ಜಯಮಾಲಳಿಗೇಕೆ ಅಯ್ಯಪ್ಪನ ಮೋಹ? …

ಉಷಾ ಕಟ್ಟೆಮನೆ

ಮೌನ ಕಣಿವೆ

ನಾಲ್ಕು ವರ್ಷಗಳ ಹಿಂದೆ ಅಂದರೆ ೨೦೦೬ರ ಆಗಸ್ಟ್೫ರಂದು ನಟಿ ಜಯಮಾಲಾ ಅವರು ತಾನು ತನ್ನ ೨೭ನೇ ವಯಸ್ಸಿನಲ್ಲಿ ಶಬರಿಮಲೆಯ ಅಯ್ಯಪ್ಪನ ದರ್ಶನ ಪಡೆದು ಆತನ ಪಾದಗಳನ್ನು ಸ್ಪರ್ಶಿಸಿದ್ದೇನೆ ಎಂದು ಮಾಧ್ಯಮಗಳೆದುರು ಹೇಳಿಕೊಂಡರು. ಅನಾರೋಗ್ಯಪೀಡಿತರಾದ ತಮ್ಮ ಪತಿಯ ಶ್ರೆಯೋಭಿಲಾಷೆಗಾಗಿ ಅವರು ಈ ಯಾತ್ರೆ ಕೈಗೊಂಡಿದ್ದರು.

ಅವರ ಹೇಳಿಕೆ ದೇಶಾದಾದ್ಯಂತ ಸಂಚಲನವನ್ನುಂಟು ಮಾಡಿತು. ಧಾರ್ಮಿಕ ಮನೋಭಾವದ ಜನರು ಛೇ ಆಕೆ ಹಾಗೆ ಮಾಡಬಾರದಿತ್ತು ಎಂದು ನೊಂದುಕೊಂಡರು.
ಜಯಮಾಲಾ ಹೇಳಿಕೆ ನೀಡಿದ ಬೆನ್ನಲ್ಲೆ ಇನ್ನೊಬ್ಬ ನಟಿ ಗಿರಿಜಾ ಲೋಕೆಶ್ ಕೂಡಾ ತಾವು ಅಯ್ಯಪ್ಪನ ದರ್ಶನ ಪಡೆದಿರುವುದಾಗಿ ಹೇಳಿಕೊಂಡರು.
ಕಾಕತಾಳಿಯವೆಂದರೆ ಇಬ್ಬರೂ ಒಂದೇ ವರ್ಷ ಅಯ್ಯಪ್ಪನ ದರ್ಶನ ಪಡೆದಿರುವುದಾಗಿ ಹೇಳಿಕೊಂಡಿದ್ದರು. ಅದು ೧೯೮೭ರಲ್ಲಿ.

ಅವತ್ತಿನ ಜಯಮಾಲರ ಹೇಳಿಕೆ ಈಗ ನಾಲ್ಕು ವರ್ಷಗಳ ನಂತರ ಮತ್ತೆ ಮರುಜೀವ ಪಡೆದುಕೊಂಡಿದೆ. ಆಕೆಯ ಮೇಲೆ ದೋಷಾರೋಪಣಾ ಪಟ್ಟಿ ಸಲ್ಲಿಸಲು ಕೇರಳ ಪೋಲಿಸರು ಮುಂದಾಗಿದ್ದಾರೆ. ಭಾರತೀಯ ದಂಡ ಸಂಹಿತೆಯ ೨೯೫ ಎ [ಇದು ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದನ್ನು ವಿವರಿಸುತ್ತದೆ.] ಕಲಮಿನಡಿ ದೋಷರೋಪಣಾ ಪಟ್ಟಿ ಸಲ್ಲಿಸಲು ನಿರ್ಧರಿಸಲಾಗಿದೆ.

ಜಯಮಾಲಾಗೆ ಇದೆಲ್ಲಾ ಬೇಕಿತ್ತೇ?

ಜಯಮಾಲಾ ತುಳುನಾಡಿನ ಹೆಣ್ಣುಮಗಳು. ಅದು ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಒಪ್ಪಿಕೊಂಡಿರುವ ನಾಡು. ಇಂದಿಗೂ ಅಲ್ಲಿನ ಮಹಿಳೆಯರು ಸ್ವಾಭಿಮಾನಿಗಳೂ, ಛಲವಂತರೂ, ಧೈರ್ಯಶಾಲಿಗಳೂ, ಆಧುನಿಕ ಮನೋಧರ್ಮದವರೂ ಆಗಿದ್ದಾರೆ. ನಿಜವಾದ ಅರ್ಥದಲ್ಲಿ ಅವರು ಸ್ತ್ರೀವಾದಿಗಳು. ಆದರೂ ಧಾರ್ಮಿಕ ವಿಧಿವಿಧಾನಗಳಲ್ಲಿ, ಆಚರಣೆಯಲ್ಲಿ ಅವರನ್ನು ಅಲ್ಲಿನ ಪುರುಷ ಸಮಾಜ ತಮ್ಮ ಸರಿಸಮಾನರಂತೆ ಕಾಣುವುದಿಲ್ಲ.
More

Photography work shop…

ಇಲ್ಲೂ  ನೋಡಿ : invitations blog

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…

ಅದು ಆಗಿದ್ದು ಹೀಗೆ- ಫೇಸ್ ಬುಕ್ ನಲ್ಲಿ ಸಾಕಷ್ಟು ಕಾಲ ಕಳೆಯುವ ನಾನು ಅದೂ ಇದು ಜಾಲಾಡು ತ್ತಿದ್ದಾಗ ಒಂದು ವಿಡಿಯೋ ಕಣ್ಣಿಗೆ ಬಿತ್ತು . ಅದು  ಹೋಳಿ ಸಂಭ್ರಮದ ವಿಡಿಯೋ, ಹೋಳಿ ಬಗ್ಗೆ ತಲೆ ಚಿಟ್ಟಾಗುವಷ್ಟು ಫೋಟೋ, ಜಾಹೀರಾತು, ವಿಡಿಯೋ ನೋಡಿ ಸಾಕಾಗಿರುವ ನಾನು ಹಾಗೇ ಸುಮ್ಮನೆ ಮುಂದೆ ಹೋಗಿಬಿಡುತ್ತಿದ್ದೆನೇನೋ?  ಆದರೆ ಆ ವಿಡಿಯೋ ಮೇಲೆ ‘ಇದು ನೀವು ನೋಡಲೇ ಬೇಕಾದ ವಿಡಿಯೋ ಇದು’ ಅನ್ನುವ ಸ್ಪೆಷಲ್ ಶಿಫಾರಸ್ ಇತ್ತು . ಹಾಗಾಗಿ ಬಟನ್ ಒತ್ತಿದೆ.

ಅದು ಖಂಡಿತಾ ಹೋಳಿ ಸಂಭ್ರಮವನ್ನು ಬಣ್ಣಿಸುವ ವಿಡಿಯೋ. ಆದರೆ ಅಲ್ಲೊಂದು ವಿಶೇಷ ಇತ್ತು ಹುಡುಗರು ಗದ್ದಲ ಎಬ್ಬಿಸುವ, ಬಣ್ಣ ಎರಚಿಕೊಂಡು ಸಂಭ್ರಮಿಸುವ, ಆಕಾಶದಲ್ಲಿ ಹಾರುವ ವಿಮಾನಕ್ಕೂ ಬಣ್ಣ ಎರಚಲು ಹೋಗುವ, ಮನೆಗೆ ಬಂದ ಹಾಲಿನವ, ಇರುವ ರೇಡಿಯೋ ಎಲ್ಲಕ್ಕೂ ಬಣ್ಣ ಹಚ್ಹುವ ಹೋಳಿ ಉತ್ಸಾಹವನ್ನು ಆ ವಿಡಿಯೋ ಹಿಡಿದಿಟ್ಟಿತ್ತು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಜಯಶ್ರೀ ಕಾಲಂ:ಐ ಡೋಂಟ್ ಕೇರ್ ಎನಿ ಬಡಿ…

ಚಾನೆಲ್  ಹೊಸತನ್ನು ನೀಡುವ ಹುಮ್ಮಸ್ಸಿನಲ್ಲಿ  ಮನಸ್ಸನ್ನು ಒಂದೇ  ಕಡೆ ಇಡದ ರಾಖಿಗೆ ಮನಸ್ಸುಗಳನ್ನು ಸರಿಪಡಿಸುವ ಕೆಲಸ ನೀಡಿದೆ ಫನ್ನಿ .
ನಿನ್ನೆ ಆಜ್ತಕ್ ವಾಹಿನಿಯಲ್ಲಿ ಆಕೆಯ ಸಂದರ್ಶನ ನಡೀತಾ ಇತ್ತು, ಅವಳು ಕೊಟ್ಟ ಉತ್ತರಗಳು ಅಸಡ್ಡೆಯಿಂದ ಕೂಡಿತ್ತು  , ಸ್ವಲ್ಪವೂ ಮಾತಿನ ಮೇಲೆ  ನಿಗಾ ಇರಲಿಲ್ಲ ಆಕೆಗೆ. ನಾನು ಏನು ಹೇಳಿದ್ರು ನಿಮಗೆ ದೊಡ್ಡದಾಗಿ ಕಾಣುತ್ತದೆ ಆದರೆ ಅದೇ ಬೇರೆ ನಟಿಯರು ಮಾಡುವ ಯಾವ ತಪ್ಪು- ಆಡುವ ರೀತಿ ಕಣ್ಣಿಗೆ ಕಾಣಲ್ಲ ಆದರೆ ಈ ರಾಖಿ ಮಾಡುವ  ತಪ್ಪು , ಐ ಡೋಂಟ್ ಕೇರ್ ಎನಿ ಬಡಿ, ಹೀಗೆ ಎಲ್ಲಾ ಉತ್ತರವೂ ಬೇಜವಾಬ್ದಾರಿಯಿಂದ ಕೂಡಿತ್ತು. ಆಜ್ ತಕ್ ನವರು ಈಕಾರ್ಯಕ್ರಮಕ್ಕೆ ಕೊಟ್ಟ ಶೀರ್ಷಿಕೆ ಏ ರಾಖಿ ನಹಿನ್ ಸುದರೇಗಿ

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಕಾಮರಾಜ ಮಾರ್ಗ ಪುಸ್ತಕ ಬಿಡುಗಡೆ …

ರವಿಬೆಳೆಗೆರೆಯವರ ಕಾಮರಾಜ ಮಾರ್ಗ ಪುಸ್ತಕ ಇತ್ತೀಚಿಗೆ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಎಂ.ಪಿ.ಪ್ರಕಾಶ್ , ಗಾಯಕಿ ಬಿ.ಆರ್ .ಛಾಯಾ , ವಿಶ್ವೇಶ್ವರ ಭಟ್ ಸೇರಿದಂತೆ ಹಲವು ಮಂದಿ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ,ಆ ಕಾರ್ಯಕ್ರಮದ ಒಂದು ನೋಟ ಇಲ್ಲಿದೆ.

ಚಿತ್ರಗಳು: ಶಿವೂ.ಕೆ
ಇನ್ನಷ್ಟು ಫೋಟೋಗಳು : ಓದು ಬಜಾರ್

 

Suu Kyi Freed……

-ಸತೀಶ್ ಆಚಾರ್ಯ


ಕಮಲಮಣಿ ಕಾಮಿಡಿ ಕಲ್ಯಾಣ…

 

 

ಪೌರಾಣಿಕ ನಾಟಕೋತ್ಸವ …

%d bloggers like this: