ಈ ವಾರಾಂತ್ಯದ ಚಿತ್ರ …

*ಚಿತ್ರಸಮೂಹ* ಆಯೋಜಿಸಿರುವ *‘ಚಿತ್ರವರ್ಷ’* -ಪ್ರಶಸ್ತಿ ವಿಜೇತ ಕನ್ನಡಚಿತ್ರಗಳ ವರ್ಷವಿಡೀ ಪ್ರದರ್ಶನ ನಡೆಯುತ್ತಿದ್ದು ಈ ವಾರಾಂತ್ಯದ ಚಿತ್ರ ಪಿ ಶೇಷಾದ್ರಿ ನಿರ್ದೇಶನದ ‘ತುತ್ತೂರಿ’

ದಿನಾಂಕ:ನವೆಂಬರ್ 13 ಮತ್ತು 14 -2010

ಸಮಯ: ಶನಿವಾರ ಹಾಗೂ ಭಾನುವಾರ ಸಂಜೆ 6.30

ಸ್ಥಳ : ಸುಚಿತ್ರ ಸಭಾಂಗಣ, ಬನಶಂಕರಿ 2ನೇ ಹಂತ ಬೆಂಗಳೂರು

ಕುರಂಗರಾಜ ವೈಭವ …

ಹಂಗಾಮ ಕಾರ್ನರ್ ನಲ್ಲಿ ಕತೆಯ ಬಾಜೂ ಕೂತು

ಸಾವಿನ  ಕುರಿತ ಕವನಗಳಿಗೆ ಮಾರುಹೋಗಿದ್ದವನು!

-ಸುನಂದಾ ಪ್ರಕಾಶ ಕಡಮೆ

ಕಲ್ಕತ್ತೆಯಲ್ಲಿ ನಡೆದ-ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳ ವಿಮೋಚನೆಯ ಮುಕ್ತಿದಶಕ  ಎಂದೇ ಹೆಸರಾದ ಚಳುವಳಿಯಲ್ಲಿ ತೊಡಗಿಕೊಂಡು 1084 ನೆ ನಂಬರಿನ ಶವವಾಗಿ ಹೋದ ‘ಬ್ರತಿ’ ಹುಟ್ಟುವಾಗ ತಾಯಿ ಸುಜಾತಾ ಒಬ್ಬಳೇ ಆಸ್ಪತ್ರೆಗೆ ಹೋಗಿ ಏಕಾಂಗಿಯಾಗಿ ಹಡೆದು , ಹಸುಗೂಸನ್ನೆತ್ತಿಕೊಂಡು ಮನೆಗೆ ಬಂದಿರುತ್ತಾಳೆ .
ಮೊದಲ ಮೂರು  ಮಕ್ಕಳು ಜನಿಸುವಾಗ ಇದ್ದ ಅವಳ ಅತ್ತೆ ಅದೇ ವೇಳೆಗೆ ಉದ್ದೇಶಪೂರ್ವಕ ಊರಿಗೆ ಹೋಗಿದ್ದಾಳೆ .
ಈ  ಭೂಮಿಗೆ ಶಿಶುಗಳನ್ನು ತರುವ ತನ್ನ ಗುರುತರ ಕಾರ್ಯದಲ್ಲಿ ಪ್ರೀತಿ-ವಿಶ್ವಾಸಗಳೇ ಇಲ್ಲದ ಈ ಪರಿಸರಕ್ಕೆ ಮುಗ್ಧ ಮಕ್ಕಳು ಬಂದ ಬೀಳುವ ಬಗ್ಗೆ ಸುಜಾತಾಗೆ ಅಂದಿನಿಂದ ಆತಂಕ ಹುಟ್ಟಲು ಪ್ರಾರಂಭ .
ಬ್ರತಿ ಅತಿ ಚಿಕ್ಕವನಿರುವಾಗಲೇ ತಂದೆ ದಿವ್ಯನಾಥ ಚಟರ್ಜಿಯ ಆದೇಶದಂತೆ ತಾಯಿಯಿಂದ ಬೇರೆಯಾಗಿ ಏಕಾಂಗಿಯಾಗಿ  ಮಲಗಲು ಅತಿಕಷ್ಟದಿಂದ ರೂಢಿಸಿ ಕೊಳ್ಳುತ್ತಾನೆ ಆಗ ಸುಜಾತಾಳ ಚಡಪಡಿಕೆ ಕಠಿಣ ಮನಸ್ಸುಳ್ಳ ದಿವ್ಯನಾಥನ ಒಳಗಣ್ಣಿಗೆ ಬೀಳುವುದಿಲ್ಲ ಬ್ರತಿಗೆ ಆಶ್ಚರ್ಯ .
ಅಣ್ಣ ಮತ್ತು ಇಬ್ಬರು ಅಕ್ಕಂದಿರು ಅಪ್ಪನ ಕ್ಲೀಷೆ ಎನ್ನಿಸುವ ಶಿಸ್ತಿಗೆ ಹೊಂದಿಕೊಂಡು ಮುಖದಲ್ಲಿ ಅನವಶ್ಯಕ ಗಾಂಭೀರ್ಯ ಮತ್ತು ವೇಷ ಭೂಷಣ ಗಳಲ್ಲಿ  ಸಾಮ್ಯ  ಕಾಯ್ದುಕೊಂಡು ಸ್ವಂತದ ವ್ಯಕ್ತಿತ್ವ ವನ್ನೇ ಕಳಕೊಂಡವರಂತಿರುತ್ತಾರೆ .  ಆಗೆಲ್ಲ ಬ್ರತಿ ಒಂಟಿಯಾಗಿ ತನ್ನ ಕೋಣೆಯ ಕಿಟಕಿಯ ಹೊರ ನೋಡುತ್ತಾ ಸಾವಿನ ಬಗ್ಗೆ ಬರೆದ ಕವನಗಳನ್ನು ರೋಮಾಂಚನದಿಂದ ಓದುತ್ತಿರುತ್ತಾನೆ . ತಂದೆ ದಿವ್ಯನಾಥನೆಂದರೆ ಅವನಿಗೆ ಎಲ್ಲಿಲ್ಲದ ಭಯ . ತಂದೆಯ ಹಿಂದೆ ಆಟ  ಅವನನ್ನು ‘ಬಾಸ್’ ಎಂದೇ ಸಂಬೋಧಿಸುವುದು.
ಇನ್ನಷ್ಟು

ಉರಿವ ಬತ್ತಿ ತೈಲ …

ಇಲ್ಲೂ ನೋಡಿ : invitations Blog

ಜಯಶ್ರೀ ಕಾಲಂ:ಎಮೋಷನಲ್ ಅತ್ಯಾಚಾರ್ ಅನ್ನೋ ರಿಯಾಲಿಟಿ ಷೋ

ನಿನ್ನೆ ಸಂಜೆ ಹಾಗೆ ಆ ಚಾನಲ್ ಕಡೆ ಗಮನ ಹರಿಸಿದೆ, ಅದರಲ್ಲಿ  ಹಿಂದಿ  ವಾಹಿನಿಯ ಪ್ರಖ್ಯಾತ ಹಸಿ ಬಿಸಿ ಕಾರ್ಯಕ್ರಮ ಎಮೋಷನಲ್ ಅತ್ಯಾಚಾರ್ ರಿಯಾಲಿಟಿ ಷೋ ಬಗ್ಗೆ ಪ್ರಸಾರ ಮಾಡ್ತಾ ಇದ್ರು.  ಹಾಗೆ  ನೋಡಿದ್ರೆ ಆ ಕಾರ್ಯಕ್ರಮ ಮನುಷ್ಯನ  ಕ್ರೌರ್ಯ ವನ್ನು ಬಿಚ್ಚಿ ತೋರಿಸುತ್ತೆ. ಮನಸ್ಸು, ಬಾಂಧವ್ಯ, ಪ್ರೀತಿ , ನಂಬಿಕೆ…ಇಂತಹ ಯಾವುದೇ ಅಂಶಕ್ಕೆ ಬೆಲೆ ಕೊಡದ ಮಂದಿ ಈ ಕಾರ್ಯಕ್ರಮದಲ್ಲಿ ಕಾಣ ಸಿಗುತ್ತಾರೆ.

ಪ್ರೀತಿ ಕೈ ಕೊಡುವ, ನಂಬಿಕೆ ದ್ರೋಹ ಮಾಡುವ ಅವನು/ ಅವಳು  ಯಾರೇ ಆಗಿರಲಿ ಅಂತಹವನ್ನು ಕಂಡ್ರೆ ನನಗೆ ತುಂಬಾ ಜಿಗುಪ್ಸೆ ಆಗುತ್ತೆ. ಆದರೆ ಆ ನಂಬಿಕೆ ದ್ರೋಹದಿಂದ ನೋಯುವ ಆ ಜೀವಗಳ ಬಗ್ಗೆ ತುಂಬಾ ದುಃಖ ಆಗುತ್ತದೆ. ಬಿಡಿ ನಾವು ಹೇಳಿದಂತೆ ಆಗುತ್ತದೆಯೇ? ಬಾಯ್ತುಂಬ ಒಳ್ಳೆ ಮಾತಾಡಿ ಹೃದಯದ ತುಂಬಾ ಕೆಟ್ಟತನ ಇಟ್ಟುಕೊಂಡಿರುವವರೇ  ಹೆಚ್ಚು

 

ಪೂರ್ಣ ಓದಿಗೆ : ಮೀಡಿಯಾ ಮೈಂಡ್