ಹೊತ್ತಿಗೆ ಹೊರಬರುವ ಹೊತ್ತು …

ಬೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ದ್ ಕಲ್ಚರ್ ನಲ್ಲಿ ಶ್ರೀದೇವಿ ಕಳಸದ  ಅವರ ‘ಹಾಡಲಾಗದ ಸಾಲುಗಳು’ ಕವನ ಸಂಕಲನ ಹಾಗು  ಸಿರಿ ಹುಲಿಕಲ್ ಅವರ ‘ನಡೆದಷ್ಟು ದಾರಿ ದೂರ’ ಕಥಾ ಸಂಕಲನ ಬಿಡುಗಡೆಯಾಯಿತು. ಸಾಹಿತಿ ಯು.ಆರ್.ಅನಂತಮೂರ್ತಿ, ಪತ್ರಕರ್ತರಾದ ಆರ್.ಪೂರ್ಣಿಮಾ ,ಜೋಗಿ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು . ಆ ಕಾರ್ಯಕ್ರಮದ ಒಂದು ನೋಟ ಇಲ್ಲಿದೆ…

ಚಿತ್ರಗಳು :ಪ್ರಕಾಶ್ ಹೆಗಡೆ

ಇನ್ನಷ್ಟು ಫೋಟೋಗಳು : ಓದು ಬಜಾರ್


ಬರ್ತಾ ಇದೆ ‘Sufi Festival’

ರಾಮಧಾನ್ಯ…

ಬರವಣಿಗೆ ಮತ್ತು ಸೃಜನಶೀಲತೆ …

ಜಯಶ್ರೀ ಕಾಲಂ:ಅದ್ಭುತವಾಗಿದೆ ಕಣ್ರೀ ,ಒಮ್ಮೆ ತಪ್ಪದೆ ವೀಕ್ಷಿಸಿ..

@@ ನಾನು ಒಮ್ಮೆ ಬರೆದಿದ್ದೆ ಸ್ಟಾರ್ ಪ್ಲಸ್ ವಾಹಿನಿಯವರು ಅಡುಗೆ ಮನೆಗೂ ದಾಳಿ ಮಾಡಿದ್ದಾರೆ ರಿಯಾಲಿಟಿ ಷೋ ಮೂಲಕ ಎಂದು. ಆದ್ರು ಆ ಕಾರ್ಯಕ್ರಮ ಸಿಕ್ಕಾಪಟ್ಟೆ ಇಷ್ಟ ಆಗುತ್ತದೆ ಕಣ್ರೀ, ಒಬ್ಬ ಹೆಣ್ಣು ಮಗಳಾಗಿ ಅಲ್ಲ ಆ ರಿಯಾಲಿಟಿ ಷೋ ವಿಶೇಷತೆಗೆ. ಈಗ ಅಲ್ಲಿ ಟಫ್ ಕಾಂಪಿಟೆಶನ್  ಶುರು ಆಗಿದೆ.

ಇತ್ತೀಚೆಗೆ ಕಾರ್ಯಕ್ರಮದ ವಿಶೇಷ  ತೀರ್ಪುಗಾರ್ತಿಯಾಗಿ ಐಶ್ವರ್ಯ ರೈ ಬಚ್ಚನ್ ಬಂದಿದ್ರು. ಅದು ಅಕ್ಷಯ ಹಾಗೂ ಐಶ್ ಸಿನಿಮಾದ ಜಾಹಿರಾತಿನ ಒಂದು ಭಾಗ ಎನುವುದನ್ನು ಯಾರೂ ಬಿಡಿಸಿ ಹೇಳಬೇಕಾಗಿರಲಿಲ್ಲ ಬಿಡಿ :-) .ಆದರೂ ಅಂತಹ ನಟಿ ಈ ರೀತಿಯ ಕಾರ್ಯಕ್ರಮಕ್ಕೆ ಬರೋಣ ಅಂದ್ರೇನು ಅಲ್ವ:-) ಎಲ್ಲಾ ಆಯ್ತು.. ಕೊನೆಗೆ ಡೇಂಜರ್ ಜೋನ್ ನಲ್ಲಿ ಇಬ್ಬರು ಹೆಣ್ಣುಮಕ್ಕಳು ನಿಂತರು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಮೊಹರಂ ಹಬ್ಬದ ಕಡೆಯ ದಿನ …

-ಹಣಮಂತ ಹಳಿಗೇರಿ

ಹಣಮಂತ ಹಳಿಗೇರಿ  ಮೂಲತಃ  ಬಾಗಲಕೋಟ ಜಿಲ್ಲೆಯ ತುಳಸಿಗೇರಿ ಹಳ್ಳಿಯವರು .   ಧಾರವಾಡ ಕರ್ನಾಟಕ ವಿವಿಯಿಂದ ilrd ಎಂಬ ಗ್ರಾಮೀಣ ಅಭಿವೃದ್ಧಿಗೆ ಸಂಬಂದಿಸಿದ ಪದವಿಯನ್ನು ಪಡೆದುಕೊಂಡು ಗಾಂದೀಜಿಯ ನೇರ ಅನುಯಾಯಿ ಮಣಿಬಾಯಿ ದೇಸಾಯಿಯವರ “ಭೈಫ್” ಎನ್.ಜಿ.ಒ.ದಲ್ಲಿ ಕೆಲಸ ಮಾಡಿದ್ದಾರೆ . ಮುಂದೆ ಬರವಣಿಗೆ ಮತ್ತು ಪತ್ರಿಕೋದ್ಯಮದತ್ತ ಆಕರ್ಷಿತರಾದ ಇವರು  ಎಮ್.ಎ.ಪತ್ರಿಕೋದ್ಯಮ ಮುಗಿಸಿ ಬೆಂಗಳೂರಿನ ವಾರ್ತಾಭಾರತಿಯಲ್ಲಿ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ .ಇವರ ಒಂದು ನಾಟಕ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಿಂದ ಸಹಾಯ ಧನವನ್ನು ಪಡೆದುಕೊಂಡು ಪ್ರದರ್ಶನಗೊಂಡಿದೆ. ಇವರ  ಒಂದು ಕತೆ ವಿಕ್ರಾಂತ್ ಕರ್ನಾಟಕ ಪತ್ರಿಕೆಯ ಗಾಂಧೀ  ಕಥಾ ಸ್ಫರ್ದೆಗೆ ಆಯ್ಕೆಯಾಗಿ ಪ್ರಕಟಗೊಂಡಿದೆ ಆ ಕತೆ ನಿಮಗಾಗಿ

ಮೊಹರಂ ಹಬ್ಬದ ಕಡೆಯ ದಿನ

ಆಗತಾನೆ ಏಳನೆಯ ತರಗತಿಯ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಬಂದಿದ್ದರಿಂದ ನಾವು ಹುಡುಗರೆಲ್ಲ ಖುಷಿಯಾಗಿದ್ದೆವು. ನಮ್ಮ ರಜೆಯನ್ನು ಮಜಾವಾಗಿಸಲೆಂಬಂತೆ ಮೋಹರಂ ಹಬ್ಬ ಆಗಮಿಸಿತ್ತು. ನಾನು ನನ್ನೆಲ್ಲ ಗೆಳೆಯರೊಂದಿಗೆ ಫಕೀರನ ವೇಷ ಹಾಕಿ ಊರಲ್ಲೆಲ್ಲ ಭಿಕ್ಷೆ ಎತ್ತಿ ವಿವಿಧಾಕಾರದ ವಿವಿಧ ರುಚಿಯ ಜೋಳದ ರೊಟ್ಟಿ ಪಲ್ಯವನ್ನು ತಿಂದುಂಡು ಸಂತೋಷವಾಗಿದ್ದೆ.

ಅಂದು ಮೋಹರಂನ ಕಡೆಯ ರಾತ್ರಿಯಾದುದರಿಂದ ಮಸೀದಿಗೆ ಮಾದ್ಲಿ ನೈವೇದ್ಯವನ್ನು ಅರ್ಪಿಸುವುದು ಸಂಪ್ರದಾಯ. ಮಾರ್ಚ್ ತಿಂಗಳಿನ ಆ ಸಂಜೆಯಲ್ಲಿ ಹಿತವಾದ ಬಿಸಿ ಗಾಳಿ ಬೀಸುತ್ತಿತ್ತು. ಚಂದ್ರ ತನ್ನ ಪೂರ್ಣಾಕಾರ ತೋರಲು ಇನ್ನೂ ನಾಲ್ಕು ದಿನವಷ್ಟೆ ಬಾಕಿ ಇತ್ತು.

ಇನ್ನಷ್ಟು

ರಂಗವೇರುವ ಮುನ್ನ …

ಅಭಿನಯ ತರಂಗ ಹೊಸ ನಾಟಕ ಪ್ರದರ್ಶನಕ್ಕೆ ಸಜ್ಜಾಗಿದೆ. ಅದು ಸಾದತ್ ಹಸನ್ ಮಾಂಟೋ ಅವರ ವಿಶಿಷ್ಟ ಕಥೆ ‘‘ ಟೋಬಾ ಟೇಕ್ ಸಿಂಗ್ ‘.

ಚರಣ್ ಚನ್ನರಾಯಪಟ್ಟಣ ಈ ನಾಟಕ ನಿರ್ದೇಶಿಸಿದ್ದಾರೆ. ದರ್ಶನ್ ಅಪೂರ್ವ ಕಂಡಂತೆ ನಾಟಕದ  ರಿಹರ್ಸಲ್ ನ ಒಂದು ನೋಟ ಹೀಗಿದೆ.

ಡಿಸೆಂಬರ್ 1 ರಂದು ಹನುಮಂತನಗರದ ಕಲಾ ಸೌಧದಲ್ಲಿ,  ಸಂಜೆ 7.30 ಕ್ಕೆ

4 ರಂದು ಸಂಜೆ7 ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಈ ನಾಟಕ ಪ್ರದರ್ಶನ ನಡೆಯಲಿದೆ.

ನಾಟಕದ ಬಗ್ಗೆ ಹಿರಿಯ ನಿರ್ದೇಶಕಿ ಗೌರಿ ದತ್ತು ಹೀಗನ್ನುತ್ತಾರೆ

TOBA TEIK SINGH- A story written by SAADAT HASSAN MONTO an urdu writer who is well known for his short stories, especially the stories regarding partition of india. TOBA TEIK SINGH is a story which happens in a hospital for mentally challenged who are in a deep confusion regarding the partitrion.

ಇನ್ನಷ್ಟು ಫೋಟೋಗಳು : ಸೈಡ್ ವಿಂಗ್

 

ಸುನಂದಾ ಪ್ರಕಾಶ ಕಡಮೆ ಗೆ ಡಿ.ಎಸ್.ಕರ್ಕಿ ಪುರಸ್ಕಾರ …

ಡಿ .ಎಸ್ .ಕರ್ಕಿ ಸಾಹಿತ್ಯ ವೇದಿಕೆ ಹುಬ್ಬಳ್ಳಿ , ಕತೆಗಾರ್ತಿ ಸುನಂದಾ ಪ್ರಕಾಶ ಕಡಮೆ ಅವರಿಗೆ   ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ  ನೀಡಿ ಗೌರವಿಸಿತು. ಜಗದೀಶ್ ಶೆಟ್ಟರ್ ಸೇರಿದಂತೆ ಮತ್ತಿತರ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇಂದು ಸಂಜೆ ‘ಗಾಂಧಿ ಬಂದ’

ರಂಗಮಂಟಪ ಅಭಿನಯಿಸುವ

ಎಚ್ ನಾಗವೇಣಿ ಅವರ ಕಾದಂಬರಿ

ಗಾಂಧಿ ಬಂದ

ನಿರ್ದೇಶನ : ಚಂಪಾ ಶೆಟ್ಟಿ

ಇಂದು ಸಂಜೆ ೭-೩೦ ಕ್ಕೆ

ರಂಗಶಂಕರದಲ್ಲಿ

ಟ್ಯಾಬ್ಲೆಟ್ ಸಮರ…

-ಟಿ ಜಿ ಶ್ರೀನಿಧಿ

ಈಚಿನ ಕೆಲ ತಿಂಗಳುಗಳಿಂದ ಗಣಕ ಲೋಕದಲ್ಲೆಲ್ಲ ಟ್ಯಾಬ್ಲೆಟ್‌ಗಳದ್ದೇ ಸುದ್ದಿ. ಮೊದಲಿಗೆ ಈ ಸಂಚಲನ ಹುಟ್ಟುಹಾಕಿದ್ದು ವರ್ಷದ ಪ್ರಾರಂಭದಲ್ಲಿ ಮಾರುಕಟ್ಟೆಗೆ ಬಂದ ಆಪಲ್ ಸಂಸ್ಥೆಯ ಐಪ್ಯಾಡ್. ಆಮೇಲಂತೂ ಸಾಲುಸಾಲಾಗಿ ಟ್ಯಾಬ್ಲೆಟ್‌ಗಳು ಸುದ್ದಿಯಲ್ಲಿವೆ – ಬ್ಲಾಕ್‌ಬೆರಿಯ ಪ್ಲೇಬುಕ್, ಎಚ್‌ಪಿ ಸ್ಲೇಟ್, ಸ್ಯಾಮ್‌ಸಂಗ್ ಗೆಲಾಕ್ಸಿ ಟ್ಯಾಬ್ ಎಲ್ಲ ಸೇರಿಕೊಂಡು ದೊಡ್ಡಪ್ರಮಾಣದ ಟ್ಯಾಬ್ಲೆಟ್ ಸಮರಕ್ಕೆ ನಾಂದಿಹಾಡಿವೆ.

ಏನಿದು ಟ್ಯಾಬ್ಲೆಟ್?
ಸ್ಪರ್ಶ ಸಂವೇದನೆ ಹೊಂದಿರುವ ಒಂದೇ ಫಲಕದಲ್ಲಿ (ಟಚ್-ಸ್ಕ್ರೀನ್) ಅಡಕವಾಗಿರುವ ಸಂಪೂರ್ಣ ಗಣಕವೇ ಟ್ಯಾಬ್ಲೆಟ್. ಸಾಮಾನ್ಯ ಗಣಕಗಳನ್ನು ಬಳಸಿ ಏನೆಲ್ಲ ಮಾಡಬಹುದೋ ಅದನ್ನೆಲ್ಲ ಟ್ಯಾಬ್ಲೆಟ್ ಕೂಡ ಮಾಡಬಲ್ಲದು. ಸಾಮಾನ್ಯವಾಗಿ ಇವುಗಳಲ್ಲಿ ಕೀಲಿಮಣೆ ಇರುವುದಿಲ್ಲ; ಕೈಬೆರಳು ಅಥವಾ ಸ್ಟೈಲಸ್ ಕಡ್ಡಿ ಉಪಯೋಗಿಸಬೇಕಾಗುತ್ತದೆ. ನಾವೆಲ್ಲ ಚಿಕ್ಕವಯಸ್ಸಿನಲ್ಲಿ ಉಪಯೋಗಿಸಿದ್ದ ಸ್ಲೇಟನ್ನು ನೆನಪಿಸಿಕೊಳ್ಳಿ. ಟ್ಯಾಬ್ಲೆಟ್ ಗಣಕವನ್ನು ಅದರ ಮಾಡರ್ನ್ ಅವತಾರ ಎಂದು ಕರೆಯಬಹುದು.

ಆಪಲ್ ಐಪ್ಯಾಡ್ ಈ ವರ್ಷ ಮಾರುಕಟ್ಟೆಗೆ ಬಂತು ಎಂದಮಾತ್ರಕ್ಕೆ ಟ್ಯಾಬ್ಲೆಟ್ ತಂತ್ರಜ್ಞಾನ ನಿನ್ನೆಮೊನ್ನೆ ಹುಟ್ಟಿದ್ದೇನೂ ಅಲ್ಲ. ಕೈಯಲ್ಲಿ ಹಿಡಿದುಕೊಳ್ಳಬಹುದಾದ (ಹ್ಯಾಂಡ್‌ಹೆಲ್ಡ್) ಗಣಕಗಳ ಸೃಷ್ಟಿಗೆ ಸುಮಾರು ನೂರು ವರ್ಷಗಳಿಂದ ಪ್ರಯತ್ನ ನಡೆಯುತ್ತಿದ್ದ ಬಗ್ಗೆ ದಾಖಲೆಗಳಿವೆ. ಆದರೆ ಟ್ಯಾಬ್ಲೆಟ್ ಗಣಕಕ್ಕೆ ನಾಮಕರಣವಾದದ್ದು ಮಾತ್ರ ೨೦೦೦ದಲ್ಲಿ, ಮೈಕ್ರೋಸಾಫ್ಟ್ ಸಂಸ್ಥೆ ತನ್ನ ‘ಟ್ಯಾಬ್ಲೆಟ್ ಪಿಸಿ’ಯನ್ನು ಪರಿಚಯಿಸಿದಾಗ. ಆದರೆ ಮುಂದಿನ ಹತ್ತು ವರ್ಷಗಳಲ್ಲಿ ಟ್ಯಾಬ್ಲೆಟ್‌ಗಳು ಹೆಚ್ಚಿನ ಜನಪ್ರಿಯತೆ ಕಾಣಲಿಲ್ಲ. ಹೆಚ್ಚಿನ ತೂಕ, ಬಳಕೆದಾರ ಸ್ನೇಹಿಯಲ್ಲದ ತಂತ್ರಾಂಶಗಳು – ಹೀಗೆ ಅನೇಕ ಕಾರಣಗಳಿಂದ ಟ್ಯಾಬ್ಲೆಟ್ ಮಾರುಕಟ್ಟೆ ಅಷ್ಟಾಗಿ ಬೆಳೆದಿರಲಿಲ್ಲ.
ಇನ್ನಷ್ಟು