ಎ ಆರ್ ಮಣಿಕಾಂತ್, ಬಿ ಎನ್ ಮಲ್ಲೇಶ್ ಗೆ ಅಮ್ಮ ಪ್ರಶಸ್ತಿ

ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿಗಾಗಿ ಸ್ಥಾಪಿಸಿದ ,ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಅಮ್ಮ ಪ್ರಶಸ್ತಿಗೆ ಈ ಬಾರಿ ಡಿ.ಬಿ.ರಜಿಯಾ ಅವರ ಕವಿತೆಗಳು, ಡಾ.ಲಕ್ಷ್ಮಣಕೌಂಟೆ ಅವರ ಐತಿಹಾಸಿಕ ಕಾದಂಬರಿ ಆಂದೋಲನ, ಬಿ.ಎನ್.ಮಲ್ಲೇಶರ  ಬ್ರೇಕಿಂಗ್ ನ್ಯೂಸ್ ಮತ್ತು ಎ.ಆರ್.ಮಣಿಕಾಂತರ ಅಮ್ಮ ಹೇಳಿದ ಎಂಟು ಸುಳ್ಳುಗಳು ಎನ್ನುವ ಕೃತಿಗಳು ಆಯ್ಕೆಯಾಗಿವೆ.

ಇದೇ ನವೆಂಬರ್ 26ರಂದು ಸೇಡಂನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರಗುವ ಸಮಾರಂಭದಲ್ಲಿ ಇವರುಗಳಿಗೆಅಮ್ಮಪ್ರಶಸ್ತಿ ಪ್ರದಾನ ಮಾಡಲಾಗುವುದು .

ಈ ಅಮ್ಮಪ್ರಶಸ್ತಿಗೆ ಈಗ ದಶಮಾನೋತ್ಸವದ ಸಂಭ್ರಮ, ಹಾಗಾಗಿ ಈ ಬಾರಿ ಸಾಂಕೇತಿಕವಾಗಿ ಹತ್ತು ಜನ ಸಾಹಿತ್ಯ ಸಾಧಕರನ್ನು ಸತ್ಕರಿಸಬೇಕು ಎಂಬ ಉದ್ದೇಶದಿಂದ ನಾಲ್ವರಿಗೆ ಅಮ್ಮ ಪ್ರಶಸ್ತಿ ಹಾಗು ಆರು ಜನರಿಗೆ ಅಮ್ಮ ಪ್ರಶಸ್ತಿ ದಶಮಾನೋತ್ಸವ ವಿಶೇಷ ಪುರಸ್ಕಾರ ನೀಡಲಾಗುತ್ತಿದೆ.

 

ಮಣಿಕಾಂತ್ ಬರೆಯುತ್ತಾರೆ:ನೀನು ನೀನೆ… ಇಲ್ಲಿ ನಾನು ನಾನೆ…

ನೀನು ನೀನೆ… ಇಲ್ಲಿ ನಾನು ನಾನೆ…

ಚಿತ್ರ: ಗಡಿಬಿಡಿ ಗಂಡ . ಸಾಹಿತ್ಯ, ಸಂಗೀತ: ಹಂಸಲೇಖ

ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ

ನೀನು ನೀನೆ… ಇಲ್ಲಿ ನಾನು ನಾನೆ

ನೀನು ಎಂಬುವನಿಲ್ಲಿ ನಾದವಾಗಿರುವಾಗ

ನಾನೇನು ಹಾಡಲಯ್ಯ ದಾಸಾನುದಾಸ ||ಪ||

ನಾದದ ಶೃತಿ ನೀಡಿ ತುಂಬುರ ಸ್ಮೃತಿ ಹಾಡಿ

ಕೈಲಾಸವೆಲ್ಲ ನಾದೋಪಾಸನೆಯಾಗಿ

ಷಣ್ಮುಖಪ್ರಿಯ ರಾಗ ಮಾರ್ಗ ಹಿಂದೋಳವಾಗಿ

ನಡೆಸಿದೆ ದರಬಾರು ನೋಡು

ಹಾಡುವೆಯ ಪಲ್ಲವಿಯ, ಕೇಳುವೆಯ, ಮೇಲೆ ಎಳುವೆಯ

ನೀನು ಎಂಬುವನಿಲ್ಲಿ ನಾದವಾಗಿರುವಾಗ

ನಾನೇನು ಹಾಡಲಯ್ಯ ದಾಸಾನುದಾಸ ||೧||

ಈ ಸ್ವರವೆ ವಾದ ಈಶ್ವರನೆ ನಾದ

ಗತಿಗತಿಯ ಕಾಗುಣಿತ ವೇದ ಶಿವಸ್ಮರಣೆ ಸಂಗೀತ ಸ್ವಾದ

ಗಮಕಗಳ ಪಾಂಡಿತ್ಯ ಶೋಧ ಸುಮತಿಗಳ ಸುಜ್ಞಾನ ಬೋಧ

ಬದುಕುಗಳ ವಿಚಾರಣೆ ಕ್ಷಮಾಪಣೆ ವಿಮೋಚನೆ

ಗೆಲುವುಗಳ ಆಲೋಚನೆ ಸರಸ್ವತಿ ಸಮರ್ಪಣೆ

ನವರಸ ಅರಗಿಸಿ ಪರವಶ ಪಳಗಿಸಿ

ಅಪಜಯ ಅಡಗಿಸಿ ಜಯಿಸಲು ಇದು

ಶಕುತಿಯ ಯುಕುತಿಯ ವಿಷಯಾರ್ಥ

ಗಣಗಣ ಶಿವಗಣ ನಿಜಗುಣ ಶಿವಮನ

ನಲಿದರೆ ಒಲಿದರೆ ಕುಣಿದರೆ ಅದೆ

ಭಕುತಿಯ ಮುಕುತಿಯ ಪರಮಾರ್ಥ ||೨||

೧೯೯೩ರಲ್ಲಿ ಜಯಭೇರಿ ಹೊಡೆದ ಚಿತ್ರ- ಗಡಿಬಿಡಿ ಗಂಡ. ತೆಲುಗಿನ ‘ಅಲ್ಲರಿ ಮೊಗುಡು’ ಚಿತ್ರದ ರಿಮೇಕ್ ಆದ ಈ ಚಿತ್ರದಲ್ಲಿ ರವಿಚಂದ್ರನ್,  ಜಗ್ಗೇಶ್, ರಮ್ಯಕೃಷ್ಣ, ರೋಜಾ ತಾರಾಗಣವಿತ್ತು. ರವಿಚಂದ್ರನ್‌ಗೆ ಎದುರಾಳಿಯಂತಿದ್ದ ಹಿರಿಯ ಸಂಗೀತಗಾರನ ಪಾತ್ರದಲ್ಲಿ ತಮಿಳಿನ ಜನಪ್ರಿಯ ನಟ ತಾಯ್‌ನಾಗೇಶ್ ಅಭಿನಯಿಸಿದ್ದರು. ಈ ಚಿತ್ರದಲ್ಲಿ ತಮ್ಮಿಬ್ಬರ ಪರಿಚಯ ಹೇಳಿಕೊಳ್ಳುವ ಸಂದರ್ಭದಲ್ಲಿ ರವಿಚಂದ್ರನ್-‘ನಾನು ಹಾರ್ಮೋನಿಯಂ ಸರಸ್ವತಿ. ಇವನು ತಬಲಾ ಸರಸ್ವತಿ’ ಎಂದೇ ಹೇಳುತ್ತಾರೆ. ಈ ಡೈಲಾಗ್ ಕೇಳಿಸಿದಾಕ್ಷಣ ಥಿಯೇಟರಿನ ತುಂಬಾ ಕಿಲಕಿಲ ನಗು, ಶಿಳ್ಳೆ, ಚಪ್ಪಾಳೆ…

ಇನ್ನಷ್ಟು

ಮುಖಪುಟ ವಿನ್ಯಾಸಗಳು…

-ಅಪಾರ ಇತ್ತೀಚಿಗೆ ರಚಿಸಿದ ಮುಖಪುಟಗಳ ಒಂದು ಪುಟ್ಟ ಜ್ಹಲಕ್ ಇಲ್ಲಿದೆ…

ಚಂಪಾ ಜೊತೆಗೊಂದು ಸಾಹಿತ್ಯ ಸಂವಾದ …

ಜಯಶ್ರೀ ಕಾಲಂ: ಆ ಎಪಿಸೋಡ್ ತುಂಬಾ ಮನಸೆಳೆಯಿತು…

@@ ಬಡತನ ಅನ್ನುವುದು ಎಂತಹ ದುಸ್ಥಿತಿ  ಅಲ್ವ ! ಒಂದು ತುತ್ತು ಅನ್ನಕ್ಕಾಗಿ, ಬಟ್ಟೆಗಾಗಿ, ಇರಲು ಜಾಗಕ್ಕಾಗಿ ಮನುಷ್ಯ ಅದೆಷ್ಟು ಕಷ್ಟ ಪಡ್ತಾನೆ. ಮೊನ್ನೆ ಸೋನಿ ಟೀವಿಯಲ್ಲಿ  ಕೌನ್  ಬನೇಗ…  ಸ್ಪರ್ಧೆಯಲ್ಲಿ ಭಾಗವಹಿಸಲು ಒಬ್ಬ ಹೆಣ್ಣುಮಗಳು ಅಂದಿದ್ರು. ಪ್ರೀತಿಸಿ ಮದುವೆ ಆಗಿದ್ದರು ಆಕೆ, ಮದುವೆಯಾಗಿ ವರ್ಷಗಳು ಕಳೆದಿದ್ದರೂ , ಮಗುವಾಗಿದ್ದರೂ ಆಕೆಯ ಕುಟುಂಬ ಈ ದಂಪತಿಗಳನ್ನು ತಮ್ಮ ಮನೆಗೆ ಸೇರಿಸಿರಲಿಲ್ಲ. ಅವರಿಗಿದ್ದ ಹಸುಗೂಸಿಗೆ  ಕಣ್ಣಿನ ತೊಂದರೆ ಇತ್ತು.ಅದರ ಶಸ್ತ್ರ ಚಿಕಿತ್ಸೆ   ಮಾಡಿಸಲು  ಹಣದ ಅವಶ್ಯಕತೆ   ಇತ್ತು.

 

ನೋಡಿ ತಾಯಿ ಎಂತಹ ಚಾಲೆಂಜ್ ಎದುರಿಸಲು ಸಹ ಸಿದ್ಧಳಾಗುತ್ತಾಳೆ ತನ್ನ ಮಕ್ಕಳಿಗಾಗಿ.ಆಕೆ ನಿರಂತರ ಪ್ರಯತ್ನದಿಂದ  ಹನ್ನೆರಡು ಲಕ್ಷದಷ್ಟು ಹಣ ಗೆದ್ದರು. ಸ್ವತಃ : ಅಮಿತಾಬ್ ಸರ್ ಭಾವುಕರಾದರು.ಆಕೆ ಧೈರ್ಯಗುಂದಿದಾಗ ಮಗು ,ಆಕೆಯ ಹಣದ ಅವಶ್ಯಕತೆಯ ಸಂಗಾತಿಯನ್ನು ಮತ್ತೆಮತ್ತೆ ಹೇಳುತ್ತಾ ಧೈರ್ಯ ತುಂಬುತ್ತಿದ್ದರು. ಆ ಎಪಿಸೋಡ್ ತುಂಬಾ ಮನಸೆಳೆಯಿತು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಬಿ ಎಸ್ ವೆಂಕಟರಾಮ್ ಜನ್ಮ ದಿನಾಚರಣೆ

ದಿನಾಂಕ : ನವೆಂಬರ್ 16
ಸಮಯ: ಸಂಜೆ 6.30 ಕ್ಕೆ
ಸ್ಥಳ:ವೆಂಕಟರಾಮ್ ಕಲಾಭವನ ಚಾಮರಾಜ ಪೇಟೆ ಬೆಂಗಳೂರು