ಬಂದೇ ಬಂತು ‘ನಾಟಕ ಬೆಂಗ್ಳೂರು’

 

ಮಹಿಳಾ ರಂಗಭೂಮಿ ಸಮಾವೇಶ


ನಾಳೆಯಿಂದ ಸೂರಿ..

ಸೂರಿ ಎಂದೇ ಆತ್ಮೀಯರಿಗೆ ಪರಿಚಯವಾಗಿರುವ ಸುರೇಂದ್ರನಾಥ್ ಈ ಟಿ ವಿ ಮನರಂಜನಾ ವಿಭಾಗದ ಮುಖ್ಯಸ್ಥರು. ಇರಬಹುದು, ಆದರೆ ಸೂರಿ ಇದಕ್ಕಿಂತಲೂ ಹೆಚ್ಚಾಗಿ ತಮ್ಮ ಕಥೆ, ಕವಿತೆ, ಅನುವಾದ ಇದಕ್ಕೂ ಮೀರಿ ತಮ್ಮ ನಾಟಕಗಳ ಮೂಲಕ ಈಗಾಗಲೇ ಎಲ್ಲರಿಗೂ ಪರಿಚಿತರು. ಶಂಕರ ನಾಗ್, ಅರುಂಧತಿ ನಾಗ್ ಜೊತೆ ಇವರು ಹುಟ್ಟು ಹಾಕಿದ, ಕಟ್ಟಿ ಬೆಳಸಿದ ‘ಸಂಕೇತ್’ ನಾಟಕ ತಂಡ, ‘ರಂಗ ಶಂಕರ’ ಎಲ್ಲರಿಗೂ ಗೊತ್ತು.

ನಾತ ಲೀಲೆ, ಒಂದು ಕಟ್ಟು ಕಥೆ ಕಥಾ ಸಂಕಲನಗಳು  ಎನ್ನ ಭಾವದ ಕೇಡು ಕಾದಂಬರಿ ಬರೆದಿರುವ ಸೂರಿ ‘ಅವಧಿ’ ಓದುಗರಿಗೆ ತೀರಾ ತೀರಾ ಪರಿಚಿತರು. ಅವರ ಕವಿತೆ, ಅನುವಾದ ಸಾಕಷ್ಟು ಪ್ರಕಟಗೊಂಡಿದೆ. ಈಗ ‘ಅವಧಿ’ಯಲ್ಲಿ ಅವರ ಮಿನಿ ಕಾದಂಬರಿಯೊಂದು ಧಾರಾವಾಹಿಯಾಗಿ ಪ್ರಕಟವಾಗಲಿದೆ. ‘ಅವಧಿ’ಯಲ್ಲಿ ಪ್ರಕಟವಾಗುತ್ತಿರುವ ಮೊದಲ ಧಾರಾವಾಹಿ ಇದು. ನಿಕೊಲಾಯ್ ಗೊಗೊಲ್ ನ ‘ಓವರ್ ಕೋಟ್’ ಕನ್ನಡದ ಓದುಗರಿಗಂತೂ ಸುಪರಿಚಿತ. ಟಿ ಪಿ ಅಶೋಕ್ ಅನುವಾದಿಸಿ, ಅಕ್ಷರ ಪ್ರಕಾಶನ ಪ್ರಕಟಿಸಿದ್ದ ಈ ಕಾದಂಬರಿಯನ್ನು ಸೂರಿ ದಾವಣಗೆರೆಯ ಕ್ಯಾನ್ವಾಸ್ ನಲ್ಲಿಟ್ಟು ನೋಡಿದ್ದಾರೆ.
ಉದಯವಾಣಿ ದೀಪಾವಳಿ ವಿಶೇಷಾಂಕದ ಹೈಲೈಟ್ ಗಳಲ್ಲಿ ಇದೂ ಒಂದು. ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ನಾಳೆಯಿಂದ ಆರಂಭ . ಓದಿ, ಪ್ರತಿಕ್ರಿಯಿಸಿ..

Magic Mirror…

-ಬಿ ವಿ ಪಾಂಡುರಂಗರಾವ್


ಧನಂಜಯ ಕುಂಬ್ಳೆಗೆ ಕಣ್ಣೂರು ವಿ ವಿ ಡಾಕ್ಟರೇಟ್…

ಕವಿ, ವಿಮರ್ಶಕ, ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಧನಂಜಯ ಕುಂಬ್ಳೆ ಇವರಿಗೆ ಕಣ್ಣೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.

ಅವರು ಕಾಸರಗೋಡಿನಲ್ಲಿರುವ ಕಣ್ಣೂರು ವಿಶ್ವವಿದ್ಯಾಲಯದ ಭಾರತೀಯ ಭಾಷಾ ಅಧ್ಯಯನಾಂಗದಲ್ಲಿ ವಿದ್ವಾಂಸ ಡಾ.ಪಿ.ಶ್ರೀಕೃಷ್ಣ ಭಟ್ ಇವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಅರುಣಾಬ್ಜ ಮತ್ತು ಕುಮಾರವ್ಯಾಸ : ತೌಲನಿಕ ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಈ ಪದವಿ ನೀಡಿದೆ. ಪ್ರಬಂಧವು ತುಳುವಿನ ಉಪಲಬ್ಧ ಮೊದಲ ಮಹಾಕಾವ್ಯ ಅರುಣಾಬ್ಜ ಕವಿಯ ‘ಮಹಾಭಾರತೋ’ ಕೃತಿಯ ವಿಸ್ತೃತ ಅಧ್ಯಯನವಾಗಿದ್ದು, ಕನ್ನಡ-ತುಳು ಕಾವ್ಯದ ಕುರಿತ ತೌಲನಿಕ ಸಂಶೋಧನೆಯ ಮೊದಲ ಪ್ರಯತ್ನವಾಗಿದೆ.

ಇವರು ಮೊದಲ ಪಾಪ, ಹಾಡು ಕಲಿತ ಹಕ್ಕಿಗೆ (ಕವನ ಸಂಕಲನಗಳು), ಪಾಲ್ಗಡಲ ಮುತ್ತುಗಳು (ಸಂಪಾದಿತ ಹನಿಗವನ ಸಂಕಲನ), ನಾನು ಮತ್ತು ಆಕಾಶ (ವಿಮರ್ಶೆ), ಕಜಂಪಾಡಿ ರಾಮ (ವ್ಯಕ್ತಿಚಿತ್ರ) ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಕಾರ್ನಾಡು ಸದಾಶಿವರಾವ್ ಕಾವ್ಯ ಪ್ರಶಸ್ತಿ, ಸೃಜನಶೀಲ ಬರಹಗಾರ ಪ್ರಶಸ್ತಿ, ವರ್ಷದ ಸಾಧಕ ಪ್ರಶಸ್ತಿ ಮೊದಲಾದ ಗೌರವಗಳು ದೊರಕಿದೆ. ರಾಜ್ಯ , ವಿಶ್ವವಿದ್ಯಾಲಯ ಮಟ್ಟದ ಹಲವು ವಿಚಾರ ಸಂಕಿರಣಗಳಲ್ಲಿ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದಾರೆ.

ಮಾಹಿತಿ : ಈ ಕನಸು

ರಾಜಕಾರಣಿಗಳ ಪರವಾಗಿ…

-ಅಲೆಮಾರಿ

ಒಳಗೂ ಹೊರಗೂ

ಇತ್ತೀಚೆಗೆ ರಾಜಕಾರಣ ಮತ್ತು ರಾಜಕಾರಣಿಗಳ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಯಡಿಯೂರಪ್ಪ ಸಹೋದ್ಯೋಗಿಗಳ ಭಿನ್ನಮತ, ಕುಮಾರಸ್ವಾಮಿ ಅವರ ತಂತ್ರಗಾರಿಕೆ, ರಾಜಕಾರಣಿಗಳು ಕೋಟಿ ಕೋಟಿಗಳಿಗೆ ಸೇಲ್ ಆಗ್ತಿರೋದು, ಮಂತ್ರಿಗಿರಿಗೋಸ್ಕರ ಬ್ಲಾಕ್ ಮೇಲ್ ಇತ್ಯಾದಿಗಳೆಲ್ಲ ರಾಜ್ಯದ ಜನರಲ್ಲಿ ರಾಜಕಾರಣಿಗಳ ಬಗ್ಗೆ ಎಳ್ಳಷ್ಟು ಗೌರವ ಉಳಿಸಿಲ್ಲ.

ಅಧಿಕಾರ ಬಳಸಿಕೊಂಡು ಭೂಮಿ ಬಾಚಿಕೊಂಡಿದ್ದು, ಪಕ್ಷದಿಂದ ಪಕ್ಷಕ್ಕೆ ಹಾರಿದ್ದು ಎಲ್ಲವನ್ನೂ ಕಂಡು ಮತದಾರ ತನ್ನ ಹಣೆ ಹಣೆ ಚಚ್ಚಿಕೊಂಡು ವಾಚಾಮಗೋಚರವಾಗಿ ಶಾಪವನ್ನೂಹಾಕಿದ್ದಾಯ್ತು.
`ಅವರ್ಯಾರು ಸರಿ ಇಲ್ಲ ಅಂತ ಇವರಿಗೆ ಓಟು ಹಾಕಿದೆ, ಅವರೂ ಮಾಡಿದ್ದನ್ನೇ ಮಾಡ್ತಿದ್ದಾರೆ. ಪ್ರಶ್ನೆ ಮಾಡಿದ್ರೆ, ಇಷ್ಟು ದಿನ ಅವರು ಮಾಡಿದ್ರೂ ನಾವ್ ಮಾಡಿದ್ರೇ ತಪ್ಪಾ’ ಅಂತಾರೆ ಅಂತ ಮತದಾರ ಛಿ, ಥೂ ಅಂತಾ ಉಗುಳಿದ್ದಾನೆ.

More

ಸವಿ ಸವಿ ನೆನಪು ಸಾವಿರದ ಐನೂರರ ನೆನಪು…

ಡಾ ನಾ ಸೋಮೇಶ್ವರ್ ನಡೆಸಿಕೊಡುವ ಕನ್ನಡದ ಅತ್ಯಂತ ಜನಪ್ರಿಯ ಷೋ ‘ಥಟ್ ಅಂತ ಹೇಳಿ’ ಈಗಾಗಲೇ ೧೫೦೦ ಎಪಿಸೋಡ್ ದಾಟಿ ಮುಂದೆ ಹೋಗಿದೆ. ರಘು ಐ ಡಿ ಹಳ್ಳಿ, ಎಚ್ ಎನ್ ಆರತಿ ನಿರ್ಮಿಸಿದ ದೂರದರ್ಶನದ ಈ ಕಾರ್ಯಕ್ರಮದ ಜನಪ್ರಿಯತೆ ಇನ್ನೂ ಕುಂದಿಲ್ಲ. ೧೫೦೦ ನೆ ಷೋ ಗೆ ಕೇಳಿದ ಪ್ರಶ್ನೆಗಳನ್ನು ನಿಮ್ಮ ಮುಂದೆ ಇಡಬೇಕು ಅನಿಸಿತು. ಇಲ್ಲಿದೆ ನೋಡಿ-

ಯಕ್ಷ ಪ್ರಶ್ನೆ

 

ಥಟ್ ಅಂತ ಹೇಳಿ – ೧೫೦೦ (೧)
೦೧ ‘ಫ್ರೆಂಚ್ ರೆವಲ್ಯೂಶನ್’ ಸಂದರ್ಭದಲ್ಲಿ ಅತ್ಯಂತ ಶಕ್ತಿಶಾಲಿಯಾಗಿದ್ದ ರಾಜಕೀಯ ಸಂಘಟನೆಯ ಹೆಸರು ‘ಜಾಕೋಬಿನ್ ಕ್ಲಬ್’. ಯಾವ ಭಾರತೀಯ ಅರಸ ಇದರ ಸದಸ್ಯನಾಗಿದ್ದನು?
ಹೈದಾರಾಲಿ ಟಿಪ್ಪು ಸುಲ್ತಾನ್
ಶಿವಾಜಿ ಮಹಾರಾಜ್ ಮೊಹಮ್ಮದ್ ಕುಲಿ ಕುತುಬ್ ಷಾ
೦೨ ಈ ಅಕ್ಷರಗಳನ್ನು ಸರಿಯಾಗಿ ಜೋಡಿಸಿ.
ಜೀ ಡಿ ಲ್ಲಿ ಗೈ ವ ಹಿ ಅಂ ಯ
೦೩ ಈ ಪದಬಂಧವನ್ನು ಪೂರ್ಣಗೊಳಿಸಿ
೧. ಕರವು ರಣದಲ್ಲಿ ಒಂದೂಗೂಡಿದಾಗ ಕರ್ನಾಟಕಹುಟ್ಟಿತು. 

೨. ಖೀರು ಮುಸಲ್ಮಾನ ಸನ್ಯಾಸಿಯಾದ

೩. ಒಂದರ ಹಿಂದೆ ಒಂದರಂತೆ…..

೦೪ ಈ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ.
ಸುಧಾಕರ ಚತುರ್ವೇದಿ ಹೊ.ಶ್ರೀನಿವಾಸಯ್ಯ
ಎಸ್.ಕೆ.ಕರೀಂಖಾನ್ ರಾಮಚಂದ್ರ ಮುಕುಂದ ಪ್ರಭು
೦೫ ಈ ಅನುಭಾವಿ ಜುಲೈ ೩, ೧೮೧೯ರಲ್ಲಿ ಧಾರವಾಡದಲ್ಲಿ ಹುಟ್ಟಿದರು.
ಕುಂದಗೋಳದ ಹುಡುಗಿಯನ್ನು ಮದುವೆಯಾದ ಈ ಮಹಾನುಭಾವ ಕಾರಡಗಿಯಲ್ಲಿ ಶಾಲಾಮಾಸ್ತರನಾದನು.
ಇವರಿಗಿದ್ದ ಹೆಣ್ಣು ಮಗುವು ತೀರಿಕೊಂಡಿತು; ನಂತರ ಮಡದಿಯೂ ತೀರಿಕೊಂಡಳು
ಮಾರ್ಚ್ ೭, ೧೮೮೯ರಲ್ಲಿ ತೀರಿಕೊಂಡ ಈತನ ಅಂತ್ಯ ಸಂಸ್ಕಾರವನ್ನು ಹಿಂದು-ಮುಸ್ಲೀಮರಿಬ್ಬರೂ ಸೇರಿ ಮಾಡಿದರು.
ಥಟ್ ಅಂತ ಹೇಳಿ – ೧೫೦೦ (೨)
೦೧ ಒಲಿಂಪಿಕ್ ಪದಕಗಳಲ್ಲಿ ಕಂಡುಬರುವ ‘ವಿಜಯ ದೇವತೆ’ ಯ ಹೆಸರೇನು?
ಹೆರಾ ನೈಕ್
ಅಫ್ರೋದಿತೆ ಅಥೀನಾ
೦೨ ಈ ಕನ್ನಡ ಗಾದೆಯನ್ನು ಪೂರ್ಣಗೊಳಿಸಿ. 

ಬಿದ್ದ ಪೆಟ್ಟಿಗಿಂತ—————

ಎದ್ದ ನೋವು ಹೆಚ್ಚು ಅತ್ತ ನೋವು ಹೆಚ್ಚು
ಬೀಳದ ಪೆಟ್ಟು ಹೆಚ್ಚು ನಕ್ಕ ಪೆಟ್ಟು ಹೆಚ್ಚು
೦೩ ಈ ಪದಬಂಧವನ್ನು ಪೂರ್ಣಗೊಳಿಸಿ
೧. ಊರಿನ ಒಳಿತಿಗೆ ಬಲಿಯಾದ ಭಾಗೀರಥಿಯ ಕಥೆ 

೨. ಮೊರೆಯಿಡುವ ಸಮುದ್ರ

೩. ಕುದುರೆ ಸಂಚಾರ

೦೪ ಈ ದೇವಾಲಯವನ್ನು ಗುರುತಿಸಿ.
ಸೋಮೇಶ್ವರ ದೇವಾಲಯ, ಕೋಲಾರ ಯೋಗಾ ನರಸಿಂಹಸ್ವಾಮಿ ದೇವಾಲಯ, ತುಮಕೂರು
ಭೋಗಾ ನಂದೀಶ್ವರ ದೇವಾಲಯ, ಚಿಕ್ಕಬಳ್ಳಾಪುರ ಮಹಾಲಕ್ಷ್ಮೀ ದೇವಸ್ಥಾನ, ಗೊರವನಹಳ್ಳಿ, ತುಮಕೂರು
೦೫ ಭಾರತೀಯ ಸಂಭಾರ ಪದಾರ್ಥವಾದ ಈ ಮೂಲಿಕೆಯು ಕ್ಯಾನ್ಸರ್ ನಿಗ್ರಾಹಕ ಹಾಗೂ ಅಲ್ಜೈಮರ್ ರೋಗವನ್ನು ತಡೆಗಟ್ಟಬಲ್ಲುದು.
ನೆಲಕಾಂಡವನ್ನು ಹೊರತೆಗೆದು, ಬೇಯಿಸಿ, ಬಿಸಿ ಒಲೆಯಲ್ಲಿ ಒಣಗಿಸಿ ನಂತರ ಪುಡಿ ಮಾಡಿ ಬಳಸುವರು.
ಈ ಗಿಡದ ನೆಲಕಾಂಡವನ್ನು ಆಹಾರ, ಔಷಧ, ಸೌಂದರ್ಯವರ್ಧಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಬಳಸುವರು.
ಈ ಗಿಡದ ಸತ್ವದ ಏಕಸ್ವಾಮ್ಯವನ್ನು ಪಡೆಯಲು ಅಮೆರಿಕವು ಯತ್ನಿಸಿದ್ದು ಒಮ್ದು ಜಾಗತಿಕ ಸುದ್ಧಿಯಾಯಿತು.
ಥಟ್ ಅಂತ ಹೇಳಿ – ೧೫೦೦ (೩)
೦೧ `ಬಂದರ್ ಸೆರಿ ಬೆಗವಾನ್’ ಯಾವ ಏಶಿಯನ್ ದೇಶದ ರಾಜಧಾನಿಯಾಗಿದೆ?
ಲಾವೋಸ್ ಸಲ್ತನೇಟ್ ಆಫ್ ಬ್ರೂನಿ
ಟೈವಾನ್ ವಿಯಟ್ನಾಮ್
೦೨ ‘ಲತಾಗೃಹ’ ಎಂಬ ನುಡಿಗಟ್ಟಿನ ಅರ್ಥವನ್ನು ಕೊಡುವ ‘ಕ’ ಅಕ್ಷರದಿಂದ ಆರಂಭವಾಗುವ ಮತ್ತೊಂದು ಕನ್ನಡ ಪದವನ್ನು ನೀಡಿ.
ಕುಂಜ ಕುಂಟ
ಕುಂಗ ಕುಂಟೆ
ಕುಂಟ=ಹೆಳವ’ ಕುಂಗ=ಮೀನುಗಾರ; ಕುಂಟೆ=ಹಳ್ಳದಲ್ಲಿ ನಿಂತ ನೀರು
೦೩ ಈ ಪದಬಂಧವನ್ನು ಪೂರ್ಣಗೊಳಿಸಿ
೧. ವಿಜಯನಗರ ರಾಜಧಾನಿಯಲ್ಲಿ ನಡೆಯುವ ಹಬ್ಬ
೨. ಗಣಪನಿಗೆ ಪ್ರಿಯವಾದ ಬೇಲದ ಹಣ್ಣು
೩. ಅದಕ್ಕೆ ಸಮನಾದದ್ದು
೦೪ ಕರ್ನಾಟಕದ ಈ ಐತಿಹಾಸಿಕ ಕಟ್ಟಡವನ್ನು ಗುರುತಿಸಿ.
ರಂಗೀನ್ ಮಹಲ್, ಬಿದರೆ ಗಗನ ಮಹಲ್, ಬೀಜಾಪುರ
ಕಮಲ ಮಹಲ್, ಹಂಪಿ ಅಸರ್ ಮಹಲ್, ಬೀಜಾಪುರೆ
೦೫ ಇವರು ಪಂಜಾಬ್ ವಿವಿ, ಕೇಂಬ್ರಿಡ್ಜ್ ವಿವಿ ಹಾಗೂ ಆಕ್ಸ್‌ಫರ್ಡ್ ವಿವಿಯಲ್ಲಿ ಅಧ್ಯಯನ ಮಾಡಿ ಜವಾಹರ್ ನೆಹರು ವಿವಿ ದಲ್ಲಿ ಗೌರವ ಪ್ರಾಚಾರ್ಯರು.
‘ಭಾರತ ರಫ್ತು ನಿರ್ವಹಣೆ: ೧೯೫೧-೧೯೬೦: ರಫ್ತು ಸಂಭಾವ್ಯತೆ ಮತ್ತು ಸೂಚನೆಗಳು’ – ಇದು ಅವರ ಪಿ.ಎಚ್.ಡಿ ವಿಷಯವಾಗಿತ್ತು.
ಅವರು ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್, ಯೋಜನಾ ಇಲಾಖೆಯ ಉಪಾಧ್ಯಕ್ಷರಾಗಿ ಹಾಗೂ ಅರ್ಥಮಂತ್ರಿಯಾಗಿ ಕೆಲಸ ಮಾಡಿರುವರು.
ಇವರು ಭಾರತ ದೇಶದ ೧೪ನೆಯ ಪ್ರಧಾನ ಮಂತ್ರಿ.
ಥಟ್ ಅಂತ ಹೇಳಿ – ೧೫೦೦ (೪)
೦೧ ಮೊದಲ ಪ್ರಾಯೋಗಿಕ ಪರಮಾಣು ಬಾಂಬ್ ಸಿಡಿತವನ್ನು ನೋಡಿ ‘ದಿವಿ ಸೂರ್ಯ ಸಹಸ್ರ’ ಎಂದು ಉದ್ಗರಿಸಿದ ವಿಜ್ಞಾನಿ ಯಾರು?
ಆಲ್ಬರ್ಟ್ ಐನ್ ಸ್ಟೀನ್ ರಾಬರ್ಟ್ ಓಪನ್ ಹೀಮರ್
ಎನ್ರಿಕೋ ಫರ್ಮಿ ಅರ್ನ್ಸ್ಟ್ ರುದರ್ಫೋರ್ಡ್
೦೨ ಈ ಲೆಕ್ಕವನ್ನು ಪೂರ್ಣಗೊಳಿಸಿ
೧೮ ೧೬ ೧೦ ೧೬ = ೦೪
೦೩ ಈ ಪದಬಂಧವನ್ನು ಪೂರ್ಣಗೊಳಿಸಿ
೧. ಸಿಹಿಯಾದ ಹುಲ್ಲಿನ ರಸ
೨. ಕಬ್ಬನ್ನು ತಿನ್ನುತ್ತ ಕವನವನ್ನು ರಚಿಸುವವನು
೩. ಹಾರದಲ್ಲಿ ಹೊಡೆತ
೦೪ ಕರ್ನಾಟಕದ ಈ ಐತಿಹಾಸಿಕ ಕಟ್ಟಡವನ್ನು ಗುರುತಿಸಿ.
ಗಿರೀಶ್ ಕಾಸರವಳ್ಳಿ ಗಿರೀಶ್ ಕಾರ್ನಾಡ್
ಚಂದ್ರಶೇಖರ ಕಂಬಾರ ನಾಗಾಭರಣ
ನಾಯಿನೆರಳು
೦೫ ಜಗತ್ತಿನ ಬಹುಪಾಲು ದೇಶಗಳಲ್ಲಿ ಕಂಡುಬರುವ ಈ ಹಕ್ಕಿ, ಸಂಖ್ಯಾ ದೃಷ್ಟಿಯಿಂದ ಪ್ರಥಮ ಸ್ಥಾನವನ್ನು ಪಡೆದಿದೆ.
ಈ ಹಕ್ಕಿಯನ್ನು ಭಾರತೀಯರು ಮೊದಲು ಸಾಕಿದರು ಎನ್ನುವ ಮಾತಿದೆ.
ಭಾರತದಲ್ಲಿ ಸಾಮಾನ್ಯವಾಗಿ ಈ ಪಕ್ಷಿಯನ್ನು ಬಲಿ ನೀಡಲು ಬಳಸುವರು.
ಪಕ್ಷಿ ಹಾಗೂ ಅದರ ಮೊಟ್ಟೆಯನ್ನು ನಿತ್ಯ ಆಹಾರಕ್ಕೆ ಬಳಸುವರು.
ಥಟ್ ಅಂತ ಹೇಳಿ – ೧೫೦೦ (೫)
೦೧ ಎಲ್.ಪಿ.ಜಿ (ಲಿಕ್ವಿಫೈಡ್ ಪೆಟೋಲಿಯಮ್ ಗ್ಯಾಸ್) ಯಲ್ಲಿರುವ ಎರಡು ಪ್ರಧಾನ ಅನಿಲಗಳು ಯಾವವು?
ಬ್ಯುಟೇನ್-ಮೀಥೈಲ್ ಮೆರ್ಕ್ಯಾಪ್ಟನ್ ಬ್ಯುಟೇನ್-ಪ್ರೊಪೇನ್
ಈಥೇನ್-ಮೀಥೇನ್ ಅಸಿಟಲಿನ್-ಆಕ್ಸಿಜನ್
ಮೀಥೈಲ್ ಮೆರ್ಕ್ಯಾಪ್ಟನ್-ವಾಸನೆಗೆ;
೦೨ ಈ ಕನ್ನಡ ಒಗಟನ್ನು ಬಿಡಿಸಿ. 

ಆಡೆಂದರಾಡುವುದು| ಮಾಡವನೇರುವುದು

ಕೂಡದೆ ಕೊಂಕಿ ನಡೆಯುವುದು|

ಕಡಿದೊಡೆ ಬಾಡದು ನೋಡಿ ಸರ್ವಜ್ಞ||

ಮಳೆ ಕೂದಲು
ಕಬ್ಬು ಹುಲ್ಲು
೦೩ ಈ ಪದಬಂಧವನ್ನು ಪೂರ್ಣಗೊಳಿಸಿ
೧. ಗಾಳಿ ಬೀಸುವ ಮಾಸದಿ ಬಂದ ಢಂಬಾಚಾರಿ, ಮೋಸಗಾರ, ವಂಚಕ
೨. ಕಣ್ಣೀರಿಲ್ಲದ ದುಃಖ!
೩. ಭೂತದಲ್ಲಿ ಹುಟ್ಟಿದವನು
೦೪ ಕನ್ನಡದ ಈ ಪ್ರಗತಿಶೀಲ ಲೇಖಕರನ್ನು ಗುರುತಿಸಿ.
ನಿರಂಜನ ಬಸವರಾಜ ಕಟ್ಟೀಮನಿ
ಅ.ನ.ಕೃಷ್ಣರಾವ್ ರಾವ್ ಬಹಾದ್ದೂರ್
೦೫ ೧೮೯೮ ರಲ್ಲಿ ಬೆಂಗಳೂರನ್ನು ಕಾಡಿದ ಪ್ಲೇಗ್ ಪಿಡುಗಿನ ನಂತರ ರೂಪುಗೊಂಡ ಮೊತ್ತಮೊದಲ ಆಧುನಿಕ ಬಡಾವಣೆ.
ಈ ಬಡಾವಣೆಗೆ ಅಂಟಿಕೊಂಡಂತೆ ಸರ್ ಶೇಷಾದ್ರಿ ಅಯ್ಯರ್ ಅವರು ಒಂದು ದೊಡ್ಡ ಕೃತಕ ಕೆರೆಯನ್ನು ಕಟ್ಟಿಸಿದರು.
ಈ ಪ್ರದೇಶದಲ್ಲಿ ೧೬೬೯ ರಲ್ಲಿ ಛತ್ರಪತಿ ಶಿವಾಜಿಯ ಮಲತಮ್ಮ ಏಕೋಜಿ ಕಟ್ಟಿಸಿದ ಶಿವ ದೇವಾಲಯವಿದೆ.
ಈ ಬಡಾವಣೆಯಲ್ಲಿ ಸಂಗೀತ ಕಲಾ ನಿಧಿ ಚೌಡಯ್ಯ ಅವರ ನೆನಪಿಗಾಗಿ ನಿರ್ಮಾಣವಾದ ಒಂದು ಅದ್ಭುತ ಸಂಗೀತ ಭವನವಿದೆ

ಮಾಯಾಮೃಗ …

Ismat apa ke naam…

‘ಶುದ್ಧಗೆ’ ನಾಟಕ

ವಿಜಯನಗರ  ಬಿಂಬದ ನಾಟಕ
ಡಾ ಎಸ್ ವಿ ಕಶ್ಯಪ್ ರಚಿಸಿದ

ಸುಷ್ಮಾ ಪ್ರಶಾಂತ್ ನಿರ್ದೇಶನದ
ಕನ್ನಡ  ಬಾಷಾ ಚರಿತ್ರೆಯ ಬಗೆಗಿನ
“ಶುದ್ದಗೆ ”
ಮಕ್ಕಳ ನಾಟಕ
ಇಂದು  6.30 ಕ್ಕೆ
ADA ರಂಗಮಂದಿರದಲ್ಲಿ
ನಾಟಕದ ಬಗ್ಗೆ ಎಸ್ ವಿ ಕಶ್ಯಪ್ ಹೀಗನ್ನುತ್ತಾರೆ-
Shuddage – a play about linguistic history of kannada language . It is one of my favourite plays. some times i feel surprised that i could write it.

%d bloggers like this: