ಮೈಸೂರಿಗೆ ಬನ್ನಿ

ನಾ ತುಕಾರಾಂ ಅಲ್ಲ

Gandhi and His follower …

-ಯತೀಶ್ ಸಿದ್ದಕಟ್ಟೆ

ವಚನ ಬ್ಯಾಂಡ್ …

ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ವಚನ ಬ್ಯಾಂಡ್ ತಂಡದವರಿಂದ ಬಸವಣ್ಣ , ಅಕ್ಕ ಮಹಾದೇವಿ , ಮತ್ತು ಅಲ್ಲಮಪ್ರಭು ಇವರುಗಳ ವಚನ ಗಾಯನ ಕಾರ್ಯಕ್ರಮ ನಡೆಯಿತು. ಆ ಕಾರ್ಯಕ್ರಮದ ಒಂದು ನೋಟ ಇಲ್ಲಿದೆ.

ಮತ್ತಷ್ಟು ಫೋಟೋಗಳು : ಸೈಡ್ ವಿಂಗ್

ಸಿ ಪಿ ಕೆ ಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ …

ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ ಹಾಗು ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನೃಪತುಂಗ ಸಾಹಿತ್ಯ ಪ್ರಶಸ್ತಿ  ಮತ್ತು ಅರಳು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.

ಸಿಪಿಕೆ ಅವರಿಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ ಹಾಗು ಸುಶ್ರುತ ದೊಡ್ಡೇರಿ ಅವರಿಗೆ ಅರಳು ಪ್ರಶಸ್ತಿ ನೀಡಿ ಗೌರವಿಸಲಾಯಿತು.ಗೃಹ ಮತ್ತು ಸಾರಿಗೆ ಸಚಿವ ಆರ್.ಅಶೋಕ್ , ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ನಲ್ಲೂರ್ ಪ್ರಸಾದ್ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು

ಮತ್ತಷ್ಟು ಫೋಟೋಗಳು : ಓದು ಬಜಾರ್

ಜೋಗಿ ಬರೆಯುತ್ತಾರೆ: ಬೇಡ…

-ಜೋಗಿ

ಇಲ್ಲಿ ವಿಸರ್ಜನೆ ಮಾಡಬಾರದು. ಅಲ್ಲಿ ಕಾಲಿಡಬಾರದು. ಈ ರಸ್ತೆಯಲ್ಲಿ ವಾಪಸ್ಸು ಬರಬಾರದು. ಅಲ್ಲಿ ಕಾರು ನಿಲ್ಲಿಸಬಾರದು. ಮತ್ತೆಲ್ಲೋ ನಿಲ್ಲುವಂತಿಲ್ಲ. ಇನ್ನೆಲ್ಲೋ ಮಲಗಬಾರದು. ಕಾರಲ್ಲಿ ಪ್ರೀತಿ ಮಾಡಬಾರದು. ದೇವಸ್ಥಾನದ ಮುಂದೆ ಸಿಗರೇಟು ಸೇದಬಾರದು. ಒಳಾಂಗಣದಲ್ಲಿ ಕಾಲು ಇಳಿಬಿಟ್ಟು ಕೂರಬಾರದು. ಅಂಗಿ ಬನೀನು ಹಾಕಿಕೊಂಡು ಗರ್ಭಗುಡಿಯನ್ನು ಪ್ರವೇಶಿಸಬಾರದು.

ಸತ್ಯನಾರಾಯಣ ಪೂಜೆ ಪ್ರಸಾದ ನಿರಾಕರಿಸಬಾರದು. ಅಯ್ಯಪ್ಪನ ದರ್ಶನಕ್ಕೆ ಹೋಗುವವರು ಕುರಿಕೋಳಿ ತಿನ್ನಬಾರದು. ರಾಘವೇಂದ್ರಸ್ವಾಮಿ ಭಕ್ತರು ಗುರುವಾರ ಊಟ ಮಾಡಬಾರದು. ಚೌಡೇಶ್ವರಿ ಆರಾಧಕರು ಶನಿವಾರ ಕುಡೀಬಾರದು. ಮನೆಬಿಟ್ಟು ಹೋಗುವಾಗ ಎಲ್ಲಿಗೆ ಅಂತ ಕೇಳಬಾರದು. ಹೆಣ್ಮಕ್ಕಳು ಬೋಳುಹಣೆಯಲ್ಲಿ ಇರಬಾರದು. ರಾತ್ರಿ ತಲೆ ಬಾಚಬಾರದು. ಬಟ್ಟೆ ಹೊಲಿಯಬಾರದು….ನೂರೆಂಟು ರಾಮಾಯಣ. ಎಲ್ಲಿಗೆ ಹೋದರೂ ಇಂಥದ್ದೆ ನಿಯಮ, ನೀತಿ. ಒಂದಲ್ಲ ಎರಡಲ್ಲ.

ಕೆಲವು ಕಾನೂನು ಕೊಟ್ಟದ್ದು, ಕೆಲವು ಪರಂಪರೆ ಬಿಟ್ಟದ್ದು, ಕೆಲವು ಅಂಧಶ್ರದ್ಧೆ ಇಟ್ಟದ್ದು. ಆಕಾಶವಾಣಿ ಕೇಳುತ್ತಿದ್ದರೆ ಮತ್ತೊಂದಷ್ಟು ಸಲಹೆ. ಹಿಂದೆ ನೋಡಿ ಮುಂದೆ ನೋಡಿ, ಮೇಲಕ್ಕೂ ಕೆಳಕ್ಕೂ ನೋಡಿ, ಅಪರಿಚಿತರಿಗೆ ಮನೆ ಕೊಡಬೇಡಿ, ನೀರು ಪೋಲು ಮಾಡಬೇಡಿ, ಎರಡೇ ಮಕ್ಕಳು ಮಾಡಿ, ಕುಡಿದು ವಾಹನ ಓಡಿಸಬೇಡಿ, ದೊಡ್ಡ ದನಿಯಲ್ಲಿ ಮಾತಾಡಬೇಡಿ, ಸಜ್ಜನಿಕೆಯಿಂದ ವರ್ತಿಸಿ, ನಮ್ಮ ದೇಶದ ಮಾನ ಉಳಿಸಿ, ಕರೆಂಟು ಉಳಿಸಿ, ಕಾಡು ಉಳಿಸಿ, ಪ್ರಾಣಿಗಳನ್ನು ಹಿಂಸಿಸಬೇಡಿ.ಇಷ್ಟೇ ಅಲ್ಲ.

More

ರಂಗದ ಮೇಲೆ ಬರುವ ಮುನ್ನ …

ಸಂಚಾರಿ ಥಿಯೇಟ್ರು ನಾಟಕ ತಂಡ ಕುವೆಂಪು ಅವರು ರಚಿಸಿರುವ ‘ ನರಿಗಳಿಗೇಕೆ ಕೋಡಿಲ್ಲ’ ಕಥನವನ್ನು  ರಂಗದ ಮೇಲೆ ತರುತ್ತಿದೆ. ಆ ನಾಟಕದ ರಿಹರ್ಸಲ್ ನ ಒಂದು ನೋಟ ಇಲ್ಲಿದೆ…

ಮತ್ತಷ್ಟು ಫೋಟೋಗಳು : ಸೈಡ್ ವಿಂಗ್

ಅಂತರಾಷ್ಟ್ರೀಯ ಚಲನಚಿತ್ರೋತ್ಸವ : ಒಂದು ನೋಟ …

ಬೆಂಗಳೂರಿನ ಯವನಿಕಾದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದ ಒಂದು ನೋಟ ಇಲ್ಲಿದೆ.

ಟಿ.ಎಸ್.ನಾಗಾಭರಣ ,ಶಾಜಿ ಕರುಣ್, ಜಯರಾಮ ರಾಜೇ ಅರಸ್, ಜಾಯ್ ಯಂಗ್ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು.

ಚಿತ್ರಗಳು : ಚಂದ್ರಕೀರ್ತಿ

ಮತ್ತಷ್ಟು ಫೋಟೋಗಳು :ಮ್ಯಾಜಿಕ್ ಕಾರ್ಪೆಟ್

ಜಯಶ್ರೀ ಕಾಲಂ:ಮಧುರ ಮಧುರವೀ ಮಂಜುಳ ಗಾನ…

@@ ಚಂದನ ವಾಹಿನಿಯಲ್ಲಿ ಅತ್ಯಂತ ಆಸಕ್ತಿಯಿಂದ ವೀಕ್ಷಿಸುವ ಕಾರ್ಯಕ್ರಮ ಮಧುರ ಮಧುರ ವೀ ಮಂಜುಳ ಗಾನ. .ಇದನ್ನು ಲೈವ್  ಟೆಲಿ ಕಾಸ್ಟ್ ಮಾಡಿದರೂ ಆಗ ವೀಕ್ಷಿಸದ ವೀಕ್ಷಕರಿಗೊಸ್ಕರ  ಪುನಃ ಪ್ರಸಾರ ಮಾಡುತ್ತದೆ ವಾಹಿನಿ. ಸ್ಪುಟವಾದ ಕನ್ನಡದಲ್ಲಿ ಸುಂದರವಾಗಿ ನಿರೂಪಣೆ ಮಾಡುವ ನಿರೂಪಕಿ ಈ ಕಾರ್ಯಕ್ರಮದ ಪ್ಲಸ್ ಪಾಯಿಂಟ್. ಇತ್ತೀಚೆಗೆ ಕಲ್ಯಾಣ್ ಕುಮಾರ್ ವಿಶೇಷ  ಮಧುರ  ….! ಇತ್ತು.

ವಿಶೇಷ ಅತಿಥಿಯಾಗಿದ್ದವರು ಪತ್ರಕರ್ತ  ಮಣಿಕಾಂತ್. ತಮ್ಮ ಬರಗಳಲ್ಲಿ ಲಾಲಿತ್ಯ ಹೊಂದಿರುವ ಮಣಿಕಾಂತ್ ಪ್ರೇಮ ಲೇಖಕ ಎಂದೇ ಹೇಳ ಬಹುದು. ಅವರ ಪ್ರತಿಯೊಂದು ರೈಟಪ್ ಇಷ್ಟಪಟ್ಟು ಓದುವಂತೆ ಮಾಡುತ್ತದೆ. ಮಣಿಕಾಂತ್ ಅವರು ಕಲ್ಯಾಣ್ ಕುಮಾರ್ ಅವರ ಬದುಕಿನ ಬಗ್ಗೆ  ಹೇಳುತ್ತಾ ತಾಯಿ ಕಲ್ಯಾಣಮ್ಮನವರ ಹೆಸರನ್ನು ತಮ್ಮ  ಜೋಡಿಸಿಕೊಂಡರು ಎಂದು ತಿಳಿಸಿದರು .

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಇದು ‘ಬ್ರೇಕಿಂಗ್ ನ್ಯೂಸ್’ ಅಲ್ಲ

ಪರಮ ಕಾಯಕ ಜೀವಿ ಇನ್ನಿಲ್ಲ

ಮಾಲಾ ಲಹರಿ

ಮಲ್ಲಿಕಾರ್ಜುನ, ವಯಸ್ಸು ೫೦. ವೃತ್ತಿ , ನಲ್ಲಿ ಕೆಲಸ (ಪ್ಲಂಬರ್). ಯಾವುದೇ ದುರಭ್ಯಾಸವಿಲ್ಲ. ನಮಗೆ ಅವರ ಪರಿಚಯವಾಗಿ  ಸುಮಾರು ೨೦ ವರ್ಷ. ನಮ್ಮ ಅಭಿಮಾನಕ್ಕೆ ಪಾತ್ರರಾಗಿದ್ದರು. ಪ್ರಾಮಾಣಿಕ ಕಾಯಕ ಜೀವಿ. ಒಬ್ಬರ ಮನೆಯ ಎರಡನೇ ತಾರಸಿಯಲ್ಲಿರುವ ತೊಟ್ಟಿಯನ್ನು ಚೊಕ್ಕಗೊಳಿಸುವಾಗ ಮಲ್ಲಿಕಾರ್ಜುನ ಆಯತಪ್ಪಿ ಕೆಳಗಿನ ತಾರಸಿಗೆ ಬಿದ್ದರಂತೆ. ಅರ್ಧ ಗಂಟೆ ಯಾರಿಗೂ ಗೊತ್ತಾಗಲೇ ಇಲ್ಲ. ಮತ್ತೆ ಆಸ್ಪತ್ರೆಗೆ ಸೇರಿಸಿದರು. ಜ್ಞಾನ ಇಲ್ಲ ಎಂದು ೩.೧೧.೨೦೧೦ರಂದು ನಮಗೆ ಸುದ್ದಿ ಬಂತು. ಆ ದಿನ ನಮಗಾದ ಬೇಸರ ತೀವ್ರ. ಛೇ ಒಳ್ಳೆಯವರಿಗೇಕೆ ಇಂಥ ಶಿಕ್ಷೆ ಎಂದು ಕೇಳಿಕೊಂಡೆ. ೬.೧೧.೨೦೧೦ ರಂದು ಬೆಳಗ್ಗೆ ಮಲ್ಲಿಕಾರ್ಜುನ ಈ ಲೋಕ ತ್ಯಜಿಸಿ ಶಿವನನ್ನು ಅರಸುತ್ತ ನಡೆದರು. ನಮಗೆ ಸುದ್ದಿ ತಿಳಿಯುವಾಗ ರಾತ್ರಿ ಆಗಿತ್ತು. ಹಾಗಾಗಿ ಮುಖ ನೋಡಲೂ ಸಿಗಲಿಲ್ಲ.

ನಮ್ಮ ಮಾವ ೨೦೦೫ರಲ್ಲಿ ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ವಾಸದಲ್ಲಿದ್ದಾಗ ಈ ಮಲ್ಲಿಕಾರ್ಜುನ ಚಾಮುಂಡಿಬೆಟ್ಟಕ್ಕೆ ಹೋಗಿ ಪೂಜೆ ಮಾಡಿಸಿ ಆಸ್ಪತ್ರೆಗೆ ಪ್ರಸಾದ ತಂದು ಮಾವನಿಗೆ ಕೊಟ್ಟು, ಬೇಗ ಹುಶಾರಾಗಿ ಮನೆಗೆ ಬನ್ನಿ ಎಂದು ಹಾರೈಸಿದ್ದರು. ಎಂಥ ನಿರ್ವಾಜ್ಯ ಪ್ರೇಮವದು. ಮತ್ತೆ ಆಗಾಗ ಮನೆಗೆ ಬಂದು ಬುದ್ಧಿಯವರು ಚೆನ್ನಾಗಿದ್ದಾರ? ಎಂದು ನೋಡಿ ಮಾತಾಡಿಸಿ ಹೋಗುತ್ತಿದ್ದರು. ದಾರಿಯಲ್ಲಿ ಎಲ್ಲೇ ಕಾಣಸಿಕ್ಕಲಿ, ಸೈಕಲ್ ನಿಲ್ಲಿಸಿ ಕುಶಲ ವಿಚಾರಿಸಿಯೇ ಮುಂದೆ ಹೋಗುತ್ತಿದ್ದುದು. ನಮ್ಮ ಮನೆಯಲ್ಲಿ ಯಾವುದೇ ಸಮಸ್ಯೆ ಎದುರಾದರೂ ಮಲ್ಲಿಕಾರ್ಜುನರಿಗೆ ದೂರವಾಣಿ ಮಾಡಿದರೆ ಕ್ಷಣಾರ್ಧದಲ್ಲಿ ಬಂದು ಯಾವ ಕೆಲಸ ಎಂದು ನೋಡಿ ಅವರಿಗೆ ಮಾಡಲಾಗದಿದ್ದರೆ ಅದಕ್ಕೆ ಸಂಬಂಧಪಟ್ಟವರನ್ನು ಕರೆಸಿ ಸಮಸ್ಯೆ ಇತ್ಯರ್ಥ ಮಾಡಿಸುತ್ತಿದ್ದರು. ಸಕಲ ಕೆಲಸ ವಲ್ಲಭ ಎಂದು ನಾನು ಹೇಳುತ್ತಿದ್ದೆ. ಯಾವ ಕೆಲಸ ಮಾಡುವಾಗಲೂ ಶಿವಾ ಕಾಪಾಡಪ್ಪ ಎಂದು ಹೇಳಿಯೇ ಕೆಲಸ ಮಾಡುತ್ತಿದ್ದುದು. ಶಿವ ಎಂದರೆ ಬಹಳ ಭಕ್ತಿ. ಕೆ.ಹೆಮ್ಮನಹಳ್ಳಿಯ ಮಹಾಲಿಂಗೇಶ್ವರ ದೇವಾಲಯಕ್ಕೆ ಪ್ರತೀಸಲವೂ ನೂರೋ ಇನ್ನೂರು ರೂಪಾಯಿ  ಕೊಟ್ಟು ಆ ಶಿವನಿಗೆ ಕೊಟ್ಟರೆ ಇದರ ಎರಡರಷ್ಟು ವಾಪಾಸು ಕೊಡುತ್ತಾನೆ ಎಂದು ಭಕ್ತಿಯಿಂದ ಹೇಳುತ್ತಿದ್ದರು.

ಮಕ್ಕಳಿಬ್ಬರಿಗೂ ಉನ್ನತ ವಿದ್ಯಾಭ್ಯಾಸ ಕೊಡಿಸಿದ್ದಾರೆ. ದೊಡ್ದಮಗ ಇಂಜಿನಿಯರಾಗಿ ಕೆಲಸದಲ್ಲಿದ್ದಾನೆ ಎಂದು ಇತ್ತೀಚೆಗೆ ಸಿಕ್ಕಾಗ ಸಂತಸದಿಂದ ಹೇಳಿದ್ದರು. ಹಾಗಾಗಿ ಸರಸ್ವತೀಪುರದಲ್ಲಿರುವ ಮನೆ ಖಾಲೀ ಮಾಡಿ ಹೆಬ್ಬಾಳಕ್ಕೆ ಸ್ವಂತ ಮನೆಗೆ ಹೋಗಿದ್ದೇವೆ. ಮಗನಿಗೆ ಕೆಲಸಕ್ಕೆ ಹೋಗಲು ಅಲ್ಲಿಂದ ಹತ್ತಿರವಾಗುತ್ತದೆ. ಆದರೆ ನನ್ನ ಕೆಲಸ ಇರುವುದು ಎಲ್ಲ ಇಲ್ಲಿಯೇ. ಬೆಳಗ್ಗೆ ಇಲ್ಲಿಗೇ ಬರುತ್ತೇನೆ ಎಂದಿದ್ದರು. ಅಂಥ ಸರಳ ಸಜ್ಜನ ಮಲ್ಲಿಕಾರ್ಜುನ ಅವನ ಪ್ರಿಯ ಸ್ವಾಮಿ ಶಿವನ ಬಳಿ ಇಷ್ಟು ಶೀಘ್ರವೇ ತೆರಳಿದ್ದು ನಮಗೆಲ್ಲ ನೋವು ತಂದಿದೆ. ಒಳ್ಳೆಯವರಿಗಿದು ಕಾಲವಲ್ಲವೇ? ಎಂದು ನನ್ನ ಮನ ಕೇಳುತ್ತಲೇ ಇದೆ. ಅವರಿಗಿದೋ ನನ್ನ ನುಡಿನಮನದ ಶ್ರದ್ಧಾಂಜಲಿ.

Previous Older Entries

%d bloggers like this: