‘ಅಗಸೆ ಬಾಗಿಲು’ …

ರಾಜೀನಾಮೆ…

-ಸತೀಶ್ ಆಚಾರ್ಯ

ಕೂಗಳತೆಯ ವಿಸ್ಮಯಗಳ ದಾಟದೇ.

-ಅಶೋಕ್ ಶೆಟ್ಟರ್

ಶಾಲ್ಮಲಾ

 

ವಿಸ್ಮಯಗಳ ಲೋಕಕ್ಕೆ ಲಗ್ಗೆ ಇಟ್ಟ ಮಿಂಚು ಕಣ್ಣಲ್ಲಿ ಮಿನುಗಿಸಿ
ತಾರೆ ನೀಹಾರಿಕೆ ತೋರಿ ಅಂಗೈಯ್ಯಲ್ಲಿ, ಬ್ರಹ್ಮಾಂಡ ಹರಡಿ ಎದುರು ಹೇಳಿದಾ ಹೇಳಿದಾ
ಎಷ್ಟು ದೂರ ಗೊತ್ತೇ ಆ ಸೂರ್ಯ?
ನಮ್ಮ ತಲುಪಲವನ ಬೆಳಕು ಎಂಟು ನಿಮಿಷ ಬೇಕು
ಬೆಳಕು ಪ್ರವಹಿಸುವ ವೇಗವೆಂಥದು ಗೊತ್ತೇ?
ಕ್ಷಣವೊಂದಕೆ ಲಕ್ಷದೆoಬತ್ತಾರು ಸಾವಿರ ಮೈಲು…

ಒಣಹುಲ್ಲು ತಿನ್ನುತ್ತ ನಿಂತ ಎತ್ತಿನ ಮೈಯ್ಯ ಮೇಲೆಲ್ಲಾ ಬಾಸುಂಡೆ ಎಬ್ಬಿಸಿದ ಕೈಯ್ಯ
ನರಗಳಲಿ ನರಹೊಟ್ಟೆಗಳ ಹಸಿವ ಬೆಂಕಿ, ಕಾಣುತ್ತಿತ್ತು ಅಲ್ಲೇ, ಕೊಂಚ ದೂರ ಎದುರಿಗೇ
ಗೊತ್ತೇ? ಗೊತ್ತೇ? ಕೇಳುತಲಿದ್ದ ವಿ-
ಜ್ಞಾನದ ಗದಡಿ ಬಿಚ್ಚುತ್ತಲೇ ಹೋದ
ಗೊತ್ತೆಂದೆ, ಪ್ರಶ್ನಾರ್ಥಕ ನೋಟ ಎಸೆದ
ಊರ್ಧ್ವಗಮನಕ್ಕೆ ಕೊನೆಯಿಲ್ಲವೆಂತೋ ಅಂತೇ ಅಧ:
ಪತನಕ್ಕೂ ಕೊನೆಯಿಲ್ಲ, ಅದೇ ಭಯ
ಮಾತಾಡುತ್ತಿದ್ದೆವು ಎರಡು ಬೇರೆ ಭಾಷೆಗಳಲ್ಲಿ ನಾವು- ನಾನೂ ಅವನೂ

More

ಇಂದಿನ ನಾಟಕ …

ನಾಟಕ ಬೆಂಗ್ಳೂರು 2010 ಉತ್ಸವದಲ್ಲಿ

ಅಭಿನಯ ತರಂಗ ಅಭಿನಯಿಸುವ

ಟೋಬಾ ಟೇಕ್ ಸಿಂಗ್

4-12-2010
ಸಮಯ : 6.30
ಮೂಲ : ಸಾದತ್ ಹಸನ್ ಮಂಟೋ

ಕನ್ನಡ ರೂಪ : ಜೆ. ಬಾಲಕೃಷ್ಣ

ನಿರ್ದೇಶನ  : ಚರಣ್ ಚನ್ನರಾಯ ಪಟ್ಟಣ

 

More

ಜಯಶ್ರೀ ಕಾಲಂ:ನೇಟಿವಿಟಿ ಎಂಜಾಯ್ ಮಾಡ ಬಹುದು ಕಣ್ರೀ …

ಏಷ್ಯಾನೆಟ್ ವಾಹಿನಿಯಲ್ಲಿ  ನಾನು ಸ್ಟಾರ್  ಸಿಂಗರ್ ಕಾರ್ಯಕ್ರಮ ವೀಕ್ಷಿಸ್ತಾ ಇದ್ದೆ. ಹಲವಾರು ಎಪಿಸೋಡ್ಗಳನ್ನು ಇಷ್ಟ ಪಟ್ಟೆ ವೀಕ್ಷಿಸಿದ್ದೇನೆ. ಉಷಾ ಉತ್ತೂಪ್ ಆ ಕಾರ್ಯಕ್ರಮದ ತೀರ್ಪುಗಾರರಲ್ಲಿ ಒಬ್ಬರಾಗಿದು. ಅಲ್ಲಿ ಮಲೆಯಾಳಂ  ಹಾಡುಗಳ  ಸ್ಪರ್ಧೆ ಆಗಿದ್ರು ಯಾವುದಾದರೂ ಪ್ರಾದೇಶಿಕ  ಭಾಷೆಯನ್ನು ಹಾಡುವ ಅವಕಾಶ ಕಲ್ಪಿಸಿತ್ತು ಆ ಸ್ಪರ್ಧೆ ಆದ್ರೆ ತಮಾಷೆ ಅಂದ್ರೆ ಕನ್ನಡ ಬಿಟ್ಟು ಬೇರೆಯ ಭಾಷೆಯನ್ನೂ ಹಾಡ್ತಾ ಇದ್ರು ಸ್ಪರ್ಧಿಗಳು. ಹೀಗಾಗುತ್ತೆ ಕನ್ನಡದ ವಿಷಯಕ್ಕೆ ಬಂದಾಗ :-)

@@ ಮಲೆಯಾಳಿಗಳ ವಿಷಯಕ್ಕೆ ಬಂದಾಗ ತುಂಬಾ ಕ್ರಿಯೇಟಿವ್ ಮಂದಿ ಕಣ್ರೀ. ಅದ್ಭುತ ತಲೆ ಆ ಭಗವಂತ ಕೊಟ್ಟಿದ್ದಾನೆ ಅವರಿಗೆ ಮಾತ್ರ :-) .  ವಿಶ್ವದ ಯಾವ ಮೂಲೆಯಲ್ಲಿ ಹೋದರು ಕಾಕ ಟೀ ಇದ್ದೆ ಇರುತ್ತಲ್ಲ.. ನೆಕ್ಟ್  ಉಡುಪಿಯವರು ಆ ಜಾಗಕ್ಕೆ ಸೇರ್ತಾರೆ. ಉಡುಪಿಯವರ ಇಡ್ಲಿ-ಕಾಕ ಟೀ  ಕುಡಿದು ನೇಟಿವಿಟಿ ಎಂಜಾಯ್ ಮಾಡ ಬಹುದು :-) ಬಿಡಿ ಎಲ್ಲಾ ರಂಗದಲ್ಲೂ ಅವರು ಏ ಒನ್ . ಸಿನಿಮಾಗಳು ಸಖತ್, ಟೀವಿ ಕಾರ್ಯಕ್ರಮಗಳು ಸೂಪರ್ಬ್.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

 

ಸೂರಿ -16: ಒಂದು ನೂರಿಪ್ಪತ್ತಿದ್ರೆ ಬೇಕಿತ್ತೂ…

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 16

ಎದುರು ನಿಂದು ಏಕ ಮಾತ್ರ ಪುತ್ರನ ಕರ ಪಿಡಿದು ‘ವತ್ಸಾ ಕೈ ಬಿಡಬೇಡ‘ ಎಂದುಸುರಿದಂತಾಯ್ತು. ಅದು ಅಪ್ಪಣೆಯಂತೇ ಕೇಳಿತು. ವಿಧಿಯಿಲ್ಲದೇ ತಲೆಯಾಡಿಸಿ, ಕೈಲಿದ್ದ ಪುಡಿ ನೋಟುಗಳಲ್ಲಿ ಹತ್ತು ರೂಪಾಯಿಗಳನ್ನು ಎಣಿಸಿ ತಂಬಿಗೆಗೆ ತುಂಬಿದರು.

‘ರಾಮದೇವರ ಗುಡಿನಗೆ ನನ್ ಕೈಲಾದಂಗೆ ಮಾಡ್ತೀನಿ. ಯೋಚನೆ ಮಾಡಬೇಡಿ. ನಿಮ್ ಕೈ ಬಿಡಂಗಿಲ್ಲ‘ ಎಂದು ದೇವರ ಮುಂದೆ ಸಾಷ್ಟಾಂಗ ಮಾಡಿ, ಉಳಿದ ದುಡ್ಡನ್ನು ಮುಷ್ಠಿಯಲ್ಲಿ ಬಿಗಿ ಹಿಡಿದು ದೇವರ ಮನೆಯಿಂದ ಹೊರಬಿದ್ದರು. ಕೋಟಿನ ಬಾಬತ್ತಿನಲ್ಲಿ ಸುಮಾರು ಎಪ್ಪತ್ತಾರು ರೂಪಾಯಿ ಜಮೆಯಾಗಿತ್ತು.

ಅರ್ಧ ಶರಧಿಯನ್ನು ದಾಟಿದ ಹನುಮಂತ ಒಮ್ಮೆ ಆಗಸದಲ್ಲಿ ನಿಂತು ಮುಂದಿನ ರಸ್ತೆಯನ್ನು ಅವಲೋಕಿಸಿದ. ದಾಟಬೇಕಾದದ್ದು ಇನ್ನೂ ಅರ್ಧದಷ್ಟಿದೆ. ಮುಂದಿನ ಆಳವೆಂತೋ, ವಿಸ್ತಾರವೆಂತೋ ತಿಳಿಯದು. ನಿಟ್ಟುಸಿರಿಟ್ಟು ಅರೆ ಬರೆ ಒಣಗಿದ ನೀರುಪಂಚೆಯಲ್ಲಿ ಮುಂದಿನರ್ಧದ ಶರಧಿಯನ್ನು ದಾಟುವ ಬಗ್ಗೆ ಯೋಚಿಸಿದ.

More

ಲಂಕೇಶ್ ಪತ್ರಿಕೆಗೆ ಹದಿನೈದು ತುಂಬಿದಾಗ

‘ನುಡಿ ಪುಸ್ತಕ’ ಹಲವು ವಾಚಿಕೆಗಳನ್ನೂ, ಉಮಾರಾವ್ ಅವರ ಕಥಾ ಸಂಕಲನವನ್ನೂ ಹೊರತರುತ್ತಿದೆ. ಇದರೊಂದಿಗೆ ಬಿಡುಗಡೆಯಾಗುತ್ತಿರುವ ಇನ್ನೊಂದು ಆತ್ಮೀಯ ಪುಸ್ತಕ ಅಬ್ದುಲ್ ರಶೀದ್ ಅವರ ‘ಮೈಸೂರ್ ಪೋಸ್ಟ್’.

‘ಲಂಕೇಶ್ ಪತ್ರಿಕೆಗೆ ಹದಿನೈದು ತುಂಬಿದಾಗ’ ಎನ್ನುವ ಈ ಬರಹ ಆ ಪುಸ್ತಕದಲ್ಲಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ರಶೀದರ ‘ಮೈಸೂರು ಪೋಸ್ಟ್’ ಬ್ಲಾಗ್ ನಲ್ಲಂತೂ ಇತ್ತು. ೧೯೯೫ ರಲ್ಲಿ ಬರೆದ ಈ ಲೇಖನ ಕೃತಿ ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲಿ ನಿಮಗಾಗಿ.

ಪುಸ್ತಕ ಬಿಡುಗಡೆ ನಾಳೆ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್  ನಲ್ಲಿ ಬೆಳಗ್ಗೆ ೧೦ ಗಂಟೆಗೆ . ಬನ್ನಿ ಎನ್ನುತ್ತಾರೆ ರಂಗನಾಥ್

-ಅಬ್ದುಲ್ ರಶೀದ್

ಆಗ ನಾವು ಹುಡುಗರು.

ಹೈಸ್ಕೂಲಿನ ನಡುವಿನ ಕಾಲ.

ಸಿಕ್ಕ ಸಿಕ್ಕ ಚಂದಮಾಮ. ಬಾಲಮಿತ್ರಗಳನ್ನೂ ಕಾಡಿ,ಬೇಡಿ. ಕಡತಂದು,ಓದಿ ಮುಗಿಸಿ, ಫ್ಯಾಂಟಮ್, ಶೂಜಾ, ಮಜನೂ, ಶೂರಿಗಳು ಇನ್ನೊಂದು ಕಂತಿನಲ್ಲಿ ಏನು ಸಾಹಸ ಮಾಡುವರು ಎಂದು ಊಹಿಸಿ ಕಾದು ಕುಳಿತು ಮೊಣಕಾಲುಗಳ ನಡುವೆ ಅವರ ಚಿತ್ರಗಳನ್ನಿಟ್ಟುಕೊಂಡು ಕುಕ್ಕರಗಾಲ್ಲಲ್ಲೇ ನೋಡಿ ಮುಗಿಸಿ ಇನ್ನೇನು ಇನ್ನೇನು ಎಂದು ತಲ್ಲಣಗೊಳ್ಳುತ್ತಿದ್ದ ದಿನಗಳು.

ಎಲ್ಲವೂ ಬೇಕಾಗಿತ್ತು. ಏನೂ ಬೇಡವಾಗುತ್ತಿತ್ತು. ಜೊತೆಯಲ್ಲಿ ಓದುತ್ತಿದ್ದ ಹುಡುಗಿಯರೂ ಬೆಳೆದು ಅವರ ಆಕಾರಗಳು ಬದಲುಗೊಂಡು ನಾವು ಬೆಳೆಯುತ್ತ ಉಟ್ಟ ಅಂಗಿಚಡ್ಡಿ ಬಿಗಿಯುತ್ತ ಇನ್ನೂ ಚಡ್ಡಿ ಹಾಕಿಕೊಂಡು ಶಾಲೆಗೆ ಹೋಗಲು ನಾಚುಗೆಯಾಗಿ ಪ್ಯಾಂಟಿಗೋ, ಪಂಚೆಗೋ ಮೊರೆ ಹೋಗುತ್ತಿದ್ದ ದಿನಗಳು.

ಆಗ ಪೇಟೆ ಪಟ್ಟಣಗಳಿಂದ ಕಾಲೇಜಿನ್ನೋ, ಕೆಲಸವನ್ನೋ ಮುಗಿಸಿಕೊಂಡು ಊರಿಗೆ ಸಂಜೆ ಬರುತ್ತಿದ್ದ ನಮ್ಮ ಹಿರಿಯ ಯುವಕ ಗೆಳೆಯರ ಕೈಯಲ್ಲಿ ನಾಲ್ಕು ಪುಟಗಳ ಕಪ್ಪು ಬಿಳಿ ಅಕ್ಷರಗಳ ಪತ್ರಿಕೆಯೊಂದು ಕಂಗೊಳಿಸುತ್ತಿತ್ತು. ಅವರು ಅದನ್ನು ಹೆಮ್ಮೆಯಿಂದಲೂ ಮುಜುಗರದಿಂದಲೂ ಓದುತ್ತಾ ಕೆಲವು ಪುಟಗಳತ್ತ ಮರೆಯಾಗಿ ಕಣ್ಣಾಡಿಸುತ್ತಾ ನಮ್ಮಲ್ಲಿ ಕುತೂಹಲ ಹುಟ್ಟಿಸಿಬಿಟ್ಟಿದ್ದರು. ಲಂಕೇಶ್ ಪತ್ರಿಕೆ ಆರಂಭಿಸಿದ್ದರು. ನಮ್ಮ ಊರಿನ ಕಡೆಗೆ ಲಂಕೇಶ್ ಅನ್ನುವುದು ಕೊಂಚ ವಿಚಿತ್ರ. ತಮಿಳಿನ ಹಾಗೆ ಕಾಣಿಸುವ ಹೆಸರು. ಆದರೂ ಇರುವವರ ಕೈಯಿಂದ ಲಂಕೇಶ್ ಪತ್ರಿಕೆಯನ್ನು ಕಸಿದು ಓದುತ್ತ ಹೋದಂತೆ ನಮ್ಮ ಅದುವರೆಗೆ ಕಲಿತ ಭಾಷೆಗೆ ,ನಮ್ಮ ಅದುವರೆಗಿನ ಯೋಚನೆಗಳಿಗೆ, ನಮ್ಮ ತುಂಟು ತುಂಟು ಬುದ್ಧಿಗಳಿಗೆ, ಎಲ್ಲದಕ್ಕೂ ರೇಗಿ ಮನೆಯಿಂದಲೂ ಶಾಲೆಯಿಂದಲೂ ಉಗಿಸಿಕೊಳ್ಳುತ್ತಿದ್ದ ನಮ್ಮ ರೇಜಿಗೆಳಿಗೆ ಅರ್ಥವಿರುವಂತೆ ಕಾಣಿಸುತ್ತಿತ್ತು.

More

%d bloggers like this: