ಏಡ್ಸ್: ಪತ್ರಿಕೋದ್ಯಮ ಪ್ರಶಸ್ತಿ

‘ಹಂಗಾಮ’ ಕಾರ್ನರ್ ನಲ್ಲಿ ಟೂರಿಂಗ್ ಟಾಕೀಸ್

ಮಲೆಗಳಲ್ಲಿ ಮರೆಯಾದ ಅಂಚೆಯಣ್ಣ

-ಜಯಂತ್ ಕಾಯ್ಕಿಣಿ

ನಮ್ಮೆಲ್ಲರ ಅಕ್ಕರೆಯ ಅಂಚೆಯಣ್ಣ ಅಥವಾ “ಪೋಸ್ಟ್ ಮ್ಯಾನ್ ” ಬರೇ ಒಂದು ಟಪಾಲು ಬಟವಾಡೆಯ ವೃತ್ತಿಯವನಾಗಿರುವುದಿಲ್ಲ. ಅವನು ಮನುಷ್ಯರಿಂದ ಮನುಷ್ಯರಿಗೆ ಅದೇನನ್ನೋ ದಾಟಿಸುವ ಮಾರುವೇಷದ ದೇವರಾಗಿರುತ್ತಾನೆ. ಸಣ್ಣ ಊರುಗಳಲ್ಲಂತೂ ಅವನು ಪ್ರತಿ ಮನೆಯ ಅಂತರಂಗದ ಸದಸ್ಯ.

ಎಸ್ಸೆಸ್ಸೆಲ್ಸಿ ರಿಸಲ್ಟು, ಹೆರಿಗೆ, ಮದುವೆ, ಕೋರ್ಟು ವಾರೆಂಟು, ಸಾವು, ರೋಗ ರುಜಿನ ಎಲ್ಲವನ್ನೂ “ನಿರಪೆಕ್ಷಯೋಗ ” ದಲ್ಲಿ ಹಂಚಿಕೊಂಡು ಮನೆಯಿಂದ ಮನೆಗೆ ದಾಟಿಸುತ್ತಲೇ ಇರುವ, ಬೆವರೊರೆಸಿಕೊ೦ಡು ಓಡುತ್ತಾ ಕಾಗದಗಳ ಕಟ್ಟನ್ನು ಕ್ಯಾರಿಯರಿಗೆ ಅಥವಾ ಹ್ಯಾ೦ಡಲ್ಲಿಗೆ ಸಿಕ್ಕಿಸಿಕೊ೦ಡು ಸೈಕಲ್ ಏರುತ್ತಿರುವಾಗಲೇ ಯಾರನ್ನೋ ಕ೦ಡು ಫಕ್ಕನೇ ನಿಲ್ಲಿಸಿ ಕಾಗದ ಹುಡುಕಿ ಕೊಡುವ ನ೦ಟ. ಸಮಾಜದ ಒಳಬಾಳು ಅ೦ತ ಕರೀತೇವಲ್ಲ ಅ೦ಥ ಒಳಬಾಳಿನ ಚಲನಶೀಲ ಸದಸ್ಯ.

ಇಂಥ ಅ೦ಚೆಯಣ್ಣನನ್ನೇ ಕೇಂದ್ರವಾಗಿರಿಸಿಕೊಂಡು ಅದ್ಭುತವಾದ ದೃಶ್ಯಕೂಟವನ್ನು ನೀಡುವ ಒ೦ದು ಚೀನೀ ಚಿತ್ರ: “ಪೋಸ್ಟ್ ಮ್ಯಾನ್ ಇನ್ ದಿ ಮೌ೦ಟನ್ಸ್” (ಮಲೆಗಳಲ್ಲಿ ಅ೦ಚೆಯಣ್ಣ). ಇದು ಚೀನಾದ ಮಲೆನಾಡಿನ ಪ್ರದೇಶದ ಸರಳ ಜೀವಿಗಳ ಕಥೆ. ಆ ಮಲೆನಾಡು ಹೇಗಿದೆ ಎ೦ದರೆ, ನಮ್ಮಲ್ಲಿಯ ಹಾಗೇ, ನಿರ್ಜನ ಕಾಡುಮೇಡುಗಳ ನಡುವೆ ಒ೦ದೆರಡೇ ಮನೆಗಳ ಹಳ್ಳ. ಇ೦ಥ ಒ೦ದು ಹಳ್ಳಿಯಿ೦ದ ಇನ್ನೊ೦ದು ಹಳ್ಳಿಗೆ ಹೋಗಲು ಹಗಲಿಡೀ ನಡೆಯಬೇಕು, ಹೊಳೆಗಳನ್ನು ದಾಟಬೇಕು. ಇ೦ಥ ಹತ್ತಾರು ಹಳ್ಳಿಗಳ ಒ೦ದು “ರೂಟಿ” ನ ಡ್ಯೂಟಿ ಮುಗಿಸಲು ಒ೦ದು ವಾರ ಬೇಕು.

More

ನಿಮ್ಮೆದುರಿಗೆ ‘ಕನಸೆಂಬೋ ಕುದುರೆಯನೇರಿ ‘

-ಸಾಂಗತ್ಯ

ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಹೊಸ ಚಲನಚಿತ್ರ “ಕನಸೆಂಬೋ ಕುದುರೆಯನ್ನೇರಿ” ಡಿ. 10 ರಂದು ಸಂಜೆ 7 ಕ್ಕೆ ಬೆಂಗಳೂರಿನ ಕೋರಮಂಗಲದ ಫೋರಂನ ಪಿವಿಆರ್ ಥಿಯೇಟರ್ ನಲ್ಲಿ ಬಿಡುಗಡೆಗೊಳ್ಳಲಿದೆ.

ಅಮರೇಶ ನುಗಡೋಣಿಯವರ ಕಥೆಯ ಎಳೆಯನ್ನಾಧರಿಸಿ ರೂಪಿಸಿದ ಈ ಚಿತ್ರ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ರೋಮ್ ನಲ್ಲಿ ನಡೆದ ಏಷ್ಯಾಟಿಕ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ, ಎನ್ಇಟಿಪಿಎಸಿ ಪ್ರಶಸ್ತಿ, ರಜತ ಪದಕ ಪ್ರಶಸ್ತಿ ಅತ್ಯುತ್ತಮ ಚಿತ್ರಕಥೆಗೆ, 2009 ರ ರಜತ ಕಮಲ ಗೌರವ ಗಳಿಸಿದೆ.

ಏಷ್ಯಾಟಿಕ್ ಚಿತ್ರೋತ್ಸವ, ವಿಸೋಲ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಫಿಲಿಫೈನ್ಸ್ ನ ಸಿನಿಮನಿಲಾ ಅಂತಾರಾಷ್ಟ್ರೀಯ ಚಿತ್ರೋತ್ಸವ, ಸ್ವೀಡನ್ ನ ಗೊಟಬರ್ಗ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಯುಕೆ ಯ ಗ್ಲಾಸ್ಗೋ ಚಿತ್ರೋತ್ಸವ, ಮುಂಬಯಿಯ ಎಂಎಎಂಐ ಚಿತ್ರೋತ್ಸವ,ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವ, ತ್ರಿವೇಂದ್ರಂ ಚಿತ್ರೋತ್ಸವ, ಕೋಲ್ಕತ್ತಾದ ಸಿನಿ ಸೆಂಟ್ರಲ್ ಉತ್ಸವ, ಚೆನ್ನೈ ಅಂತಾರಾಷ್ಟ್ರೀಯ ಚಿತ್ರೋತ್ಸವ, ಪುಣೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಚಿತ್ರ ಪಾಲ್ಗೊಂಡಿದೆ.

 

ಜಯಶ್ರೀ ಕಾಲಂ:ದೊಡ್ಡವರು ಎಂದಿಗೂ ದೊಡ್ಡವರಾಗೆ ಉಳಿಯುತ್ತಾರೆ

ಸೋನಿ ವಾಹಿನಿಯಲ್ಲಿ ಕೌನ್ ಬನೇಗ ಕರೋಡ್ ಪತಿಯಲ್ಲಿ ಭಾಗವಹಿಸಲು ಬಂದವರು ಆ ಮಹಾನ್ ಹಸ್ಥಿಯನ್ನು ಕಂಡಾಗ ಪಡುವ ಖುಷಿ ವರ್ಣಿಸಲಾಗದ್ದು! ಸ್ತ್ರೀಯರಿಗೆ ಅವರು ವಿಶೇಷ ಗೌರವ ತೋರುತ್ತಾರೆ. ಒಮ್ಮೆ ಹೀಗೆ ಒಬ್ಬರು ಬಹಳ ಹಿಂದೆ ಪ್ರಶ್ನಿಸಿದ್ದರು .ಅದ್ಸರಿ ನೀವ್ಯಾಕೆ ಹೆಣ್ಣುಮಕ್ಕಳು ಕರೋಡ್ ಪತಿಯಲ್ಲಿ ಭಾಗವಹಿಸಲು ಬಂದಾಗ ಅವರು ಕುರ್ಚಿ ಮೇಲೆ ಕೂರಲು ಸಹಾಯ ಮಾಡ್ತೀರಿ !

ಆಗ ಬಿಗ್ ಬಿ ಹೇಳಿದ್ದು, ಹೆಣ್ಣುಮಕ್ಕಳು ಗಂಡು ಮಕ್ಕಳಿಗಿಂತ ಹೆಚ್ಚಿನ ಹೊಣೆ ಹೊತ್ತಿರುತ್ತಾರೆ. ಅದನ್ನು ನಾನು ಬಿಡಿಸಿ ಹೇಳಬೇಕಿಲ್ಲ. ಆದರೆ ನಮ್ಮ ಸಮಾಜದಲ್ಲಿ ಆಕೆಗೆ ಸಿಗುವ ಪ್ರೋತ್ಸಾಹ ತುಂಬಾ ಕಡಿಮೆ. ಅಂತಹುದರಲ್ಲಿ ಇಷ್ಟರ ವರೆಗೂ ಬಂದಿದ್ದಾರೆ ಅಂದ್ರೆ ನಾವು ಗೌರವ ಸಲ್ಲಿಸಲೇಬೇಕು ಎಂದು ಹೇಳಿದ್ದರು.ದೊಡ್ಡವರು ಎಂದಿಗೂ ದೊಡ್ಡವರಾಗೆ ಉಳಿಯುತ್ತಾರೆ

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಹೊಸಮನಿ ಅವರ ‘ವಿಳಾಸ ಇಲ್ಲದವರ ಹುಡುಕುತ್ತ’

ಪತ್ರಕರ್ತ ಗವಿಸಿದ್ದ ಬಿ ಹೊಸಮನಿ ಅವರ ವಿಳಾಸ ಇಲ್ಲದವರ ಹುಡುಕುತ್ತ ಕಥಾ ಸಂಕಲನ ಪುಸ್ತಕ ಇತ್ತೀಚೆಗೆ ಧಾರವಾಡ ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಸಾಹಿತ್ಯ ಭವನದಲ್ಲಿ ಬಿಡುಗಡೆ ಗೊಂಡಿತು .

ಹಿರಿಯ ಕತೆಗಾರ ಅಮರೇಶ ನುಗಡೋಣಿ, ಕಥೆಗಾರರಾದ ಸರ್ಜಾಶಂಕರ ಹರಳಿಮಠ, ಅಬ್ಬಾಸ ಮೇಲಿನಮನಿ, ಸುನಂದಾ ಪ್ರಕಾಶ ಕಡಮೆ, ಅರುಣ ಜೋಳದ ಕೂಡ್ಲಿಗಿ, ಪತ್ರಕರ್ತ ಕೆ.ಕರಿಸ್ವಾಮಿ, ಪ್ರೊ.ಅಶೋಕ ಶೆಟ್ಟರ್, ಬಸು ಬೇವಿನಗಿಡದ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು.

ಇನ್ನಷ್ಟು ಫೋಟೋಗಳು : ಓದು ಬಜಾರ್

Open Letter to Mr. Ratan N. Tata

-RAJEEV CHANDRASEKHAR

Rajeev’s blog

Dear Mr. Tata,

It is with considerable concern and some confusion that I have watched your recent Television Interviews and press statements following the 2G scam and the exposure of the infamous Nira Radia Tapes.

I, as countless other Indians, have held the house of Tatas in great esteem and respect – have seen them as being different from so many other Indian corporates that play by a different set of rules and values. I, along with many Indians, consider JRD Tata as one of the true builders of modern India.

So, it is with considerable sadness and dismay that I am constrained to write this open letter to you. I trust you will not consider this as personal, since my letter has to do with issues of principle and conduct that are disturbing.

In your recent press interactions, you have made the point that the 2G scam needs to be investigated and have made several sub-points, including:

More

ಪ್ರಣತಿಯಿಂದ ಪ್ರಬಂಧ ಸ್ಪರ್ಧೆ…

ಸಾಹಿತ್ಯ, ಸಂಸ್ಕೃತಿ, ಪ್ರಕೃತಿ -ಅಂಶಗಳನ್ನು ಧ್ಯೇಯವಾಗಿಸಿಕೊಂಡಿರುವ ನಮ್ಮ ಸಂಸ್ಥೆ ‘ಪ್ರಣತಿ’ಯಿಂದ, ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದೇವೆ. ವಿದ್ಯಾರ್ಥಿಗಳು ‘ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ’ ಎಂಬ ವಿಷಯದ ಮೇಲೆ ೨೦೦೦ ಪದಗಳಿಗೆ ಮೀರದಂತೆ ಪ್ರಬಂಧವನ್ನು ಸ್ಫುಟವಾದ ಕೈಬರಹದಲ್ಲಿ ಅಥವಾ ಡಿ.ಟಿ.ಪಿ. ಮಾಡಿ ಕಳುಹಿಸಬಹುದು.

ಪ್ರಬಂಧದ ಜೊತೆ ನಿಮ್ಮ ಕಾಲೇಜ್ ಐಡೆಂಟಿಟಿ ಕಾರ್ಡ್‌ನ ಪ್ರತಿ ಇರಿಸುವುದು ಕಡ್ಡಾಯ. ಸಂಪಾದಕ ಮಂಡಲಿ ಮತ್ತು ವಿಷಯ ತಜ್ಞರು ಆಯ್ದ ಪ್ರಬಂಧಕ್ಕೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಪ್ರಬಂಧವನ್ನು ಈ ವಿಳಾಸಕ್ಕೆ ಕಳುಹಿಸಬಹುದು ಅಥವಾ ಇ-ಮೇಲ್ ಮಾಡಬಹುದು. ಕೊನೆಯ ದಿನಾಂಕ: ೩೦ ಡಿಸೆಂಬರ್ ೨೦೧೦. ವಿಳಾಸ: ಪ್ರಣತಿ, ನಂ. ೪೪೮/ಎ, ೮ನೇ ಮೇನ್, ೭ನೇ ಕ್ರಾಸ್, ತ.ರಾ.ಸು. ರಸ್ತೆ, ಹನುಮಂತನಗರ, ಬೆಂಗಳೂರು – ೫೬೦ ೦೧೯. ಇ-ಮೇಲ್: prabandha@pranati.in. ಯಾವುದೇ ಮಾಹಿತಿಗೆ: ೯೬೧೧೪೫೮೬೯೮ / ೯೯೮೦೦೨೨೫೪೮.
ನೀವು ಕಾಲೇಜು ವಿದ್ಯಾರ್ಥಿಯಾಗಿದ್ದರೆ ನೀವೇ ಭಾಗವಹಿಸಿ. ಇಲ್ಲವೇ, ನಿಮ್ಮ ಪರಿಚಿತ ವಿದ್ಯಾರ್ಥಿಗಳಿಗೆ ತಿಳಿಸಿ. 😉

ಶುಕ್ರವಾರದ ಸತ್ಯವಂತ

ಇಲ್ಲೂ ನೋಡಿ : Invitations blog

ಗುಲ್ವಾಡಿ ಇನ್ನಿಲ್ಲ…

ಪತ್ರಿಕೋದ್ಯಮ ರಂಗದ ಹಳೆ ಕೊಂಡಿಯೊಂದು ಕಳಚಿದೆ .ಹಿರಿಯ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿ ಇನ್ನಿಲ್ಲ .“ತರಂಗ” ವಾರಪತ್ರಿಕೆಯ ಸಂಪಾದಕರಾಗಿ,ಕಾರ್ಯ ನಿರ್ವಹಿಸಿದ್ದ ಇವರು ಕಲೆಯ ಬಗ್ಗೆ ಅಪಾರವಾದ ಅಭಿಮಾನ , ಪ್ರೀತಿ ಬೆಳೆಸಿಕೊಂಡವರು . ಗುಲ್ವಾಡಿ ಅವರು ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಹೃದಯಾ ಘಾತದಿಂದ ನಿಧನ ಹೊಂದಿದ್ದಾರೆ .

ಮೊದಲ ಕೋಚ್

-ಸತೀಶ್ ಆಚಾರ್ಯ

Previous Older Entries

%d bloggers like this: