ಇಲ್ಲೂ ನೋಡಿ : Invitations blog
ಜೋಗಿ ಬರೆಯುತ್ತಾರೆ : ಆಗಂತುಕ…
14 ಡಿಸೆ 2010 5 ಟಿಪ್ಪಣಿಗಳು
in ಜೋಗಿಮನೆ
ಓಣಿಯ ತಿರುವಿನಲ್ಲಿ ಅವನು ಥಟ್ಟನೆ ಕಾಣಿಸಿಕೊಂಡ.
ತೇವವಾಗದ ಕಣ್ಣುಗಳ, ನಿರ್ಭೀತ ನಡಿಗೆಯ, ಎಂದೂ ಹಿಂದಿರುಗಿ ನೋಡದ ಆಳೆತ್ತರದ ಆಜಾನುಬಾಹು. ಅವನು ನಕ್ಕಿದ್ದನ್ನಾಗಲೀ, ಅತ್ತಿದ್ದನ್ನಾಗಲೀ ಯಾರೂ ನೋಡಿದವರಿಲ್ಲ. ಅವನು ಎದುರಾಗುತ್ತಿದ್ದಂತೆ ನನಗೆ ಇನ್ನು ಅವನು ನನ್ನನ್ನು ಬಿಡುವುದಿಲ್ಲ ಎಂದು ಖಾತ್ರಿಯಾಯಿತು.
ಅವನು ಯಾವಾಗ ಬರುತ್ತಾನೋ ಗೊತ್ತಿಲ್ಲ. ಯಾವಾಗ, ಯಾವ ರೂಪದಲ್ಲಿ ಬೇಕಿದ್ದರೂ ಬರಬಹುದು. ಅವನು ಕರೆದಾಗ ಸುಮ್ಮನೆ ಹೊರಟುಬಿಡಬೇಕು. ತಕರಾರು ಮಾಡಬಾರದು. ತರಲೆ ತೆಗೆದರೆ, ತಕರಾರು ಮಾಡಿದರೆ ಅವನು ಬಿಟ್ಟು ಹೋಗುವುದಿಲ್ಲ ಎಂದು ಅನೇಕ ದಾರ್ಶನಿಕರು ಎಚ್ಚರಿಸಿದ್ದರು.
ನಮ್ಮೂರಿನಲ್ಲಿ ಹುಚ್ಚನಂತೆ ಅಲೆಯುತ್ತಿದ್ದ ಗೋಪ್ಳಿ ಒಮ್ಮೆ ನಮ್ಮನ್ನು ಪಕ್ಕಕ್ಕೆ ಕರೆದು ಹೇಳಿದ್ದ: ಎಲ್ಲರೂ ನನ್ನನ್ನು ಹುಚ್ಚ ಅಂತರೇ.. ಯಾರೂ ಮನೆಯೊಳಗೆ ಬಿಟ್ಕಳಲ್ಲ. ಯಾರೂ ಅನ್ನ ಹಾಕಲ್ಲ. ನಾಳೆ ಅವನು ಬರ್ತನೆ. ನನ್ನ ಕರಕೊಂಡು ಹೋಗ್ತನೇ. ಅವನು ಬುದ್ಧಿವಂತರನ್ನೂ ಬಿಡಲ್ಲ, ಹುಚ್ಚರನ್ನೂ ಬಿಡಲ್ಲ. ನನ್ನನ್ನೂ ಕರಕೊಂಡು ಹೋಗ್ತನೆ. ನನ್ನ ತಮ್ಮನನ್ನೂ ಕರಕೊಂಡು ಹೋಗ್ತಾನೆ.
ಅವನು ಹುಚ್ಚನಂತೆ ಮಾತಾಡುತ್ತಾನೆ ಅಂತ ನಾವೆಲ್ಲ ಅವನದೇ ಶೈಲಿಯಲ್ಲಿ ರಾಗ ಎಳೆದು ಮಾತಾಡಿ ನಕ್ಕಿದ್ದೆವು. ಮಾರನೇ ದಿನ ಹೊಳೆಯಲ್ಲಿ ಗೋಪ್ಳಿ ಮತ್ತು ಅವನ ತಮ್ಮ ಶ್ರೀಪತಿ ಕೊಚ್ಚಿಕೊಂಡು ಹೋದ ಸುದ್ದಿ ಬಂತು. ಶ್ರೀಪತಿ ಸ್ನಾನಕ್ಕೆಂದು ಹೊಳೆಗೆ ಹೋಗಿದ್ದನಂತೆ. ಈಜುತ್ತಿದ್ದಾಗ ಸೆಳವಿಗೆ ಸಿಕ್ಕಿಕೊಂಡನಂತೆ. ದಂಡೆಯಲ್ಲಿ ಕೂತಿದ್ದ ಗೋಪ್ಳಿ ಅವನನ್ನು ರಕ್ಷಿಸುವುದಕ್ಕೋಸ್ಕರ ಹೊಳಗೆ ಹಾರಿದನಂತೆ.
ಕಲ್ಲರಳಿ ಕಲೆಯಾಗಿ …
14 ಡಿಸೆ 2010 1 ಟಿಪ್ಪಣಿ
in 1
ಬೆಂಗಳೂರಿನಲ್ಲಿ ನಡೆದ ಶಿಲ್ಪಕಲಾ ಶಿಬಿರ ನವೆಂಬರ್ ೧೦ ರಿಂದ ಒಂದು ತಿಂಗಳ ಕಾಲ ನಡೆಯಿತು . ಆ ಶಿಬಿರದಲ್ಲಿ ಅರಳಿದ ಕಲಾಕೃತಿಗಳು ಮತ್ತು ಶಿಬಿರದ ಒಂದು ನೋಟ ಇಲ್ಲಿದೆ…
ಚಿತ್ರಗಳು :ಹರಿ ಪ್ರಸಾದ್
ಸ್ಪಾಮ್ ಎಂಬ ಇಮೇಲ್ ಕಸ…
14 ಡಿಸೆ 2010 1 ಟಿಪ್ಪಣಿ
in ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ
ಈಚೆಗೆ ಅಮೆರಿಕಾದ ಎಫ್ಬಿಐ ರಷ್ಯಾದ ಯುವಕನೊಬ್ಬನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿತು. ಓಲೆಗ್ ನಿಕೋಲ್ಯಾಂಕೋ ಎಂಬ ಇಪ್ಪತ್ತಮೂರು ವರ್ಷದ ಈ ಯುವಕನ ಮೇಲೆ ಹೊರಿಸಲಾಗಿರುವ ಆರೋಪಗಳು ಸಾಬೀತಾದರೆ ಕನಿಷ್ಟ ಮೂರು ವರ್ಷ ಜೈಲುಶಿಕ್ಷೆಯ ಜೊತೆಗೆ ಎರಡೂವರೆ ಲಕ್ಷ ಡಾಲರುಗಳಷ್ಟು ದಂಡವನ್ನೂ ತೆರಬೇಕಾಗುತ್ತದೆ ಎಂದು ಪತ್ರಿಕಾ ವರದಿಗಳು ಹೇಳುತ್ತವೆ.
ಈತ ಎಲ್ಲೂ ಬಾಂಬ್ ಸಿಡಿಸಿಲ್ಲ, ಅಥವಾ ಇನ್ನಾವುದೇ ರೂಪದ ಭಯೋತ್ಪಾದನೆ ಮಾಡಿಲ್ಲ; ಆತನ ಮೇಲಿರುವುದು ಇಮೇಲ್ ಮೂಲಕ ಕೋಟಿಗಟ್ಟಲೆ ರದ್ದಿ ಸಂದೇಶಗಳನ್ನು ಕಳಿಸಿ ಜನರನ್ನು ವಂಚಿಸಿದ, ಹಾಗೂ ಆ ಮೂಲಕ ಅಂತರಜಾಲದ ದುರ್ಬಳಕೆ ಮಾಡಿಕೊಂಡ ಆರೋಪ. ಒಂದು ಸಮಯದಲ್ಲಿ ಅಂತರಜಾಲದ ಮೂಲಕ ಹರಿದಾಡುತ್ತಿದ್ದ ಇಮೇಲ್ ರದ್ದಿ ಸಂದೇಶಗಳಲ್ಲಿ ಮೂರನೇ ಒಂದರಷ್ಟಕ್ಕೆ ಈತನೇ ಕಾರಣನಾಗಿದ್ದನಂತೆ!
ಸ್ಪಾಮ್ ಬಂತು ಸ್ಪಾಮ್
ಇಮೇಲ್ ಮಾಧ್ಯಮದ ಮೂಲಕ ಅನಗತ್ಯ ಮಾಹಿತಿಯನ್ನು ಬಲವಂತವಾಗಿ ಹೊತ್ತು ತರುವ ಇಂತಹ ರದ್ದಿ ಸಂದೇಶಗಳ ಹೆಸರೇ ಸ್ಪಾಮ್.
ಕಲೆ, ಬದುಕು ಮತ್ತು ವಾಸ್ತವ…
14 ಡಿಸೆ 2010 ನಿಮ್ಮ ಟಿಪ್ಪಣಿ ಬರೆಯಿರಿ
-ಡಾ.ಅರುಣ್ ಜೋಳದ ಕೂಡ್ಲಿಗಿ
ಕುತೂಹಲಕ್ಕೆ ಹಗಲುವೇಷಗಾರರು ಎನ್ನುವ ಪದವನ್ನು ಕೊಟ್ಟು ಗೂಗಲ್ನಲ್ಲಿ ಹುಡುಕಲು ಹೇಳಿದೆ. ಅಲ್ಲಿ ಬಂದ ನಾಲ್ಕೈದು ಪುಟಗಳ ಬಹುಪಾಲು ದಾಖಲುಗಳಲ್ಲಿ ರಾಜಕಾರಣಿಗಳನ್ನು ಹಗಲುವೇಷಗಾರರು ಎಂದು ಟೀಕಿಸಿದ ಉಲ್ಲೇಖಗಳೇ ಹೆಚ್ಚಾಗಿದ್ದವು. ಉಳಿದಂತೆ ಒಂದೆರಡು ಉಲ್ಲೇಖಗಳು ವೃತ್ತಿ ಕಲಾವಿದರಾದ ಹಗಲುವೇಷಗಾರರ ಬಗ್ಗೆ ಇದ್ದವು. ಇದು ಬಹುಶಃ ಹಗಲುವೇಷಗಾರರ ಸದ್ಯದ ಸ್ಥಿತಿಯನ್ನು ವಿವರಿಸಲು ಒಳ್ಳೆಯ ರೂಪಕ ಎಂದು ಭಾವಿಸುವೆ.
ಕಾರಣ ಇಂದು ಜನಪದ ಕಲಾವಿದರಾದ ಹಗಲುವೇಷಗಾರರನ್ನು ಮೀರಿಸುವಂತಹ ಹಗಲುವೇಷಗಳ ಮುಖವಾಡಗಳನ್ನು ರಾಜಕಾರಣಿಗಳು, ಅಧಿಕಾರಿಗಳು ಹಾಕಿ ಸಾಮಾನ್ಯ ಜನರನ್ನು ಮರುಳುಗೊಳಿಸುತ್ತಿದ್ದಾರೆ, ಹಗಲು ದರೋಡೆ ಮಾಡುತ್ತಿದ್ದಾರೆ. ಹಾಗಾಗಿ ಹಗಲುವೇಷ ಎನ್ನುವ ಪದವೇ ನಕಾರಾತ್ಮಕ ಅರ್ಥವನ್ನು ಪಡೆದುಕೊಂಡುಬಿಟ್ಟಿದೆ.
ಪೂರ್ಣ ಓದಿಗೆ : ಸೈಡ್ ವಿಂಗ್
ಲಂಕೇಶ್ ಇಲ್ಲದ ಒಂದು ದಶಕ…
14 ಡಿಸೆ 2010 ನಿಮ್ಮ ಟಿಪ್ಪಣಿ ಬರೆಯಿರಿ
in 1
ಕೊಪ್ಪಳದಲ್ಲಿ ಲಂಕೇಶ್ ಅವರ ನೆನಪಿನಲ್ಲಿ ‘ಲಂಕೇಶ್ ಇಲ್ಲದ ಒಂದು ದಶಕ’ ಎಂಬ ನೆನಪಿನ ಕಾರ್ಯಕ್ರಮವನ್ನು ಇತ್ತೀಚೆಗೆ ಅತ್ಯಂತ ಸರಳವಾಗಿ ಆಚರಿಸಲಾಯಿತು . ಆ ಕಾರ್ಯಕ್ರಮದ ಒಂದು ನೋಟ ಇಲ್ಲಿದೆ…
ಇತ್ತೀಚಿನ ಟಿಪ್ಪಣಿಗಳು