ಯುದ್ಧ ದೊಳಗೊಂದು ಯುದ್ಧ …!

-ಸತೀಶ್ ಶೃಂಗೇರಿ

ಮಾಹಿತಿ ಮನರಂಜನೆ …

Dont Miss

 

ಹೀಗೊಂದು ಪ್ರಸಂಗ …

-ಸಂದೀಪ್ ಕಾಮತ್

ಕಡಲ ತೀರ

ಕನ್ನಡ ಪದ್ಯ ಬಾಯಿಪಾಠ ಮಾಡಿಕೊಂಡು ಬರದ್ದಕ್ಕೆ ಮೇಷ್ಟ್ರು ಮಹೇಶನಿಗೆ ಕುಂಡೆಗೆ ಬಾಸುಂಡೆ ಬರೋ ಹಾಗೆ ಹೊಡೆದಿದ್ದರು.
ಮಹೇಶ ಮನೆ ಬಿಟ್ಟು ಓಡಿ ಪೆರ್ಡೂರು ಯಕ್ಷಗಾನ ಮೇಳ ಸೇರಿದ.
ಈಗ ಮಹೇಶನಿಗೆ ಇಡೀ ಕೃಷ್ಣಾರ್ಜುನ ಕಾಳಗ ಪ್ರಸಂಗ ಬಾಯಿಪಾಠ ಬರುತ್ತೆ….

ಮಹಿಳಾ ರಂಗ ಸಮಾವೇಶ…

ಚಿತ್ರಗಳು: ಎಚ್ ವಿ ವೇಣುಗೋಪಾಲ್

ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ಮೊದಲನೆಯ ಮಹಿಳಾ ರಂಗ ಸಮಾವೇಶ ಜರುಗಿತು.  ಡಾ.ವಿಜಯಾ ಅವರು ಸಮಾವೇಶದ ಅಧ್ಯಕ್ಷ ಸ್ಥಾನ ವಹಿಸಿದ್ದರು.

ಹಿರಿಯ ರಂಗ ನಟಿ, ಸಂಘಟಕಿ ವಿಮಲಾ ರಂಗಾಚಾರ್,  ಬಿ.ಜಯಶ್ರೀ, ಹಿರಿಯ ರಂಗ ನಟಿ ಸುಭದ್ರಮ್ಮ ಮನ್ಸೂರ್ , ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಮತ್ತಿತರ ಗಣ್ಯರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು .ಆ ಕಾರ್ಯಕ್ರಮದ ಒಂದು ನೋಟ ಇಲ್ಲಿದೆ .

ಇನ್ನಷ್ಟು ಫೋಟೋಗಳು : ಸೈಡ್ ವಿಂಗ್

Yeddy & Sons…

-ಸತೀಶ್ ಆಚಾರ್ಯ

ಅನಂತಪುರ ಈಶ್ವರಯ್ಯ ಅಭಿನಂದನಾ ಸಮಾರಂಭ …

ಇಲ್ಲೂ ನೋಡಿ :invitations blog

ಜಯಶ್ರೀ ಕಾಲಂ: ಕೇಳು ಜನಮೇಜಯ ಧರಿತ್ರಿ ಭೂಪಾಲ …

ಆ ಕಾಲದಲ್ಲಿ ರಾಮಾಯಣ ಮಹಾಭಾರತ ಧಾರವಾಹಿ ಹೊಸ ಬಗೆಯ ಸಂಚಲನ ತಂದಿತ್ತು ವೀಕ್ಷಕ ಬಳಗಕ್ಕೆ  ದೂರದರ್ಶನ. ಪ್ರಾಯಶ : ಆಗ  ಮನೋರಂಜನ  ಮಾರ್ಗಗಳು ಕಡಿಮೆ ಇದ್ದ ಕಾರಣ ಆ ಎರಡು ಸೀರಿಯಲ್ ಸಿಕ್ಕಾಪಟ್ಟೆ ಜನಪ್ರೀಯತೆ ಪಡೆದಿತ್ತು ಎನ್ನುವ ಮಾತನ್ನು ನಾವು ನೇರವಾಗಿ ಒಪ್ಪಿಕೊಳ್ಳ ಬೇಕಾದ ಸತ್ಯ :-)
ಆದರೂ ಸಹ , ಪುಸ್ತಕ ರೂಪದಲ್ಲಿದ್ದ -ಪುರಾಣ ಹೇಳುವವರ ಬಾಯಿ ಮಾತಿನ ಮೂಲಕ  ಕೇಳಿದ್ದ ವರ್ಣನೆಯು ದೃಶ್ಯ ರೂಪದಲ್ಲಿ ಬಂದಿದ್ದು  ಸಹ ವೀಕ್ಷಕರ ಖುಷಿ ಕಾರಣ ಆಗಿತ್ತು ಎನ್ನುವುದು ಸಹ ಅಷ್ಟೆ ಸತ್ಯವಾದ ಸಂಗತಿ.

ಉತ್ತರ ಭಾರತೀಯರಿಗಿಂತ ದಕ್ಷಿಣ ಭಾರತೀಯರು ಇಂತಹ ಭರಪೂರ ಭಕ್ತಿಯ ಸಿನಿಮಾಗಳನ್ನು ನೋಡುಗರ ಕೈಗಿತ್ತರು. ಸ್ವಲ್ಪ ಬೇಸರದ ಸಂಗತಿ ಅಂದ್ರೆ ಅದರಲ್ಲಿ ಎನ್ಟಿಆರ್ ಕೃಷ್ಣನಾಗಿ   ಮನರಂಜಿಸಲು ಬರ್ತಾ ಇದ್ದುದು. ಕೃಷ್ಣ ಪುರಾಣದಲ್ಲಿ ಬರೆದಂತೆ ಇಲ್ಲವಲ್ಲ ಎನ್ನುವ  ಕೊರಗು ಸಾಕಷ್ಟು ನೋಡುಗರ ಹೃದಯದಲ್ಲಿ ಇತ್ತು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಜೋಗಿಗೊಂದು ಪತ್ರ

ಜೋಗಿ ಬರೆದ ‘ನರಕಾಸುರರ ಮುಂದೆ ಹೀಗೊಂದು ಕಿನ್ನರಿ..‘ ಗೆ

ಇಂಗ್ಲೆಂಡ್ ನಿಂದ ತೊದಲು ಮಾತುವಿನ ಕೇಶವ ಕುಲಕರ್ಣಿ ಬರೆದ ಪತ್ರ

ಜೋಗಿ,

ನಾನು ಮಾಡಿದ್ದೆಲ್ಲ ನಿಮಗೆ ಗೊತ್ತಾದದ್ದು ಯಾವಾಗ? ನಾನು ನಿಮ್ಮನ್ನು ಒಮ್ಮೆಯೂ ಭೇಟಿಯಾಗಿಲ್ಲ, ಮಾತಾಡಿಸಿಲ್ಲ!

ಬೇಂದ್ರೆಯವರ ’ಜೋಗಿ’ಯ ಅರ್ಥ ಹುಡುಕಲು ಪಬ್ಲಿಕ್ ಲೈಬ್ರರಿಯ ಎಲ್ಲ ವಿಮರ್ಶೆ ಪುಸ್ತಕಗಳನ್ನು ಜಾಳಾಡಿಸಿದ್ದೆ.

ಕುವೆಂಪು ಅವರ ಕವಿತೆ ಓದುವಾಗ ಸಂಸ್ಕೃತ ಡಿಕ್ಷನರಿ ಹಿಡಿದೇ ಕೂರುತ್ತಿದ್ದೆ. ಅ ಎರಡೂ ಕಾದಂಬರಿಗಾಳನ್ನು ಓದುವಾಗ ಮೂರು ದಿನ ಹುಷಾರಿಲ್ಲವೆಂದು ಕಾಲೇಜಿಗೆ ಚಕ್ಕರ್ ಹೊಡೆದು ದಿನ ರಾತ್ರಿ ಮಲಗಿಕೊಂಡೇ ಓದಿ ಮುಗಿಸಿದ್ದೆ.

ತೇಜಸ್ವಿಯವರ ’ಕರ್ವಾಲೋ’ ಬಗ್ಗೆ ತಿಂಗಳುಗಟ್ಟಲೇ ಸಿಕ್ಕ ಸಿಕ್ಕವರ ಹತ್ತಿರ ಮಾತಾಡುತ್ತಿದ್ದೆ (ನನ್ನನ್ನು ಹುಚ್ಚ ಅಂದುಕೊಂಡಿದ್ದರೋ ಏನೋ?)

ಅಡಿಗರ ’ಭೂಮಿಗೀತ’ ಮತ್ತು ’ಹಿಮಗಿರಿಯ ಕಂದರ’ಗಳನ್ನು ಪರೀಕ್ಷೆಗೆ ಓದುವಂತೆ ವಾರಕ್ಕೆರೆಡು ಸಲ ಓದಿ ಹೊಸ ಅರ್ಥ ಹೊಳೆದು ಪುಳಕಿತನಾಗುತ್ತಿದ್ದೆ.

ಚಿತ್ತಾಲರ ’ಕತೆಯಾದಳು ಹುಡುಗಿ’ ಕಥಾಸಂಕಲನವನ್ನು ಓದಿ, ವಾರಗಟ್ಟಲೇ ಸನ್ನಿ ಹಿಡಿದವನಂತೆ ಆಗಿಬಿಟ್ಟು, ಅದೇ ಜೋಶಿನಲ್ಲಿ ’ನನ್ನ ಕತೆ’ ಎಂಬ ಹೆಸರಿನ ಕತೆ ಬರೆದು, ’ತರಂಗ’ಕ್ಕೆ ಕಳಿಸಿ, ’ತಿಂಗಳ ಅತ್ಯುತ್ತಮ ಕತೆ’ ಎಂದು ಪ್ರಕಟವೂ ಆಗಿ ಕಂಗಾಲಾಗಿದ್ದೆ.

ಖಾಸನೀಸರ ’ತಬ್ಬಲಿಗಳು’ ಕತೆ ನನ್ನ ಸುತ್ತ ಮುತ್ತ ಎಲ್ಲ ಕಡೆ ನಡೆಯುತ್ತಿರುವಂತೆ ಕಾಣುತ್ತಿತ್ತು.

ಇವತ್ತು ಎಲ್ಲ ಬದಲಾಗಿದೆ. ಆಧುನಿಕತೆ ಮತ್ತು ಪಾಶ್ಚಾತ್ಯೀಕರಣದ ಒಂದಿನ ಭಾರತದಲ್ಲಿ ಇಂಗ್ಲೀಷ್ ಶಿಕ್ಷಣದ ಅನಿವಾರ್ಯತೆಯ ನಡುವೆ ಸರಕಾರ ಹೇರಿರುವ ಕಡ್ಡಾಯ ಕನ್ನಡ (ಒಂದು ಸಬ್ಜೆಕ್ಟು)ವನ್ನು ಓದುವ ಇಂದಿನ ನಗರೀಕರಿಗೆ ಹಳೆಗನ್ನಡ-ನಡುಗನ್ನಡ-ಹೊಸಗನ್ನಡ ಎಂದರೂ ಅಷ್ಟೇ, ನವೋದಯ- ನವ್ಯ-ಬಂಡಾಯ- ದಲಿತ ಎಂದರೂ ಅಷ್ಟೇ…ಎರಡೂ ಅರ್ಥವಾಗುವುದಿಲ್ಲ, ಅಥವಾ ಅವೆಲ್ಲ ಅರ್ಥವಿಲ್ಲದವುಗಳು.

ಹಾಸ್ಟೇಲಿನ ಒಂದು ಚಿಕ್ಕ ಕೋಣೇಯಲ್ಲಿ ಕೂತು ಶಾಂತಿನಾಥ ದೇಸಾಯಿಯವರ ‘ಕ್ಷಿತಿಜ‘ ಅಥವಾ ಅನಂತಮೂರ್ತಿಯವರ ‘ಭಾರತೀಪುರ‘ ಓದುತ್ತ ನಮ್ಮ ಹುಳುಕನ್ನೂ ಆಧುನಿಕತೆಯ ಹುಳುಕನ್ನೂ, ಹಳ್ಳಿಯ ಜೊತೆ ‘ಫಾರೀನ್‘ನನ್ನೂ ಒಟ್ಟೊಟ್ಟಿಗೆ ಒಂದಿಷ್ಟೂ ಸರಳಗೊಳಿಸದೇ ಅದರ ಪೂರ್ಣ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳಲು ಹೆಣಗುತ್ತಿದ್ದೆವು.

ಪ್ರತಿವಾರ ಯಾವ್ಯಾವುದೋ ಕತೆ-ಕಾವ್ಯಗಳ ಕುರಿತು ಬರೆಯುತ್ತಿದ್ದ ಸ್ವಗತಗಳು, ಬಸವಣ್ಣನನ್ನೂ ಮಾರ್ಟಿನ್ ಲೂಥರ್ ನನ್ನೂ ಒಂದೇ ತಕ್ಕಡಿಯಲ್ಲಿಟ್ಟು ಬರೆಯಬಲ್ಲ ಟಿಪ್ಪಣೆ, ಮಾಸ್ತಿಯನ್ನೂ ಚಿತ್ತಾಲರಷ್ಟೇ ಆಪ್ತವಾಗಿಸಬಲ್ಲ ಬರಹಗಳು, ಲೇಖಕರ ಜೊತೆಗಿನ ಜಗಳಗಳು, ರಾಜಕೀಯದವರೊಡನೆ ಇಳಿದ ಕದನಗಳು….

ಯಾವುದಕ್ಕೂ ಒಂದು ಕಡೆ ಒಂಟಿಕೊಳ್ಳದಂತೆ, ನಿಂತ ನೀರಾಗದಂತೆ ತಡೆಯುವ ಒಂದು ಸಂವಹನ ಕ್ರಿಯೆಯಲ್ಲಿ ಇದ್ದಂತೆ ಭಾಸವಾಗುತ್ತಿತ್ತು. ತರಂಗ-ಸುಧಾಗಳು, ಮಯೂರ-ತುಷಾರಗಳು, ಯುಗಾದಿ-ದೀಪಾವಳಿ ವಿಶೇಷಾಂಕಗಳು ನಮ್ಮೊಳಗಿನ ಜೀವಂತಿಕೆ ಆರಿ ಹೋಗದಂತೆ ಕಾಯ್ದುಕೊಂಡಿದ್ದವು.

ನೀವೇ ಎಲ್ಲ ಬರೆದಾಗಿದೆಯಲ್ಲ!

ನನ್ನೆಲ್ಲ ನೆನಪುಗಳನ್ನು ಇಷ್ಟು ಚೆನ್ನಾಗಿ ಬರೆದದ್ದಕ್ಕೆ ತುಂಬ ಥ್ಯಾಂಕ್ಸ್!

-ಕೇಶವ ಕುಲಕರ್ಣಿ

ತೊದಲು ಮಾತು

ಸೂರಿ -2:ಟೈಲರ್ ತುಕ್ಕೋಜಿ…

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 2

ಪಾತ್ರ ಎರಡು. ಟೈಲರ್ ತುಕ್ಕೋಜಿ.

(ಪೂರ್ಣ ಓದಿಗೆ ಪೂರ್ಣಚಂದ್ರ ತೇಜಸ್ವಿಯವರ ಕಥೆ: ’ತುಕ್ಕೋಜಿ’.) ಮಗ ಕೃಷ್ಣೋಜಿ ಹುಟ್ಟಿದ ಮೇಲೆ ಗುರುಗಳ್ಳಿಯ ತನ್ನ ಟೈಲರಿಂಗ್ ವ್ಯಾಪಾರ ಅಧ್ವಾನ್ನವಾಗಿ, ನಂಬಿಕಸ್ಥ ಗಿರಾಕಿಗಳೂ ದೂರವಾಗಿ ಹೋದ ಮೇಲೆ ಬೇರೆ ದಾರಿ ಕಾಣದೇ ಒಂದು ಶುಭಮುಹೂರ್ತದಲ್ಲಿ ತುಕ್ಕೋಜಿ ಗುರುಗಳ್ಳಿಯನ್ನೇ ಬಿಟ್ಟು ಹೊರಟುಬಿಟ್ಟ.

ತುಕ್ಕೋಜಿಯ ದೊಡ್ಡಪ್ಪನ ಹಿರೀಮಗ ಶೀನೋಜಿ ದಾವಣಗೆರೆಯ ವಿನೋಬಾನಗರದಲ್ಲಿ ಟೈಲರ್ ಅಂಗಡಿಯಿಟ್ಟು ಜರ್ಬಾಗಿದ್ದ. ಒಂದು ಸಣ್ಣ ಸ್ವಂತದ ಮನೆ, ಒಂದು ಸುವೇಗಾ, ಕಾನ್ವೆಂಟ್ ಸ್ಕೂಲಿನಲ್ಲಿ ಓದುತ್ತಿರುವ ಮಗ, ಎಲ್ಲಕ್ಕೂ ಮುಖ್ಯವಾಗಿ ಹೇಳಿದ ಹಾಗೆ ಕೇಳುವ ಒಂದು ಹೆಂಡತಿ.

ತುಕ್ಕೋಜಿಯ ಕಣ್ಣಲ್ಲಿ ಶೀನೋಜಿ ಸದಾಸರ್ವದಾ ಸ್ವರ್ಗಕ್ಕೆ ಬೆಂಕಿ ಹಚ್ಚುತ್ತಿದ್ದ ಸಂಸಾರವಂದಿಗನಾಗಿದ್ದ. ಅವನ ಪ್ರಯತ್ನದಿಂದಲೇ ತುಕ್ಕೋಜಿಗೆ ಮಂಡೀಪೇಟೆಯ ಅಡ್ಡರಸ್ತೆಯಲ್ಲಿ ಒಂದು ಅಂಗಡಿ ದೊರೆತಿದ್ದು, ತುಕ್ಕೋಜಿ ದಾವಣಗೆರೆಯಲ್ಲಿ ತನ್ನ ವ್ಯಾಪಾರ ಶುರುಮಾಡಿದ್ದು. ಮಗ ಕಿಟ್ಟುಗೆ ಈಗ ಆರೋ ಏಳೋ ವರ್ಷ.

ಒದ್ದರೆ ಸದ್ದಿಲ್ಲದೇ, ಹೆಚ್ಚು ಅಳದೇ ಒದೆಸಿಕೊಳ್ಳುವ ವಯಸ್ಸು. ಅಲ್ಲದೇ ಆತನ ತರಲೆಗಳೂ ಮೊದಲಿನಂತಿಲ್ಲ. ಕಾನ್ವೆಂಟ್ ಸ್ಕೂಲ್ ಅಲ್ಲದಿದ್ದರೂ ಒಂದು ಸರ್ಕಾರೀ ಪ್ರೈಮರಿ ಸ್ಕೂಲಿನಲ್ಲಿ ಓದುತ್ತಿದ್ದಾನೆ. ‘ಟೀಚರ್‌ಗೆ ಹೇಳ್ತೀನಿ ನೋಡೂ‘ ಅಂದ್ರೆ ಸಾಕು ಎಲ್ಲ ಹಟ ಬಿಟ್ಟು ಗಪ್ಪಾಗಿಬಿಡುತ್ತಾನೆ. ತುಕ್ಕೋಜೀಯ ವ್ಯಾಪಾರದಲ್ಲಿ ಕೂಡಾ ಯಾವ ಯಡವಟ್ಟೂ ಇಲ್ಲೀವರೆಗೆ ಸಂಭವಿಸಿಲ್ಲ. ಗುರುಗಳ್ಳಿಯ ಗ್ರಹಚಾರಗಳ ನಡುವೆ, ಸಂಸಾರ ತಾಪತ್ರಯಗಳ ನಡುವೆ ಹೊಲಿಗೆ ಕಲೆ ತನ್ನ ಕೈಬಿಟ್ಟಿತೇನೋ ಎಂದು ಹೆದರಿದ್ದ.

More

Previous Older Entries

%d bloggers like this: