ದೇಶಪಾಂಡೆಯವರ ಒಂದು ಕೋಟಿ ರುಪಾಯಿ…

-ಜಯದೇವ ಪ್ರಸಾದ ಮೊಳೆಯಾರ

ಕಾಸು ಕುಡಿಕೆ-31

Remember, Stocks are bought on expectation, not on  facts. . . Gerald Loeb

ನೆನಪಿಡಿ, ಶೇರುಗಳನ್ನು ನಿರೀಕ್ಷೆಯ ಮೇರೆಗೆ ಕೊಳ್ಳಲಾಗುತ್ತದೆ, ವಾಸ್ತವದ ಮೇರೆಗೆ ಅಲ್ಲ. . . . . .  ಜೆರಾಲ್ಡ್ ಲೋಬ್

ಮೊನ್ನೆ ಸಂಜೆ ಕುಳಿತುಕೊಂಡು ನಮ್ಮ ಮೀನ್‌ಚಟ್ನಿ ಬಿಸಿನೆಸ್ಸಿನ ಲೆಕ್ಕಾಚಾರದಲ್ಲಿ ಮುಳುಗಿರಬೇಕಾದರೆ ಎಲ್ಲೋ ಯಾರದೋ ಮೊಬೈಲ್ ರಿಂಗ್ ಆಗುವ ಧ್ವನಿ ಕೇಳಿಸಿ ಕಿರಿಕಿರಿಯೆನಿಸಿತು. ಅರೇ ಯಾರದಪ್ಪಾ ಇದು? ಅಂತ ಸಿಂಡರೆಲ್ಲಾಳಂತೆ ಮುಖ ಸಿಂಡರಿಸ ಬೇಕಾದರೆ ಅರೆ, ನನ್ನದೇ ಫೋನ್ ಅಲ್ವಾ ಎಂಬ ಜ್ಞಾನೋದಯವೂ ಆಯಿತು.

ಪ್ರತೀ ಬಾರಿ ಹೊಸ ಮೊಬೈಲ್ ಕೊಂಡಾಗಲೂ ಹೀಗೇ ಆಗುತ್ತದೆ. ಹೊಸ ರಿಂಗ್ ಟೋನಿನ ಪರಿಚಯ ಆಗುವವರೆಗೂ ದೂರದಲ್ಲಿ ಯಾರದ್ದೋ ಫೋನ್ ಅರಚುತ್ತದೆ ಎಂಬ ಭಾವನೆಯೇ ಮೊತ್ತಮೊದಲು ಬರುತ್ತದೆ. ಆಮೇಲೆ ನಿದಾನವಾಗಿ ನಮ್ಮದೇ ಫೋನ್ ಇದು ಎಂಬ ಅರಿವು ಮೂಡುತ್ತದೆ.

ಕೋಣನಿಗೆ ಬಾರುಕೋಲಿನಿಂದ ಜೋರಾಗಿ  ಹೊಡೆದರೂ ಅದಕ್ಕೂ ಹಾಗೆಯೇ ಆಗುತ್ತದಂತೆ. ದೂರದಲ್ಲಿ ಯಾರಿಗೋ ಹೊಡೆಯುತ್ತಾ ಇದ್ದಾರೆ ಅಂತ. ಇದೆಲ್ಲಾ ದಪ್ಪ ಚರ್ಮದ ಎಡ್ವಾಂಟೇಜಸ್, ಸಾರ್! ಅದೆಲ್ಲ ಹಾಗೇ ಇರಲಿ ಬಿಡಿ, ಮುಖ್ಯವಾಗಿ, ಈಗ ನಿಮಗೆ ಆ ಫೋನ್ ಕಾಲ್ ಮಾಡಿದ  ಶ್ರೀನಿವಾಸ ದೇಶಪಾಂಡೆಯವರ ಪರಿಚಯ ಮಾಡಿಸಿಕೊಡುತ್ತೇನೆ.

ದೇಶಪಾಂಡೆಯವರು ಮಂಗಳೂರಿನ ಬಿಜೈ ನಿವಾಸಿ. ಪಂಪ್‌ವೆಲ್ ಬಳಿಯ ಕರ್ನಾಟಕ ಬ್ಯಾಂಕ್ ಹೆಡ್ ಆಫೀಸಿನಲ್ಲಿ ಸೀನಿಯರ್ ಮ್ಯಾನೇಜರ್ – ಇಂಜಿನಿಯರ್ ಹಾಗೂ ಬ್ಯಾಂಕಿನ ಇಂಟೀರಿಯರ್ ಡೆಕೋರೇಶನ್ ತಜ್ಞ. ಒಬ್ಬ ಸಹೃದಯಿ, ಸಾಹಿತ್ಯಾಸಕ್ತ ಮತ್ತು ಅ ನೈಸ್ ಜಂಟಲ್‌ಮನ್. ನನಗೂ ಅವರಿಗೂ ಪರಿಚಯವಾದದ್ದೇ ಈ ಕಾಸು-ಕುಡಿಕೆ ಕಾಲಂನ ಮೂಲಕ. ನಾವು ಪರಸ್ಪರ ಭೇಟಿಯಾಗಿರದಿದ್ದರೂ ಫೋನಿನಲ್ಲಿ ಬಹಳಷ್ಟು ಬಾರಿ ಕಾಸು-ಕುಡಿಕೆಯ ಬಗ್ಗೆ ವಿಮರ್ಶಾತ್ಮಕವಾಗಿ ಚರ್ಚಿಸಿದ್ದು ಇದೆ. ಕಳೆದ ವಾರದ ‘FII ಮಹಾತ್ಮೆ ಎಂಬ ಅಧಿಕ ಪ್ರಸಂಗವನ್ನು  ಓದಿದ ದೇಶಪಾಂಡೆಯವರು ಫೋನಾಯಿಸಿದ್ದರು.

ಇನ್ನಷ್ಟು

ಜಯಶ್ರೀ ಕಾಲಂ: ಗಮನ ಸೆಳೆದ ಆ ವಿಷಯ…

@@ ಸುವರ್ಣ ನ್ಯೂಸ್ ನಲ್ಲಿ ನನ್ನ  ಗಮನ ಹೆಚ್ಚು ಹೆಚ್ಚು ಸೆಳೆಯೋದು-ಸೆಳೆದಿರುವುದು ಆ ವಾಹಿನಿಚೀಫ್  ರಂಗನಾಥ್ ಸರ್ ನಡೆಸಿ ಕೊಡುವ ಫೋನ್ ಇನ್ ಕಾರ್ಯಕ್ರಮ.ಇದು ತುಂಬಾ ವಿಶೇಷವಾಗಿದೆ :-) . ಉನ್ನತ ಸ್ಥಾನದಲ್ಲಿ ಕುಳಿತು ಬಿಟ್ರೆ ಸಾಮಾನ್ಯರ ಕಡೆ ಕಣ್ಣೆತ್ತಿ ನೋಡುವುದಕ್ಕೆ ಇಷ್ಟ ಪಡಲ್ಲ ತುಂಬಾ ಜನರು. ಅಂತಹುದರಲ್ಲಿ  ನಿಜಕ್ಕೂ ಒಳ್ಳೆಯ  ಕೆಲಸ ಮಾಡ್ತಾ ಇದ್ದಿರಿ  ಸರ್.

ಭಾನುವಾರ ರಂಗ ಸರ್ ಅವರು ನಡೆಸಿ ಕೊಟ್ಟ ಫೋನ್ ಇನ್ ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ಸರ್ಕಾರವನ್ನು ಕುರಿತು ಜನರಿಗೆ ಸೀರೆ ಹಂಚುವುದಕ್ಕಿಂತ ಪ್ರವಾಹ ಪೀಡಿತರಿಗೆ ನೆಲೆ ಒದಗಿಸುವುದು ಈಗಿರುವ ಮುಖ್ಯ ಸಂಗತಿ ಎಂದು ಹೇಳಿದ್ರು. ಅದಂತೂ ಸತ್ಯವಾದ ಮಾತು ಎಲ್ಲಾ ಸೌಕರ್ಯಗಳು ಇದ್ರು ನಮಗೆ  ಪ್ರಕೃತಿಯಲ್ಲಿ ಸಣ್ಣ ಏರುಪೇರಾದ್ರು ತಡೆದು ಕೊಳ್ಳಲು ಕಷ್ಟ ಆಗುತ್ತದೆ , ಮೊನ್ನೆ ಬಿದ್ದ ಮಳೆಗೆ ಇಡೀ ಬೆಂಗಳೂರೇ ಪತರಿಗುಟ್ಟಿ ಬಿಡ್ತು, ಅಂತಹುದರಲ್ಲಿ ಪ್ರವಾಹ ಪೀಡಿತರು  ..ಅಯ್ಯೋ ದೇವ್ರೇ ನೆನಪಿಸಿ ಕೊಳ್ಳುವುದಕ್ಕೂ ಕಷ್ಟ ಆಗುತ್ತೆ ಮನಕ್ಕೆ

ಪೂರ್ಣ ಓದಿಗೆ : ಮೀಡಿಯಾ ಮೈಂಡ್

ಮನಸ್ಸು ಕಸದ ತೊಟ್ಟಿಯಲ್ಲ …

-ಪ್ರಕಾಶ್ ಹೆಗಡೆ

ನೀವು ಏನು ಏನು ತಿಂತ್ತೀರ್ರಿ ಮಾರಾಯ್ರೆ ಭಾಗ 2 

ನನಗಂತೂ ತಲೆ ಕೆಟ್ಟು ಹೋಗಿತ್ತು….

ಬೆಳಿಗ್ಗೆ ಆರುಗಂಟೆಯಿಂದ “ನೀವು ಏನು ತಿಂತ್ತೀರ್ರಿ…. ಮಾರಾಯ್ರ್ತೆ ?..”ಎನ್ನುವದೆ ಕಿವಿಯಲ್ಲಿ ಕೊರೆಯುತ್ತಿತ್ತು…
ಅಲ್ಲಿಯವರೆಗೆ  ನನ್ನ ಮೇಲೆ ಕೂಗಾಡಿ, ರೇಗಾಡಿ..ತಕ್ಷಣ ಹೆಗಲ ಮೇಲೆ ಕೈ ಹಾಕಿ…
“ಬೇಸರ ಮಾಡ್ಕೋ ಬೇಡಿ… ಬನ್ನಿ ಟೀ ಕುಡಿಯೋಣ “
ಅಂದಾಗ… ನನಗೆ ದೊಡ್ಡ ಷಾಕ್…!!
ಯಾವ ಥರಹದ ಮನುಷ್ಯರಿರ ಬಹುದು ಇವರು ?ವ್ಯವಹಾರದಲ್ಲಿ ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳುವದು ಬಹಳ ಕಷ್ಟ….
ಟೀ ಅಂಗಡಿಯವನು ಟೀ ಕೊಟ್ಟ…
ನಾನು ಸುಮ್ಮನೆ ಟಿ ತೆಗೆದು ಕೊಂಡೆ… “ಹೆಗಡೆಯವರೆ… ನನ್ನ ಮೇಲೆ ಬೇಸರವಾಯ್ತಾ..?..”ನಾನು ಮಾತನಾಡಲೇ ಬೇಕಿತ್ತು…
“ನೋಡಿ.. ಸರ್… ನನಗೆ ಕೂಗಾಡಿ, ರೇಗಾಡಿ ಗೊತ್ತಿಲ್ಲ…ನನ್ನ ಕೆಲಸಗಾರಿರಿಗೂ ಸಹ ಕೂಗಿ ಬಯ್ಯುವದಿಲ್ಲ…
ನನಗೆ ಇದೆಲ್ಲ ಇಷ್ಟವಾಗೊದಿಲ್ಲ… ಗಲಾಟೆಯಲ್ಲಿ ನನಗೆ ನಂಬಿಕೆಯಿಲ್ಲ…”
“ಹೆಗಡೆಯವರೆ…
ನಾನು ಇರುವದೇ.. ಹೀಗೆ… ನಮ್ಮ ಮನೆಯಲ್ಲೂ ಸಹ ಹೀಗೆಯೇ ಇರುತ್ತೇನೆ…ನಮ್ಮ  ಮನೆಯಲ್ಲಿ ಸ್ವಲ್ಪ  ಶಬ್ಧ ಜಾಸ್ತಿ…!ನಮ್ಮ ಮನೆ  ವಿಧಾನ ಸೌಧ , ಪಾರ್ಲಿಮೆಂಟಿನ  ಥರಹ… ಸ್ವಲ್ಪ ಗಲಾಟೆ…”
ನನಗೆ ಮತ್ತೊಂದು ಷಾಕ್…  !!
ಇವರು  ಈ ಕೆಲಸ ಮುಗಿಯುವವರೆಗೂ ಹೀಗೆ ರೇಗಾಡುತ್ತಲೇ ಇರುತ್ತಾರಾ ??
ಇವರೊಡನೆ ಹೇಗೆ ಹೆಣಗುವದು..??
ಇನ್ನಷ್ಟು

ಮೊದಲ ದಿನ ಮೌನ…!

– ಮಾನಸ
ವಿಜ್ಞಾನ, ತಂತ್ರಜ್ಞಾನ, ವಾಸ್ತವತೆ ಎಂಬ ಹೆಸರಿನಲ್ಲಿ ದೇಶದ ಅತಿ ಸೂಕ್ಷ್ಮ ಭಾವುಕ ಮನಸ್ಸುಗಳನ್ನೂ ಸೂಜಿಗಲ್ಲಿನಂತೆ ತನ್ನತ್ತ ಸೆಳೆದು ಜಗದ ಸುಖವನ್ನೆಲ್ಲ ಬೊಗಸೆಗೆ ನೀಡುವೆನೆಂಬ ಭರವಸೆ ಹುಟ್ಟಿಸೋ ಪ್ರಪಂಚದ ಅತಿ ಬಲಾಡ್ಯ- United states of America- ದೇಶದ ಮಣ್ಣಿನ ಮೇಲೆ (marble tiles ಮೇಲೆ) ಮೊದಲ ಹೆಜ್ಜೆಯೂರಿದ ಆ ಕ್ಷಣ……! ಒಂದು ರೀತಿಯ ವಿಶಿಷ್ಟ ಅನುಭೂತಿಯ ನೀಡಿತ್ತು. Welcome to Washington DC.

ಇಳಿಸಂಜೆ, ಸೂರ್ಯ ಆಗಷ್ಟೆ ತನ್ನ ಕರ್ತವ್ಯ ಮುಗಿಸಿ ನಮ್ಮ ದೇಶದ ಜನರ ಕಣ್ತೆರೆಸಲು ಅಣಿಯಾಗುತ್ತಿದ್ದ ಹೊತ್ತು. ಒಮ್ಮೆ ಮೈಮುರಿದು ಸುತ್ತಲೂ ನೋಡಿದೆ, ಅಲ್ಲಲ್ಲಿ ಕಣ್ಣು ಕುಕ್ಕುವ ಬೆಳಕು, ನಿಮಿಷಕ್ಕೆರಡರಂತೆ ಹಾರಿ ಇಳಿಯುತ್ತಿರೋ ಲೋಹ ಪಕ್ಷಿಗಳು, ಸಮವಸ್ತ್ರಧಾರಿ ಪಹರೆ ಸಿಪಾಯಿಗಳು, ಗಜಿಬಿಜಿ ವರ್ಣ ರಂಜಿತ ಜನಗಳು. ನಮ್ಮೂರಿನಲ್ಲಿರದ ವಿಶೇಷತೆ ಇಲ್ಲೇನಿದೆ, ವಿಧಿ ವಿಧಾನಗಳೆಲ್ಲವು ಅದೇ ರೀತಿಯಿದೆಯಲ್ಲಾ. ಆದರೂ ಏನೋ ಇಲ್ಲದ ಭಾವ, ಮತ್ತೇನೋ ಇರುವ ಭಾವ. ಶುರುವಾಯ್ತು ಮನದ ತುಮುಲಗಳು. ಇರುವ-ಇಲ್ಲದ ತುಲನೆಗಳು.

ನಮ್ಮವರು ತಮ್ಮವರು, ಬಂಧು ಬಳಗ, ಭಾಂದವ್ಯಗಳನ್ನೆಲ್ಲ ಪಕ್ಕಕ್ಕೆ ಸರಿಸಿ  ಹಾತೊರೆದು ಬರುವ ಆಗಂತುಕರನು  ಪ್ರೀತಿಯಿಂದಲೇ ಸ್ವಾಗತಿಸಿ ಸಲುಹಿ, ಬಿಟ್ಟು ಹೋಗದಂತೆ ಮಾಡೋ ಈ ದೇಶದ ಮಣ್ಣಿನ ಗುಣದಲ್ಲಿ ಅದೇನು  ಮೋಡಿಯಿದೆಯೋ  ತಿಳಿಯಲು ಪ್ರಯತ್ನಿಸಿ ಸೋತು ಕೊನೆಗೆ ತಾವೂ ಈ ನೆಲದ ಆಡಂಬರದ ಆಮಿಷಗಳಿಗೆ ಬಲಿಯಾಗಿ ಬಂಧಿಯಾಗಿಬಿಟ್ಟರೆಷ್ಟೋ ಜನ.  ನನ್ನ ನಿಯತ್ತನ್ನು ಪ್ರಶ್ನಿಸಲು ಕಾಡು ಕುಳಿತಿದೆ ಈಗ.

ಇನ್ನಷ್ಟು

ನೀ ನಾನಾದ್ರೆ ನಾ ನೀನೇನ ..

ಇಲ್ಲೂ ನೋಡಿ : invitations blog

Dialogue Maaro Contest…

-ಸತೀಶ್ ಆಚಾರ್ಯ

ಕವಿಗೋಷ್ಟಿಯಲ್ಲಿ ಒಬಾಮಾ

ಅಣಕ

ಅಮೆರಿಕದ ಪುಣ್ಯಂ ಒಬಾಮ ರೂಪದೊಳ್ ಬಂದಂತೆ……!

ವಾರ್ತಾ ಭಾರತಿ

ಅಮೆರಿಕದ ಅಧ್ಯಕ್ಷ ಒಬಾಮ ಅವರು ಭಾರತಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದ ಆವರಣದಲ್ಲಿ ಒಂದು ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ದೇಶದ ಕುಖ್ಯಾತ ಕವಿಗಳೆಲ್ಲ ಅದರಲ್ಲಿ ಆಸೀನರಾಗಿದ್ದರು. ಪ್ರಧಾನಮಂತ್ರಿ ಮನಮೋಹನ ಸಿಂಗರಿಂದ ಹಿಡಿದು, ಮಹಾಕವಿ ವೀರಪ್ಪ ಮೊಯ್ಲಿಯವರೆಗೆ ಎಲ್ಲ ಕವಿಗಳೂ ಅಲ್ಲಿ ನೆರೆದಿದ್ದರು. ಒಬಾಮ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಕುಳ್ಳಿರಿಸಲಾಗಿತ್ತು. ಕಾರ್ಯಕ್ರಮ ನಿರ್ವಹಣೆಯ ಹೊಣೆಗಾರಿಕೆಯನ್ನು ಬೊಂಬಾಯಿ ಬಾಯಿಯ ಸುಷ್ಮಾ ಸ್ವರಾಜ್ ವಹಿಸಿಕೊಂಡಿದ್ದರು. ಕೊನೆಗೂ ಕವಿಗೋಷ್ಠಿ ಆರಂಭವಾಯಿತು. ಆರಂಭದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ತಮ್ಮ ಕವಿತೆಯನ್ನು ಓದಲೆಂದು ಎದ್ದು ನಿಂತರು.

ಮನಮೋಹನ್ ಸಿಂಗ್ ಒಬಾಮರನ್ನು ಓರೆಗಣ್ಣಲ್ಲಿ ನೋಡುತ್ತಲೇ ನಾಚಿ ತನ್ನ ದಷ್ಟಿಯನ್ನು ನೆಲದತ್ತ ಹಾಯಿಸಿದರು. ಪ್ರಿಯತಮನನ್ನು ನೋಡಿದ ಪ್ರೇಯಸಿಯ ಹಾಗೆ ಅವರು ಕಂಪಿಸುತ್ತಿದ್ದರು. ತನ್ನ ಜುಬ್ಬಾದಿಂದ ಕವಿತೆಯನ್ನು ಹೊರತೆಗೆದವರೇ ರಾಗ ಕಟ್ಟಿ ಹಾಡತೊಡಗಿದರು.

ಇನ್ನಷ್ಟು