ಸೂರಿ -1: ಈಗ ಪಾತ್ರ ಪರಿಚಯ..

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 1

ಪಾತ್ರಗಳು.
(ಈ ಕಥೆಯಲ್ಲಿನ ಪಾತ್ರಗಳು ಬೇರಾವುದೋ ಕಥೆಗಳಿಂದ ನಡೆದು ಈ ಕಥೆಯ ಕಾಲಕ್ಕೆ ಪ್ರವೇಶ ಪಡೆದುಕೊಂಡಂಥವು. ಈ ಕಥೆಯ ಪ್ರದೇಶದ ಹೊಸ ಬದುಕಿಗೆ ವಲಸೆ ಬಂದಂಥವು. ಹಾಗಾಗಿ ಅವುಗಳ ಹೊಸ ಕಾಲ-ಪ್ರದೇಶಮಾನದಲ್ಲಿ ಅವುಗಳ ಪರಿಚಯ ಮಾಡಿಕೊಡುವುದು ನನ್ನ ಕರ್ತವ್ಯ.)

ಪಾತ್ರ ಒಂದು. ಹಳೇಬೀಡು ಸುಂದರರಾಯರು.

ಕೇವಲ ಹತ್ತು ಅಡಿ ದೂರದಿಂದ ನೋಡಿದರೆ ಸಾಧಾರಣ ಕಣ್ಣಿಗೆ ಬೀಳಲಾರದಂಥ ವ್ಯಕ್ತಿತ್ವ. ಹಾಗಂತ ಹೇಳಿ ಅದೇನು ರಾಕ್ಷಸನೋ, ದೇವತೆಯೋ, ಮಾಂತ್ರಿಕನೋ ಅಲ್ಲ. ಸುತ್ತಲಿನ ಒಂದೈದಾರು ಜನರ ನಡುವೆಯೋ, ಒರಗಿ ಕೂತ ಗೋಡೆಯಲ್ಲೋ, ಮಲಗಿರುವ ಹಾಸಿಗೆ ಮಡಿಕೆಗಳಲ್ಲೋ, ಕೂತ ಕುರ್ಚಿಯಲ್ಲೋ, ಉಟ್ಟ ಬಟ್ಟೆಯಲ್ಲೋ ಸುಲಭವಾಗಿ ಕರಗಿ ಹೋಗಬಹುದಾದ ವ್ಯಕ್ತಿತ್ವ ಅಷ್ಟೆ. ಸುಮಾರು ಐದು ಅಡಿಯ ಕಾಷ್ಠ. ಅದಕ್ಕೊಂದು ಮಾಸಲಾದ ಬಿಳಿ ಬಣ್ಣದ ಒಂದು ಪ್ಯಾಂಟು, ಮೇಲೆ ಅಂತಹುದೇ ಒಂದು ಬುಶ್ಶರ್ಟು.

ಸ್ವಲ್ಪ ಕಪ್ಪಿನ ಕಡೆ ಜಾರಿದ ಊದಾ ಮೈ ಬಣ್ಣ. ಜುಟ್ಟು ತೆಗೆದ ತೆಂಗಿನಕಾಯಿಯಂತಹ ಪುಟ್ಟ ಮುಖದ ಮೇಲೆ ಕಪ್ಪುಹಲಗೆಯ ಮೇಲೆ ಸೀಮೇಸುಣ್ಣದಿಂದ ಬರೆದು ಅರೆಬರೆ ಒರೆಸಿದಂತೆ ತೆಳುವಾಗಿ ಹರಡಿಕೊಂಡ ಒಂದೊಬ್ಬೆ ಪೌಡರ್ರು. ಆ ಮುಖಕ್ಕೆ ಸ್ವಲ್ಪ ಅತಿಯಾಯಿತೇನೋ ಅನ್ನುವಂತಹ ಮೂಗು. ಎಂಟಾಣೆ ಗಾತ್ರದ ಹೊಳ್ಳೆಗಳಿಂದ ಹೊರ ಚಾಚಿಕೊಂಡು, ಹಳೇಬೀಡು ಸುಂದರರಾಯರ ಉಚ್ಛ್ವಾಶಕ್ಕೆ ಒಳ ನುಗ್ಗಲೂ, ನಿಶ್ವಾಸಕ್ಕೆ ಮೂಗಿನ ಹೊರಗೇ ಸಳಸಳ ಹೊಯ್ದಾಡುವ ಒಂದೈದಾರು ಕೂದಲುಗಳು.

(ತೀರಾ ಗಂಭೀರವಾದ ಸನ್ನಿವೇಷಗಳಲ್ಲಿ ಹಳೇಬೀಡು ಸುಂದರರಾಯರು ಘಠ್ಠಿಯಾಗಿ ಉಸಿರೆಳೆದುಕೊಂಡಾಗ ಅಕ್ಕಪಕ್ಕದ ಜನ ಉಸಿರಾಡಲೂ ಗಾಳಿ ಸಿಗದೆ ಒದ್ದಾಡಿದ್ದೂ ಇದೆಯಂತೆ.) ಕಾಲಿಗೆ ಅಟ್ಟೆ ಸವೆಯುತ್ತಿರುವ ಟೈರಿನ ಚಪ್ಪಲಿ. ಸುಂದರರಾಯರು ಹಂಗೂ ಹಿಂಗೂ ಎಲ್ಲೆಲ್ಬಿ ಮುಗಿಸಿದ್ದೇ ಅವರ

ತಂದೆ ಹಳೇಬೀಡು ರಾಮಕೃಷ್ಣರಾಯರು (ಗಾಂಧೀ ಸರ್ಕಲ್ಲಿನಲ್ಲಿನ ಮೋತಿ ಟಾಕೀಸಿನ ಪಕ್ಕದ ಮೋತಿ ರೆಸ್ಟೋರೆಂಟಿಗೆ ಅಂಟಿಕೊಂಡಂತೆ ಇವರದು ಒಂದು ಪುಟ್ಟ ಬೀಡಿ ಅಂಗಡಿಯಿದೆ) ತಮ್ಮ ಮಗನಿಗೊಂದು ಹೆಣ್ಣು ತರಬೇಕೆಂದು ಈ ತುದಿಯ ಬಳ್ಳಾರಿ, ಹೊಸಪೇಟೆಯಿಂದ ಆ ತುದಿಯ ಶೇಡಬಾಳ, ಸಾಂಗ್ಲಿಯತನಕ ಹರಡಿದ್ದ ತಮ್ಮ ಸಮಾಜದ ಮನೆಗಳಿಗೆ ಎಡತಾಕಿದರು.

ಸಾಲುಗಟ್ಟಲೆ ಹೆಣ್ಣುಗಳನ್ನು ನೋಡಿದ್ದೂ ಆಯಿತು. ಕೆಲವು ಹೆಣ್ಣುಗಳ ಮನೆಗೆ ಹಳೇಬೀಡು ರಾಮಕೃಷ್ಣರಾಯರೇ ಗಂಡಿನ ಸಮೇತ ಹೋದಲ್ಲಿ, ಕೆಲವು ಹೆಣ್ಣುಗಳು ದಾವಣಗೆರೆಗೆ ಬಂದಿಳಿದಿದ್ದೂ ಆಯಿತು. ಸುಮಾರು ಒಂದೈದಾರು ವರ್ಷ ನಡೆದಿರಬೇಕು ಈ ನೋಡುವ-ನೋಡಿಸುವ ಸಂಪ್ರದಾಯ. ಇಂಥಾ ಊರಲ್ಲಿ ಇಂಥಾ ಮನೆಯಲ್ಲಿ ಇಂಥಾ ಒಂದು ಹೆಣ್ಣಿದೆ ಎನ್ನುವ ವರ್ತಮಾನ ಕಿವಿಗೆ ಬಿತ್ತೋ ತಂದೆ ಹಳೇಬೀಡು ರಾಮಕೃಷ್ಣರಾಯರ ಹಾಗೂ ಮಗ ಹಳೇಬೀಡು ಸುಂದರರಾಯರ ಯಾತ್ರೆ ತಯಾರು.

ಅದು ಭಾನುವಾರವೂ ಆಗಿರಬಹುದು, ಹಬ್ಬ ಹರಿದಿನವಾಗಿರಬಹುದು. ಆದರೆ ಯಾವೊಂದು ಹೆಣ್ಣೂ ಹಳೇಬೀಡು ಸುಂದರರಾಯರಿಗೆ ತಾಳಿ ಕಟ್ಟು ಎಂದು ಕೊರಳು ಕೊಡಲಿಲ್ಲ. ಹಳೇಬೀಡು ಸುಂದರರಾಯರ ಮೀಸಲು ಮುರಿಯಲಿಲ್ಲ. ಹಳೇಬೀಡು ರಾಮಕೃಷ್ಣರಾಯರಿಗೆ ಆಯಸ್ಸು ತುಂಬಿ ಬಂತು. ಮಗನ ಸಂಸಾರವನ್ನು ನೋಡದೇ, ಮೊಮ್ಮಕ್ಕಳನ್ನು ಎತ್ತಿ ಆಡಿಸದೇ ಆ ದೇಹದಿಂದ ಆ ಆತ್ಮ ದೂರವಾಯಿತು. ಅಲ್ಲಿಗೆ ಹಳೇಬೀಡು ಸುಂದರರಾಯರ ಕಲ್ಯಾಣ ಪ್ರಯತ್ನಗಳಿಗೆ ಒಂದು ಮುಕ್ತಿ ದೊರೆಯಿತು. ಆಮೇಲೆ ಹಳೇಬೀಡು ಸುಂದರರಾಯರು ತಮ್ಮ ಮದುವೆಯ ಬಗ್ಗೆ ಎಂದೂ ತಲೆ ಕೆಡಿಸಿಕೊಂಡವರಲ್ಲ. ತಲೆ ಕೆಡಿಸಿಕೊಳ್ಳುವಂಥಹ ಪ್ರಸಂಗವೂ ಬರಲಿಲ್ಲ.

More

‘ಭೂಮಿ’- ರಂಗಭೂಮಿ

ರಂಗ ನಿರ್ದೇಶಕ ‘ಕೆ ಜಿ ಕೃಷ್ಣ ಮೂರ್ತಿ’ ಅವರು ಭೂಮಿ ಹಾಗು ರಂಗಭೂಮಿಯ ಬಗ್ಗೆ ನಂಟು ಕಂಡಿದ್ದು ಹೀಗೆ…

ಮಳೆ  ನಿಲ್ಲುತ್ತಲೇ  ಇಲ್ಲ . ಭೂಮಿ  ಮತ್ತು  ರಂಗಭೂಮಿ  ಎರಡು  ಸಂಕಷ್ಟದಲ್ಲಿವೆ  . ಗದ್ದೆಯಲ್ಲಿ  ಪಸಲು  ಕಟಾವಿಗೆ  ಬಂದಿದೆ ; ಕೊಯ್ಯಲಾಗುತ್ತಿಲ್ಲ . ನಾಟಕಗಳು  ತಯಾರಾಗಿವೆ ; ಪ್ರದರ್ಶನ  ನೀಡುವಂತಿಲ್ಲ . ಎಷ್ಟು  ದಿನ  ಹಾಗೆ  ಇರುವುದು?  ಏನಾದರಾಗಲಿ  ಎಂದು  ಇಂದು  ಗದ್ದೆ  ಕೊಯ್ಲು ಪ್ರಾರಂಭಿಸಿಯಾಯಿತು . ಹಾಗೆಯೆ , ಕಿನ್ನರ  ಮೇಳ  ತಂಡವನ್ನು  ಸಕಲೇಶಪುರಕ್ಕೆ  ಕಳುಹಿಸಿಯಾಯ್ತು.

ಬಿಡುಗಡೆಯಾಯಿತು ‘ಹೀಗೊಂದು ಬದುಕಿನ ಕತೆ ‘…

ಹಿರಿಯ ಮಾಧ್ಯಮ ತಜ್ಞ ಕೃಷ್ಣಾ ನಂದ ಹೆಗ್ಡೆ ಅವರ ‘ಹೀಗೊಂದು ಬದುಕಿನ ಕತೆ ‘ ಪುಸ್ತಕ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.  ಹೆಗ್ಡೆ ಅವರಿಗೆ ೭೫ ತುಂಬಿದ ಹಿನ್ನೆಲೆಯಲ್ಲಿ ಈ ಸಮಾರಂಭ. ಅದರ ಒಂದು ನೋಟ ಇಲ್ಲಿದೆ.

ಇನ್ನಷ್ಟು ಚಿತ್ರಗಳು : ಓದು ಬಜಾರ್

ಜಯಶ್ರೀ ಕಾಲಂ: ನೋಡ್ರಿ ಇಂಗ್ಲೀಷ್ ವಾಹಿನಿಯ ಅತಿ ಬುದ್ಧಿವಂತಿಕೆ

ಇತ್ತೀಚೆಗೆ ಟೈಮ್ಸ್ ನವ್ ಚಾನೆಲ್ ಕಡೆ ಹೋಗಿದ್ದೆ, ಅಲ್ಲಿ ‘ರಾಜ’ ರಾಜಕೀಯ ಪ್ರಕರಣ ನಡಿತಾ ಇತ್ತು. ಅಲ್ಲಿದ್ದ ಪತ್ರಕರ್ತ -ನಿರೂಪಕ ತಮಿಳುನಾಡು ಸೇರಿದಂತೆ ಇತರ ರಾಜಕೀಯ ನಾಯಕರನ್ನು ಬಾಚಿ ಬಳಿದು ತಂದು ಸ್ಟುಡಿಯೋ ದಲ್ಲಿ ಗುಡ್ಡೆ ಹಾಕಿ ಬಿಟ್ಟಿದ್ರು. ಚರ್ಚೆ ಬಿಡಿ ಚೆನ್ನಾಗಿ ಇದ್ದೆ ಇತ್ತು.
ಆದ್ರೆ ಒಂದು ಸಂಗತಿ ನನಗೆ ಸಿಕ್ಕಾಪಟ್ಟೆ ನಗು ತಂದಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳನ್ನು ಒಟ್ಟಾಗಿ ತೋರಿಸಲು ಆ ವಾಹಿನಿ ಒಬ್ಬರ ಪಕ್ಕಾ ಮತ್ತೊಬ್ಬರು ಬರುವಂತೆ , ನೇರವಾಗಿ  ಹೇಳ ಬೇಕೆಂದರೆ ಒಂದರ ಪಕ್ಕಾ ಮತ್ತೊಂದು ಫೋಟೋ ನೇತು ಹಾಕಿದಂತೆ ಡಿಸೈನರ್ ಅಡ್ಜಸ್ಟ್ ಮಾಡಿದ್ರು. ಬಂದ ಅತಿಥಿಗಳಿಗೇ  ಬೇರೆಯವರು ಮುಖದಲ್ಲಿ ಯಾವ ರೀತಿಯ ಭಾವನೆ ತೋರಿಸ್ತಾ ಇದ್ದಾರೆ ಎನ್ನುವುದು ತಿಳಿಯದೆ ಹೋದರು ವೀಕ್ಷಕರಿಗೆ ಅವರೆಲ್ಲರ ವರ್ತನೆ ಸ್ಪಷ್ಟವಾಗಿ ಕಾಣ್ತಾ ಇತ್ತು. :-) ಒಬ್ಬರು ಆಕಳಿಸ್ತಾ ಇದ್ರೆ, ಮತ್ತೊಬ್ಬರು ಬಿಡಿ ಆ ಕಥೆ ,ಇದರ ಮಧ್ಯೆ ನಿರೂಪಕ ಜಾಣ ಪ್ರಶ್ನೆ ಕೇಳುತ್ತಾ ಕುಳಿತಿದ್ರು ;-).

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಮಣಿಕಾಂತ್ ಬರೆಯುತ್ತಾರೆ:ಹೇಳಲಾರೆನು ತಾಳಲಾರೆನು…

ಕವಿಯೊಬ್ಬನ ತಳಮಳ ನಾಯಕ-ನಾಯಕಿಯ ಪ್ರೇಮ ಪಲ್ಲವಿಯಾಯ್ತು!

ಹೇಳಲಾರೆನು ತಾಳಲಾರೆನು…

ಚಿತ್ರ: ಬೆಂಕಿ-ಬಿರುಗಾಳಿ. ಗೀತೆರಚನೆ: ದೊಡ್ಡರಂಗೇಗೌಡ

ಸಂಗೀತ: ಎಂ. ರಂಗರಾವ್ ಗಾಯನ: ಯೇಸುದಾಸ್, ವಾಣಿ ಜಯರಾಂ

ಹೇಳಲಾರೆನು ತಾಳಲಾರೆನು

ನನ್ನ ಮನಸಿನ ಭಾವನೆ

ನಾನು ನಿನ್ನನು ನೀನು ನನ್ನನು

ಮೆಚ್ಚಿ ಪ್ರೀತಿಯ ಕಾಮನೆ ||ಪ||

ಎಂದೋ ನಾನು ನಿನ್ನ ಕಂಡೆ

ಅಂದೇ ಆಸೆ ಮೂಡಿದೆ

ಕೂಗಿ ಕರೆದ ಕಣ್ಣ ಭಾಷೆ

ನನ್ನ ಹೃದಯ ಕದ್ದಿದೆ ||೧||

ಸ್ವರ್ಗಲೋಕ ಇಲ್ಲೇ ತೇಲಿ

ಒಲಿದ ಜೀವ ಹಾಡಿದೆ

ಎಲ್ಲಿ ನೀನೋ ಅಲ್ಲೆ ನಾನು

ನಮ್ಮ ನಲ್ಮೆ ಕೂಡಿದೆ ||೨||

ನೋವು ನಲಿವು ತುಂಬಿಕೊಂಡು

ಪ್ರೇಮ ಪಯಣ ಸಾಗಿದೆ

ಅರಿತ ಮೇಲೆ ಬೆರೆತ ಮೇಲೆ

ರಾಗ ಧಾರೆ ಹರಿದಿದೆ ||೩||

ಸಾವಿರ ಮಾತುಗಳಲ್ಲಿ ಹೇಳಲಾಗದ ವಿಷಯವನ್ನು ಒಂದು ಹಾಡಿನ ಮೂಲಕ ಹೇಳಿಬಿಡಬಹುದು. ಅದು ಹಾಡಿಗಿರುವ ಶಕ್ತಿ. ಈ ಕಾರಣದಿಂದಲೇ ಉತ್ಕಟ ಸನ್ನಿವೇಶದ ಸಂದರ್ಭಗಳಲ್ಲಿ ಹಾಡುಗಳನ್ನು ಬಳಸುವ; ಆ ಮೂಲಕ ಸನ್ನಿವೇಶದ ತೀವ್ರತೆ ಹೆಚ್ಚುವಂತೆ ಮಾಡುವ ಪರಿಪಾಠ ಚಿತ್ರರಂಗದಲ್ಲಿ ಮೊದಲಿನಿಂದಲೂ  ಚಾಲ್ತಿಯಲ್ಲಿದೆ. ಪ್ರೀತಿ ಬದುಕಾದಾಗ, ಮನಸು ಮೈಮರೆತಾಗ, ಕನಸು ಕಣ್ಣಾದಾಗ, ಸಂಕಟ ಕೈ ಹಿಡಿದಾಗ, ಸಂಭ್ರಮ ಹೆಚ್ಚಿದಾಗ, ವಿಪರೀತ ಸಿಟ್ಟು ಬಂದಾಗ, ಪರಮಾಪ್ತರು ಕಣ್ಮರೆಯಾದಾಗ, ಪರಮಾತ್ಮ ಪ್ರತ್ಯಕ್ಷವಾದಾಗ… ಇಂಥ  ಸೂಕ್ಷ್ಮ ಸಂದರ್ಭಗಳಲ್ಲಿ ಆ ಕ್ಷಣದ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳಿಂದ ಸಾಧ್ಯವೇ ಇಲ್ಲ. ಆದರೆ ಆ ಕೆಲಸವನ್ನು ಹಾಡುಗಳು ಮಾಡಬಲ್ಲವು. ಸಿನಿಮಾ ಅಂದ ಮೇಲೆ ಅದರಲ್ಲಿ ಒಂದೆರಡಾದರೂ ಹಾಡುಗಳು ಇರಲೇಬೇಕು ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿರುವುದು ಈ ಕಾರಣದಿಂದಲೇ.

ಸ್ವಾರಸ್ಯ ಕೇಳಿ: ಒಂದು ಸಿನಿಮಾಕ್ಕೆ ಕಥೆ ಹುಡುಕಲು, ಸಂಭಾಷಣೆ ಬರೆಯಲು, ಚಿತ್ರಕಥೆ ಸಿದ್ಧಪಡಿಸಲು, ಚಿತ್ರೀಕರಣಕ್ಕೆ ಲೊಕೇಶನ್ ಹುಡುಕಲು ನಿರ್ಮಾಪಕ, ನಿರ್ದೇಶಕರು ಆರೇಳು ತಿಂಗಳ ಕಾಲ ತೆಗೆದುಕೊಳ್ಳುತ್ತಾರೆ. ಆದ್ರೆ ಹಾಡುಗಳ ರಚನೆಗೆ ಮಾತ್ರ ದಮ್ಮಯ್ಯ ಅಂದರೂ ಹತ್ತು-ಹನ್ನೆರಡು ದಿನಗಳಿಗಿಂತ ಹೆಚ್ಚು ಸಮಯ ನೀಡಿದ ಉದಾಹರಣೆಗಳಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಹಾಡಿನ ಸಂದರ್ಭ ವಿಹರಿಸಿ-‘ಈಗ್ಲೇ ಆಗಬೇಕ್’ ಎಂದು ಅಪ್ಪಣೆ ಹೊರಡಿಸಿ ಹಾಡು ಬರೆಸಿಕೊಂಡ ಉದಾಹರಣೆಗಳೂ ಇವೆ.

More

ಶುದ್ಧಗೆ ಬಗ್ಗೆ ಒಂದು ಶುದ್ಧ ಚರ್ಚೆ

ಕನ್ನಡ ಭಾಷಾ ಚರಿತ್ರೆಯ ಬಗ್ಗೆ ಬಂದ ಹೊಸ ನಾಟಕ- ‘ಶುದ್ದಗೆ’. ಈ ನಾಟಕವನ್ನು ಡಾ. ಎಸ್.ವಿ. ಕಶ್ಯಪ್ ರಚಿಸಿದ್ದು ಸುಷ್ಮಾ ಪ್ರಶಾಂತ್ ನಿರ್ದೇಶಿಸಿದ್ದಾರೆ . ಈ ಪುಸ್ತಕದ ಬಿಡುಗಡೆ ಹಾಗು ನಾಟಕ ಪ್ರದರ್ಶನ ಬೆಂಗಳೂರಿನಲ್ಲಿ ಜರುಗಿತ್ತು ಈ ಬಗ್ಗೆ ಅವಧಿಯಲ್ಲಿ ಟಿಪ್ಪಣಿ ಪ್ರಕಟವಾಗಿತ್ತು . ಅದು ಇಲ್ಲಿದೆ
ಈ ಟಿಪ್ಪಣಿಯಲ್ಲಿ ಬಳಸಲಾದ ಇಂಗ್ಲಿಷ್ ಬಗ್ಗೆ ಭಾಷಾತಜ್ಞ ಪಂಡಿತಾರಾಧ್ಯ ಅವರು ಚರ್ಚೆ ಆರಂಭಿಸಿದ್ದಾರೆ ಅದಕ್ಕೆ ಕಶ್ಯಪ್ ನೀಡಿದ ಉತ್ತರ ಇಲ್ಲಿದೆ . ಬನ್ನಿ ನೀವು ಚರ್ಚೆಯಲ್ಲಿ ಭಾಗವಹಿಸಿ
 1. ಪಂಡಿತಾರಾಧ್ಯ
 2. Nov 18, 2010

  ಮಾನ್ಯರೆ,
  ಕನ್ನಡ ನಾಟಕ ಶುದ್ದಗೆಯ ಬಗ್ಗೆ ಅದರ ಲೇಖಕರು ಶುದ್ದ ಇಂಗ್ಲಿಷಿನಲ್ಲಿ ಹೇಳಿಕೊಂಡಿರುವುದು ವಿಚಿತ್ರವಾಗಿದೆ.
  ಕನ್ನಡದ ಬಗ್ಗೆ ಕನ್ಕನಡಿಗರೊಂದಿಗೆ ಕನ್ನಡದಲ್ಲಿ ಮಾತನಾಡಲಾರದಷ್ಟು ಕನ್ನಡಕ್ಕೆ ಪರಕೀಯರಾದವರು ಕನ್ನಡ ಶುದ್ದಗೆಯನ್ನು ಮಕ್ಕಳಿಗೆ ತಿಳಿಸುತ್ತೇವೆನ್ನುವುದು ವಿಚಿತ್ರವಾಗಿದೆ

  *

  ಡಾ.ಎಸ್.ವಿ.ಕಶ್ಯಪ್
  Nov 19, 2010

  ನಮಸ್ಕಾರ

  ಮಾನ್ಯ ಪಂಡಿತಾರಾಧ್ಯ ಅವರೆ,

  ತಮ ಪ್ರತಿಕ್ರಿಯೆ ನೋಡಿ ನನಗೂ ಸಖೇದಾಶ್ಚರ್ಯವಾಗುತ್ತಿದೆ.
  ಮನಸಗಂಗೋತ್ರಿಯಲ್ಲಿ ಕನ್ನಡದ ಪ್ರಾಧ್ಯಾಪಕರಾಗಿರುವ ನೀವು ಹಿಂದು ಮುಂದು ನೋಡದೆ ಹೀಗೆ ಒಬ್ಬ ಬಡ ನಾಟಕ ಕಾರನಮೇಲೆ ಹರಿಹಾಯ್ದಿರುವುದು ಸರಿಯೆ ಎಂದು ಯೋಚಿಸಿ ಸ್ವಾಮಿ.

  ನನ್ನ ಪರಿಚಯ ತಮಗೆ ಇಲ್ಲ ಎಂದು ಇದರಿಂದ ಚೆನ್ನಾಗಿ ತಿಳಿಯುತ್ತದೆ.

  ಪಂಡಿತಾರಾಧ್ಯಾವರೆ,
  ನಾನು ನಿಮ್ಮ ಮಾನಸಗಂಗೋತ್ರಿಯಲ್ಲೆ ಓದಿದ್ದು ಆದರೆ ಕನ್ನಡವನ್ನಲ್ಲ, ಬಿ.ಡಿ.ಎಸ್ – ದಂತವಿಜ್ಞಾನ. ಈಗಲೂ ನನ್ನದೆ ದಂತ ಚಿಕಿತ್ಸಾಲಯದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದೇನೆ. ಕನ್ನಡ ಕಾಳಜಿ ಇರದಿದ್ದರೆ ನಾನು ಮಕ್ಕಳ ನಾಟಕಗಳನ್ನು ಬರೆಯುವ ಗೋಜಿಗೆ ಹೋಗದೆ, ನನ್ನ ಪಾಡಿಗೆ ನಾನು ನನ್ನ ಚಿಕಿತ್ಸಾಲಯದಲ್ಲಿ ನಿರತನಾಗಿರಬಹುದಿತ್ತು.ಆದರೆ ಕನ್ನಡದ ಬಗೆಗಿನ ಅಸ್ಥೆ, ನಾನು ಕನ್ನಡ ಸ್ನಾತಕೋತ್ತರ ಪದವಿ ಮಾಡುವಂತೆ ಪ್ರೇರೇಪಿಸಿತು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಅದನ್ನು ಮಾಡಿಯೂ ಮಾಡಿದೆ.

  ಆಮೇಲೆ ಸುಮ್ಮನೆ ಕೂರದೆ ಕುಮಾರವ್ಯಾಸ ನನ್ನು ಮಕ್ಕಳಿಗೆ ಪರಿಚಯಿಸಬೇಕು ಎಂದು ಕುಮಾರವ್ಯಾಸ ಡಾಟ್ ಕಾಮ್ ಎಂಬ ಮಕ್ಕಳ ನಾಟಕ ಬರೆದೆ. ಗದುಗಿನ ಭಾರತ ಮಕ್ಕಳ ನಾಲಿಗೆಯ ಮೇಲೆ ನಲಿದಾಡಿತು. ಭಾಷಾಚರಿತ್ರೆಯನ್ನು ಮಕ್ಕಳಿಗೆ ಪರಿಚಯಿಸಬೇಕೆಂದು ಬರೆದ ನಾಟಕವೇ ಶುದ್ಧಗೆ,.

  ಆ ನಾಟಕವನ್ನು ಬರೆದು ೩ ವರ್ಷಗಳಾಯ್ತು. ಈಗ ಅದು ಪ್ರಕಟವಾಗುತ್ತಿದೆ ಎಂದಾಗ ಮನಸ್ಸಿನಲ್ಲಿ ಬಂದ ಸಣ್ಣ ಉದ್ಗಾರ ವನ್ನು ನನ್ನ ಸಂಚಾರಿ ದೂರವಾಣಿಯ ಮೂಲಕ ಫೇಸ್ ಬುಕ್ ನಲ್ಲಿ ಹಾಕಿದ್ದೆ. ನನ್ನ ಸಂಚಾರಿ ದೂರವಾಣಿಯಲ್ಲಿ ಕನ್ನಡ ಬಳಸಲು ಆಗುವುದಿಲ್ಲ ಸ್ವಾಮಿ .
  ಅದು ನನ್ನ ತಪ್ಪೆ. ಇಲ್ಲ ಸಂಚಾರಿ ದೂರವಾಣಿಯಲ್ಲಿ ಕನ್ನಡ ಬಳಸ ಬಹುದಾದರೆ ದಯ ಮಾಡಿ ಅದನ್ನು ನನಗೆ ತಿಳಿಸುವ ಕೃಪೆ ಮಾಡಿ.
  ಕನ್ನಡವನ್ನೆ ಬಳಸಿ ಎನ್ನುವ ತಮ್ಮ ಅಭಿಮತಕ್ಕೆ ನನ್ನ ಸಹಮತವೂ ಇದೆ.

  ಆದರೆ ಮ್ಲೊದಲ ಪ್ರತ್ರಿಕ್ರಿಯೆಯ ತಲೆ ಬರಹದಲ್ಲಿ ತಮ್ಮ ಹೆಸರು ಇಂಗ್ಲೀಷ್ ನಲ್ಲಿರುವುದು ಏತಕ್ಕೋ ?
  ಅದನ್ನು ನಾನು ಕೇಳಿದರೆ ನನ್ನಂಥಹ ಮೂರ್ಖ ಇನ್ನೊಬ್ಬ ನಿಲ್ಲ.
  ಅದು ತಾವು ಹೇಳಬೇಕೆಂದಿರುವ ವಿಷಯವೂ ಅಲ್ಲ , ಕನ್ನಡದ ಬಗ್ಗೆ ನಿರ್ಲಕ್ಷತೆಯೂ ಅಲ್ಲ.
  ಹಾಗೆಯೇ ನನ್ನ ಅ ಉದ್ಗಾರ.
  ಅಂದ ಹಾಗೆ,
  ನಿಮ್ಮ ವಿಳಾಸ ಕೊಡಿ ಸ್ವಾಮಿ
  ..
  ಪುಸ್ತಕ ಕಳಿಸುತ್ತೇನೆ
  ನಿಮ್ಮವ

  -ಡಾ||ಎಸ್.ವಿ.ಕಶ್ಯಪ್

  *

 3. ಉಷಾಕಟ್ಟೆಮನೆ
  Nov 18, 2010 

  ನಾಟಕವೆಂಬುದು ದೃಶ್ಯ ಮಾಧ್ಯಮ. ಪಾಮರರೂ ಅರ್ಥ ಮಾಡಿಕೊಳ್ಳಬಹುದು.ಅದಕ್ಕೆ ಭಾಷೆಯ ಹಂಗಿಲ್ಲ. ಕನ್ನಡೇತರರೂ ಈ ನಾಟಕವನ್ನು ನೋಡಿ, ಕನ್ನಡದ ಅಕ್ಷರಮಾಲೆಯ ಚರಿತ್ರೆಯನ್ನು ತಿಳಿದುಕೊಳ್ಳಲಿ ಎಂಬುದು ನಾಟಕಕಾರರ ಉದ್ದೇಶವಿರಬಹುದೆನೋ!
  ನಾನು ಈಗಾಗಲೇ ಈ ನಾಟಕ ನೋಡಿದ್ದೇನೆ.ಒಳ್ಳೆಯ ಪ್ರಯತ್ನ.ಮಕ್ಕಳು ಲವಲವಿಕೆಯಿಂದ ಅಬಿನಯಿಸಿದ್ದಾರೆ.
  ಉಷಾಕಟ್ಟೆಮನೆ

  *

  panditaradhya

  Nov 18, 2010 @ 19:02:44

  ಉಷಾ ಕಟ್ಟೆಮನೆಯವರಿಗೆ ನಮಸ್ಕಾರಗಳು.

  ನಾನು ನಾಟಕ ನೋಡಿಲ್ಲ. ನಾಟಕದ ಬಗ್ಗೆ ಪ್ರತಿಕ್ರಿಯಿಸಿಲ್ಲ.
  ತಮ್ಮ ಕನ್ನಡ ನಾಟಕದ ಬಗ್ಗೆ ಕನ್ನಡಿಗರಿಗೆ ಇಂಗ್ಲಿಷಿನಲ್ಲಿ ಹೇಳಿಕೊಂಡಿರುವ ನಾಟಕಕಾರರ ಮನೋಧರ್ಮದ ಬಗ್ಗೆ ಸಖೇದಾಶ್ವರ್ಯವಾಗಿದೆ.
  ಕನ್ನಡ ಬಾರದವರಿಗೆ ಕನ್ನಡದ ಬಗ್ಗೆ ಕಲಿಸುವುದು ಬೇರೆ ಮಾತಾಯಿತು.
  ಕನ್ನಡ ಭಾಷೆಯನ್ನು ಬಳಸುವಂತೆ ಕನ್ನಡಿಗರನ್ನೇ ಕೇಳಿಕೊಳ್ಳಬೇಕಾದ ದುಃಸ್ಥಿತಿಯ ಬಗ್ಗೆ ಬೇಸರವಾಗುತ್ತಿದೆ.

  ಕನ್ನಡಿಗರಿಗೆ ನನ್ನ ಮನವಿ
  ಕನ್ನಡದಲ್ಲಿಯೇ ಯೋಚಿಸಿ ಬರೆಯಿರಿ ಮಾತನಾಡಿ
  ಕನ್ನಡ ಅಂಕಿಗಳನ್ನೇ ಬಳಸಿ
  ೦ ೧ ೨ ೩ ೪ ೫ ೬೭ ೮ ೯

  ಪ್ರೀತಿಯಿಂದ
  ಪಂಡಿತಾರಾಧ್ಯ

  *

  ಡಾ.ಎಸ್.ವಿ.ಕಶ್ಯಪ್
  Nov 19, 2010 @ 09:44:53

  ಇಲ್ಲಿ ತಮ್ಮ ಹೆಸರು ಇಂಗ್ಲೀಷ್ ನಲ್ಲಿರುವುದು ಆಶ್ಚರ್ಯ !!!!!!!

  *

  shobha venkatesh

  Nov 19, 2010 @ 01:41:16

  ‘ಶುದ್ದಗೆ’ ಮಕ್ಕಳ ನಾಟಕ ತುಂಬಾ ಚೆನ್ನಾಗಿ ಮೂಡಿಬಂತು. ಪ್ರೊ ಜಿ ವೆಂಕಟ ಸುಬ್ಬಯ್ಯ ಅವರು ನಾಟಕ ನೋಡಿ ಹೇಳಿರುವ ಅಭಿಪ್ರಾಯ ಇಂದು ಬಿಡುಗಡೆಯಾದ ಶುದ್ದಗೆ ಮಕ್ಕಳ ಪುಸ್ತಕದಲ್ಲಿ ನಿಜವೆನಿಸಿತು. ಅವರೇ ಹೇಳಿರುವಂತೆ ೨೦೦೦ ವರ್ಷದ ಕನ್ನಡ ಬಾಷಾ ಚರಿತ್ರೆ ಒಂದೂವರೆ  ಗಂಟೆಯ ನಾಟಕದಲ್ಲಿ ಚೆನ್ನಾಗಿ ಮೂಡಿಬಂದಿದೆ.

  ಎಂ ಎಚ್  ಕೃಷ್ಣಯ್ಯ ಅವರ ಅಭಿಪ್ರಾಯವೂ ತುಂಬಾ ಸೂಕ್ತವಾಗಿದೆ ಎನಿಸಿತು. ಮೊದಲ ಪ್ರಯತ್ನ ನೋಡಿ ಹೇಳಿದ ಅಭಿಪ್ರಾಯ ಇದಾದರೆ ಇಂದಿನ  ಮಕ್ಕಳ ನಾಟಕ ನೋಡಿದ ಡಾ  ಸಾ  ಶಿ ಮರುಳಯ್ಯ, ಡಾ ವಿಜಯಾ, ಡಾ ರಾಜಾರಾಂ ಮತ್ತು  ಜೋಗಿ ಅವರುಗಳ ಅಭಿಪ್ರಾಯವೂ ಸಂತಸವಾಯಿತು .

%d bloggers like this: