ರೂಪಾ ‘ಗಳಿಗೆ ಬಟ್ಟಲು’

ಕವಯತ್ರಿ ರೂಪಾ ಹಾಸನ ಅವರ ‘ಗಳಿಗೆ ಬಟ್ಟಲ ತಿರುವುಗಳಲ್ಲ್ಲಿ..’ ಕೃತಿ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. ಸ ಉಷಾ, ಚಂದ್ರಶೇಖರ ಕಂಬಾರ, ಎಸ್ ಜಿ ಸಿದ್ಧರಾಮಯ್ಯ, ಬಂಜಗೆರೆ ಜಯಪ್ರಕಾಶ್ ಈ ಸಮಾರಂಭದಲ್ಲಿ ಹಾಜರಿದ್ದರು.

ಸಿರಿವರ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಸಮಾರಂಭದ ನೋಟ ಎಚ್ ವಿ ವೇಣುಗೋಪಾಲ್ ಅವರ ಕ್ಯಾಮೆರಾ ಕಣ್ಣಿನ ಮೂಲಕ ನಿಮಗಾಗಿ

ಅಯ್ಯಯ್ಯೋ…

ಇಟ್ಟಿಗೆ ಸಿಮೆಂಟು ಖ್ಯಾತಿಯ ಬ್ಲಾಗರ್ ಪ್ರಕಾಶ್ ಹೆಗಡೆ ಇಂದಿನ ರಾಜಕೀಯಕ್ಕೆ ಸ್ಪಂದಿಸಿದ್ದು ಹೀಗೆ…

‘ವಿಕಿಲೀಕ್’ ಅವಾಂತರ…

-ಅಬ್ದುಲ್

ಹಳೇ ಸೇತುವೆ

ವಿಕಿಲೀಕ್ ಈಗ ವಿಶ್ವ ಸುದ್ದಿಯಲ್ಲಿ. ವಿಶ್ವದ ಸರಕಾರಗಳ ಮಧ್ಯೆ, ಧುರೀಣರ ಮಧ್ಯೆ ನಡೆದ ಎರಡು ಲಕ್ಷದ ಐವತ್ತು ಸಾವಿರಕ್ಕೂ ಹೆಚ್ಚು ಕೇಬಲ್ ಗಳನ್ನು ತನ್ನ ವೆಬ್ ತಾಣದಲ್ಲಿ ಪ್ರಕಟಿಸಿ ಅಂತಾರಾಷ್ಟ್ರೀಯ ರಾಜಕಾರಣ ಎಂದರೆ ಗರಿ ಗರಿ ಕಪ್ಪು ಸೂಟು, ಮುಗುಳ್ನಗುವಿನೊಂದಿಗೆ ಹಸ್ತಲಾಘವ, ನಂತರ ಮೃಷ್ಟಾನ್ನ ಭೋಜನ ಎಂದು ತಿಳಿದಿದ್ದ ನಮಗೆ ಹೊಸತೊಂದು ವಿಶ್ವದ ಪರಿಚಯ ಮಾಡಿಕೊಟ್ಟಿತು ವಿಕಿಲೀಕ್.

‘ವಿಕಿಪೀಡಿಯ’ ಗೊತ್ತು, ಇದೇನೀ ‘ವಿಕಿಲೀಕ್’ ಎಂದಿರಾ? ವಿಕಿಪೀಡಿಯ ನಮಗೆ ತಿಳಿಯಬೇಕಾದ ವಿಷಯಗಳನ್ನು ಸರಾಗವಾಗಿ, ಕ್ಷಣ ಮಾತ್ರದಲ್ಲಿ ತಿಳಿಸಿಕೊಡುವ ತಾಣವಾದರೆ, ವಿಕಿಲೀಕ್ ಮಾತ್ರ ಸ್ವಲ್ಪ ಸರಿದು ನಿಂತು ನಾವೆಂದಿಗೂ ‘ಕೇಳಬಾರದ, ಆಡಬಾರದ, ನೋಡಬಾರದ’, ವಿಷಯಗಳನ್ನು ನಮಗೆ ತಲುಪಿಸಿ ಮಗುಮ್ಮಾಗಿ ಇದ್ದುಬಿಡುವ whistle blower. ಸ್ವಲ್ಪ ಮಟ್ಟಿಗೆ ನಮ್ಮ ಅಚ್ಚು ಮೆಚ್ಚಿನ ‘ತೆಹೆಲ್ಕಾ’ ರೀತಿಯದು. ಈ ವೆಬ್ ತಾಣದ ಸಾರಥಿ ಆಸ್ಟ್ರೇಲಿಯಾದ 39 ರ ಪ್ರಾಯದ ಜೂಲಿಯಾನ್ ಅಸಾಂಜ್. ಈಗ ಈತ ಕಂಬಿ ಎಣಿಸಲು ಅಥವಾ ತನ್ನ ತಲೆ ಕಳೆದುಕೊಳ್ಳುವ ನಿರೀಕ್ಷೆಯಲ್ಲಿ ಲಂಡನ್ನಿನ ಮೂಲೆಯೊಂದರಲ್ಲಿ ದಿನ ಕಳೆಯುತ್ತಿದ್ದಾನೆ.

ಅಭಿವ್ಯಕ್ತಿ ಸ್ವಾತಂತ್ರ್ಯ. ತಮ್ಮ ತಮ್ಮ ಹಿತಾಸಕ್ತಿಗಳಿಗೆ ಧಕ್ಕೆ ಬಂದಾಗ ತಮ್ಮದೇ ಆದ ಧೋರಣೆ. ಆ ಧೋರಣೆ ಹಿಂಸಾರೂಪ ತಾಳಿದರೂ ಯಾರಿಗೂ ಅದರ ಪರಿವೆ ಇಲ್ಲ. ಸೂಟು ಬೂಟು, ಬಿಳಿಚರ್ಮ ಹೊತ್ತವರು ಏನೇ ಹೇಳಿದರೂ ಎಲ್ಲಾ ಓಕೆ. ಗಡ್ಡ ಮಾತ್ರ ಇರಬಾರದು ಈ ರೀತಿಯ ಮಾತನ್ನಾಡಲು. ಆಗ ಪದಪ್ರಯೋಗದ ಸಮೀಕರಣ ಬದಲಾಗಿ ಬಿಡುತ್ತದೆ.

More

ಸೂರಿ -17:ಕುಟಿಕುರಾ ಪೌಡರ್ ಲೆಕ್ಕ ಮಾತ್ರ ಹೇಗೋ ತಪ್ಪಿಸಿಕೊಂಡಿತ್ತು

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 17

ನಾಗಭೂಷಣ ಹಳೇಬೀಡು ಸುಂದರರಾಯರನ್ನೇ ನೋಡಿದ, ದುರುಗುಟ್ಟಿ. ಯಜಮಾನ್ರು ನಿಂಗೆ ಕೇಸು ಕೊಡದು. ಅದುನ್ನ ನೀನು ಗೆಲ್ಲದು. ಮುಂದೆ ನೀನು ಸ್ವಂತ ಕೆಪಾಸಿಟೀ ಮ್ಯಾಲೆ ಕೇಸು ಹಿಡ್ಕೆಂಡು ಅದುನ್ನ ಗೆಲ್ಲದು. ಅದ್ರಿಂದ ನಿಂಗೆ ರೊಕ್ಕ ಬರದು. ಅದ್ರಿಂದ ನನ್ನ ಸಾಲ ತೀರ‍್ಸದು. ಯಾವನಾರ ತಲೆಯಿರ ಸೂಳೇಮಗ ನಂಬಾ ಮಾತಾಯಿದೂ. ಗಾಂಚಲಿ ಅಂದ್ರೆ ಇದು. ನಾನು ಕೊಟ್ಟೆ, ನೀನು ಯಿಸ್ಗಂಡಿ.

ಆದರೆ ನಾಗಭೂಷಣ ಬಾಯಿ ಬಿಟ್ಟು ಹೇಳಿದ್ದೇ ಬೇರೆ. ’ನಂದೇ ಯೀ ತಿಂಗಳೂ ಹರೀತಾಯಿದೆ. ಯಿಪ್ಪತ್ತೆಂಟಕ್ಕೆ ಅಪ್ಪನ ತಿಥಿ. ಹಿರೇಮಗ ನಾನು. ಕರ್ಚೆಲ್ಲಾ ನಂದೇ. ಇಬ್ರು ಅಕ್ಕಂದ್ರು ಬರ‍್ತರೆ. ಮನ್ತುಂಬಾ ಜನ ಜಾತ್ರೆ ಯಿರ‍್ತತೆ. ನನ್ನ ಕೈನೂ ಕಟ್ಟಾಕ್ದಂಗಾಗಿದೆ. ಯೇನು ಮಾಡ್ಲಿ. ಯಿಲ್ಲಾಂದ್ರೆ ಒಂದಿಪ್ಪತ್ತೋ ಮೂವತ್ತೋ ಗ್ಯಾರಂಟಿ ಕೊಟ್ಟಿರೋನು ನಾನು. ನಿಮಗೆ ಯಿಲ್ಲಾ ಅನ್ನಕ್ಕಾಗ್ತತಾ. ಅಷ್ಟಿಲ್ಲ ನನತ್ರ ಯೀಗ.’

More

ಜಯಶ್ರೀ ಕಾಲಂ:ಸೂಪರೋ ಸೂಪರು…

@@ ಉಪ್ಪಿಗಿಗಿಂತ ರುಚಿ ಬೇರೆ ಇಲ್ಲ ಎಂದು ಹೇಳಿದ್ದು ಗೆಳೆಯ ಪವನ್ ಕುಮಾರ್. ನಿನ್ನೆ ಸೂಪರ್ ಸಿನಿಮಾ ವೀಕ್ಷಿಸಿ ಬಂದು ತುಂಬಾ ಚೆನ್ನಾಗಿದೆ. ಉಪ್ಪಿ ಸಿನ್ಮಾ ಅಂದ್ರೆ ಸುಮ್ನೆನಾ ಎಂದರು. ಜೊತೆಗೆ ಉಪ್ಪಿಗಿಂತ ರುಚಿ..! ಹೇಳಿದ್ರು. ಅದೂ ಸತ್ಯ ಬಿಡಿ ವಿಭಿನ್ನ ನಿರ್ದೇಶಕ ಉಪೇಂದ್ರ.

ಹೊಸತನಗಳನ್ನು ನೀಡುವ ಹರಿಕಾರ. ತುಂಬಾ ಚೆನ್ನಾಗಿದ್ಯಾ ಅಂದೆ. ಹೌದು, ಮುಂದೆ ಅವರು ರಾಜಕೀಯಕ್ಕೆ ಸೇರಬಹುದು ಎಂದು ಕಾಣುತ್ತೆ, ಆ ವಿಷಯವನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ ಎಂದರು. ಅದು ಸಾಮಾನ್ಯ ಸಂಗತಿ ಅಲ್ವ ಎಂದೇ ಹೌದು ಆದ್ರೆ ಆ ಸಿನಿಮಾದಲ್ಲಿ ನನಗೆ ಕ್ಲೈಮ್ಯಾಕ್ಸ್ ತನಕ ಕಥೆ ಏನು ಎಂದು ಸ್ಪಷ್ಟವಾಗಿ ತಿಳೀಲಿಲ್ಲ :-) ಎಂದರು. ಆದ್ರೆ ನಿನ್ನೆ ರಾತ್ರಿ ಸಿನಿಮಾ ವೀಕ್ಷಿಸಿ ಬಂದ ನನ್ನ ಸೆಲಬಿ ಗೆಳೆಯರೊಬ್ಬರ ಬಳಿ ಇಂದು ಈ ಮಾತು ಹೇಳಿ ನಕ್ಕೆ ಎನ್ ಮಹರಾಯ ಕಥೆ ಎಂದು! ಅರ್ಥ ಮಾಡಿಕೊಳ್ಳುವುದಕ್ಕೆ ತಲೆ ಇರಬೇಕು ಬಿಡಿ ಎಂದರು. . ನಿಜ ಬಿಡಿ ಉಪೇಂದ್ರ ಸಿನಿಮಾ ಅಂದ್ರೆ ಸುಮ್ಮನೇನಾ? :)

ಪೂರ್ಣ ಓದಿಗೆ : ಮೀಡಿಯಾ ಮೈಂಡ್

%d bloggers like this: