ಹಾಡು ಕೇಳುವ ಬನ್ನಿ …

ಇಲ್ಲೂ ನೋಡಿ :invitations Blog

“ನರಿಗಳಿಗೇಕೆ ಕೋಡಿಲ್ಲ”…

‘ಸಂಚಾರಿ ಥಿಯೇಟ್ರು’ ಅರ್ಪಿಸುವ ಹೊಸ ನಾಟಕ  “ನರಿಗಳಿಗೇಕೆ ಕೋಡಿಲ್ಲ”

ರಚನೆ : ಕುವೆಂಪು

ನಿರ್ದೇಶನ : ಮಂಗಳಾ.ಎನ್

ರಂಗರೂಪ : ಶಾಂತಾ ನಾಗರಾಜ್ ಮತ್ತು ಮಂಗಳಾ.

ಸಂಗೀತ ನಿರ್ದೇಶನ : ಗಜಾನನ.ಟಿ.ನಾಯಕ.
ರಂಗಸಜ್ಜಿಕೆ : ಶಶಿಧರ ಅಡಪ.
ಬೆಳಕು : ಅರವಿಂದ ಕುಪ್ಳೀಕರ್.
ಪ್ರಸಾಧನ : ರಾಮಕೃಷ್ಣ ಕನ್ನರ್ಪಾಡಿ

ದಿನಾಂಕ : 27 ನವೆಂಬರ್ 2010
ಸ್ಥಳ : ರವೀಂದ್ರ ಕಲಾಕ್ಷೇತ್ರ

ನಾಕು ಸಾಲುಗಳು…

-ಕೇಶವ ಕುಲಕರ್ಣಿ

ತೊದಲು ಮಾತು

ಕವಿತೆ ಕೊರೆಯುತಿದೆ ಎದೆಯ
ಪದಗಳ ಹುಡುಕಾಟದಲಿ
ಕೂತಂತೆ ಮಾಡಿ ಹಾರಿ ಹೋಗಿವ ಚಿಟ್ಟೆ
ಕಾಗದದ ಮೇಲೆ ಕಾಣುವುದೇ ಇಲ್ಲ
—————————————
ಹಗಲು ಆಗದೆ ಇರಲಿ ರಾತ್ರಿ ಕಳೆಯದೆ ಇರಲಿ
ಚುಕ್ಕೆ ಎಣಿಸುವ ಆಟ ಮುಗಿಯದಿರಲಿ
ಮೋಡ ಚಂದಿರನಾಟ ತಂಪು ತಿಂಗಳ ಬೇಟ
ನಿದ್ದೆ ರೆಪ್ಪೆಯ ಬಳಿಗೆ ಬಾರದಿರಲಿ
—————————————
ಕೈಗಳ ಹೊಚ್ಚಲೇ ಕಾಲನು ಮುಚ್ಚಲೇ
ಎದೆಯಲಿ ಮೊಗವನು ಹೊದುಗಿಸಲೇ
ಬೆನ್ನನು ಸವರಲೇ ತಲೆಯನು ತಟ್ಟಲೇ
ಜೋ ಜೋ ಮಗುವೇ ಜೋಗುಳ ಹಾಡಲೇ
—————————————
ಮುಂಗುರುಳು ಹಾರಿ ಹಾರಿ
ಗಾಳಿ ಘಂ ಎಂದಿತು
ಕಣ್ಣಂಚಿನ ಚಂಚಲತೆಗೆ
ಎದೆಯೆ ಝಲ್ ಎಂದಿತು
—————————————

More

ವಿಗ್ರಹಕ್ಕೆ ಹೂಗಳನ್ನು ಎರಚಿ ರಾಷ್ಟ್ರಗೀತೆ ನುಡಿಸುವುದು ಸಂವಿಧಾನದ ಅಣಕ…

ಪಂಡಿತ ಪುಟ

ಶ್ರೀರಂಗಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪವಾಡ ರಹಸ್ಯ ಬಯಲು ತರಬೇತಿ ಕಾರ್ಯಾಗಾರ ಹಾಗು ಕ ರಾ ವಿ ಪ  ಮಂಡ್ಯ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಡಾ. ಪಂಡಿತಾರಾಧ್ಯ ಅವರು ಮಾಡಿದ ಉದ್ಘಾಟನ ಭಾಷಣ ಹೀಗಿತ್ತು

.

ಸನ್ಮಾನ್ಯ ಅಧ್ಯಕ್ಷರೆ, ಮುಖ್ಯ ಅತಿಥಿಗಳಾದ ಎಲ್ಲ ಗಣ್ಯರೆ, ಅಖಿಲ ಭಾರತ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಪ್ರೊ ನರೇಂದ್ರ ನಾಯಕರೆ, ಮಂಡ್ಯ ಜಿಲ್ಲೆಯ ಹಾಗೂ ಶ್ರೀರಂಗಪಟ್ಟಣದ ವೈಜ್ಞಾನಿಕ ಮನೋಭಾವದ ಎಲ್ಲ ಚಿರಯುವ ಚೇತನಗಳೆ,

ನಾನು ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನಗೆ ತುಂಬ ಸಂತೋಷ ತಂದಿದೆ. ಇಂದಿಗೆ ೭೫ ವರ್ಷ ೯ ತಿಂಗಳು ೧೦ ದಿನಗಳ ಹಿಂದೆ, ಅಂದರೆ ೧೯೩೫ರ ಜನವರಿ ೧೩ ಭಾನುವಾರದಂದು ಇಳಿಹಗಲಿನ ೪.೦ ಗಂಟೆಯ ಸಮಯದಲ್ಲಿ ಈ ಊರಿನಲ್ಲಿ ‘ಯುವಜನ ಸಮ್ಮೇಳನ’ನಡೆಯಿತು.

ಅದರಲ್ಲಿ ಮಂಡ್ಯ ಜಿಲ್ಲೆಯವರೇ ಆದ ಬಿಎಂಶ್ರೀ ಅವರು ಮತ, ಭಾಷೆ, ಜಾತಿ ಇವುಗಳ ತೊಡಕುಗಳ ವಿಚಾರವಾಗಿ ಸ್ವಾರಸ್ಯವಾಗಿ ಮಾತನಾಡಿದರು. ಅನಂತರ ರಾಷ್ಟ್ರಕವಿ ಕುವೆಂಪು ಅವರು ‘ಯುವಕರು ನಿರಂಕುಶಮತಿಗಳಾಗಬೇಕು’ ಎಂದು ಭಾಷಣ ಮಾಡಿದರು.

ಭಾಷಣ ಮುಗಿಸಿ ಹೊರಬಂದ ಕುವೆಂಪು ಅವರನ್ನು ಸಂಪ್ರದಾಯಸ್ಥರಾಗಿ ತೋರುತ್ತಿದ್ದು ಪೇಟಕೋಟು ಉತ್ತರೀಯ ತೊಟ್ಟಿದ್ದ ಮುದುಕರಾದ ದೊಡ್ಡ ಮನುಷ್ಯರೊಬ್ಬರು ಅಭಿನಂದಿಸಿ,‘ನಾನು ಮುದುಕ. ಆದರೂ ನೀವು ಭಾಷಣ ಮಾಡುತ್ತಿದ್ದಾಗ ರೋಮಾಂಚನವಾಯಿತು’ ಎಂದು ಹೇಳಿದರು.

More

%d bloggers like this: