ಇತಿಹಾಸ ಪುಟಗಳನ್ನು ತೆರೆದುನೋಡಲು ನಿಮ್ಮ ನೆರವು ಬೇಕು!

-ಶ್ರೀನಿಧಿ ಟಿ.ಜಿ

ಮೈಸೂರು ಸಂಸ್ಥಾನದ ಹೆಸರಾಂತ ಅರಸರಲ್ಲೊಬ್ಬರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲಕ್ಕೆ ಸಂಬಂಧಿಸಿದ ಐತಿಹಾಸಿಕ ಕಾದಂಬರಿ ‘ಶ್ರೀಕೃಷ್ಣ ಭೂಪಾಲ’. ಮಾ. ನಾ. ಚೌಡಪ್ಪ ಎಂಬ ಮಹನೀಯರು ಬರೆದ ಈ ಕೃತಿ ೧೯೫೮ರಲ್ಲಿ ಪ್ರಕಟವಾಗಿತ್ತು. ಈ ಕಾದಂಬರಿಯಲ್ಲಿ ಕರೂರು ಶ್ರೀನಿವಾಸಾಚಾರ್ಯರೆಂಬ ವಿದ್ವಾಂಸರ ಪ್ರಸ್ತಾಪ ಬರುತ್ತದೆ.

ಖಾಸಾ ಚಾಮರಾಜ ಒಡೆಯರ ನಿಧನಾನಂತರ ಯದುವಂಶದ ರಕ್ಷಣೆಯ ಜವಾಬ್ದಾರಿ ವಹಿಸಿಕೊಂಡು ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಅಧಿಕಾರ ಮರಳಿಸಿಗಲು ಪ್ರಮುಖ ಕಾರಣರಾಗಿದ್ದವರು ರಾಜಮಾತೆ ವಾಣೀವಿಲಾಸ ಸನ್ನಿಧಾನ. ರಾಜಮಾತೆಯವರ ಪ್ರಯತ್ನದಲ್ಲಿ ಜೊತೆಯಾಗಿದ್ದು ಪ್ರಧಾನಿಯಾಗಿ ಅವರ ಬೆಂಬಲಕ್ಕೆ ನಿಂತವರು ತಿರುಮಲರಾಯರು.

ಕರೂರಿನ ಆಡಳಿತ ತಿರುಮಲರಾಯರ ಮೇಲ್ವಿಚಾರಣೆಯಲ್ಲಿದ್ದಾಗ ಶ್ರೀನಿವಾಸಾಚಾರ್ಯರು ಅವರ ಮನೆಯಲ್ಲಿ ದೇವತಾರ್ಚನೆ ಮಾಡುತ್ತಿದ್ದರಂತೆ. ನಂತರದ ದಿನಗಳಲ್ಲಿ ಶ್ರೀರಂಗಪಟ್ಟಣಕ್ಕೆ ಬಂದ ಶ್ರೀನಿವಾಸಾಚಾರ್ಯರು ಟಿಪ್ಪುವಿನ ಸಮೀಪದಲ್ಲಿದ್ದುಕೊಂಡೇ ಮೈಸೂರು ರಾಜಮನೆತನದ ಹಿತರಕ್ಷಣೆಗಾಗಿ ಶ್ರಮಿಸಿದರು ಎಂದು ‘ಶ್ರೀಕೃಷ್ಣ ಭೂಪಾಲ’ ಕಾದಂಬರಿ ಹೇಳುತ್ತದೆ.
More

ನುಡಿ ಪುಸ್ತಕ :ಪುಸ್ತಕ ಬಿಡುಗಡೆ

ಜೋಗಿ ಮಾತು

स्कीम, स्काम, मार्केट और हम…

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-34

एक रहन ईर , एक रहन भीर

एक रहन फ़ते और एक रहन हम !!……..

Once there was Eer, Once there was Bheer

Once there was phatte and Once there was Me !!  . . . .

ಕಳೆದ ವಾರ ಹೌಸಿಂಗ್ ಲೋನ್ ಸ್ಕಾಮಿನ ಹೆಸರಿನಲ್ಲಿ ಮಾರುಕಟ್ಟೆ ಬಿತ್ತು. ಅದರ ಮೊದಲಿನ ವಾರ ೨ಜಿ ಸ್ಕಾಮಿನಲ್ಲಿ ಮಾರುಕಟ್ಟೆ ಬಿದ್ದಿತ್ತು. ೨೧,೦೦೦ ಕ್ಕಿಂತ ಮೀರಿ ಸೂಚ್ಯಂಕ ದಾಟುವ ಕನಸು ನೀಡಿದ ಗೂಳಿ ಪಂಚಾಂಗದ ಜೋಯಿಷರು ಸುಮ್ಮನಾಗಿದ್ದಾರೆ. ಈಗ ೧೭೦೦೦ ಕ್ಕೆ ಇಳಿಯುತ್ತದೆ ಈಗ ಮಾರಿಬಿಡಿ ಎಂದು ಹೇಳುವ ಕರಡಿ ಪಂಚಾಂಗದ ಜೋಯಿಷರು ತಮ್ಮ ವೋಲ್ಯೂಮ್ ಇಂಕ್ರೀಸ್ ಮಾಡಿದ್ದಾರೆ. ಇವುಗಳ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿ ಅಗತ್ಯವಿಲ್ಲ.

ದಿನಪತ್ರಿಕೆಗಳಲ್ಲಿ ದಿನಾ ಬರುತ್ತಿದೆ. ಚೆನ್ನಾಗಿ ನಡೆಯುತ್ತಿರುವ ಪಾರ್ಟಿಯನ್ನು ಹಾಳುಮಾಡಲು ಧುತ್ತೆಂದು ಎಲ್ಲಿಂದಲೋ ಅಚಾನಕ್ಕಾಗಿ ಪ್ರತ್ಯಕ್ಷವಾಗುವ ಈ ಸ್ಕಾಮು-ಗೀಮುಗಳು ಯಾವ ಫಂಡಮೆಂಟಲ್ ವಿಶ್ಲೇಷಣೆಯಲ್ಲೂ ಬರುವುದಿಲ್ಲ ಹಾಗೂ  ಯಾವ ಟೆಕ್ನಿಕಲ್ ಕುಂಡಲಿಗಳಲ್ಲೂ ಗೋಚರಿಸಿರುವುದಿಲ್ಲ. ಹೂಡಿಕೆದಾರರಾದ ನಾವು ಇವನ್ನು ಹೆಚ್ಚಾಗಿ ನಿರೀಕ್ಷಿಸಿಯೇ ಇರುವುದಿಲ್ಲ. ಆದರೆ ಏರುತ್ತಿರುವ ಶೇರುಗಳಲ್ಲಿ ಹಣ ಹೂಡಿ ದುಡ್ಡು ಕಳೆದುಕೊಳ್ಳುವುದಂತೂ ಸತ್ಯ. ಇದು ಶೇರು ಹೂಡಿಕೆಯಲ್ಲಿ ಇರುವ ರಿಸ್ಕ್‌ಗಳ ಒಂದು ಅತ್ಯಂತ ಮಹತ್ತರವಾದ ಮಜಲು.

ಇಂತಹ ರಿಸ್ಕ್‌ಗಳಿಗೆ ಏನು ಮಾಡೋಣ? ಭಾರತೀಯ ಮಾರುಕಟ್ಟೆಯಲ್ಲಿ ಹರ್ಷದ್ ಮೆಹ್ತಾ ಅತಿದೊಡ್ಡ ವಂಚಕ ಅಥವ ಸ್ಕಾಮ್‌ಸ್ಟರ್ ಎಂಬ ಮಾತನ್ನು ನಾನು ಒಪ್ಪುವುದೇ ಇಲ್ಲ – ಅದು ಯಾಕೆಂದರೆ ಆತ ಸಿಕ್ಕಿ ಬಿದ್ದಿದ್ದಾನೆ! ಆತನಿಂದಲೂ ದೊಡ್ಡ ಸೈಜಿನ ತಿಮಿಂಗಿಲಗಳೂ ಇನ್ನೂ ಸಿಕ್ಕಿ ಬೀಳದೆ ಮಾರುಕಟ್ಟೆಯಲ್ಲಿ ಹಾಯಾಗಿ ಈಜಾಡುತ್ತಲೇ ಇದ್ದಾವೆ. ಮಾರುಕಟ್ಟೆಯಲ್ಲಿ ಹೀಗೆ ಸ್ಕಾಮುಗಳು ನಡೆಯುತ್ತಲೇ ಇರುತ್ತವೆ. ಸ್ಕೀಮುಗಳು ಇದ್ದಲ್ಲೆಲ್ಲಾ ಸ್ಕಾಮುಗಳೂ ಇರುತ್ತವೆ- ಸಮುದ್ರಗಳಿದ್ದಲ್ಲೆಲ್ಲಾ ಅಲೆಗಳಿದ್ದಂತೆ.
ಸ್ಕಾಮುಗಳಲ್ಲಿ ವಿಶೇಷವೇನೂ ಇಲ್ಲ. ಇದು ಕೇವಲ ಶೇರು ಮಾರುಕಟ್ಟೆಯಲ್ಲಿ ಅಥವ ಅತ್ಯಾಕರ್ಷಕ ವಿತ್ತೀಯ ಸ್ಕೀಮುಗಳಲ್ಲಿ ಮಾತ್ರ ಸ್ಪೆಶಲ್ ಆಗಿ ನಡೆಯುವಂತಹ ವಿಚಾರವೇನೂ ಅಲ್ಲ. ನಿಜವಾಗಿ ನೋಡುವುದಾದರೆ ಶೇರುಕಟ್ಟೆ ಸಮಾಜದ ಒಂದು ಅಂಗ- ಅದರ ಪ್ರತಿಫಲನ. ಹಾಗಾಗಿ ಇದರಲ್ಲಿ ಕೂಡಾ ನಮ್ಮ ಸಮಾಜ, ಸರಕಾರ, ರಾಜಕೀಯಗಳಲ್ಲಿ ಇರುವಂತೆಯೇ ಧೂರ್ತರಿದ್ದಾರೆ.

More

Speak up for every child’s right to education

ವಾರ್ತೆಗಳು..ಓದುತ್ತಿರುವವರು ಪಾಂಡುರಂಗ ರಾವ್

ಬಿ ವಿ ಪಾಂಡುರಂಗ ರಾವ್

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…

ಮುಂದೆ ಏನಾಗಬೇಕು ಅಂತಿದ್ದೀರಿ’ ಅನ್ನುವ ಪ್ರಶ್ನೆ ಒಗೆದಾಗ ಮದುವೆ ಆಗ್ಬೇಕು ಅಂತಿದ್ದೀನಿ ಅಂತ ಉತ್ತರ ಕೊಟ್ಟಿದ್ದು ದಾವಣಗೆರೆಯ ಚೇತನಾ ಮಾತ್ರ. ಬಹುಷಃ ಆಕೆಯನ್ನೊಬ್ಬಳನ್ನ ಬಿಟ್ಟರೆ ಇನ್ನೆಲ್ಲರ ಉತ್ತರ ಒಂದೇ- ರಿಪೋರ್ಟರ್.
ಬೆಂಗಳೂರು ವಿಶ್ವವಿದ್ಯಾಲಯದ ಎಂ ಸಿ ಜೆ ವಿಭಾಗದಲ್ಲಿ, ಎಲೆಕ್ಟ್ರಾನಿಕ್ ಮೀಡಿಯಾ ವಿಭಾಗದಲ್ಲಿ ಹುಬ್ಬಳ್ಳಿಯ ಐ ಎಂ ಆರ್ ಬಿ ಯಲ್ಲಿ, ಬೆಂಗಳೂರಿನ ಆಚಾರ್ಯ ಇನ್ಸ್ಟಿಟ್ಯೂಟ್ ನಲ್ಲಿ, ತುಮಕೂರಿನ ಸಿದ್ದಾರ್ಥ ಕಾಲೇಜಿನಲ್ಲಿ, ಮೈಸೂರಿನ ಮುಕ್ತ ವಿಶ್ವ ವಿದ್ಯಾಲಯದ ಕಾಂಟ್ಯಾಕ್ಟ್ ಕ್ಲಾಸ್ ಗಳಲ್ಲಿ, ವಿಜಾಪುರದ ಮಹಿಳಾ ವಿಶ್ವವಿದ್ಯಾಲಯದಲ್ಲಿ, ಹೀಗೆ ಹೋದಲ್ಲೆಲ್ಲಾ ಪ್ರಶ್ನೆ ಕೇಳಿದ್ದೇನೆ ಬಂದ ಉತ್ತರ -ರಿಪೋರ್ಟರ್.
ಈ ಅನುಭವ ಬರೀ ಯೂನಿವರ್ಸಿಟಿ ಕ್ಲಾಸ್ ರೂಮ್ ಗಳಲ್ಲಿ ಮಾತ್ರವಲ್ಲ ಗುಲ್ಬರ್ಗದ ಪತ್ರಿಕೋದ್ಯಮ ದಿನಾಚರಣೆಯಲ್ಲಿ ಸ್ತ್ರೀ ಜಾಗೃತಿ ನಡೆಸಿದ ಮೀಡಿಯಾ ವರ್ಕ್ ಶಾಪ್ ನಲ್ಲಿ, ನಮ್ಮ ನಮ್ಮ ನಡುವೆಯೇ ಜರುಗುವ ಖಾಸ್ ಬಾತ್ ಗಳಲ್ಲಿ
ಈ ಪ್ರಶ್ನೆ ಕೇಳಿದ್ದೇನೆ. ಬರುವ ಉತ್ತರ ಎಗೇನ್ ಅದೇ -ರಿಪೋರ್ಟರ್
ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಜಯಶ್ರೀ ಕಾಲಂ:ಇಷ್ಟ ಆಯ್ತು ಆ ಮಾತು…

@@ ಸುವರ್ಣ ವಾಹಿನಿಯ ಪ್ಯಾಟೆ ಮಂದಿ….! ಅನ್ನಪೂರ್ಣ ಅನ್ನುವ ಸ್ಪರ್ಧಿಗೆ  ಮನೆಗೆ ಹೋಗುವ ಮನಸ್ಸು ಉಂಟಾಗಿತ್ತು ಎಂದು ಕಾಣುತ್ತೆ .ಆಕೆ ತಮಗೆ ಕೊಟ್ಟ ಟಾಸ್ಕ್ ವಿಷಯಕ್ಕೆ ಸಂಬಂಧಪಟ್ಟಂತೆ ಸ್ವಲ್ಪ ಖ್ಯಾತೆ ತೆಗೆದಳು. ತನ್ನ ಗ್ರೂಪ್ ಜೊತೆ ಸಹಕಾರ ನೀಡಲಿಲ್ಲ. ಮೊದಲೇ ಇಂತಹ ಸಮಸ್ಯೆಗಳು ಇರುತ್ತವೆ ಎಂದು ತಿಳಿದಿದ್ದರೂ ಯಾವುದೋ  ಉತ್ಸಾಹದಲ್ಲಿ ಈ ಹೆಣ್ಣುಮಗಳು ಬಂದು ಬ್ಯಾಡಪ್ಪ ಈ ಕಾಡು ಎನ್ನುವ ಸ್ಥಿತಿಗೆ ತಲುಪಿಕೊಂಡು ಬಿಟ್ಟಿದ್ರು.  ಆಕೆಯನ್ನು ಎಲಿಮಿನೆಟ್ ಮಾಡಲಾಯಿತು .

ಕಡೆಯದಾಗಿ ಕಾರ್ಯಕ್ರಮದ ನಿರೂಪಕ ಅಕುಲ್ ಬಾಲಾಜಿ ಒಂದು ಮಾತು ಹೇಳಿದ್ರು, ನಿನ್ನ ಬದುಕಲ್ಲಿ ಯಾವುದೇ ಕಾರಣಕ್ಕೂ ಸಬೂಬು ಹೇಳಬೇಡ ನಿನ್ನ ಸೋಲಿಗೆ, ನೀನು ಸವಾಲನ್ನು ಎದುರಿಸದೆ ಇರುವ ಕಾರಣಕ್ಕೆ! ಅದು ನಿನ್ನ ಬೆಳವಣಿಗೆಗೆ ಒಳ್ಳೆಯ ಅಂಶವಲ್ಲ ( ಇದು ಅವರು ಹೇಳಿದ ಮಾತಿನ ಭಾವಾರ್ಥ ಅಷ್ಟೆ ) ಎಂದರು . ಎಷ್ಟೊಂದು ಸರಳ ಸತ್ಯ ಅಲ್ವ! ಈ ಅಂಶವು ಬದುಕಲ್ಲಿ ಅಳವಡಿಸಿಕೊಂಡರೆ… ! ತುಂಬಾ ಇಷ್ಟ ಆಯ್ತು ಅಕುಲ್ ನಿಮ್ಮ ಆ ಮಾತು ಸಚ್ಚಿ !

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಜಯಂತ್ ಕಾಯ್ಕಿಣಿ -ಈ ನಯನ ನೂತನ …

ಇಲ್ಲೂ ನೋಡಿ : invitations blog

ಸೂರಿ -11:ಕಣ್ಣುಗಳಲ್ಲಿ ನಿಧಾನವಾಗಿ ನೀರೂರುತ್ತಿತ್ತು

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 11

ತುಕ್ಕೋಜಿ ಒಮ್ಮೆ ಹಳೇಬೀಡು ಸುಂದರರಾಯರನ್ನೂ, ಮತ್ತೊಮ್ಮೆ ತನ್ನ ಹೊಲಿಗೆ ಯಂತ್ರದ ತುದಿಯಲ್ಲಿ ಮಲಗಿದ್ದ ಕೋಟನ್ನೂ ನೋಡಿದ. ಇದು ಸುಲಭಕ್ಕೆ ಬಗ್ಗುವ ಗಿರಾಕಿಯಲ್ಲ ಅನಿಸಿತು ತುಕ್ಕೋಜಿಗೆ. ಅತ್ಯಂತ ನಾಟಕೀಯವಾದ ಸಾವಧಾನದಿಂದ ಕೋಟನ್ನು ಕೈಗೆತ್ತಿಕೊಂಡು, ಅಷ್ಟೇ ನಾಟಕೀಯವಾದ ಗಂಭೀರತೆಯಿಂದ ಅದನ್ನು ತನ್ನ ಎದೆ ಮುಂದೆ ಹರಡಿ, ಇನ್ನೂ ನಾಟಕೀಯವಾದ ದನಿಯಲ್ಲಿ ’ಯಜಮಾನ್, ಇದುನ್ನ ಕೋಟೂಂತ ಯತ್ಲಗಿಂದ ಕರೀಬೇಕೂ ಅದುನ್ನೊನ್ಸರ್ತಿ ಹೇಳಿಬಿಡು.

(ತುಕ್ಕೋಜಿಯ ಭಾಷೆ ಒಮ್ಮೆಗೇ ಏಕವಚನಕ್ಕೆ ಇಳಿದಿದ್ದು ಹಳೇಬೀಡು ಸುಂದರರಾಯರ ಗಮನಕ್ಕೆ ಬರಲಿಲ್ಲ. ಅವರ ಗಮನವೆಲ್ಲಾ ಕೋಟಿನ ಮೇಲೇ ಇತ್ತು.) ಇದುನ್ನ ರಿಪೇರಿಗೆ ಅಂತ ವಪ್ಗೆಂಡ್ರೆ ಹೇಲ್ತಿನ್ನಾ ಕೆಲಸ ವಪ್ಗೆಂಡಂಗೆ. ಇಂಥಾ ನ್ನಾಕು ಕೆಲಸ ಹಿಡುದ್ರೆ ಅಂಗಡೀ ಬಾಗಿಲಾಕಿ ಹೆಣ್ತೀ ಮಕ್ಳಿಗೆ ವಿಷಾ ಕೊಡಬೇಕು. ಅಲ್ಲಾ ಯಾವ ಸೂಳಾಮಗನ ಕೈನಗೆ ಇದುನ್ನ ರಿಪೇರಿ ಮಾಡಕ್ಕಾಕ್ತತೆ? ಒಂದು ಗಟ್ಟಿ ಬಟ್ಟೆಯಿದ್ಯಾ? ಇಲ್ಲ.

ಒಂದು ಗಟ್ಟಿ ಹೊಲಿಗೆಯಿದ್ಯಾ? ಇಲ್ಲ. ಯಲ್ಲಿ ಮುಟ್ಟಿದ್ರೂ ಅಲ್ಲಿ ಪಿಸ್ದು ಕೈಗೆ ಬರಕ್ಕತ್ತಿದೆ. ನೋಡು’ ಅಂದವನೇ ಕೋಟನ್ನು ಮತ್ತೆ ಹೊಲಿಗೆ ಯಂತ್ರದ ಮೇಲೆ ಅಂಗತ್ತ ಮಲಗಿಸಿ, ಗೋವರ್ಧನಗಿರಿಯನ್ನು ಎತ್ತಿದ ಶ್ರೀಕೃಷ್ಣನ ತೆರದಿ ಕೋಟಿನ ಭುಜ ಪಿಸಿದ ಸಂದಿಯಲ್ಲಿ ತನ್ನ ಬಲಗೈನ ನಡು ಬೆರಳು ತೂರಿಸಿ ಸುಮ್ಮನೆ ಹಗೂರಕ್ಕೆ ಗೋವರ್ಧನಗಿರಿಯನ್ನು ಮೀಟಿದ. ಅದ್ಯಾವುದೋ ಮಾಯೆಯಿಂದೆಂಬಂತೆ ಕೋಟು ಈ ಕಡೆ ಸುಮಾರು ಮೊಣಕೈನವರೆಗೂ ಆಕಡೆ ಕಾಲರ್‌ವರೆಗೂ ಸಲೀಸಾಗಿ ಹರಿದು ಒಳಗಿದ್ದ ಗುಂಜು ಗುಂಜಾಗಿದ್ದ ಮಾಸಲು ಲೈನಿಂಗ್ ಬಟ್ಟೆ ಹೊರ ಚೆಲ್ಲಿಕೊಂಡಿತು.

More

Previous Older Entries

%d bloggers like this: