ಅಣ್ಣ ಕಂಡ ತಮ್ಮ ….

ಬೆಂಗಳೂರಿನ ಜಯನಗರದ ಟೋಟಲ್ ಕನ್ನಡ ಡಾ.ಕಾಂ ಪುಸ್ತಕಮಳಿಗೆಯಲ್ಲಿ ಇಂದು ಅನಂತನಾಗ್ ಅವರು ಬರೆದ ‘ನನ್ನ ತಮ್ಮ ಶಂಕರ’ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು . ಕವಿ ಜಯಂತ್ ಕಾಯ್ಕಿಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು . ಆ ಕಾರ್ಯಕ್ರಮ ಶಿವೂ.ಕೆ ಅವರ ಕ್ಯಾಮರ ಕಣ್ಣಿನಲ್ಲಿ ಕಾಣಿಸಿದ್ದು ಹೀಗೆ …

ಮತ್ತಷ್ಟು ಫೋಟೋಗಳು : ಓದು ಬಜಾರ್

ಒಬಾಮಾಗೆ ಸುಸ್ವಾಗತ

-ಎಚ್ ಆನಂದರಾಮ ಶಾಸ್ತ್ರಿ
(ಇಂದಿನ ’ಪ್ರಜಾವಾಣಿ’ ದಿನಪತ್ರಿಕೆಯ ಮುಖಪುಟದಲ್ಲಿ ಚಂದ್ರಶೇಖರ ಕಂಬಾರರ ಕವನ ’ಒಬಾಮಾಗೆ ಸ್ವಾಗತ’ ಪ್ರಕಟಗೊಂಡಿದೆ. ಅದಕ್ಕೆ ಪ್ರತಿಯಾಗಿ ನಾನಿಲ್ಲಿ ಅದೇ ಧಾಟಿಯಲ್ಲಿ, ಆದರೆ ಭಿನ್ನ ನೆಲೆಯಲ್ಲಿ ’ಒಬಾಮಾಗೆ ಸುಸ್ವಾಗತ’ ಕೋರುತ್ತಿದ್ದೇನೆ. ಈ ಅಣಕವಾಡನ್ನು ಕಂಬಾರರು ಮನ್ನಿಸುವರೆಂದುಕೊಳ್ಳುತ್ತೇನೆ.)


ಪಡುವಣದಲ್ಲಿ ಓಲಗಗೊಂಡವರು
ಮೂಡಲಿಗೆ ಪಯಣಿಸುವುದೇನು ಹಿರಿದಲ್ಲ,
ಪಾದ ಬೆಳೆಸಿರಿ ಸ್ವಾಮೀ, ಭೂಮಿ ಒಂದೇ

ಮೊದಮೊದಲು ಸ್ವದೇಶೀ
ಜಪ ಮಾಡಿಕೊಂಡಿದ್ದವರು,
ನೀವು ಬರುವುದು ಗೊತ್ತಾದದ್ದೆ
ಜಪ ಜಾರಿ ವ್ರತಗೆಟ್ಟೆವೆಂದುಕೊಳ್ಳದಿರಿ
ಐಡಿಯಾಗಳಿವೆ ಇಂಡಿಯಾದಲ್ಲಿ ನಮ್ಮವೇ.
ಜಾತಕ ಜನನ ನಕ್ಷತ್ರ ತಿಥಿ ನೋಡದೆ
ಶನಿವಾರ ಸಿಂಗಾರಾಗಿ
ಅಂಗಾರದಂತೆ ಬರುವ ನಿಮ್ಮನ್ನು ತಣಿಸಲು
ಮತ್ತು ನಿಮಗೇ ಉಣಿಸಲು
ಐಡಿಯಾಗಳಿವೆ ನಮ್ಮಲ್ಲಿ.
ನೀವು ಭಿಕ್ಷೆ ನೀಡುವುದೆಷ್ಟೆಂದು
ಅಂದಾಜು ಹಾಕುವ ದರಿದ್ರರಲ್ಲ ನಾವು,
ನಿಮಗೇ ದುಡಿಮೆಯ ಐಡಿಯಾ ಕೊಟ್ಟೇವು

More

ಮಣಿಕಾಂತ್ ಬರೆಯುತ್ತಾರೆ:ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು

ಚಿತ್ರ: ಆಕಸ್ಮಿಕ. ಸಾಹಿತ್ಯ ಮತ್ತು ಸಂಗೀತ: ಹಂಸಲೇಖ

ಗಾಯನ: ಡಾ. ರಾಜ್‌ಕುಮಾರ್

ಹೇ ಹೇ ಬಾಜೋ. ಟಾಣ ಟಕಟಕಟ.. ಟಾಣ ಟಕಟಕಟ.. ಹೇ ಹೇ..

ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು

ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು

ಬದುಕಿದು ಜಟಕಾ ಬಂಡಿ,

ಇದು ವಿ ಓಡಿಸುವ ಬಂಡಿ

ಬದುಕಿದು ಜಟಕಾ ಬಂಡಿ

ವಿ ಅಲೆದಾಡಿಸುವಾ ಬಂಡಿ… ||ಪ||

ಕಾಶಿಲಿ ಸ್ನಾನ ಮಾಡು, ಕಾಶ್ಮೀರ ಸುತ್ತಿ ನೋಡು

ಜೋಗದ ಗುಂಡಿ ಒಡೆಯ ನಾನೆಂದು ಕೂಗಿ ಹಾಡು

ಅಜಂತ ಎಲ್ಲೋರವ ಬಾಳಲ್ಲಿ ಒಮ್ಮೆ ನೋಡು

ಬಾದಾಮಿ ಐಹೊಳೆಯ ಚೆಂದಾನ ತೂಕಮಾಡು

ಕಲಿಯೋಕೆ ಕೋಟಿ ಭಾಷೆ, ಆಡೋಕ್ಕೆ ಒಂದೇ ಭಾಷೆ…

ಕನ್ನಡಾ… ಕನ್ನಡಾ… ಕಸ್ತೂರಿ ಕನ್ನಡಾ ||೧||

ಧ್ಯಾನಕ್ಕೆ ಭೂಮಿ ಇದು, ಪ್ರೇಮಕ್ಕೆ ಸ್ವರ್ಗ ಇದು

ಸ್ನೇಹಕ್ಕೆ ಶಾಲೆ ಇದು, ಜ್ಞಾನಕ್ಕೆ ಪೀಠ ಇದು

ಕಾವ್ಯಕ್ಕೆ ಕಲ್ಪ ಇದು, ಶಿಲ್ಪಕ್ಕೆ ತಲ್ಪ  ಇದು

ನಾಟ್ಯಕ್ಕೆ ನಾಡಿ ಇದು, ನಾದಾಂತರಂಗವಿದು

ಕುವೆಂಪು ಬೇಂದ್ರೆಯಿಂದ, ಕಾರಂತ ಮಾಸ್ತಿಯಿಂದ

ಧನ್ಯವೀ ಕನ್ನಡ… ಗೋಕಾಕಿನ ಕನ್ನಡಾ. ||೨||

ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ

ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು

ಕೈಲಾಸಂ ಕಂಡ ನಮಗೆ ಕೈಲಾಸ ಯಾಕೆ ಬೇಕು?

ದಾಸರ ಕಂಡ ನಮಗೆ ವೈಕುಂಠ ಯಾಕೆ ಬೇಕು?

ಮುಂದಿನ ನನ್ನ ಜನ್ಮ ಬರೆದಿಟ್ಟನಂತೆ ಬ್ರಹ್ಮ

ಇಲ್ಲಿಯೇ… ಇಲ್ಲಿಯೇ…. ಈ ಮಣ್ಣಿನಲ್ಲಿಯೇ

ಎಂದಿಗೂ ನಾನಿಲ್ಲಿಯೇ…. ||೩||

ಇದು ಸಮಸ್ತ ಕನ್ನಡಿಗರ ನೆಚ್ಚಿನ ಹಾಡು, ಮೆಚ್ಚಿನ ಹಾಡು. ಕರುನಾಡ ಪ್ರಭಾವಳಿಗೆ ಸಾಕ್ಷಿ ಹೇಳುವ ಹಾಡು. ಹಸು ಕಂದಮ್ಮಗಳೂ ತಾಳ ಹಾಕುವಂತೆ, ಮುಪ್ಪಾನು  ಮುದುಕರನ್ನೂ ಕುಣಿಯುವಂತೆ ಮಾಡುವ ಹಾಡು. ಹೌದು. ಈ ಹಾಡಿನ ಪ್ರತಿ ಅಕ್ಷರದಲ್ಲಿ ಕನ್ನಡದ ಕಂಪಿದೆ. ಕನ್ನಡದ ಇಂಪಿದೆ. ಜನಪದ ಕುಣಿತದ ವೈಭವವಿದೆ.

More

ಮರೆಯದ ಸ್ನೇಹ ಆರದ ಬೆಳಕು …

ಆರ್ ಎಸ್ ಐಯ್ಯರ್

ದೀಪಾವಳಿಯ ಸಂದರ್ಭದಲ್ಲಿ ಖ್ಯಾತಸಾಹಿತಿ  ದಿ. ಹಾ.ಮಾ.ನಾಯಕ ಅವರು ದೀಪಾವಳಿ ಹಬ್ಬಕ್ಕೆ ಶುಭಕೋರಿ ಬರೆದ ಪತ್ರ ಹೀಗಿತ್ತು…

ಮಾಹಿತಿಯು, (ಅ) ತಂತ್ರವು ,(ಅ) ಜ್ನಾನವೂ …

ಸೂತ್ರಧಾರ ರಾಮಯ್ಯ

ನರಸಿಂಹರಾಜು: ದಾಂಪತ್ಯಸೌಖ್ಯ ಅನ್ನೋ ಪರಿಕಲ್ಪನೆಯೇ ‘ಪಥ್ಯ’ವಾಗಿರೋ ಮಾಹಿತಿ ತಂತ್ರಜ್ಞಾನದ ಕಪಲ್ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಡೈವೋರ್ಸ್ ಅರ್ಜಿಯನ್ನು ಹಿಡಿದು ಕೋರ್ಟುಗಳ ಮೆಟ್ಟಿಲೇರುತ್ತಿರುವುದು ಆಶ್ಚರ್ಯ! ಅಲ್ಲಾ, ಸದಾ ಜಣಜಣದ ಹೊಳೆಯಲ್ಲಿ ಮಿಂದರೂ, ಸಂಸಾರ ಸಾಗರದಲ್ಲಿ ಸಂತೋಷದಿಂದ ಈಜಲಾರದೆ ಮುಳುಗುತ್ತಿರುವರಲ್ಲಾ…,ಇದೇನು ಮಿಸ್ಟರಿ ಅಂತೀನಿ!

ಬಾಲಕೃಷ್ಣ: ಮಿಸ್ಟರಿ ಏನು ಬಂತು ಮಣ್ಣು; ಲ್ಯಾಕ್ ಆಫ್ ಕೆಮಿಸ್ಟರಿ ಅನ್ನು. ಮಣ್ಣಿನಮೇಲೆ (ನೆಲದ) ನಿಂತು ಜೀವನವನ್ನು ‘ರಸ’ ಯಾತ್ರೆ ಮಾಡಿಕೊಳ್ಳೋ ಕೆಮಿಸ್ಟ್ರಿ( ರಾಸಾಯನಿಕ ) ಬದಲು, ಗಾಳಿಯಲ್ಲಿ ತೇಲುತ್ತ -ಟೆಕ್ ನಿಕ್, ಮ್ಯಾಥ್ಸ್ , ಕ್ಯಾಲ್-ಖುಲಾಸ್ ಗಳನ್ನೇ ವೈಯುಕ್ತಿಕ ಜೀವನಕ್ಕೂ ಅಪ್ಲೈ ಮಾಡಿಕೊಂಡ್ರೆ, ಸಂಬಂಜಾ ಅನ್ನೋದು ಖುಲಾಸ್ ಆಗದೆ ಇದ್ದೀತೆ? ಜಗತ್ತಿಗೇ ಮಾಹಿತಿ ನೀಡ್ತೀವಿ ಅಂತಾ ಬೀಗುವ ಜನಾ, ಐಯ್ ಮೀನ್ IT ಗಂಡ ಹೆಂಡ್ತಿ;

ತಮ್ಮ ನಡುವೆಯೇ ಸರಿಯಾದ ಮಾಹಿತಿಯನ್ನು ಸಕಾಲದಲ್ಲಿ ಎಕ್ಸ್ಚೇಂಜ್ ಮಾಡಿಕೊಳ್ಳದೆ, ಕಮ್ಯುನಿಕೇಶನ್ ಗ್ಯಾಪ್ ( ಬಿರುಕು) ನಲ್ಲಿ ಸಿಕ್ಕು,ಏಗಲಾರದೆ, ಅತಂತ್ರರಾಗಿ, ಮಾಜಿ ಸತಿ ಪತಿಗಳಾಗೋದು, ಒಳ್ಳೆಯ ವರಮಾನ ಬಂದ್ರು,ಅದು ಹಳ್ಳೀಲಿ, ಐ ಮೀನ್ ‘ಗ್ಲೋಬಲ್ ವಿಲೇಜ್’ ನಲ್ಲಿ ಹೋಗ್ತಾ ಇರೋದು!
ಶಾಂತಂ ಪಾಪಂ ! ಒಟ್ಟಾ, ನಮಿಗ್ಯಾಕ್ ಬಿಡಪ್ಪಾ ಇನ್ನೊಬ್ಬರ ಸುದ್ದಿ;  ನಮ್ಮದೇ ‘ಚಿತ್ರಾ-ನ್ನ’ ಗಾಂಧಿ ನಗರದಲ್ಲಿ ಬೇಯ್ತಾ ಇರೋವಾಗ. ಬಯ್ ಬಾಯ್.
END ಗುಟುಕು : ಹತ್ತಿರವೇ ಇದ್ದು, ಸದಾ ದೂರುವ ಸಹೋದರ ಸಂಬಂಧಿಗಿಂತಾ, ದು ಬಾಯಿ ಯಲ್ಲಿರೋ ದೂರದ (ದೂರದಿರುವ)
ಸಂಬಂಧಿ ಮೇಲು.

Dont miss: Vachanas

City Buzz
Bangalore’s exciting new weekly

invites you to

An experimental concert of
Vachanas
by The Vachana Band

(12th century spiritual poetry by Basava, Akka Mahadevi and Allama Prabhu set to folksy and contemporary tunes, and performed in a band setting)

Vocals: Supriya Acharya, Vinay, Mukesh, Rakesh, Shweta, Ramya
Keyboard: Aman Mahajan
Guitars: Arjun
Bass: Caleb Alexander
Drums: Joe Antony
Harmonium: S R Ramakrishna

Sunday, 7 November 2010, 10.30 am
ADA Rangamandira (opp Ravindra Kalakshetra), J C Road, Bangalore.
Parking at Ravindra Kalakshetra.

‘ನಾನು’…

-ಸತ್ಯಬೋಧ ಜೋಶಿ

ಹೊಳಹು ನನ್ನದು ಎಂಬ ಹೆಮ್ಮೆಯು ನನದಲ್ಲ.

ಮತ್ತಿದರ ಅನುರಣನ ಎಂಬ ಹೆಮ್ಮೆ.

ಸೃಷ್ಟಿ ಸ್ರೋತದ ಒಸರು ಭೋರ್ಗರೆದು

ಹರಿದಾಗೆ, ತಿರುಳುಗಟ್ಟಿದ ತಣಿಸೋ ಕೃತಿಯು ಹೆಮ್ಮೆ

ನೆಳಲು ಬೆಳಕಿನ ಆಟ ಚಳಿಯ ಅಪ್ಪುಗೆ ಬೇಟ

ಕಸುವ ಕಾಣದ ಬೀಜ ಕಾಡುಪಾಲೆ

ನಂಟನೂಕಿದ ನೆಲವೆ ಅಂಟಿ ಅಪ್ಪುಗೆ ಇಹುದು

ಬಂಧಮುಕ್ತಿಯ ಗಂಟು ಒಂದೇ ತಾನೆ

ತನ್ನ ತಾನೇ ಗುಣಿಸಿ ಟಿಸಿಲೊಡೆದು ಭಾಗಿಸಿ

ಕುಸುರಿ ಅಪ್ಪುಗೆ ಬಿಚ್ಚೋ ತತಿಯೇ ಮೊಳಕೆ

ಮುಗಿಲ ಮುಟ್ಟಿದ ಎಲೆಯ ನಕ್ಷೆ ಸೆಲೆಯಲೆ ಇಹುದು

ಭಾವಬೀಜದ ಮರವೇ ಕಾವ್ಯ ತಾನೆ

More

ಅಶೋಕ್ ಕುಮಾರ್ ಬರೆವ ಟೆಕ್ ಅಂಕಣ

ಅಶೋಕ್ ಕುಮಾರ್. ಎ

ಟಚ್ ಸ್ಕ್ರೀನ್ ಸವಲತ್ತು:ತಂತ್ರಾಂಶದ ಮೂಲಕ

ಹಳೆಯ ಮೊಬೈಲ್ ಫೋನ್‌ಗಳಲ್ಲಿ ಸ್ಪರ್ಶಸಂವೇದಿ ತೆರೆಗಳಿಲ್ಲವಷ್ಟೇ?ಆದರೆ ಈಗಿನ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಪರ್ಶಸಂವೇದಿ ತೆರೆಗಳದ್ದೇ ಕಾರುಬಾರು.ಈ ಸವಲತ್ತಿಗಾಗಿ,ಹಳೆಯ ಫೋನ್‌ಗಳಿಗೆ ವಿದಾಯ ಹೇಳಬೇಕೇ?ಅವನ್ನು ಸ್ಪರ್ಶ ಸಂವೇದಿಗಳಾಗಿಸಲು ಬಾರದೇ?ಕೇಂಬ್ರಿಜ್

ವಿವಿಯ ಸಂಶೋಧಕರು ಹೀಗೆ ಪರಿವರ್ತಿಸಲು ತಂತ್ರಾಂಶದ ದಾರಿ ಕಂಡುಕೊಂಡಿದ್ದಾರೆ.ತೆರೆಯ
ಮೇಲೆ ಸ್ಪರ್ಶಸಂವೇದಿ ತೆರೆಯ ಮೇಲೆ ಮಾಡಿದಂತೆ ಮುಟ್ಟಿ,ತಟ್ಟಿದಾಗ, ಉಂಟಾಗುವ ಶಬ್ದದ
ಆಧಾರದ ಮೇಲೆ ನೀವು ಎಲ್ಲಿ ಮುಟ್ಟಿದ್ದೀರಿ,ಏನು ಸೇವೆ ಬಯಸುವಿರಿ ಎಂದು
ಅಂದಾಜಿಸಿ,ಅದನ್ನು ಮಾಡುವ ತಂತ್ರಾಂಶ ಅಭಿವೃದ್ಧಿ ಪಡಿಸುವ ಮೂಲಕ,ಸಾದಾ ಫೋನನ್ನು
“ಸ್ಪರ್ಶಸಂವೇದಿಯಾಗಿಸುವ” ವಿನೂತನ ಪ್ರಯೋಗ ಯಶಸ್ವಿಯಾಗಿದೆ.ಈ ತಂತ್ರಜ್ಞಾನದ ಮೂಲಕ
ಕಡಿಮೆ ಖರ್ಚಿನ “ಟಚ್‌ಸ್ಕ್ರೀನ್” ಫೋನ್ ಹ್ಯಾಂಡ್‌ಸೆಟ್‌ಗಳು ಲಭ್ಯವಾಗುವ ಭರವಸೆಯೂ
ಮೂಡಿದೆ.ಮೈಕ್ ಮೂಲಕ ಶಬ್ದವನ್ನು ಗ್ರಹಿಸುವ ತಂತ್ರಾಂಶ,ಅದರ ಪ್ರಮಾಣ,ಸ್ಥಾನ ಎರಡನ್ನೂ
ಅಂದಾಜು ಮಾಡುವ ಈ ನವೀನ ತಂತ್ರದಿಂದ ಕಸವಾಗಬೇಕಿದ್ದ ಫೋನ್‌ಗಳ ಆಯುಷ್ಯ ವರ್ಧಿಸಲಿವೆ!
————————–
ಎವರೆಸ್ಟ್ ಪರ್ವತ ಪ್ರದೇಶದಲ್ಲೂ ತ್ರೀಜಿ!

3ಜಿ ಸೆಲ್‌ಫೋನ್ ಸೇವೆಯು ಎವರೆಸ್ಟ್ ಶಿಖರ ಪ್ರದೇಶದಲ್ಲೂ ಸಿಗಲಾರಂಭಿಸಿದೆ.ಅದೂ ಎಂತ ವೇಗ ಅಂತೀರಾ? 3.6ಎಂಬಿ ವೇಗದಲ್ಲಿ ಹೆಚ್ಚಾಗಿ ಸೇವೆ ಸಿಕ್ಕಿದರೆ,ಆಗೀಗ ಅದರ ದುಪಟ್ಟು ವೇಗದ
ಸಂಪರ್ಕವೂ ಸಿಗಬಹುದು.ನೇಪಾಲ ಎನ್ಸೆಲ್ ಕಂಪೆನಿಯು ಹದಿನೇಳು ಅಡಿ ಎತ್ತರದಲ್ಲಿ
ಸೆಲ್‌ಫೋನ್ ಮೊಬೈಲ್ ಗೋಪುರಗಳನ್ನು ಹಾಕಿ ಸೇವೆಯನ್ನು ನೀಡಲಾರಂಭಿಸಿದೆ.ಒಂಭತ್ತು
ಗೋಪುರಗಳನ್ನು ಸ್ಥಾಪಿಸಿರುವ ಕಂಪೆನಿಯು,ಮೂವತ್ತು ಸಾವಿರ ಶಿಖರಾರೋಹಿ ಪ್ರವಾಸಿಗಳನ್ನು
ಗುರಿಯಾಗಿಸಿದೆ.ಒಂದು ಸಲ ಐವತ್ತು ಜನರು ಸೇವೆ ಬಳಸಲು ಸಾಧ್ಯವಾಗುತ್ತದಂತೆ.ನಾಲ್ಕು
ಗೋಪುರಗಳಲ್ಲಿ ಸೌರವಿದ್ಯುತ್ ಮೂಲಕ ಸೇವೆ ನೀಡಲಾಗುತ್ತಿದೆ.ಮೂರು ದಿನಗಳಿಗೆ
ಸಾಕಾಗುವಷ್ಟು ಬ್ಯಾಕಪ್ ನೀಡುವ ಬ್ಯಾಟರಿಗಳಿವೆ.ಎವರೆಸ್ಟ್ ಪರ್ವತದ ತುತ್ತ ತುದಿ
ತಲುಪುವವರು ಬಹಳ ಕಮ್ಮಿಯಾದ್ದರಿಂದ,ಅಲ್ಲಿನ ಸೇವೆಯ ಲಭ್ಯತೆಯ ಬಗ್ಗೆ ಕಂಪೆನಿ
ತಲೆಕೆಡಿಸಿಕೊಂಡಿಲ್ಲ.
More

ಜಯಶ್ರೀ ಕಾಲಂ: ಗಮನ ಸೆಳೆದ ಆ ಎರಡು ವಿಷಯ …

@@ ನಿನ್ನೆ  ಸುವರ್ಣ ನ್ಯೂಸ್ ಮತ್ತು ಸಮಯ ವಾಹಿನಿಯಲ್ಲಿ ಎರಡು ವಿಷಯ ನನ್ನ ಗಮನ ಸೆಳೆಯಿತು. ಸುವರ್ಣ ನ್ಯೂಸ್ ನಲ್ಲಿ  ನಿರೂಪಕಿ ಶ್ವೇತ  ಮೂರು ಜನ ಅಸಮಾನ್ಯರ ಬಗ್ಗೆ ತಿಳಿಸಿ ಕೊಟ್ರು . ಒಬ್ಬರಿಗೆ ಕಣ್ಣೆ ಇರಲಿಲ್ಲ,ಬಾಲ್ಯದಲ್ಲಿ ಕ್ಯಾನ್ಸರ್ ತಡೆಯುವ ಉದ್ದೇಶದಿಂದ ಆ ಮಗುವಿಗೆ ಕಣ್ಣು ತೆಗೆಯಲಾಯಿತಂತೆ. ಆ ಹುಡುಗ ಈಗ ಅದೆಷ್ಟರ ಮಟ್ಟಿಗೆ ಸಮಾಜಕ್ಕೆ ಉಪಯುಕ್ತ ಆಗಿದ್ದಾನೆ ಅಂದ್ರೆ ಹ್ಯಾಟ್ಸಾಫ್ ! ಪ್ರತಿಯೊಂದು ಕೆಲಸವನ್ನು ಸರಾಗವಾಗಿ ಮಾಡಬಲ್ಲ ಧೀರ :-).

ಇವನ ಈ ಬೆಳವಣಿಗೆಗೇ ಆತನ ಅಮ್ಮನ ಸಾಧನೆ ಅಪಾರ ! ಸಾಕಷ್ಟು ಸಾಧಕರಿಗೆ ಅದರಲ್ಲೂ ಇಂತಹವರ ಸಾಧನೆಗೆ ಪೋಷಕರ  ಪಾತ್ರ ತುಂಬಾ ವಿಶೇಷವಾಗಿರುತ್ತದೆ. ಮುಖ್ಯವಾಗಿ ಅವರು ಸತ್ಯವನ್ನು ಒಪ್ಪಿಕೊಂಡು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಕಾರಣ ಆಗ್ತಾರೆ ಅಂತಹವರಿಗೆ ನಮಿಸ ಬೇಕು.

ಪೂರ್ಣ ಓದಿಗೆ: ಮೀಡಿಯಾ ಮೈಂಡ್

%d bloggers like this: