ಅಂಗೈಯಲ್ಲಿ ಮಾರುಕಟ್ಟೆ- ಮೊಬೈಲ್ ಟ್ರೇಡಿಂಗ್ !!

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-32

It is a myth that profits are higher in fast growing Industries. . John Kay

ಕ್ಷಿಪ್ರ ಪ್ರಗತಿಯ ಉದ್ಯಮಗಳಲ್ಲಿ ಲಾಭಾಂಶ ಜಾಸ್ತಿಯೆನ್ನುವುದು ಒಂದು ಮಿಥ್ಯೆ. . . . . . ಜಾನ್ ಕೇ.

ಎಂಬತ್ತರ ದಶಕ. ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ BFSc ಡಿಗ್ರಿ ಓದುತ್ತಿದ್ದ ಕಾಲ. ಅದು ಹೇಗೋ ಏನೋ, ನನಗೂ ನನ್ನ ಗೆಳೆಯ ನಾಗೇಂದ್ರನಿಗೂ ಈ ಶೇರು ಎಂಬ ಹುಚ್ಚು ಕುದುರೆಯ ಪರಿಚಯ ಮಾಡಿಕೊಳ್ಳಬೇಕು ಎಂಬ ಹುಚ್ಚು ಹತ್ತಿತು. ದಿನಾ ಪೇಪರಿನಲ್ಲಿ ಬರುತ್ತಿದ್ದ ಶೇರುಬಜಾರಿನ ಏರಿಳಿತದ ಬಗ್ಗೆ ಇನ್ನಿಲ್ಲದ ಕುತೂಹಲ ಹತ್ತಿತ್ತು. ಸರಿ. ಹೇಗೋ ಮಾಡಿ ಕಾಲೇಜಿನ ಒಂದಿಬ್ಬರು ಉಪನ್ಯಾಸಕರನ್ನು ಕಾಡಿಸಿ ಪೀಡಿಸಿ ಅದರ ಬಗ್ಗೆ ಪ್ರಾಥಮಿಕ ಕಲಿಯುವಿಕೆಯನ್ನು ಆರಂಭಿಸಿದೆವು.


ಆರಂಭದಲ್ಲಿ ಒಂದೆರಡು ಶೇರುಗಳನ್ನು ಆ ಗುರುಗಳ ಸಹಾಯದಿಂದಲೇ ಕೊಂಡೆವು. ನಾನು ಕೊಂಡ ಮೊದಲ ಶೇರು First Growth Fund of India ಆಗಿದ್ದರೆ ನಾಗೇಂದ್ರ ಕೊಂಡ ಮೊದಲ ಶೇರು Indian Hotels ಆಗಿತ್ತು. ಮ್ಯೂಚುವಲ್ ಫಂಡುಗಳು ಇನ್ನೂ UTI  ಮೂಲಕ ಸರಕಾರೀ ಕೈಯಲ್ಲೇ ಇದ್ದ ಆ ಕಾಲದಲ್ಲಿಯೂ ಈ FGF ಒಂದು ಮ್ಯೂಚುವಲ್ ಫಂಡಿನಂತೆಯೇ ಕೆಲಸ ಮಾಡುತ್ತಿತ್ತು.

ದಿನಾ ಅವುಗಳ ಬೆಲೆ ಮೇಲೆ ಹೋಗುವುದನ್ನು ಪೇಪರಿನಲ್ಲಿ ನೋಡುತ್ತಾ ಆನಂದಿಸುತ್ತಿದ್ದೆವು. ಕೆಳಕ್ಕೆ ಇಳಿದಾಗ ಗಾಬರಿಗೊಂಡು ನಿದ್ದೆ ಕೆಡುತ್ತಿದ್ದೆವು.
ಮೀನು ವ್ಯವಸಾಯಕ್ಕಿಂತ ಜಾಸ್ತಿ ನಡೆಯುತ್ತಿತ್ತು ನಮ್ಮ ಶೇರು ವ್ಯವಹಾರ. ಪರೀಕ್ಷಾ ಮುಂಚಿನ ದಿನಗಳಲ್ಲಿ ಜೋರಾಗಿ ನಡೆಯುತ್ತಿತ್ತು ನಮ್ಮ ಶೇರು ಅಧ್ಯಯನ. Feed conversion ratio ಬದಲು Price Earnings Ratio ಜಾಸ್ತಿ ಕರಗತವಾಗಿತ್ತು. ಒಮ್ಮೆ ನಾಗೇಂದ್ರ ಪರೀಕ್ಷೆಯೊಂದರಲ್ಲಿ ಮೀನಿನ BV (Book Value) ಎಂದು ಬರೆಯುವುದರ ಬದಲಾಗಿ PV (Peroxide Value) ಎಂದು ಬರೆದು ಬಂದಿದ್ದನಂತೆ. ಹೀಗೆ ಆಗಿತ್ತು ಶೇರು ಲೋಕಕ್ಕೆ ನಮ್ಮ ಆರಂಗೇಟ್ರಂ.

More

‘ಶಾಕುಂತಲ’ ಕೂಡಿಯಾಟಂ ಪ್ರದರ್ಶನ …

ಇಲ್ಲೂ ನೋಡಿ : invitations Blog

ಬಂದಿದೆ ಉದಯವಾಣಿ ವಿಶೇಷಾಂಕ …

ಉದಯವಾಣಿ ವಿಶೇಷಾಂಕ ಮಾರುಕಟ್ಟೆಗೆ ಬಂದಿದೆ .ತಂಜಾವೂರು ಕಲಾ ಶೈಲಿಯ ಕಲಾಕೃತಿಯ ಆಕರ್ಷಕ ಮುಖ ಪುಟದೊಂದಿಗೆ ಮುದ್ರಿತವಾಗಿರುವ ಈ ವಿಶೇಷಾಂಕದಲ್ಲಿ   ಲಕ್ಷ್ಮೀಶ ತೋಳ್ಪಾಡಿ , ನೇಮಿಚಂದ್ರ , ಪ್ರೊ .ಬಿ.ಎ.ವಿವೇಕ ರೈ  ಇವರುಗಳ ಲೇಖನಗಳು . ವಿನಾಯಕ ನಾಯಕ್ , ಕೆ.ಈ.ರಾಧಾಕೃಷ್ಣ , ಹಾಗು ವೀಣಾ ಬನ್ನಂಜೆ ಇವರುಗಳ ಮಥುರಾ ಯಾತ್ರೆಯ ನೆನಪುಗಳು ಬರಹ ರೂಪದಲ್ಲಿ  ಕಾಣಿಸಿಕೊಂಡಿದೆ.

ನಟಿ ,ನಿರ್ದೇಶಕಿ ದಿವಂಗತ ವೈಶಾಲಿ ಕಾಸರವಳ್ಳಿ ಯವರ ಬಗ್ಗೆ ಗಿರೀಶ್ ಕಾಸರವಳ್ಳಿ ಅವರ ಮನದಾಳದ ಮಾತುಗಳು ,   ಶಾರದಾ ನಾಯಕ್ , ಮನೋಹರ ಪ್ರಸಾದ್ , ನೀಲಾ.ಕೆ ಇವರುಗಳ ಕತೆಗಳು , ಜಿ.ಎಸ್. ನಾಗನಾಥ್ , ಸತೀಶ ಆಚಾರ್ಯ , ಶೈಲೇಶ್ ಉಜಿರೆ ಇವರುಗಳ ಕಾರ್ಟೂನ್ ಗಳು ,ಸಿನಿಮಾ ಹಿಂದಿನ ಬದುಕಿನ ಬಗ್ಗೆ ಯೋಗರಾಜ ಭಟ್ಟರ ಮಾತುಗಳು ಈ ವಿಶೇಷಾಂಕದಲ್ಲಿ ಕಾಣಿಸಿಕೊಂಡಿವೆ . ಎಸ್ .ಸುರೇಂದ್ರ ನಾಥ್ ಅವರ ಕಿರು ಕಾದಂಬರಿ ಸೇರಿದಂತೆ , ಯಜ್ಞ , ಆಸ್ಟ್ರೋ ಮೋಹನ್ , ಸಂತೋಷ್ ಪೈ , ಶಮಂತ್ ಪಾಟೀಲ್  ಕ್ಯಾಮರಾ ಸೆರೆ ಹಿಡಿದ ಚಿತ್ರಗಳು ಈ ವಿಶೇಷಾಂಕದ ಅಂದವನ್ನು ಹೆಚ್ಹಿಸಿದೆ.

ಉದಯವಾಣಿ ವಿಶೇಷಾಂಕವನ್ನು  ಇಲ್ಲಿ ಓದಿ

ಮೈಸೂರು ರಾಜರುಗಳಿಗೆ ಮಕ್ಕಳಿಗಿಂತ ಹೆಂಡತಿಯರೇ ಜಾಸ್ತಿ!

-ಡಾ. ಬಿ.ಆರ್ . ಸತ್ಯನಾರಾಯಣ

ನಂದೊಂದ್ಮಾತು

ಮೈಸೂರು ಅರಮನೆಯಲ್ಲಿ ಕಂಚಿನ ಚೂರ್ಣಿಕೆಯೊಂದಿದೆ. ಅದರ ೨೨ ಎಲೆಗಳ (ಪಟಗಳ) ಮೇಲೆ ಆರಂಭದ ಆದಿ ಯದುರಾಜನಿಂದ ಹಿಡಿದು ಮುಮ್ಮಡಿ ಕೃಷ್ಣರಾಜನವರೆಗೆ ಇಪ್ಪತ್ತೆರಡು ರಾಜರುಗಳ ಹೆಸರು, ಹುಟ್ಟಿದ ದಿನಾಂಕ, ಪಟ್ಟಕ್ಕೆ ಬಂದ ದಿನಾಂಕ, ಆಡಳಿತಾವಧಿ ಎಲ್ಲವನ್ನೂ ಹೇಳಲಾಗಿದೆ. ಜೊತೆಗೆ ಅವರಿಗಿದ್ದ ಹೆಂಡತಿಯರ ಸಂಖ್ಯೆ ಹಾಗೂ ಮಕ್ಕಳ ಸಂಖ್ಯೆಯನ್ನೂ ದಾಖಲಿಸಲಾಗಿದೆ. ಇಡೀ ಚೂರ್ಣಿಕೆಯ ಬರಹ ಎಫಿಗ್ರಾಫಿಯಾ ಕರ್ನಾಟಿಕ ಸಂಪುಟ ೫ರಲ್ಲಿ ಪ್ರಕಟವಾಗಿದೆ. ಅದರ ಇಂಗ್ಲೀಷ್ ಅನುವಾದವೂ ಅಲ್ಲೇ ಪ್ರಕಟವಾಗಿದೆ.

ನಾನು ಮೇಳೆ ಕೊಟ್ಟಿರುವ ಶೀರ್ಷಿಕೆಗೆ ಅನುಗುಣವಾಗಿ ಕೆಳಗಿನ ಪಟ್ಟಿಯನ್ನು ನೀಡಿದ್ದೇನೆ. ಒಮ್ಮೆ ನೋಡಿ!

ಅದಕ್ಕೆ ಮೊದಲು ಆ ಚೂರ್ಣಿಕೆಯನ್ನು ಸಿದ್ಧಪಡಿಸಿದ ಕಲಾವಿದನ ಪರಿಚಯ ಮಾಡಿಕೊಂಡುಬಿಡಿ.

ಸಾರಿಗೆ ಚೆನ್ನಬಸಪ್ಪನ ಮೊಮ್ಮಗ, ಚಿತ್ರದ ರಾಮಪ್ಪನ ಮಗ, ಶಿಲ್ಪ ವಿಭಾಗದ ಅಧಿಕಾರಿಯಾಗಿದ್ದ ಚಿತ್ರಗಾರ ತಿಪ್ಪಣ್ಣ ಚೂರ್ಣಿಕೆಯನ್ನು ಸಿದ್ಧಪಡಿಸಿದ್ದು.

Adi (first) Yaduraya 3 wives and 2 sons.

Hiri Bettachchamaraja-vaderu, 4 wives and 1 son.

Timmapparaja-vader 3 wives and 1 son.

Hiri Chamarajarasa-vaderu 2 wives and 1 son.

More

ಜಯಶ್ರೀ ಕಾಲಂ: ದೊಡ್ಡವರೆಲ್ಲ ಜಾಣರಲ್ಲ-ಚಿಕ್ಕವರೆಲ್ಲ ಕೋಣರಲ್ಲ

ಜೀ ಕನ್ನಡ ದಲ್ಲಿ ಭಾನುವಾರ ಪ್ರಸಾರವಾದ ಮಕ್ಕಳ ದಿನಾಚರಣೆಯ ದಿನ ವಿಶೇಷ ಮಕ್ಕಳ ಕಾರ್ಯಕ್ರಮ ಖುಷಿ ಕೊಡ್ತು. ಮಕ್ಕಳು ಸೆಲಬಿಗಳ  ಬಳಿ  ಹೋಗಿ ಪ್ರಶ್ನೆ ಕೇಳುತ್ತಿದ್ದರು. ಹೆಚ್ಚಿನ ಉತ್ತರ ತರ್ಲೆ ಆಗಿತ್ತು, ಅದು ತುಂಬಾ ಖುಷಿ ಕೊಡ್ತು. ಸೋತವರು ದೊಡ್ಡವರೆಲ್ಲ ಜಾಣರಲ್ಲ-ಚಿಕ್ಕವರೆಲ್ಲ ಕೋಣರಲ್ಲ ಎಂದು ಹೇಳ ಬೇಕಾಗಿತ್ತು :-) .
ನಟ ಸುದೀಪ್ ಸಹ ದೊಡ್ಡವರ ಲಿಸ್ಟೇ ಸೇರಿದ್ದರು :-) ನಿರೂಪಕ  ಮಗು ಹೆಚ್ಚು ಪ್ರಶ್ನೆ ಕೇಳಿದ್ದು ಸೀರಿಯಸ್ಸಾಗಿರುವಂತಹದ್ದು ಛೇ! :-) ಇಲ್ಲ  ಸುದೀಪ್ ನೀವು ಎಂದಿಗೂ ಇಂತಹ ಪ್ರಶ್ನೆಗಳಿಗೆ ಉತ್ರ ಕೊಡ ಬಾರದು..  ನಾಟಿ ಪ್ರಶ್ನೆ ನಾಟಿ ಉತ್ರ ಅಷ್ಟೆ.. :-) ! ಹಾಗೇನಾದ್ರೂ ನೀವು ಮಾಡಿದ್ರೆ ನಾವು ನಿಮಗೆ ಸೀರಿಯಸ್ ಸುದೀಪ್ ಎನ್ನುವ ಅವಾರ್ಡ್ ಕೊಡ ಬೇಕಾಗುತ್ತದೆ ಎಚ್ಚರ ಎಚ್ಚರ
ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಆರು ಕೃತಿಗಳ ಲೋಕಾರ್ಪಣೆ …

ಇಲ್ಲೂ ನೋಡಿ : invitations Blog

ಒಂದು ನೆರಳಾಟ …

ಚಿತ್ರ ಕೃಪೆ :ವೀಣಾ ನರಸಶೆಟ್ಟಿ

ಸುದ್ದಿಯ ಸುತ್ತ ಸೂತ್ರಧಾರ…

-ಸೂತ್ರಧಾರ ರಾಮಯ್ಯ

ದೇಶ ಅಂದರೆ ಸಮಸ್ಯೆಗಳ ಸಂತೆ. ಸಮಸ್ಯೆಗಳ ಸುಳಿಗೆ ಸಿಕ್ಕ ಸಂತ್ರಸ್ತರನ್ನು ಸಂತೈಸಲೋ ಎಂಬಂತೆ ಸಂತರು ಹುಟ್ಟಿಬರುತ್ತಿದ್ದರು
ಅಂದ ಕಾಲತ್ತಿಲೆ. ಆದರೆ ಈಗ ಸಂತರ ಸ್ಥಾನದಲ್ಲಿ ಬುದ್ಧಿ ಜೀವಿಗಳು, ಗಡ್ಡ-ದ ಮೇಲೆ ‘ಕೈ’ ಹೊತ್ತ ಚಿಂತಕ ಮಂಥಕರುಮಿಂಚುತ್ತಾರೆ.
ವಿವಾದಗಳ ಸುಳಿಗೆ ದುಮುಕುತ್ತಾರೆ, ಅದಿಲ್ಲದಿದ್ದರೆ(ವಿವಾದಗಳು) ಹುಟ್ಟುಹಾಕುತ್ತಾರೆ.ಮಾಧ್ಯಮಗಳ ಮೂಲಕ ಕ್ಲಾಸ್’ತೆಗೆದುಕೊಂಡು ಮಹಾಶಯರಗುತ್ತಾರೆ, ಗುಡುಗುತ್ತಾರೆ-ಮಿಂಚುತ್ತಾರೆ; ವೆದರ್ ಇಟ್ ಹೋಲ್ಡ್ಸ್ ‘ವಾಟರ್’ ಆರ್ ನಾಟ್; ಕ್ಲಾಸ್ ತಗೋತಾರೆ.

ತಮ್ಮ ಪ್ರಭಾ(ವ)ವಳಿಯನ್ನು ರಿನ್ಯೂ ಮಾಡ್ಕೊಳ್ತಾರೆ. ಇವರ ಕ್ಲಾಸ್ ಗಳನ್ನ ಆಸ್ಥೆಯಿಂದ ಕೇಳೋದು ಅಗೇನ್ ಮಿಡ್ಲ್ ಕ್ಲಾಸೇ. ಹೊಸ ಹೊಸ (ನ್ಯೂ) ವಿಚಾರ ವಿವಾದಗಳ್ನ ‘ಟನ್ ‘ಗಟ್ಲೆ ಮಾಧ್ಯಮಗಳ ಮೂಲಕ ಅವರು ತಂದು ಸುರಿಯೋಕು ‘ಎನರ್ಜಿ’ ಪ್ರಾಪ್ತ ಆಗೋದೂ MC ಸ್ಕ್ವೇರ್ ನಲ್ಲೆ.

ಐ ಮೀನ್ ಮಿಡ್ಲ್ ಕ್ಲಾಸ್ ನವರ ಚಾವಡಿ-ಚೌಕಗಳಲ್ಲಿ. ಮೇಲ್ ವರ್ಗದ ಜನಕ್ಕೆ ವ್ಯಾಪಾರ ವ್ಯವಹಾರದ ಬ್ಯಾಲೆನ್ಸ್ ಶೀಟ್ ಓದೋಕು ಸಮಯವಿರೋದಿಲ್ಲ. ಪಾಪ, ಕೆಳವರ್ಗದವರಿಗೆ ದೈಹಿಕ ದುಡಿಮೆಯಿಂದ ವರ್ಗಾವಣೆಯೇ ಇಲ್ಲ! ಇನ್ನು ಉಳಿದಿರೋರು; ಬಿಗ್ ಬೀಗಳ ಅರ್ಥಾತ್ ಬೆಲೆಯೇರಿಕೆ,ಭ್ರಷ್ಟ ಆಚಾರಗಳ ಹಿಂಸೆಯ ನಡುವೆಯೂ pop ಫಿಲಾಸಫರ್ ಗಳ ನಿ-ವೇದನೆ ಗಳನ್ನು ಕೇಳುವುದಕ್ಕೆ ಸಿಗುವವರು  ಎಮ್.ಸಿ ಗಳು,ಐ ಮೀನ್ ಮಧ್ಯಮರು ಮತ್ತು ಮಾಧ್ಯಮರು ಮಾತ್ರ.

More

ಸವಿಗಾನ ಯಾನ …

%d bloggers like this: