ಹಂಗಾಮ ಕಾರ್ನರ್ ನಲ್ಲಿ ಹೌದೇನೆ ?

ಎದೆಯೆತ್ತರದ ವೇದವ್ಯಾಸ ಮಗನಲ್ಲವೇನೆ ?
-ಗಾನಾ ಜೋಯ್ಸ್
ಥಂಡಿ ತಣ್ಣನೆಯ – ಹಸಿವೇ ಇಲ್ಲದ ಮಲೆನಾಡು . ಶ್ರಾವಣದ ಜಿಟಿ ಪಿಟಿ . ಅಡಿಕೆ ತೋಟದ ನಡು ಮಧ್ಯದ ಮನೆಯಲ್ಲಿ ಭಾರೀ ಗೌಜು . ನಲವತ್ತೆರಡರ ಗಂಡು . ಇಪ್ಪತ್ತೈದರ  ಹೆಣ್ಣು . ಸಮಾಜ ಸುಧಾರಿಸಿದೆ ! ಮದುವೆಯಾದ ವಾರಕ್ಕೆ ವಿಧವೆಯಾದ ವಧುವಿಗೆ – ಹೆಂಡತಿ ಸತ್ತು ಐದು ವೈದಿಕ ಮುಗಿಸಿದ ವಿಧುರ ವರ .
ಮನೆ ತುಂಬಿತು . ಸೇರಕ್ಕಿ  – ಬೆಲ್ಲ ಒದ್ದು ಒಳನಡೆದಳು.
ದುರದೃಷ್ಟವೆಲ್ಲಾ ಬಾಗಿಲಾಚೆಗೆ ಉಳಿಯಿತೆಂದು ಸಂಭ್ರಮಿಸಿದಳು . ಅರೆ! ಮದುವೆಯಲ್ಲೆಲ್ಲು ಕಾಣದ ಇಪ್ಪತ್ತರ ಚುರುಕು ಚುರುಕು ತರುಣ! ಕವಡೆ ಯಾಡಲು ಹೊಸಾ ಸಾಥಿ !! ಅವನು ಅವಳ ಗಂಡನ ಮಗ. ಇದೀಗ ಅವಳಿಗೂ ..
ಹಳ್ಳಿಗೆ ಹಳ್ಳಿಯೇ ತುಂಬಿತ್ತು . ಅಲ್ಲಿ ಚಿಗರೆಗಣ್ಣಿನ ಚಿಗುರು ಮೀಸೆಯ ಮಗುವಿನ ಮುಖ ಬೊಗಸೆಯಲ್ಲಿ ಹಿಡಿದಳು . ಅವ ‘ಚಿಕ್ಕಮ್ಮಾ ‘ ಅಂತ ಕೊಸರಿದ . ತುಟಿ ಮೇಲೆ ಕೈಯಿಟ್ಟು ‘ಅಮ್ಮಾ’ ಅಂತಂದು , ಅನ್ನಿಸಿ , ಸುಖಿಸಿದಳು . ಹಳ್ಳಿ ಜನ ಹುಳ್ಳಗೆ ನಕ್ಕರು .
ತಂದೆಯಾಗಲಾರದವನ ಹೆಂದತಿಗೀಗ ಎದೆಯೆತ್ತರದ ಮಗ ! ಅಮ್ಮಾ ಅಮ್ಮಾ .. ಮನೆ ತುಂಬಾ ಕಲರವ . ಮಗ -ಮಗುವೇ ಆಗಿಬಿಟ್ಟ . ವಾತ್ಸಲ್ಯ ಭಾವಕ್ಕೆ ವಯಸ್ಸಿನ ಪಾಬಂದಿಯುಂಟೆ? ತಿನ್ನಿಸಿದಳು , ನಲಿಸಿದಳು, ಮುತ್ತಿಟ್ಟಳು . ಗೋಡೆ-ಕಂಬಗಳು ಮಾತಾಡ ತೊಡಗಿದವು . ಪಣತ -ಪತಾಸುಗಳು ‘ಉಶ್ -ಉಶ್ ‘ಅಂದವು .
ಜನ ಸುಧಾರಿಸಿಲ್ಲ ! ಕಾಮಾಲೆ ಕಣ್ಣಿಗೆ ಬೆಳಕು ಚುಚ್ಹ ತೊಡಗಿತು . ಕುರುಡರು ಆನೆ ತಡಕಿದಂತೆ- ಅನಿಸಿದ್ದೇ  ಆಡತೊಡಗಿದರು .
ಇನ್ನಷ್ಟು

A Christmas Carol…

ಅಗಲುವಿಕೆಯೇ ಹಾಗೆ, ಅದು ಅಗಲುವುದೇ ಇಲ್ಲ!…

-ಉದಯ್ ಇಟಗಿ

ಬಿಸಿಲ ಹನಿ

ಅಂದು ಕೋರ್ಟಿನಲ್ಲಿ ನಾವಿಬ್ಬರು ವಿಚ್ಛೇದನಕ್ಕೆ ಸಹಿ ಹಾಕಿದ ಕೂಡಲೆ ಇಬ್ಬರಿಗೂ ನಿರಾಳ, ನೆಮ್ಮದಿ ಅನಿಸಬೇಕಿತ್ತು. ಬಿಡುಗಡೆಯ ಭಾವ ಖುಶಿ ಕೊಡಬೇಕಿತ್ತು. ಆದರೆ ಹಾಗಾಗಲಿಲ್ಲ ನೋಡು! ಇಬ್ಬರಿಗೂ ಅದೆಂಥದೋ ಕಸಿವಿಸಿ, ಅವ್ಯಕ್ತ ನೋವು ನಮ್ಮನ್ನು ಆವರಿಸಿತ್ತು. ತಕ್ಷಣ ನೀನು ಪಕ್ಕದಲ್ಲಿಯೇ ಇದ್ದ ನಿನ್ನಮ್ಮನನ್ನು ತಬ್ಬಿಕೊಂಡು ಗೊಳೋ ಅಂತ ಅಳಲು ಶುರುವಿಟ್ಟೆ.

ಅರೆ ಅತ್ತಿದ್ದೇಕೆ? ಪೀಡೆ ತೊಲಗಿತೆಂದು ಖುಶಿಖುಶಿಯಾಗಿರುವದು ಬಿಟ್ಟು! ಇನ್ನು ಇವನ ಜೊತೆ ಏನೇ ಸರ್ಕಸ್ ಮಾಡಿದರೂ ಏಗಲಾರೆನೆಂದು ತಾನೇ ನೀನು ನನಗೆ ಡೈವೋರ್ಸ್ ಕೊಟ್ಟಿದ್ದು? ನಮ್ಮಿಬ್ಬರ ಜಗಳದಲ್ಲಿ ಎಷ್ಟೋ ಸಾರಿ ನೀನು ನನಗೆ “ಹಾಳಾಗಿ ಹೋಗು, ನನ್ನ ಬದುಕನ್ನು ನರಕ ಮಾಡಿಟ್ಟಿ.” ಎಂದು ಆಗಾಗ್ಗೆ ಚುಚ್ಚುತ್ತಿದ್ದವಳು ಈಗ ಸಂತೋಷವಾಗಿರುವದು ಬಿಟ್ಟು ಅತ್ತಿದ್ದೇಕೆ? ಸಂಕಟಪಟ್ಟಿದ್ದೇಕೆ? ನನಗೆ ಗೊತ್ತು ನನ್ನ ಪ್ರಶ್ನೆಗಳಿಗೆ ನಿನ್ನ ಹತ್ತಿರ ಉತ್ತರವಿಲ್ಲವೆಂದು.

ಏಕೆಂದರೆ ನನ್ನದೂ ಅದೇ ಕಥೆಯೇ! ನೀನು ಅನುಭವಿಸುತ್ತಿರುವ ಯಾತನೆಯನ್ನೇ ನಾನೂ ಅನುಭವಿಸುತ್ತಿದ್ದೇನೆ. ಈ ಯಾತನೆ ನಿನಗೇಕೆ? ಎಂದು ನೀನು ನನ್ನ ಪ್ರಶ್ನಿಸಿದರೆ ನಾನು ಕೂಡ ಉತ್ತರಿಸಲಾರೆ. ಕೆಲವು ಪ್ರಶ್ನೆಗಳೇ ಹಾಗೆ! ಅವನ್ನು ಉತ್ತರಿಸಲಾಗದು!
ಇನ್ನಷ್ಟು

ನಾಟಕ ಬೆಂಗ್ಳೂರು:ಇಂದಿನ ನಾಟಕ…

’ರೂಪಾಂತರ’ ಅಭಿನಯಿಸುವ
ರಾಮಧಾನ್ಯ


ಮಹಾಕವಿ ಕನಕದಾಸರ ಅಪೂರ್ವಕಾವ್ಯ ’ರಾಮಧಾನ್ಯ ಚರಿತೆ’ಯನ್ನು ಆಧರಿಸಿದ ನಾಟಕ

ಸ್ಥಳ : ರವೀಂದ್ರ ಕಲಾಕ್ಷೇತ್ರ

ಸಮಯ: ಸಂಜೆ 6 ಗಂಟೆಗೆ

ರೂಪಾಂತರಿಸಿದವರು : ಡಾ. ರಾಮಕೃಷ್ಣ ಮರಾಠೆ

ನಿರ್ವಹಣೆ : ಸಿ. ಗುರುಮೂರ್ತಿ, ಕೆಎಸ್ಡಿಎಲ್ ಗೋಪಿ
ಸಹ ನಿರ್ದೇಶನ : ಡಿ. ಚೈತನ್ಯ
ನಿರ್ದೇಶನ : ಕೆಎಸ್ಡಿಎಲ್ ಚಂದ್ರು

Votras Imaging…

ವಾಹ್ ಅದ್ಭುತ !!!…

-ಶಿವು.ಕೆ

ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ವಿದೇಶಿ  ಕಲಾವಿದರ ಒಂದುಕಾರ್ಯಕ್ರಮ.ಮೈನವಿರೇಳಿಸುವಂತ  ಅವರ  ಜಿಮ್ನಾಸ್ಟಿಕ್, ಅಕ್ರೋಬ್ಯಾಟಿಕ್, ಮ್ಯಾಜಿಕ್ ಗಳು ವೆಂಡರ್ ಕಣ್ಣಿನ ಶಿವೂ ಅವರ ಕ್ಯಾಮೆರಾ ಸೆರೆ ಹಿಡಿದದ್ದು ಹೀಗೆ .

ಇನ್ನಷ್ಟು ಫೋಟೋಗಳು : ಸೈಡ್ ವಿಂಗ್

ಈ ಕಾರ್ಯಕ್ರಮದಲ್ಲಿ ತಾವು ಫೋಟೋ ತೆಗೆದ ಅನುಭವವನ್ನು ಶಿವೂ ಅವರು ಬರಹದ ಮೂಲಕ ವ್ಯಕ್ತಪಡಿಸಿದ್ದು ಹೀಗೆ ..

ಅರೆರೆ…ನನಗೂ ಅಂತ ಅವಕಾಶ ಸಿಗಬಾರದಿತ್ತೇ ಅನ್ನಿಸಿತ್ತು ಪ್ರಜಾವಾಣಿ ದಿನಪತ್ರಿಕೆಯಲ್ಲಿನ ಆ ಚಿತ್ರವನ್ನು ನೋಡಿದಾಗ. ಅದು ವಿದೇಶಿ ಜಿಮ್ನಾಸ್ಟಿಕ್ ವಿಧಾನದಲ್ಲಿ ವಿಭಿನ್ನ ನೃತ್ಯ ಮಾಡುತ್ತಿರುವಾಗ ಕ್ಲಿಕ್ಕಿಸಿರುವ ನೆರಳು ಬೆಳಕಿನ ಚಿತ್ರ. ನಮಗೆ ಅಂತ ಅದೃಷ್ಟವಿಲ್ಲವೆಂದುಕೊಂಡು ಅದನ್ನು ಮರೆತು ಮತ್ತೆರಡು ಪುಟಗಳನ್ನು ತಿರುಗಿಸಿದರೆ….ಮತ್ತದೇ ವಿಚಾರವಾಗಿ ದೊಡ್ಡ ಜಾಹಿರಾತು .ನಡೆಯುವ ಸ್ಥಳ, ಟಿಕೆಟ್ ಮೊತ್ತ ಮತ್ತು ಇಂಟರ‍್ನೆಟ್‍ನಲ್ಲಿ ಟಿಕೆಟ್ ಬುಕ್ಕಿಂಗ್ ಮತ್ತು ಖುದ್ದಾಗಿ ಟಿಕೆಟ್ ದೊರೆಯುವ ಸ್ಥಳ ಎಲ್ಲಾ ವಿವರವಿತ್ತು.

ಇನ್ನಷ್ಟು

ಸೂರಿ -8: ಯಂತ್ರದ ಶಬ್ದ ಜೋರಾಗಿತ್ತು …

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 8

ಹಳೇಬೀಡು ಸುಂದರರಾಯರು ಬಂದ ಗಳಿಗೆ ಚೆನ್ನಾಗಿರಲಿಲ್ಲವೋ ಏನೋ, ತುಕ್ಕೋಜಿ ಕೊಂಚ ವ್ಯಗ್ರನಾಗಿದ್ದಂತಿತ್ತು. ಅವನ ವ್ಯಗ್ರತೆಗೆ ಕಾರಣ ಇಷ್ಟೇ. ಮದುವೇ ಸೀಸನ್ನು. ಹರುದೋಗಂಗೆ ಕೆಲಸ ವಪ್ಗಂಡಾಗಿದೆ. ನಿನ್ನೆಯಿಂದ ಈ ಹಾಳು ಸರೋಜಂದು ವಂದೇ ರಾಗ.
ಅದ್ಯಾರೋ ಸಮ್ಮಂದಿಕರ ಮದುವೆಗೆ ಶಿಮೊಗ್ಗಾಗೆ ಒಂದೆರಡು ದಿಸ ಹೋಗಿ ಬರ‍್ತಳಂತೆ. ಯಿಲ್ಲೋ ಹಗಲೂ ರಾತ್ರಿ ಹೊಲೀತಾ ಕೂತರೂ ಮುಗಿಯಲ್ಲ ಅಶ್ಟಿದೆ ಕೆಲಸ. ಯೇನು ಯೀ ಕೆಲಸಾ ನಂಗೊಬ್ನಿಗೇಂತ ವಪ್ಗೆಂಡಿದ್ದಾ. ಯೀಗ ಇವಳು ಹೋದ್ರೆ ಕೆಲಸದ ಗತಿಯೇನಾಗಬೇಡ. ವಪ್ಗೆಂಡಿರಾ ಕೆಲಸಯೆಲ್ಲಾ ನನ್ನೊಬ್ಬನ್ ಕೈನಗೆ ಆಗ್ತತಾ. ಮತ್ತೆ ಆ ಮದುವೇಯೇನು ಹತ್ರದ ಸಮ್ಮಂದಾನಾ? ಅಣ್ಣ-ತಮ್ಮ-ತಂಗೀ ಮಕ್ಳದಾ? ಅದೂ ಅಲ್ಲ. ಅದ್ಯಾರೋ ದೂರದ ಸಮ್ಮಂದ.
ಹೋದ್ರೂ ಕಣ್ಣಿಗೆ ಬೀಳಲ್ಲ ಯಿವಳು, ಹೋಗದೇಯಿದ್ರೂ ಲೆಕ್ಕಕ್ಕೆ ಸಿಗಲ್ಲ. ನಿನ್ನೆಯಿಂದ ವಂದೇ ಸಮ ಮುಸಮುಸ ನಡ್ಸಿದಳೆ. ನಿನ್ನೆಯಿಂದ ಬೇಕೂಂತ ಯಲ್ಲಾ ಕೆಲಸದಗೂ ಯಡವಟ್ಟು ಮಾಡ್ತಿದಳೆ. ಅಂತೂ ಇಂತೂ ಯಲ್ಲಾ ವಂದು ದಾರಿಗೆ ಬಂತೂ ಅನ್ನವಾಗ ತನ್ನ ಹಳೇ ಬಾಲ ಬಿಚ್ಚಿದ್ಲು ಮುಂಡೆ. ಗಾಂಚಾಲಿ ಮುಂಡೆ. ಸಿಟ್ಟಿನಲ್ಲಿ ಒಂದೇ ಸಮನೆ ಯಂತ್ರದ ಪೆಡಲ್ಲನ್ನು ಭರ್ರೋ ಅಂತ ತುಳಿದ.
ಇನ್ನಷ್ಟು

ಕುತಂತ್ರ ತಡೆಗೆ ಕ್ಯಾಪ್ಚಾ…

-ಟಿ ಜಿ ಶ್ರೀನಿಧಿ

ವಿಶ್ವವ್ಯಾಪಿ ಜಾಲದಲ್ಲಿ ಅನುಕೂಲಗಳೆಷ್ಟಿವೆಯೋ ಅಷ್ಟೇ ಅನಾನುಕೂಲಗಳೂ ಇವೆ. ಇಮೇಲ್ ಅದ್ಭುತ ಸಂಪರ್ಕ ಮಾಧ್ಯಮ; ಆದರೆ ಅದರಲ್ಲಿ ಅನಗತ್ಯ ‘ಸ್ಪಾಮ್’ ಸಂದೇಶಗಳ ಹಾವಳಿ ವಿಪರೀತ. ವಿಚಾರವಿನಿಮಯಕ್ಕೆ ಪರಿಣಾಮಕಾರಿ ವೇದಿಕೆ ಬ್ಲಾಗಿಂಗ್; ಆದರೆ ಬ್ಲಾಗುಗಳಲ್ಲಿ ಅನಪೇಕ್ಷಿತ ಪ್ರತಿಕ್ರಿಯೆಗಳು ಸಾಕಷ್ಟು ತೊಂದರೆಕೊಡುತ್ತವೆ. ಅಷ್ಟೇ ಅಲ್ಲ, ಎಲ್ಲೆಲ್ಲಿ ಬಳಕೆದಾರರು ಮಾಹಿತಿ ದಾಖಲಿಸುವ ನಮೂನೆಗಳಿರುತ್ತವೋ ಅಲ್ಲೆಲ್ಲ ದುರುದ್ದೇಶಪೂರಿತ ತಂತ್ರಾಂಶಗಳು ಅನಗತ್ಯವಾಗಿ ಹಸ್ತಕ್ಷೇಪಮಾಡುತ್ತವೆ; ಸ್ವಯಂಚಾಲಿತವಾಗಿ ಯದ್ವಾತದ್ವಾ ಮಾಹಿತಿ ಪೂರೈಸುತ್ತವೆ.

ಸೌಲಭ್ಯಗಳ ದುರುಪಯೋಗ, ಜಾಲತಾಣದ ಕಾರ್ಯಾಚರಣೆಗೆ ಅಡ್ಡಿಪಡಿಸುವುದು, ಸ್ಪಾಮ್ ಸಂದೇಶಗಳನ್ನು ಕಳಿಸುವುದು, ವೈರಸ್-ವರ್ಮ್‌ಗಳನ್ನು ಹರಡುವುದು – ಈ ತಂತ್ರಾಂಶಗಳಿಗೆ ಇಂತಹ ಯಾವುದೇ ದುರುದ್ದೇಶ ಇರಬಹುದು. ನಮ್ಮ ಇಮೇಲ್ ಇನ್‌ಬಾಕ್ಸ್‌ಗೆ ಹರಿದುಬರುವ ನೂರಾರು ಸ್ಪಾಮ್ ಸಂದೇಶಗಳು ಇಂತಹವೇ ತಂತ್ರಾಂಶಗಳ ಸೃಷ್ಟಿ.
ಈ ಮಾಹಿತಿ ಪ್ರವಾಹವನ್ನು ನಿಲ್ಲಿಸಿ, ಕುತಂತ್ರಗಳನ್ನು ಸೋಲಿಸಬೇಕಾದರೆ ಯಾವುದೇ ಸೌಲಭ್ಯವನ್ನು ಬಳಸಲು ಪ್ರಯತ್ನಿಸುತ್ತಿರುವವರು ನಿಜಕ್ಕೂ ನಮ್ಮನಿಮ್ಮಂತಹ ಬಳಕೆದಾರರೋ ಅಥವಾ ಸ್ವಯಂಚಾಲಿತವಾಗಿ ಮಾಹಿತಿ ಪೂರೈಸುತ್ತಿರುವ ದುರುದ್ದೇಶಪೂರಿತ ತಂತ್ರಾಂಶಗಳೋ ಎನ್ನುವುದನ್ನು ಪತ್ತೆಮಾಡಬೇಕಾಗುತ್ತದೆ. ಒಂದುವೇಳೆ ಸ್ವಯಂಚಾಲಿತ ತಂತ್ರಾಂಶವೇನಾದರೂ ನಕಲಿ ಮಾಹಿತಿ ಪ್ರವಾಹ ಸೃಷ್ಟಿಸಲು ಪ್ರಯತ್ನಿಸುತ್ತಿದ್ದರೆ ಅದನ್ನು ತಡೆಯುವುದೂ ಅಗತ್ಯ. ಈ ಉದ್ದೇಶಕ್ಕಾಗಿಯೇ ‘ಕ್ಯಾಪ್ಚಾ’ಗಳು ಬಳಕೆಯಾಗುತ್ತವೆ.

ಇನ್ನಷ್ಟು