಂದೆ ತೀರಿಕೊಂಡಿದ್ದರು. ನನ್ನ ಬ್ರದರ್ ಮದ್ರಾಸ್ನಲ್ಲಿ ಕೆಲ್ಸ ಮಾಡ್ತಾ ಇದ್ರು. ಹೀಗೆ ಎರಡು ಮೂರು ತಿಂಗಳು ವಾಯಲಿನ್ ನುಡಿಸ್ತಾ ಇದ್ದೆ.

ಆರವತ್ತು ರೂಪಾಯಿಗೂ ಪರದಾಟ...
ಆ ಹಂತದಲ್ಲಿ ಬೆಂಗಳೂರಿನಲ್ಲಿ ಆಕ್ಯುಪೇಶನ್ ಇನ್ಸ್ಟಿಟ್ಯೂಟ್ (ಜಯಚಾಮರಾಜೇಂದ್ರ ಪಾಲಿಟೆಕ್ನಿಕ್)ಓಪನ್ ಆಯ್ತು. ಬೆಂಗಳೂರಲ್ಲಿರುವ ನನ್ನ ಕಸಿನ್ಗೆ ಅರ್ಜಿ ಕಳಿಸಿದೆ. ಆ ಹೊತ್ತಿಗೆ ನಮ್ಮ ಅಪ್ಪ ರಿಟೈರ್ ಆಗಿದ್ರು. ನಮ್ಮ ಹತ್ರ ಹಣವೇ ಇರಲಿಲ್ಲ. ಶಿಫಾರಸು ಪತ್ರದ ಮೇಲೆ ನನಗೆ ಸೀಟೇನೋ ಸಿಕ್ತು. ಆದ್ರೆ ಅಡ್ಮಿಷನ್ ಆಗೋಕೆ 50-60 ರೂ. ಕೊಡಬೇಕಿತ್ತು. ಎಲ್ಲಿಂದ ತರೋದು? ನನಗೆ ತುಂಬಾ ಬೇಜಾರಾಗಿತ್ತು. ಆಗ ನನಗೆ 16-17 ವರ್ಷ. ಅಲ್ಲಿವರೆಗೆ ನಾನು ಅತ್ತಿದ್ದೇ ಇಲ್ಲ.

ಮನೆಯಲ್ಲಿ ಅಮ್ಮ ಇರಲಿಲ್ಲ, ಆದ್ರೂ ನನಗೆ ಅಳು ಅನ್ನೋದು ಗೊತ್ತೇ ಇರಲಿಲ್ಲ. ಬೆಂಗಳೂರಿನಲ್ಲಿ ನನ್ನ ಫ್ರೆಂಡ್ ಒಬ್ಬ ಅಂಗಡಿನಲ್ಲಿ ಅಕೌಂಟೆಂಟ್ ಆಗಿ ಕೆಲ್ಸ ಮಾಡ್ತಾ ಇದ್ದ. ನನ್ನ ಕಷ್ಟ ಸುಖ ಏನಿದ್ರೂ ಅವನ ಹತ್ರ ಹೇಳಿಕೊಳ್ತಾ ಇದ್ದೆ. ಆವತ್ತೂ ಅವನ ಹತ್ರ ಹೋಗಿದ್ದೆ. ಸೀಟು ಸಿಗಲಿಲ್ಲ ಅಂತ ಹೇಳುತ್ತಾ ದುಃಖ ತಡೆಯಲಾರದೆ ಅತ್ತೇ ಬಿಟ್ಟಿದ್ದೆ.

More

ಗುರುಗುಂಟಿರಾಯರ On-line Transaction…

-ಜಯದೇವ ಪ್ರಸಾದ ಮೊಳೆಯಾರ

-ಕಾಸು ಕುಡಿಕೆ37

I think there is a world market for maybe five computers. . . IBM chairman Thomas Watson, 1943

ಜಗತ್ತಿನಾದ್ಯಂತ ಒಂದೈದು ಕಂಪ್ಯೂಟರ್ಗಳಿಗೆ ಮಾರುಕಟ್ಟೆ ಇದೆಯೆಂದು ನಾನು ಭಾವಿಸುತ್ತೇನೆ. . . ಐ.ಬಿ.ಎಮ್ ಚೇರ್ಮನ್ ಥಾಮನ್ ವಾಟ್ಸನ್, 1943.

ಗುರುಗುಂಟಿರಾಯರಿಗೆ ಕಂಪ್ಯೂಟರ್ ಕಂಡರೆ ಏನೋ ಭಯ. ಮುಟ್ಟಿದರೂ ಸಾಕು; ಡೈನಾಮೈಟ್ ತರ ಎಲ್ಲಾದರು ‘ಡಮಾರ್’ ಎಂದು ಬ್ಲಾಸ್ಟ್ ಆಗಿ ನುಚ್ಚು ನೂರಾದರೆ ಎಂಬ ಭಯ. ಮಗ-ಸೊಸೆ, ಅಷ್ಟೇ ಯಾಕೆ ಇತ್ತೀಚೆಗೆ ಮೊಮ್ಮಗನೂ ಕೂಡಾ ಲೀಲಾಜಾಲವಾಗಿ ಇಂಟರ್ನೆಟ್ ಎಂಬ ಲೀಲಾ ಜಾಲದಲ್ಲಿ ವಿಹರಿಸುವುದನ್ನು ನೋಡಿಯೇ ದಂಗಾಗುತ್ತಾರೆ.

ತಮ್ಮ ರಾಜ್ಯಭಾರ ನಡೆಯುತ್ತಿದ್ದ ಜಮಾನದಲ್ಲಿ ಅವರು ಕಂಡ ಸರ್ವರ್ ಎಂದರೆ ಉಡುಪಿ ಕೃಷ್ಣ ಭವನದಲ್ಲಿ ಇಡ್ಲಿಕಾಫಿ ತಂದಿಡುವ ಮಾಣಿ ಮಾತ್ರ. ಮೌಸ್ ಅಂದರೆ ಅಡಿಗೆಕೋಣೆಯಲ್ಲಿ ರಾದ್ಧಾಂತ ಮಾಡಿಕೊಂಡು ಬೆಕ್ಕಿನ ಮುಂದೆ ಮುಂದೆ ಓಡುವ ಪ್ರಾಣಿ ಎಂದೇ ಪರಿಚಯ. ಮಾನಿಟರ್ ಎಂದರೆ ಒಂದು ಜಾತಿಯ ಉಡ ಎಂದು ಹೈಸ್ಕೂಲಿನ ವಿಜ್ಞಾನ ಪಾಠದಲ್ಲಿ ಓದಿದ ನೆನಪು. ಕ್ಲಿಕ್ ಮಾಡುವುದು ಕೆಮರಾದಲ್ಲಿ ಮಾತ್ರ ಎಂದು ತಿಳಿದುಕೊಂಡಿದ್ದಾರೆ.

ಚಿಪ್ಸ್ ಎನ್ನುವುದು ಅವರು ಪೊಟಾಟೋ ಚಿಪ್ಸಿಗೆ ಮಾತ್ರ. ವಿಂಡೋಸ್ ಎನ್ನುವುದು ಕಿಟಕಿಗೆ ಅಲ್ಲವೇ? ಇನ್ನು ಕೀಬೋಡರ್್, ಸಿಪಿಯು, ರೂಟರ್, ಡೌನ್ಲೋಡ್, ಅಪ್ಲೋಡ್, ಈ ಮೈಲ್, ಆ ಮೈಲ್ ಇತ್ಯಾದಿ ಶಬ್ದಗಳನ್ನು ಕೇಳುವಾಗಲಂತೂ ಗ್ರೀಕ್ ಐನ್ಡ್ ಲಾಟಿನ್ ಭಾಷೆಯಲ್ಲಿ ನವ್ಯಕವನ ಕೇಳಿದಂತಾಗುತ್ತದೆ ರಾಯರಿಗೆ.

ಅಂತದ್ದರಲ್ಲಿ ಗುರುಗುಂಟಿರಾಯರಿಗೆ ಆನ್ ಲೈನ್ ವ್ಯವಹಾರಗಳ ಬಗ್ಗೆ ಇತ್ತೀಚೆಗೆ ಅತೀವ ಆಸಕ್ತಿ ಕೆರಳಿತು. ದಿನಾ ಪೇಪರಿನಲ್ಲಿ ಆನ್ಲೈನ್ ಆಗಿ ಮಾಡುವಂತಹ ವಿತ್ತೀಯ ವ್ಯವಹಾರಗಳ ಗುಣಗಾನವನ್ನು ಓದಿ ಕುತೂಹಲಿಗಳಾದರು.

More

ಹೀಗೂ ಉಂಟೆ !!!

ಪೂರ್ಣ ವಿವರಗಳಿಗೆ : ಮೀಡಿಯಾ ಮೈಂಡ್


ಚೆರ್ರಿ ಆರ್ಚರ್ಡ್…

ಚಿತ್ರಗಳು :ಮಹಾಬಲ ಸೀತಾಳಭಾವಿ

ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳು ನಟಿಸಿದ ಚೆಕೊವ್ ನ ಚೆರ್ರಿ ಆರ್ಚರ್ಡ್ ನಾಟಕದ ಒಂದು ನೋಟ…

ಇನ್ನಷ್ಟು ಚಿತ್ರಗಳು : ಸೈಡ್ ವಿಂಗ್


ಮೌನ-ಆರ್ಭಟಗಳ ನಡುವೆ ನರ್ಮದಾ ಕಣಿವೆಯ ಪಯಣ…

-ನಾ ದಿವಾಕರ

ಅಕ್ಟೋಬರ್ ಮಾಸದ ಹುಣ್ಣಿಮೆಯ ದಿನ, ಭಾರತದ ಮೂಲೆ ಮೂಲೆಗಳಿಂದ ಆಗಮಿಸಿದ್ದ ನೂರಾರು ಜನ ಮಹಾರಾಷ್ಟ್ರದ ನಂದೂರ್ಬರ್ ಜಿಲ್ಲೆಯ ಭಿಲಗಾಂವ್ ಗ್ರಾಮದಲ್ಲಿ ನೆರೆದಿದ್ದರು. ಸಾತ್ಪುರ ಬೆಟ್ಟದ ಸಾಲುಗಳ ನಡುವೆ ಇರುವ ಈ ಪುಟ್ಟ ಹಳ್ಳಿಯಲ್ಲಿ ಎಲ್ಲಿಲ್ಲದ ಸಂಭ್ರಮ. ಕ್ರಾಂತಿಯ ಹಾಡುಗಳು, ಜನಪದ ಗೀತೆಗಳು, ಸಂಗೀತ ವಾದ್ಯಗಳ ಸಂಭ್ರಮ. ದೇಶದೆಲ್ಲೆಡೆಯಿಂದ ಬಂದಿದ್ದ ಜನರಲ್ಲಿ ಏನೋ ಆತ್ಮ ವಿಶ್ವಾಸ.

ತಾವು ಗೆದ್ದಿದ್ದೇವೆ, ಗೆಲುವಿನ ಹಾದಿಯಲ್ಲಿ ಮುನ್ನಡೆದಿದ್ದೇವೆ ಎಂಬ ಹೆಮ್ಮೆ ಈ ಹಾಡುಗಳಲ್ಲಿ, ಸಂಗೀತದಲ್ಲಿ ವ್ಯಕ್ತವಾಗುತ್ತಿತ್ತು. ಬೆಟ್ಟದ ಕಣಿವೆಗಳಿಂದ ಮಾರ್ದನಿಸುತ್ತಿದ್ದ ಜನಸಾಮಾನ್ಯರ ದನಿಗಳು ದೂರದ ಮಧ್ಯಪ್ರದೇಶದಲ್ಲಿ, ಗುಜರಾತಿನಲ್ಲಿ, ಕರ್ನಾಟಕದಲ್ಲಿ, ಹರ್ಯಾಣಾದಲ್ಲಿಯೂ ಪ್ರತಿಧ್ವನಿಸುತ್ತಿದ್ದವು.

ಈ ದನಿಗಳ ಹಿಂದೆ ಅಡಗಿದ್ದ ನೋವು-ಹತಾಶೆ-ಅಸಮಧಾನಗಳು ಉತ್ಸಾಹಭರಿತ ಹೋರಾಟಗಾರರ ಆತ್ಮವಿಶ್ವಾಸದ ಮುಂದೆ ಕ್ಷೀಣಿಸಿದ್ದವು. ಬೆಟ್ಟಗಳಂಚನು ದಾಟಿ ದಿಗಂತವನು ಮುಟ್ಟಿದ್ದ ಜನದನಿಯಲಿ ಕೇಳಿಬಂದ ಒಂದೇ ರಾಗ ನರ್ಮದಾ, ನರ್ಮದಾ, ನರ್ಮದಾ. ಹೌದು, ಈ ಪುಟ್ಟ ಗ್ರಾಮದಲ್ಲಿ ನೆರೆದು ಹಬ್ಬದ ವಾತಾವರಣವನ್ನು ಸವಿಯುತ್ತಿದ್ದ ಜನಸಾಮಾನ್ಯರ ಗುಂಪು ಬಾದಲ್ ಎಂಬ ಗ್ರಾಮಕ್ಕೆ ಪಯಣ ಬೆಳೆಸಿತ್ತು.

ಬಾದಲ್ ಒಂದು ಕಾಲದಲ್ಲಿ ಸುಭಿಕ್ಷವಾಗಿದ್ದು ಆಳ್ವಿಕರ ಪ್ರಗತಿಯ ಮಾರ್ಗದಲ್ಲಿ ಕಣ್ಮರೆಯಾದ ಒಂದು ಪುಟ್ಟ ಗ್ರಾಮ. ಇದು ಭೂಪಟದಿಂದ ಕಣ್ಮರೆಯಾದದ್ದು ಭೂಕಂಪದಿಂದಲ್ಲ, ಪ್ರವಾಹದಿಂದಲ್ಲ, ಸುನಾಮಿಯಿಂದಲೂ ಅಲ್ಲ. ಪ್ರಭುತ್ವದ ಅಭಿವೃದ್ಧಿ ಪಥದ ಸಂಕೇತವಾದ ಭಾರಿ ಅಣೆಕಟ್ಟುಗಳ ನಿರ್ಮಾಣದಿಂದ.ಮಧ್ಯಪ್ರದೇಶದಲ್ಲಿ ಹರಿಯುವ ನರ್ಮದಾ ನದಿಯ ನೀರನ್ನುಆರ್ಥಿಕ ಅಭಿವೃದ್ಧಿಯ ಪರಿಕರವನ್ನಾಗಿ ಉಪಯೋಗಿಸುವ ಆಳ್ವಿಕರ ಕಲ್ಪನೆಯನ್ನು ಸಾಕಾರಗೊಳಿಸುವಂತೆ ನಿರ್ಮಾಣಗೊಂಡ ಸದರ್ಾರ್ ಸರೋವರ ಅಣೆಕಟ್ಟು ಬಾದಲ್ ಮತ್ತಿತರ ಗ್ರಾಮಗಳನ್ನು ಭೂಪಟದಿಂದಲೇ ಅಳಿಸಿಹಾಕಿತ್ತು.

More

‘ಅಗಸೆಬಾಗಿಲು’…

ಮುರಳೀಧರ ಉಪಾಧ್ಯಾಯ ಹಿರಿಯಡಕ

ಶ್ರೀಮತಿ ಗಿರಿಜಾ (ಹೆಗಡೆ) ಗಾಂವ್ಕರ ಅವರ ಮೊದಲ ಸಂಕಲನ ‘ಅನಾವರಣ’ ಪ್ರಕಟವಾದದ್ದು 1997ರಲ್ಲಿ. ಮೊದಲ ಸಂಕಲನದ ಲೇಖಕರ ಮಾತಿನಲ್ಲಿ ಅವರು ಬರೆದಿರುವಂತೆ ‘ಪ್ರಕೃತಿಯ ಮಡಿಲಲ್ಲಿ ತಣ್ಣಗೆ ಮಲಗಿರುವ ಮಲೆನಾಡಿನ ಸಣ್ಣ ಹಳ್ಳಿಯೊಂದರಲ್ಲಿ ಜನಿಸಿದ ನಾನು ಚಿಕ್ಕಂದಿನಿಂದಲೂ ಹೆಣ್ಣು-ಗಂಡಿನ ಬಗೆಗೆ ತೋರುವ ತಾರತಮ್ಯದ ವಿಚಾರವಾಗಿ ಚಿಂತಿಸುತ್ತ, ಹೀಗೇಕೆ? ಎಂಬ ಪ್ರಶ್ನೆಯೊಂದಿಗೇ ಬೆಳೆದದ್ದು! ನನ್ನಲ್ಲಿಯ ಬರಹಗಾರ್ತಿ ಸ್ವಲ್ಪಮಟ್ಟಿಗೆ ಜಾಗೃತಳಾಗಿದ್ದು ಕಥೆಗಾರ್ತಿಯಾಗಿ, ನಂತರದಲ್ಲೇ ಕಾವ್ಯಕನ್ನಿಕೆಯ ಸೆರಗ ಹಿಡಿದದ್ದು.

‘ದೊಡ್ಡವಳಾದ ಕರ್ಮ’ ‘ಸ್ಥಿತಿ’ ‘ಈ ಹುಡುಗಿಯರೇ ಹೀಗೆ!’ ‘ಕಟುವಾಸ್ತವಕ್ಕೆ ಕನಸು ಬೆಂದಾಗ’ -ಇವು ‘ಅನಾವರಣ’ ಸಂಕಲನದಲ್ಲಿ ನನಗೆ ಇಷ್ಟವಾದ ಕವನಗಳು. ಪುರುಷಪ್ರಧಾನ ಸಮಾಜದ ಲಿಂಗಾಧಾರಿತ ಅಸಮಾನತೆಯಿಂದಾಗಿ ಅಸಹಾಯಕರಾಗಿರುವ ಹೆಣ್ಣುಮಕ್ಕಳ ಅವಸ್ಥೆ ಈ ಕವನಗಳಲ್ಲಿವೆ.

ಪೂರ್ಣ ಓದಿಗೆ : ಓದು ಬಜಾರ್

Narendra Modi vs Rahul Gandhi…

-ಸತೀಶ್ ಆಚಾರ್ಯ


ಪುಟ್ಟಕ್ಕನ ಹೈವೇ ….

Previous Older Entries

%d bloggers like this: