ಸ್ಕ್ಯಾಮ್ ಮಂತ್ರವ ಜೆ.ಪಿ.ಸಿ …

 

-ಸೂತ್ರಧಾರ ರಾಮಯ್ಯ
ಹಣ, ಹಗರಣ, ಹಗೆ-ರಣ! ಎಲ್ಲವೂ ಸ್ವಂತ ‘ಉದ್ಯೋಗ ಖಾತ್ರಿ ಯೋಜನೆ’ ಸಲುವಾಗಿ ಮೈಮೇಲೆ ಎಳೆದುಕೊಂಡು ತಮ್ಮ ಉದ್ಯೋಗಕ್ಕೆ ಕತ್ತರಿ ಹಾಕಿಕೊಂಡ ಕಸ-ರತ್ತುಗಳೇ. ಸದ್ಯದ ಸ್ಕ್ಯಾಮ್-ಉತ್ತರದ ಗೂಟಾಲ 2g . ಒಂದು Aರಾಜಾ.ಜಿ , ಇನ್ನೊಂದು
ಎಡ್ಡಿ.ಜಿ. ಪರಸ್ಪರ ತಳಕು ಹಾಡಿಕೊಂಡ, ಒಂದು ಇನ್ನೊಂದನ್ನು ತಳಕ್ಕೆ ಹಾಕಲು ಹೆಣೆಯಲಾಗುತ್ತಿರುವ ‘ತಲೆದಂಡ? ಗಳ ಪ್ರಕ್ರಿಯೆ.
ಎಲ್ಲವೂ ‘ಆದರ್ಶ’ ಸಮಾಜವನ್ನು ಬಿಲ್ಡ್ ಮಾಡುವ ಪ್ರಯತ್ನ ಮೇಲು ನೋಟಕ್ಕೆ. ಎರಡೂ A ರಾಜ ಕತೆಗಳೇ.ಜನರಲ್ಲಿ ಆತಂಕ ಹುಟ್ಟಿಸುತ್ತಿರುವ ನಾಯಕರ , ಕಾಲದಲ್ಲಿ ಎಚ್ಚರಿಕೆ ವಹಿಸದ ಹೈ ಕಮಾನ್ದರುಗಳ ‘ನಿರಾತಂಕವಾದದ’ ಫಲ.
ದೆಹಲಿಯದು ಹೈ ಫ್ರೀ ಕ್ವೆನ್ಸಿಯ ‘ಏರ್ flare ಆದರೆ, ಕರ್ನಾಟ ಕದ್ದು ಭೂ ಕುಸಿತ. ಲ್ಯಾಂಡ್ ಸ್ಲೈಡ್! ಅವರದ್ದನ್ನು ದೇಶ ದ್ರೋಹ ಅಂದರೆ ,ಇವರದ್ದನ್ನು ರಾಜ ದ್ರೋಹ ಅನ್ನಬಹುದಾ-ದಂತಕತೆ. ಆದರೆ ‘ತಲೆದಂಡ’ ಅನ್ನುವ ದೊಡ್ಡ ಶಬ್ಧದ ಬಳಕೆ ಬೇಕೇ? ತಲೆ ಇದ್ದವರು ಹೀಗೆ ಮಾಡಲು ಸಾಧ್ಯವೇ? ಬರಿ ‘ಕುರ್ಚಿದಂಡ’ ಅಂದರೆ ಸಾಲದೇ?
ಒಂದಾನೊಂದು ಕಾಲವಾಗಿದ್ದರೆ ಚಿಂತೆ ಇರುತ್ತಿರಲಿಲ್ಲ.
ಆ ಪೋಸಿಶನ್ ನವರು ‘ಮಾಡಿ ಮಡಿದರು’ (ದುಡ್ಡನ್ನು) ಅಂತಾ ಇಂದಿನವರು ಮಾಡಲಾಗದು; ಫೋರ್ಥ್ ಎಸ್ಟೇಟ್ ನಿಂದ ಎಷ್ಟ್ ಏಟ್ ಬೀಳ್ತಾ ಇದೆ ನೋಡಿದೆವಲ್ಲ, ರಂಗ(ನಾಥ)ನಾಟಕಗಳನ್ನು! ರಂಗಭೂಮಿ, ಉಳಿದ  ಮೀಡಿಯಾಗಳ  ಮುಂದೆ ಪೇಲವ ಅನಿಸುವಷ್ಟು.
ಅಲ್ಲಾ,ಅಂತ ಬಿಹಾರದಂತ ಬಿಹಾರಕ್ಕೆ ‘ಬಹಾರ್’ಬರಿಸುತ್ತಿದ್ದರೆ ನೀತಿಶ ಕುಮಾರ್, ಇಂಥಾ ಚಲುವ ಕನ್ನಡನಾಡನ್ನು ಹೀಗೆ stingaa ಪುರ ವನ್ನಾಗಿಸುವುದೇ? commission ಮಾಡಿದಾಕ್ಷಣ ಕಾಲ(ಅ)ಕ್ರಮದಲ್ಲಿ  ಎಲ್ಲಾ  omission ಆಗುತ್ತೆ, ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲು ಯಾವ ಧರ್ಮರಾಯನು ಬರುವುದಿಲ್ಲಾ, ಪರ ಅಪ್ಪನ ಅಗ್ರಹಾರಕ್ಕೆ ಕರೆಯಲು ಬರುವ M ಧರ್ಮರಾಯನನ್ನು ಬಿಟ್ಟರೆ ಅನ್ನುವ ‘ನಿರಾತಂಕ’ ವಾದ ಇನ್ನು ಮುಂದೆ ನಡೆಯದು.
ಇನ್ನಷ್ಟು

Life ಇಷ್ಟೇನೇ. . . . !?

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-33

ಸಾಲಾ ಸೋಲ ಮಾಡಿಕೊಂಡು, ಮಾರ್ಕೆಟ್ನಲ್ಲಿ ಶೇರನ್ ಕೊಂಡುಫಾರಿನ್ ದುಡ್ನಲ್ ಹೊಡೆತಾ ತಿನ್ನು Life ಇಷ್ಟೇನೇ !! ಟಂಟನಾಟನ್ ಟಂಟನ್. . .  . .  Life ಇಷ್ಟೇನೇ !! . . . . . . . . . . . . . . . . . . . . . . . . ಯೋಗರಾಜ್ ಭಟ್.

ಏನ್ ಗೊತ್ತಾ?
ನೀವು ಒಂದು ಮಾವಿನ ಸಸಿಯನ್ನು ನೆಟ್ಟು ನೀರು, ಗೊಬ್ಬರ, ಕೀಟನಾಶಕ ಎಲ್ಲಾ ಹಾಕಿ ಬೆಳೆಸುತ್ತೀರಿ ಅಂತ ಇಟ್ಟುಕೊಳ್ಳಿ. ಅದು ಬೆಳೆದು ದೊಡ್ಡದಾಗಿ ಅದರಲ್ಲಿ ಹೂ ಆಗಿ ಕ್ರಮೇಣ ಅಪರೂಪಕ್ಕೆ ಒಂದು ಮಿಡಿ ಬಿಡುತ್ತದೆ. ಇನ್ನೂ ಸ್ವಲ್ಪ ಸಮಯದ ನಂತರ ಆ ಮಿಡಿ ಬೆಳೆದು ಹಣ್ಣಾಗತೊಡಗುತ್ತದೆ. ಇನ್ನು ಸ್ವಲ್ಪ ದಿನ ಆಗಲಿ; ಹುಳಿ ಕಡಿಮೆಯಾಗಿ ಒಳ್ಳೆಯ ಸಿಹಿ ಹಣ್ಣು ಸವಿಯಬಹುದು ಅಂತ ಹಾಗೇ ಅದನ್ನು ಮರದಲ್ಲೇ ಬಿಟ್ಟಿರುತ್ತೀರಿ.


ದಿನಾ ಬೆಳಗ್ಗೆ ಎದ್ದು ಬಾಗಿಲು ತೆರೆದು ಹೊರಬಂದು ಇವತ್ತು ಕೊಯ್ಯಬಹುದೇ ಅಂತ ಖಾತ್ರಿ ಪಡಿಸಿಕೊಳ್ಳಲು ಹಣ್ಣನ್ನು ನೋಡುತ್ತೀರಿ. ಇಲ್ಲ. ಇನ್ನೊಂದು ದಿನ ಇರಲಿ. ನಳೆ ನೋಡೋಣ ಅಂತ ಗಡ್ಡ ಕೆರೆದುಕೊಂಡೂ ಬಚ್ಚಲುಮನೆ ಕಡೆ ಕಾಲೆಳೆಯುತ್ತೀರಿ.

ಅಷ್ಟರಲ್ಲಿ ಒಂದು ದಿನ ಬೆಳಗ್ಗೆ ಎದ್ದು ಬಾಗಿಲು ತೆರೆದು ಮಾವಿನ ಹಣ್ಣಿನ ಪರಿಶೀಲನೆಗೆ ಹೊರಡಬೇಕಾದರೆ ಹಣ್ಣೂ ಇಲ್ಲ, ಮಣ್ಣೂ ಇಲ್ಲ – ಎದುರಿಗೆ ಕಾಣಿಸುವುದು ನಿಮ್ಮನ್ನು ನೋಡಿ ಹಲ್ಲು ಕಿಸಿದು ಅಣಕಿಸುವಂತೆ ಕಾಣುವ ಖಾಲಿ ಗೆಲ್ಲು ಮಾತ್ರ! ಸಾಲದ್ದಕ್ಕೆ, ಅದರ ಮೇಲೆ ಮೊದಲಿಂದಲೇ ಕಣ್ಣಿಟ್ಟಿದ್ದ ಪಕ್ಕದ ಬೀದಿಯ ಪೋಲಿ ಹುಡುಗ ಅದನ್ನು ಎತ್ತಿಕೊಂಡು ಓಡುತ್ತಾ ಇರುವ ಸೀನ್ ನಿಮ್ಮ ಕಣ್ಣೆದುರಿಗೇ ಕಾಣಿಸುತ್ತದೆ. ಅಷ್ಟೆಲ್ಲಾ ಕಷ್ಟ ಪಟ್ಟಿದ್ದು, ಖರ್ಚು ಮಾಡಿದ್ದು, ಶ್ರಮವಹಿಸಿದ್ದು ಎಲ್ಲವೂ ವ್ಯರ್ಥ.

ಇನ್ನಷ್ಟು

ರಂಗದ ಮೇಲೆ ‘ನರಿಗಳಿಗೇಕೆ ಕೋಡಿಲ್ಲ’…

ಚಿತ್ರಗಳು :ಶ್ರೀ ರಾಮ್ .ಕೆ.ಎ.ಜಮದಗ್ನಿ

ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ  ಸಂಚಾರಿ ಥಿಯೇಟ್ರು ನಾಟಕ ತಂಡ ಕುವೆಂಪು ಅವರು ರಚಿಸಿರುವ ‘ ನರಿಗಳಿಗೇಕೆ ಕೋಡಿಲ್ಲ’ ನಾಟಕವನ್ನು ಪ್ರಸ್ತುತ ಪಡಿಸಿತು . ಆ ನಾಟಕದ ಕೆಲವು  ದೃಶ್ಯಗಳು ನಿಮಗಾಗಿ…

ಇನ್ನಷ್ಟು ಚಿತ್ರಗಳು : ಸೈಡ್ ವಿಂಗ್

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…

ವೀರಭದ್ರಪ್ಪ ಬಿಸ್ಲಳ್ಳಿ ಅವರ ಎರಡು ಮೂರು ಮೇಲ್ ಗಳು ಒಂದರ ಹಿಂದೆ ಒಂದರಂತೆ ನನ್ನ ಇನ್ ಬಾಕ್ಸ್ ಗೆ ಬಂದು ಬಿತ್ತು. ಓದಿ ನೋಡಿದಾಗ ಅರೆ! ಹೌದಲ್ಲಾ..? ಅನಿಸಿತು. ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ನಮ್ಮ ಮೀಡಿಯಾಗಳು ಮಿಸ್ ಮಾಡಿಕೊಂಡ ಸುದ್ದಿಯನ್ನು ಬಿಸ್ಲಳ್ಳಿಯವರ ಮೇಲ್ ಬಿಚ್ಚಿಟ್ಟಿತ್ತು.

ಒಬಾಮ ಭೇಟಿ ನೀಡುವುದಕ್ಕೆ ತಿಂಗಳುಗಳ ಮುನ್ನ ಅದೇ ಅಮೆರಿಕಾದಿಂದ ಇನ್ನೊಂದು ಭೇಟಿ ನಡೆದು ಹೋಗಿತ್ತು. ಅಮೆರಿಕಾದ ಆ ಭೇಟಿ ಮುಂಬೈ, ದೆಹಲಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅದರಾಚೆಗೆ ಬೆಂಗಳೂರಿಗೆ, ಜಿಕೆವಿಕೆ ಕ್ಯಾಂಪಸ್ ಗೆ, ದೊಡ್ಡಬಳ್ಳಾಪುರದ ಗದ್ದೆಗೂ ಭೇಟಿ ನೀಡಿತ್ತು. ಅದು ಅಮೆರಿಕಾದ ಬಿ ಟಿ ಭತ್ತ. ಆದರೆ ಅದು ನಮ್ಮ ಮಾಧ್ಯಮಗಳ ಕಣ್ಣಿಗೆ ಬೀಳಲಿಲ್ಲ. ಬರಾಕ್ ಒಬಾಮಾ ಬಂದಂತೆ ಅವು 34 ಯುದ್ಧ ನೌಕೆಗಳನ್ನು, ಹಲವಾರು ಹೆಲಿಕಾಪ್ಟರ್ ಗಳನ್ನು, ಎರಡು ಜೆಟ್ ವಿಮಾನಗಳನ್ನು, 40 ಕಾರುಗಳನ್ನು, ಸೆಕ್ಯುರಿಟಿ ಗಾರ್ಡ್ ಗಳನ್ನು, ಮೂಸಿ ನೋಡುವ ನಾಯಿಗಳನ್ನು ಬಗಲಿಗಿಟ್ಟುಕೊಂಡು ಬರಲಿಲ್ಲ. ಬದಲಿಗೆ ಸದ್ದಿಲ್ಲದೆ, ಗುಪ್ತ್ ಗುಪ್ತ್ ಆಗಿ, ಹಿಂಬಾಗಿಲಿನಿಂದ ಬಂದು ಕೃಷಿ ವಿವಿ ಗಳನ್ನು, ಅಧ್ಯಯನ ಕೇಂದ್ರಗಳನ್ನು, ವಿಜ್ಞಾನಿಗಳನ್ನು ಭೇಟಿ ಮಾಡಿ, ದೊಡ್ಡಬಳ್ಳಾಪುರದ ಗದ್ದೆಯಲ್ಲಿ ಬೇರು ಬಿಟ್ಟಿತು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಬರಹ ವಾಸು ಅಭಿನಂದನಾ ಸಮಾರಂಭ …

ಚಿತ್ರಗಳು:ಸರಸ್ ಮಾಧ್ಯಮ ಸಂಪರ್ಕ

ಬರಹ ತಂತ್ರಾಂಶವನ್ನು ಉಚಿತವಾಗಿ ಲೋಕಾರ್ಪಣೆ ಮಾಡಿರುವ ಬರಹ ವಾಸು ಎಂದೇ ಪ್ರಸಿದ್ಧಿ ಪಡೆದ ಶೇಷಾದ್ರಿವಾಸು ಅವರನ್ನು ತುಮಕೂರಿನ ಸರಸ್ ಮಾಧ್ಯಮ ಸಂಪರ್ಕ ಸನ್ಮಾನಿಸಿತು . ವಿ.ಎಸ್. ರಾಮಚಂದ್ರನ್ ಜಿ.ಬಿ.ಜ್ಯೋತಿ ಗಣೇಶ್ ಸೇರಿದಂತೆ ಮತ್ತಿತರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದ ಒಂದು ನೋಟ ಇಲ್ಲಿದೆ…

ಜಯಶ್ರೀ ಕಾಲಂ:ಈತ ಕುಡುಕನಾದರೂ ಜಾಣ …

@@ ಸುವರ್ಣ ನ್ಯೂಸ್ ನಲ್ಲಿ  ಸಿಂಗ್ರಿ ರೌಂಡ್ಸ್ ಇಷ್ಟ ಆಗುವ ಕಾರ್ಯಕ್ರಮ. ಅತ್ಯಂತ ಸಾಧಾರಣ ಪ್ರಜೆ, ಅದರಲ್ಲೂ ಕುಡುಕ  ಆದರೆ ಎಲ್ಲಾ ಬಲ್ಲ ಜಾಣ. ಈತನ ಮಾತು ಎಲ್ಲರಿಗೂ ನಗೆ ಉಕ್ಕಿಸಿದರೂ ಗಮನ ಕೊಟ್ರೆ ಹೌದಲ್ವ ಎನ್ನಿಸುವಂತೆ ಮಾಡುವ ಪಾತ್ರ..! ಕುಡುಕ ಮುಂಡೆದಾಗಿ ನಮ್ಮ ಕೀರ್ತಿಬೊಂಬಾಟಾಗಿ ಮುಂದುವರೆಸಿ ಕೊಂಡು ಹೋಗ್ತಾ ಇದ್ದಾನೆ. ಲೋ ಕೀರ್ತಿ ಒಪ್ಪಿಕೊಳ್ಳೋ ಯಾರಿಗೂ ಹೇಳಲ್ಲ ನೀನು ಎರಡು ಪೆಗ್ ಎತ್ತಿ ತಾನೆ ಕಾರ್ಯಕ್ರಮಕ್ಕೆ ಧ್ವನಿ ಕೊಡೋಕೆ ಬರೋದು ;-) .

ಯಾಕೆ ಕುಡುಕನ ಮೂಲಕ ಇಂತಹ ಸಮಸ್ಯೆಗಳನ್ನು ತಿಳಿಸಲು ಹೋಗ್ತಿರಿ ಎನ್ನುವ ಆಕ್ಷೇಪ ಅನೇಕರಿಂದ ಬಂದಿತ್ತು ( ಕೀರ್ತಿನೆ ಹೇಳಿದ್ದ ಒಮ್ಮೆ) ಆಗ ನಾನಂತೂ  ಕುಡಿದು ಹಾಳಾಗಿದ್ದೇನೆ ನೀವು ಹಾಗಾಗ ಬೇಡಿ  ಎಂದು ಈ ಜಾಣ ಕುಡುಕ ಸಮಾಜಕ್ಕೆ ತಿಳಿಸುವ ವಿಧಾನ ಎಂದು ವೀಕ್ಷಕರಿಗೆ ಸಿಂಗ್ರಿಯೇ ತಿಳಿಸಿದ್ದ.
ಸಿಂಗ್ರಿ ರೌಂಡ್ಸ್  ಯಾವುದು ಬೆಸ್ಟ್ ಆಗಿರುತ್ತದೆಯೋ  ಅವುಗಳ ಗುಚ್ಛ ವೀಕ್ಷಕರಿಗೆ ಶನಿವಾರ  ನೀಡುವ  ರಿವಾಜು ಮೊದಲಿನಿಂದ ಇದೆ

ಪೂರ್ಣ ಓದಿಗೆ : ಮೀಡಿಯಾ ಮೈಂಡ್

 

ಸೂರಿ -4:ಅವತ್ತು ಮಂಗಳವಾರವಿರಬೇಕು…

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 4

ಅವತ್ತು ಮಂಗಳವಾರವಿರಬೇಕು. ಹಳೇಬೀಡು ಸುಂದರರಾಯರ ಮೈ ಜುಮ್ಮೆಂದಿತು. ಭಾವುಕತೆಯಿಂದ ಕಣ್ಣುಗಳಲ್ಲಿ ನೀರುಕ್ಕಿತು. ಜೂಲುಜೂಲಾಗಿದ್ದ ಅಂಗಿಯ ಚುಂಗಿನಿಂದ ಕಣ್ಣೊರೆಸಿಕೊಂಡರು. ನಡುಗುವ ಹೆಜ್ಜೆಗಳನ್ನಿಡುತ್ತಾ, ಆನಂದತುಂದಿಲರಾಗಿ ಹಗುರಾಗಿ ಕಂಪಿಸುತ್ತಾ, ಸ್ವರ್ಗವನ್ನು ಬಿಟ್ಟು ಭೂಮಿಗಿಳಿಯುವಂತೆ ತಮ್ಮ ಮುಂದಿದ್ದ ಹತ್ತು ಮೆಟ್ಟಿಲುಗಳನ್ನು ಒಂದೊಂದಾಗಿ ಇಳಿದರು.
ಒಂದೆರಡು ಮೆಟ್ಟಿಲುಗಳನ್ನು ಇಳಿದಿದ್ದರೋ ಇಲ್ಲವೋ, ಅದೇನೋ ನೆನಪಾಗಿ ಮತ್ತೆ ಇಳಿದ ಎರಡು ಮೆಟ್ಟಿಲುಗಳನ್ನು ಹತ್ತಿ, ‘ಬಿ ಎಂ ನಾಗರಾಜರಾವ್, ಎಂ ಎ; ಎಲ್ ಎಲ್ ಎಂ. ಹೈಕೋರ್ಟು ವಕೀಲರು‘ ಎಂದು ಢಾಳಾಗಿ ಗೋಡೆಗೆ ನೇತು ಹಾಕಿದ್ದ ಬೋರ್ಡನ್ನು ಮುಟ್ಟಿ, ಕಣ್ಣಿಗೊತ್ತಿಕೊಂಡು ಮೆಟ್ಟಿಲುಗಳನ್ನು ಇಳಿದರು.
ಕಳೆದ ಹಲವಾರು ವರ್ಷಗಳ ವಾಡಿಕೆಯಂತೆ, ಇಂದೂ ಬೆಳಿಗ್ಗೆ ಒಂಬತ್ತೂಮುಕ್ಕಾಲಿಗೆ ಹಳೇಬೀಡು ಸುಂದರರಾಯರು ವಕೀಲ್ ನಾಗರಾಜರಾಯರ ಆಫೀಸಿನ ಮುಂದಿರುವ ಬೆಂಚಿನ ಮೇಲೆ ಜವಾನನಿಗೂ ಒಂದಿಷ್ಟು ಜಾಗ ಬಿಟ್ಟು ಕೂತಿದ್ದರು.
ಕರಾರುವಕ್ಕಾಗಿ ಹತ್ತು ಗಂಟೆ ಹತ್ತು ನಿಮಿಷಕ್ಕೆ ನಾಗರಾಜರಾಯರ ಆಗಮನವನ್ನು ಸಾರುವಂತೆ ಅವರ ಜವಾನ ಊಟದ ಕ್ಯಾರಿಯರ್‌ಅನ್ನೂ, ಒಂದು ಬಾಳೆಎಲೆಯ ಸುರುಳಿಯನ್ನೂ, ರೈಲು ತಂಬಿಗೆಯನ್ನೂ ಕೈಲಿ ಹಿಡಿದು ದುಡುದುಡು ಆಫೀಸು ಹೊಕ್ಕ.
ಇನ್ನಷ್ಟು