ಚಿತ್ರಗಳು:ಕಾವ್ಯ ಶ್ರೀ
ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ನಡೆದ ಮೊದಲನೆಯ ಮಹಿಳಾ ರಂಗ ಸಮಾವೇಶದ ಒಂದು ನೋಟ…
ಇನ್ನಷ್ಟು ಫೋಟೋಗಳು :ಸೈಡ್ ವಿಂಗ್
21 ನವೆಂ 2010 1 ಟಿಪ್ಪಣಿ
ಚಿತ್ರಗಳು:ಕಾವ್ಯ ಶ್ರೀ
ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ನಡೆದ ಮೊದಲನೆಯ ಮಹಿಳಾ ರಂಗ ಸಮಾವೇಶದ ಒಂದು ನೋಟ…
ಇನ್ನಷ್ಟು ಫೋಟೋಗಳು :ಸೈಡ್ ವಿಂಗ್
21 ನವೆಂ 2010 1 ಟಿಪ್ಪಣಿ
in 1
-ಸೂರಿ
ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 3
(ಪೂರ್ಣ ಓದಿಗೆ ಯು ಆರ್ ಅನಂತಮೂರ್ತಿಯವರ ಕಥೆ: ’ಸಂಯೋಗ’) ದಾವಣಗೆರೆಗೆ ತಹಸೀಲ್ದಾರರಾಗಿ ನಾಲ್ಕು ವರ್ಷಗಳ ಹಿಂದೆ ಬಂದ ವೆಂಕಟಕೃಷ್ಣರಾವ್ ತುಂಬಾ ಬದಲಾಗಿದ್ದಾರಂತೆ, ಹಾಗಂತ ಅವರನ್ನು ಮೊದಲಿನಿಂದಲೂ ಬಲ್ಲವರು ಹೇಳುತ್ತಾರೆ. ಅವರು ಎಷ್ಟೇ ಬದಲಾಗಲಿ ಅವರು ತಲೆಗೆ ಹಚ್ಚುವ ಕ್ಯಾಂಥಡ್ರಿನ್ ಎಣ್ಣೆ, ಮುಖಕ್ಕೆ ಹಚ್ಚುವ ಆಫ್ಗಾನ್ ಸ್ನೋ, ಮತ್ತು ಸದಾ ತೊಡುವ ಗರಿಗರಿ ಬಟ್ಟೆ ಮಾತ್ರ ಬದಲಾಗಿಲ್ಲ.
ಬದಲಾಗಿರೋದು ಏನೂ ಅಂದರೆ, ಮೊದಲು ಮುಖದ ಮೇಲೆ ಸದಾ ಅಂಟಿಸಿಕೊಂಡೇ ಇರುತ್ತಿದ್ದ ಒಂದು ಸಾದಾ ನಗು ಈಗಿಲ್ಲ. ಮುಖದ ಮೇಲೆ ಶಿಲ್ಪಿಯೊಬ್ಬ ಉಳಿಯಲ್ಲಿ ಕೆತ್ತಿದಂತೆ ನೇರವಾದ, ಬಿಗಿದ ಗೆರೆಗಳು. (ತರಹೇವಾರಿ ತಹಸೀಲ್ದಾರರನ್ನು ಇಲ್ಲೀವರೆಗೆ ಕಂಡಿರುವ ಆಫೀಸಿನ ಸಿಬ್ಬಂದಿಗೆ ಮಾತ್ರ ಈ ಬಿಗಿದ, ನಿರ್ಭಾವುಕತೆಯನ್ನೇ ಸ್ಧಾಯೀ ಭಾವವನ್ನಾಗಿರಿಸಿಕೊಂಡ ಮುಖ ಯಾವ ಅಚ್ಚರಿಯನ್ನೂ ತಂದಿಲ್ಲ. ಈ ಹಿಂದಿನ ತಹಸೀಲ್ದಾರರೊಬ್ಬರು ತಾವು ಬರುವ ಸಮಯಕ್ಕೆ ಸರಿಯಾಗಿ ಆಫೀಸಿನ ಸಿಬ್ಬಂದಿಯೆಲ್ಲಾ ಗೇಟಿನ ಎರಡೂ ಬದಿಗಳಲ್ಲಿ ಎರಡು ಸಾಲು ಮಾಡಿ ನಿಂತಿರಬೇಕು, ತಾವು ಆ ಸಾಲಿನ ನಡುವೆ ಬರತಕ್ಕವರು ಎಂದು ಫರ್ಮಾನು ಹೊರಡಿಸಿದ್ದರು.
ಇನ್ನೊಬರು ಛಾರ್ಜ್ ಕೈಗೆತ್ತಿಕೊಂಡ ಕೂಡಲೇ ಆಫೀಸಿನ ಬಲ ಗೋಡೆಯನ್ನು ಒಡೆದು ಅದಕ್ಕೊಂದು ಬಾಗಿಲು ಹಾಕಿಸಿ ಆಚೆ ಎಂಟಡಿ-ಆರಡಿ ಒಂದು ಚೇಂಬರ್ (ಜಾಗ ಸಿಕ್ಕಿದ್ದೇ ಅಷ್ಟು) ಕಟ್ಟಿಸಿ, ಅಲ್ಲಿ ಸಾರ್ವಜನಿಕರಿಗೆ ದರ್ಶನ ಭಾಗ್ಯವನ್ನು ಕರುಣಿಸಿ ಅವರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದರು. ಆ ಪ್ರೈವೇಟ್ ಚೇಂಬರ್ ಇನ್ನೂ ಇದೆ.
ಆದರೀಗ ಅದು ತಹಸೀಲ್ದಾರರ ಪ್ರೈವೇಟ್ ಚೇಂಬರ್ ಆಗಿದೆ. ವೆಂಕಟಕೃಷ್ಣರಾಯರ ಮಧ್ಯಾಹ್ನದ ಭೋಜನ, ನಂತರದ ಒಂದರ್ಧ ತಾಸಿನ ಶಯನ ಎರಡೂ ಅಲ್ಲೇ. ಯಾರಾದರೂ ತೀರಾ ಆಪ್ತರು ಬಂದರೆ ಅವರೊಂದಿಗಿನ ಭೇಟಿ ಕೂಡಾ ಅಲ್ಲೇ. ಮಾತು ಎಲ್ಲಿಗೋ ಹೋಯಿತು. ಮತ್ತೆ ವೆಂಕಟಕೃಷ್ಣರಾಯರ ವಿಷಯಕ್ಕೆ ಬರುತ್ತೇನೆ.) ಗೆಳೆಯರೊಂದಿಗೋ, ಮನೆಮಂದಿಯ ಜೊತೆಗೋ ಕುಶಲೋಪರಿಯಲ್ಲಿ ಮುಳುಗಿರುವಾಗ ನಳನಳಿಸುವ ಮುಖಸಮೀಪದಲ್ಲೆಲ್ಲಾದರೂ ಸಿಬ್ಬಂದಿಯ ವಾಸನೆ ಸಿಕ್ಕಿದೊಡನೇ ಅಡ್ಡ ಮಲಗಿದ ಳಕಾರಕ್ಕೆ ತಿರುಗಿಬಿಡುತ್ತದೆ.
21 ನವೆಂ 2010 ನಿಮ್ಮ ಟಿಪ್ಪಣಿ ಬರೆಯಿರಿ
in ಜಯಶ್ರೀ ಕಾಲಂ
ಡಿಸ್ಕವರಿ ಚಾನೆಲ್ ನಲ್ಲಿ ಮ್ಯಾನ್ vs ವೈಲ್ಡ್ ಅನ್ನುವ ಕಾರ್ಯಕ್ರಮ ಪ್ರಸಾರ ಆಗುತ್ತದೆ.ಕಾಡಿನಲ್ಲೇ ಹುಟ್ಟಿ ಬೆಳೆದವರಿಗಿಂತ ನಾಗರೀಕ ಪ್ರಪಂಚದ ಭಾಗವಾದರೂ ಯಾವ ರೀತಿ ಅಂತಹ ವಾತಾವರಣಕ್ಕೆ ಹೊಂದಿ ಕೊಳ್ಳಬಹುದು, ಅಲ್ಲಿನ ಬದುಕು ಹೇಗಿರುತ್ತದೆ ಎನ್ನುವ ಪ್ರಯೋಗ.
ಅದನ್ನು ಒಂದೆರಡು ವರ್ಷಗಳಿಂದ ವೀಕ್ಷಿಸ್ತಾ ಇರ್ತೀನಿ ಆಗಾಗ ! ಕಾರ್ಯಕ್ರಮದಲ್ಲಿ ಕಾಡಿನೊಳಗೆ ಓಡಾಡುವ ಒಬ್ಬ ನಾಗರೀಕ ಇದ್ದಾನೆ. ಈತನು ಓಡಾಡುತ್ತ ವೀಕ್ಷಕರಿಗೆ ಅಲ್ಲಿನ ಪರಿಸರಾ ವಿವರಣೆ ಕೊಡ್ತಾನೆ.ಆತನನ್ನು ಕಂಡಾಗ ಇವ ಮನುಷ್ಯನಮತ್ತೇನಾದರೂ ???!!!. ಆದ್ರೆ ಆ ಕಾರ್ಯಕ್ರಮ ವೀಕ್ಷಿಸಿದರೆ ಬೇಸರ ಅನ್ನಿಸಲ್ಲ. ಕಣಿವೆಗೆ ಇಳೀತಾನೆ, ನೀರಿಗೆ ಧುಮಕುತ್ತಾನೆ, ಈಜುತ್ತಾ,ನೀರಿನ ಅಡಿಯಲ್ಲಿ ಸೇರಿಕೊಂಡ ಪ್ರಾಣಿಯನ್ನು ಎಳೆದು ಕತ್ತರಿಸಿ ಬಿಸಿ ಮಾಡಿ ತಿನ್ನುತ್ತಾ ಎಂಜಾಯ್ ಮಾಡ್ತಾನೆ.
ಪೂರ್ಣ ಓದಿಗೆ : ಮೀಡಿಯಾ ಮೈಂಡ್
ಇತ್ತೀಚಿನ ಟಿಪ್ಪಣಿಗಳು