ಸಂಧ್ಯಾ ಹುನಗುಂಟಿಕರ್‌ಗೆ ‘ನಲ್ನುಡಿ’ ಪ್ರಶಸ್ತಿ

‘ನಲ್ನುಡಿ ಕಥಾಸ್ಪರ್ಧೆ- ೨೦೧೦
ಸಂಧ್ಯಾ ಹುನಗುಂಟಿಕರ್‌ಗೆ ಪ್ರಥಮ ಸ್ಥಾನ
ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿ ‘ಕರವೇ ನಲ್ನುಡಿ ಮಾಸಪತ್ರಿಕೆ ಕನ್ನಡ ರಾಜ್ಯೋತ್ಸವ ನಿಮಿತ್ತ ಏರ್ಪಡಿಸಿದ್ದ ‘ನಲ್ನುಡಿ ಕಥಾಸ್ಪರ್ಧೆ-೨೦೧೦ರಲ್ಲಿ ಸಂಧ್ಯಾ ಹುನಗುಂಟಿಕರ್ ಅವರ ‘ಹಾರಲಾರದ ನೊಣ ಕಥೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅಬ್ಬಾಸ್ ಮೇಲಿನಮನೆಯವರ ‘ಗಾಂಧಿ ಕಾಲನಿಯೂ ಮಂಜನೆಂಬ ಸ್ಲಂ ಬಾಲನೂ ಕಥೆ ದ್ವಿತೀಯ ಸ್ಥಾನವನ್ನೂ, ಶಂಕರ್ ರಾವ್ ಉಭಾಳೆಯವರ ‘ನಂಜಾದ ನಾಯಿ ಹಾಲು ಕಥೆ ತೃತೀಯ ಸ್ಥಾನವನ್ನು ಪಡೆದುಕೊಂಡಿವೆ.
ಸ್ಪರ್ಧೆಯಲ್ಲಿ ಪಾಲ್ಗೊಂಡ ಒಂದು ಸಾವಿರಕ್ಕೂ ಹೆಚ್ಚು ಕಥೆಗಳ ಪೈಕಿ ಹನ್ನೊಂದನ್ನು ಮೆಚ್ಚುಗೆ ಪಡೆದ ಕಥೆಗಳನ್ನಾಗಿ ಆರಿಸಲಾಗಿದೆ. ಡಾ.ಸೋಮಣ್ಣ ಹೊಂಗಳ್ಳಿಯವರ ‘ಫಕೀರಯ್ಯನೆಂಬ ಬುಂಡೇಬೆಸ್ತನೂ ನಕ್ಷತ್ರಾಕಾರದ ಚಿಪ್ಪಿನ ಆಮೆಯು, ಮಂಜುನಾಥ ಲತಾ ಅವರ ‘ಮೂಳೆ ಮಾಂಸ, ಡಾ. ಆನಂದ್ ಋಗ್ವೇದಿಯವರ ‘ಹೊತ್ತು ಮುಳುಗಿಸಿದ ಹೊತ್ತು, ಭವ್ಯ ಎಚ್.ಸಿ. ಅವರ ‘ಮಲ್ಲಿಗೆ, ವೈ.ಮಂಜುಳಾ (ಮಂಜುಳಾ ಮಾಧವ್) ಅವರ ಮಮತೆಯ ಒಡಲು, ಬೇಲೂರು ರಾಮಮೂರ್ತಿಯವರ ಕಸದಿಂದ ರಸ, ಹಣಮಂತ ಹಾಲಿಗೆರಿಯವರ ‘ಕತ್ತಲೊಳಗಡೆಯ ಮಿಣುಕು, ಮಹಾಬಲ ಸೀತಾಳಭಾವಿಯವರ ‘ಸ್ವಾಮಿಗಳು ಮಠದಲ್ಲಿಲ್ಲ, ಬಿ.ಟಿ.ರುಹುಲ್ಲಾ ಸಾಹೇಬರ ‘ಕಮರಿದ ಬದುಕು, ಕಲ್ಲೇಶ್ ಕುಂಬಾರ್‌ರವರ ‘ಅರಿವಿನ ಕೇಡು ಹಾಗು ವಿಶ್ವನಾಥ ಪಾಟೀಲ ಗೋನಾಳರವರ ‘ಅವರೆಲ್ಲ ಬಂದ ಮೇಲೆ ಕಥೆಗಳು ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಗಳಾಗಿವೆ.
ಪ್ರಥಮ ಬಹುಮಾನ ರೂ. ೨೫,೦೦೦, ದ್ವಿತೀಯ ಬಹುಮಾನ ರೂ. ೧೫,೦೦೦, ತೃತೀಯ ಬಹುಮಾನ ೧೦,೦೦೦ವಾಗಿರುತ್ತದೆ. ‘ಕರವೇ ನಲ್ನುಡಿ ಪತ್ರಿಕೆ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದಲ್ಲದೆ, ಎಲ್ಲ ಮೆಚ್ಚುಗೆ ಪಡೆದ ಕಥೆಗಾರರನ್ನು ಸನ್ಮಾನಿಸಲಾಗುವುದು.
ಹೆಸರಾಂತ ವಿಮರ್ಶಕ, ನಾಟಕಕಾರ ಡಾ.ರಾಜಪ್ಪ ದಳವಾಯಿ ಹಾಗು ಡಾ.ರವಿಕುಮಾರ್ ನೀಹ, ಎಲ್.ಎಂ.ಪ್ರದೀಪ್ ತೀರ್ಪುಗಾರರಾಗಿದ್ದರು. ಬಹುಮಾನಿತ ಕಥೆಗಳು ‘ಕರವೇ ನಲ್ನುಡಿ ವಿಶೇಷಾಂಕದಲ್ಲಿ ಪ್ರಕಟಗೊಂಡಿದ್ದು, ಮೆಚ್ಚುಗೆ ಪಡೆದ ಕಥೆಗಳು ‘ನಲ್ನುಡಿ ಮಾಸಿಕದಲ್ಲಿ ಪ್ರತಿ ತಿಂಗಳಿಗೊಂದರಂತೆ ಪ್ರಕಟಗೊಳ್ಳಲಿವೆ.

‘ಹಂಗಾಮ’ ಕಾರ್ನರ್ ನಲ್ಲಿ ಭೂಪ ಕೇಳೆಂದ…

ಹಳೇ ಮಂಚದ  ಕಥೆಯು

-ವೆಂಕಟ್ರಮಣ ಗೌಡ

ಅವಳದೇ ಕನ್ನಡಿ, ಅವಳದೇ ಮಂಚದ ಒಂದು ಪ್ರತ್ಯೇಕ ಪ್ರಪಂಚದಂತೆ  ಆ ಅಷ್ಟು ದೊಡ್ಡ ಮನೆಯಲ್ಲಿ  ಅವಳ ಕೋಣೆ. ಊರಿನ ಎಲ್ಲಾ ಹುಡುಗಿಯರಿಂದ ಗೌಡನ ಮಗಳು ಬೇರೆ ಯೆಂಬಂತೆ ಮಾಡಿರುವಲ್ಲಿ ಇತರ ಹಲವಾರು ಸಂಗತಿಗಳೊಂದಿಗೆ ಕೋಣೆಯ ಪಾಲೂ ಬಹಳವೇ ಇದೆ.

ತನ್ನ ಓರಗೆಯ ಎಲ್ಲಾ ಹುಡುಗಿಯರನ್ನು ಜಲಕಾಕ್ಷಿ ಆ ಕೋಣೆಯೋಳಗೆ  ಸೇರಿಸುತ್ತಾಳಾದರೂ, ಅವರಾರೂ ಗೆಳತಿಯ ಸಲಿಗೆಯನ್ನು  ದುಂದು ಮಾಡುವುದಿಲ್ಲ  ಹೀಗಾಗೇ ಅವರೆಲ್ಲರ ಕಣ್ಣಲ್ಲಿ ಜಲಜಾಕ್ಷಿ  ದೊಡ್ಡವಳೇ  ಆಗಿ ಅವಳ ಆ ಕೋಣೆ  ಬೆಚ್ಚಗಿನ  ಸ್ವಪ್ನಕ್ಕೆ ಆವರನ್ನಿಳಿಸುವಂತದ್ದಾಗಿ ಗಾಢವಾಗಿರುವುದು.


ಆ ಕೋಣೆ ಎಂದ ತಕ್ಷಣ ಆದು ಒಂದು ಕೋಣೆಯಲ್ಲ  ಬಾಗಿಲು ತೆರೆ ದರೆ ಒಂದು ಇನ್ನೊಂದು ಮತ್ತೊಂದು ಎಂದು ಮೂರು  ಕೋಣೆಗಳುಳ್ಳದ್ದಾಗಿ ಪ್ರತ್ಯೇಕ ಮನೆಯೇ ಎಂಬಂತಿರುವ ಅದನ್ನು ಕೋಣೆಯೆಂದೇ ಕರೆದುಕೊಂಡು ಬರಲಾಗಿದೆ . ಅದು ಜಲಜಾಕ್ಷಿಗಾಗಿ  ಇರುವಂತದ್ದು ಎಂಬುದನ್ನು ಸೂಚಿಸಲಿಕ್ಕಾಗಿಯೇ ಅವಳ ಕೋಣೆ  ಎಂದು ಎಂತದೋ  ಒಂದು  ಬಗೆಯ ಗೌರವ  ಭಾವವನ್ನು ವಿನೀತ ಭಾವವನ್ನು  ತೋರುವುದು  ಗೌಡನ ಮನೆಯೊಳಗೇ  ನಡೆದು ಬಂದಿದೆ.
ಅವಳದೆಂಬುವ ಆ ಕೋಣೆಯ ಮುಂಬಾಗಿಲು ತೆರದು  ಒಳಗೆ ಹೋದರೆ ನೇರ ಮುಖಕ್ಕೆ ಮುಖ ಕೊಟ್ಟು ಕರೆಯುವುದೇ ಅಷ್ಟೆತ್ತರದ ಕನ್ನಡಿ. ಈಗಷ್ಟೇ ಅರಲಿದ್ದೆಮ್ಬಂತ   ಭಾಸದಲ್ಲಿ ಒಂದು ಕ್ಷಣ ಆದ್ದಿ ತೆಗೆಯುವಂತಹ  ಜೀವಂತ ಹೂ ಚಿತ್ರಗಳನ್ನು ಬಿಡಿಸಿರುವ ಮರದ ಚೌಕಟ್ಟು ಆ ಕನ್ನಡಿಗೆ.

ಇನ್ನಷ್ಟು

‘Chigire Varsham 2010’…

ಮೈಸೂರಿನ ಜಗನ್ ಮೋಹನ ಅರಮನೆಯಲ್ಲಿ ಅಕ್ಟೋಬರ್ ೩೦ ರಂದು ನಡೆದ ‘ಚೆಗಿರೆ  ವರ್ಷಂ’ ಕಾರ್ಯಕ್ರಮದ ಒಂದು ನೋಟ…

ಮತ್ತಷ್ಟು ಫೋಟೋಗಳು : ಸೈಡ್ ವಿಂಗ್

Obama to celebrate Diwali with Mumbai kids!

-ಸತೀಶ್ ಆಚಾರ್ಯ

‘ಮೇಷ್ಟ್ರಿರೋದು’…

-ನೀಲಿ ಗ್ಯಾನ

ಹೂವ ತುಂಬಿದ ಗಮಲು
ಕಾಣುವುದಿಲ್ಲವಲ್ಲಾ
ಎಂದವನ ಕಣ್ಣುಗಳನ್ನೆವೆಯಿಕ್ಕದೆ
ನೋಡಿ
‘ಪಾಪರೀ ಇವನಿಗೆ ಕಣ್ಣೇ ಇಲ್ಲ’
ಎಂದನುಕಂಪಿಸುವ;
ಮೂರ್ತಾನುಮೂರ್ತಗಳನ್ನು
ನಿಪ್ಪೊಳರಡಿ
ಅಲ್ಲಮನುಸುರಿಂದ ಉರುಬಿ
ಸುಡುಕೆಂಡದ ಬೆರಗು
ಕಣ್ಬೆಳಕು

ಆಕರಗಳನು ಈಡಾಡಿ
ನಿರಾಕಾರದಿ ಸಂಕರ
ಸಂಬಂಧಗಳ ಕಳಚಿ
ಸಂಬಂಜದೊಳಗುಳಿದ

ಇನ್ನಷ್ಟು

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…

ಮೊನ್ನೆ ‘ಎಚ್ ಎಸ್ ವಿ ಅನಾತ್ಮ ಕಥನ’ ಬಿಡುಗಡೆ ಸಮಾರಂಭದಲ್ಲಿ ಮಾತನಾಡಬೇಕಾಗಿ ಬಂತು. ಎಚ್ ಎಸ್ ವೆಂಕಟೇಶ ಮೂರ್ತಿಯವರು ನನಗೇನು? ಎನ್ನುವ ಪ್ರಶ್ನೆಯೇ ನನ್ನ ಮುಂದಿರಲಿಲ್ಲ. ಏಕೆಂದರೆ ಎಚ್ ಎಸ್ ವಿ ಯನ್ನು ಓದುವುದು ಎಂದರೆ ಅದು ನನ್ನ ಯೌವ್ವನಕ್ಕೆ ಮರು ಭೇಟಿ ನೀಡಿದಂತೆ. ಎಚ್ ಎಸ್ ವಿ ರೂಪಿಸಿದ ಕಥೆ, ಕವಿತೆ, ಕಾದಂಬರಿಯನ್ನು ಹೀರಿಕೊಂಡೇ ನನ್ನ ಯೌವ್ವನ ಅರಳಿದ್ದು. ಹಾಗಾಗಿ ಎಚ್ ಎಸ್ ವಿ ಎಂದರೆ ನನ್ನ ಯೌವ್ವನ.

ಹಾಗೆ ಮಾತಾಡುತ್ತಿರುವಾಗಲೇ ನನಗೆ ಥಟ್ಟನೆ ಹೊಳೆದದ್ದು ‘ಔಟ್ ಲುಕ್’. ಈಗ 15 ವರ್ಷದ ಸಂಭ್ರಮದಲ್ಲಿರುವ, ದೇಶದ ಇಂಗ್ಲಿಷ್ ಮ್ಯಾಗಜಿನ್ ಜರ್ನಲಿಸಂಗೆ ಹೊಸ ಆಯಾಮ ಕೊಟ್ಟ, ಇಂಗ್ಲಿಷ್ ಮ್ಯಾಗಜಿನ್ ನ ವ್ಯಾಕರಣವನ್ನು ಮುರಿದು ಕಟ್ಟಿದ ‘ಔಟ್ ಲುಕ್’. ಔಟ್ ಲುಕ್ ನ ಅಸೋಸಿಯೇಟ್ ಎಡಿಟರ್, ಗೆಳೆಯ ಸುಗತ ಶ್ರೀನಿವಾಸರಾಜು ಬೆಂಗಳೂರಿನಲ್ಲಿ ಔಟ್ ಲುಕ್  ಹಮ್ಮಿಕೊಂಡಿದ್ದ ಸಂವಾದಕ್ಕೆ ಆಹ್ವಾನ ಕಳಿಸಿದಾಗ ನಾನು ನನ್ನ ಬೆರಳುಗಳನ್ನು ಎಣಿಸುತ್ತಾ ಹೋದೆ. ಹೇಗೆ ಒಂದು ಯೌವ್ವನ ನಮ್ಮಿಂದ ಗೊತ್ತಿಲ್ಲದೆ ಸರಿದುಹೋಗುತ್ತಿರುತ್ತದೆಯೋ ಹಾಗೆ ನಮಗೆ ಗೊತ್ತಿಲ್ಲದೇ ಔಟ್ ಲುಕ್ ಗೆ 15 ವರ್ಷ ಆಗಿಹೋಗಿತ್ತು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಏಷ್ಯನ್ ಚಿತ್ರೋತ್ಸವದಲ್ಲಿ ‘ ಕನಸೆಂಬೋ ಕುದುರೆಯನೇರಿ ‘…

ಈ ಬಾರಿಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಕನ್ನಡ ಚಿತ್ರ  ಕನಸೆಂಬೋ ಕುದುರೆಯನೇರಿ ರೋಂನಲ್ಲಿ ನಡೆಯಲಿರುವ ಏಷ್ಯನ್ ಚಿತ್ರೋತ್ಸವದಲ್ಲಿ ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಗಿದೆ. ಇಲ್ಲಿಯ ತನಕ ಯಾವುದೇ ಕನ್ನಡ ಚಿತ್ರವೂ ಈ ಸ್ಪರ್ಧೆಗೆ ಆಯ್ಕೆ ಯಾಗಿರಲಿಲ್ಲ. ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಯಾಗುವುದೇ ಹೆಮ್ಮೆಯ ಸಂಗತಿ, ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಗುವುದಂತೂ  ಮತ್ತೂ ದೊಡ್ಡ ಸಾಧನೆ. ಕನಸೆಂಬೋ ಕುದುರೆಯನೇರಿ ಈ ಎರೆಡೂ ಸಾಧನೆಗಳನ್ನು ಮಾಡಿದೆ.

ಸಂಪೂರ್ಣ ಮಾಹಿತಿಗೆ : ಮ್ಯಾಜಿಕ್ ಕಾರ್ಪೆಟ್

‘ಮೇಯ’ ಹೊರಟಿರುವವರಿಗೆ ಉಪ’ಮಾನ’ವೆಲ್ಲಿ..?

-ಸೂತ್ರಧಾರ ರಾಮಯ್ಯ

ರಾಜ್ಯದ ರಾಜಕಾರಣದ ಶೋಭೆ (show bay) ಒಂದೊಂದು ದಿನ ಒಂದೊಂದು ಮಜ-ಲನ್ನು ತೆರೆಯುತ್ತಿದ್ದು,”ಮಾರ್ ಮಾರ್” ಅಂತ ಶಿವಕು ಮಾರ್, ಕು ಮಾರ್ ಸ್ವಾಮಿ;” ರಪ್ಪಾ ರಪ್ಪಾ” ಅಂತ  ಯಡ್ಯೂ ರಪ್ಪಾ ಈಶ್ವ ರಪ್ಪಾ ಒಬ್ಬರ ಮೇಲೊಬ್ಬರು  ಬಿಲ್ವಿದ್ಯೆಯನ್ನು ಪ್ರಯೋಗಿಸುತ್ತಾ, ಕ್ಷೋಭಾರಂಜನೆಯನ್ನು ಜನಕ್ಕೆ ನೀಡುತ್ತಿರುವುದರ ಹಿನ್ನೆಲೆಗೆ ಒಂದು ಮಾತು:

ಪ್ರಾರಂಭಕ್ಕೆ ಪಂಚಾಯಿತಿಯಿಂದ ಪಾರ್ಲಿಮೆಂಟ್ ಚುನಾವಣೆಯವರೆಗೆ, ಸರ್ವ ರೀತಿಯಲ್ಲೂ ಕ್ಯಾನಡಿಡ್, ಅರ್ಥಾತ್ ನೇರ, ಸರಳ, ನಿಷ್ಕಪಟ ವ್ಯಕ್ತಿಗಳೇ
ಕ್ಯಾನ್ಡಿ ಡೆಟ್ (ಪಾಪ ಸಾಲಸೋಲ ಮಾಡಿಕೊಂಡು) ಆಗಿರ್ತಿದ್ರು. ಆಗ ಅಕ್ಷರಶಃ ನಡೆಯುತ್ತಿತ್ತು ಮತದಾನ. ಮತದಾರರಿಗೆ ಬೆಲೆ ಕೊಡುತ್ತಿದ್ದ ತ್ಯಾಗ ಬುದ್ಧಿಯ ‘ಪ್ರತಿನಿಧಿಗಳ’ ಯುಗ ಸರಿದು, ಜನ + ಕಿಂಚಿತ್ ಧನ ಅನ್ನುವ ಕಾಲ ಬಂತು.ನಂತರ ಬಂದುದೇ ; ಜನ or ಧನವನ್ನು ರೆಡಿಯಾಗಿ ಇಟ್ಟುಕೊಂಡವರ sum ಭವಾಮಿ ಯುಗ. ಇದೀಗ ಜಸ್ಟ್ ‘ಮತ’ಗಳಿಗೆ ‘ಬೆಲೆ’ ಕಟ್ಟುವ  ಮತ-ಧನ. ಮುಂದುವರೆದು ಪ್ರತಿ’ನಿಧಿ’ ಗಳಿಗೇ” ‘ಲಾಸ್ಟ್ ರೆಸಾರ್ಟ್’ನ ಬಿಲ್ ಎಷ್ಟು;ನಿನ್ನ ಬೆಲೆಯೆಷ್ಟು?” ಎಂದು ಕೇಳುವ ‘ ಅರ್ಥ’ವನ್ನು’ಸಿದ್ಧ’
ವಾಗಿ ಇಟ್ಟುಕೊಂಡವರ ಬಿಲ್ ವಿದ್ಯಾ ಪ್ರಯೋಗಗಳ ಯುಗ. ಚುನಾವಣಾ ಸಮಯದ ಬಡವರ ಹಿತ ಚಿಂತನೆಯ ಮ್ಯಾನಿಫೆಸ್ಟೋ ಎಲ್ಲಿ? ಪ್ರಸ್ತುತ ಉಳ್ಳವರ ವಿಭವದ ಮ್ಯಾನಿಫೆಸ್ಟೇಶನ್ ಎಲ್ಲಿ ? ಯಾರು ಇದಕ್ಕೆಲ್ಲಾ  ಆನ್ಸ-ರೆಬೆಲ್ ಅಂತಾ ಕೇಳುವಂತ ಪರಿಸ್ ತಿಥಿ ಪ್ರಜಾಪ್ರಭುತ್ವಕ್ಕೆ!

ಎಂಡ್ ಗುಟುಕು: ಸಾಮ, ದಾನ, ಬೇಧ ಎಲ್ಲಾ ಫೇಲ್ ಆದ ಮೇಲೆ ‘ದಂಡ’ ಅನ್ನೋದಿದೆಯಲ್ಲಾ ,ಅದು ಫೆನ್ ಟ್ಯಾ-ಸ್ಟಿಕ್!