High Command…

-ಯತೀಶ್ ಸಿದ್ದಕಟ್ಟೆ

‘ದಿಟ ನಾಗರ ಕಂಡರೆ’…

ಇಲ್ಲೂ ನೋಡಿ :invitations Blog

ಕಾಣದ ನದಿಯೊಂದರ ಕಣಿವೆಯಲಿ ಕುಳಿತು..

-ಅಶೋಕ್ ಶೆಟ್ಟರ್

ಶಾಲ್ಮಲಾ

ಶಾಲ್ಮಲಾ ಎಂಬ ಅಗೋಚರ ಹೊಳೆಯಂತೆ
ಒಳಗೊಳಗೆ ಹರಿದಿರುವ ನೂರೆಂಟು ಸೆಳವುಗಳ
ಹೊಯ್ದಾಟ ತುಯ್ದಾಟ ನನ್ನೊಳಗೆ ಇಂದು, ಕುಳಿತಿರುವೆ
ಅದೇ ಗುಪ್ತಗಾಮಿನಿ ನದಿಯ ಕಂಗಾವಲಿಗೆ ನಿಂತಂತೆ ಹಬ್ಬಿರುವ ಬೆಟ್ಟಗಳ ಕಣಿವೆಯೊಳಗೆ

ವರ್ಷದ ಕೊನೇ ತಿಂಗಳು ಕೊನೆಯುಸಿರೆಳೆಯುತ್ತಿದೆ, ಇದು ಮಧ್ಯಾಹ್ನ
ಬೆಟ್ಟನೆತ್ತಿಯ ಒಂದು ಓರೆ, ನೆತ್ತಿಯ ಮೇಲೆ ತೂಗುತ್ತಿದೆ ಕೆಂಡಮಂಡಲ
ಸುತ್ತ ಕುರುಚಲು ನಡುವೆ ಹಾಸುಗಲ್ಲು ಅದರ ಮೇಲೆ ಈ ನಾನು

ತೆರೆತೆರೆತೆರೆ ತೇಲಿಬಂದು ಮೈಯ್ಯನಮರಿ ಮುಖವ ಸವರಿ ಓಡುತಿರುವ ಮಂದಗಾಳಿ
ದ್ಯಾವಾ ಪೃಥ್ವಿ ಪವಡಿಸಿದ್ದಾಳೆ, ದಿಟ್ಟಿ ಹರಿದಲ್ಲೆಲ್ಲ
ಹೊಸತಾರುಣ್ಯದ ಹಮ್ಮಿನ ಹುಡುಗಿಯ ಏರುಎದೆಯ೦ತೆ  ಅಲ್ಲಿ
ಹಸಿರುಟ್ಟ ಹೆಂಗಸಿನ ಮೈ ನುಣುಪು ಕಿಬ್ಬೊಟ್ಟೆಯಾಗಿ ಕೆಳಗಿಳಿದಂತೆ ಇಲ್ಲಿ
ದಿಣ್ಣೆ-ದಿಬ್ಬಗಳು
More

ಕ್ಯಾಮರಾ ಕಣ್ ಚಳಕ…

ಚಿತ್ರಗಳು :ವೀಣಾ ನರಸಶೆಟ್ಟಿ

ಬಿ ಸುರೇಶ ನಿರ್ದೇಶಿಸುತ್ತಿರುವ ನಾಗತಿಹಳ್ಳಿ ಚಂದ್ರಶೇಕರ್ ಕಥೆ ಆಧಾರಿತ ‘ಪುಟ್ಟಕ್ಕನ ಹೈವೇ’ ಸಿನೆಮಾದ ಸೊಗಸು ಇಲ್ಲಿದೆ.  ಛಾಯಾಗ್ರಾಹಕ ಎಚ್ .ಎಂ.ರಾಮಚಂದ್ರ ಅವರು ಸಿನಿಮಾದ ದೃಶ್ಯಗಳನ್ನು  ಚಿತ್ರೀಕರಿಸುತ್ತಿರುವ  ದೃಶ್ಯಗಳ ಒಂದು ಜ್ಹಲಕ್

ಇನ್ನಷ್ಟು ಫೋಟೋಗಳು : ಮ್ಯಾಜಿಕ್ ಕಾರ್ಪೆಟ್

ಜಯಶ್ರೀ ಕಾಲಂ:ಭಾವನ ಅಂದ್ರೆ ಸುಮ್ನೆನಾ…

 

@@@ ಕನ್ನಡದ ತುಂಬಾ  ಮುದ್ದು  ಮುದ್ದಾದ ಚೆಲುವೆ ಭಾವನ ಉದಯ ವಾಹಿನಿಯಲ್ಲಿ ನಡೆಸಿ ಕೊಡುವಂತಹ ಕಾರ್ಯಕ್ರಮದಂತೆ ಜೆಮಿನಿಯಲ್ಲೂ ಪ್ರಸಾರ ಆಗುತ್ತದೆ. ನಮ್ಮಲ್ಲಿ ಶನಿವಾರ ,ಅವರು ಭಾನುವಾರ.ಬೆಳಿಗ್ಗೆ ಎದ್ದಾಗಲೇ ನಿರ್ಧರಿಸಿದ್ದೆ ಏನಾದ್ರೂ ಸರಿಯೇ ನಾನು ಭಾವನ ಬಗ್ಗೆ ಬರೀಲೇ ಬೇಕೂಂತ..! ನಮ್ಮ ಹುಡುಗರು ಆಕೆಯ  ನಗು ನೋಡಿದ್ರೆ ಕರೆಂಟು ಹೊಡೆಸಿ ಕೊಳ್ತಾರೆ ಎನ್ನುವ ವಾಕ್ಯ ಶುರು ಮಾಡಿದೆ ಛೇ ಕರೆಂಟು ಹೊರಟೆ ಹೋಯ್ತು ಕಣ್ರೀ :-)

ಭಾವನ ಅಂದ್ರೆ ಸುಮ್ನೆನಾ :-) ಏನೆ ಹೇಳಿ ಜೆಮಿನಿಯಲ್ಲಿ ಸಹ ಇಂತಹ ಕಾರ್ಯಕ್ರಮ ಬಂದರೂ ಸಹ ನಮ್ ಭಾವನ ಮುಂದೆ ಆ ಹುಡುಗಿ ಡಲ್ಲೋ ಡಲ್ಲು..! ಆಹಾ ಆಹಾ! ಭಾವನ  ನೀವು ನಿರೂಪಣೆ ಅಷ್ಟಕಷ್ಟೇ  ಇದ್ರೂ, ಅಹಹಹಹಹಹಹಹ ಭಾವನಾ… ಅ… ಅ… ! :-) ..ಸಂದರ್ಶನವೊಂದರಲ್ಲಿ ಭಾವನಾ ತಮಗೆ  ಗಂಡು ಸಿಗ್ತಾ ಇಲ್ಲ ಅಂಥ ತುಂಬಾ ಫೀಲ್ ಮಾಡಿಕೊಂಡು ಹೇಳಿದ್ದಾರೆ  !, ವರಿ ನಾಟ್ ಮಾ ನಿಮ್ಮಂತಹವರಿಗೆ ಸಿಗದೇ ಗಂಡು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಈ ವಾರಾಂತ್ಯದ ಚಿತ್ರ …

‘ಚಿತ್ರಸಮೂಹ’ ಆಯೋಜಿಸಿರುವ *‘ಚಿತ್ರವರ್ಷ’* -ಪ್ರಶಸ್ತಿ ವಿಜೇತ ಕನ್ನಡಚಿತ್ರಗಳ ವರ್ಷವಿಡೀ ಪ್ರದರ್ಶನ ನಡೆಯುತ್ತಿದ್ದು ಈ ವಾರಾಂತ್ಯದ ಚಿತ್ರ ‘ಮುಖಪುಟ’.

ದಿನಾಂಕ:ನವೆಂಬರ್ 27 ಮತ್ತು 28 -2010

ಸಮಯ: ಶನಿವಾರ ಹಾಗೂ ಭಾನುವಾರ ಸಂಜೆ 6.30

ಸ್ಥಳ : ಸುಚಿತ್ರ ಸಭಾಂಗಣ, ಬನಶಂಕರಿ 2ನೇ ಹಂತ ಬೆಂಗಳೂರು

 

ಬನ್ನಿ ‘ನಾಟಕ ಬೆಂಗ್ಳೂರು’ ನಿಮ್ಮದು

ಆಧುನಿಕ ಕನ್ನಡ ರಂಗಭೂಮಿಯ ಬೆಳವಣಿಗೆಯಲ್ಲಿ ಹವ್ಯಾಸಿ ರಂಗತಂಡಗಳ ಪಾತ್ರ ಬಹಳ ಹಿರಿದು. 60 ರ ದಶಕದಿಂದ ಆರಂಭವಾದ ಹವ್ಯಾಸಿ ರಂಗ ಚಳವಳಿಗೆ ಬೆಂಗಳೂರಿನ ಹವ್ಯಾಸಿ ರಂಗತಂಡಗಳು ಅಪಾರ ಕೊಡುಗೆ ನೀಡಿವೆ. ನಾಟಕಗಳ ಆಯ್ಕೆ, ಸಿದ್ಧತೆ, ಪ್ರದರ್ಶನ, ಪೂರಕ ತಾಂತ್ರಿಕತೆ ಎಲ್ಲವುಗಳಲ್ಲೂ ವೃತ್ತಿ ಪರತೆಯನ್ನು ಮೈಗೂಡಿಸಿಕೊಂಡು ಹೊಸಹೊಸ ಪ್ರಯೋಗಗಳಿಗೆ ನಿರಂತರವಾಗಿ ತೆರೆದುಕೊಳ್ಳುವ ಬೆಂಗಳೂರಿನ ರಂಗ ತಂಡಗಳು, ಒಟ್ಟು ಕನ್ನಡ ರಂಗಭೂಮಿಯ ಬೆಳವಣಿಗೆಯಲ್ಲಿ ತನ್ನದೇ ಆದ ಕೊಡುಗೆ ನೀಡಿವೆ.

ಪ್ರಯೋಗಶೀಲತೆಯ ಜೊತೆಗೆ ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಇಲ್ಲಿನ ಹವ್ಯಾಸಿ ರಂಗತಂಡಗಳ ಶ್ರಮ ಗಮನಾರ್ಹ. ಕನ್ನಡ ರಂಗಭೂಮಿ ಎಂದೂ ನಿಂತ ನೀರಾಗದಂತೆ ಹೊಸ ನಾಟಕಗಳು, ರಂಗತಂಡಗಳು, ನಟರು, ತಂತ್ರಜ್ಞರು, ನಿರ್ದೇಶಕರು, ಕಾಲಕಾಲಕ್ಕೆ ರೂಪುಗೊಳ್ಳುತ್ತಾ, ಹಿಂದಣ ಅನಂತಗಳನ್ನು ಮುಂದಣ ಅನಂತಗಳನ್ನು ವರ್ತಮಾನದಲ್ಲಿ ಸಾಕ್ಷಾತ್ಕರಿಸುವ ನಿಟ್ಟಿನಲ್ಲಿ ನಿರಂತರ ಪ್ರಯೋಗಶೀಲತೆಯಲ್ಲಿ ತೊಡಗಿಕೊಂಡಿರುವುದು, ಭಾರತೀಯ ರಂಗಭೂಮಿ ಸಂದರ್ಭದ ವಿಶಿಷ್ಟ ದಾಖಲೆಯಾಗಿದೆ.

ಹಾಗಾಗಿ ನಾಟಕ ಬೆಂಗ್ಳೂರು – ರಂಗಭೂಮಿ ಸಂಭ್ರಮ ಕಳೆದ ಮೂರು ವರ್ಷಗಳಿಂದ ಪ್ರಾರಂಭವಾದ ಒಂದು ವಿಭಿನ್ನವಾದ, ಬಹು ಮುಖ್ಯವಾದ ಒಂದು ರಂಗ ಚಳವಳಿ. ಹೊಸ ಪ್ರಯೋಗಗಳೊಟ್ಟಿಗೆ, ಹೊಸ ಪ್ರೇಕ್ಷಕರನ್ನು ಒಳಗೊಳ್ಳುವ, ಇಂದಿನ ತುರ್ತಿಗೆ ಸ್ಪಂದಿಸುವ ನಾಟಕೋತ್ಸವವಾಗಿ ರೂಪುಗೊಳ್ಳುತ್ತಾ ಯಶಸ್ವಿಯಾಗಿ ಸಾಗುತ್ತಿದೆ.

More

ಚೆನ್ನಬಸವಣ್ಣ ಎಂದರೆ ….

-ಜಿ ಎನ್ ಮೋಹನ್

ಚನ್ನಬಸವಣ್ಣ ಅವರ ಆತ್ಮೀಯತೆಯ ರುಚಿ ಉಂಡವರಲ್ಲಿ ನಾನೂ ಒಬ್ಬ. ನನಗೆ ಅವರ ಪರಿಚಯ ಇರಲಿಲ್ಲ. ಅವರಿಗೂ. ನವಕರ್ನಾಟಕ ಆಗ ತಾನೆ ನಾನು ಮಾಧ್ಯಮವನ್ನು ಡಂಕೆಲ್ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ನೋಡಿದ ೨ ಪುಸ್ತಕಗಳನ್ನು ಪ್ರಕಟಿಸಿತ್ತು. ಚನ್ನಬಸವಣ್ಣ ಅವರಿಗೆ ಇಷ್ಟೇ ಸಾಕು. ಅವರು ಕೃತಿ ಓದಿ ಲೇಖಕರ ಬೆನ್ನತ್ತುವವರೇ ಹೊರತು ಲೇಖಕರ ಮುಖ ನೋಡಿ ಕೃತಿ ಪ್ರಕಟಿಸುವವರು ಅಲ್ಲ . ಅವರು ಇಂದು ಪ್ರಕಟಿಸಿರುವ ಅಷ್ಟೊಂದು ಪುಸ್ತಕಗಳಲ್ಲಿ ಶೇಕಡಾ ೮೦ ಕ್ಕೂ ಹೆಚ್ಚು ಲೇಖಕರು ಅವರಿಗೆ ಪುಸ್ತಕ ಪ್ರಕಟಿಸಲು ಕೈಗೆತ್ತಿಕೊಳ್ಳುವ ಮುನ್ನ ಅವರಿಗೆ ಗೊತ್ತಿರಲಿಲ್ಲ ಮತ್ತು ಪ್ರಕಟಿಸಿದ ನಂತರ ಆ ಲೇಖಕರು ಯಾರೂ ಅಣ್ಣನಿಂದ ಕಳಚಿಕೊಂಡಿಲ್ಲ ಎಂದು ವಿಶ್ವಾಸದಿಂದ ಹೇಳಬಲ್ಲೆ.

ನನ್ನ ಒಂದು ಪುಸ್ತಕ ಪ್ರಕಟಿಸಲೇಬೇಕು ಎಂದು ಅವರು ನನ್ನ ಬೆನ್ನ ಹಿಂದೆ ಬಿದ್ದ ರೀತಿ ಬಹುಶಃ ನನ್ನ ಬದುಕಿನಲ್ಲಿ ಮರೆಯಲಾಗದ ಘಟನೆ. ಪುಸ್ತಕ ಪ್ರಕಟಿಸುತ್ತೇವೆ ಕೊಡಿ ಎಂದು ಯಾರಾದರೂ ಗಂಟು ಬೀಳಲು ಸಾದ್ಯವೇ. ಅದು ಸಾಧ್ಯವಾಗುವುದು ಚೆನ್ನಬಸವಣ್ಣ ಅವರಿಗೆ ಮಾತ್ರ.

ನನ್ನ ಬಳಿ ಯಾವುದೂ ಪುಸ್ತಕ ಇಲ್ಲ. ನೀವು ರಾಜಶೇಖರ  ಹತಗುಂದಿಯ ಪುಸ್ತಕ ಪ್ರಕಟಿಸಬಹುದೇನೋ ಎಂದೆ. ಅದಕ್ಕೇನಂತೆ ಕಳಿಸ್ರಿ ಎಂದರು. ಅಷ್ಟೇ ಬರೀ ಹತಗುಂದಿ ಮಾತ್ರವಲ್ಲ, ಇಡೀ ಹೈದರಾಬಾದ್ ಕರ್ನಾಟಕದ ಸಾಲು ಸಾಲು ಹುಡುಗರು ನೋಡು ನೋಡುತ್ತಿದ್ದಂತೆಯೇ ಬರಹಗಾರರಾಗಿ ಬೆಳೆದು ಬಿಟ್ಟರು. ಅಣ್ಣ ತುಂಬುವ ವಿಶ್ವಾಸವೇ ಅಂತಹದ್ದು.

ನಾನು ಕ್ಯೂಬಾ ಪ್ರವಾಸ ಕಥನ ಬರೆದಾಗ ಅದು ಲೋಹಿಯಾದಿಂದಲೇ ಪ್ರಕಟವಾಗಬೇಕು ಎಂದು ಅಲಿಖಿತ ಒಪ್ಪಂದ ಆಗಿಹೋಗಿತ್ತು . ಆ ಪುಸ್ತಕ ಪ್ರಕಟಿಸುವಾಗ ಅಪ್ಪನ ಬೆರಳು ಹಿಡಿದು ಕಾಣದ ರೋಡ್ ಗಳನ್ನೂ ಬೆರಗು ಕಣ್ಣಿಂದ, ಆತಂಕದಿಂದ ಮಕ್ಕಳು ದಾಟುತ್ತಾವಲ್ಲಾ ಹಾಗೆ ಅವರ ಹಿಂದೆ ತಿರುಗಿಬಿಟ್ಟೆ.

ಆಮೇಲೆ ಚೆನ್ನಬಸವನ್ನನವರ ಹಣಕಾಸಿನ ಕಷ್ಟ ಗೊತ್ತಾಗತೊಡಗಿತು. ಅವರೂ ಆಗೀಗ ನನ್ನ ಬಳಿ ಪುಸ್ತಕ ಉದ್ಯಮದ ನಿಟ್ಟುಸಿರುಗಳ ಬಗ್ಗೆ ಮಾತಾಡುತ್ತಿದ್ದರು. ಹಾಗಾಗಿ ನನಗೆ ಯಾಕೋ ಅದರ ಎರಡನೆ ಆವೃತ್ತಿ ತನ್ನಿ ಎನ್ನಲು ದೈರ್ಯವಾಗಲಿಲ್ಲ. ಅಥವಾ ಒಳೊಗೊಳಗೆ ದುರಾಸೆ ಇತ್ತೇನೋ. ನವಕರ್ನಾಟಕದ ರಾಜಾರಾಂ ಅವರನ್ನು ಪ್ರಕಟಿಸಿ ಎಂದು ಕೇಳಿದೆ. ಅವರಿಗೂ ಅಷ್ಟೇ ಚೆನ್ನಬಸವಣ್ಣನವರ ಬಗ್ಗೆ ಅಪಾರ ಗೌರವ. ಒಂದು ಮಾತು ಅವರ ಕಿವಿಗೆ ಹಾಕುವುದು ಒಳ್ಳೆಯದೇನೋ ಎಂದರು. ನಾನು ಅಣ್ಣನಿಗೆ ಫೋನ್ ಮಾಡಿದೆ. ಚೆನ್ನಬಸವಣ್ಣನವರು ಹೇಗೆ ನೊಂದುಕೊಂಡು ಬಿಟ್ಟರೂ ಎಂದರೆ ಅದು ನನ್ನ ಕಿವಿಯಲ್ಲಿ ಇನ್ನೂ ಗುಂಯ್ ಗುಡುತ್ತಲೇ ಇದೆ. ಕ್ಯೂಬಾ ನಮ್ಮ ಪ್ರಕಾಶನದ ಕೂಸು ಎಂದರು. ಪಶ್ಚಾತ್ತಾಪವಾಯಿತು. ಮೌನದ ಮೊರೆ ಹೋದೆ. ನಂತರ ಮತ್ತೆ ಅವರು ಕ್ಯೂಬಾ ಪುಸ್ತಕಕ್ಕಾಗಿ ಓಡಾಡಿದ ಪರಿ, ಆ ಸಂಭ್ರಮ ನಿಜಕ್ಕೂ ನನ್ನ ಮನಸ್ಸು ತಟ್ಟಿದೆ.

ಪುಸ್ತಕ ಮಾತ್ರ ಅಲ್ಲ, ಅಣ್ಣ ಕೊಟ್ಟ ಧೈರ್ಯ ದೊಡ್ಡದು. ಅದಕ್ಕೇ ನಾನು ಅವರನ್ನು ‘ನೆಲ ಹಸಿರು ಮುಕ್ಕಳಿಸಲು ಕಾರಣವಾಗುವ ಸೋನೆ ಹನಿ’ ಎಂದು ನನ್ನ ಪುಸ್ತಕದಲ್ಲಿ ಬಣ್ಣಿಸಿದ್ದೇನೆ.

ಚೆನ್ನಬಸವಣ್ಣ ಎಂದರೆ ಪುಸ್ತಕ, ಚೆನ್ನಬಸವಣ್ಣ ಎಂದರೆ ಪ್ರೀತಿ, ಚೆನ್ನಬಸವಣ್ಣ ಎಂದರೆ ಹುಗ್ಗಿ, ಚೆನ್ನಬಸವಣ್ಣ ಎಂದರೆ ತುಂಬು ನಗೆ. ಚೆನ್ನಬಸವಣ್ಣ ಎಂದರೆ ….

ಲೋಹಿಯಾ ಪ್ರಕಾಶನದ ರೂವಾರಿಗೆ ಪ್ರಶಸ್ತಿ

ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಲೋಹಿಯಾ ಪ್ರಕಾಶನದ ಹಿರಿಯ ಸಿ ಚನ್ನಬಸವಣ್ಣ, ಖ್ಯಾತ ಸಾಹಿತಿ ಚಿತ್ರಶೇಖರ ಕಂಠಿ, ಬಿಜಾಪುರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಕವಿ ಡಾ ಡಿ ಸಿ ರಾಜಪ್ಪ ಸೇರಿದಂತೆ ಆರು ಗಣ್ಯರಿಗೆ ರಾಜ್ಯದ ಪ್ರತಿಷ್ಠಿತ ಅಮ್ಮ ಗೌರವ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ತನ್ನ ದಶಮಾನೋತ್ಸವದ ಅಂಗವಾಗಿ ಈ ಪ್ರಶಸ್ತಿಯನ್ನು ಘೋಷಿಸಿದೆ. ಕಳೆದ ಹತ್ತು ವರ್ಷಗಳಿಂದ ಉತ್ತಮ ಸಾಹಿತ್ಯ ಕೃತಿಗೆ ‘ಅಮ್ಮ’ ಪ್ರಶಸ್ತಿಯನ್ನು ನೀಡುತ್ತಿದ್ದ ಪ್ರತಿಷ್ಠಾನ ಇದೇ ಮೊದಲ ಬಾರಿಗೆ ನಾಡು ನುಡಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಲು ಗೌರವ ಪ್ರಶಸ್ತಿಗಳನ್ನು ಘೋಷಿಸಿದೆ. ಅಮ್ಮ ಪ್ರಶಸ್ತಿಯ ಹೊರತಾಗಿ ಆರು ಜನರಿಗೆ ಈ ಗೌರವ ಪುರಸ್ಕಾರ ನೀಡಲಾಗುತ್ತಿದೆ ಎಂದು ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಸಂಚಾಲಕ ಪ್ರಭಾಕರ ಜೋಶಿ ತಿಳಿಸಿದ್ದಾರೆ,

ಲೋಹಿಯಾ ಪ್ರಕಾಶನದ ಮೂಲಕ ಉತ್ತಮ ಕೃತಿ ಸಂಸ್ಕೃತಿಯನ್ನು ಹುಟ್ಟುಹಾಕಿದ್ದಕ್ಕಾಗಿ ಬಳ್ಳಾರಿಯ ಸಿ.ಚನ್ನಬಸವಣ್ಣ ಅವರಿಗೆ, ಪೋಲೀಸ್ ಕ್ಷೇತ್ರದಲ್ಲಿರುವ ಸಾಹಿತ್ಯ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ ಅವರನ್ನು ಪರಿಚಯಿಸಿದ್ದಕ್ಕಾಗಿ ಕವಿ ಹಾಗೂ ಬಿಜಾಪುರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ ಡಿ ಸಿ ರಾಜಪ್ಪ ಅವರಿಗೆ, ಹೈದರಾಬಾದ್ ಕರ್ನಾಟಕದಲ್ಲಿ ಸಾಹಿತ್ಯ ಪ್ರೀತಿಯನ್ನು ಬೆಳೆಸಿದ್ದಕ್ಕಾಗಿ ಕಲಬುರ್ಗಿಯ ಚಿತ್ರಶೇಖರ ಕಂಠಿ, ಸಿದ್ಧರಾಮ ಹೊನ್ಕಲ್, ರಾಯಚೂರಿನ ಮಹಾಂತೇಶ ನವಲಕಲ್ ಮತ್ತು ಬೀದರ್ ನ ಜಯದೇವಿ ಗಾಯಕವಾಡ ಅವರನ್ನು ಗೌರವಿಸಲಾಗುತ್ತದೆ.

ನವೆಂಬರ್ 26 ರಂದು ಸಂಜೆ 5-15ಕ್ಕೆ ಸೇಡಂನ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

 

ಸೂರಿ -5: ಅಲ್ಲಿತ್ತು ಆ ಕೋಟು…

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 5

ಸೋಮವಾರ. ನಾಗರಾಜರಾಯರು ಹೇಳಿದಂತೆ ಹಳೇಬೀಡು ಸುಂದರರಾಯರು ಮುಂದಿನ ವಾರ ನಾಗಭೂಷಣನನ್ನ ಕಂಡರು. ’ಇನ್ನೂ ಕೇಸು ಫೈಲು ರೆಡೀ ಮಾಡಿಲ್ಲ. ಯಿನ್ನೊಂದೈದಾರು ದಿಸಾ ಆಗ್ತವೆ. ಆಮೇಲೆ ಬರ್ರಿ’ ಅಂದ ನಾಗಭೂಷಣನ ಮಾತಿಗೆ ತಲೆ ಹಾಕಿ ಹಳೇಬೀಡು ಸುಂದರರರಾಯರು ನಾಗಭೂಷಣನಿಗೆ ಬೆನ್ನು ಮಾಡಿದರು.
ನಾಗರಾಜರಾಯರು ಕುಚೋದ್ಯಕ್ಕೆ ಹಾಗೆ ಹೇಳಿದ್ದೋ, ಅಥವಾ ನಾಗರಾಜರಾಯರು ಕೊಟ್ಟಿದ್ದನ್ನು ಈ ನಾಗಭೂಷಣ ಕಸಿದುಕೊಳ್ಳುವ ಹುನ್ನಾರದಲ್ಲಿದ್ದಾನೋ ಎನ್ನುವ ಜಿಜ್ಞಾಸೆಯಲ್ಲಿದ್ದಾಗಲೇ ನಾಗಭೂಷಣನ ಪದಗಳು ಕಿವಿಗೆ ತಾಕಿದವು. ’ರಾಯ್ರೇ, ಕರೀಕೋಟಿದ್ಯಾ?’ ಹಳೇಬೀಡು ಸುಂದರರಾಯರ ಹೆಜ್ಜೆಗಳು ಆಸೆಯಿಂದ, ಯಾವುದೋ ಭರವಸೆಯಿಂದ ಮುಗ್ಗರಿಸಿದವು. ಪಕ್ಕದ ಟೇಬಲ್ಲನ್ನು ಹಿಡಿದು ಸಾವಳಿಸಿಕೊಂಡು ಇತ್ತ ತಿರುಗಿ, ’ಇದೇ’ ಅಂದರು. ’ರೆಡಿ ಮಾಡ್ಕಳಿ. ಮುಂದಿನ ಶನಿವಾರ ಬರ್ರಿ. ಫೈಲು ಕೊಡ್ತೀನಿ. ಮೇಲಿನ ಸೋಮವಾರ ಯಜಮಾನ್ರನ್ನು ನೋಡಿ ಬ್ರೀಫಿಂಗ್ ತಗಳಿ.’
ಅದೆಷ್ಟೋ ವರ್ಷಗಳಿಂದ ಕಿಲುಬು ಹತ್ತಿದ್ದ ಹಳೇಬೀಡು ಸುಂದರರಾಯರ ನಸೀಬಿಗೆ ಇವತ್ತು ‘ಹಳೇಬೀಡು ಸುಂದರರಾಯ‘ ಎನ್ನುವ ಹೆಸರು ನೆನಪಾದಂತಿತ್ತು. ತುಟಿಗಳನ್ನು ಎಡಾಬಲಾ ಹರಿದೇ ಹೋಗುವಷ್ಟು ಅಗಲಿಸಿ ಮುಖದ ತುಂಬಾ ನಗು ಹರಡಿಸಿಕೊಂಡು, ಬಣ್ಣದ ರಂಗೋಲಿ ಬಿಟ್ಟಂತೆ ಮುಖಕ್ಕೆ ಬಣ್ಣ ತಂದುಕೊಂಡು ಹಳೇಬೀಡು ಸುಂದರರಾಯರು ಹೊರಟರು.
More

Previous Older Entries

%d bloggers like this: