ಭೇಟಿ ಕೊಡಿ-Kannada Bloggers – ಕನ್ನಡ ಬ್ಲಾಗಿಗರ ಕೂಟ

Kannada Bloggers – ಕನ್ನಡ ಬ್ಲಾಗಿಗರ ಕೂಟ.

ಬೆಂಗಳೂರು ಪುಸ್ತಕೋತ್ಸವದಲ್ಲಿ ಆಕೃತಿ ರಸಪ್ರಶ್ನೆ ಕಾರ್ಯಕ್ರಮ …

ಸಮರಸ

ಆಕೃತಿಯಲ್ಲಿ ಹಮ್ಮಿಕೊಂಡಿದ್ದ ವಿಶಿಷ್ಟ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಕನ್ನಡ ರಸಪ್ರಶ್ನೆಗಳಿಗೆ ಉತ್ತರಿಸಿ ಬಹುಮಾನ ಪಡೆಯುವ ಅವಕಾಶವಿತ್ತು.

8 ಪ್ರಶ್ನೆಗಳ ಎರಡು ಗುಂಪಿನ ರಸಪ್ರಶ್ನೆಗಳಿದ್ದವು.

ಮೊದಲನೇ ಗುಂಪು ಹೀಗಿತ್ತು..

1.      ಎಚ್ ನರಸಿಂಹಯ್ಯನವರ ಆತ್ಮಕತೆ ________________

2.     “ಮೇಲೆ ನೋಡೆ ಕಣ್ಣ ತಣಿಪ.. ನೀಲ ಪಟದಿ ವಿವಿಧ ರೂಪ” ಬರೆದ ಕವಿ ______________________

3.     “ಕನ್ನಡ ಚಿತ್ರಶಿಲ್ಪಿ ಪುಟ್ಟಣ್ಣ ಕಣಗಾಲ್” ಪುಸ್ತಕ ಬರೆದದ್ದು – ಅ) ತ್ರಿವೇಣಿ ಆ) ಎಂ. ಕೆ. ಇಂದಿರಾ ಇ) ಸಾಯಿಸುತೆ

4.    ರಾಮಕೃಷ್ಣ ಅಭಿನಯದ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ಚಲಚಿತ್ರ ಇದು ______________

5.     ಪಂಜೆಮಂಗೇಶರಾಯರ ಕಾವ್ಯನಾಮ ____________________

6.    ಬೇಲೂರು ಯಾವ ನದಿ ದಡದಲ್ಲಿದೆ? _______________

7.     ಕರ್ನಾಟಕದ ಅತ್ಯ೦ತ ಎತ್ತರದ ಶಿಖರ ಯಾವುದು? ______________________

8.     “ಕಬ್ಬಿಗರ ಕಾವ್ಯ” ಬರೆದವರು ______________

ಇನ್ನಷ್ಟು

ಜಯಶ್ರೀ ಕಾಲಂ:ಇದು ಮೀಡಿಯಾ …

ಒಂದು ಬಾರಿ ಹೀಗೆ ನಟ ರೊಬ್ಬರು   ಒಂದೂವರೆ ವರ್ಷದ ಹಿಂದೆ ಸುವರ್ಣ ನ್ಯೂಸ್ ಕ್ಯಾಮರಾಮನ್  ಕಪಾಳಕ್ಕೆ ಹೊಡೆದಿದ್ದರು, ಅವರ ಹೆಣ್ಣು ಹುಡುಗಿ ಫ್ರೆಂಡ್  ;-) ಜೊತೆ ಅವರು ದೇವಸ್ಥಾನಕ್ಕೆ ಹೋಗಿದ್ದರು. , ಅವಳ ಜೊತೆಗೆ ಆತನ ಬಾಂಧವ್ಯ ಬೇರೆಯದೇ ಎನ್ನುವ ಸುದ್ದಿ ಇದ್ದ ಸಮಯದಲ್ಲೇ  ಪೂಜೆ ಮಾಡಿಸಲು ಅವರು ತುಂಬಾ ಸೀಕ್ರೆಟ್ ಆಗಿ  ಅಲ್ಲಿಗೆ ಹೋಗಿದ್ದರು ಆದ್ರೆ ನಮ್ಮ ಧೈರ್ಯ-ಸಾಹಸವಂತ ಮೀಡಿಯಾದವರು ಬಿಡದೆ  ಬೆನ್ನು ಹತ್ತಿ  ಸತ್ಯ ತಿಳಿಸಲು ಹೊರಟಿದ್ದರು.

ಆಗ ಪಾಪದ ಕ್ಯಾಮರ ಮನ್ ಗೇ ಕಪಾಳ ಮೋಕ್ಷ ಆಗಿತ್ತು.ಯಾರೋ ಕ್ರೀಡಾಪಟು ಸುಮ್ಸುಮ್ನೆ ಹೊಡಿತಾನೆ, ಸಾಕಷ್ಟು ಸರ್ತಿ ಅಮಾಯಕರು ಸೆಲಬಿಗಳ ಕೈಲಿ ಕಪಾಳ ಮೋಕ್ಷ ಮಾಡಿಸಿ ಕೊಂಡಿರ್ತಾರೆ. ಇವರುಗಳು ಮಾಡಿದ ಹರಕತ್ ಗಳನ್ನು ಜನತೆಗೆ ತೋರಿಸ ಬಾರದು . ಆದರೆ ಇದೆ ಮೀಡಿಯ ಅವರ ಬೆಳವಣಿಗೆಗೆ ಬೇಕು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಹೌದು, ನರಿಗಳಿಗೇಕೆ ಕೋಡಿಲ್ಲ…?

-ಜಿ ಎನ್ ಮೋಹನ್


ಮತ್ತೊಂದು ಮಕ್ಕಳ ದಿನಾಚರಣೆ ಬಂದಿದೆ. ರಿಯಾಲಿಟಿ ಶೋಗಳ, ಎದೆ ತುಂಬಿ ಹಾಡುವ ಈ ದಿನಗಳ ಕಾಲದಲ್ಲಿ ಮಕ್ಕಳ ರಂಗಭೂಮಿ ಮರತೇ ಹೋಯಿತೇ ಎನ್ನುವ ಆತಂಕ ನಿಧಾನವಾಗಿ ಹೊಸ್ತಿಲು ದಾಟಿ ಒಳಗೆ ಬರುತ್ತಿದೆ. ವರ್ಷಕ್ಕೆ ಒಂದಾದರೂ ಮಕ್ಕಳ ನಾಟಕವನ್ನು ರಂಗಕ್ಕೇರಿಸಿಯೇ ತೀರುತ್ತಿದ್ದ ಪ್ರೇಮಾ ಕಾರಂತ್ ಇಲ್ಲ. ಇವರಿಗೆ ಸಾಥಿಯಾಗಿದ್ದ ಬಿ ವಿ ಕಾರಂತರೂ ಇಲ್ಲ. ಈ ಇಲ್ಲ, ಇಲ್ಲಗಳ ಮಧ್ಯೆಯೇ ಕಾರಂತ, ಪ್ರೇಮಾ ಕಾರಂತರ ಹೃದಯಕ್ಕೆ ಹತ್ತಿರವಾದ ನಿರ್ದೇಶಕಿ ಎನ್ ಮಂಗಳಾ ಹೊಸ ನಾಟಕವನ್ನು ಕೈಗೆತ್ತಿಕೊಂಡಿದ್ದಾರೆ.

ಕುವೆಂಪು ಅವರ ‘ನರಿಗಳಿಗೇಕೆ ಕೋಡಿಲ್ಲ’ ಕಥೆಯನ್ನು ರಂಗಕ್ಕೇರಿಸಲು ಸಜ್ಜಾಗಿರುವ ಮಂಗಳಾಗೆ ಇದು ತನಗೆ ರಂಗ ಪ್ರೀತಿಯ ಪರಿಚಯ ಮಾಡಿಕೊಟ್ಟವರಿಗೆ ಸಲ್ಲಿಸುತ್ತಿರುವ ಗೌರವವೂ ಹೌದು. ಬಿ ವಿ ಕಾರಂತರಿಗೆ ಮಂಗಳಾ ಅಭಿನಯದ ಬಗ್ಗೆ ಇನ್ನಿಲ್ಲದ ವಿಶ್ವಾಸವಿತ್ತು. ತಮ್ಮ ಆತ್ಮ ಚರಿತ್ರೆಯಲ್ಲಿ ಈ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದರು. ರಂಗಾಯಣದ ಗರಡಿಯಲ್ಲಿ ಪಳಗಿದ  ಮಂಗಳಾ ಈಗ ನಟಿಯಾಗಿ ಮಾತ್ರವಲ್ಲ, ನಿರ್ದೇಶಕಿಯಾಗಿಯೂ ಗೆದ್ದು ನಿಂತಿದ್ದಾರೆ. ಕಾಮಿಡಿ, ಟ್ರ್ಯಾಜಿಡಿ, ಗಂಭೀರ, ಮಕ್ಕಳ ನಾಟಕ ಹೀಗೆ ಪ್ರತಿಯೊಂದನ್ನೂ ವಿಶ್ವಾಸದಿಂದ ರಂಗಕ್ಕೆ ತಂದು ಯಶಸ್ವಿಯಾಗಿದ್ದಾರೆ. ಧರೆಯೊಳಗಿನ ರಾಜಕಾರಣ, ಕಮಲಮಣಿ ಕಾಮಿಡಿ ಕಲ್ಯಾಣ, ಅರಹಂತ, ಈಗ ನರಿಗಳಿಗೇಕೆ ಕೋಡಿಲ್ಲ.
ಮಂಗಳಾಗೆ ಮಕ್ಕಳ ಜೊತೆ ಹೆಜ್ಜೆ ಹಾಕುವುದು ಎಂದರೆ ಇನ್ನಿಲ್ಲದ ಉತ್ಸಾಹ. ಆದರೆ ಈ ಬಾರಿ ಕೊಂಚ ಭಿನ್ನ. ಮಕ್ಕಳಿಗಾಗಿ ದೊಡ್ಡವರ ಜೊತೆ ಹೆಜ್ಜೆ ಹಾಕಿದ್ದಾರೆ. ತಮ್ಮ ‘ಸಂಚಾರಿ ಥಿಯೇಟ್ರು’ ವಿನಿಂದ ಅಭಿನಯಿಸುತ್ತಿರುವ ನಾಟಕಕ್ಕೆ ರಂಗ ರೂಪ ನೀಡುವಲ್ಲಿ ಶಾಂತಾ ನಾಗರಾಜ್ ಸಹಾ ಸಾಥ್ ನೀಡಿದ್ದಾರೆ. ಶಶಿದರ ಅಡಪ ರಂಗ ಸಜ್ಜಿಕೆ ಮಾಡುತ್ತಿದ್ದು, ಅರವಿಂದ ಕುಪ್ಲೀಕರ್ ಬೆಳಕು ನಿರ್ವಹಿಸುತ್ತಿದ್ದಾರೆ. ಎಂದಿನಂತೆ ಸಂಚಾರಿಯ ಸಂಗೀತದ ಐಕಾನ್ ಗಜಾನನ ಟಿ ನಾಯಕ್ ಈ ಬಾರಿಯೂ ದನಿ ನೀಡಿ, ಹಾರ್ಮೋನಿಯಂ ಹಿಡಿದಿದ್ದಾರೆ.
ನರಿಗಳಿಗೇಕೆ ಕೋಡಿಲ್ಲ ಅನ್ನೋ ಪ್ರಶ್ನೆ ನಮ್ಮನ್ನಂತೂ ಕಾಡುತ್ತಿದೆ. ನಿಮ್ಮನ್ನೂ ಈ ಪ್ರಶ್ನೆ ಕಾಡುತ್ತಿದ್ದರೆ ಈ ತಿಂಗಳ ೨೦ ಹಾಗೂ ೨೭ ರಂದು ರವೀಂದ್ರ ಕಲಾಕ್ಷೇತ್ರಕ್ಕೆ ಬನ್ನಿ. ಮಕ್ಕಳೊಂದಿಗೆ

ಕಿರುತೆರೆ ಧಾರಾವಾಹಿ ಸಂಕಿರಣ

ಶ್ರೀದೇವಿ, ಸಿರಿ ಜುಗಲಬಂದಿ..

ನಮಸ್ತೆ..ಹೇಗಿದ್ದೀರಿ?ಅಂದಹಾಗೆ ಆ ದಿನ ನೀವೂ ಅಲ್ಲಿರುತ್ತೀರಿ. ಆ ದಿನ ’ಮರೆವು’ ಎನ್ನುವುದು ನಿಮ್ಮ ಹತ್ತಿರವೂ ಸುಳಿಯಲಾರದು. ಇನ್ನು ’ನೆಪ’ ಎನ್ನುವುದು ನಿಮ್ಮ ನಿಘಂಟಿನಲ್ಲಿ ಇಲ್ಲೇ ಇಲ್ಲ!

ಖಂಡಿತ ಬಂದೇ ಬರುತ್ತೀರಿ…
ಬರ‍್ತೀರಿ ಅಲ್ವಾ? ದಯವಿಟ್ಟು ಬನ್ನಿ. ನನ್ನ ಖುಷಿಯಲ್ಲಿ ನಿಮ್ಮ ಪಾಲೂ ಇದೆ 🙂
ಪ್ರೀತಿಯಿಂದಶ್ರೀದೇವಿ ಕಳಸದ

 

ದೂರ ದಾರಿಯೂ ಹತ್ತಿರ

ನೀವಿದ್ದರೆ…

ಅವತ್ತು, ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆ ಬರೆಯಲು ಶುರು ಮಾಡಿದಾಗ ನನಗೆ ಟೈಪ್ ಮಾಡುವುದು, ಬ್ಲಾ
ಗು ಕಮೆಂಟುಗಳು ಇದ್ಯಾವುದರ ಗಂಧ ಗಾಳಿಯೂ ಇರಲಿಲ್ಲ. ಅಮರ ಶ್ರೀನಿಧಿ ಸೋಮು ಇವರೆಲ್ಲರೂ ಈ ಜಗತ್ತಿಗೆ ನನ್ನ ಪರಿಚಯಿಸಿದವರು, ಬ್ಲಾಗ್ ಮಾಡಿಕೊಟ್ಟು ಅದಕ್ಕೊಂದು ಚಂದದ ಹೆಸರಿಟ್ಟು ನನ್ನ ಬರಹಗಳನ್ನ ಟೈಪ್ ಮಾಡಿಕೊಟ್ಟ ಅವರೆಲ್ಲರೂ ಅಷ್ಟೊಂದು ಪ್ರೀತಿಯಿಂದ ಇಷ್ಟೆಲ್ಲಾ ಸಹಾಯ ಮಾಡಿದರು, ನೀವುಗಳು ನನ್ನ ಕಥೆಗಳನ್ನ ಓದಿ ನಾನು ತಪ್ಪು ಮಾಡಿದಾಗಲೆಲ್ಲಾ ತಿದ್ದಿ, ನಿಮಗಿಷ್ಟವಾದದ್ದನ್ನ ಹೇಳಿ ನನ್ನ ಪ್ರೋತ್ಸಾಹಿಸಿದ್ದೀರಿ. ಈ ಸಂಭ್ರಮದ ಸಮಯದಲ್ಲಿ ನಿಮ್ಮನ್ನೆಲ್ಲ ಹೇಗೆ ನೆನಪಿಸಿಕೊಳ್ಳದೆ ಇರಲಿ? ಅಂಕಿತ ಪ್ರಕಾಶನದವರು ನನ್ನ ಕಥಾ ಸಂಕಲನ ನಡೆದಷ್ಟು
ದಾರಿ ದೂರ ಹೊರತರುತ್ತಿದ್ದಾರೆ. ಈ ತಿಂಗಳ ಹದಿನೇಳರಂದು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ದ್ ಕಲ್ಚರ್ ನಲ್ಲಿ ಬಿಡುಗಡೆ. ದಯವಿಟ್ಟು ಬನ್ನಿ. ಕಾಯುತ್ತಿರುತ್ತೇನೆ. ಅಲ್ಲಿ ಸಿಗೋಣ,
-ಸಿರಿ