LAXMAN’S SPECIAL WEAPON!

-ಸತೀಶ್ ಶೃಂಗೇರಿ


ಮಲೆಗಳಲ್ಲಿ ಮದುಮಗಳು : ಉದಯ ರವಿಯಲ್ಲಿ ಸುಬ್ಬೇಗೌಡರು…

ಬಾ ಹುಲಿಕಲ್ ನೆತ್ತಿಗೆ-9

-ಪ್ರೊ. ಶಿವರಾಮಯ್ಯ

ಚಂದೂಪೂಜಾತರ್ಿ

ದಕ್ಷಿಣ ಕನ್ನಡದಿಂದ ಬಂದು ಮೇಗರವಳ್ಳಿಯಲ್ಲಿ ಓಟಲ್ ಮನೆ ನಡೆಸುತ್ತಿದ್ದಳು. ಒಮ್ಮೆ ಈಕೆ ಹಾದಿ-ಬೀದಿಯಲ್ಲಿ, ಸಂತೆ_ಸಾಮಾನಿಗೆ ಓಡಾಡುತ್ತಿದ್ದ ಜನರನ್ನು ಚಪ್ಪಾಳೆತಟ್ಟಿ ಕರೆದು, ಪುಟ್ಟಪ್ಪನವರ ಭಿತ್ತಿ ಚಿತ್ರವನ್ನು ತೋರಿಸುತ್ತ ‘ಹೋಯ್ ಬನ್ನಿ ಇಲ್ಲಿ ಕಾಣಿ ಕೆ.ಯಿ. ಪುಟ್ಟಪ್ಪನವರ ಪಟ ಬಂದಿದೆ ಪತ್ರಿಕೆಯಲ್ಲಿ ಕಾಣಿ ಬನ್ನಿ’ ಎಂದು ಗಿರಾಕಿಗಳನ್ನು ಆಹ್ವಾನಿಸುತ್ತಿದ್ದಳಂತೆ. ಮಲೆನಾಡಿನ ಒಕ್ಕಲಿಗ ಗೌಡರು ಕುತೂಹಲದಿಂದ ಬರುವುದು, ಫೋಟೋ ಕಂಡು ‘ರಾಜಕುಮಾರ ಇದ್ದಾಂಗೆ ಇದ್ದಾರೆಂದು ಮಾತಾಡಿ, ಹಾಗೆ ಚಂದೂಪೂಜಾತರ್ಿ ಹೋಟೆಲ್ನಲ್ಲಿ ಕಾಫಿ ತಿಂಡಿ ಪೂರೈಸಿ ಹೋಗುತ್ತಿದ್ದರಂತೆ. ಕಡೆಯಲ್ಲಿ ರಾಮದಾಸ್ ಹೇಳಿದ್ದು ಈ ಚಂದೂಪೂಜಾತರ್ಿ ಬೇರೆ ಯಾರೂ ಅಲ್ಲ, ಮದುಮಗಳು ಕಾದಂಬರಿಯಲ್ಲಿ ಬರುವ ಅಂತಕ್ಕ ಸೆಡ್ತಿ ಎಂಬ ಪಾತ್ರ ಎಂದರು.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಉದಯ ರವಿಯಲ್ಲಿ ಸುಬ್ಬೇಗೌಡರು

ಇವರು ದೇವಂಗಿ ಸಾಹುಕಾರರು ಮೇಗರವಳ್ಳಿಯಲ್ಲಿ ನಡೆಸುತ್ತಿದ್ದ ರೈಸ್ಮಿಲ್ಲಿನ ಮೇಲ್ವಿಚಾರಕರು. ಆದ್ದರಿಂದ ಕುವೆಂಪು ಮಡದಿ ಹೇಮಾವತಿಯವರಲ್ಲಿ ಸ್ವಲ್ಪ ಸಲಿಗೆ ಇತ್ತು. ಇವರೊಮ್ಮೆ ಮೈಸೂರಿಗೆ ಹೋಗಬೇಕಾಗಿ ಬಂತು. ಹಾಗೇ ಉದಯರವಿಗೆ ಹೋಗಿ ಪುಟ್ಟಪ್ಪನವರನ್ನು (ಈಗಾಗಲೇ ಕುವೆಂಪು ದೊಡ್ಡ ಸಾಹಿತಿಯಾಗಿದ್ದರು) ಒಮ್ಮೆ ದರ್ಶನ ಮಾಡಿ ಹೋಗೋಣವೆಂದು ಹೋಗಿದ್ದರು. ಆದರೆ ಸದಾ ಬರವಣಿಗೆಯಲ್ಲಿ ತೊಡಗಿಕೊಂಡಿದ್ದ ಪುಟ್ಟಪ್ಪನವರು ಯಾರಿಗೂ ಭೇಟಿ ನೀಡುತ್ತಿರಲಿಲ್ಲ.

ಸುಬ್ಬೇಗೌಡರಿಗೆ ಬೇಡ ಬೇಡವೆಂದು ಮನೆಮಂದಿ ಹೇಳಿದರಾದರೂ ಕುತೂಹಲ ತಣಿಯದೆ, ‘ಪುಟ್ಟಪ್ಪ ಏನು ಬರೆಯುತ್ತಿರಬಹುದೆಂದು’ ಬಾಗಿಲ ಸಂಧಿನಲ್ಲಿ ಇಣುಕಿದರು. ಪುಟ್ಟಪ್ಪನವರು ಅವರನ್ನು ಕಂಡಕೂಡಲೇ ಹೋಗಿ ಒಳಗೆ ಹೆಂಗಸರಿದ್ದಾರೆ, ಅವರ ಸಂಗಡ ಮಾತಾಡಿಕೊಂಡು ಹೊರಡಿ, ಇಲ್ಲಿ ತಲೆ ಹಾಕಿ ನನ್ನ ಸಮಯ ಹಾಳುಮಾಡಬೇಡಿ ಎಂದು ಗದರಿದರು. ಗೌಡರು ಮೇಗರವಳ್ಳಿಗೆ ಹಿಂತಿರುಗಿದರು.

More

ಈರುಳ್ಳಿ..ಹುಷಾರ್..!

ಒಂದು ಕ್ವಿಂಟಲ್ ನೀರುಳ್ಳಿಯ ಬದಲಿಗೆ ಕಾಶ್ಮೀರವನ್ನು ಕೊಟ್ಟರೆ ಹೇಗೆ?

-ಚೇಳಯ್ಯ

ವಾರ್ತಾಭಾರತಿ

ದೇಶದಲ್ಲಿ ನೀರುಳ್ಳಿಗಾಗಿ ಹಾಹಾಕಾರ ಎದ್ದ ಬಳಿಕ ವಿವಿಧ ಪತ್ರಿಕೆಗಳಲ್ಲಿ ಬಂದ ಸುದ್ದಿಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ.
***
ಸುರೇಶ್ ಕಲ್ಮಾಡಿಯವರ ನಿವಾಸಕ್ಕೆ ದಾಳಿ ಮಾಡಿದ ಸಿಬಿಐ ಅಧಿಕಾರಿಗಳು ಅಪಾರ ಪ್ರಮಾಣದ ನೀರುಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ಅವ್ಯವಹಾರದಿಂದ ಗಳಿಸಿದ ಕೋಟ್ಯಂತರ ಹಣವನ್ನು ಅವರು ನೀರುಳ್ಳಿ ರೂಪಕ್ಕೆ ಪರಿವರ್ತಿಸಿ ಮನೆಯ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿರುವುದು ಸಿಬಿಐ ಅಧಿಕಾರಿಗಳಿಗೆ ಮನವರಿಕೆಯಾಗಿದೆ. ಕಲ್ಮಾಡಿಯವರು ತಾವು ಮಾಡುವ ಪ್ರತಿ ದಿನದ ಸಾಂಬಾರಿಗೂ ನೀರುಳ್ಳಿ ಬಳಸುತ್ತಿರುವುದು ಇದೇ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಸುಮಾರು ಎರಡು ಗೋಣಿ ನೀರುಳ್ಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇದು ನೂರು ಕೋಟಿಗೂ ಅಧಿಕ ಬೆಲೆ ಬಾಳಬಹುದು ಎಂದು ಅವರು ಅಂದಾಜಿಸಿದ್ದಾರೆ.
***
ಆಸ್ತಿ ಹಂಚಿಕೆಯ ವಿವಾದದಲ್ಲಿ ಅಣ್ಣತಮ್ಮಂದಿರು ಪರಸ್ಪರ ಇರಿದುಕೊಂಡ ಘಟನೆ ವರದಿಯಾಗಿದೆ. ಭೂಮಿ, ಹಣ, ಬಂಗಾರ ಇವೆಲ್ಲ ಹಂಚಿಕೆಯಾದ ಬಳಿಕ ಉಳಿದ ಒಂದು ನೀರುಳ್ಳಿಯನ್ನು ಹಂಚಿಕೊಳ್ಳುವಾಗ ಜಗಳ ಸ್ಫೋಟಿಸಿತು. ಅಣ್ಣನ ಪಾಲಿಗೆ ನೀರುಳ್ಳಿಯ ತುಂಡು ಒಂದು ಇಂಚು ಅಧಿಕ ಹೋಗಿರುವುದು ತಮ್ಮನ ಸಿಟ್ಟಿಗೆ ಕಾರಣವಾಯಿತು ಎನ್ನಲಾಗಿದೆ. ನೀರುಳ್ಳಿಗಾಗಿ ಕಾದಾಡಿದ ಅಣ್ಣ ತಮ್ಮಂದಿರು ಇದೀಗ ಆಸ್ಪತ್ರೆ ಸೇರಿದ್ದಾರೆ.
***
ಪ್ರತಿ ದಿನದ ಸಾರು, ಪಲ್ಯಗಳಿಗೆ ನೀರುಳ್ಳಿಯನ್ನು ಬಳಸುತ್ತಿದ್ದ ಗೃಹಸ್ಥನೊಬ್ಬನ ಮನೆಗೆ ಇನ್‌ಕಂ ಟ್ಯಾಕ್ಸ್ ಅಧಿಕಾರಿಗಳು ಅನಿರೀಕ್ಷಿತವಾಗಿ ದಾಳಿ ನಡೆಸಿದ್ದಾರೆ. ಅವನ ಮನೆಯಲ್ಲಿ ಎರಡು ಕೆ. ಜಿ. ನೀರುಳ್ಳಿ ಪತ್ತೆಯಾಗಿದ್ದು, ಅದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
***
More

ಅಪಾರ ಜ್ಹಲಕ್ ….

ಅಪಾರ

ಅಪಾರ ಇತ್ತೀಚಿಗೆ ರಚಿಸಿದ ಮುಖಪುಟಗಳ ಒಂದು ಪುಟ್ಟ ಜ್ಹಲಕ್ ಇಲ್ಲಿದೆ…

ಇಂಗ್ಲೀಷ್ ಅಧ್ಯಾಪಕರೇಕೆ ಇಂಗ್ಲೀಷಿನಲ್ಲಿ ಬರೆಯುವುದಿಲ್ಲ ?

-ಉದಯ್ ಇಟಗಿ

ಬಿಸಿಲ ಹನಿ

“ನೀವು ಇಂಗ್ಲೀಷ್ ಅಧ್ಯಾಪಕರು ಇಂಗ್ಲೀಷಿನಲ್ಲೇಕೆ ಬರೆಯುವದಿಲ್ಲ?” ಹೀಗೊಂದು ಪ್ರಶ್ನೆಯನ್ನು ನನ್ನ ಮಹಿಳಾ ಸಹೋದ್ಯೋಗಿಯೊಬ್ಬರು ನನ್ನ ಕೇಳಿದರು. ಆಕೆ ಈ ಪ್ರಶ್ನೆಯನ್ನು ನನ್ನನ್ನೂ ಸೇರಿಸಿ ಕನ್ನಡದಲ್ಲಿ ಬರೆಯುತ್ತಿರುವ/ಬರೆದ ಇಂಗ್ಲೀಷ್ ಅಧ್ಯಾಪಕರನ್ನು ಉದ್ದೇಶಿಸಿ ಕೇಳಿದ್ದರು. ಆಕೆ ಮೂಲತಃ ಆಂಧ್ರದವರು. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಇಂಗ್ಲೀಷ್ ವಿಭಾಗದಲ್ಲಿ ಹತ್ತು ವರ್ಷ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿ ಈಗ ನನ್ನೊಟ್ಟಿಗೆ ಲಿಬಿಯಾದ ಸೆಭಾ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಗ್ಲೀಷ್ ಸಾಹಿತ್ಯದ ಬಗ್ಗೆ ತುಂಬಾ ಓದಿಕೊಂಡಾಕೆ ಹಾಗೂ ಕೆಲಸದ ನಿಮಿತ್ತ ಹತ್ತು ವರ್ಷಗಳನ್ನು ಮೈಸೂರಿನಲ್ಲೇ ಕಳೆದಿದ್ದರಿಂದ ಕನ್ನಡವನ್ನು ಚನ್ನಾಗಿ ಮಾತನಾಡುತ್ತಿದ್ದರು.

 

ಜೊತೆಗೆ ಕನ್ನಡಿಗರೊಂದಿಗಿನ ತಮ್ಮ ಒಡನಾಟ ಮತ್ತು ಆಸಕ್ತಿಯಿಂದಾಗಿ ಕನ್ನಡಸಾಹಿತ್ಯದ ಬಗ್ಗೆ ತುಸು ಹೆಚ್ಚೇ ತಿಳಿದುಕೊಂಡಿದ್ದರು. ಹಾಗೆ ತಿಳಿದುಕೊಳ್ಳಲು ಒಂದು ಕಾರಣವೂ ಇತ್ತು. ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ. ಎ. ಮೊದಲ ವರ್ಷಕ್ಕೆ ಪಠ್ಯವಾಗಿರುವ “Indian Writing in English” ಎಂಬ ಪತ್ರಿಕೆಗೆ ಕನ್ನಡದ ಖ್ಯಾತ ಲೇಖಕ ಯು.ಆರ್.ಅನ್ಂತಮೂರ್ತಿಯವರ ಇಂಗ್ಲೀಷಿಗೆ ಅನುವಾದಗೊಂಡಿರುವ ಪ್ರಸಿದ್ಧ ಕಾದಂಬರಿ ‘ಸಂಸ್ಕಾರ’ವನ್ನು ಬೋಧಿಸುತ್ತಿದ್ದರು.

ಆ ನೆಪದಲ್ಲಿ ಆಧುನಿಕ ಕನ್ನಡ ಸಾಹಿತ್ಯದ ಅನೇಕ ಲೇಖಕರ ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂಡಿದ್ದರು ಹಾಗೂ ಕನ್ನಡದ ಬಹುತೇಕ ಲೇಖಕರು ಇಂಗ್ಲೀಷ್ ಅಧ್ಯಾಪಕರಾಗಿದ್ದಾರೆಂಬುದು ಆಕೆಗೆ ಚನ್ನಾಗಿ ಗೊತ್ತಿತ್ತು. ಅದೇ ಪ್ರಶ್ನೆಯನ್ನು ‘ಕನ್ನಡದ ಬಹುತೇಕ ಲೇಖಕರು ಇಂಗ್ಲೀಷ್ ಅಧ್ಯಾಪಕರಾಗಿದ್ದಾರಲ್ಲವೆ?’ ಎಂದು ಕೇಳಿದರು. ನಾನು ಹೌದೆಂದು ತಲೆಯಾಡಿಸಿ ಇಂಗ್ಲೀಷ್ ಅಧ್ಯಾಪಕರಾಗಿದ್ದುಕೊಂಡು ಕನ್ನಡದಲ್ಲಿ ಬರೆದವರು ಹಾಗೂ ಬರೆಯುತ್ತಿರುವವರ ದೊಡ್ಡ ಪಟ್ಟಿಯನ್ನೇ ಕೊಟ್ಟೆ.

More

ಧಾರವಾಡದಲ್ಲಿ ‘ಸಂಚಾರಿ’…

ಚಿತ್ರಗಳು:ನಾಗರಾಜ ಸೋಮಯಾಜಿ

ಧಾರವಾಡದ ಕರ್ನಾಟಕ ಕಾಲೇಜಿನ ಸೃಜನಾ ರಂಗಮಂದಿರದಲ್ಲಿ ನಡೆದ ಮಳೆ ಬಿಲ್ಲು ಮಕ್ಕಳ ನಾಟಕೋತ್ಸವದಲ್ಲಿ ‘ಸಂಚಾರಿ ಥಿಯೇಟ್ರು’ ನಾಟಕ ತಂಡ ನರಿಗಳಿಗೇಕೆ ಕೋಡಿಲ್ಲ ನಾಟಕ ಪ್ರದರ್ಶಿಸಿತು . ಅಲ್ಲಿ  ತೆರೆಯ ಹಿಂದಿನ ಕೆಲವು ದೃಶ್ಯಗಳು ನಿಮಗಾಗಿ…

ಇನ್ನಷ್ಟು ಚಿತ್ರಗಳು : ಸೈಡ್ ವಿಂಗ್

ಜಯಶ್ರೀ ಕಾಲಂ : ಅವರು ಆಡಿದರು, ನಾವು ನೋಡಿದೆವು

ಅಷ್ಟು ಚಂದ ಹುಡಗನ ಆಸೆ ನೆರವೆರಿಸದೆ ಇರ್ತಾರ ಧಕ್ಧಕ್ :-) . ಇದೆ ಆಸೆಯನ್ನು ರಾಖಿ ಸಾವಂತ್ ಹತ್ರ ಕೇಳಿ ಇದ್ದಿದ್ರೆ ಯಪ್ಪಾ ಬ್ಯಾಡ ಆ ಹುಡುಗನ ಕಥೆ ಕ್ಯಾರೆ… ಕುಯ್… ತು ಕುಯ್… ಹೇಯ್… ಕುಯ್ .. ಕುಯ್… ಹೀಗೆ ಎಡಿಟ್ ಮಾಡುವಷ್ಟು ಬೈದಿರೋಳು… ಈ ಹುಡುಗನ ಅದೃಷ್ಟ ಚೆನ್ನಾಗಿತ್ತು, ಆಕೆಯನ್ನು ಕೇಳಲಿಲ್ಲ.

ಆರಂಭದಲ್ಲಿ ವಿಶೇಷವಾಗಿ ಇಲ್ಲ ಎನ್ನುವ ಮಾತು ಯಾಕೆ ಹೇಳಿದೆ ಅಂದ್ರೆ ಇದೆ ರೀತಿಯ ರಿಯಾಲಿಟಿ ಷೋ ಕನ್ನಡ ಮತ್ತು ತೆಲುಗು ಈಟೀವಿಯಲ್ಲಿ ಬರ್ತಾ ಇದೆ ಕಣ್ರೀ ಆಹಾ ಅದ್ಬುತ. ತೆಲುಗು ವಾಹಿನಿಯಲ್ಲಿ ಇಂತಹ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳು ಸಾಲ್ಸ ಡ್ಯಾನ್ಸ್ ಆಡಿದರು ಬಾಯ್ ಬಾಯ್ ಬಿಟ್ಟು ನೋಡುವಂತೆ ಆಯಿತು, ಅಷ್ಟೊಂದು ಚೆನ್ನಾಗಿತ್ತು. ಅದೇ ಇವರು ಅಂದ್ರೆ ಸೋನಿಯಲ್ಲಿ ಪ್ರಸಾರ ಆಗ್ತಾ ಇರುವ ಈ ಡ್ಯಾನ್ಸ್ ಕಾರ್ಯಕ್ರಮದಲ್ಲೂ ಸಾಲ್ಸ ಆಡಿದರು, ಅವರು ಆಡಿದರು, ನಾವು ನೋಡಿದೆವು ಅಷ್ಟೆ :-) . ಸಾಕಷ್ಟು ಕಲಿಯುವುದಿದೆ ಕಣ್ರೀ ನಮ್ಮವರಿಂದ ಅವರು

ಪೂರ್ಣ ಓದಿಗೆ :ಮೀಡಿಯಾ ಮೈಂಡ್

ರಾಜ್ಯಮಟ್ಟದ ವರ್ಷದ ‘ಶ್ರೇಷ್ಟ ನೃತ್ಯ ವಿಮರ್ಶೆ’ ಸ್ಪರ್ಧೆ

ನೂಪುರ ಭ್ರಮರಿಯಿಂದ ನೃತ್ಯ ವಿಮರ್ಶಕರಿಗಾಗಿ ರಾಜ್ಯಮಟ್ಟದ ‘ವರ್ಷದ ಶ್ರೇಷ್ಟ ನೃತ್ಯ ವಿಮರ್ಶೆ’ ಸ್ಪರ್ಧೆ

ನೃತ್ಯ ಮತ್ತು ಪ್ರದರ್ಶಕ ಕಲೆಗಳ ಕುರಿತ ಪ್ರತಿಷ್ಟಿತ ದ್ವೈಮಾಸಿಕ ನೂಪುರ ಭ್ರಮರಿ ನೃತ್ಯಕ್ಷೇತ್ರದ ವಿಮರ್ಶಕರನ್ನು ಗುರುತಿಸುವ, ಗೌರವಿಸುವ ಮತ್ತು ವಿಮರ್ಶನ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಸಾಲಿನಿಂದ ರಾಜ್ಯಮಟ್ಟದ ವರ್ಷದ ಶ್ರೇಷ್ಟ ನೃತ್ಯ ವಿಮರ್ಶೆ ಸ್ಪರ್ಧೆಯನ್ನು ಆಯೋಜಿಸಿದೆ.

ಈಗಾಗಲೇ ೨೦೧೦ನೇ ಸಾಲಿನಲ್ಲಿ (ಜನವರಿ-ಡಿಸೆಂಬರ್) ರಾಜ್ಯದ ಕನ್ನಡ/ಇಂಗ್ಲೀಷ್ ಪತ್ರಿಕೆಗಳು/ನಿಯತಕಾಲಿಕೆಗಳಲ್ಲಿ ಪ್ರಕಟವಾದ ನೃತ್ಯ/ನಾಟ್ಯ ಸಂಬಂಧೀ ಪ್ರದರ್ಶನ/ರಂಗಪ್ರವೇಶ/ ಸಮ್ಮೇಳನ/ಉತ್ಸವಗಳ ಕುರಿತ ವಿಮರ್ಶೆಗಳನ್ನು ಕಳಿಸಬಹುದಾಗಿದೆ. ಓರ್ವ ಲೇಖಕ ತಲಾ 3 ವಿಮರ್ಶೆಗಳನ್ನು ಕಳುಹಿಸಲು ಅವಕಾಶವಿದ್ದು ; ಪ್ರತ್ಯೇಕ ಹಾಳೆಯಲ್ಲಿ ಸ್ವವಿವರ ಮತ್ತು ವಿಮರ್ಶೆಯ ವಿವರಗಳನ್ನು ಬರೆದು ಲಗತ್ತಿಸಬೇಕು. ತೀರ್ಪುಗಾರರ ನಿರ್ಧಾರ ಅಂತಿಮವಾಗಿರುತ್ತದೆ.

ಲೇಖಕರು ತಮ್ಮ ಅತ್ಯುತ್ತಮವೆನಿಸುವ 3 ವಿಮರ್ಶೆಗಳನ್ನು ಅಥವಾ ಅದರ ಜೆರಾಕ್ಸ್ ಪ್ರತಿಯನ್ನು ಅಂಚೆ ಅಥವಾ ಈ ಮೈಲ್ ಮೂಲಕ ಜನವರಿ 15,2011 ರ ಒಳಗೆ ತಲುಪುವಂತೆ ಕಳುಹಿಸಬೇಕು. ಜನವರಿ ೧೫ ಕೊನೆಯ ದಿನ. ಅತ್ಯುತ್ತಮನಿಸುವ ವಿಮರ್ಶೆಗೆ ಫೆಬ್ರವರಿ ೧೩, ೨೦೧೧ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಸನ್ಮಾನಪತ್ರ, ಫಲಕ, ನಗದು ಮತ್ತು ಫಲತಾಂಬೂಲಗಳನ್ನು ಒಳಗೊಂಡಿರುತ್ತದೆ.

ಪ್ರವೇಶಗಳನ್ನು ಕಳುಹಿಸಬೇಕಾದ ವಿಳಾಸ:

ಮನೋರಮಾ ಬಿ.ಎನ್

ಸಂಪಾದಕರು, ನೂಪುರ ಭ್ರಮರಿ

ನಂ.೧೦೪, ಕೌಶಲ್ ರೀಜೆನ್ಸಿ

೧ನೇ‌ಅಡ್ಡರಸ್ತೆ, ಪ್ರಕಾಶ್ ನಗರ, ರಾಜಾಜಿನಗರ,

ಬೆಂಗಳೂರು ೫೬೦೦೮೫

ದೂರವಾಣಿ: ೯೯೬೪೧೪೦೯೨೭, ೯೪೮೧೭೬೫೫೪೪

ಈ ಮೈಲ್: editor@noopurabhramari.com

ಹೆಚ್ಚಿನ ಮಾಹಿತಿಗೆ www.noopurabhramari.com ಸಂಪರ್ಕಿಸಬಹುದು

 

ಸಾಂಗತ್ಯ 5 ನೆ ಚಿತ್ರ ಶಿಬಿರ …

ಸಾಂಗತ್ಯ

ಸಾಂಗತ್ಯ ಸಂಯೋಜಿಸುವ ಐದನೇ ಚಿತ್ರ ಶಿಬಿರ ಜನವರಿ 22 ಮತ್ತು 23 ರಂದು ಎಂದಿನಂತೆ ಕುಪ್ಪಳಿಯಲ್ಲಿ ನಡೆಯಲಿದೆ.

45 ಮಂದಿಗೆ ಪ್ರವೇಶಾವಕಾಶವಿದೆ. ಊಟ, ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. 400 ರೂ. ಪ್ರವೇಶ ಶುಲ್ಕ. ಜನವರಿ 22 ರಂದು ಬೆಳಗ್ಗೆ 9. 30 ಕ್ಕೆ ಆರಂಭವಾಗುವ ಚಿತ್ರ ಶಿಬಿರದಲ್ಲಿ ಒಟ್ಟೂ ಎರಡೂ ದಿನ ಕೇವಲ ಸಿನಿಮಾಗಳನ್ನು ವೀಕ್ಷಿಸುವುದು, ಚರ್ಚಿಸುವುದಷ್ಟೆ ಕೆಲಸ.

ಪ್ರತಿ ಚಿತ್ರ ವೀಕ್ಷಣೆಯ ನಂತರವೂ ಸಂವಾದವಿರುತ್ತದೆ. ಅದರಲ್ಲಿ ತಮ್ಮ ತಮ್ಮ ಅಭಿಪ್ರಾಯವನ್ನು ಮಂಡಿಸಬಹುದು. ತಾಂತ್ರಿಕ ಸಂಗತಿಗಳ ವಿವರ ಕೊಡಲು ನಮ್ಮೊಂದಿಗೆ ತಜ್ಞರು ಹಾಗೂ ಸಾಂಗತ್ಯ ಟ್ರಸ್ಟ್ ನ ಅಧ್ಯಕ್ಷರಾದ ಪರಮೇಶ್ ಗುರುಸ್ವಾಮಿಯವರು ಇರುತ್ತಾರೆ. ಇವರೊಂದಿಗೆ ಇನ್ನೂ ಕೆಲವು ಸಿನಿತಜ್ಞರು ಭಾಗವಹಿಸುವರು.

ಈ ಹಿಂದೆಯೂ ನಾಲ್ಕು ಶಿಬಿರಗಳನ್ನು ನಡೆಸಿದ್ದು, ಬಹಳ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾಗಳನ್ನು ಚರ್ಚಿಸುವ ಮೂಲಕವೇ ದೃಶ್ಯ ಸಾಧ್ಯತೆಗಳನ್ನು ಅರಿಯುವ ಶೈಕ್ಷಣಿಕ ಉದ್ದೇಶದಿಂದಲೇ ಬಹುತೇಕ ವಿಶ್ವ ಸಿನಿಮಾಗಳ ಪ್ರದರ್ಶನವಿರುತ್ತದೆ. ಪ್ರತಿ ವರ್ಷ ಜನವರಿ ಮತ್ತು ಆಗಸ್ಟ್ ನಲ್ಲಿ ಶಿಬಿರಗಳನ್ನು ನಡೆಸಲಾಗುತ್ತದೆ.

ಆಸಕ್ತರು ಹೆಸರನ್ನು ನೋಂದಾಯಿಸಬಹುದು. ತಮ್ಮ ಬರುವಿಕೆ ಕುರಿತು saangatya@gmail.com ಗೆ ಇಮೇಲ್ ಮಾಡಬಹುದು. ಮತ್ತಿತರ ಮಾಹಿತಿಗೆ ಮತ್ತು ಹೆಸರು ನೋಂದಣಿಗೆ 94805 82027, 94807 97113, 94482 45172

ವಿಶ್ವಕಥಾಕೋಶ …

Previous Older Entries

%d bloggers like this: