ಶಿವೂ ಸ್ಪೆಷಾಲಿಟಿ

 

ಜೋಗಿ ಬರೆದ ಸಣ್ಣ ಕಥೆ: ದೇಸಾಯಿಯ ಭಗವದ್ಗೀತೆ…

one india

-ಜೋಗಿ

ದೇಶಭಕ್ತ ದೇಸಾಯಿ ಸಾವಿರದ ಎಂಟು ಬಾರಿ ಭಗವದ್ಗೀತೆಯ ಹದಿನೆಂಟೂ ಅಧ್ಯಾಯಗಳನ್ನೂ ಬರೆದ ಪುಸ್ತಕಗಳ ಕಟ್ಟನ್ನು ಹೊತ್ತುಕೊಂಡು ಮಠಕ್ಕೆ ಕಾಲಿಡುವ ಹೊತ್ತಿಗೆ ಸಂಜೆಯಾಗಿತ್ತು. ಗುರುಗಳು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದೂ ಮಾರನೆಯ ದಿನ ಬೆಳಗ್ಗೆ ಅವರನ್ನು ನೋಡಬಹುದೆಂದೂ ಮಠದ ಆಡಳಿತಾಧಿಕಾರಿ ಕೇಶವದಾಸರು ಅಸಹನೆಯ ಧ್ವನಿಯಲ್ಲಿ ಹೇಳಿ, ದೇಸಾಯಿಯನ್ನು ಜಗಲಿಯಲ್ಲಿ ಮಲಗುವುದಕ್ಕೆ ಸೂಚಿಸಿ ತಮ್ಮ ಪಾಡಿಗೆ ತಾವು ಎಲ್ಲಿಗೋ ಹೋಗಿಬಿಟ್ಟರು.

ದೇಸಾಯಿಗೆ ತುಂಬ ಬೇಸರವೇನೂ ಆಗಲಿಲ್ಲ. ಆದರೆ ತಾನು ಮೂರು ವರ್ಷ ಕಷ್ಟಪಟ್ಟು ಭಗವದ್ಗೀತೆಯನ್ನು ಸಾವಿರದ ಎಂಟು ಸಲ ಬರೆದಿದ್ದನ್ನು ಕೇಶವದಾಸರು ನಿಕೃಷ್ಟವಾಗಿ ಕಂಡರು ಎನ್ನುವ ದುಃಖ ಮಾತ್ರ ಅವನನ್ನು ಬಾಧಿಸುತ್ತಲೇ ಇತ್ತು. ಅವರಿಗೆ ಅದರ ಮಹತ್ವ ಎಲ್ಲಿಂದ ತಿಳೀಬೇಕು. ಅವರು ಆಡಳಿತಾಧಿಕಾರಿಗಳು. ದುಡ್ಡಿನ ಲೆಕ್ಕಾಚಾರ ನೋಡಿಕೊಳ್ಳುವವರು. ಗುರುಗಳಿಗೆ ತನ್ನ ಕಾರ್ಯ ಎಷ್ಟು ಅಗಾಧ ಎನ್ನುವುದು ಗೊತ್ತಾಗುತ್ತದೆ ಎಂದು ದೇಸಾಯಿ ಸಮಾಧಾನಪಟ್ಟುಕೊಂಡು ಮಠದ ಜಗಲಿಯಲ್ಲಿ ಬಿದ್ದುಕೊಂಡ.

ಮಧ್ಯಾಹ್ನದಿಂದ ದೇಸಾಯಿ ಏನೂ ತಿಂದಿರಲಿಲ್ಲ. ಮಠದಲ್ಲಿ ಪುಷ್ಕಳ ಭೋಜನದ ವ್ಯವಸ್ಥೆಯಿರುತ್ತದೆ ಎಂದು ದೇಸಾಯಿಗೆ ಯಾರೋ ಹೇಳಿದ್ದರು. ಮಠದ ಆವರಣದೊಳಗೆ ಕಾಲಿಟ್ಟು, ಭೋಜನಶಾಲೆ ಎಲ್ಲಿದೆ ವಿಚಾರಿಸುವ ಹೊತ್ತಿಗೇ, ಹುಳಿತೇಗಿನಿಂದ ಒದ್ದಾಡುತ್ತಿದ್ದ ಆಚಾರ್ಯರೊಬ್ಬರು ಈಗ ಭೋಜನಶಾಲೆಗೆ ಹೋಗಿ ಏನ್ಮಾಡ್ತೀರಿ, ನಿಮ್ಮ ಪಿಂಡ. ಏಕಾದಶಿ ಅಲ್ವೇ ಇವತ್ತು..’ ಎಂದು ಹಸಿವಿನಿಂದ ಕಂಗೆಟ್ಟ ದನಿಯಲ್ಲಿ ಹೇಳಿ ಹೊಟ್ಟೆ ನೇವರಿಸಿಕೊಂಡು ಮರೆಯಾಗಿದ್ದರು.

ನೀರಾದರೂ ಸಿಗಬಹುದೇನೋ ಎಂದು ದೇಸಾಯರು ಅತ್ತಿತ್ತು ನೋಡಿದರು. ಮಠದ ನಿರ್ಜನ ಜಗಲಿಯಲ್ಲಿ ಒಂದು ಹೂಜಿ ಕೂಡ ಕಾಣಿಸಲಿಲ್ಲ. ಆಗಲೇ ಕತ್ತಲು ದಟ್ಟವಾಗುತ್ತಿತ್ತು. ಬಾವಿಕಟ್ಟೆ ಎಲ್ಲಿದೆ ಎಂದು ಹುಡುಕಿಕೊಂಡು ಹೋಗುವ ಶಕ್ತಿಯೂ ತನ್ನಲ್ಲಿ ಉಳಿದಿಲ್ಲ ಎನ್ನಿಸಿ ದೇಸಾಯಿ ಮುದುಡಿ ಮಲಗಲು ಯತ್ನಿಸಿದರು. ಅವರು ಮಲಗಿದ ಜಾಗದಿಂದ ಹೊರಳಿ ನೋಡಿದರೆ ಮೂಲದೇವರ ಸನ್ನಿಧಿಯೂ, ಅದರ ಮುಂಚೆ ಹಚ್ಚಿಟ್ಟ ನಂದಾದೀಪವೂ ಕಾಣಿಸುತ್ತಿತ್ತು. ದೇವರು ಕೂಡ ಏಕಾದಶಿಯಾದ್ದರಿಂದ ಉಪವಾಸ ಬಿದ್ದಿರಬಹುದಾ ಎಂದುಕೊಂಡು ದೇಸಾಯಿಗೆ ನಗು ಬಂತು.
More

ನವೆಂಬರ್ ರಂಗಶಂಕರ ….

ಇಲ್ಲೂ ನೋಡಿ : invitations Blog

 

ಜಯಶ್ರೀ ಕಾಲಂ:ಜೀವನದಲ್ಲಿ ನಂಬಿಕೆಯೇ ಮುಖ್ಯ ಕಣ್ರೀ …

ಸುವರ್ಣ ವಾಹಿನಿಯಲ್ಲಿ ಗುರುಮಹಿಮೆ ಕಾರ್ಯಕ್ರಮ ಸಹ ಅತ್ಯಂತ ಜನಪ್ರಿಯ ಕಾರ್ಯಕ್ರಮ ಎಂದೇ ಹೇಳ ಬಹುದು. ಯಾಕಂದ್ರೆ ಅದರಲ್ಲಿ ಆರಂಭದಲ್ಲಿ ಓರ್ವ ಸೆಲಬಿ ಬಂದು ರಾಘವೇಂದ್ರ ಸ್ವಾಮಿ ಬಗ್ಗೆ ತಿಳಿಸುತ್ತಾರೆ, ಆ ಬಳಿಕ ರಾಯರ ಅಪಾರ ಭಕ್ತಕೋಟಿಯಲ್ಲಿ ಕೆಲವರು ಬಂದು ತಮ್ಮ ಅನುಭವ  ಹೇಳಿಕೊಳ್ತಾರೆ.

ರಾಯರು , ಶಿರಡಿ ಬಾಬಾರಂತಹ  ವಿಭೂತಿಪುರುಷರು ನಮ್ಮೊಂದಿಗೆ ಬದುಕಿ ಬಾಳಿದವರು, ಅವರ ಮಹಿಮೆಗಳುಅತೀತ.ಅಂತಹ ಅನುಭವಗಳನ್ನು  ನಂಬಿದವರೆಲ್ಲರೂ ಹೊಂದಿದ್ದಾರೆ. ಮೂಲಭೂತವಾಗಿ ಇಲ್ಲಿ ಕಂಡು ಬರುವ ಸಂಗತಿ ಅಂದ್ರೆ ನಂಬಿಕೆ ಸಾಕಷ್ಟು ಕಷ್ಟಗಳನ್ನು ದೂರ ಮಾಡುತ್ತದೆ.

ಅದು ಬದುಕಲ್ಲಿ ತುಂಬಾ ಮುಖ್ಯ. ವೈದ್ಯರೇ ಹೇಳ್ತಾರಲ್ಲ, ಮೊದಲು ರೋಗಿಯ ದೇಹ ನಾವು ಕೊಡುವ ಚಿಕಿತ್ಸೆ  ಸ್ವೀಕರಿಸ ಬೇಕು ಆಗಷ್ಟೇ ಫಲಿತಾಂಶ ಸಿಗೋದು ಎಂದು! ಎಷ್ಟೇ ಮುಂದುವರೆದ ಔಷಧ ಸಹ ಕೆಲಸ ಮಾಡಬೇಕಾದರೂ  ನಂಬಿಕೆ ತುಂಬಾ ಮುಖ್ಯ.ದೇವರು-ಗುರುಗಳ ವಿಷಯದಲ್ಲೂ ಇದೆ ಅಪ್ಲೈ ಆಗುತ್ತದೆ.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

%d bloggers like this: