ದೇವನೂರು ಕಂಡಂತೆ ಜಾತಿ ಗಣತಿ

ಜಾತಿ ಜನಗಣತಿ : ಯಾಕೆ ಹೀಗೂ ಯೋಚಿಸಬಾರದು?
ದೇವನೂರ ಮಹಾದೇವ
`ದೇಶ ಕಾಲ’ದ ಹೊಸ ಸಂಚಿಕೆಯಲ್ಲಿ – ಸಂಚಿಕೆ 23 ರಲ್ಲಿ – ಪ್ರಕಟವಾದ ಲೇಖನ
ಥ್ಯಾಂಕ್ಸ್ ವಿವೇಕ್ ಶಾನಬಾಗ್
ಭಾರತದ ಛಿದ್ರತೆಗೆ ಮುಖ್ಯ ಕಾರಣಗಳಲ್ಲೊಂದಾದ ಜಾತಿಗಳ ಜನಗಣತಿಗೆ ಚಚರ್ೆಯಾಗುತ್ತಿದೆ. ಹಾಗೂ ಇದು ಆತಂಕವನ್ನೂ ಹುಟ್ಟುಹಾಕಿದೆ. ಅಜರ್ಿಗಳಲ್ಲಿ ಜಾತಿಯ ಕಾಲಂ ಇಲ್ಲದಿದ್ದರೆ ಜಾತಿಯೂ ಇರುವುದಿಲ್ಲ ಎಂದು ಭಾರತದ ಮಧ್ಯಮವರ್ಗದ ಮನಸ್ಸು ಮುಗ್ಧವಾಗಿ ಹೇಳುತ್ತಿದೆ. ಈ ರೀತಿ ಹೇಳುವ ಮನಸ್ಸೇ ಯಾರಾದರೂ ಅಪರಿಚಿತರು ಭೇಟಿಯಾದಾಗ – ಇವರು ಯಾವ ಜನ, ಇವರದು ಯಾವ ಮತ, ಇವರು ಯಾವ ಜನಾಂಗ, ಇವರು ಯಾವ ಸಮಾಜ ಎಂಬುದೇ ಅವರಲ್ಲಿ ಮೊದಲು ಏಳುವ ಪ್ರಶ್ನೆಯಾಗಿರುತ್ತದೆ-
ಇಲ್ಲಿ ಜಾತಿಗೆ ಬಳಸುವ – ಜನ, ಮತ, ಜನಾಂಗ, ಸಮಾಜ- ಪದಗಳೇ ಈ ಮನುಷ್ಯರು ಪರಸ್ಪರ ಸಂಬಂಧ ಇಲ್ಲದವರು, ಬೇರೆ ಮನುಷ್ಯರು ಎಂಬಂತಿವೆ. ಒಂದೇ ಥರ ಇದ್ದರೂ ಒಂದೇ ಸ್ಥಿತಿಯಲ್ಲಿ ಇದ್ದರೂ ಬೇರೆ ಬೇರೆ ಜಾತಿಯಾಗಿದ್ದರೆ ಆ ಇಬ್ಬರ ನಡುವೆ ಉಂಟಾಗುವ ದೂರ ಅಳತೆಗೂ ಸಿಗದಷ್ಟು ದೂರವಾಗಿರುತ್ತದೆ. ಆದ್ದರಿಂದ ಛಿದ್ರವಾದ ಭಾರತವು ತನ್ನ ಜಾತಿಗಳ ಮನೋ ಭೂಪಟದ ದೂರ ಆಧರಿಸಿ ಐಕ್ಯತೆಯತ್ತ ಹೆಜ್ಜೆ ಇಡಬೇಕಾಗಿದೆ. ಇದು, ಜಾತಿಗಳು ಉಪಜಾತಿಗಳು ಹೇಗಿವೆ ಎಷ್ಟಿವೆ ಯಾವ ಸ್ಥಿತಿಯಲ್ಲಿವೆ ಯಾವ ಪ್ರಮಾಣದಲ್ಲಿವೆ ಎಂಬುದರ ಮಾಹಿತಿ ಆಧಾರಿಸಿಯೇ ನಡೆಯಬೇಕಾಗಿದೆ.
ಇದರ ಅಗತ್ಯವನ್ನು ಮನಗಾಣಿಸುವುದಕ್ಕೆ ನಾನು ಜನಸಂಖ್ಯಾ ತಜ್ಞರ ಅಥವಾ ಸಮಾಜಶಾಸ್ತ್ರಜ್ಞರ ಅಧ್ಯಯನಶೀಲತೆಯ ಪರಿಭಾಷೆಯಲ್ಲಿ ಹೇಳುವುದೂ ಇಲ್ಲ, ಅದು ನನಗೆ ಗೊತ್ತೂ ಇಲ್ಲ. ನಮ್ಮ ಕಣ್ಣೆದುರಿನ ಒಂದು ಉದಾಹರಣೆಯನ್ನಷ್ಟೇ ಮುಂದಿಡುವೆ: ಪರಿಶಿಷ್ಟಜಾತಿಗೆ ಸಂವಿಧಾನದತ್ತವಾಗಿ ಮೀಸಲಾತಿಯ ವಿಶೇಷ ಸೌಲಭ್ಯ ಪಡೆಯಲು ಅವಕಾಶವಾಗಿದೆ. ಕನರ್ಾಟಕದಲ್ಲಿ ಪರಿಶಿಷ್ಟ ಜಾತಿಯ ಒಳಗೇನೇ ನೂರೊಂದು ಉಪಜಾತಿಗಳಿವೆ. ಎಲ್ಲರಿಗೂ ಸೇರಿ 15% ಮೀಸಲಾತಿಯ ಅವಕಾಶವಿದೆ. ಪರಿಶಿಷ್ಟ ಜಾತಿಯ ಉಪಪಂಗಡಗಳು ಬಹುತೇಕ ಎಲ್ಲಾ ದೃಷ್ಟಿಯಿಂದಲೂ ಒಂದೇ ಸ್ಥಿತಿಯಲ್ಲಿವೆ.
ಈ ಪಂಗಡಗಳಲ್ಲೂ ದಿನದಿನಕ್ಕೆ ವಿದ್ಯಾವಂತರಾಗುತ್ತಾ ಉದ್ಯೋಗಸ್ಥರಾಗುತ್ತಾ ಇವರ ನಡುವೆ ಸಾಮರಸ್ಯ, ಸಹಬಾಳ್ವೆ ಹೆಚ್ಚಾಗಿ ಸಾಂಪ್ರದಾಯಿಕವಾಗಿಯೇ ಮದುವೆ ಜರುಗುವಷ್ಟು ಇವರ ನಡುವಿನ ಸಂಬಂಧ ಕುದುರಬೇಕಿತ್ತು. ಆದರೆ, ವಾಸ್ತವ ಇದಕ್ಕೆ ತದ್ವಿರುದ್ಧವಾಗಿದೆ. ಇಂದು ಪರಿಶಿಷ್ಟ ಜಾತಿಯ ಉಪಪಂಗಡಗಳ ನಡುವೆ ದ್ವೇಷ, ಅಸಹನೆ ದಿನ ದಿನಕ್ಕೂ ಉಲ್ಬಣಿಸುತ್ತಿವೆ.   ಪರಿಶಿಷ್ಟ ಜಾತಿಯ ಪ್ರತಿ ಪಂಗಡವೂ ತಮ್ಮ ತಮ್ಮ ಪಂಗಡದ ಜನಸಂಖ್ಯೆಯನ್ನು ಇರುವುದಕ್ಕಿಂತಲೂ ಎರಡು ಮೂರು ಪಟ್ಟು ಹೆಚ್ಚಿಸಿಕೊಂಡು ಈ ಭ್ರಮೆಯನ್ನು ಸ್ವಲ್ಪವೂ ಅನುಮಾನಿಸದೆ ನಂಬಿರುವುದೂ ಮುಖ್ಯ ಕಾರಣವಾಗಿದೆ.
ಪರಿಶಿಷ್ಟ ಜಾತಿಯ ಉಪಪಂಗಡಗಳ ಮುಖಂಡರಿಂದ ಅವರ ಜನಸಂಖ್ಯೆಯ ಪ್ರಮಾಣವನ್ನು ಕೇಳಿ ಆ ಜನಸಂಖ್ಯೆಯ ಅಂಕಿ ಅಂಶಗಳನ್ನು ಕೂಡಿದರೆ ಪರಿಶಿಷ್ಟ ಜಾತಿಯ ಈ ಭ್ರಮಾ ಜನಸಂಖ್ಯೆಯು ಕನರ್ಾಟಕದ ಇಡೀ ಜನಸಂಖ್ಯೆಯನ್ನು ಮೀರಿಸುತ್ತದೆ! ಈ ಭ್ರಮೆಯಿಂದಾಗಿ ಇಷ್ಟೊಂದು ಸಂಖ್ಯೆಯಲ್ಲಿದ್ದರೂ ತಮಗೆ ಸಿಕ್ಕಿರುವ ಸವಲತ್ತು ಅಷ್ಟೊಂದಿಲ್ಲ ಎಂಬ ಭಾವನೆ ಹುಟ್ಟಿಸಿ ಪರಸ್ಪರ ಕುದಿತಕ್ಕೆ ಇದೂ ಕಾರಣವಾಗಿದೆ. ಏನಾದರೂ ಉಪಪಂಗಡಗಳ ಜನಸಂಖ್ಯೆಯ ಮಾಹಿತಿ ಇದ್ದು ಜೊತೆಗೆ ಆ ಪಂಗಡಗಳ ಉದ್ಯೋಗಸ್ಥರ ಪ್ರಮಾಣದ ಮಾಹಿತಿ ಇದ್ದಿದ್ದರೆ ಬಹುಶಃ ಈ ದ್ವೇಷ, ಅಸಹನೆಗಳು ಇಷ್ಟೊಂದು ಇರುತ್ತಿರಲಿಲ್ಲವೇನೋ. ಬದಲಾಗಿ ಈ ವಾಸ್ತವಾಂಶ ಗೊತ್ತಿದ್ದರೆ ಪರಿಶಿಷ್ಟ ಜಾತಿಯಲ್ಲಿ ಕುಟುಂಬ ಭಾವನೆ ಉಂಟಾಗಬಹುದಾದ ಸಾಧ್ಯತೆಗಳೂ ಹೆಚ್ಚಿತ್ತು.
ಉಪಪಂಗಡಗಳ ನಡುವಿನ ಪ್ರಾತಿನಿಧಿಕತೆಯಲ್ಲಿ ಅಸಮತೋಲನವಿದ್ದಲ್ಲಿ ಅದನ್ನು ಸರಿಪಡಿಸಿ ನ್ಯಾಯ ಸಲ್ಲುವಂತಾಗುವ ‘ಬ್ಯಾಕ್ ಲಾಗ್’ ಅಥವಾ ಗ್ರಾಮೀಣ ಕೃಪಾಂಕದಂತೆ  ‘ಸಮತೋಲನ ಕೃಪಾಂಕ’ ಇತ್ಯಾದಿ ಉಪಾಯಗಳನ್ನು ಹುಡುಕಬಹುದಾಗಿತ್ತು. ಉಪಪಂಗಡಗಳ ನಡುವಿನ ಜನಸಂಖ್ಯೆಯ ಪ್ರಮಾಣ ತಿಳಿಯದ ಕಾರಣವಾಗಿ ಮಿತ್ರ ಗುಂಪುಗಳಾಗಬೇಕಾದ ಈ ಉಪಪಂಗಡಗಳು ಶತ್ರುಗುಂಪುಗಳಾಗುವ ದುರಂತ ವ್ಯಂಗ್ಯದಿಂದ ತಪ್ಪಿಸಿಕೊಳ್ಳಬಹುದಾಗಿತ್ತು.
More

ದೇವನೂರು: ಕಳೆದು ಹೋಗದ ಅರಿವಿನ ಕಿಡಿ

ಚಿತ್ರ : ಅಬ್ದುಲ್ ರಶೀದ್

ಮಹಾದೇವ ನಮ್ಮ ನಡುವಿನ ಸಾಕ್ಷಿ ಪ್ರಜ್ಞೆ. ಇಂದಿನ ಜಾಗತೀಕರಣ ನಮ್ಮೆಲ್ಲರ ಮನಸ್ಸಿಗೆ ಎಲ್ಲರೊಂದಿಗೂ, ಎಲ್ಲ ವಿಷಯಕ್ಕೂ ಅಡ್ಜಸ್ಟ್ ಮಾಡಿಕೊಳ್ಳುವುದನ್ನು ಕಲಿಸಿಬಿಟ್ಟಿರುವಾಗ ಇದಕ್ಕೆ ಭಿನ್ನವಾಗಿ ನಿಂತವರು ದೇವನೂರು. ಇನ್ನೂ ಕಳೆದು ಹೋಗದ ಅರಿವಿನ ಕಿಡಿ. ದೇವನೂರು ಇದ್ದದ್ದನ್ನು ಇದ್ದಹಾಗೆ, ನೇರವಾಗಿ ಹೇಳಬಲ್ಲರು.

ಕನ್ನಡ ಸಾಹಿತ್ಯ ಪರಿಷತ್ತು ನೃಪತುಂಗ ಪ್ರಶಸ್ತಿ ನೀಡಿ ಗೌರವಿಸುತ್ತೇನೆ ಎನ್ನುವಾಗ ಕನ್ನಡ ಕಲಿಕೆಯ ಕಾರಣ ಮುಂದಿಟ್ಟು ಪ್ರಶ್ನೆ ಕೇಳಬಲ್ಲವರು. ಇಲ್ಲಿ ದೇವನೂರು ಕನ್ನಡ ಸಾಹಿತ್ಯ ಪರಿಷತ್ ಗೆ ಬರೆದಿರುವ ಪತ್ರದ ಪೂರ್ಣ ಪಾಠ ಇದೆ.

ಶಿವಮೊಗ್ಗದಿಂದ ಕೆ ಅಕ್ಷತಾ ದೇವನೂರು ಅವರ ಈ ಪತ್ರವನ್ನು ಕಳಿಸಿಕೊಟ್ಟಾಗ ಇದು ರಾಜ್ಯೋತ್ಸವದ ಈ ಸಂದರ್ಭದಲ್ಲಿ ಚರ್ಚಿಸಲೇ ಬೇಕಾದ ಸಂಗತಿ ಎನಿಸಿತು. ದೇವನೂರು ಅವರ ಕನ್ನಡ ನೋಟವನ್ನು ಒಪ್ಪಬಹುದು ಬಿಡಬಹುದು. ಈ ಕಾರಣಕ್ಕಾಗಿ ಒಂದು ಚರ್ಚೆಗೆ ಇಲ್ಲಿ ಜಾಗ ಕಲ್ಪಿಸುತ್ತಿದ್ದೇವೆ. ಕನ್ನಡದ ಬಗ್ಗೆ ಎತ್ತಿದ ಪ್ರಶ್ನೆಯೊಂದಿಗೆ ದೇವನೂರು ಅವರು ಹಲವು ಸಂಕಷ್ಟದ ಸಂದರ್ಭದಲ್ಲಿ ಎತ್ತಿದ ಪ್ರಶ್ನೆಗಳನ್ನೂ ನಿಮ್ಮ ಮುಂದಿಟ್ಟಿದ್ದೇವೆ. ಯಥಾಪ್ರಕಾರ ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ.

ರಾಜ್ಯೋತ್ಸವಕ್ಕಾಗಿ ಈ ದೇವನೂರು ಸ್ಪೆಷಲ್ ರೂಪಿಸುವಾಗ ನಮಗೆ ಅಗತ್ಯವಾಗಿ ಒದಗಿ ಬಂದದ್ದು ‘ಅವಧಿ’ಯಲ್ಲೇ ಈ ಹಿಂದೆ ಪ್ರಕಟವಾಗಿದ್ದ ಲೇಖನಗಳು, ಅಬ್ದುಲ್ ರಶೀದ್ ಈ ಹಿಂದೆ ಬರೆದ ಪೋಸ್ಟ್ ನೆನಪಿತ್ತು  ಆ ನೆನಪಿನಿಂದಲೇ ‘ಕೆಂಡಸಂಪಿಗೆ’ಗೆ ಪೂರ್ವದಲ್ಲಿ ಬರೆಯುತ್ತಿದ್ದ ‘ದಿ ಮೈಸೂರ್ ಪೋಸ್ಟ್’ ಹುಡುಕಲಾಯಿತು. ಓದಲೇಬೇಕಾದ ಲೇಖನ ಇದು. ರಶೀದ್ ಗೆ, ಫೋಟೋಕ್ಕಾಗಿ ನೇತ್ರ ರಾಜು ಗೆ ವಂದನೆ

ಹಾಗೆಯೇ ರವಿ ಅಜ್ಜೀಪುರ ಬರಹ ಸಹಾ ಆತ್ಮೀಯವಾಗಿದೆ. ಇದರೊಂದಿಗೆ ‘ವಾರ್ತಾ ಭಾರತಿ’, ‘ಗಲ್ಫ್ ಕನ್ನಡಿಗ’ ದಲ್ಲಿದ್ದ ವರದಿಗಳನ್ನೂ ಪ್ರಕಟಿಸಿದ್ದೇವೆ. ಇಲ್ಲಿನ ಅನೇಕ ಚಿತ್ರಗಳು ಕೆ ಅಕ್ಷತಾ, ಮೈಸೂರ್ ಪೋಸ್ಟ್, ಕೆಂಡಸಂಪಿಗೆ, ಏನ್ ಗುರು ಕಾಫಿ ಆಯ್ತಾ ದಿಂದ ಆರಿಸಲಾಗಿದೆ. ಎಲ್ಲರಿಗೂ ಒಂದು ನಮಸ್ಕಾರ.

ಇಲ್ಲಿನ ಎಲ್ಲಾ ಲೇಖನಗಳಿಗೂ ಪ್ರತಿಕ್ರಿಯೆಗೆ ಸ್ವಾಗತ.

ವಂದನೆಗಳೊಂದಿಗೆ, ದೇವನೂರ ಮಹಾದೇವ

ಡಾ|| ನಲ್ಲೂರು ಪ್ರಸಾದ್  ಆರ್.ಕೆ.

ಅಧ್ಯಕ್ಷರು

ಕನ್ನಡ ಸಾಹಿತ್ಯ ಪರಿಷತ್ತು.

ಬೆಂಗಳೂರು ಇವರಿಗೆ.


ಮಾನ್ಯರೇ

ವಿಷಯ: ನೃಪತುಂಗ ಪ್ರಶಸ್ತಿ ಪಡೆಯಲೋಸುಗಉಲ್ಲೇಖ: ಕಸಾಪ/ದತ್ತಿ/ಬಿ.ಎಂ.ಟಿ.ಸಿ/2010-11/ 8-54
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೃಪತುಂಗ ಸಾಹಿತ್ಯ ಪ್ರಶಸ್ತಿಗೆ ಕನ್ನಡ ಸಾಹಿತ್ಯ ಪರಿಷತ್ತು ನನ್ನನ್ನು ಆಯ್ಕೆ ಮಾಡಿರುವುದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತಾ ಈ ಸಂದರ್ಭದಲ್ಲಿ – ಒಂದು ವಿನಂತಿಯನ್ನು ತಮ್ಮ ಮುಂದಿಡುವೆ:ಉನ್ನತ ಶಿಕ್ಷಣದವರೆಗೂ ಕನ್ನಡಮಾಧ್ಯಮವಾಗುವುದನ್ನೇ ಹಂಬಲಿಸುತ್ತಾ ಅದನ್ನು ಕಾಣದೆ ಕಣ್ಮುಚ್ಚಿದ ಮಹಾಕವಿ ಕುವೆಂಪು ಅವರನ್ನು ನೆನೆಸಿಕೊಳ್ಳುತ್ತಾ, ಹಾಗೇ, ‘ಕನ್ನಡ ಶಿಕ್ಷಣಮಾಧ್ಯಮಕ್ಕಾಗಿ ಚಿಕ್ಕ ಹುಡುಗನಾಗಿದ್ದಾಗ ಪ್ಲೆಕಾಡರ್್ ಹಿಡಿದುಕೊಂಡು ಕೂಗಾಡುತ್ತಿದ್ದೆ. ಈಗ ವಯಸ್ಸಾದ ಮೇಲೆ ಕೋಲು ಹಿಡಿದುಕೊಂಡು ಅದೇ ಬೇಡಿಕೆ ಕೇಳುತ್ತಿದ್ದೇನೆ, ಪರಿಸ್ಥಿತಿಯಲ್ಲಿ ಏನೂ ವ್ಯತ್ಯಾಸವಾಗಲಿಲ್ಲ-ನನಗೆ ವಯಸ್ಸಾದದ್ದೊಂದನ್ನು ಬಿಟ್ಟು’ ಎನ್ನುತ್ತಿದ್ದ ಡಾ|| ಹಾ.ಮಾ. ನಾಯಕರ ಮಾತುಗಳೂ ಅವರೊಡನೇ ಕಾಲವಶವಾಗಿವೆ.

ಚಿತ್ರ ಕೃಪೆ: ಏನ್ ಗುರು ಕಾಫಿ ಆಯ್ತಾ

ಇಂದು ಕನ್ನಡದ ಪರಿಸ್ಥಿತಿಯನ್ನು  ನೋಡಿದರಂತೂ ಕನ್ನಡವು ಶಿಕ್ಷಣ ಮಾಧ್ಯಮವಾಗದೆ ಕನ್ನಡದ ಪಾದಗಳು ಶಕ್ತಿಹೀನವಾಗಿ,  ನಡೆಯಲು ಕಷ್ಟಪಡುತ್ತ ಕಂಕಳುಕೋಲು ಹಿಡಿದುಕೊಂಡು ಯಾತನಾಮಯವಾಗಿ ನಡೆಯುತ್ತಿರುವಂತೆ ಕಾಣುತ್ತದೆ. ಇಲ್ಲಿಯವರೆಗಿನ ಎಲ್ಲಾ ಸಕರ್ಾರಗಳೂ ಕನ್ನಡದ  ಬಗ್ಗೆ ಜುಟ್ಟಿಗೆ ಮಲ್ಲಿಗೆ ಹೂ ಮಾತಾಡಿಕೊಂಡೇ ಬಂದಿವೆ.

More

ಮನಸ್ಸಿನಲ್ಲೇ ಮಹಾದೇವ

ಅಬ್ದುಲ್ ರಶೀದ್

ಕೃಪೆ: ದಿ ಮೈಸೂರ್ ಪೋಸ್ಟ್

mahadeva.jpg

[photo:Nethraraju]

ನ್ನಡನಾಡಿನ ಎಲ್ಲೋ ಒಂದುಕಡೆ ಒಂದು ಕಲ್ಲಿನ ದೇವಾಯವಿದೆಯಂತೆ. ಆ ದೇವಾಲಯದ ಯಾವ ಕಲ್ಲನ್ನು ಮೊಟಕಿದರೂ ಅದರಿಂದ ಸಂಗೀತ ಹೊರಹೊಮ್ಮವುದಂತೆ. ಅದೇ ರೀತಿ ಮೈಸೂರಿನ ಹಳೆಯ ಕಾಲದ ಯಾರನ್ನು ಮಾತನಾಡಿಸಿದರೂ ಅವರಿಂದ ಮಹಾರಾಜರ ಕಥೆಗಳೇ ಹೊರ ಬರುವುದಂತೆ. ಇನ್ನೂ ಸ್ವಲ್ಪ ಕಡಿಮೆ ಹಳಬರನ್ನು ಮಾತನಾಡಿಸಿದರೆ ಅವರಿಂದ ಕುವೆಂಪು ಅವರ ಹೆಸರೇ ಬರುವುದಂತೆ.

`ಇವರಿಬ್ಬರ ಗುಂಗಿನಿಂದ ಹೊರಬಂದು ಬರೆಯುವುದೆಂದರೆ ಮೈಸೂರಿನಲ್ಲಿ ಹರಸಾಹಸದ ಕೆಲಸವೇ ಸರಿ. ಹಾಗಾಗಿ ನೀನು ಯಾಕೆ ಸ್ವಲ್ಪ ನಮ್ಮ ದೇವನೂರು ಮಹಾದೇವರನ್ನು ಮಾತನಾಡಿಸಿ ಬರೆಯಬಾರದು ಎಂದು ಗೆಳೆಯರೊಬ್ಬರು ಕೊಂಚ ಕಳಕಳಿಯಿಂದಲೇ ನನಗೊಂದು ಉಚಿತ ಐಡಿಯಾ ಕೊಟ್ಟಿದ್ದರು.

ಅವರು ಹೇಳಿದ ಉಪಾಯವೂ ಬಹಳ ಹರ ಸಾಹಸದ ಕೆಲಸವೆಂದು ನನಗೆ ಅನ್ನಿಸುತ್ತಿತ್ತು. ಯಾಕೆಂದರೆ ನೋಡಿದಾಗಲೆಲ್ಲ ಈ ಭೂಲೋಕದ ನಾನಾ ನೋವುಗಳನ್ನೂ, ಸಾಮಾಜಿಕ ಸ್ಥಿತ್ಯಂತರಗಳನ್ನೂ ಬೇರೆ ಬೇರೆ ಕೋನಗಳಲ್ಲಿ ಚಿಂತಿಸಿಕೊಂಡು ಕೂತಿರುತ್ತಿದ್ದ ದೇವನೂರು ಒಂದು ಸಣ್ಣ ಪ್ರಶ್ನೆಗೂ ಉತ್ತರ ಹೇಳಲು ಬಹಳ ಕಾಲವನ್ನು ತೆಗೆದುಕೊಂಡು ಅವರ ಯೋಚನಾ ಖಂಡಗಳ ನಡುವಿನ ಮೌನವನ್ನು ಹೇಗೆ ತುಂಬಿಸುವುದು ಎಂದು ನನಗೆ ಯೋಚನೆ ಶುರುವಾಗುತ್ತಿತ್ತು. ಮಹಾದೇವ ಅವರು ರಾಜ್ಯಮಟ್ಟದ ಪ್ರಾದೇಶಿಕ ಪಕ್ಷವೊಂದರ ಅಧ್ಯಕ್ಷರೂ ಆಗಿರುವುದರಿಂದ ಅವರು ಬಹುತೇಕ ಕಾಲ ಚಿಂತಿಸುವುದರಲ್ಲೂ, ಏನು ಭಾಷಣ ಮಾಡುವುದೆಂದು ಯೋಚಿಸುವುದರಲ್ಲೂ ಹಾಗೂ ಪಕ್ಷದ ಕಾರ್ಯಕರ್ತರು ಹೊರತರುವ ಭಿತ್ತಿಪತ್ರ, ಕರಪತ್ರ, ಪ್ರಣಾಳಿಕೆ ಇತ್ಯಾದಿಗಳ ಕರಡುಪ್ರತಿಗಳನ್ನು ಸರಿಪಡಿಸುವುದರಲ್ಲೂ ವ್ಯಯವಾಗುತ್ತಿತ್ತು. ಹಾಗಾಗಿ ಅವರನ್ನು ನಾನು ಮಾತನಾಡಿಸಲು ಹೋದರೆ ಅವರ ಕಾಲ ನನ್ನ ಕೀಟಲೆಯ ಪ್ರಶ್ನೆಗಳಿಗೆ ಉತ್ತರ ಹೇಳುವುದರಲ್ಲಿ ಕಳೆದು ಹೋಗಬಾರದು ಎಂಬ ಹೆದರಿಕೆಯೂ ನನಗಿತ್ತು.

ಆದರೂ ಧೈರ್ಯಮಾಡಿ ಒಂದುದಿನ ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ಅವರಿಗೆ ಪೋನ್ ಮಾಡಿ ‘ಮಾದೇವ ಮಾಮ. ಈವತ್ತು ಸಾಯಂಕಾಲ ಕುಕ್ಕರಹಳ್ಳಿ ಕೆರೆದಂಡೆಯಲ್ಲಿ ವಾಕ್ ಹೋಗೋಣವಾ’ ಎಂದು ಕೇಳಿ ಬಿಟ್ಟೆ. ನನ್ನ ಪ್ರಶ್ನೆಯ ಹಿಂದೆ ಯಾವುದೋ ತುಂಟ ಹುನ್ನಾರವಿರುವುದನ್ನು ಆ ಮಾತಿನಲ್ಲಿದ್ದ `ಮಾಮ’ ಎಂಬ ಪದದ ಪರಿಮಳದಿಂದಲೇ ಮನಗಂಡ ಮಾದೇವ `ಯಾಕೆ? ಏನು ಸಮಾಚಾರ?’ ಎಂದು ನಯವಾಗಿ ಗದರಿಸಿದರು. ಮಹಾದೇವ `ಏನು ಸಮಾಚಾರ?’ ಎಂದರೆ ಮೈಸೂರಿನ ಕಾಲು ಭಾಗ ಲೇಖಕರು, ಬರಹಗಾರರು, ಬುದ್ಧಿಜೀವಿಗಳು ಹೆದರಿಬಿಡುತ್ತಾರೆ. ನಾನೂ ಹಾಗೆ ಹೆದರಿದಂತೆ ನಟಿಸಿ `ಇಲ್ಲ ಮಾಮ ಈ ವಾರದ ಲೇಖನ ಬರೆಯಲು ನೀವೇ ನನಗೆ ಕಥಾನಾಯಕ. ನೀವೇ ನನ್ನನ್ನು ಕಾಪಾಡಬೇಕು, ಮಹಾರಾಜರ ಕಥೆಗಳನ್ನೂ, ಮಹಾಕವಿಗಳ ಕಥೆಗಳನ್ನೂ ಕೇಳಿ ಓದುಗರು ಬೋರ್ ಹೊಡೆಸಿಕೊಂಡಿದ್ದಾರೆ’ ಎಂದು ಹೇಳಿದೆ.

More

‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ..

ಕೃಪೆ : ಗಲ್ಫ್ ಕನ್ನಡಿಗ

ಬೆಂಗಳೂರು, ಮಾ. ೨೦: ಗೋಹತ್ಯೆ ನಿಷೇಧ ಮಸೂದೆ ಜಾರಿಯ ಹಿಂದೆ ಸಂಘವಾರದ ‘ನರಹತ್ಯೆ’ಯ ಗುಪ್ತ ಕಾರ್ಯ ಸೂಚಿ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾಹಿತಿ ದೇವನೂರು ಮಹಾದೇವ, ಗೋವಿನ ಸಗಣಿ-ಗಂಜಳ ಔಷಧಿಯಾದರೆ ಗೋಮಾಂಸ ಔಷಧಿಯಾಗುವುದಿಲ್ಲವೇಕೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಶನಿವಾರ ನಗರದ ಗಾಂಧಿ ಭವನದಲ್ಲಿ ಡಾ.ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ ಆಯೋಜಿಸಿದ್ದ ಲೋಹಿಯಾ ಜನ್ಮ ಶತಾಬ್ದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಹಾರ ಸಂಸ್ಕೃತಿಯ ಅರಿವಿಲ್ಲದ ಅವಿವೇಕಿ ಸರಕಾರ ಗೋಹತ್ಯೆ ನಿಷೇಧಕ್ಕೆ ಮುಂದಾಗಿದೆ. ಇದು ಅನಾಗರೀಕ ಕೆಲಸ ಎಂದು ಕಿಡಿಕಾರಿದರು.

ಬರಲಿರುವ ದಿನಗಳಲ್ಲಿ ಗೋಮಾಂಸದ ಖಾದ್ಯಗಳನ್ನು ತಯಾರಿಸಿ ಸಾರ್ವಜನಿಕವಾಗಿ ತಿನ್ನಬೇಕು. ಈ ಖಾದ್ಯಗಳನ್ನು ಮಾರಾಟ ಮಾಡಬೇಕು ಎಂದು ಹೇಳಿದ ದೇವನೂರು, ಗೋಹತ್ಯೆ ನಿಷೇಧ ಮಸೂದೆಯನ್ನು ವಿರೋಧಿಸಿ ದಲಿತ, ರೈತ ಮತ್ತು ಸಮಾಜವಾದಿಗಳೆಲ್ಲ ಒಗ್ಗೂಡಿ ರಾಜ್ಯಾದ್ಯಂತ ಉಗ್ರ ಸ್ವರೂಪದ ಹೋರಾಟ ರೂಪಿಸಬೇಕು ಎಂದು ಇದೇ ಸಂದರ್ಭದಲ್ಲಿ ಕರೆ ನೀಡಿದರು.

More

ಹಾಗಾದರೆ ಧರ್ಮ ಎಂದರೇನು?

ಕೃಪೆ: ವಾರ್ತಾ ಭಾರತಿ

ಬ್ರಾಹ್ಮಣರಿಗೆ ‘ಕರುಣೆ’ಯ ದೀಕ್ಷೆ ನೀಡಿ’: ಪೇಜಾವರರಿಗೆ ದೇವನೂರು ಮಹಾದೇವ ಮನವಿ

ಮೈಸೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮತ್ತು ಡಾ. ಬಾಬು ಜಗಜ್ಜೀವನರಾಂ ಅಧ್ಯಯನ, ಸಂಶೋಧನ ಹಾಗೂ ವಿಸ್ತರಣ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಮೈಸೂರಿನಲ್ಲಿ ಏರ್ಪಡಿಸಲಾಗಿದ್ದ ‘ವೈಷ್ಣವ ದೀಕ್ಷೆ ಪೂರ್ವಾಪರ’: ಒಂದು ಸಂವಾದ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ದೇವನೂರು ಮಹಾದೇವ ಅವರ ಲಿಖಿತ ಭಾಷಣ.

ಕುವೆಂಪು ಅವರ ಸಂದರ್ಶನವೊಂದರ ದೃಶ್ಯ ಈಗಲೂ ನನ್ನ ಕಣ್ಣ ಮುಂದೆ ಬರುತ್ತದೆ. ಶ್ರೀಕೃಷ್ಣ ಆಲನಹಳ್ಳಿ ಕುವೆಂಪು ಅವರಿಗೆ ಒಂದು ಪ್ರಶ್ನೆ ಕೇಳಿದರು-‘ಮಾಧ್ವ ಸಿದ್ಧಾಂತ ನೀಚ ಸಿದ್ಧಾಂತವೇ ಸರ್?’ ಅಂತ. ಅದಕ್ಕೆ ಕುವೆಂಪು ‘‘ನೀಚ? ಪರಮ ನೀಚ’’ ಅಂದರು. ಆಲನಹಳ್ಳಿ ನಕ್ಕೂ ನಕ್ಕೂ ಆ ನಗುವಿನ ಅಲೆ ನನ್ನ ಕಿವಿಯಲ್ಲಿ ಇನ್ನೂ ಇದೆ. ಮಾಧ್ವ ಸಿದ್ಧಾಂತದ ಬಗ್ಗೆ ಕುವೆಂಪು ಅಸಹನೆ ಯನ್ನು-ಮನುಷ್ಯರಾದರೆ ಸಾಕು ಎಂದು- ಅರ್ಥಮಾಡಿಕೊಳ್ಳಬಹುದು. ಮಧ್ವ ಸಿದ್ಧಾಂತದ ನಿತ್ಯ ಮುಕ್ತ, ನಿತ್ಯ ಸಂಸಾರಿ, ನಿತ್ಯ ನಾರಕಿ- ಈ ದೃಷ್ಟಿಕೋನ ಈ ಜಗತ್ತು, ಮನುಷ್ಯ ಬದಲಾಗುವುದಿಲ್ಲ.

ಎಲ್ಲವೂ ನಿತ್ಯ, ಅಂದರೆ ಶಾಶ್ವತ ಎಂದು ಸಮಾಜವನ್ನು ಜಡಗೊಳಿಸಿ ಚಲನರಹಿತ ಮಾಡಿ ನರಕವನ್ನೇ-ತಾರತಮ್ಯವನ್ನೇ ಈಗ ಪೇಜಾವರ ಶ್ರೀಗಳು ದಲಿತರಿಗೆ ವೈಷ್ಣವ ದೀಕ್ಷೆ ಕೊಡಲು ಹೊರಟಿದ್ದಾರೆ. ಈಗಾಗಲೇ ವೈಷ್ಣವ ದೀಕ್ಷೆ ಪಡೆದ ಅನೇಕ ದಲಿತ ದಾಸ ಒಕ್ಕಲುಗಳು ಇವೆ. ಶಂಖ-ಜಾಗಟೆಯನ್ನು ಪ್ರತ್ಯೇಕವಾಗಿ ಮಡಿಯಾಗಿ ಇಟ್ಟುಕೊಂಡು, ಆ ಇಟ್ಟಿರುವ ಜಾಗಕ್ಕೆ ಉಳಿದವರಿಗೆ ಪ್ರವೇಶ ಕೊಡದೆ, ದಾಸ ಒಕ್ಕಲುಗಳಲ್ಲೇ ಮದುವೆಗೆ ಹೆಣ್ಣು ಗಂಡು ಹುಡುಕುತ್ತಿವೆ. ಇದು ಭೇದಕ್ಕೆ ಕಾರಣವಾಗಿರ ಬಹುದೇ ಹೊರತು ಐಕ್ಯಕ್ಕೆ ಅಲ್ಲ.

ಇಂಥ ಕಡೆ ವಿಶ್ವೇಶ ತೀರ್ಥರು ಹುಟ್ಟಿದ್ದಾರೆ.ಈ ಸಿದ್ಧಾಂತದ ಮಠಕ್ಕೆ ಶ್ರೀಗಳಾಗಿದ್ದಾರೆ. ಆದರೆ ಚಲನೆ ಯನ್ನು ಬಯಸುವಂತೆ ಕಾಣುತ್ತಾರೆ. ಹಾಗಾಗಿ ತನ್ನ ಸಿದ್ಧಾಂತದ ಚೌಕಟ್ಟನ್ನು ಮೀರಲು-ಇವರು ಒದ್ದಾಡುತ್ತಿರುವಂತೆ ಕಾಣಿಸು ತ್ತಿದೆ. ಈ ಒದ್ದಾಟ, ಬಲೆಗೆ ಸಿಕ್ಕಿಕೊಂಡು ಕೈಕಾಲು ಬಡಿಯುತ್ತಿರುವ ಒಂದು ಗುಬ್ಬಚ್ಚಿಯ ಒದ್ದಾಟದಂತೆ ಕಾಣಿಸುತ್ತದೆ. ಇದನ್ನು ನೋಡಿದಾಗ ಇವರು ಅಲ್ಲಿರಬೇಕಾದವರಲ್ಲ, ನಮ್ಮ ಜೊತೆ ಇರಬೇಕಾದವರು ಅಂತ ಒಂದೊಂದು ಸಲ ಅನ್ನಿಸುತ್ತದೆ. ಆದರೆ ಇವರ ಒದ್ದಾಟವು ಆಳವಾದ ಧಾರ್ಮಿಕತೆಯಿಂದ ಬಂದುದೇ? ಅಂತರಂಗದ್ದೇ? ಎಂದು ಪ್ರಶ್ನಿಸಿಕೊಂಡಾಗ-ಧೈರ್ಯವಾಗಿ ಹೌದು ಎಂದು ಹೇಳಲು ಕಷ್ಟವಾಗುತ್ತದೆ.

More

ದೇವನೂರು ಕೇಳುತ್ತಾರೆ: ನಾಚಿಕೆ, ಸಾಕ್ಷಿಪ್ರಜ್ಞೆ ಎಲ್ಲಿ ಗಿರವಿಗೆ ಇಟ್ಟಿದ್ದಾರೆ?

ಕಡಿದಾಳು ಶಾಮಣ್ಣ ನವರ ಆ ದಶಕ ಕೃತಿ ಬಿಡುಗಡೆ ಸಮಾರಂಭದಲ್ಲಿ ದೇವನೂರು ಮಹಾದೇವ ಅವರ ಮಾತು ಇಲ್ಲಿದೆ. ಇದನ್ನು ಒದಗಿಸಿದ ಸುಬ್ರಮಣಿ ಅವರಿಗೆ ವಂದನೆಗಳು.

– ದೇವನೂರ ಮಹಾದೇವ

ನನಗೆ ಆಶ್ಚರ್ಯ ಕಾದಿತ್ತು -ನಾನು ಮನೆಗೆ ಬಂದಾಕ್ಷಣ ನನ್ನ ಪತ್ನಿ ಸುಮಿತ್ರಾ ”ಶಾಮಣ್ಣ ಫೋನ್ ಮಾಡಿದ್ದರು. ಅವರ ಪುಸ್ತಕದ ಬಿಡುಗಡೆ ಅಂತೆ. ಹೋಗಿದ್ದು ಬನ್ನಿ” ಅಂದರು. ನಾನು ಯಾವುದಾರೂ ಭಾಷಣಕ್ಕೆ ಒಪ್ಪಿ ಬಿಪಿ, ಷುಗರ್ ಹೆಚ್ಚಿಸಿಕೊಂಡು ನರಳುವುದನ್ನು ಕಣ್ಣಾರೆ ಕಾಣುತ್ತ ”ಯಾಕಾರು ಒಪ್ಪಿಕೊಳ್ಳುತ್ತಿ” ಅನ್ನುತ್ತಿದ್ದ ಸುಮಿತ್ರಾ, ನಮ್ಮ 35 ವರ್ಷಗಳ ದಾಂಪತ್ಯದ ಸವರ್ೀಸ್ನಲ್ಲಿ ” ಹೋಗಿದ್ದು ಬನ್ನಿ” ಎಂದು ಹೇಳಿದ್ದು ಇದೇ ಪ್ರಪ್ರಥಮ. ಆಗ ನನಗೆ ಅನ್ನಿಸಿಬಿಟ್ಟಿತು- ಈ ಕಡಿದಾಳು ಶಾಮಣ್ಣ ತುಂಬಾ ಪ್ರಭಾವಶಾಲಿ ಅಂತ. ಅಸಹಾಯಕನಾಗಿ ದುಸರಾ ಮಾತಾಡದೆ ಈಗ ಇಲ್ಲಿ ಬಂದು ನಿಂತಿದ್ದೇನೆ.

ಯಾವ ರೀತಿಯ ಪುಸ್ತಕ ಆಗುತ್ತದೆ ಇದು? ನಾನು ಅಂದುಕೊಂಡಿದ್ದೆ- ಕೆಲವು ಪತ್ರಗಳು, ಸಂದರ್ಶನ, ಪತ್ರಿಕಾ ವರದಿಗಳು ಸೇರಿ ಆಗುವ ಪುಸ್ತಕ ಪರಿಣಾಮಕಾರಿ ಆಗುವುದಿಲ್ಲವೇನೋ ಎಂಬ ಅನುಮಾನ ನನಗಿತ್ತು. ಇಲ್ಲೂ ನನಗೆ ಆಶ್ಚರ್ಯ ಕಾದಿತ್ತು. ಪುಸ್ತಕ ಓದಿದ ಮೇಲೆ ನನ್ನ ಅನಿಸಿಕೆ ಬುಡಮೇಲಾಯ್ತು. ಸರಳವಾಗಿ, ನೇರವಾಗಿ, ಸತ್ಯವಾಗಿ ಆ ದಶಕ ನನ್ನ ಕಣ್ಮುಂದೆ ಬಂತು. ಬಹುಶಃ ಇದಕ್ಕೆ ಕಾರಣ-ಇವು ಅಂತಃಕರಣದ ಸ್ಪಂದನಗಳಾಗಿದ್ದು ಇವು ಪ್ರಾಮಾಣಿಕತೆ ನಿಸ್ವಾರ್ಥತೆಯಿಂದ ಕೂಡಿರುವುದೇ ಕಾರಣವಾಗಿರಬಹುದು. ಮುಂದೆ-‘ರೈತರ ಗಾಂಧಿ ಕಂಬಿಕಿತ್ತ ಪ್ರಸಂಗ, ಚಂದ್ರಗುತ್ತಿ ಜಾತಿ ಕ್ರೌರ್ಯ, ಮಾರಮ್ಮನಿಗೆ ನೀರು ಕೊಡದ ಪ್ರಸಂಗ’- ಈ ವರದಿಗಳು ತಮ್ಮ ವರದಿತನವನ್ನು ಮೀರಿಕೊಂಡು ಉತ್ತಮ ಬರವಣಿಗೆಗೆ ಮಾದರಿಗಳಾಗಿ ನಿಲ್ಲುತ್ತವೆ.

ಒಂದು ದೃಶ್ಯ ಸದಾ ನನಗೆ ನೆನಪಾಗುತ್ತದೆ- ಶಾಮಣ್ಣನವರನ್ನು ರೈತಸಂಘದ ರಾಜ್ಯ ಸಮಿತಿಯಿಂದ ಹೊರಹಾಕಲಾಗಿತ್ತು. ಯಾವುದೋ ಒಂದು ಸಭೆ. ಸ್ಥಳ, ಸಂದರ್ಭ ಮರೆತುಬಿಟ್ಟಿದ್ದೇನೆ. ರಾತ್ರಿ. ಶಾಮಣ್ಣನವರು ತಮ್ಮ ಚೀಲವನ್ನು ತಲೆಗಿಟ್ಟ್ತುಕೊಂಡು ಶ್ರೀಕೃಷ್ಣ ಪರಮಾತ್ಮನು ದನ ಕಾಯುತ್ತ ಒಂದು ಮಂಡಿ ಎತ್ತರಿಸಿ ಅದರ  ಮೇಲೆ ಇನ್ನೊಂದು ಕಾಲಿಟ್ಟು ಮಲಗಿದ ಭಂಗಿಯಲ್ಲಿ ಇದ್ದಾರೆ. ಅವರ ಒಂದು ಕೈ ಕ್ಯಾಮೆರಾ ಹಿಡಿದಿದೆ. ಅವರ ಕಣ್ಣುಗಳು ಮುಚ್ಚಿವೆ. ಆದರೆ ಅವರಿಗೆ ನಿದ್ರೆ ಬಂದಿಲ್ಲ. ಅವರ ತಲೆ ಒಂದು ಕ್ಷಣವೂ ನಿಂತ ಕಡೆ ನಿಲ್ಲುತ್ತಿಲ್ಲ. ಎಡದಿಂದ ಬಲಕ್ಕೆ ಹೊರಳುತ್ತಿತ್ತು. ಬಲದಿಂದ ಎಡಕ್ಕೆ ಹೊರಳುತ್ತಿತ್ತು. ನಾನು ಅದನ್ನು ನೋಡುವುದು, ನೋಡುವುದಕ್ಕೆ ಕಷ್ಟವಾಗೊ ಅಥವಾ ನಿದ್ದೆ ಎಳೆಯುತ್ತಿದದ್ದುರಿಂದಲೋ ಕಣ್ಣುಮುಚ್ಚುತ್ತಿದ್ದೆ. ಕಣ್ಣುಮುಚ್ಚಿದರೂ ಕಷ್ಟವಾಗಿ ಕಣ್ಣು ತೆರೆಯುತ್ತಿದ್ದೆ. ಬಹುಶಃ ಬೆಳಗಿನ ಜಾವದವರೆಗೂ ಹೀಗೆ ಜರುಗಿದೆ.

More

ದೇವನೂರರನ್ನ ನೋಡಬೇಕು ಅಂದಿದ್ಯಲ್ಲ, ಸಂಜೆ ಹೋಗೋಣ…

-ರವಿ ಅಜ್ಜೀಪುರ

ನದಿಪ್ರೀತಿ

dev1

ನನಗೆ ಇನ್ನೂ ಚೆನ್ನಾಗಿ ನೆನಪಿದೆ.

ದೇವನೂರು ಮಹಾದೇವರನ್ನ ನಾನು ಮೊದಲ ಸಲ ನೋಡಿದ್ದು. ಮಹಾರಾಜ ಕಾಲೇಜಿನಲ್ಲಿ ಓದುವಾಗ ನನ್ನ ಗುರುಗಳೂ ಆತ್ಮೀಯರೂ ಆದ ಮೈಸೂರು ಲತಾ ಮೇಡಮ್ ಇದ್ದರು. ನನ್ನಲ್ಲೇನಾದ್ರೂ ಚೂರು ಪಾರು ಕವಿತೆಯ ಗಂಧ ಇದೆ ಅಂತ ಆದರೆ ಅದಕ್ಕೆ ಕಾರಣ ಲತಾ ಅವರೇ. ‘ಬರೀತಾ ಇರು. ನಿಲ್ಲಿಸಬೇಡ’ ಅಂತ ಬೆನ್ನುತಟ್ಟಿದವರೂ ಅವರೇ.

ಒಮ್ಮೆ ದೆಹಲಿಯ ಪೊಯಿಟ್ರಿ ಸೊಸೈಟಿ ಆಫ್ ಇಂಡಿಯಾದವರು ಪೊಯಿಟ್ರಿ ವರ್ಕ್ ಶಾಪ್ ಅಂತ ಮಾಡಿದ್ರು. ಐದು ದಿನಾನೋ ಏನೋ ಇರಬೇಕು ನೆನಪಿಲ್ಲ. ಎನ್ ಸಿ ಇ ಆರ್ ಟಿ ಕ್ಯಾಂಪಸ್ ನಲ್ಲಿ. ಅಲ್ಲಿನ ಮಲಯಾಳಂ ಹುಡುಗೀರ ಸೌಂದರ್ಯಕ್ಕೆ ಫಿದಾ ಆಗಿದ್ದು ಆವಾಗಲೇ. ಎನ್ ಸಿ ಇ ಆರ್ ಟಿ ಯಲ್ಲಿ ಇಂಗ್ಲೀಷ್ ರೀಡರ್ ಆಗಿದ್ದ ಎನ್ ಎಸ್ ರಘುನಾಥ್ ಆ ಶಿಬಿರದ ಸಂಚಾಲಕರಾಗಿದ್ರು. ಅದೊಂದು ಮರೆಯಲಾರದ ವರ್ಕ್ ಶಾಪ್. ಅಲ್ಲಿ ಭಾಗವಹಿಸಿದ್ದ ತುಂಬಾ ಜನ ಗೆಳೆಯ ಗೆಳತಿಯರು ಇವತ್ತಿಗೂ ಸಂಪರ್ಕದಲ್ಲಿದ್ದಾರೆ. ಬಹುತೇಕರು ಜರ್ನಲಿಸ್ಟ್ ಗಳೇ.

ಆ ವರ್ಕ್ ಶಾಪ್ ನಿಂದ ಬಂದ ಮೇಲೆ ನನ್ನ ಕವನದ ಖದರೇ ಬದಲಾಗಿ ಹೋಯಿತು. ಅದನ್ನು ಗಮನಿಸಿದ ಲತಾ ಅವರು ‘ಪರವಾಗಿಲ್ಲ ಕಣೋ ವರ್ಕ್ ಶಾಪ್ ಗೆ ಹೋಗಿದ್ದೂ ಸಾರ್ಥಕ ಆಯ್ತು. ನಿನ್ನ ಕವಿತೆಯಲ್ಲಿ ಬದಲಾವಣೆ ಆಗಿದೆ’ ಅಂದಿದ್ದರು. ಚಂಪಾ, ಎಲ್ ಬಸವರಾಜು, ಜಿ ಹೆಚ್ ನಾಯಕ್, ಪ್ರಭುಶಂಕರ್, ವಿಜಯಾ ದಬ್ಬೆ ಮುಂತಾದವರನ್ನೆಲ್ಲ ನೋಡಿದ್ದೂ ಅಲ್ಲೇ. ಅಲ್ಲಿಂದ ಬಂದ ಮೇಲೆ ಕಾಲೇಜಿನ ಕಾವ್ಯವಾಚನ ಸ್ಪರ್ಧೆ ಯಲ್ಲಿ ನನಗೆ ಮೊದಲ ಬಹುಮಾನ ಬಂತು.

More

‘ಒಡಲಾಳ’ವನ್ನು ಮೊದಲ ಬಾರಿಗೆ ಓದಿದಾಗ ನಾನು ಚಿಕ್ಕವನು

-ಎಸ್ ಮಂಜುನಾಥ್

ತಮ್ಮ ಜೀವಯಾನ ಕೃತಿಗೆ ಬರೆದ ಮಾತುಗಳಿಂದ ಆಯ್ದದ್ದು

ಸಾಮಾಜಿಕವಾಗಿ ದಲಿತರದವರ ಮಾತು ಬಂತು. ಶ್ರೀ ದೇವನೂರು ಮಹಾದೇವ ಅವರ ಕೃತಿ ‘ಒಡಲಾಳ’ವನ್ನು ಮೊದಲ ಬಾರಿಗೆ ಓದಿದಾಗ ನಾನು ಚಿಕ್ಕವನು-20ವರ್ಷ ವಯಸ್ಸು. ಆಗಲೂ ನನಗೆ ಅದು ಅನುಭವದಿಂದ ಬೆಚ್ಚಿಸಲಿಲ್ಲ. ನನಗೂ ಅಂಥದೊಂದು ಬರೆಯಲಿಕ್ಕಿದೆ ಎಂಬಂತೆ ಆಪ್ತವಾಯಿತು. ಆದರೆ ಆಗಲೇ ನಾನು ನನ್ನ ಮನಸ್ಸಿನೊಳಗಿನದನ್ನು ಬರೆದುಬಿಡಬಹುದಾದಷ್ಟು ಕಲಾವಂತಿಕೆಯನ್ನು ಪಡೆದವನಾಗಿರಲಿಲ್ಲವೆಂದು ಮೊದಲೇ ತಿಳಿಸಿದ್ದೇನೆ. ಅಂದರೆ ಈಗ ಕವಿತೆಯಲ್ಲಿ ಅಂಥ ಕೃತಿಯನ್ನು ಬರೆದುಬಿಟ್ಟಿದ್ದೇನೆ ಎಂದೇನು ನಾನು ಸೂಚಿಸುವುದಿಲ್ಲ. ಆದರೆ ಈ ಕವಿತೆಯನ್ನು ಆಲಿಸಿದ ಕೆಲ ಮಿತ್ರರು ‘ಒಡಲಾಳ’ವನ್ನು ನೆನಪಿಸಿಕೊಂಡುದು ನನಗೆ ಅರ್ಥಪೂರ್ಣವೆನಿಸಿದೆ. ನಾನು ಬರೆದದ್ದು ಕನ್ನಡದ ಒಳಗೆ ಹಾಗೆ ಸೇರಿಸಿಕೊಳ್ಳಬೇಕೆಂಬುದು ನನ್ನ ಹೆಬ್ಬಯಕೆಯಾಗಿದೆ

ಪ್ರಸನ್ನ ಕಂಡ ಜಂಗಮ ಮತ್ತು ಸ್ಥಾವರ

Previous Older Entries

%d bloggers like this: